ಕೋವಿಡ್ ತೆರೆದಿಟ್ಟ ಆರೋಗ್ಯ ವ್ಯವಸ್ಥೆ

-ಡಾ.ಕೆ.ಎಸ್.ಪವಿತ್ರ

ಕಾಯಿಲೆ ಏನು, ಅದರ ಔಷಧಿ ಯಾವುದು ಎಂಬ ಬಗ್ಗೆ ಕೇಂದ್ರೀಕರಿಸಬೇಕಾದ ವೈದ್ಯಕೀಯ ಜಗತ್ತು ಕೊರೋನಾ ಅವಧಿಯ ಅರ್ಧದಷ್ಟು ಸಮಯವನ್ನು ಆಡಳಿತದ ಅಡ್ಡಿ–ಆತಂಕ ನಿವಾರಿಕೊಳ್ಳಲು ಕಳೆಯಬೇಕಾದುದು ವಿಪರ್ಯಾಸಕರ. -ಡಾ.ಕೆ.ಎಸ್.ಪವಿತ್ರ ಇಲ್ಲಿಯವರೆಗೆ ಜೀವನ ಒಂದು ದಾರಿಯಲ್ಲಿ, ಒಂದು ರೀತಿಯಲ್ಲಿ ಸಾಗುತ್ತಿತ್ತು. ಕೋವಿಡ್ ಹಠಾತ್ತನೆ ತಂದ ಬದಲಾವಣೆ ಅಗಾಧ, ತೀವ್ರ ಎಂಬ ರೀತಿಯಲ್ಲಿ ಈ ದಾರಿ-ರೀತಿಗಳನ್ನು ಬದಲಿಸಿಬಿಟ್ಟಿತು. ವ್ಯವಸ್ಥೆಯೊಂದರ ಸಾಫಲ್ಯ-ವೈಫಲ್ಯಗಳು ಪರೀಕ್ಷೆಗೆ ಒಳಗಾಗುವ ಸಮಯವೇ ಇದು ಎನಿಸುವಷ್ಟರ ಮಟ್ಟಿಗೆ ಕೋವಿಡ್ ನಮ್ಮನ್ನು ಚಿಂತನೆಗೆ ಹಚ್ಚಿದೆ. ಆರೋಗ್ಯ ವ್ಯವಸ್ಥೆಯಲ್ಲಿ ಭಾರತ ಹಿಂದೆ-ಮುಂದೆ ಎನ್ನುವ […]

ಎಲ್ಲೆಲ್ಲೂ ತೇಲುವ ಹೆಣಗಳು!

ಸಂಪಾದಕ

ಎಲ್ಲೆಲ್ಲೂ ತೇಲುವ ಹೆಣಗಳು!
ಸಂಪಾದಕ

ನಾನು ಚಿಕ್ಕವನಿದ್ದಾಗ ನನ್ನ ತಾಯಿಯ ತವರೂರಿನ ದೇವರಕೋಣೆಯಲ್ಲಿ ಒಂದು ಪುಟ್ಟ ತಾಮ್ರದ ಗಿಂಡಿ ಇಟ್ಟಿದ್ದರು. ಅದರ ಮೇಲ್ಭಾಗವನ್ನು ತಾಮ್ರದ ಹಾಳೆಯಿಂದ ಮುಚ್ಚಿ ಸೀಲ್ ಮಾಡಲಾಗಿತ್ತು. ಪ್ರತಿನಿತ್ಯ ದೇವರ ಪೂಜೆ ಮಾಡುವಾಗ ಆ ಗಿಂಡಿಗೂ ಅಗ್ರ ಪೂಜೆ ಸಲ್ಲುತ್ತಿತ್ತು. ಪ್ರಾಥಮಿಕ ಶಾಲೆಯಲ್ಲಿದ್ದ ನನಗೋ ಆ ಗಿಂಡಿಯೊಳಗೇನಿದೆ ಎಂದು ತಿಳಿಯುವ ಕುತೂಹಲ. ಆದರೆ ದೇವರು ಮತ್ತು ಸಂಪ್ರದಾಯದ ವಿಷಯದಲ್ಲಿ ಪ್ರಶ್ನೆ ಮಾಡುವ ಅವಕಾಶವಿರಲಿಲ್ಲ; ಸುಮ್ಮನೆ ಪಾಲಿಸುವುದಷ್ಟೇ ಆಗ ಚಿಕ್ಕವರ ಕರ್ತವ್ಯ.   ನಾನು ಬೆಳೆದಂತೆ ತಿಳಿದದ್ದು ಆ ಗಿಂಡಿಯೊಳಗೆ ಗಂಗಾ […]

