ದಿಕ್ಕು ತಪ್ಪಲು ಕಾರಣವಾದ ನಾಯಕರ ದ್ರೋಹ!

ಡಾ.ಚಿ.ನಾ.ರಾಮು

ಕರ್ನಾಟಕ ಎಂದರೆ ಚಳವಳಿಗಳ ತವರು. ಕಾಲಕಾಲಕ್ಕೆ ಅನೇಕ ಹೋರಾಟಗಳು ಈ ಮಣ್ಣಿನಲ್ಲಿ ಹುಟ್ಟಿವೆ. ಭಾಷಾ ಚಳವಳಿಯಿಂದ ಹಿಡಿದು ಸಾಮಾಜಿಕ ಚಳವಳಿಯವರೆಗೆ ವ್ಯವಸ್ಥೆಯ ವಿರುದ್ಧ ಸೆಟೆದುನಿಂತ ಅನೇಕ ಹೋರಾಟಗಳನ್ನು ನಾವು ಕಾಣಬಹುದಾಗಿದೆ. ನಾಡಿನ ಯಾವುದಾದರೂ ಒಂದು ಭಾಗದಲ್ಲಿ ಹುಟ್ಟಿ ಇಡೀ ರಾಜ್ಯಕ್ಕೆ ಹರಡಿ ಜನ ಸಮುದಾಯಗಳನ್ನು ಈ ಚಳವಳಿಗಳು ಸೆಳೆದಿವೆ. ನಾಡಿನಲ್ಲಿ ಹುಟ್ಟಿದ ಪ್ರತಿ ಚಳವಳಿಯ ಹಿಂದೆಯೂ ರೋಚಕ ಇತಿಹಾಸವಿದೆ. ಸಾಹಿತ್ಯ ಚಳವಳಿ, ರೈತ ಚಳವಳಿ, ಸಮಾಜವಾದಿ ಚಳವಳಿ, ಭಾಷಾ ಚಳವಳಿ, ಮಹಿಳಾ ಚಳವಳಿ, ಮಾರ್ಕ್ಸ್ ವಾದಿ ಚಳವಳಿ, […]

ದಲಿತ ಚಳವಳಿಗಾರರು ಮರೆತ ಅಂಬೇಡ್ಕರ್ ಆರ್ಥಿಕ ಚಿಂತನೆ

ಮೋಹನದಾಸ್

ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ದಲಿತನಾಗಿ ಹುಟ್ಟಿರದಿದ್ದರೆ ಅಥವಾ ದಲಿತ ನೇತಾರನಾಗಿ ಹೊರಹೊಮ್ಮದಿದ್ದರೆ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ನಮ್ಮನ್ನು ಕಾಡಿದ್ದುಂಟು. 1920ರ ದಶಕದಲ್ಲಿಯೇ ಅಮೆರಿಕೆಯ ಕೊಲಂಬಿಯಾ ಹಾಗೂ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎರಡರಿಂದಲೂ ಡಾಕ್ಟರೇಟ್ ಪಡೆದಿದ್ದ ಅಂಬೇಡ್ಕರ್, 20ನೇ ಶತಮಾನದ ಅಗ್ರಗಣ್ಯ ಅರ್ಥಶಾಸ್ತ್ರಜ್ಞರಾಗಿ ಹೆಸರು ಪಡೆಯುತ್ತಿದ್ದರು. ಕೇವಲ ಭಾರತದಲ್ಲಿಯೇ ಅಲ್ಲ ಬದಲಿಗೆ ಇಡೀ ವಿಶ್ವದಲ್ಲಿಯೇ ಅತ್ಯಂತ ಗೌರವಾನ್ವಿತ ಹಣಕಾಸು ತಜ್ಞರಾಗುತ್ತಿದ್ದರು. ನಂತರದ ದಶಕಗಳಲ್ಲಿ ಅರ್ಥಶಾಸ್ತ್ರದಲ್ಲಿ ಅಂಬೇಡ್ಕರ್‍ರವರ ಸಾಧನೆ ಕಡಿಮೆಯೆಂದೇನೂ ಅಲ್ಲ. ಆದರೆ ಒಮ್ಮೆ ಲಂಡನ್ನಿನಲ್ಲಿ ಬ್ಯಾರಿಸ್ಟರ್ […]

ದಲಿತ ಜಗತ್ತಿನ ಒಡಕು ಬಿಂಬಗಳು

ಪ್ರಕಾಶ್ ಮಂಟೇದ

ದಲಿತ ಚಳವಳಿಯ ಹಿಂದಿನ ನಡೆಗಳು ಎಬ್ಬಿಸಿದ್ದ ವೈರುಧ್ಯಗಳನ್ನು ಸಹ ತಣ್ಣಗೆ ಕೂತು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ದಲಿತೇತರ ಜಗತ್ತನ್ನು ತಾತ್ವಿಕ ಹಾಗೂ ವೈಚಾರಿಕ ಕಾರಣಗಳಿಗಾಗಿ ಸದಾ ವಿರೋಧಿಸುತ್ತಲೇ ಅಮಾನತ್ತಿನಲ್ಲಿ ಇಟ್ಟು ನೋಡುವ ತೀವ್ರವಾದಿತನದ ದಲಿತತ್ವವು ಈಗ ಅಗತ್ಯವಿಲ್ಲ. ದಲಿತರು ಬಂದರು ದಾರಿ ಬಿಡಿ ದಲಿತರ ಕೈಗೆ ರಾಜ್ಯ ಕೊಡಿ ಎಂಬ ಮೂರು ದಶಕಗಳ ಹಿಂದೆ ಎದ್ದ ಘೋಷಣೆಯನ್ನು ಈಗ ಎಲ್ಲಾದರೂ ನಾವು ಕೇಳಿಸಿಕೊಂಡರೆ ಇದು ಯಾವ ಬಣದ ಸಂಘಟನೆಯವರ ಕೂಗು, ಎಡವೋ, ಬಲವೋ ಎಂದು ಪ್ರತ್ಯೇಕವಾಗಿ ನೋಡುವ […]

