ಸಂಪಾದಕೀಯ ಜುಲೈ 2019

ಸಂಪಾದಕ

 ಸಂಪಾದಕೀಯ ಜುಲೈ 2019 <p><sub> ಸಂಪಾದಕ </sub></p>

ಈ ಕಾಲದ ಕಳವಳ! ಈ ಸಂಚಿಕೆಯ ಮುಖ್ಯಚರ್ಚೆಯ ವಿಷಯ ಕುರಿತು ಲೇಖನಗಳನ್ನು ಬರೆಯಿಸಲು ನಾನು ಸಹಜವಾಗಿಯೇ ದಲಿತ ಚಳವಳಿಗೆ ಸಂಬಂಧಪಟ್ಟ ಹಲವಾರು ಮಿತ್ರರನ್ನು ಸಂಪರ್ಕಿಸಿದೆ. ಬಹುಪಾಲು ಹೋರಾಟಗಾರರು, ಸಾಹಿತಿಗಳು, ಚಿಂತಕರು ಚರ್ಚೆಯ ಪ್ರಸ್ತುತತೆಯನ್ನು ಗುರುತಿಸಿದರು; ಕೆಲವರು ಪತ್ರಿಕೆಯ ಕಾರ್ಯವನ್ನು ಮೆಚ್ಚಿ ಮಾತನಾಡಿದರು, ಅನೇಕರು ‘ಇದೇಕೆ ಈಗ?’ ಎಂಬ ಅಪಸ್ವರ ತೆಗೆದರೆ ಒಂದಷ್ಟು ಜನ ಚಳವಳಿಯ ಕಾಲ ಮುಗಿದೇಹೋಗಿದೆ ಎಂಬಂತೆ ಸಿನಿಕತನ ತೋರ್ಪಡಿಸಿದರು. ಸಂಭಾಷಣೆಯಲ್ಲಿ ಸಂಘಟನೆಗೆ ಮತ್ತು ವಿಘಟನೆಗೆ ಕಾರಣವಾದ ತಾತ್ವಿಕ ವಿಚಾರಗಳು, ವ್ಯಕ್ತಿಗತ ಸ್ವಾರ್ಥಗಳು, ಸಾಂದರ್ಭಿಕ ತಪ್ಪುಗಳು, […]

ಬನವಾಸಿಯಲ್ಲಿ ಸಮಾಜಮುಖಿ ನಡಿಗೆ

ಬನವಾಸಿಯಲ್ಲಿ ಸಮಾಜಮುಖಿ ನಡಿಗೆ

ಸಮಾಜಮುಖಿ ಬಳಗದ “ನಡೆದು ನೋಡಿ ಕರ್ನಾಟಕ’’ ಸರಣಿಯ ನಾಲ್ಕನೆಯ ನಡಿಗೆಯನ್ನು ಬನವಾಸಿ ಪರಿಸರದಲ್ಲಿ ಜೂನ್ 7 ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿತ್ತು. ಜೂನ್ 7ರಂದು ಬೆಳಿಗ್ಗೆ 9 ಗಂಟೆಗೆ ಹಾವೇರಿಯಲ್ಲಿ ಸಮಾಜಮುಖಿ ಬಳಗದ ಪರಿಸರವಾದಿ ಮಾಧುರಿ ದೇವಧರ, ಪತ್ರಕರ್ತ ಮಾಲತೇಶ ಅಂಗೂರ ಮತ್ತು ಸಾಹಿತಿ ಸತೀಶ ಕುಲಕರ್ಣಿ ನಡಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಬನವಾಸಿಯತ್ತ ನಡಿಗೆ ತಂಡ ಪಯಣ ಬೆಳೆಸಿತು. ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ತಂಡಕ್ಕೆ ಇತಿಹಾಸ ತಜ್ಞ ಲಕ್ಷ್ಮೀಶ ಹೆಗಡೆ ಮಾರ್ಗದರ್ಶಿಯಾಗಿದ್ದರು. ಕ್ರಿ.ಶ.325ರಲ್ಲಿ ತಮ್ಮ […]

ಔಷಧಿ ಸೂಚಿಸುವುದು ವೈದ್ಯರ ಕೆಲಸವಲ್ಲ!