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ

-ಡಾ.ಹರೀಶ ಹೆಗಡೆ

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ
-ಡಾ.ಹರೀಶ ಹೆಗಡೆ

ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯ ಪರಂಪರೆಯ ಶಿಥಿಲತೆ. -ಡಾ.ಹರೀಶ ಹೆಗಡೆ ಜಗತ್ತಿನ ಬೇರಾವ ದೇಶದಲ್ಲಿಯೂ ಭಾರತೀಯ ಸಂಗೀತದಷ್ಟು ವೈವಿಧ್ಯಮಯ ಸಂಗೀತ ಕಂಡುಬರುವುದಿಲ್ಲ. ಅಂತೆಯೇ ಒಂದೇ ದೇಶದಲ್ಲಿ ಎರಡು ಶಾಸ್ತ್ರೀಯ ಸಂಗೀತಗಳಿರುವುದು ಅತಿ ವಿರಳವೇ. ಭಾರತೀಯ ಸಂಗೀತವು ಸುಮಾರು 13ನೇ ಶತಮಾನದಿಂದ ಶಾಸ್ತ್ರೀಯ ಸಂಗೀತದ ಎರಡು ಕವಲುಗಳಾಗಿ ಬೆಳೆದುಬಂದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ, ಉತ್ತರ ಭಾರತದಲ್ಲಿ ಹಿಂದುಸ್ಥಾನಿ ಸಂಗೀತ ಎಂದು ಪ್ರಾದೇಶಿಕವಾಗಿ ವಿಭಜನೆಗೊಂಡರೂ, ಕರ್ನಾಟಕದಲ್ಲಿ ಮಾತ್ರ ಇವೆರಡೂ ಸಮಾನ ಸ್ಥಾನಮಾನಗಳನ್ನು […]

ಮಿತಿ ಮೀರಿದ ವ್ಯಾಪಾರೀಕರಣವೇ ಕಾರಣ!

-ಬಿ.ವಿ.ಶ್ರೀನಿವಾಸ್

ಸಂಗೀತದ ಸ್ವರಗಳನ್ನು, ರಾಗಗಳನ್ನು, ಮಟ್ಟುಗಳನ್ನು ಮೂಟೆಯಲ್ಲಿ ಕಟ್ಟಿ ತಮ್ಮ ಸ್ಟೋರ್ ರೂಮಲ್ಲಿ ಬಂಧಿಸಿಡುವ ಗುರುಪರಂಪರೆ ಈಗಿನದು. -ಬಿ.ವಿ.ಶ್ರೀನಿವಾಸ್ ನಮ್ಮಲ್ಲಿ ಹಿಂದೆ ಪಂ.ಭೀಮಸೇನ ಜೋಷಿ, ಡಾ.ಬಾಲಮುರಳಿ ಕೃಷ್ಣ, ವಿದೂಷಿ ಎಂ.ಎಸ್.ಸುಬ್ಬಲಕ್ಷ್ಮೀ… ಹೀಗೆ ಮಹಾನ್ ಸಾಧಕರ ದಂಡು ನಮ್ಮ ಸಂಗೀತವನ್ನು ಜನರ ಹೃದಯ ಹೃದಯದಲ್ಲೂ ಬಿತ್ತಿ ಮುಗಿಲೆತ್ತರದ ಸ್ಥಾನದಲ್ಲಿ ಕೂಡಿಸಿದ್ದರು. ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಆ ಥರದ ದೈವದತ್ತವಾದ ಸಾಧಕರು ಏಕೇ ಬರ್ತಿಲ್ಲ! ಅದಕ್ಕೆ ಏನು ಕೊರತೆ? ಅದಕ್ಕೆ ಕಾರಣ ಸಂಗೀತದ ಮಿತಿಮೀರಿದ ವ್ಯಾಪಾರೀಕರಣ. ನೀ ಕೊಟ್ಟಷ್ಟು ದುಡ್ಡಿಗೆ ಸಂಗೀತ […]

‘ಶಾಸ್ತ್ರೀಯ ಸಂಗೀತದ ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’

ರಂಗಸ್ವಾಮಿ ಮೂಕನಹಳ್ಳಿ

‘ಶಾಸ್ತ್ರೀಯ ಸಂಗೀತದ  ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’
ರಂಗಸ್ವಾಮಿ ಮೂಕನಹಳ್ಳಿ

ಮೈಸೂರಿನ ಕೊಳಲುವಾದಕ ಚಂದನ್ ಕುಮಾರ್ ಪ್ರಖ್ಯಾತ ಸಂಗೀತ ಪರಂಪರೆಯ ಕುಟುಂಬಕ್ಕೆ ಸೇರಿದವರು; ಪಿಟೀಲು ವಾದನದ ದಂತಕತೆ ಎನ್ನಿಸಿದ ಸಂಗೀತ ರತ್ನ ಟಿ.ಚೌಡಯ್ಯ ಅವರ ಮರಿಮೊಮ್ಮಗ. ಹಾಗಾಗಿ ಬಾಲ್ಯದಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದ ಚಂದನ್ ಕುಮಾರ್ ಅವರದು ಕೊಳಲು ನುಡಿಸುವಿಕೆಯ ಹೊಸ ಸಾಧ್ಯತೆಗಳತ್ತ ಸದಾ ತುಡಿಯುವ ಸೃಜನಶೀಲ ಮನಸ್ಸು. ಹಾಗಾಗಿ ಅವರ ಪ್ರತಿಯೊಂದು ಸಂಗೀತ ಕಛೇರಿ ತಾಜಾತನದಿಂದ ಕೂಡಿರುತ್ತದೆ. ಮೈಸೂರು ವಿವಿಯಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವುದು ಚಂದನ್ ಅವರ ಇನ್ನೊಂದು ವಿಶೇಷ. […]

ದಿಢೀರ್ ದುಡ್ಡು ಈಗಿನ ಟ್ರೆಂಡ್!