ಹೆಚ್ಚಿನ ಓದಿಗೆ ಕೆಲವು ಪಸ್ತಕಗಳು

ಸಂಗ್ರಹ: ಮಹಾಲಿಂಗ ಪೋಳ

ಮನುಸ್ಮೃತಿ ಮತ್ತು ದಲಿತರು,ಜ.ಹೊ.ನಾ. ದಲಿತರು ಮತ್ತು ಪ್ರಭುತ್ವ, ಬೊಜ್ಜಾ ತಾರಕಂ, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ, ಬೆಲೆ: ರೂ.100, ಸುಮೇಧ ಪ್ರಕಾಶನ, ಕಲಬುರ್ಗಿ. ಜಾತಿ ಮೀಮಾಂಸೆ, ಮೊಗಳ್ಳಿ ಗಣೇಶ್, ಬೆಲೆ: ರೂ.300, ಅಭಿನವ ಪ್ರಕಾಶನ,ಬೆಂಗಳೂರು. ದಲಿತ ಸಾಹಿತ್ಯ ಚಳವಳಿ, ಸಂಪಾದಕರು: ಡಾ.ಮಲ್ಲಿಕಾ ಘಂಟಿ, ಬೆಲೆ: ರೂ.45. ತಾತ್ವಿಕತೆ, ಸಂಪಾದಕರು: ಡಾ. ಮೇಟಿ ಮಲ್ಲಿಕಾರ್ಜುನ, ಬೆಲೆ: ರೂ.490. ದಲಿತ ನೋಟ, ಸಂಪಾದಕರು: ಡಾ.ಡೊಮಿನಿಕ್.ಡಿ, ಡಾ.ಬಿ.ಎಲ್.ರಾಜು, ಬೆಲೆ: ರೂ.350. ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ಕರ್ನಾಟಕ ಸಾಹಿತ್ಯ ಅಕಾಡೆಮಿ ದಲಿತ ಚಳವಳಿ […]

ಕೋಳಿ ಮಾಂಸೋದ್ಯಮದಲ್ಲಿ ಅನಿಯಂತ್ರಿತ ಪ್ರತಿಜೀವಕ ಔಷಧಿಗಳ ಬಳಕೆ

ಡಾ.ಜೆ.ಎಸ್.ಪಾಟೀಲ

ಕೋಳಿ ಮಾಂಸೋದ್ಯಮದಲ್ಲಿ ಅನಿಯಂತ್ರಿತ ಪ್ರತಿಜೀವಕ ಔಷಧಿಗಳ ಬಳಕೆ
ಡಾ.ಜೆ.ಎಸ್.ಪಾಟೀಲ

ಕೋಳಿಮರಿಗಳ ಮಾಂಸಖಂಡ ಬೆಳೆಸಲು ಬಳಸುತ್ತಿರುವ ಕೊಲಿಸ್ಟಿನ್ ಎಂಬ ಪ್ರತಿಜೀವಕ ಔಷಧಿಯು ಕೋಳಿ ತಿನ್ನುವವರ ಆರೋಗ್ಯದ ಮೇಲೆ ದೂರಗಾಮಿ ಪಾಶ್ರ್ವ ಪರಿಣಾಮ ಬೀರಬಲ್ಲದು. ಈ ಕಾರಣದಿಂದ ಜಾಗತಿಕ ಆರೋಗ್ಯ ಸಂಸ್ಥೆಯು ಕೊಲಿಸ್ಟಿನ್ ಬಳಕೆಯನ್ನು ನಿಷೇಧಿಸಬೇಕೆಂದು ಅಗ್ರಹಿಸಿದ.  ಸಂಸ್ಕರಿಸಿದ ಮಾಂಸಾಹಾರ ವ್ಯಾಪಾರವು ಇಂದು ಕಾರ್ಪೋರೇಟ್ ಸ್ವರೂಪ ಪಡೆದು ಬೃಹತ್ ಜಾಗತಿಕ ಉದ್ಯಮವಾಗಿ ಬೆಳೆದು ನಿಂತಿದ್ದನ್ನು ನಾವು ನೋಡು ತ್ತಿದ್ದೇವೆ. ಕಾರ್ಪೋರೇಟ್ ಉದ್ಯಮಗಳೆಂದರೆ ಮಾರುಕಟ್ಟೆ ಪೈಪೋಟಿ ಸಹಜವಾದದ್ದು. ಉದ್ಯಮವನ್ನು ಜಾಗತಿಕ ಸ್ತರದಲ್ಲಿ ವ್ಯಾಪಕವಾಗಿ ವಿಸ್ತರಣೆ ಮಾಡುವುದು ಮತ್ತು ಅಧಿಕ ಲಾಭಾಂಶ ನಿರೀಕ್ಷಣೆಗಳು […]

