ಭೂಲೋಕದಿಂದ ಗುಳೆ ಹೊರಟ ದೇವತೆಗಳು!

-ಬಾಲಚಂದ್ರ ಬಿ.ಎನ್.

 ಭೂಲೋಕದಿಂದ ಗುಳೆ ಹೊರಟ ದೇವತೆಗಳು! <p><sub> -ಬಾಲಚಂದ್ರ ಬಿ.ಎನ್. </sub></p>

ದೀರ್ಘ ಕಾಲದ ಬಳಿಕ ಮೌನ ಮುರಿದ ಭಗವಂತನು ಬಾಯ್ಬಿಟ್ಟು… ದೇವಾನುದೇವತೆಗಳ ಜೊತೆಗೆ ಗೊಳೋ ಎಂದು ಅಳಲು ಶುರು ಮಾಡಿದ! ಹಾಗಾದರೆ ದೇವಲೋಕದಲ್ಲಿ ಆಗಿದ್ದಾದರೂ ಏನು? ಜಗನ್ನಿಯಾಮಕನು ಒಮ್ಮೆ ಸ್ವರ್ಗದಲ್ಲಿ ಮೀಟಿಂಗ್ ಏರ್ಪಡಿಸಿದ. ಎಲ್ಲ ಅಲ್ಪಸಂಖ್ಯಾತ ದೇವರು, ಗ್ರಾಮೀಣ ದೇವರು ಹಾಗೂ ಬುಡಕಟ್ಟು ದೇವರುಗಳಿಗೂ ಕಡ್ಡಾಯ ಹಾಜರಿರಬೇಕೆಂದು ಬುಲಾವ್ ಕಳಿಸಲಾಗಿತ್ತು. ಇಡೀ ಸ್ವರ್ಗದಲ್ಲಿ ಪಾರಿಜಾತದ ಪರಿಮಳವನ್ನೂ ಮೀರಿಸುತ್ತಿದ್ದ ಸ್ಯಾನಿಟೈಜರ್‌ನ ಆಲ್ಕೋಹಾಲ್ ವಾಸನೆಯಿಂದಾಗಿ ಈ ಸಭೆ ಕೊರೊನಾ ಕುರಿತಾದ್ದು ಎಂದು ದೇವತೆಗಳು ಸುಲಭವಾಗಿ ಊಹಿಸಬಹುದಾಗಿತ್ತು. ಕಾಫೀ, ಟೀ, ಲಿಂಬೂಸೋಡ, ಅಮೃತಗಳ […]

ಬಿರಿಯಾನಿ: ಮುಸ್ಲಿಂ ಮಹಿಳೆಯ ಸಂಕಟಗಳ ಸರಮಾಲೆ

-ಪ್ರೇಮಕುಮಾರ್ ಹರಿಯಬ್ಬೆ

 ಬಿರಿಯಾನಿ: ಮುಸ್ಲಿಂ ಮಹಿಳೆಯ ಸಂಕಟಗಳ ಸರಮಾಲೆ <p><sub> -ಪ್ರೇಮಕುಮಾರ್ ಹರಿಯಬ್ಬೆ </sub></p>

ಈ ಚಲನಚಿತ್ರ ಮುಸ್ಲಿಂ ಮಹಿಳೆಯರ ಅಸಹಾಯಕತೆ ಮತ್ತು ಅತಂತ್ರ ಬದುಕಿನ ಕರಾಳ ಮುಖಗಳನ್ನು ಬಿಚ್ಚಿಡುತ್ತ ಪ್ರೇಕ್ಷಕರಲ್ಲಿ ಗಾಢ ವಿಷಾದ ಭಾವವನ್ನು ಹುಟ್ಟಿಸಿಬಿಡುತ್ತದೆ. ಇದು ದೇಶದ ಇನ್ಯಾವುದೇ ಭಾರತೀಯ ಭಾಷೆಯಲ್ಲಿ ನಿರ್ಮಾಣವಾಗಿದ್ದರೂ ಅದು ದೊಡ್ಡ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತಿತ್ತು!  ಭಯೋತ್ಪಾದನೆ, ತ್ರಿವಳಿ ತಲಾಖ್‌ನಂತಹ ಸಮಸ್ಯೆಗಳು ಮುಸ್ಲಿಂ ಮಹಿಳೆಯರ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಈ ಕಟು ವಾಸ್ತವವನ್ನು ಹೇಳಲು ಸಿನಿಮಾಕ್ಕಿಂತ ಪ್ರಭಾವಶಾಲಿ ಮಾಧ್ಯಮ ಇನ್ನೊಂದಿಲ್ಲ. ಸಾಹಿತ್ಯಕ್ಕೆ ಈ ಶಕ್ತಿ ಇದೆಯಾದರೂ ಅದಕ್ಕೆ ದೇಶ, ಖಂಡಗಳ ಗಡಿ ದಾಟುವ ಶಕ್ತಿ ಇಲ್ಲ. ಏಕಕಾಲಕ್ಕೆ ಅಸಂಖ್ಯ […]

ಕವಿತೆ

ಎಚ್ ಎಸ್ ಶಿವಪ್ರಕಾಶ

 ಕವಿತೆ <p><sub> ಎಚ್ ಎಸ್ ಶಿವಪ್ರಕಾಶ </sub></p>

          ಎರಡು ಸೊನ್ನೆಗಳು ಯಮನಿಯಮ ಪ್ರಾಣಾಯಾಮವೆಂಬ ಅಷ್ಟಾಂಗಯೋಗದಲ್ಲಿಎರಡು ಯೋಗಗಳು: ಒಂದು ಅಳಿದು ಕೂಡುವ ಯೋಗ ಒಂದು ಅಳಿಯದೆ ಕೂಡುವ ಯೋಗ ಇವೆರಡರಲಿ ಅಳಿಯದೆ ಕೂಡುವ ಯೋಗವರಿದು ಕಾಣಾ ಗೊಗ್ಗೇಶ್ವರ – ಅಲ್ಲಮಪ್ರಭು ಎರಡು ಸೊನ್ನೆಗಳು ಎರಡು ಸನ್ನೆಗಳು ಎರಡು ನನ್ನಿಗಳು ಮೊದಲ ಸೊನ್ನೆ ಶಪಥ ಮಾಡಿತು: ಕೆಡುಕು, ಕೊಳಕುಗಳನ್ನೆಲ್ಲಾ ಕಳೆದುಕೊಳ್ಳುತ್ತೇನೆ ಒಂದೊಂದಾಗಿ ಕೆಡುಕುಗಳನ್ನು ಕಳಚಿಕೊಂಡಿತು ತೊಲಗೋ ಕಾಮತೊಲಗೋ ದ್ವೇಷ ಅಡಗಿರಿ ಅರಿಷಡ್ವರ್ಗಗಳೆ ಇತ್ಯಾದಿಯಾಗಿ ಜಪಿಸುತ್ತಾ ಮೇಲ್ಕಂಡ ಹೆಸರಿಸ ಬಹುದಾದ ಪಾಪಗಳ ಜೊತೆಗೆ […]