-ಮನೋಜವಂ ಆತ್ರೇಯ

ಸಂಗೀತ ಕ್ಷೇತ್ರ ಬದಲಾಗಬೇಕಂದ್ರೆ ಸಂಗೀತ ಬದಲಾಗಬೇಕಿಲ್ಲ, ಕೇಳುಗರು ಬದಲಾಗಬೇಕಿಲ್ಲ; ಆದರೆ ಕೇಳುಗರ, ಹಾಡುವವರ ಮನಃಸ್ಥಿತಿ ಬದಲಾಗಬೇಕು. -ಮನೋಜವಂ ಆತ್ರೇಯ ಈಗಿನ ಕಾಲದಲ್ಲಿ ಸಂಗೀತಕ್ಕಿಂತ ಸೌಂಡ್‍ಗೆ ಹೆಚ್ಚು ಬೆಲೆ ಸಿಗ್ತಾ ಇದೆ. ಅಂದ್ರೆ ಹೀಗೆ ಕೇಳಿಸ್ಬೇಕು, ಇಷ್ಟು ಚೆನ್ನಾಗಿ ಕೇಳಿಸಬೇಕು, 5.1ನಲ್ಲಿ ಕೇಳಿಸಬೇಕು, ಸ್ಟೀರಿಯೋ ಹಿಂಗಿರಬೇಕು. ಹೀಗಾಗಿ ಈಗ ತಾಂತ್ರಿಕತೆಗೆ ಹೆಚ್ಚಿನ ಆದ್ಯತೆ ಇದೆ. ಸಂಗೀತಕ್ಕೆ ಹಿಂದೆ ಇದ್ದ ಒತ್ತು ಕಡಿಮೆಯಾಗಿದೆ. ಲಿರಿಕ್ಸ್ ಸರಿಯಾಗಿ ಕೇಳ್ಸೋದಿಲ್ಲ, ಲಿರಿಕ್ಸ್‍ಗೆ ಇಂಥದೇ ಆದ ಅರ್ಥ ಇರೋಲ್ಲ. ಈಗ ಎಲ್ಲವನ್ನೂ ನೇರವಾಗಿ ಹೇಳುವ […]

ಅಳತೆಗೆ ಸಿಗದ ಅಲೆ ಮತ್ತು ತಲೆಯ ಲೆಕ್ಕ!

-ರಾಜಾರಾಂ ತಲ್ಲೂರು

ಇನ್ನೊಂದು ಕೊವಿಡ್ ಅಲೆಗೆ ತಯಾರಿ ಎಂದರೆ ಅದಕ್ಕೆ ಸರ್ಕಾರಿ ವ್ಯವಸ್ಥೆ ಸಡಗರದಿಂದಲೇ ಸಜ್ಜುಗೊಳ್ಳುತ್ತದೆ. ತಯಾರಿ ಎಂದರೆ ಖರೀದಿಗಳೆಂಬುದು ಈ ಸಡಗರಕ್ಕೆ ಕಾರಣ. ಅದಕ್ಕಾಗಿ ಕಾದುಕೊಂಡಿರುವವರಿಗೆ ಇಂತಹ ಅವಕಾಶ ಒಂದು ಹಬ್ಬ! ಆದರೆ ನಿಜಕ್ಕೂ ಈ ಅಲೆಗಳು ಅಸ್ತಿತ್ವದಲ್ಲಿ ಇವೆಯೇ? -ರಾಜಾರಾಂ ತಲ್ಲೂರು ಕುಂದಾಪುರದ ಕಡೆ ಒಂದು ಮಾತಿದೆ. `ಲೆಕ್ಕ ಪಕ್ಕ, ಪಡಾವಿಗೆ ಸಿಕ್ಕ’ ಹೊರನೋಟಕ್ಕೆ ಭಾರೀ ಲೆಕ್ಕಾಚಾರ ಎಂದು ತೋರಿಬಂದರೂ, ವಾಸ್ತವದಲ್ಲಿ ಟೊಳ್ಳಾಗಿರುವ ಲೆಕ್ಕಾಚಾರಕ್ಕೆ ವ್ಯಂಗ್ಯವಾಗಿ ಹೇಳುವ ಮಾತಿದು. ಕೊರೊನಾ ಜಗನ್ಮಾರಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಲೆಕ್ಕಾಚಾರಗಳು […]

ಹಳೆಯ ಕಪ್ಪು ಫಂಗಸ್ಗೆ ಹೊಸ ಕೋವಿಡ್ ಸಂಗ!