ಇರಾನ್ ಬುಡಕ್ಕೆ ಯುದ್ಧದ ಕೊಳ್ಳಿಯಿಟ್ಟ ಅಮೆರಿಕಾ

-ಪುರುಷೋತ್ತಮ ಆಲದಹಳ್ಳಿ

ಅಮೆರಿಕದ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾದ ಅಧ್ಯಕ್ಷರಿಗೆ ಯಾವುದಾದರೊಂದು ಯುದ್ಧವನ್ನು ಪ್ರಾರಂಭ ಮಾಡದಿದ್ದರೆ ಊಟ-ನಿದ್ರೆ ಬರದೆಂದು ಕಾಣಿಸುತ್ತದೆ. ಜಾರ್ಜ್ ಬುಷ್ ಇರಾಖ್ ಮತ್ತು ಆಫ್ಘಾನಿಸ್ತಾನ ಯುದ್ಧಗಳನ್ನು ಪ್ರಾರಂಭ ಮಾಡಿದ್ದರೆ ಇದೀಗ ಡಾನಲ್ಡ್ ಟ್ರಂಪ್ ಇರಾನ್ ಯುದ್ಧವನ್ನು ಪ್ರಾರಂಭಿಸುವ ಹವಣಿಕೆಯಲ್ಲಿದ್ದಾರೆ. ಯುದ್ಧವನ್ನು ಶುರುಮಾಡುವುದೇನೋ ಸುಲಭವಿದ್ದೀತು. ಆದರೆ ಯುದ್ಧಗಳನ್ನು ಅಂತ್ಯಗೊಳಿಸುವುದು ಕಷ್ಟ. ಇರಾಖ್ ಯುದ್ಧವಿನ್ನೂ ಮುಗಿದಂತೆ ಕಾಣುತ್ತಿಲ್ಲ. ಇಸ್ಲಾಮಿಕ್ ಸ್ಟೇಟ್ ಮತ್ತು ಸಿರಿಯಾ ಕಲಹಗಳು ಇನ್ನೂ ಹೊಗೆಯಾಡುತ್ತಲೇ ಇವೆ. ಈಗಲೂ ತಾಲಿಬಾನ್ ಆಫ್ಘಾನಿಸ್ತಾನದ ಅರ್ಧದಷ್ಟನ್ನು ತನ್ನ ವಶದಲ್ಲಿಯೇ ಇರಿಸಿಕೊಂಡಿದೆ. ಲಿಬ್ಯಾದಲ್ಲಿ ಗಡಾಫಿಯನ್ನು […]

ಅಮೆರಿಕೆಯ ‘ಕೃಷಿಕರ ಮಾರುಕಟ್ಟೆ’

ಮಾಲತಿ ಪಟ್ಟಣಶೆಟ್ಟಿ

ಅಮೆರಿಕೆಯ ‘ಕೃಷಿಕರ ಮಾರುಕಟ್ಟೆ’
ಮಾಲತಿ ಪಟ್ಟಣಶೆಟ್ಟಿ

ಅಮೆರಿಕೆಯ ಫಾರ್ಮರ್ಸ್ ಮಾರ್ಕೆಟ್ಟಿನಂತೆ ನಮ್ಮ ರೈತರು ಸಂಘಟಣೆಗೊಂಡು ನೇರವಾಗಿ ತಮ್ಮ ಉತ್ಪನ್ನಗಳನ್ನು ಏಕೆ ಮಾರಬಾರದು? ಇವರಿಗೆ ದಳ್ಳಾಳಿಗಳ ಅಗತ್ಯವಾದರೂ ಏನು? ಕಳೆದ ಕೆಲವು ವರ್ಷಗಳಿಂದ ನನ್ನನ್ನು ಚಿಂತೆಗೀಡು ಮಾಡಿದ ವಿಷಯಗಳೆಂದರೆ ಕರ್ನಾಟಕದಲ್ಲಿಯ ರೈತರ ಆತ್ಮಹತ್ಯೆಗಳು, ಕಬ್ಬಿನ ಬೆಳೆಗಾರರ ಸಮಸ್ಯೆಗಳು, ರೈತರಿಗೆ ಸರಕಾರದಿಂದ ಸಿಗದ ಬೆಂಬಲ ಬೆಲೆ, ಸಾಲಮನ್ನಾ ವಿಷಯ, ರೈತರ ಪ್ರತಿಭಟನೆಗಳು, ಚಳವಳಿಗಳು ಮತ್ತು ರೈತರನ್ನು ಶೋಷಿಸುತ್ತಿರುವ ದಳ್ಳಾಳಿಗಳ ಕ್ರೌರ್ಯಗಳು. ನನ್ನ ಮಗ ಶ್ರೀಶೈಲನು ತಾನಿರುವ ಕ್ಯಾಲಿಫೋರ್ನಿಯಾದಲ್ಲಿಯ ಸ್ಯಾನಹೋಜೆಗೆ ನನ್ನನ್ನು ಕರೆದುಕೊಂಡುಹೋಗಿದ್ದ. ಅವನಿಗೆ ಸಮಯ ಸಿಕ್ಕಾಗಲೆಲ್ಲ ಭಾರತದ, ವಿಶೇಷವಾಗಿ […]