ಅಶೋಕಸ್ವಾಮಿ ಹೇರೂರ

 ಔಷಧಿ ಸೂಚಿಸುವುದು ವೈದ್ಯರ ಕೆಲಸವಲ್ಲ! <p><sub> ಅಶೋಕಸ್ವಾಮಿ ಹೇರೂರ </sub></p>

ಗರಿಷ್ಟ ಲಾಭದಿಂದಾಗಿ ಔಷಧ ಕಂಪನಿಗಳು ಸಹ ವೈದ್ಯರಿಗೆ ಕಮೀಷನ್ ನೀಡುತ್ತವೆ. ಕಾನ್ಫರೆನ್ಸ್ ಹೆಸರಿನಲ್ಲಿ ಮೋಜುಮಸ್ತಿಗಾಗಿ ಪುಸಲಾಯಿಸುತ್ತವೆ. ಹೀಗಾಗಿ ಔಷಧ ಮಾರಾಟವೂ ವೈದ್ಯರ ನಿಯಂತ್ರಣದಲ್ಲಿದೆ. ಇಂದಿನ ಬದಲಾದ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ, ಸೇವೆಯ ಬದಲಾಗಿ ಸುಲಿಗೆಯಾಗಿ ಮಾರ್ಪಟ್ಟಿದೆ. ಆರೋಗ್ಯ ತಪಾಸಣೆಯ ನೆಪದಲ್ಲಿ ಹಣ ಮಾಡಲಾಗುತ್ತಿದೆ. ಲ್ಯಾಬೋರೇಟರಿಗಳಿಂದ ಶೇಕಡಾ 70 ರಷ್ಟು ಕಮೀಷನ್ ವೈದ್ಯರಿಗೆ ದೊರೆಯುತ್ತಿದೆ. ಸಿಟಿ ಸ್ಕ್ಯಾನ್ ಗೆ ರೆಡಿಯಸ್ ಜಾಸ್ತಿ ಎಂದು ಹೇಳಿ ಎಮ್.ಅರ್.ಐ. ಮಾಡಿಸಲು ಹೇಳುತ್ತಾರೆ. ವೈದ್ಯರು ತಾವು ಸೂಚಿಸುವ ಕೇಂದ್ರದಲ್ಲಿ ಎಮ್.ಅರ್.ಐ. ಮಾಡಿಸಿಕೊಂಡು ಹೋಗದಿದ್ದರೆ, […]

ಸೇವೆ ಸುಲಿಗೆ ಆಗಬಾರದು

ಎಂ.ಕೆ.ಮಂಜುನಾಥ, ಬೆಂಗಳೂರು

ಒಂದು ಕಾಲಘಟ್ಟದಲ್ಲಿ “ವೈದ್ಯೋ ನಾರಾಯಣ ಹರಿ’’ ಎಂಬ ನಾಣ್ಣುಡಿಯನ್ನು ಮಂತ್ರದಂತೆ ಜಪಿಸಲಾಗುತ್ತಿತ್ತು. ರೋಗಿಗಳ ಸೇವೆ ಮಾಡುವುದೇ ಪರಮಾರ್ಥ ಕಾಯಕವೆಂದು ಮನಗಂಡು ಯಾವುದೇ ರೀತಿಯ ಆಸೆ ಆಮಿಷಗಳಿಗೆ ದಾಸರಾಗದೆ ತಮ್ಮ ಉಸಿರಿರುವ ತನಕ ಬದುಕನ್ನು ಮುಡುಪಾಗಿಟ್ಟಿದ್ದ ವೈದ್ಯರಿದ್ದರು ಎಂದರೆ ಇಂದಿನವರು ಪರಮಾಶ್ಚರ್ಯ ಪಡುವುದರಲ್ಲಿ ಸಂದೇಹವಿಲ್ಲ. ಮಾನವನ ಬದುಕಿನ ಸಂತೋಷ ಹಾಗೂ ಸಾರ್ಥಕತೆಗೆ ಆರೋಗ್ಯ ಮತ್ತು ಶಿಕ್ಷಣಗಳ ಅವಲಂಬನೆ ಅಪಾರ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಹಿಂದೆ ಕೇವಲ ರೋಗಿಗಳ ನಾಡಿ ಮಿಡಿತದಿಂದಲೇ ರೋಗದ ಮೂಲ ಅರಿತು ಸೂಕ್ತ ಚಿಕಿತ್ಸೆ ನೀಡಿ […]

ವೈದ್ಯಲೋಕದ ಲೋಪಗಳು ಚರ್ಚೆಯಾಯ್ತು: ಮುಂದೇನು?

ಡಾ.ಕೆ.ಎಂ.ಬೋಜಪ್ಪ

ಸರಕಾರ ವಿವಿಧೆಡೆ ಎಲ್ಲಾ ಸಲಕರಣೆಗಳು ಇರುವಂತ ‘ಹೈಟೆಕ್’ ಸರಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ರೋಗಿಗಳು ಖಾಸಗಿ ಆಸ್ಪತ್ರೆಗಳ ಸುಲಿಗೆಯಿಂದ ಪಾರಾಗುವ ಹಾಗೆ ತುರ್ತಾಗಿ ಮಾಡಬೇಕಾಗಿದೆ. ಸರಕಾರ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಎಂಬುದು ನನ್ನ ದೃಢ ನಂಬಿಕೆ. ಸಮಾಜಮುಖಿ ಮಾಸಪತ್ರಿಕೆಯು ಅಖಂಡ ಕರ್ನಾಟಕದ ಜನರ ಆರೋಗ್ಯಮುಖಿಯಾಗಿ ಶ್ರಮಿಸುವುದಕ್ಕೆ ಮುಂದೆ ಬಂದಿರುವುದು ಎಲ್ಲರಿಗೂ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ಸಾಮಾನ್ಯ ಜನರ ಆರೋಗ್ಯ ರಕ್ಷಣೆ ಹಾಗೂ ಸುಧಾರಣೆಯಲ್ಲಿ ಇಂದಿನ ವೈದ್ಯಕೀಯ ರಂಗ ಸೇವೆಯೋ ಸುಲಿಗೆಯೋ ಎಂದು ಮುಖ್ಯ ಚರ್ಚೆಯಾಗಬೇಕೆಂದು ಸಮಾಜಮುಖಿಯು […]