-ಡಾ.ವಸುಂಧರಾ ಭೂಪತಿ

ಬ್ಲಾಕ್ ಫಂಗಸ್ ಅತೀ ವಿರಳ ಶಿಲೀಂಧ್ರ ಸೋಂಕು. ಕಾರಣಾತರಗಳಿಂದ ನಮ್ಮ ದೇಹದಲ್ಲಿ ಸೇರಿ ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ ಇದು ಸೈನಸ್, ಶ್ವಾಸಕೋಶ, ಮೆದುಳುಗಳಲ್ಲಿ ಮಾರಣಾಂತಿಕ ಸೋಂಕು ಉಂಟು ಮಾಡುತ್ತದೆ. ಇದು ಹೊಸದಾಗಿ ಕಾಣಿಸಿಕೊಂಡ ಸೋಂಕಲ್ಲ. ಹಿಂದೆಲ್ಲಾ ವರ್ಷಕ್ಕೆ ಕೆಲವೇ ಕೆಲವು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಈಗ ಕೋವಿಡ್ ಕಾರಣದಿಂದ ಹೆಚ್ಚು ಬಾಧಿಸತೊಡಗಿದೆ. -ಡಾ.ವಸುಂಧರಾ ಭೂಪತಿ ಈಗ ದೇಶದಲ್ಲಿ ಕಂಡುಬಂದಿರುವ ಕೊರೊನಾ ವೈರಸ್ಸಿನ ಎರಡನೇ ಅಲೆಯು ಕಳೆದ ವರ್ಷದ ಮೊದಲನೆಯ ಅಲೆಗಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ. ಎರಡನೇ ಅಲೆಯಲ್ಲಿ ರೂಪಾಂತರಿ […]

ಕೋವಿಡ್ ಎರಡನೇ ಅಲೆಯ ಪಾಠಗಳು

-ಡಾ.ಬಿ.ಆರ್.ಮಂಜುನಾಥ್

ಎರಡು ಅಥವಾ ಮೂರನೇ ಅಲೆಗೆ ಸರಿಯಾಗಿ ತಯಾರಾಗಬೇಕೆಂದರೆ ಆಡಳಿತ ಸಂಪೂರ್ಣ ಪಾರದರ್ಶಕವಾಗಿರಬೇಕು. ನಾಣ್ಣುಡಿಯ ಉಷ್ಟ್ರಪಕ್ಷಿಯಂತೆ ಮರಳಿನಲ್ಲಿ ತಲೆ ಹುದುಗಿಸಿಕೊಂಡರೆ ವಾಸ್ತವ ಪರಿಸ್ಥಿತಿ ಮಾಯವಾಗುವುದಿಲ್ಲ. -ಡಾ.ಬಿ.ಆರ್.ಮಂಜುನಾಥ್ ಭಾರತದಾದ್ಯಂತ ಕೊರೊನಾದ ಎರಡನೆಯ ಅಲೆ ತೀವ್ರವಾಗಿದೆ. ಸಾವಿನ ಬೀಭತ್ಸ ನರ್ತನ ಬಿಡುವಿಲ್ಲದೆ ನಡೆಯುತ್ತಿದೆ. ಆತಂಕ ಹೆಚ್ಚುತ್ತಿದೆ. ಕುಟುಂಬದವರನ್ನು, ಮಿತ್ರರನ್ನು ಕಳೆದುಕೊಳ್ಳಬಾರದು, ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ತಹತಹಿಕೆಯಲ್ಲಿ ಎಲ್ಲರೂ ಇದ್ದಾರೆ. ಅನೇಕ ಹಿರಿಯರಿಗೆ ನಾನು ಈ ಅಲೆಯನ್ನು ಮೀರಿ ಬದುಕುಳಿಯುತ್ತೇನೆಯೇ ಎಂಬ ಭಯ ಕಾಡುತ್ತಿದೆ. ಇದರ ಜೊತೆಗೇ ಬಹುತೇಕ ಬಡ ಹಾಗೂ […]

ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು

-ಪದ್ಮರಾಜ ದಂಡಾವತಿ

ಬಾಬಾಗೌಡ ಎಂಬ ಹೋರಾಟಗಾರನ ದ್ವಂದ್ವಗಳು
-ಪದ್ಮರಾಜ ದಂಡಾವತಿ

ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಹೆಸರಿಗೆ ತಕ್ಕಂತೆ ಚಿಕ್ಕ ಊರು. ಅಲ್ಲಿ ಹುಟ್ಟಿದ ವ್ಯಕ್ತಿಯೊಬ್ಬ ದೊಡ್ಡ ಹೋರಾಟಗಾರನಾಗಿ ಬೆಳೆದು ಒಮ್ಮೆ ವಿಧಾನಸಭೆಯನ್ನು ಮತ್ತು ಒಮ್ಮೆ ಲೋಕಸಭೆಯನ್ನು ಪ್ರವೇಶಿಸಿದ್ದು ಹಾಗೂ ಆ ಒಮ್ಮೆ ಲೋಕಸಭೆ ಪ್ರವೇಶಿಸಿದಾಗಲೇ ಕೇಂದ್ರದಲ್ಲಿ ಸ್ವತಂತ್ರ ಖಾತೆಯ ಸಚಿವರೂ ಆದುದು ಸಣ್ಣ ಹೆಮ್ಮೆಯಲ್ಲ. ಈ ಹೆಮ್ಮೆಗೆ ಭಾಜನರಾದವರು ಮೊನ್ನೆ ನಿಧನರಾದ ಬಾಬಾಗೌಡ ರುದ್ರಗೌಡ ಪಾಟೀಲ (77). -ಪದ್ಮರಾಜ ದಂಡಾವತಿ 1980 ರ ಜುಲೈನಲ್ಲಿ ತಮ್ಮ ಬೇಡಿಕೆಗಳನ್ನು ಆಗ್ರಹಿಸಿ ಆಂದೋಲನ ಮಾಡುತ್ತಿದ್ದ ನರಗುಂದದ ರೈತರ ಮೇಲೆ ಗುಂಡೂರಾವ್ ಸರ್ಕಾರ […]