ವಿಶ್ವ ವಿದ್ಯಮಾನ

ವಿಶ್ವ ವಿದ್ಯಮಾನ

ಚೀನಾದ ಟೆಕ್ ಕಂಪನಿಗಳಿಗೆ ತಡೆಗೋಡೆ ನಿರ್ಮಿಸಿದ ಅಮೆರಿಕಾ ಅಮೆರಿಕದ ಒಳಗೆ ನುಸುಳಿ ಬರುವವರನ್ನು ತಡೆಯಲು ಗೋಡೆ ನಿರ್ಮಿಸುತ್ತೇನೆಂದು ಅಧಿಕಾರಕ್ಕೆ ಬಂದ ಡಾನಲ್ಡ್ ಟ್ರಂಪ್ ಇದೀಗ ಅಮೆರಿಕದಿಂದ ನುಸುಳಿ ಹೊರಗೆ ಹೋಗುತ್ತಿರುವ ತಂತ್ರಜ್ಞಾನವನ್ನು ತಡೆಯಲು ಕಾನೂನಿನ ಗೋಡೆ ನಿರ್ಮಿಸುತ್ತಿರುವಂತೆ ಕಾಣಿಸುತ್ತಿದೆ. ಚೀನಾದ ಕಂಪನಿ ‘ಹ್ವಾವೆ’ಯ ಮೇಲೆ ಹಲವಾರು ನಿಬಂಧನೆಗಳನ್ನು ಹಾಕುವುದರ ಜೊತೆಗೆ ಈ ಕಂಪನಿಯ ನಿರ್ದೇಶಕರ ಮೇಲೆ ತಂತ್ರಜ್ಞಾನ ಕಳ್ಳತನದ ಆರೋಪ ಹೊರಿಸಲಾಗಿದೆ. ‘ಹ್ವಾವೆ’ ಕಂಪನಿಯು ಯೂರೋಪಿನ ಮತ್ತು ಅಮೆರಿಕ ಮಿತ್ರರಾಷ್ಟ್ರಗಳ ಜೊತೆಯಲ್ಲಿ ಯಾವುದೇ ವಾಣಿಜ್ಯ-ತಾಂತ್ರಿಕ ಸಂಬಂಧ ಬೆಳೆಸಿಕೊಳ್ಳದಂತೆ […]

ಮಂಜಿನ ಟೋಪಿ ಹೊತ್ತ ಮೌಂಟ್ ಕೀನ್ಯಾ

ಡಾ.ಸುಕನ್ಯಾ ಸೂನಗಹಳ್ಳಿ

ಮಂಜಿನ ಟೋಪಿ ಹೊತ್ತ ಮೌಂಟ್ ಕೀನ್ಯಾ
ಡಾ.ಸುಕನ್ಯಾ ಸೂನಗಹಳ್ಳಿ

ಈ ಬೆಟ್ಟದ ಸುತ್ತಲಿನ ಪ್ರದೇಶ ಹೇಗಿರುತ್ತದೆ ಎಂದರೆ, ಯಾರೋ ಆಗ ತಾನೆ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ ಎನ್ನಿಸುತ್ತದೆ. ಬೆಳಗಿನ ಜಾವ ಸರಿಯಾಗಿ 6 ಘಂಟೆಗೆ ಸುಮಾರು ನಾಲ್ಕು ಕುಟುಂಬಗಳು ಒಂದೆಡೆ ಸೇರಿ ಕಾರನ್ನು ಹತ್ತಿದೆವು. ಕಾರು ಒಂದೇ ವೇಗದಲ್ಲಿ ಓಡುತ್ತಿತ್ತು. ಎಷ್ಟು ದೂರ ಸಾಗಿದರೂ ಬೆಟ್ಟಗುಡ್ಡಗಳ ಶ್ರೇಣಿಗಳು, ಮೋಡ ಕವಿದ ವಾತಾವರಣ, ಎಲ್ಲೆಲ್ಲೂ ಹಚ್ಚ ಹಸಿರು, ನಡುವೆ ಚಹಾ ಮತ್ತು ಕಾಫಿ ತೋಟಗಳು, ತುಂತುರು ಮಳೆ. ನಾವು ಪ್ರಯಾಣಿಸುತ್ತಿದ್ದುದು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ 3ಜಿ, 4ಜಿ ಮುಂತಾದ ಹೊಸ ತಲೆಮಾರುಗಳು ಬಂದಂತೆಲ್ಲ ಮೊಬೈಲ್ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿರುವುದನ್ನು ನಾವು ನೋಡಿದ್ದೇವೆ. ಇನ್ನೇನು ಬರಲಿರುವ 5ಜಿ ಹಿಂದಿನ ತಲೆಮಾರುಗಳಿಗಿಂತ ಹೆಚ್ಚಿನ ಬದಲಾವಣೆಗಳನ್ನು ತರಲಿದೆ ಎನ್ನಲಾಗಿದೆ. ಮೊಬೈಲ್ ಫೋನುಗಳಿಗೆ ಹೆಚ್ಚಿನ ವೇಗದ ಸಂಪರ್ಕವನ್ನು ನೀಡುವ ಜೊತೆಗೆ ಈ ತಂತ್ರಜ್ಞಾನ ವಸ್ತುಗಳ ಅಂತರಜಾಲದ (ಐಓಟಿ) ಮೂಲಕ ಅಂತರಜಾಲದ ಸಂಪರ್ಕಕ್ಕೆ ಬರುವ ಅಸಂಖ್ಯ ಸಣ್ಣ-ದೊಡ್ಡ ಸಾಧನಗಳಿಗೂ ಅತಿವೇಗದ, ಅಡಚಣೆಯಿಲ್ಲದ ಸಂಪರ್ಕ ಒದಗಿಸಲಿದೆ. ಈ ತಂತ್ರಜ್ಞಾನದ ಅನುಕೂಲಗಳು ಎಲ್ಲರಿಗೂ ಸಿಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೊಬೈಲ್ […]