ಭಾರತದಲ್ಲಿ ಗ್ರಾಹಕರ ದನಿ ಗಟ್ಟಿಗೊಳ್ಳಬೇಕಿದೆ

ಸಂಜೀವ ಹಿರೇಮಠ

ಭಾರತದ ಆರೋಗ್ಯ ವ್ಯವಸ್ಥೆಯ ಚುಕ್ಕಾಣಿ ಹಿಡಿದು ನಡೆಸುವವರು, ಅದರ ವಿನ್ಯಾಸಕರು ಮತ್ತು ಅದರಿಂದ ಲಾಭ ಪಡೆಯುವ ಸಕಲರೂ ಈ ವ್ಯವಸ್ಥೆಯ ಬಗ್ಗೆ ಸತತ ಪ್ರಯತ್ನ ಮಾಡಿ ‘ಪಾಲ್ಗೊಳ್ಳುವಿಕೆ’ ಕಡೆಗೆ ಸಾಗಬೇಕಾಗಿದೆ. ಪ್ರತಿ ಬಾರಿಯೂ “ಆರೋಗ್ಯ ಭಾಗ್ಯ” ಎಂಬ ಮಾತನ್ನು ಕೇಳಿದಾಗ ‘ಇಂಥ ಭಾಗ್ಯ ನಮಗೆ ಹೇಗೆ ದೊರೆಯಲು ಸಾಧ್ಯ?’ ಎಂಬ ವಿಚಾರ ಮನಸ್ಸಿನಲ್ಲಿ ಮೂಡುತ್ತದೆ. ಆರೋಗ್ಯ ಅಥವಾ ಸ್ವಾಸ್ಥ್ಯ ಜನರ ದೈಹಿಕ ಮತ್ತು ಮಾನಸಿಕ ಸ್ಥಿತಿಯಾಗಿದ್ದು, ಅದನ್ನು ಕೇವಲ ಔಷಧಿ ಮತ್ತು ಸೇವೆಗಳಿಂದ ಮಾತ್ರ ಸಾಧಿಸಲಾಗದು. ಸಾಮಾನ್ಯವಾಗಿ […]

ಯಮರಾಜನ ಸಹೋದರ

ಎಂ.ಎಸ್.ನರಸಿಂಹಮೂರ್ತಿ

ಈ ಬರಹವನ್ನು ವೈದ್ಯಲೋಕದವರು ಹಾಸ್ಯಲೇಖನ ಎಂದು ಪರಿಗಣಿಸುವ, ರೋಗಿಗಳು ಕಟುವಾಸ್ತವ ಎಂದು ಪ್ರತಿಪಾದಿಸುವ ಸಾಧ್ಯತೆ ಇದೆ! ಇದಕ್ಕೆ ಲೇಖಕರು ಹೊಣೆಯಲ್ಲ! ಸಂಸ್ಕ್ರತದಲ್ಲಿ ಒಂದು ಜನಪ್ರಿಯ ಚಾಟು ಪದ್ಯವಿದೆ. ಅದರರ್ಥ ಹೀಗಿದೆ: ವೈದ್ಯರಾಜನೇ, ನೀನು ಯಮರಾಜನ ಸಾಕ್ಷಾತ್ ಬ್ರದರ್ರು. ಯಮನಾದರೆ ಪ್ರಾಣ ಮಾತ್ರ ತಗೊಂಡು ಹೋಗ್ತಾನೆ. ವೈದ್ಯನಾದ ನೀನು ಪ್ರಾಣದ ಜೊತೆಗೆ ಹಣಾನೂ ತಗೊಂಡು ಹೋಗ್ತೀಯ! ಇದನ್ನ ಹಾಸ್ಯಕ್ಕಾಗಿ ಬರೆದರೋ, ಸತ್ಯವನ್ನಿಟ್ಟು ಬರೆದರೋ ಗೊತ್ತಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಇದು ನಿಜವೆಂದು ಎಲ್ಲರ ಅನುಭವಕ್ಕೆ ಬರ್ತಾ ಇದೆ. ಆಸ್ಪತ್ರೆ […]

ಇದೇನಾ ಸಂಭವಾಮಿ ಅನ್ನೊದು?

