ಅಬ್ಬಾ… ಮರೆಯಲಾಗದ ಆ ದಿನಗಳು!

ಡಾ.ಜಾಜಿ ದೇವೇಂದ್ರಪ್ಪ

-ಜಿ.ಕೆ.ಕಾಡಪ್ಪ (85ವರ್ಷ), ಹಿರೇಹೆಗಡೆಹಾಳು, ಬಳ್ಳಾರಿ ಜಿಲ್ಲೆ. ಆ ಕಾಲದಲ್ಲಿ ಭಯಾನಕ ರೋಗರುಜಿನಗಳು ಬರುತ್ತಿದ್ದವು. ಮನೆಯಲ್ಲಿ ಮಲಗಿದಾಗ ಜಂತೆಯಿಂದ ಇಲಿಗಳು ಸತ್ತುಸತ್ತು ಬೀಳುತ್ತಿದ್ದವು. ಆ ಇಲಿಗಳ ಕಳೇಬರ ಹಚ್ಚಹಸರೇರಿರುತ್ತಿತ್ತು. ಇದೇ ರೋಗದ ತೀವ್ರತೆಯೆಂದು ಮನೆ-ಮಾರು ಬಿಟ್ಟು ಎಲ್ಲರೂ ಊರಿಂದ ತುಂಬ ದೂರ ಹೋಗಿ ವಾಸಮಾಡುತ್ತಿದ್ದರು. ಹೀಗೆ ಒಮ್ಮೆ ಕಾಲರಾ ಬಂತು. ಊರಿಗೆಊರೇ ವಾಂತಿಬೇಧಿಯಿಂದ ನರಳುತ್ತಿತ್ತು. ಆಗ ದವಸಧಾನ್ಯ ಎಲ್ಲ ಕಟ್ಟಿಕೊಂಡು ಜೊತೆಗೆ ಬೀಸುವಕಲ್ಲೂ ಹೊತ್ತುಕೊಂಡು ನೀರು ಇದ್ದ ಕಡೆ ಅಡವಿಯಲ್ಲಿ ಠಾಣೆ ಹೂಡಿಕೊಂಡು ಇರುತ್ತಿದ್ದೆವು. ವಾಂತಿ ಬೇಧಿಯಿಂದ ನರಳುತ್ತಿದ್ದವರನ್ನು […]

ಅಬ್ಬಾ… ಮರೆಯಲಾಗದ ಆ ದಿನಗಳು!

ಕೆ.ಶಿವು ಲಕ್ಕಣ್ಣವರ, ಹಾವೇರಿ.

ಮಾದರ ಮರಿಯಪ್ಪ ಈತನ ಹೆಸರು ಮಾದರ ಮರಿಯಪ್ಪ; ನಮ್ಮ ಮನೆಯ ಒಕ್ಕಲು ಮಾದ. ಈಗ ಸರಿಸುಮಾರಾಗಿ 89 ವರ್ಷ ವಯಸ್ಸಾಗಿರಬಹುದು. ಆತನನ್ನು ಮಾತನಾಡಿಸಿದಾಗ… ಅಯ್ಯೋ ಮಾರಾಯ ಆಗಿನ ಪಡಿಪಾಟಲೇನು ಕೇಳುತ್ತೀಯಾ. ಆಗ ಒಂದೂ ದಾವಾಖಾನೆ ಇರಲಿಲ್ಲ. ನಮ್ಮೂರ ಪಂಡಿತರು ಗಿಡಮೂಲಿಕೆಗಳಿಂದ ತಯಾರಿಸಿದ ಗಾವುಟಿ ಔಷಧವೇ ನಮಗೆ ಗತಿಯಾಗಿತ್ತು. ಈ ಔಷಧದಿಂದ ರೋಗ ಗುಣವಾದರೆ ಗುಣ, ಇಲ್ಲದಿದ್ದರೆ ಇಲ್ಲ. ಅಂತೂ ಅದ್ಹೇಗೋ ಆ ಕಾಲದಲ್ಲಿ ಸಾಕಷ್ಟು ರೋಗ ರುಜಿನಗಳನ್ನು ಮೆಟ್ಟಿ ಬದುಕುಳಿದೆವು. ಇಂತಹ ಸಂದರ್ಭದಲ್ಲಿ ಊರಿಗೆ ಪ್ಲೇಗ್ ಬಂದಿತು […]

ಅಬ್ಬಾ… ಮರೆಯಲಾಗದ ಆ ದಿನಗಳು!

-ಮಾಲತಿ ಪಟ್ಟಣಶೆಟ್ಟಿ, ಧಾರವಾಡ.

ಅಜ್ಜಿ ಹೇಳಿದ ಪ್ಲೇಗಿನ ಕತೆ ನನ್ನ ಭಾಗ್ಯದಲ್ಲೊಬ್ಬ ಅಜ್ಜಿ ಇದ್ದಳು. ಈ ಅಜ್ಜಿಯು ನನ್ನ ಅಜ್ಜಿಯ ತಂಗಿ. ನನ್ನ ತಾಯಿಯು ಬೇಗನೆ ತೀರಿಕೊಂಡಾಗ ಹಾಲೂಡಿದವಳು ಇದೇ ನನ್ನ ಅಜ್ಜಿ, ಇವಳನ್ನು ನಾನು ಯಾವಾಗಲು ‘ಅವ್ವ’ ಎಂದು ಕರೆದದ್ದು. ಆಕೆ ತನ್ನ ಬಾಳ ಭಗವದ್ಗೀತೆಯ ನೂರಾರು ಕತೆಗಳನ್ನು ಪ್ರತಿ ರಾತ್ರಿ ಕಂದೀಲಿನ ಬೆಳಕಿನಲ್ಲಿ ಹೇಳುತ್ತಿದ್ದಾಗ ನಾನು ಅವಳ ಹಚ್ಚಡದಲ್ಲಿ ಬೆಚ್ಚಗೆ ಮಲಗಿರುತ್ತಿದ್ದೆ ಅವಳ ಆ ಕತೆಗಳನ್ನು ಇಂದಿಗೂ ಪ್ರೀತಿಯಿಂದ ನೆನೆಯುತ್ತೇನೆ.   ‘20ನೇ ಶತಮಾನದ ಮೊದಲ ದಶಕದ ಭಾರತದಲ್ಲಿ ಪ್ಲೇಗಿನ […]