ಗಿರೀಶ ಕಾರ್ನಾಡರ ಒಡನಾಟ

ಸುರೇಶ ಕುಲಕರ್ಣಿ

ಗಿರೀಶ ಕಾರ್ನಾಡರ ಒಡನಾಟ
ಸುರೇಶ ಕುಲಕರ್ಣಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ ಕಾರ್ನಾಡ ಮತ್ತು ಸಹಾಯಕ ನಿರ್ದೇಶಕ ಸುರೇಶ ಕುಲಕರ್ಣಿ ಅವರ ಒಡನಾಟ, ಬಾಂಧವ್ಯ ಬಲು ಅಪರೂಪದ್ದು. ದಶಕಗಳ ಕಾಲ ಕಾರ್ನಾಡರ ಸಹವಾಸದಲ್ಲಿ ಕಂಡುಂಡ ಘಟನಾವಳಿಗಳ ಸುರುಳಿಯನ್ನು ಸುರೇಶ ಅವರು ಇಲ್ಲಿ ಬಿಚ್ಚಿಟ್ಟಿದ್ದಾರೆ; ಕಾರ್ನಾಡರು ಹೀಗೂ ಇದ್ದರಾ ಎಂಬ ಉದ್ಗಾರ ಹೊರಡಿಸುವಷ್ಟು ಅಪರಿಚಿತ ಗುಣಸ್ವಭಾವಗಳನ್ನು ಅನಾವರಣಗೊಳಿಸಿದ್ದಾರೆ. ಹೊರಜಗತ್ತು ಭಾವಿಸಿದಂತೆ ಕಾರ್ನಾಡರು ಸಂಪ್ರದಾಯ ವಿರೋಧಿ ಆಗಿರಲಿಲ್ಲ; ದೈವಲೀಲೆ, ರಾಹುಕಾಲ ನಂಬುತ್ತಿದ್ದರು! ಯಾರು ಏನೇ ಹೇಳಲಿ ಕಾರ್ನಾಡರು ಏನೆಂಬುದು ನನಗೆ ಗೊತ್ತು. ಅವರು ನನಗೆ ಹಿರಿಯಣ್ಣ […]

ಸುಳ್ಳು ಸುದ್ದಿಗಳ ಬಗ್ಗೆ ಬೆಳಕು ಚೆಲ್ಲುವ ಇಂಡಿಯಾ ಮಿಸ್‍ಇನ್‍ಫಾರ್ಮಡ

ಪ್ರಸಾದ್ ನಾಯ್ಕ್

ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಗಣನೀಯವಾಗಿ ಏರಿರುವ ಹಿನ್ನೆಲೆಯಲ್ಲಿ ಈ ಕೃತಿಯು ಇಂಟರ್ನೆಟ್ ಆಗಮನದ ನಂತರದ ಭಾರತದ ರಾಜಕೀಯ ಮತ್ತು ಸಾಮಾಜಿಕ ಗತ್ಯಂತರಗಳನ್ನು ದಾಖಲಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ನನ್ನ ವಾಟ್ಸಾಪ್ ಠಣ್ಣೆಂದಿತ್ತು. ಯಾರೆಂದು ನೋಡಿದರೆ ಪರಿಚಿತರೊಬ್ಬರ ಸಂದೇಶ. ಸಂದೇಶವು ಸುಮಾರಾಗಿ ಹೀಗಿತ್ತು: “ಎಚ್ಚರೆಚ್ಚರ! ಚುಚ್ಚುಮದ್ದು ಕೊಡುತ್ತೇವೆಂದು ಸರಕಾರಿ ಆರೋಗ್ಯ ಕೇಂದ್ರಗಳ ಹೆಸರಿನಲ್ಲಿ ಕೆಲ ನಕಲಿ ಕಾರ್ಯಕರ್ತರು ಜಿಲ್ಲೆಯಾದ್ಯಂತ ಸುಳಿದಾಡುತ್ತಿದ್ದಾರೆ. ಇವರು ‘ಇಂತಿಪ್ಪ’ ಧರ್ಮದವರಾಗಿದ್ದು ‘ಇಂತಿಪ್ಪ’ ಧರ್ಮದವರಿಗೆ ಮಾತ್ರ ಚುಚ್ಚುಮದ್ದನ್ನು ಚುಚ್ಚಿ ಏಡ್ಸ್ […]