ಹಿ.ಶಿ.ರಾಮಚಂದ್ರೇಗೌಡ

ನೆಹರೂ ಅವರನ್ನು ನಿಂದಿಸುತ್ತಿದ್ದ ನನಗೆ ಈಗ ತಪ್ಪಿನ ಅರಿವಾಗಿದೆ. ಆತ ಚಲಿಸುವ ಬ್ರಾಹ್ಮಣ. ಜಗತ್ತನ್ನು ಕಂಡ ಬ್ರಾಹ್ಮಣ. ಆದ್ದರಿಂದಲೆ ಭಾರತ ಸಮಾಜವಾದವನ್ನು ಅನುಸರಿಸಿತು. ಬ್ರಾಹ್ಮಣ ಚಲಿಸಿದ ಕಡೆ ಭಾರತ ಚಲಿಸಿದೆ, ಪ್ರಗತಿಶೀಲವಾಗಿದೆ; ಬ್ರಾಹ್ಮಣ ನಿಂತ ಕಡೆ ಭಾರತ ಚಾಣಕ್ಕೀಕರಣಗೊಂಡಿದೆ. ಅದೇ ಸ್ಥಿತಿಗೆ ನಾವೀಗ ಬಂದು ತಲುಪಿದ್ದೇವೆ.  ಭೂಮಿ ಗುಂಡಾಗಿದೆ, ಜಾತಿಯೂ ಗುಂಡಾಗಿದೆಯೆ? ಮತ್ತೆ ಒಕ್ಕರಿಸಿತು ನವ ಸನಾತನ ವಾದ; 2019ರ ಲೋಕಸಭಾ ಚುನಾವಣೆಯ ಮೂಲಕ. ವಿಷಯವಿಲ್ಲ, ವಿಚಾರವಿಲ್ಲ; ಸುಳ್ಳೇ ಎಲ್ಲವೂ ಆಯಿತಲ್ಲ! ನಮ್ಮ ಜಾತಿತಾತ ಅವತರಿಸಿದ್ದೂ ಹೀಗೆಯೆ. […]

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಏನಿದೆ ಅದರಲ್ಲಿ?

ಪೃಥ್ವಿದತ್ತ ಚಂದ್ರಶೋಭಿ

 ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಏನಿದೆ ಅದರಲ್ಲಿ? <p><sub> ಪೃಥ್ವಿದತ್ತ ಚಂದ್ರಶೋಭಿ </sub></p>

ಭಾರತೀಯ ನಾಗರಿಕತೆಯು ತನ್ನ ಗತವೈಭವವನ್ನು ಮತ್ತೆ ಗಳಿಸಲು ಶಿಕ್ಷಣ ಕ್ಶೇತ್ರವನ್ನು ಆದ್ಯತೆಯ ವಲಯವೆಂದೆ ಸಂಘ ಪರಿವಾರವು ನೋಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಸರ್ಕಾರವು ಯಾವ ಬಗೆಯ ಶಿಕ್ಷಣ ನೀತಿಯನ್ನು ರೂಪಿಸಲಿದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇದೆ. ಮೇ 31ರಂದು ಪ್ರೊ.ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಸಲ್ಲಿಸಿತು. ಜೂನ್ 2017ರಿಂದ ನೇಮಕಗೊಂಡ ಈ ಸಮಿತಿಯು ಎರಡು ವರ್ಷಗಳ ಕಾಲ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಹಲವಾರು ಕ್ಷೇತ್ರ ಪರಿಣತರ ಸಲಹೆಗಳನ್ನು […]

ಸಂಸತ್ತಿನಲ್ಲಿ ಹೆಚ್ಚಿದ ಅಪರಾಧಿಗಳು!

ಪಾಂಡುರಂಗ ಹೆಗಡೆ

ಭಾರತ 539 ಹೊಸ ಸಂಸತ್ ಸದಸ್ಯರನ್ನು ಆಯ್ಕೆ ಮಾಡಿದೆ. ಇವರ ಹಿನ್ನೆಲೆ ಅಧ್ಯಯನ ಮಾಡಿದ ಅಸೊಸಿಯೇಶನ್ ಫಾರ್ ಡೆಮೋಕ್ರೇಟಿಕ್ ರಿಫಾರ್ಮ್ ಎಂಬ ಸಂಸ್ಥೆಯು ಬಹಿರಂಗ ಪಡಿಸಿದ ಮಾಹಿತಿ ಅತ್ಯಂತ ಕಳವಳಕಾರಿ ಮತ್ತು ಆಘಾತಕಾರಿಯಾಗಿದೆ.  ಆಯ್ಕೆಯಾದ 539 ಸದಸ್ಯರಲ್ಲಿ 233 ಸದಸ್ಯರು ಅಪರಾಧಿ ಹಿನ್ನೆಲೆಯನ್ನು ಹೊಂದಿದವರಾಗಿದ್ದು, ಕೆಲವರು ಗಂಭೀರ ರೀತಿಯ ಆಪಾದನೆಯನ್ನು ಎದುರಿಸುತ್ತಿದ್ದಾರೆ! ಅಂದರೆ ನಾವು ಸಂಸತ್ತಿಗೆ ಆರಿಸಿ ಕಳುಹಿಸಿದ ಅರ್ಧದಷ್ಟು ಸದಸ್ಯರು ದೇಶದ ಪರಮೋಚ್ಚ ಸಂಸ್ಥೆಯಾದ ಸಂಸತ್ ಭವನದಲ್ಲಿ ಪ್ರವೇಶ ಪಡೆಯಲು ಯೋಗ್ಯತೆ ಇಲ್ಲದವರು! ಈ ಬೆಳವಣಿಗೆ […]