ಪ್ಲೇಗ್ ನಿರ್ವಹಣೆ ಕುರಿತ ಸರ್ಕಾರದ ಅಧಿಕೃತ ದಾಖಲೆ

ಸರ್ಕಾರದ ಅಧಿಕೃತ ದಾಖಲೆ

ಭಾರತವನ್ನು ಕಾಡಿದ ಪ್ರಮುಖ ಸಾಂಕ್ರಾಮಿಕ ರೋಗಗಳಲ್ಲಿ ಪ್ಲೇಗ್ ಪ್ರಮುಖವಾದುದು. 1916-18ರ ಅವಧಿಯಲ್ಲಿ ಕರ್ನಾಟಕವೂ ಸೇರಿದಂತೆ (ಆಗಿನ ಮೈಸೂರು ಸಂಸ್ಥಾನ) ಇಡೀ ಭಾರತ ಪ್ಲೇಗ್‌ನಿಂದಾಗಿ ತತ್ತರಿಸಿಹೋಗಿತ್ತು. ಬೆಂಗಳೂರು, ಮೈಸೂರು, ತುಮಕೂರು ಮುಂತಾದ ಜಿಲ್ಲೆಗಳು ಅಪಾರ ನಷ್ಟವನ್ನು ಅನುಭವಿಸಿದವು. ಆ ಸಂದರ್ಭದ ಪ್ಲೇಗ್ ಕುರಿತ ಕುತೂಹಲಕರ ಮಾಹಿತಿಯನ್ನು ಸರ್ಕಾರದ ಅಧಿಕೃತ ಕಣಜದಿಂದ ಹೆಕ್ಕಿ ನಿಮ್ಮ ಓದಿಗೆ ಸಾದರಪಡಿಸಿದ್ದೇವೆ. ಪ್ಲೇಗ್ ನಿರ್ವಹಣೆ (1916-17) ಪ್ರಸ್ತುತ ವರ್ಷದಲ್ಲಿ ಪ್ಲೇಗ್‌ನಿಂದ ದಾಖಲಾದ ದಾಳಿ ಮತ್ತು ಸಾವುಗಳು 16,552 ಮತ್ತು 11,755 ರಷ್ಟಿದ್ದು, ಹಿಂದಿನ ವರ್ಷದಲ್ಲಿ […]

ಸಮಕಾಲೀನ ಸಾಹಿತಿಗಳೂ ಸಾಂಕ್ರಾಮಿಕ ವೈರಾಣುವೂ

-ಡಾ. ನಾ. ದಾಮೋದರ ಶೆಟ್ಟಿ

ಸಮಕಾಲೀನ ಸಾಹಿತಿಗಳೂ ಸಾಂಕ್ರಾಮಿಕ ವೈರಾಣುವೂ
-ಡಾ. ನಾ. ದಾಮೋದರ ಶೆಟ್ಟಿ

ವಿಜ್ಞಾನಿಗಳು ಪ್ರಸ್ತುತ ಪಿಡುಗಿಗೆ ಲಸಿಕೆ ಮತ್ತು ಔಷಧಿ ಕಂಡುಹಿಡಿಯುವ ಪ್ರಯತ್ನದಲ್ಲಿ ತಲ್ಲೀನರಾದರು. ಇವನ್ನೆಲ್ಲ ನೋಡಿಕಂಡ ಸಾಹಿತಿಗಳು ಅವುಗಳ ಭಯಾನಕತೆಯನ್ನು, ಪರಿಣಾಮವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ಮುಂದಾಗಿದ್ದಾರೆ. ಪ್ರಕೃತಿಯ ಅನೇಕ ವೈಚಿತ್ರ್ಯಗಳಲ್ಲಿ ಸಾಂಕ್ರಾಮಿಕ ರೋಗಗಳೂ ಸ್ಥಾನ ಗಳಿಸಿವೆ. ಕೆಲವು ಸಾಂಕ್ರಾಮಿಕಗಳು ಚೈತ್ರಕ್ಕೊಂದು, ವೈಶಾಖಕ್ಕೊಂದು ಎಂಬಂತೆ ಕಾಲಗತಿಗನುಗುಣವಾಗಿ ಬಂದು ಉದ್ದೀಪನಗೊಂಡು, ಬೆದರಿಕೆ ಹಾಕಿ ಅಥವಾ ತುಳಿದು ಹಾಕಿ ಋತುಪಲ್ಲಟವಾಗುತ್ತಲೇ ಮರೆಯಾಗುತ್ತವೆ. ಮತ್ತೆ ಕೆಲವು, ಅವುಗಳಗಿಷ್ಟ ಬಂದಾಗ ಎದ್ದು ಬಂದು ಹಾನಿಮಾಡಿ, ಮರೆಯಾಗಿ ಒಂದಷ್ಟು ಕಾಲದ ಬಳಿಕ ಮತ್ತೆ ದಾಳಿಯಿಡುತ್ತವೆ. ಇನ್ನು ಕೆಲವು […]

ಇಲ್ಲಿ ಜಾತಿ ಧರ್ಮಗಳೇ ಸಾಂಕ್ರಾಮಿಕ ರೋಗಗಳು!

