ನನ್ನ ಕ್ಲಿಕ್

ರಾಮನಗರದ ಪಾಂಡವರಗುಡಿ ಬಯಲು ಬೆಟ್ಟಗಳ ನಡುವೆ ಕಾಣದ ಚಿತ್ರಗಳನ್ನು ಅರಸುತ್ತ ಅಲೆಯುವಾಗ ದೂರದಲ್ಲಿ ಒಂದು ಗುಂಪು ಕಂಡಿತು; ಮಹಿಳೆಯರು, ಮಕ್ಕಳು, ಹೊಲದ ಯಜಮಾನ ಎಲ್ಲರೂ ಹೊನ್ನೇರು ಪೂಜೆಗೆ ಅಣಿಯಾಗಿದ್ದರು.          

ತಂಬಾಕು ಪುರಾಣವು

ಪ್ರಕಾಶ ಪರ್ವತೀಕರ

 ತಂಬಾಕು ಪುರಾಣವು <p><sub> ಪ್ರಕಾಶ ಪರ್ವತೀಕರ </sub></p>

ಉಪ್ಪು ತಿಂದವ ನೀರು ಕುಡಿಯಲೇಬೇಕು, ಹಾಗೆಯೇ ತಂಬಾಕು ತಿನ್ನುವವ ಉಗುಳಲೇಬೇಕು. ತಂಬಾಕು ಸೇವನೆಯಿಂದ ದೇಹಕ್ಕೆ ಹಾನಿ, ಕ್ಯಾನ್ಸರ್ ರೋಗಕ್ಕೆ ಆಹ್ವಾನ. ಅದು ನಿಮ್ಮನ್ನು ಕೊಲ್ಲುತ್ತದೆ. ಹೀಗೆಂದು ನಮ್ಮ ಘನ ಸರಕಾರ ಪ್ರಸಾರ ಮಾಧ್ಯಮಗಳಿಂದ ಎಷ್ಟೊಂದು ಪ್ರಚಾರ ಮಾಡುತ್ತಿದೆ. ಅದಕ್ಕಾಗಿ ನೂರೆಂಟು ಕೋಟಿ ಖರ್ಚು ಮಾಡುತ್ತ್ತಿದೆ. ಅದೆಲ್ಲ ಸರಿ. ಆದರೆ ಅದೇ ವೇಳೆಗೆ ನಮ್ಮ ರಾಜ್ಯದ ಉತ್ತರ ಗಡಿಭಾಗದಲ್ಲಿ ತಂಬಾಕಿನ ಸಮೃಧ್ಧಫಸಲು ಹಾಗು ಇದನ್ನು ಬೆಳೆಯುವ ರೈತರು ಎಂಟೂ ಬೆರಳುಗಳಿಗೆ ಚಿನ್ನದ ಉಂಗುರ ಹಾಕಿಕೊಂಡು, ಬುಲ್ಲೆಟ್ ಮೋಟಾರು ಸೈಕಲ್ […]

ನನ್ನ ಸೃಜನಶೀಲತೆಯ ಸೆಲೆ

ಡಾ.ಎಸ್.ಬಿ.ಜೋಗುರ

 ನನ್ನ ಸೃಜನಶೀಲತೆಯ ಸೆಲೆ <p><sub> ಡಾ.ಎಸ್.ಬಿ.ಜೋಗುರ </sub></p>

ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯ ಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಈಗಿದೆ ಎನಿಸುತ್ತದೆ. ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ನನ್ನ ಬಾಲ್ಯದಲ್ಲಿ ಒಂದು ದೊಡ್ಡ ಹಳ್ಳಿಯಂತಿತ್ತು. ಇದು ಕೇವಲ ನನ್ನ ಪಾಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ತಾಣ ಮಾತ್ರವಾಗಿರದೇ ಆಗಾಗ ಶಾಲೆ ತಪ್ಪಿಸಿ ಅಂಡಲೆಯುವ ನೆಲವೂ ಆಗಿತ್ತು. ಮನೆಯಲ್ಲಿ ಅಪ್ಪ-ಅವ್ವ ಹೇಳಿಕೊಟ್ಟ ಮೌಲ್ಯಗಳಿಗಿಂತಲೂ, ಶಾಲೆಯಲ್ಲಿ ಮೇಷ್ಟರು ಹೇಳಿಕೊಟ್ಟದ್ದಕ್ಕಿಂತಲೂ ಅಗಾಧವಾದುದನ್ನು ನನಗೆ ಈ ಊರು ಕಲಿಸಿಕೊಟ್ಟಿದೆ. ಹಾಗೆಯೇ ಇದರ ಸಹವಾಸದಲ್ಲಿರುವ […]