ಶಿವಮೊಗ್ಗ ಜಿಲ್ಲೆಯ ಮೂರು ಕರಾಳ ಯೋಜನೆಗಳು

ಅಖಿಲೇಶ್ ಚಿಪ್ಪಳಿ

 ಶಿವಮೊಗ್ಗ ಜಿಲ್ಲೆಯ ಮೂರು ಕರಾಳ ಯೋಜನೆಗಳು <p><sub> ಅಖಿಲೇಶ್ ಚಿಪ್ಪಳಿ </sub></p>

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲಾಗುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜಗತ್ಪ್ರಸಿದ್ಧ ಜೋಗದ ಆಸುಪಾಸಿನಲ್ಲಿ ಒಟ್ಟು ಮೂರು ಕರಾಳ ಯೋಜನೆಗಳು ಅನುಮತಿಗಾಗಿ ಹೊಂಚುಹಾಕಿ ಕುಳಿತಿವೆ! ಸ್ಥಳೀಕರು ವಿರೋಧಿಸುತ್ತಿದ್ದಾರೆ. ಇಪ್ಪತ್ತೊಂದನೇ ಶತಮಾನವನ್ನು ವೈರುಧ್ಯಗಳ ಶತಮಾನ ಎಂದೇ ಕರೆಯಬಹುದು. ಇತ್ತ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನಗಳು ಆಳುವ ಹೊತ್ತಿನಲ್ಲೇ, ಅತ್ತ ಪರಿಸರ, ಜೀವಿವೈವಿಧ್ಯ ನಾಶ, ಹವಾಗುಣ ಬದಲಾವಣೆ, ಬರಗಾಲ ಇತ್ಯಾದಿಗಳು ವಿಜೃಂಭಿಸುತ್ತಿವೆ. ಮಂಗಳನ ಅಂಗಳಕ್ಕೆ ಕೈಚಾಚುವ ಪ್ರಯತ್ನವನ್ನು ವಿಜ್ಞಾನದ ಮೇರುಕೃತಿ ಎಂದು ಬಣ್ಣಿಸುವ ತನ್ಮೂಲಕ ಪ್ರಕೃತಿಯನ್ನು ಬಗ್ಗಿಸಲು ಹೊರಟಿರುವ ವಾಮನ ಸ್ವರೂಪಿ […]

ಭಾಜಪದ ಹಳೆಯಜೆಂಡಾ ಏಕಕಾಲಕ್ಕೆ ಚುನಾವಣೆ

ಕು.ಸ.ಮಧುಸೂದನ

ಕೇಂದ್ರದ ಭಾಜಪ ಸರಕಾರ ಏಕಕಾಲಕ್ಕೆ ಚುನಾವಣೆ ನಡೆಸಿದರೆ ಅನಗತ್ಯ ವೆಚ್ಚ ಇಲ್ಲವಾಗುತ್ತದೆಯೆಂಬ ಘೋಷಣೆಯನ್ನು ಮುಂದಿಟ್ಟುಕೊಂಡು ತನ್ನ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಹುನ್ನಾರದ ಹಿಂದಿರುವ ಉದ್ದೇಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ದೆಹಲಿಯ ಗದ್ದುಗೆ ಹಿಡಿದಾಕ್ಷಣ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಹೇಳುವುದರೊಂದಿಗೆ ಭಾಜಪದ ಹಳೆಯ ಕಾರ್ಯಸೂಚಿಗೆ ಮತ್ತೆ ಜೀವ ತುಂಬಿದ್ದಾರೆ. ಭಾಜಪದ ಈ ಕಾರ್ಯತಂತ್ರ ಹೊಸತೇನಲ್ಲ. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ […]

ಮುಖ್ಯಚರ್ಚೆಗೆ ಪ್ರವೇಶ

ಕರ್ನಾಟಕದ ದಲಿತ ಚಳವಳಿ ದಿಕ್ಕು ತಪ್ಪಿದ್ದೆಲ್ಲಿ? ಮಹಾರಾಷ್ಟ್ರದ ನಂತರ ದಲಿತ ಸಂಘಟನೆಯಲ್ಲಿ ಮುಂಚೂಣಿ ಯಲ್ಲಿದ್ದ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು. ಕಳೆದ ಐದು ದಶಕಗಳಲ್ಲಿ ಕರ್ನಾಟಕದ ದಲಿತ ಚಳವಳಿ ನೂರಾರು ಚಿಂತಕರನ್ನು, ಸಾಹಿತಿಗಳನ್ನು ಹಾಗೂ ನಾಯಕರನ್ನು ಹುಟ್ಟುಹಾಕಿದೆ. ಆದರೆ ದಲಿತ ಸಂಘಟನೆ ಇನ್ನಿಲ್ಲದಂತೆ ಛಿದ್ರಗೊಂಡು ಸ್ವಹಿತಾಸಕ್ತಿಯ ಹೊರತಾಗಿ ಬೇರಾವುದೇ ಗೊತ್ತುಗುರಿ ಯಿಲ್ಲದಂತಾಗಿದೆ. 21ನೇ ಶತಮಾನದ ದಲಿತ ಪೀಳಿಗೆಗೆ ಯಾವುದೇ ಮುಂದಾಳತ್ವ ನೀಡದಂತಾಗಿದೆ. ಈ ಸಂದರ್ಭದಲ್ಲಿ ಸಮಾಜಮುಖಿ ಪತ್ರಿಕೆ ಎತ್ತಿದ ಪ್ರಶ್ನೆಗಳು: ದಲಿತ ಚಿಂತಕರು ಅಂಬೇಡ್ಕರ್ ಚಿಂತನೆಯನ್ನು ಅರಿಯಲು […]