-ಮೇಟಿ ಮಲ್ಲಿಕಾರ್ಜುನ

ಇಲ್ಲಿ ಜಾತಿ ಧರ್ಮಗಳೇ  ಸಾಂಕ್ರಾಮಿಕ ರೋಗಗಳು!
-ಮೇಟಿ ಮಲ್ಲಿಕಾರ್ಜುನ

ಸಂಸ್ಕಾರ ಕಾದಂಬರಿಯಲ್ಲಿ ಬ್ರಾಹ್ಮಣ ಸಂಪ್ರದಾಯಗಳನ್ನು ಒರೆಗೆ ಹಚ್ಚುವ ಉದ್ದೇಶವೇ ಪ್ರಮುಖವಾಗುತ್ತದೆ. ಕೊಳೆತ ಶವದ ದುರ್ನಾತ, ಸತ್ತ ಇಲಿಗಳ ಮೂಲಕ ಹಬ್ಬುವ ಪ್ಲೇಗ್ ರೋಗ, ಅಗ್ರಹಾರದ ಮನೆಗಳ ಮೇಲೆ ಬಂದು ಕೂರುವ ರಣಹದ್ದುಗಳು, ಜಾಗಟಿಗಳನ್ನು ಬಾರಿಸಿ ಹದ್ದುಗಳನ್ನು ಓಡಿಸುವ ಬ್ರಾಹ್ಮಣರು ಮೊದಲಾದ ನಿರೂಪಣೆಗಳು ಕೇವಲ ಪ್ರಾಸಂಗಿಕವಾಗಿವೆ. ಆದರೆ ಧರ್ಮದ ಪ್ರಶ್ನೆ ಬಹುಮುಖ್ಯವಾಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನೊಮ್ಮೆ ತಿರಿವಿದರೆ ಯಾರಿಗಾದರೂ ಕನಿಷ್ಠಮಟ್ಟದ ಅಂದಾಜು ಬರುತ್ತದೆ. ಅದೇನೆಂದರೆ ಕನ್ನಡ ಸಾಹಿತ್ಯ ಇದುವರೆಗೂ ನಿರ್ವಹಿಸಿಕೊಂಡು ಬಂದ ವಸ್ತುವಿಷಯ ಏನೆಂಬುದು. ಸಾಹಿತ್ಯದ ಪಠ್ಯಗಳನ್ನು ಓದುವ […]

ಸೋಂಕುರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ..?

ನಮ್ಮ ದೈನಂದಿನ ಆಗುಹೋಗುಗಳ ಭರಾಟೆಯನ್ನು ಸಂಪೂರ್ಣವಾಗಿ ಕದಡಿ ವ್ಯಾವಹಾರಿಕ ಸಮಾಜದ ಮೂಲಸ್ತಂಭಗಳನ್ನೇ ಅಲುಗಾಡಿಸಿರುವ ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ಮೂರು ತಿಂಗಳುಗಳಲ್ಲಿ ನಮ್ಮ ಸಂವಹನದ ಗುಣಲಕ್ಷಣಗಳನ್ನೇ ಬದಲಾಯಿಸಿದೆ. ಆತ್ಮೀಯವಾಗಿ ಕೈಕುಲುಕಿ, ಪ್ರೀತಿ ಹೆಚ್ಚಾದರೆ ತಬ್ಬಿಕೊಂಡು, ಶಾಲೆ ಕಾಲೇಜು ಕಛೇರಿ ಸಭೆ ಸಮಾರಂಭಗಳಲ್ಲಿ ನಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮುಕ್ತ ಪರಿಸರದ ಬದಲಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ಆನ್‌ಲೈನ್ ಸಂವಹನ ಮಾಡುವ ಅನಿವಾರ್ಯತೆ ಎದುರಾಗಿದೆ. ಹಲವಾರು ರೀತಿಯಲ್ಲಿ ನಮ್ಮ ಚಟುವಟಿಕೆಗಳ ಸಾಧನವಾದ ಈ ಆನ್‌ಲೈನ್ ಕ್ರಾಂತಿ ವರ್ಕ್ […]

ಕೊರೋನಾ ವೈರಾಣುವಿನಿಂದಾಗಿ ನ್ಯಾಯಯುತ ಸಮಾಜ ಸಾಧ್ಯವಾಗಬಹುದಾ?