ಕೊರೊನ ಕಾಲದಲ್ಲಿ ಕಲಾವಿದರ ಬವಣೆ

-ಶಶಿಧರ ಭಾರಿಘಾಟ್

ಕೊರೊನ ಮೊದಲ ಅಲೆಯನ್ನು ಸಾಂಸ್ಕøತಿಕವಾಗಿಯೇ ಎದುರಿಸಿದ ಕಲಾವಿದರು, 2ನೇ ಅಲೆಯ ಆಘಾತವನ್ನು ಎದುರಿಸಲು ಮಾನಸಿಕವಾಗಿ ಸಿದ್ಧಗೊಂಡಿರಲಿಲ್ಲ. ಮೊದಲ ಅಲೆ ಕಲಾವಿದರ ಸಾಮಾಜಿಕ, ಆರ್ಥಿಕ ಬದುಕನ್ನು ಕಂಗೆಡಿಸಿದರೆ, ಎರಡನೇ ಅಲೆ ಕಲಾವಿದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. -ಶಶಿಧರ ಭಾರಿಘಾಟ್ “ಒಳಿತು ಮಾಡು ಮನುಷ…..” ಎಂಬ ತತ್ವಪದದ ಮೊದಲ ಸಾಲನ್ನು ಶೀರ್ಷಿಕೆಯಾಗಿಸಿಕೊಂಡು ನಮ್ಮ ತಂಡ “ಕಾಯಕ ಜೀವಿಗಳಿಗೆ ಶರಣು” ಎಂದು ಹೇಳುತ್ತಾ ಬೀದಿ ನಾಟಕವನ್ನು ಕಳೆದ ನವೆಂಬರ್ ತಿಂಗಳಲ್ಲಿ ಅಭಿನಯಿಸಿತು. ಕೊರೊನ ಸಾಂಕ್ರಾಮಿಕ ರೋಗದ ಪರಿಣಾಮ ಘೋಷಿತವಾದ ಲಾಕ್‍ಡೌನ್‍ನಲ್ಲಿ ಉಂಟಾದ […]

ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮವಿಲ್ಲದೆ ದೇಶದ ಪ್ರಜಾಪ್ರಭುತ್ವ ಉಳಿದೀತೇ..?

ನಿರ್ಭೀತ ಮತ್ತು ಸ್ವತಂತ್ರ ಪತ್ರಿಕೋದ್ಯಮ ದೇಶವೊಂದರ ಪ್ರಜಾಪ್ರಭುತ್ವದ ಆರೋಗ್ಯದ ಪ್ರತೀಕವೆಂದು ಹೇಳಲಾಗುತ್ತದೆ. ಹೊಗಳುಭಟ್ಟ ಮತ್ತು ಆತಂಕಿತ ಮಾಧ್ಯಮ ನಾಗರಿಕರ ಮಾನವೀಯ ಹಕ್ಕುಗಳನ್ನು ರಕ್ಷಿಸಲಾಗದೆಂಬುದು ಎಲ್ಲರೂ ಒಪ್ಪುವ ವಿಷಯವೇ ಆಗಿದೆ. ಇಂದಿನ ನಮ್ಮ ಪತ್ರಿಕೋದ್ಯಮ ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿದಂತೆ ಗೋಚರಿಸುತ್ತಿದೆ. ಬಗ್ಗಿ ನಡೆಯೆಂದರೆ ತೆವಳಲು ಸಿದ್ಧವಾದಂತಿದೆ. ಪತ್ರಿಕಾ ಸ್ವಾತಂತ್ರ್ಯದ ಎಲ್ಲಾ ಆದರ್ಶಗಳನ್ನು ಗಾಳಿಗೆ ತೂರಿ ಸರ್ಕಾರಿ ಎಂಜಲು ತಿನ್ನಲು ಹಾತೊರೆಯುವಂತಿದೆ. ಇದಕ್ಕೆ ಪತ್ರಿಕೋದ್ಯಮಿಗಳು ಹಾಗೂ ಪತ್ರಕರ್ತರೇ ಕಾರಣವಿರಬಹುದು. ಆದರೆ ಇವರನ್ನು ಬಗ್ಗುಬಡಿದು ಮಣಿಸಿ ಸಾಕುನಾಯಿಗಳಂತೆ ಕಾಣುತ್ತಿರುವ ರಾಜಕೀಯ […]

ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಕಳಚಿಬಿದ್ದ ಮಾಧ್ಯಮರಂಗದ ಬದ್ಧತೆ

ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಎರಡೂ ದಾರಿ ತಪ್ಪಿದ, ಧ್ಯೇಯವನ್ನು ಮರೆತುಹೋದ ಮನುಷ್ಯರಂತೆ ಬಳಲುತ್ತಿವೆ. ಎರಡನ್ನೂ ಸಮಾಜಘಾತುಕ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ವಿದ್ರೂಪಗೊಳಿಸುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಹಾಗೂ ಹೊಸ ರಾಷ್ಟ್ರೀಯತೆಯ ಗಾಳಿ ಎಬ್ಬಿಸಿ ರಾಷ್ಟ್ರವನ್ನೇ ವಿಘಟಿಸುವ ಈ ಶಕ್ತಿಗಳು ಪ್ರಜಾಪ್ರಭುತ್ವದ ಉಚ್ಚ ಆದರ್ಶಗಳನ್ನು ಪಾಲಿಸಲು ಸಾಧ್ಯವೇ? ಅದೇ ರೀತಿ ಪತ್ರಿಕೋದ್ಯಮದ ಉದಾತ್ತ ತತ್ವಗಳಿಗೆ ಈ ಶಕ್ತಿಗಳು ಬದ್ಧವಾಗಿರಲು ಸಾಧ್ಯವೇ? -ಸುಧೀಂದ್ರ ಕುಲಕರ್ಣಿ ಒಂದು ಕಡೆ ಅಧಿಕಾರವನ್ನು ಗಳಿಸುವುದಕ್ಕಾಗಿ ಹಾಗೂ ಗಳಿಸಿದ ಅಧಿಕಾರವನ್ನು […]

ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ

-ಪದ್ಮರಾಜ ದಂಡಾವತಿ

ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ
-ಪದ್ಮರಾಜ ದಂಡಾವತಿ

ಪತ್ರಿಕೋದ್ಯಮದ ಮೊದಲ ಹಾಗೂ ಕೊನೆಯ ಉದ್ದೇಶ ಜನರ ಹಿತವನ್ನು ಕಾಯುವುದು. ತನ್ನ ಹಿತವನ್ನು ಕಾಯುವ ಪತ್ರಿಕಾ ಸ್ವಾತಂತ್ರ್ಯ ಪರಾಧೀನವಾಗದೇ ಉಳಿಯಬೇಕು ಎಂದರೆ ಜನರೂ ಅದಕ್ಕೆ ತಕ್ಕ ಬೆಲೆ ಕೊಡಲು ಕಲಿಯಬೇಕು. -ಪದ್ಮರಾಜ ದಂಡಾವತಿ ಇದೇನು ಇಂದು ನಿನ್ನೆಯ ಕಥೆಯಲ್ಲ. ಇತಿಹಾಸವನ್ನು ಒಂದು ಸಾರಿ ತಿರುವಿ ಹಾಕಿದರೆ ಪ್ರಭುತ್ವದ ಅಸಹನೆಯನ್ನು ಪತ್ರಿಕೋದ್ಯಮ ಎದುರಿಸಿಕೊಂಡು ಬಂದಿರುವುದು ಪುಟ ಪುಟಗಳಲ್ಲಿಯೂ ಕಾಣುತ್ತದೆ. ಆ ಸಂಘರ್ಷದ ಕಾರಣವಾಗಿಯೇ ಪತ್ರಿಕೋದ್ಯಮ ವೃತ್ತಿಗೆ ಘನತೆ ಮತ್ತು ಗ್ಲಾಮರ್ ಎರಡೂ ಇವೆ. ಆಗಸ್ಟಸ್ ಹಿಕಿ ತನ್ನ ಪತ್ರಿಕೆಯನ್ನು […]

ಉಪಕೃತ ಮನಃಸ್ಥಿತಿಯಲ್ಲಿ ಮಾಧ್ಯಮ ಸ್ವಾತಂತ್ರ್ಯ ಹೇಗೆ ಸಾಧ್ಯ?

-ಸಿ.ಜಿ.ಮಂಜುಳಾ

ಹಲವು ಮಾಧ್ಯಮ ಸಂಸ್ಥೆಗಳು, ಸೈದ್ಧಾಂತಿಕ ನೆಲೆಯಲ್ಲಿ ಅಪಹೃತಗೊಂಡಿರುವುದು ದೃಗ್ಗೋಚರ. ಅವು ಪ್ರಸಾರ ಮಾಡುವುದು ಅಥವಾ ಪ್ರಚಾರ ಮಾಡುವುದು, ಏಕದಿಕ್ಕಿನ ಚಿಂತನಾ ಪ್ರಕ್ರಿಯೆ. ಚಿಂತನಾ ವೈವಿಧ್ಯವನ್ನು ಅವು ತಿರಸ್ಕರಿಸುತ್ತವೆ. ತಮ್ಮ ಹಿತಾಸಕ್ತಿ ಬೆಳೆಸಲು ಭಾವನೆಗಳನ್ನು ಉದ್ದೀಪಿಸಿ ಪ್ರಭಾವಿಸುತ್ತವೆ. -ಸಿ.ಜಿ.ಮಂಜುಳಾ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಕುರಿತು ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ (ಯುಡಿಎಚ್‍ಆರ್) ಆರ್ಟಿಕಲ್ 19 ಹೀಗೆ ಹೇಳುತ್ತದೆ: “ಪ್ರತಿಯೊಬ್ಬರಿಗೂ ಅಭಿಪ್ರಾಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ; ಯಾವುದೇ ಹಸ್ತಕ್ಷೇಪವಿಲ್ಲದೆ ಅಭಿಪ್ರಾಯಗಳನ್ನು ಹೊಂದುವ ಸ್ವಾತಂತ್ರ್ಯವನ್ನು ಈ […]