ದಲಿತ ಚಳವಳಿಯ ತಾತ್ವಿಕ ವಿಪರ್ಯಾಸಗಳು

ಡಾ. ಮೋಗಳ್ಳಿ ಗಣೇಶ್

ಇವತ್ತು ದಲಿತ ಚಳವಳಿ ಇಲ್ಲ, ಆದರೆ ಅಲ್ಲಲ್ಲಿ ಬೇಕಾದಷ್ಟು ದಲಿತ ನಾಯಕರು ಅಧಿಕಾರ ವ್ಯವಸ್ಥೆಯ ಸುತ್ತ ತಿರುಗಾಡಿಕೊಂಡಿದ್ದಾರೆ. ಜಾಗತೀಕರಣೋತ್ತರ ಕಾಲದಲ್ಲೀಗ ದಲಿತರು ಜೀತದ ಹಳ್ಳಿಗಳ ಬಿಟ್ಟು ಜಾಗತಿಕ ನಗರಗಳತ್ತ ವಲಸೆ ಹೋಗುತ್ತಲೇ ಇದ್ದಾರೆ. ಇದು ಚಳವಳಿ ಅಲ್ಲ. ಹೊಸ ಬಗೆಯ ಶೋಷಣೆಗೆ ಸ್ವಯಂಸಿದ್ಧ ಹರಾಜಿಗೆ ಹೊರಟಿರುವ ಹೊಸ ಕಾಲದ ದಲಿತ ತಲೆಮಾರು.  ಕರ್ನಾಟಕದ ಎಪ್ಪತ್ತರ ದಶಕ, ಚಳವಳಿಯ ದಶಕ. ಆ ಕಾಲದಲ್ಲಿ ಮುಖ್ಯವಾಗಿ ತಲೆ ಎತ್ತಿದ್ದು ಎರಡು ಚಳವಳಿಗಳು. ಮೊದಲಿನದು ದಲಿತ ಚಳವಳಿ. ಆನಂತರದ್ದು ರೈತ ಚಳವಳಿ. […]

ದಲಿತ ವಿಮೋಚನಾ ರಥ ಮತ್ತು ಪಥ

ಡಾ.ಅರವಿಂದ ಮಾಲಗತ್ತಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಒಡೆದು ಎಷ್ಟೇ ಹೋಳಾದರೂ ಅದು ಮಾಡಿದ ಕಾರ್ಯ ಅಸಾಮಾನ್ಯವಾದುದು. ಕರ್ನಾಟಕದಲ್ಲಿ ಈಗ 36 ವಿಶ್ವವಿದ್ಯಾನಿಲಯಗಳಿವೆ. ಈ ವಿಶ್ವವಿದ್ಯಾನಿಲಯಗಳು ಮಾಡಲಾಗದ ಕಾರ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಒಂದು ಬಯಲು ವಿಶ್ವವಿದ್ಯಾನಿಲಯದಂತೆ ಕೆಲಸ ಮಾಡಿದೆ.  ಡಾ.ಅಂಬೇಡ್ಕರ್ ಅವರ ದಲಿತ ವಿಮೋಚನಾ ರಥ ಯಾವುದು? ಎನ್ನುವ ಪ್ರಶ್ನೆ, ಇಂದು ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ, ಅಂಬೇಡ್ಕರ್ ರಥ ಒಂದಿಲ್ಲ ಹಲವಾರಿವೆ. ಅದರಲ್ಲಿ ನಿಜ ದಲಿತ ವಿಮೋಚನಾ ರಥ ಯಾವುದೆಂದು ಹುಡುಕಬೇಕಿದೆ. ಈ ಅಂಬೇಡ್ಕರ್ […]