ಮೋದಿ 2.0 ಮುಂದಿರುವ ಆರ್ಥಿಕ ಸವಾಲುಗಳು

ಮೋಹನದಾಸ್

ಮೋದಿ 2.0 ಮುಂದಿರುವ ಆರ್ಥಿಕ ಸವಾಲುಗಳು
ಮೋಹನದಾಸ್

ಈ ಪುಸ್ತಕದಲ್ಲಿ ಇಲ್ಲದ ವಿಷಯಗಳು ಹಲವಿದೆ. ಆದರೆ ಇಲ್ಲಿ ಹೆಸರಿಸಿರುವ ಎಲ್ಲಾ ಸಮಸ್ಯೆಗಳು ಹಾಗೂ ಪರಿಹಾರಗಳು ನಮ್ಮ ಗಂಭೀರ ಚರ್ಚೆಗೆ ಗ್ರಾಸವಾಗಬೇಕಿದೆ. ದೇಶದ ಪ್ರಸಕ್ತ ಆರ್ಥಿಕ ಪರಿಸ್ಥಿತಿಯನ್ನು ನೋಡಿದ ಮೇಲೆ ದೇಶದ ಮುದಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ದೇಶದ ಚುನಾವಣೆ ಎದುರಿಸುವುದೇ ಸುಲಭವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅನ್ನಿಸಿರಬಹುದು. ದೇಶದ ಆಂತರಿಕ ಹಾಗೂ ಬಾಹ್ಯ ಸನ್ನಿವೇಶಗಳೆರಡೂ ಆರ್ಥಿಕ ಪ್ರಗತಿಗೆ ತಡೆಗಾಲು ಹಾಕುವ ಗಂಭೀರ ಸಮಸ್ಯೆಗಳಾಗಿರುವುದು ಮತ್ತಷ್ಟು ತಲೆಶೂಲೆಯ ಸಂಗತಿಯಾಗಿದೆ. ಯಾವುದೇ ರಾಜಕೀಯ ಒತ್ತಡ ಅಥವಾ ಯಾವುದೇ ರಾಜಕೀಯ […]

‘ಪರ್ಯಾಯ’ದ ತಾತ್ವಿಕ ಚೌಕಟ್ಟು

ಡಾ.ಮೇಟಿ ಮಲ್ಲಿಕಾರ್ಜುನ್

ಸಾಂಸ್ಕೃತಿಕ ರಾಜಕಾರಣದ ಪರ್ಯಾಯ ಸಾಧ್ಯತೆಗಳನ್ನು ಕಂಡರಿಸುವ ಬಗೆಗಳನ್ನು ರವಿ ಎಂ. ಸಿದ್ಲಿಪುರ ಅವರ ಈ ಪುಸ್ತಕದ ಬರಹಗಳಲ್ಲಿ ಕಾಣುತ್ತೇವೆ. ಸಮೂಹಗಳ ಬದುಕಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಲು ಎಂತಹ ಬರಹ ಬೇಕು? ಅಂತಹ ಬರಹ ಯಾಕೆ ಬೇಕು? ಆ ಬರಹ ಎದುರಿಸಬೇಕಾದ ತಾತ್ವಿಕ ಮತ್ತು ನೈತಿಕ ಸವಾಲುಗಳು ಎಂತಹವು? ಎಂಬಿತ್ಯಾದಿ ಪ್ರಶ್ನೆಗಳನ್ನು ಇವತ್ತು ಜರೂರಾಗಿ ಕೇಳಬೇಕಾಗಿದೆ. ಏಕೆಂದರೆ, ಆಧುನಿಕತೆ ಎನ್ನುವುದು ಕೇವಲ ಜ್ಞಾನಪರ್ವದ ಪ್ರತಿನಿಧಿಯಾಗಿ ಮಾತ್ರ ನೆಲೆಗೊಳ್ಳಲಿಲ್ಲ. ಶೋಷಣೆ-ಶೋಷಕ ಹಾಗೂ ವೈಜ್ಞಾನಿಕ-ಬಂಡವಾಳಶಾಹಿ ವಿನ್ಯಾಸಗಳನ್ನು ತನ್ನ ಒಡಲಲ್ಲಿರಿಸಿಕೊಂಡು ಇದು ಮುಂಚೂಣೆಗೆ ಬಂತು. […]

ಭಕ್ತಿಯೆಂಬ ಸಂಕೀರ್ಣತೆ

ಗೋವಿಂದರಾಜು ಎಂ.ಕಲ್ಲೂರು

ಭಕ್ತಿ ನಿರ್ಮಿಸಿದ ಹಿಂಸೆಯ ಜಗತ್ತನ್ನು, ಭಕ್ತಿಯೇ ಅಧಿಕಾರವಾಗಿ ಚಲಾಯಿಸಿದ ದಮನಕಾರಿ ನೀತಿಗಳನ್ನು ತಮ್ಮ ಅಪಾರವಾದ ಅಧ್ಯಯನ ಬಲದಿಂದ ಕಟ್ಟಿಕೊಟ್ಟಿರುವ ಅಪರೂಪದ ಕೃತಿ ಇದು. ಪ್ರಭುತ್ವ ಮತ್ತು ಹಿಂಸೆ ಒಂದಕ್ಕೊಂದು ಬಿಡಿಸಲಾರದಂತೆ ಬೆರೆತುಹೋಗಿವೆ. ಇವೆಲ್ಲವಕ್ಕೂ ಅಂತರ್ ಸಂಬಂಧ ಕಲ್ಪಿಸುವ ಮಾಧ್ಯಮವಾಗಿ ಇಂದಿಗೂ ಧರ್ಮ ಮಹತ್ವದ ಪಾತ್ರ ವಹಿಸಿದೆ. ಧರ್ಮಕ್ಕೂ ಪ್ರಭುತ್ವಕ್ಕೂ ಇರುವ ನೇರಾನೇರಾ ಸಂಬಂಧ ಅದರ ಅಧಿಕಾರದ ಕ್ರಿಯಾಚರಣೆಯ ಮೂಲಕ ನಮಗೆ ಸ್ಪಷ್ಟವಾಗುತ್ತದೆ. ಆದರೆ ಭಕ್ತಿ ಹಾಗಲ್ಲ. ಸಂಸ್ಕೃತಿ, ಧರ್ಮಗಳು ಭಿನ್ನಭಿನ್ನವಾಗಿದ್ದರೂ ಆ ವಿಭಿನ್ನ ಧರ್ಮಗಳ ಭಕ್ತಿ ಮತ್ತು […]

ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ ಸಾಂಸ್ಕೃತಿಕ ಅಧ್ಯಯನ

ಡಾ.ರಾಜಶೇಖರ ಡೊಂಬರಮತ್ತೂರ

ಪಿಎಚ್.ಡಿ ವಿಷಯ : ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ: ಸಾಂಸ್ಕೃತಿಕ ಅಧ್ಯಯನ ಸಂಶೋಧಕರು : ಡಾ.ರಾಜಶೇಖರ ಚಂ. ಡೊಂಬರಮತ್ತೂರ, ಜಾನಪದ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮಾರ್ಗದರ್ಶಕರು : ಪ್ರೊ.ಕೆ.ಆರ್.ದುರ್ಗಾದಾಸ್, ವಿಶ್ರಾಂತ ಪ್ರಾಧ್ಯಾಪಕರು, ಡಾ.ಆರ್.ಸಿ.ಎಚ್.ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಜಾನಪದ ಕ್ಷೇತ್ರದಲ್ಲಿ ಇತ್ತೀಚೆಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಜಾನಪದ ಕ್ಷೇತ್ರ ವಿಸ್ತಾರವೂ ವೆವಿಧ್ಯಮಯವೂ ಆಗಿರುವುದು. ಕಳೆದ ಶತಮಾನದಲ್ಲಿ ಆರಂಭವಾದ ಜಾನಪದ ಅಧ್ಯಯನ ಮೊದಲಿಗೆ ಅದರ ವಾಚಿಕ ರೂಪವನ್ನು ಮಾತ್ರ ಆಧರಿಸಿತ್ತು. ಬರಬರುತ್ತ […]

ಸಮಾಜಮುಖಿ ಪ್ರಕಾಶನದ ‘ಪ್ರಕಓ’ ಪುಸ್ತಕಮಾಲೆ

ಕನ್ನಡ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಾಮಾನ್ಯ ಕನ್ನಡಿಗರಿಗೆ ಉಪಯುಕ್ತವಾಗುವ ‘ರೀಡರ್’ ಮಾದರಿಯ ಪುಸ್ತಕಗಳ ಕೊರತೆಯಿದೆ. ಈ ಕೊರತೆಯನ್ನು ಪೂರೈಸಲು ಹಾಗೂ ‘ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ’ (ಪ್ರಕಓ) ಪುಸ್ತಕಗಳನ್ನು ಹೊರತರಲು ಸಮಾಜಮುಖಿ ಪ್ರಕಾಶನ ಬಯಸಿದೆ. ರೀಡರ್ ಎಂದರೇನು..?   ಯಾವುದಾದರೊಂದು ವಿಷಯದ ಬಗ್ಗೆ ಅಂದಿನವರೆಗೆ ಪ್ರಕಾಶಿತ ಪಠ್ಯಗಳ ಜ್ಞಾನಪ್ರಪಂಚವನ್ನು ಒಳಗೊಂಡು ಹಾಗೂ ಸಾಮಾನ್ಯವಾಗಿ ಅವಿವಾದಿತವಾದ ವಿಷಯವಸ್ತುಗಳೊಡನೆ ಸಮಗ್ರ ಚಿತ್ರಣ ನೀಡುವ ಹೊತ್ತಿಗೆಯನ್ನು ‘ರೀಡರ್’ ಎಂದು ವರ್ಗೀಕರಿಸಲಾಗಿದೆ. ಈ ರೀಡರ್‍ಗಳು ಸರಳ ಭಾಷೆಯಲ್ಲಿ ತನ್ನ ಆಯ್ಕೆಯ ವಿಷಯಗಳ […]

ಸಾಹಿತ್ಯ ಕೃತಿಯ ವಿಮರ್ಶೆಯಲ್ಲಿ ಸಾಹಿತಿಯ ಧೋರಣೆ ಪರಿಗಣಿಸಬೇಕೆ..?

ಸಮಾಜಮುಖಿ ಆಗಸ್ಟ್ ಸಂಚಿಕೆಯ ಮುಖ್ಯಚರ್ಚೆ: ನಾವು ಇದುವರೆಗೆ ಹೇಳಿದ್ದು ಏನೇ ಆದರೂ ಮಾಡಿದ್ದು ಮಾತ್ರ ಅದರ ವಿರುದ್ಧ ದಿಕ್ಕಿನಲ್ಲಿಯೇ ಇದೆ. ಕನ್ನಡ ಸಾಹಿತ್ಯ ವಿಮರ್ಶೆಯ ಸೋಗಲಾಡಿತನದಲ್ಲಿ ವಿಮರ್ಶೆ ಪ್ರಾಕಾರ ಸೊರಗಿದೆ. ತಮ್ಮನ್ನು ಹೀಯಾಳಿಸಿದರೆಂದು ಶೂದ್ರರೆಲ್ಲಾ ಅಡಿಗರ ಕಾವ್ಯವನ್ನು ಬಹಿಷ್ಕರಿಸಿದ್ದಾರೆ. ಪ್ರಗತಿಪರರಿಗೆ ಭೈರಪ್ಪನವರ ಕಾದಂಬರಿಗಳಲ್ಲಿ ಕೇವಲ ವೈದಿಕಶಾಹಿಯ ವಿಜೃಂಭಣೆ ಹಾಗೂ ಧಾರ್ಮಿಕ ಮತಾಂಧತೆಯೇ ಕಾಣುತ್ತದೆ. ಕುವೆಂಪು ಸಾಹಿತ್ಯವನ್ನು ಮುಕ್ತಮನಸ್ಸಿನಿಂದ ಬ್ರಾಹ್ಮಣರು ಒಪ್ಪಿದಂತೆ ಕಾಣುವುದಿಲ್ಲ. ಹೆದರಿಕೆಯಿಂದಲೋ ಅಥವಾ ಹಿಂಜರಿಕೆಯಿಂದಲೋ ದೇವನೂರರ ಬರಹಗಳನ್ನು ತೀಕ್ಷ್ಣ ವಿಮರ್ಶೆಗೆ ಒಳಪಡಿಸಿದಂತೆ ಕಾಣುವುದಿಲ್ಲ. ಕಾರ್ನಾಡರನ್ನಂತೂ ಸಾಹಿತಿಯೆಂದು […]