ಸ್ವತಂತ್ರ ಪತ್ರಿಕೋದ್ಯಮದ ಉಳಿವಿಗೆ ಸಂವಿಧಾನವೇ ಬುನಾದಿ

ಪತ್ರಿಕೋದ್ಯಮದಲ್ಲಿರುವ ಹಲವರು ಹಗಲಿನಲ್ಲಿ ಸಂಪಾದಕರಾಗಿ, ಪ್ರಸಿದ್ಧ ಪತ್ರಕರ್ತರಾಗಿ; ರಾತ್ರಿ ರಾಜಕಾರಣಿಗಳಾಗುವ; ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಭಾಗವಹಿಸುವ; ಕಂಟ್ರಾಕ್ಟ್ ಕೊಡಿಸುವ ಅಷ್ಟೇ ಏಕೆ, ವಿಧಾನಪರಿಷತ್ತು, ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಮಾಡಿಸುವ, ಮಂತ್ರಿಮಂಡಲ ರಚನೆಯಲ್ಲಿ ಪಾತ್ರವಹಿಸುವ ಹಲವರನ್ನು ನಾನೂ ವೈಯಕ್ತಿಕವಾಗಿ ಬಲ್ಲೆ. -ಡಾ.ಬಿ.ಎಲ್.ಶಂಕರ್ ನಮ್ಮ ಪತ್ರಿಕೆ-ಮಾಧ್ಯಮಗಳು ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿ ನಿಲ್ಲುವ ಸಂದರ್ಭ ಬಂದದ್ದಾದರೂ ಹೇಗೆ? ರಾಜಕಾರಣವೂ ಇಂದು ವ್ಯಾಪಾರವಾಗಿದ್ದು, ಬಂಡವಾಳ ಹೂಡಲು ಚುನಾವಣೆಗಳು ಅತ್ಯುತ್ತಮ ಸಂದರ್ಭಗಳು. ಎಲ್ಲಾ ರೀತಿಯ ಭ್ರಷ್ಟಾಚಾರ, ಅನಾಚಾರಗಳ ಬೇರುಗಳು ಟಿಸಿಲೊಡೆಯುವುದು ಚುನಾವಣೆಗಳಲ್ಲಿಯೇ. ಒಂದು ಬಾರಿ […]

ತಗ್ಗಿ ನಡೆಯಿರಿ ಎಂದು ಸೂಚಿಸಿದರೆ ತೆವಳಲು ಸಿದ್ಧವಾದ ಮಾಧ್ಯಮ!

-ಡಾ.ಎನ್.ಜಗದೀಶ್ ಕೊಪ್ಪ

ಭಾರತದ ಪತ್ರಿಕಾ ಇತಿಹಾಸದಲ್ಲಿ ಪತ್ರಿಕಾರಂಗವನ್ನು ಪ್ರವೇಶಿಸಿರುವ ಅನೇಕ ಮಹನೀಯರು ಉದ್ಯಮಿಗಳಾಗಿರುವುದು ವಿಶೇಷ. ಆದರೆ, ಅವರಿಗೆ ಪತ್ರಿಕೆಯ ಮೂಲಕ ಲಾಭಗಳಿಸುವುದಕಕ್ಕಿಂತ ಮಿಗಿಲಾಗಿ ಭಾರತೀಯ ಸಮಾಜವನ್ನು ಉದ್ಧರಿಸುವುದು ಮುಖ್ಯಗುರಿಯಾಗಿತ್ತು. ಈಗ ಮಾಧ್ಯಮ ಆಳುವವರ ಮತ್ತು ಉದ್ಯಮಿಗಳ ಬಣ್ಣದ ತಗಡಿನ ತುತ್ತೂರಿಯಾಗಿ ಪರಿವರ್ತನೆ ಹೊಂದಿದೆ! -ಡಾ.ಎನ್.ಜಗದೀಶ್ ಕೊಪ್ಪ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾವೃತ್ತಿಗೆ ಒಂದು ಘನತೆಯ ಸ್ಥಾನವಿತ್ತು. ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಜೊತೆ ಪತ್ರಿಕಾರಂಗವನ್ನು ಸಹ ಒಂದು ಆಧಾರಸ್ಥಂಭವಾಗಿ ಪರಿಗಣಿಸಲಾಗಿತ್ತು. ಪ್ರಭುತ್ವ ಮತ್ತು ಸಮಾಜದ ಜನಸಾಮಾನ್ಯರ […]

ಕಾಯುವ ನಾಯಿ ಬೊಗಳುವುದು ಮರೆತರೇ…!