ಜಾಗತಿಕ ನೆಲೆಯ ತಾತ್ವಿಕತೆ ಅಗತ್ಯವಿದೆ

ರಾಜೇಂದ್ರ ಚೆನ್ನಿ

ಇಡೀ ಜಗತ್ತಿನಲ್ಲಿಯೇ ಬಲಪಂಥೀಯ ಚಿಂತನೆ ಹಾಗೂ ರಾಜಕೀಯಗಳು ಪ್ರಬಲವಾಗುತ್ತಿರುವ ಸಂದರ್ಭದಲ್ಲಿಟ್ಟು ನಮ್ಮ ದಲಿತ ಚಿಂತನೆಯ ಓರೆಕೋರೆಗಳನ್ನು ಚರ್ಚಿಸಬೇಕು. ದಲಿತ ಚಳವಳಿಯ ನಾಯಕರನ್ನು ದೂಷಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ದಲಿತ ಚಳವಳಿ ಮಾತ್ರವಲ್ಲ ಎಲ್ಲಾ ಪ್ರಜಾಪ್ರಭುತ್ವವಾದಿ ಚಳವಳಿಗಳು ಸೋಲುತ್ತಿವೆ ಎನ್ನುವುದು ನಮ್ಮ ಮರುಚಿಂತನೆಯ ಆರಂಭದ ಮೆಟ್ಟಿಲಾಗಿರಬೇಕು.  ಸ್ವಾತಂತ್ರ್ಯದ ನಂತರ ಅನೇಕ ದಶಕಗಳವರೆಗೆ ಅಂಬೇಡ್ಕರ್ ಮತ್ತು ಅವರ ಚಿಂತನೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಮಹಾರಾಷ್ಟ್ರದಲ್ಲಿ ಕೂಡ ದಲಿತರಿಗೆ ಭೂಮಿ ಹಂಚಿಕೆಯನ್ನು ಒತ್ತಾಯಿಸಿ ನಡೆದ ಚಳವಳಿಯನ್ನು ಬಿಟ್ಟರೆ ಅಂಬೇಡ್ಕರ್ ಚಿಂತನೆಯನ್ನು ಬೆಳೆಸುವ ಪ್ರಯತ್ನಗಳು […]

ದಲಿತ ಚಳವಳಿಯ ದಿಕ್ಕು ಬದಲಾಗಿದೆ

ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಚಳವಳಿ ದಿಕ್ಕು ತಪ್ಪಿದೆ ಎನ್ನುವುದಕ್ಕಿಂತಲೂ ದಿಕ್ಕು ಬದಲಾಯಿಸಿದೆ ಮತ್ತು ದುರ್ಬಲಗೊಂಡಿದೆ ಎಂದು ನಾನು ತಿಳಿದಿದ್ದೇನೆ. ದುರ್ಬಲಗೊಂಡಿರುವುದಕ್ಕೆ ಕಾರಣ ಸಂಘಟನೆ ಹಲವು ಹೋಳಾಗಿ ಕವಲೊಡೆದಿರುವುದು. ನಾನು ದಲಿತ ಚಳವಳಿಯನ್ನು ಹೊರಗಿನಿಂದ ನೋಡಿದವನು. ಚಳವಳಿಯ ಭಾಗವೇ ಆಗಿದ್ದ ಅನೇಕ ಲೇಖಕ ಮಿತ್ರರಿದ್ದಾರೆ. ಅವರಿಂದ ಈ ಪ್ರಶ್ನೆಗೆ ನಿರ್ದಿಷ್ಟ ಹಾಗೂ ಕ್ವಚಿತ್ತಾದ ಉತ್ತರ ದೊರಕಬಹುದು. ದಲಿತ ಚಳವಳಿಯ ಶೃಂಗವಾದ ಬೂಸಾ ಚಳವಳಿ 1973ರಲ್ಲಿ ಪ್ರಾರಂಭವಾದಾಗ ನಾನು ಮೈಸೂರಿನಲ್ಲಿ ಬನುಮಯ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಬಸವಲಿಂಗಪ್ಪನವರಿಗೆ ಕುವೆಂಪು ಮತ್ತು ಅನಂತಮೂರ್ತಿಯವರು ಬೆಂಬಲವಾಗಿ ನಿಂತು ಭಾಷಣ […]

ದಲಿತ ಚಳವಳಿಯ ಏಳು-ಬೀಳು

ಡಾ.ವಿ.ಮುನಿವೆಂಕಟಪ್ಪ

ಪುರೋಹಿತಶಾಹಿಗೆ, ಅಧಿಕಾರಶಾಹಿಗೆ ಮತ್ತು ಜಾತಿವಾದಿಗಳಿಗೆ ಸಿಂಹಸ್ವಪ್ನವಾಗಿದ್ದ ಚಳವಳಿ ದುರ್ಬಲಗೊಂಡಿದೆ. ಶೋಷಣೆ ಮಾಡುವವರಿಗೆ ಅನುಕೂಲವಾಗುವಂತೆ ಛಿದ್ರಗೊಂಡ ಚಳವಳಿಯ ನಾಯಕರು ಸರ್ಕಾರಿ ಕಛೇರಿಗಳನ್ನು ಸುತ್ತುತ್ತ, ಅಧಿಕಾರಿಗಳಲ್ಲಿ ಕೈಚಾಚಿ ನಿಂತಿದ್ದಾರೆ. ಆರನೆಯ ಶತಮಾನದಲ್ಲಿ ಸಂಘ, ಸಂಘಟನೆ, ಹೋರಾಟ ಪರಿಕಲ್ಪನೆಯನ್ನು ಹುಟ್ಟುಹಾಕಿದವರು; ಮೊಟ್ಟಮೊದಲಿಗೆ ‘ಬಹುಜನ’ ಪದ ಪ್ರಯೋಗಿಸಿದವರು ಬುದ್ಧ. ಬಹುಜನ ಹಿತಾಯ ಬಹುಜನ ಸುಖಾಯ ಲೋಕಾನು ಕಂಪಾಯ ಎಂಬುದು ಬಿಕ್ಕುಗಳಿಗೆ ಹೇಳಿದ ಸಂದೇಶವಾಗಿದೆ. ನಂತರ 12ನೇ ಶತಮಾನದಲ್ಲಿ ಶರಣ ಚಳವಳಿ ಹುಟ್ಟುಹಾಕಿದವರು ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮೊದಲಾದ ಶರಣರು. ಎಲ್ಲ ವರ್ಗದವರನ್ನು ಅನುಭವ […]