ಅನುವಾದ: ಟಿ.ಎಸ್.ವೇಣುಗೋಪಾಲ್

ಕೊರೋನಾ ವೈರಾಣುವಿನಿಂದಾಗಿ  ನ್ಯಾಯಯುತ ಸಮಾಜ ಸಾಧ್ಯವಾಗಬಹುದಾ?
ಅನುವಾದ: ಟಿ.ಎಸ್.ವೇಣುಗೋಪಾಲ್

ಥಾಮಸ್ ಪಿಕೆಟ್ಟಿ ಫ್ರಾನ್ಸಿನ ಅರ್ಥಶಾಸ್ತ್ರಜ್ಞ. ಅವರ ಮೊದಲ ಪುಸ್ತಕ ‘ಕ್ಯಾಪಿಟಲ್’ ದೊಡ್ಡ ಸಂಚಲನವನ್ನು ಉಂಟುಮಾಡಿತ್ತು. ಜಗತ್ತಿನಾದ್ಯಂತ ಅವರ ವಾದದ ಸಮರ್ಥಕರ ದಂಡೇ ಇದೆ. ಈಗ ಅವರ ಸಾವಿರ ಪುಟಗಳ ‘ಕ್ಯಾಪಿಟಲ್ ಅಂಡ್ ಐಡಿಯಾಲಜಿ’ ಪುಸ್ತಕ ಬಿಡುಗಡೆಯಾಗಿದೆ. ಅಸಮಾನತೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿರುವ ಅವರು ಈ ಪುಸ್ತಕದಲ್ಲಿ ಒಂದು ಸಾವಿರ ವರ್ಷಗಳ ಅಸಮಾನತೆಯ ಇತಿಹಾಸವನ್ನು ದಾಖಲು ಮಾಡಲು ಪ್ರಯತ್ನಿಸಿದ್ದಾರೆ. ದ ಗಾರ್ಡಿಯನ್ ಪತ್ರಿಕೆಗೆ ನೀಡಿರುವ ಈ ಸಂದರ್ಶನದಲ್ಲಿ ಕೊರೋನಾ ಪಿಡುಗು ನ್ಯಾಯಯುತವಾದ ಹೆಚ್ಚು ಸಮಾನವಾದ ಒಂದು ಸಮಾಜದ […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಭಾರತ-ನೇಪಾಳ ಮಧ್ಯೆ ‘ಕಾಲಾಪಾನಿ’ ಬಿಕ್ಕಟ್ಟು 1950ರ ಸಮಯದಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಲಡಾಖ್‌ನ ಗಡಿ ಪ್ರದೇಶದ ಬಗ್ಗೆ ‘ಹುಲ್ಲುಕಡ್ಡಿಯೂ ಬೆಳೆಯದ ಪ್ರದೇಶ’ವೆಂದು ಬಣ್ಣನೆ ಮಾಡಿದ್ದರು. ಈ ವಿವರಣೆಯು ಅಂದಿನ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ಚರ್ಚೆಯಲ್ಲಿ ಭಾರಿ ವಿವಾದಕ್ಕೆ ಒಳಗಾಗಿತ್ತು. ಇದೀಗ ಅದೇ ತೆರನಾದ ‘ಹುಲ್ಲುಕಡ್ಡಿಯೊಂದು ಬೆಳೆಯದ’ ಕಾಲಾಪಾನಿ ಪ್ರದೇಶವೊಂದು ಭಾರತ ನೇಪಾಳ ಮಧ್ಯೆ ಬಿಕ್ಕಟ್ಟು ತಂದಿಟ್ಟಿದೆ. ಈ ಕಾಲಾಪಾನಿ ಪ್ರದೇಶ ಉತ್ತರಾಖಂಡದ ಉತ್ತರ-ಪೂರ್ವದಲ್ಲಿರುವ ಪಿತ್ತೋರ್‌ಗಢ್ ಜಿಲ್ಲೆಯಲ್ಲಿ ಟಿಬೆಟ್ ಹಾಗೂ ನೇಪಾಳಗಳಿಗೆ ಹೊಂದಿಕೊಂಡಂತೆ ಇದೆ […]

ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಕೇರಳದ ಕೊರೊನಾ ಸಂಹಾರಿ!

ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಕೇರಳದ ಕೊರೊನಾ ಸಂಹಾರಿ!

35 ದಶಲಕ್ಷ ಜನಸಂಖ್ಯೆಯನ್ನು ಹೊಂದಿದ ಒಂದು ರಾಜ್ಯ ಕೊರೊನಾ ವೈರಾಣುವಿಗೆ ಕೇವಲ ನಾಲ್ಕು ಜೀವಗಳನ್ನು ಕಳೆದುಕೊಂಡಿದೆ. ಈ ಪವಾಡಕ್ಕೆ ಕಾರಣೀಭೂತರೆಂದೇ ಕೆ.ಕೆ.ಶೈಲಜಾ ಅವರು ಪ್ರಶಂಸೆಗೊಳಪಟ್ಟಿದ್ದಾರೆ. ಈ ಮೊದಲು ಶಿಕ್ಷಕಿಯಾಗಿ ಕೆಲಸ ಮಾಡಿದ ಶೈಲಜಾ, ಒಬ್ಬ ಮಂತ್ರಿಯಾಗಿ ಇದನ್ನು ಹೇಗೆ ಸಾಧಿಸಿದರೆನ್ನುವ ಕತೆ ಇಲ್ಲಿದೆ. ಜನವರಿ 20ರಂದು ವೈದ್ಯಕೀಯ ತರಬೇತಿ ಹೊಂದಿದ ತಮ್ಮ ಸಹಾಯಕ ಅಧಿಕಾರಿಗಳಲ್ಲೊಬ್ಬರಿಗೆ ಕೆ.ಕೆ.ಶೈಲಜಾ ಅವರು ದೂರವಾಣಿ ಕರೆ ಮಾಡಿದರು. ಅಪಾಯಕಾರಿ ಹೊಸ ವೈರಾಣುವೊಂದು ಚೀನಾ ದೇಶದಲ್ಲಿ ಹರಡುತ್ತಿರುವ ಬಗ್ಗೆ ಆನ್‌ಲೈನ್‌ನಲ್ಲಿ ಓದಿ ಅವರು ತಿಳಿದುಕೊಂಡಿದ್ದರು. […]

ಬಳಕೆದಾರ, ಬಂಡವಾಳಗಾರರ ಸಂಬಂಧ ಬುಡಮೇಲು ಆಗಲಿದೆಯೇ…?