ಹೊಸ ಪುಸ್ತಕ

ಜೀವ ನದಿಗಳ ಸಾವಿನ ಕಥನ ಶಿವಾನಂದ ಕಳವೆ ಪುಟ: 160, ಬೆಲೆ: ರೂ.150 ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಕೊಪ್ಪಿಕರ್ ಬೀದಿ, ಹುಬ್ಬಳ್ಳಿ-580020 ದೂ: 0836-2367676 ಲೇಖಕ ಶಿವಾನಂದ ಕಳವೆ ಕಳೆದ ಎರಡು ದಶಕಗಳಿಂದ ಜಲ ಸಂರಕ್ಷಣೆಯ ಜನ ಜಾಗೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಲವಾರು ನದಿ ಕಣಿವೆಗಳು, ಹಳ್ಳ-ಕೊಳ್ಳಗಳನ್ನು ಸುತ್ತಾಡಿ ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ರಾಜ್ಯದ ನದಿಗಳ ಪರಿಸ್ಥಿತಿಯ ವಾಸ್ತವ ಲೋಕವನ್ನು ತೆರೆದಿಟ್ಟಿದ್ದಾರೆ. ನದಿಗಳ ಸಾವಿನ ಕಾರಣಗಳು ಮತ್ತು ಪರಿಹಾರದ ಮಾರ್ಗಗಳನ್ನು ಇಲ್ಲಿ ಸೂಚಿಸಿದ್ದಾರೆ. ಮೌನಗರ್ಭದ ಒಡಲು ಮಾಧವಿ […]

ಸಮುದಾಯಗಳ ಅಸ್ಮಿತೆಯ ಕಾವ್ಯ ಶ್ರೀ ಪಾರ್ಥಲಿಂಗ ಚರಿತಾಮೃತ

ಡಾ.ಜಗದೀಶ ಕೆರೆನಳ್ಳಿ

ಸಮುದಾಯಗಳ ಅಸ್ಮಿತೆಯ ಕಾವ್ಯ ಶ್ರೀ ಪಾರ್ಥಲಿಂಗ ಚರಿತಾಮೃತ
ಡಾ.ಜಗದೀಶ ಕೆರೆನಳ್ಳಿ

ಇಡೀ ಕಾವ್ಯ ಕಾಡು-ನಾಡು, ಬಡವ-ಬಲ್ಲಿದ, ವಿನಯ ಅಹಂಕಾರ, ಭಕ್ತಿ-ದಾಷ್ಟ್ರ್ಯ ಮುಂತಾದ ಹಲವಾರು ವೈರುಧ್ಯ ಮತ್ತು ಸಮರಸದ ಕಥನವನ್ನು ಒಳಗೊಂಡಿದೆ. ಜಾತಿಸಂಕರ ಮಾಡಿ ಜಾತ್ಯತೀತರನ್ನು ಅಪ್ಪಿಕೊಳ್ಳುವ, ಕತ್ತಲನ್ನು ಕಳೆಯುವ, ಬಾಳಿನಲ್ಲಿ ಬೆಳಕನ್ನು ಬೀರುವ, ದ್ವೇಷವನ್ನು ಕಳೆದು ಪ್ರೀತಿಯನು ಬೆಳೆಸುವ ಪಾರ್ಥಲಿಂಗ ಮಹಿಮಾ ಪುರುಷ ನಾಗಿ ಚಿತ್ರಿತನಾಗಿದ್ದಾನೆ. ಜ್ಞಾನ-ಭಕ್ತಿ ಎರಡನ್ನೂ ಆಶಯವಾಗುಳ್ಳ ಈ ಕಾವ್ಯ ಭೂತ, ವರ್ತಮಾನ ಹಾಗೂ ಭವಿಷ್ಯತ್ತಿನ ತ್ರಿಕಾಲ ಸೂತ್ರದ ಹೆಣಿಗೆಯಲ್ಲಿ ರೂಪುಗೊಂಡಿದೆ. ರಾಮಾಯಣ ಮತ್ತು ಮಹಾಭಾರತಗಳು ನಮ್ಮದೇಶದ ಪರಿಸರ ಮತ್ತು ಸಮುದಾಯಗಳಿಗೆ ಆನೇಕ ರೀತಿಯ ಸೃಜನಶೀಲ […]