ಮೇಘಸಂದೇಶ ವಾಹಕ ಪಾರಿವಾಳ

ಕೆ.ವಿ.ಪರಮೇಶ್

 ಮೇಘಸಂದೇಶ ವಾಹಕ ಪಾರಿವಾಳ <p><sub> ಕೆ.ವಿ.ಪರಮೇಶ್ </sub></p>

ಬಯಲು ಸೀಮೆಯ ಆಟ ಎಂದೇ ಹೆಸರಾಗಿರುವ ಈ ಪಾರಿವಾಳ ಪಂದ್ಯ ಈಗೀಗ ಎಲ್ಲೆಡೆಯೂ ಕಾಣಸಿಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಗಳಿಗೇನೂ ಕೊರತೆಯಿಲ್ಲ. ಕೆಲವು ಪುರಾತನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದರೆ ಮತ್ತೆ ಕೆಲವು ಸ್ವಯಂ ನಮ್ಮವರಿಂದಲೇ ಹುಟ್ಟಿಕೊಂಡ ಆಟಗಳು. ಅದರಲ್ಲೂ ಸಾಕು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಕ್ರೀಡೆಗಳು ಹೆಚ್ಚು. ಇವು ಅತ್ಯಂತ ಹೆಚ್ಚಿನ ಮನರಂಜನೆಯೊಂದಿಗೆ ಕಡಿಮೆ ಖರ್ಚಿನ ಆಟಗಳು ಎನ್ನುವುದು ವಿಶೇಷ. ನಮ್ಮಲ್ಲಿರುವ ಎತ್ತು, ಕುರಿ, ಕೋಳಿ, ದನಗಳು ಅಷ್ಟೇ ಏಕೆ? ಪಕ್ಷಿಗಳ ಮೇಲೆಯೂ ಪಂದ್ಯಾಟ ನಡೆಸುವ ಖಯಾಲಿ […]

ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್ ಕೊರಿಯಾ ಯುದ್ಧದ ನಿರ್ಣಾಯಕ ಘಟ್ಟ

ಎಂ.ಕೆ.ಆನಂದರಾಜೇ ಅರಸ್

 ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್ ಕೊರಿಯಾ ಯುದ್ಧದ ನಿರ್ಣಾಯಕ ಘಟ್ಟ <p><sub> ಎಂ.ಕೆ.ಆನಂದರಾಜೇ ಅರಸ್ </sub></p>

ಇತ್ತೀಚೆಗೆ ನೆಟ್‍ಫ್ಲಿಕ್ಸ್‍ನಲ್ಲಿ ನೋಡಿದ ‘ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್’ ಸಾಕ್ಷ್ಯಚಿತ್ರವೇ ಈ ಲೇಖನಕ್ಕೆ ಪ್ರೇರಣೆ. ಎಲ್ಲಾ ಯುದ್ಧಗಳು ಭೀಕರವೇ. ಆದರೆ ಕೊರಿಯಾ ಯುದ್ಧ ಸಂದರ್ಭದ ಈ ಹಂತ ಭೀಭತ್ಸವಾದದ್ದು; ಯು.ಎಸ್. ಮರೀನ್ ಪಡೆ ತನ್ನ ಇತಿಹಾಸದ ಪುಟಗಳಲ್ಲಿ ದಪ್ಪ ಅಕ್ಷರಗಳಲ್ಲಿ ದಾಖಲಿಸುವಂತಹದ್ದು. ಕಳೆದ ವರ್ಷ ನಾವು ಮಾಧ್ಯಮಗಳಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಕೈಮಿಲಾಯಿಸಿ ತಮ್ಮೆರಡೂ ದೇಶಗಳ ನಡುವಿನ ಶಾಂತಿಗೆ ಮುನ್ನುಡಿ ಬರೆದಿರುವುದನ್ನು ನೋಡಿರುತ್ತೇವೆ ಈ […]