-ಪಿಲಿಪ್ ಕೋಟ್ಲರ್

ಬಳಕೆದಾರ, ಬಂಡವಾಳಗಾರರ ಸಂಬಂಧ ಬುಡಮೇಲು ಆಗಲಿದೆಯೇ…?
-ಪಿಲಿಪ್ ಕೋಟ್ಲರ್

ಪಿಲಿಪ್ ಕೋಟ್ಲರ್ ಅವರನ್ನು ವಿಶ್ವಾದ್ಯಂತ ಆಧುನಿಕ ಮಾರುಕಟ್ಟೆ ವ್ಯವಸ್ಥೆಯ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ಜಗತ್ತಿನ ಬಹುಮುಖ್ಯ ಮಾರುಕಟ್ಟೆ ತಂತ್ರಜ್ಞಾನದ ಮಹಾನ್ ಪರಿಣತ ಎಂಬ ಮನ್ನಣೆ ಗಳಿಸಿಕೊಂಡಿದ್ದಾರೆ. ಅಮೆರಿಕನ್ ಮಾರ್ಕೆಟಿಂಗ್ ಅಸೋಸಿಯೇಶನ್ ಇವನನ್ನು ‘ಮಾರುಕಟ್ಟೆ ಚಿಂತನೆಯ ನಾಯಕ’ ಎಂದು ಮತದಾನದ ಮೂಲ ಆಯ್ಕೆ ಮಾಡಿದೆ ಮತ್ತು ‘ಹ್ಯಾಂಡ್ ಬುಕ್ ಆಫ್ ಮೇನೇಜ್‌ಮೆಂಟ್ ಥಿಂಕಿಂಗ್’ ಕೃತಿಯಲ್ಲಿ ಇವನನ್ನು ‘ಆಧುನಿಕ ಮಾರ್ಕೆಟ್‌ಂಗ್ ನಿರ್ವಹಣೆಯ ಸಂಸ್ಥಾಪಕ’ ಎಂದು ಉಲ್ಲೇಖಿಸಿದೆ. ಕೋವಿಡ್ 19 ಬಗ್ಗೆ ಸಾರಸೋಟ ಇನ್‌ಸ್ಟಿಟ್ಯೂಟ್ 04.06.2020ರಂದು ನಡೆಸಿದ ಸರಣಿ ವಿಚಾರ […]

ಕೆಂಪುಸಾವಿನ ಮುಖವಾಡನೃತ್ಯ

ಅನುವಾದ: ಚನ್ನಪ್ಪ ಕಟ್ಟಿ

ಕೆಂಪುಸಾವಿನ ಮುಖವಾಡನೃತ್ಯ
ಅನುವಾದ: ಚನ್ನಪ್ಪ ಕಟ್ಟಿ

ಎಡ್ಗರ್ ಎಲನ್ ಪೋ ಅಮೆರಿಕದ ಪ್ರಸಿದ್ಧ ಕವಿ, ಕತೆಗಾರ, ವಿಮರ್ಶಕ ಹಾಗೂ ಪತ್ರಿಕಾ ಸಂಪಾದಕ. ಈತ ಅಮೆರಿಕದ ಪ್ರಾರಂಭಿಕ ಹಂತದ ಸಣ್ಣ ಕತೆಗಾರರಲ್ಲಿ ಒಬ್ಬ ಮಹತ್ವದ ಲೇಖಕ. ಪತ್ತೇದಾರಿ ಕತೆಗಳ ಸಾಹಿತ್ಯ ಪ್ರಕಾರವನ್ನು ಪ್ರಾರಂಭಿಸಿದವನು ಎಂದು ಪ್ರಸಿದ್ಧನಾಗಿದ್ದಾನೆ. ಎಡ್ಗರ ಎಲನ್ ಪೋ ಬರೆದ ನಿಗೂಢ ಹಾಗೂ ಘೋರ ಕಲ್ಪನೆಯ ಕತೆಗಳು ಬಹುದೊಡ್ಡ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿವೆ. ಮಾರಕ ಸಂಕ್ರಾಮಿಕ ರೋಗದ ಕುರಿತಾಗಿ ಪೋ 1842ರಲ್ಲಿ ಪ್ರಕಟಿಸಿದ The Masque of the Red Death ಸಣ್ಣ ಕತೆಯು […]