-ಎಂ.ಕೆ.ಆನಂದರಾಜೇ ಅರಸ್

ಕಾಯುವ ನಾಯಿ  ಬೊಗಳುವುದು ಮರೆತರೇ…!
-ಎಂ.ಕೆ.ಆನಂದರಾಜೇ ಅರಸ್

ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ವತಂತ್ರ ಮಾಧ್ಯಮಕ್ಕೆ ಹಾಗೂ ಆ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಈ ಬಗ್ಗೆ ಅನೇಕ ನಿದರ್ಶನಗಳಿವೆ. -ಎಂ.ಕೆ.ಆನಂದರಾಜೇ ಅರಸ್ ಕೋವಿಡ್ ಎರಡನೆಯ ಅಲೆ ದೇಶದಲ್ಲಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಭಾರತ ಸರ್ಕಾರದ ನಾಯಕತ್ವವನ್ನು ಅತ್ಯಂತ ಮೊನಚಾಗಿ ಟೀಕಿಸುವ ವರದಿಗಳು ಮೊದಲು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಪಾಶ್ಚಿಮಾತ್ಯ ಉದಾರವಾದಿ ಲೇಖಕರಿಗೆ ಮೋದಿಯವರನ್ನು ಟೀಕಿಸುವುದೇ ಒಂದು ಅಭ್ಯಾಸ, ರಾಣಾ ಅಯೂಬ್, ಸ್ವಾತಿ ಚತುರ್ವೇದಿಯಂತಹ ಲೇಖಕರು ಮೋದಿಯ ಮೇಲೆ ಹೊರ […]

ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ!

-ಜೆ ಸು ನಾ

ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ!
-ಜೆ ಸು ನಾ

ಅಶ್ಚರ್ಯ ಮತ್ತು ಸಂತಸದ ವಿಷಯವೆಂದರೆ; ದೇಶದಲ್ಲಿನ ಕೆಲವೇ ಬರಳೆಣಿಕೆಯ ಪತ್ರಿಕೆ ಮತ್ತು ವಾಹಿನಿಗಳು ಪ್ರತಿಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು. ಅಂಥವುಗಳ ಸಂಖ್ಯೆ ಜಾಸ್ತಿ ಆಗಬೇಕಿದೆ. -ಜೆ ಸು ನಾ ಭಾರತದ ರಾಜಕಾರಣದ ಗತಿ ಮತ್ತು ವೇಗ ಪಡೆದುಕೊಂಡಿದ್ದೇ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯೊಂದಿಗೆ. ಆಗ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಅಧಿಕಾರಕ್ಕೇ ಚ್ಯುತಿ ಬರುವ ಅಪಾಯದ ಸೂಚನೆಗಳು ಸಿಗುತ್ತಿದ್ದಂತೆಯೇ ದೇಶದಲ್ಲಿ “ಆಂತರಿಕ ವಿಧ್ವಂಸಕ ಕೃತ್ಯಗಳ” ನೆಪ ಒಡ್ಡಿ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ […]

ಡಿಜಿಟಲ್ ಯುಗದಲ್ಲಿ ಡೇಟಾ ಬಂಗಾರ

-ಡಾ.ಉದಯ ಶಂಕರ ಪುರಾಣಿಕ

ಡಿಜಿಟಲ್ ಯುಗದಲ್ಲಿ ಡೇಟಾ ಬಂಗಾರ
-ಡಾ.ಉದಯ ಶಂಕರ ಪುರಾಣಿಕ

ಕೋವಿಡ್-19 ಉಂಟು ಮಾಡಿರುವ ಸಮಸ್ಯೆಗಳಂತೆ, ಹಲವು ಹೊಸ ಅವಕಾಶಗಳು ಕೂಡಾ ಸೃಷ್ಟಿಯಾಗುತ್ತಿವೆ. ಇದರಿಂದಾಗಿ ಸಾವಿರಾರು ಹೊಸ ಉದ್ಯೋಗವಕಾಶಗಳು ದೇಶ-ವಿದೇಶಗಳಲ್ಲಿ ಸೃಷ್ಟಿಯಾಗುತ್ತಿವೆ. ಇಂತಹ ಹೊಸ ಉದ್ಯೋಗವಕಾಶಗಳನ್ನು ಬಳಸಿಕೊಳ್ಳಲು ಆಸಕ್ತ ಕನ್ನಡಿಗರು ಮುಂದಾಗಬೇಕು. -ಡಾ.ಉದಯ ಶಂಕರ ಪುರಾಣಿಕ 2020ರಿಂದ ವಿಶ್ವ ಎದುರಿಸುತ್ತಿರುವ ಕೋವಿಡ್-19ರ ಸಂಕಷ್ಟದಿಂದಾಗಿ ಉದ್ಯೋಗ ಮತ್ತು ವಾಣಿಜ್ಯ ಕ್ಷೇತ್ರಗಳ ಮೇಲೆ ಹೆಚ್ಚಿನ ಪರಿಣಾಮವಾಗುತ್ತಿದೆ. ಬದುಕು ಕಟ್ಟಿಕೊಳ್ಳಲು ನಡೆದಿರುವ ಪ್ರಯತ್ನಗಳ ನಡುವೆ, ಇತ್ತೀಚೆಗೆ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಯಾವ ಉದ್ಯೋಗ ದೊರೆಯುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಕೋವಿಡ್-19 ಉಂಟು ಮಾಡಿರುವ […]