ಬಂದೇಬುಡ್ತು ಸುನಾವಣಾ ಫಲಿತಾಂಸ

ಪ.ರಾಮಕೃಷ್ಣ ಶಾಸ್ತ್ರಿ

ಅಂತೂ ಫಲಿತಾಂಶ ಬಂದಿದೆ. ಕಳ್ಳರು, ಸುಳ್ಳರು, ಕ್ರಿಮಿನಲ್ ಪರಂಪರೆಯವರು, ಭ್ರಷ್ಟರು, ನೀಚರು ಬೇರೆಬೇರೆ ಮುಖವಾಡ ಹಾಕಿಕೊಂಡು ಗೆದ್ದು ಬಂದಿದ್ದಾರೆ.  ತೆಪರೇಸಿ ಎದೆ ಬಡ್ಕಂಡ್ ಅಳುತ್ತಿದ್ದ: “ಇಂಗೂ ಆಗಿಬುಡ್ತಾ ಸುನಾವಣಾ ಫಲಿತಾಂಸ? ಏಟೊಂದು ಕೆಲ್ಸಾ ಮಾಡಿದೀವಿ ನಾವು. ಆದ್ರೂ ನಮ್ಮಣ್ಣ ಗೆಲ್ಲಲಿಲ್ವಲ್ಲಲ್ಲೋ. ಅವ್ರಂಥ ಮಾನವೀಯತೆ ಇರೋ ಜನ ಇನ್ನೆಲ್ಲಾದ್ರೂ ಬರ್ತಾರಾ? ಎಷ್ಟು ಸಾರಾಯಿ ಕೊಡಿಸ್ತಿದ್ರು, ಬಾಡೂಟ ಆಕಿಸ್ತೀದ್ರು. ಆಪಾಟಿ ಹೋಮನೇಮ ಮಾಡ್ಸಿದ್ರು. ಕೊಳಕುಮಠದ ಸೋಮಿಗೋಲು ಕಾಳ ಜ್ಞಾನದ ಬುಕ್ಕು ತೆಗ್ದು, `ಹೋರಿಗಳೆರಡು ಹೋರೆ ಕೊಂಬು ಮುರ್ಕಂಡು ನೆತ್ರ ಸುರ್ಕಂಡ್ […]

ವಿಷಾದದ ದಾರಿಯೊಳಗೆ!

ವಿಷಾದದ ದಾರಿಯೊಳಗೆ!

  ಇಣುಕಿ ನೋಡಿದೆ ಚದುರಿ ಹೋಗಿತ್ತು ನದಿಯ- ಅಲೆಗಳಲಿ ನನ್ನದೆ ಬಿಂಬ ಇರಲಿ ಬಿಡು ಇನ್ನೊಮ್ಮೆ ನೋಡಿಯೆ ಬಿಡುವ ಎಂದು- ಮತ್ತೊಮ್ಮೆ ಇಣುಕಿದೆ ಮತ್ತೆ ಬಿಂಬ ಚದುರಿದೆ. ತಲೆ ಕೆರೆದೆ ಹೊಳೆಯಲಿಲ್ಲ, ಕಣ್ಣರಳಿಸಿದೆ ಕಾಣಿಸಲಿಲ್ಲ! ಎದೆ ಭಾರದಲ್ಲಿ ಹೊರಳಿದೆ! ನೆತ್ತಿಯ ಮೇಲೆ ನೇಸರನಿದ್ದ ಕಾಲ ಬುಡದಲ್ಲಿ ನೆರೆಳಿತ್ತು. ನನ್ನದೆ ನೆರೆಳು ಒದೆಯುತ್ತಾ ತುಳಿಯುತ್ತಾ ಹೊರಟೆ- ಜನ ದಿನ ನಡೆದಾಡುವ ದಾರಿಯೊಳಕ್ಕೆ. ವಾರದ ಹಿಂದೆಯೆ ಹಳಸಿದ ಅನ್ನ ಸಾರಿನ ವಾಸನೆ ಮೂಗಿಗೆ ಅಡರಿತು ವಾಕರಿಕೆ ಬಂತು,ಆದರೆ ವಾಂತಿಯಾಗಲಿಲ್ಲ. ತಡೆಯಲಾಗಲಿಲ್ಲ […]