ವಿಶ್ವ ಸಾಹಿತ್ಯದಲ್ಲಿ ಸಾಂಕ್ರಾಮಿಕ ಪಿಡುಗುಗಳು

-ಎಂ.ಕೆ.ಆನಂದರಾಜೇ ಅರಸ್

ವಿಶ್ವ ಸಾಹಿತ್ಯದಲ್ಲಿ ಸಾಂಕ್ರಾಮಿಕ ಪಿಡುಗುಗಳು
-ಎಂ.ಕೆ.ಆನಂದರಾಜೇ ಅರಸ್

ಇತ್ತೀಚಿನ ಶತಮಾನಗಳಲ್ಲಿ ಸಂಭವಿಸಿರುವ ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಸಹಜವಾಗಿಯೇ ಹಲವಾರು ಕೃತಿಗಳ ರಚನೆಯಾಗಿದ್ದು ಅವು ಪುಸ್ತಕ ಹಾಗೂ ಡಿಜಿಟಲ್ ರೂಪದಲ್ಲಿ ಲಭ್ಯವಿವೆ. ಅವುಗಳಲ್ಲಿ ಆಯ್ದ ಕೆಲವು ಕೃತಿಗಳ ಪರಿಚಯ ಇಲ್ಲಿದೆ. ಮಾನವ ಇತಿಹಾಸ ಅಸಂಖ್ಯಾತ ಸಾಂಕ್ರಾಮಿಕ ರೋಗಗಳ ಹಾಗೂ ಹಲವಾರು ವಿಶ್ವವ್ಯಾಪಿ ಸೋಂಕು ಪಿಡುಗುಗಳ ಘಟನೆಗಳಿಂದ ಕೂಡಿವೆ. ಕೆಲವು ಪಿಡುಗುಗಳು, ಲಕ್ಷಾಂತರ ಜನಸಂಖ್ಯೆಯ ನಿರ್ನಾಮಕ್ಕೆ ಕಾರಣವಾದರೆ, ಇನ್ನೂ ಕೆಲವು ಸರ್ವವ್ಯಾಪಿ ವ್ಯಾಧಿಗಳು ಕೆಲವೊಮ್ಮೆ ಇಡೀ ನಾಗರಿಕತೆಗಳನ್ನು ಅಳಿವಿನ ಅಂಚಿಗೆ ಕೊಂಡೊಯ್ದಿವೆ. ಕೆಲವು ಐತಿಹಾಸಿಕ ಪಿಡುಗುಗಳ ದಾಖಲೆ ಸಾಹಿತ್ಯ […]

ಕಾಲರಾ ರೋಗಕ್ಕೆ ಬಲಿಯಾದ ‘ಎಡ್ಮಂಡ್ ಸಿಬ್ಸನ್’

-ಪ್ರಮೋದ ನಲವಾಗಿಲ/ಮಾಲತೇಶ ಅಂಗೂರ.

ವಿಪತ್ತು ಎದುರಿಸಲು ಇಂಗ್ಲೆಂಡಿನಿಂದ ಬಂದ ಎಡ್ಮಂಡ್ ಸಿಬ್ಸನ್ ಸಾಂಕ್ರಾಮಿಕ ಪಿಡುಗಿಗೆ ಬಲಿಯಾಗಿ ಶಿಗ್ಗಾವಿಯಲ್ಲಿ ಮಣ್ಣಾಗಿದ್ದು ವಿಪರ್ಯಾಸ. ಕ್ರಿ.ಶ. 1876-1878ರ ಕ್ಷಾಮವು ಭಾರತ ದೇಶವನ್ನೇ ಕಿತ್ತು ತಿಂದಿತು. ಅದಕ್ಕಿಂತ ಎರಡು ವರ್ಷಗಳ ಹಿಂದೆ (1874) ಬಿದ್ದ ಅಪಾರ ಮಳೆಯಿಂದಾಗಿ ಆಹಾರ ಧಾನ್ಯಗಳು ನೀರು ಪಾಲಾಗಿದ್ದವು. ಆ ಬರಗಾಲದಿಂದಾಗಿ ಭಾರತದ ಜನಸಂಖ್ಯೆ 5.5 ಮಿಲಿಯನ್ (ಕ್ರಿ.ಶ. 1871ರ ಜನಗಣತಿಯ ಪ್ರಕಾರ) ಕಡಿಮೆಯಾಯಿತೆಂದರೆ ಅದರ ತೀವ್ರತೆಯನ್ನು ಊಹಿಸಬಹುದು. ಬರಗಾಲದ ಪರಿಸ್ಥಿತಿ ಕರ್ನಾಟಕದ ಬಿಜಾಪುರ, ಬಳ್ಳಾರಿ, ಕೋಲಾರ ಹಾಗೂ ಹಾವೇರಿ ಭಾಗದಲ್ಲಿ ಅತಿಯಾಗಿತ್ತು. […]

ಪ್ಲೇಗ್ ಹೊಡೆತಕ್ಕೆ ಮೈಸೂರು ರಾಜ್ಯ ತತ್ತರಿಸಿದಾಗ

ಅನುವಾದ: ಡಾ.ಜ್ಯೋತಿ

ಪ್ಲೇಗ್ ಹೊಡೆತಕ್ಕೆ ಮೈಸೂರು ರಾಜ್ಯ ತತ್ತರಿಸಿದಾಗ
ಅನುವಾದ: ಡಾ.ಜ್ಯೋತಿ

ಪ್ಲೇಗ್ ರೋಗಕ್ಕೆ ಹೆಚ್ಚು ಬಾಧಿತವಾದದ್ದು ಬೆಂಗಳೂರು ಜಿಲ್ಲೆ. ಇಲ್ಲಿ, 14,831 ಪ್ರಕರಣಗಳು ಮತ್ತು 12,273 ಮಂದಿಯ ಸಾವು ವರದಿಯಾಗಿತ್ತು. ಕೇವಲ ಬೆಂಗಳೂರು ನಗರದಲ್ಲಿ 3,346 ಪ್ರಕರಣ ಮತ್ತು 2,665 ಸಾವು ಸಂಭವಿಸಿದ್ದವು. ಹಾಗೆಯೇ, ಮೈಸೂರು ನಗರದಲ್ಲಿ 2,667 ಪ್ರಕರಣ ಮತ್ತು 2171 ಸಾವು ವರದಿಯಾಗಿದ್ದವು. ಸರ್ಕಾರದ ವೆಚ್ಚದಲ್ಲಿ ಪ್ಲೇಗಿನಿಂದ ಸತ್ತವರ ಶವಗಳನ್ನು ಹೂಳಲು ಅಥವಾ ಸುಡಲು ವ್ಯವಸ್ಥೆ ಮಾಡಲಾಯಿತು. ಮೈಸೂರು ಪ್ರಾಂತ್ಯವು ತೀವ್ರ ಕ್ಷಾಮ ಅಥವಾ ಬರಗಾಲದ ಪರಿಸ್ಥಿತಿಯಿಂದ ಅತೀವ ಸಂಕಷ್ಟಕ್ಕೆ ಒಳಪಟ್ಟಿತ್ತು. ಇದರ ಜೊತೆಗೆ, ರಾಜಮನೆತನದ […]