ಅಡ್ಡಿಯಾದ ಸೈದ್ಧಾಂತಿಕ ಅಸ್ಪಷ್ಟತೆ

ಸಿ.ಎಸ್.ದ್ವಾರಕಾನಾಥ್

ಚಳವಳಿಯಲ್ಲಿ ಬಹುತೇಕರು ಕಮ್ಯುನಿಸ್ಟರು ಮತ್ತು ವಿಚಾರವಾದಿಗಳು ಸಾರಾಸಗಟಾಗಿ ವೈದಿಕರ ಹಿಡಿತದಲ್ಲಿದ್ದ ದೇವರು ಮತ್ತು ಮೂಢನಂಬಿಕೆಯನ್ನು ನಿರಾಕರಿಸುವ ಭರದಲ್ಲಿ ನಮ್ಮ ನೆಲಮೂಲದ ಸಂಸ್ಕೃತಿಯನ್ನು, ನಮ್ಮ ಶರಣರನ್ನು, ದಾಸರನ್ನು, ದಾರ್ಶನಿಕರನ್ನು, ತತ್ವಪದಕಾರರನ್ನು, ಅನುಭಾವಿಗಳನ್ನೂ ನಿರಾಕರಿಸಿದರು!? ಇದರ ಪರಿಣಾಮ ಚಳವಳಿ ಜನಸಾಮಾನ್ಯರಿಂದ ದೂರವಾಯಿತು. ಈ ಎಲ್ಲಾ ಪಾಪಗಳಲ್ಲಿ ನನ್ನ ಪಾಲೂ ಇದೆ! ದಲಿತ ಚಳವಳಿಗೆ ನನ್ನ ಪ್ರವೇಶ ಎಪ್ಪತ್ತರ ದಶಕದ ಮಧ್ಯಭಾಗ, ಅಲ್ಲಿಂದ ಆಚೆಗೆ ದಲಿತ ಚಳವಳಿಯಲ್ಲಿ ಒಬ್ಬ ಕಾರ್ಯಕರ್ತನಾಗಿ, ಕಾಲಾನಂತರ ಚಳವಳಿಯ ಸಂಗಾತಿಯಾಗಿ, ಸಲಹೆಗಾರನಾಗಿ, ಭಾಷಣ ಕಾರನಾಗಿ, ಬರಹಗಾರನಾಗಿ, ಬೆಂಬಲಿಗನಾಗಿ, […]

ಬಾಬಾ ಸಾಹೇಬರ ಬೆಳಕಿನಲ್ಲಿ ಚಳವಳಿ ಸಾಗಲಿ

ಡಾ.ಬಿ.ಎಂ.ಪುಟ್ಟಯ್ಯ

ಸಾಮಾಜಿಕ-ರಾಜಕೀಯ ವಸ್ತುಸ್ಥಿತಿ ಬದಲಾದಂತೆ ಅದರ ರಾಜಕೀಯ ಅರಿವಿನಲ್ಲಿ ಚಳವಳಿಯೂ ಬದಲಾಗುತ್ತಾ, ಬೆಳೆಯುತ್ತಾ ಹೋಗಬೇಕಿತ್ತು. ಇದು ಆಗಲಿಲ್ಲ; ಈ ಮಾತು ಎಲ್ಲಾ ಚಳವಳಿಗಳಿಗೂ ಅನ್ವಯಿಸುತ್ತದೆ.  ಕರ್ನಾಟಕದಲ್ಲಿ ದಲಿತ ಚಳುವಳಿ ದಿಕ್ಕು ತಪ್ಪಿದ್ದೆಲ್ಲಿ? ಎಂಬ ಶೀರ್ಷಿಕೆ ಮೂಲಕ ಮೊದಲೇ ಒಂದು ತೀರ್ಮಾನವನ್ನು ಕೊಡಲಾಗಿದ್ದು, ಅದು ದುರ್ಬಲವಾಗಿದೆ. ಶೀರ್ಷಿಕೆಯಲ್ಲೆ ಪೂರ್ವತೀರ್ಮಾನವಿರುವುದರಿಂದ ಅದಕ್ಕೆ ವಿವರಗಳನ್ನು ಕೊಟ್ಟು, ಸಮರ್ಥಿಸುವುದು ಉಳಿದಿರುವ ಕೆಲಸ. ಇದೇ ಶೀರ್ಷಿಕೆಯನ್ನು ದಿಕ್ಕು ತಪ್ಪಿದ್ದು ಹೇಗೆ? ದಿಕ್ಕು ತಪ್ಪಿದ್ದು ಯಾಕೆ? ದಿಕ್ಕು ತಪ್ಪಿಸಿದ್ದು ಯಾರು? ಅಂತಲೂ ರೂಪಿಸಬಹುದು. ವಾಸ್ತವವಾಗಿ ಈ ಚೌಕಟ್ಟು […]

1 2 3