ಅಲ್ಲಮನ ವಚನಗಳ ಸಮರ್ಥ ಇಂಗ್ಲಿಷ್ ಅವತರಣಿಕೆ: “ಗಾಡ್ ಈಸ್ ಡೆಡ್, ದೆರ್ ಈಸ್ ನೋ ಗಾಡ್”

-ಕಮಲಾಕರ ಕಡವೆ

ಅಲ್ಲಮನ ವಚನಗಳ ಸಮರ್ಥ ಇಂಗ್ಲಿಷ್ ಅವತರಣಿಕೆ:  “ಗಾಡ್ ಈಸ್ ಡೆಡ್, ದೆರ್ ಈಸ್ ನೋ ಗಾಡ್”
-ಕಮಲಾಕರ ಕಡವೆ

ದೇವದೇವನ್ ಅವರ ಈ ಅನುವಾದಗಳು ಮೂಲ ವಚನಗಳ ಅರ್ಥಕ್ಕೆ ಮತ್ತು ಅರ್ಥದ ಆಳ ವಿಸ್ತಾರಗಳಿಗೆ ಅಪಚಾರ ಎಸಗುವ ಹಾಗಿಲ್ಲ ಎನ್ನುವುದು ಈ ಅನುವಾದಿತ ಸಂಕಲನದ ಗರಿಮೆ. ಕನ್ನಡದ ನುಡಿಪರಂಪರೆಯನ್ನು ಸಮೃದ್ಧಗೊಳಿಸಿದ ಸಾಹಿತ್ಯ ಚಳವಳಿಗಳಲ್ಲಿ ಅಗ್ರಗಣ್ಯ ಸ್ಥಾನ ಸಿಗುವುದು ವಚನ ಚಳವಳಿಗೆ. ಕನ್ನಡ ಆಡುವ ಪ್ರದೇಶಗಳುದ್ದಕ್ಕೂ ಸುಮಾರು ಒಂದು ಸಹಸ್ರಮಾನ ಕಾಲದಿಂದ ವಚನಗಳು ಜನಮಾನಸದಲ್ಲಿ ಕಾಯಮ್ಮಾಗಿವೆ. ವಚನಗಳು ಹೊಮ್ಮಿ ಬಂದ ಸಾಮಾಜಿಕ, ರಾಜಕೀಯ ಸನ್ನಿವೇಶ ಅಸಾಧಾರಣ ಬದಲಾವಣೆಗಳ ಕಾಲಮಾನ ಎನ್ನುವುದು ನಮ್ಮನ್ನು ಕುತೂಹಲಗೊಳಿಸಿದರೆ, ವಚನಗಳು ಪ್ರಸ್ತುತಗೊಳಿಸುವ ಧಾರ್ಮಿಕ ಮತ್ತು […]

ಹೊಸಪುಸ್ತಕ

ಮಗ್ಗ ಕಥಾ ಸಂಕಲನ ಸ್ನೇಹಲತಾ ದಿವಾಕರ್ ಕುಂಬ್ಳೆ ಪುಟ: 92, ಬೆಲೆ: ರೂ.110 ಪ್ರಥಮ ಮುದ್ರಣ: 2020 ಸಿರಿವರ ಪ್ರಕಾಶನ, ಲಕ್ಷ್ಮೀನಾರಾಯಣಪುರ ಬೆಂಗಳೂರು 560021 ಹತ್ತು ಕಥೆಗಳನ್ನು ಒಳಗೊಂಡಿರುವ ಈ ಸಂಕಲನ, ಮೂರು ದಶಕಗಳ ನಡುವಿನ ಕೊಂಡಿಯಂತೆ ಕಾಣಿಸುತ್ತದೆ. ಮೊದಲ ಕಥೆ 1989ರಲ್ಲಿ ರಚಿತವಾಗಿದ್ದರೆ ಕೊನೆಯ ಕಥೆ 2018ರಲ್ಲಿ ರಚಿತವಾಗಿದ್ದು, ಇಲ್ಲಿನ ಕಥೆಗಳಲ್ಲಿ ಲೇಖಕಿಯ ಊರಾದ ಕಾಸರಗೋಡಿನ ಜನರ ಆಡುಕನ್ನಡದ ಸೊಗಡು ಎದ್ದು ಕಾಣುತ್ತದೆ. ಎಲ್ಲಾ ಕಥೆಗಳೂ ಭಿನ್ನವಾಗಿ, ಮಲಯಾಳಂ ವಾತಾವರಣದ ಪ್ರಭಾವವನ್ನು ಸೂಚಿಸುತ್ತವೆ. ಹಸಿವು, ಕಾದವಳು […]

ಕುಮಾರವ್ಯಾಸನ ಬೆಳಕು ಕಾಣದ ಕೃತಿ ‘ಐರಾವತ’

-ಡಾ.ಶಿಲ್ಪ ಎಸ್.

ಕುಮಾರವ್ಯಾಸನ ಬೆಳಕು ಕಾಣದ ಕೃತಿ ‘ಐರಾವತ’
-ಡಾ.ಶಿಲ್ಪ ಎಸ್.

ಕುಮಾರವ್ಯಾಸ ಎಂದ ಕೂಡಲೇ ಥಟ್ ಎಂದು ನೆನಪಾಗುವುದು ಅವನ ಕೃತಿ `ಕರ್ಣಾಟ ಭಾರತ ಕಥಾ ಮಂಜರಿ’. ಆದರೆ ಈತ `ಕರ್ಣಾಟ ಭಾರತ’ ಅಲ್ಲದೆ `ಐರಾವತ’ ಎಂಬ ಕೃತಿಯನ್ನು ರಚನೆ ಮಾಡಿದ್ದಾನೆಂದು ಕನ್ನಡ ಸಾಹಿತ್ಯ ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ಆರ್.ನರಸಿಂಹಾಚಾರ್ಯರು `ಕವಿಚರಿತೆ’ಯಲ್ಲಿ ಹೇಳುವಂತೆ, “ಕುಮಾರವ್ಯಾಸನು ‘ಐರಾವತ’ ಎಂಬ ಗ್ರಂಥವನ್ನು ಬರೆದಿರುವಂತೆ ತೋರುತ್ತದೆ’’, ಇವನ ಮುದ್ರಿತವಾದ ಭಾರತದಲ್ಲಿ ‘ಐರಾವತ’ಕ್ಕೆ ಸಂಬಂಧಿಸಿದ ಸಂಧಿಗಳಿಲ್ಲ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ‘ಐರಾವತ’ ಕೃತಿ ಕುಮಾರವ್ಯಾಸ ಭಾರತದಷ್ಟು ಪ್ರಖ್ಯಾತಿಯನ್ನು ಪಡೆಯಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಬಹುಶಃ […]

ಹಣ ಬೇಕೆ, ತಕ್ಷಣ ಹಣ ಬೇಕೆ…?

-ವೆಂಕಟೇಶ ಮಾಚಕನೂರ

ಹಣ ಬೇಕೆ, ತಕ್ಷಣ ಹಣ ಬೇಕೆ…?
-ವೆಂಕಟೇಶ ಮಾಚಕನೂರ

ಅಡ ಇಡುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ. ಆದರೆ ‘ಇಂದಿನ ಆನ್ ಲೈನ್ ರೇಟಿಗೆ ಚಿನ್ನವನ್ನು ಮಾರಬೇಕೆ… ನಮ್ಮಲ್ಲಿಗೆ ಬನ್ನಿ’ ಎಂದು ಉಲಿಯುತ್ತ, ನಮ್ಮ ಕಷ್ಟ ಪರಿಹಾರಾರ್ಥವಾಗಿ ತಮ್ಮಲ್ಲಿಗೆ ಬರಲು ನೀಡುವ ಆಹ್ವಾನಗಳನ್ನು ಕುರಿತ ನನ್ನ ಸಂಕಟ ಹಂಚಿಕೊಳ್ಳಲು ಈ ಪ್ರಬಂಧ! ಟಿವಿ ಕುರಿತು ಕುಟುಂಬದ ಸದಸ್ಯರಲ್ಲಿ ಒಂದು ಅಲಿಖಿತ ಒಪ್ಪಂದ ಇರುತ್ತದೆ. ಅದು ಅವರವರ ನೆಚ್ಚಿನ ಕಾರ್ಯಕ್ರಮಗಳಿದ್ದಾಗ ಇತರರು  ಕಿರಿಕಿರಿ ಮಾಡುವಂತಿಲ್ಲ ಎಂದು. ನಮ್ಮ ಮನೆಯಲ್ಲಿ ನನ್ನವಳ ಮೆಚ್ಚಿನ ಕೆಲ ಧಾರಾವಾಹಿಗಳ ವೇಳೆ ಬಿಟ್ಟು […]

ಅಪ್ಪನಿಲ್ಲದ ಅನಾಥೆ!

-ಸಂಕಮ್ಮ ಸಂಕಣ್ಣನವರ ಬ್ಯಾಡಗಿ

ಅಪ್ಪನಿಲ್ಲದ ಅನಾಥೆ!
-ಸಂಕಮ್ಮ ಸಂಕಣ್ಣನವರ ಬ್ಯಾಡಗಿ

ಡಾ.ಪಾಟೀಲ ಪುಟ್ಟಪ್ಪ ಅವರ ‘ಮಾನಸಪುತ್ರಿ’ ಎಂದೇ ಗುರುತಿಸಲ್ಪಟ್ಟ ಲೇಖಕಿಯ ಮನದಾಳದ ನೋವು, ಮುಗಿಯದ ನೆನಪು ಇಲ್ಲಿ ಸುರುಳಿ ಬಿಚ್ಚಿದೆ.  ಸದಾ ಮಾತು, ಚರ್ಚೆಗಳಲ್ಲಿ ಮುಳುಗಿರುತ್ತಿದ್ದ ನಮ್ಮ ನೆಲದ ಚೇತನ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮೌನಕ್ಕೆ ಶರಣಾಗಿದ್ದಾರೆ. ಏಕಕಾಲದಲ್ಲಿ ಪಂಚಪತ್ರಿಕೆಗಳನ್ನು ಸಂಪಾದಿಸಿದ ರಾಷ್ಟ್ರದಾಖಲೆ ಅವರದ್ದು. ತೊಟ್ಟಿದ್ದು ಖಾದಿ, ತುಳಿದದ್ದು ಗಾಂಧೀ-ಹಾದಿ. ಅವರ ಬೌದ್ಧಿಕ ನಾಯಕತ್ವ ರಾಜ್ಯ ಪರಿಧಿಯೊಳಗಷ್ಟೇ ಅಲ್ಲ, ರಾಷ್ಟ್ರಾದ್ಯಂತ ಪ್ರಸಿದ್ಧ. ಹಾವೇರಿಯ ಕುರುಬಗೊಂಡ ಅವರ ತಾಯಿ ಮನೆ, ಹಲಗೇರಿ ತಂದೆಯ ಮನೆ. ಓದಿದ್ದು ಬ್ಯಾಡಗಿ ಮತ್ತು ಹಾವೇರಿಯಲ್ಲಿ. […]