ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. […]

ಓದುಗರ ಅಭಿಪ್ರಾಯಗಳು

ಅತ್ಯುತ್ತಮ ಪತ್ರಕರ್ತ ರಾಯ್ ಪದ್ಮರಾಜ ದಂಡಾವತಿ ಅವರ ಪ್ರಣಯ್ ರಾಯ್ ಮತ್ತು ದೊರಬ್ ಸೋಪಾರಿವಾಲ್ ಅವರು ಕೂಡಿ ಬರೆದ ‘The verdict’ ಕೃತಿಯ ಮುಖ್ಯಾಂಶಗಳನ್ನು ಪರಿಚಯಿಸಿದ ಲೇಖನ ಎಲ್ಲರ ಗಮನ ಸೆಳೆಯುವಂತಹದ್ದು. ಪ್ರಣಯ್ ರಾಯ್ ಅವರು ಈ ದೇಶ ಕಂಡ ಒಬ್ಬ ಅತ್ಯುತ್ತಮ ಪತ್ರಕರ್ತ ಹಾಗೂ ಟಿವಿ ವಿಶ್ಲೇಷಕ. 80ರ ಅಂಚಿನ ಹಾಗೂ 90ರ ದಶಕದಲ್ಲಿ, ರಾಯ್ ಅವರು ಹಿಂದಿಯ ಪತ್ರಕರ್ತ ವಿನೋದ್ ದುವ ಜೊತೆ, ಅವರದೇ ಆದ ಎನ್.ಡಿ.ಟಿ.ವಿ. ಸಂಸ್ಥೆಯ ಮುಖಾಂತರ ಪ್ರಸಾರಗೊಳ್ಳುತ್ತಿದ್ದ ಫಲಿತಾಂಶಪೂರ್ವ ಹಾಗೂ […]

ಬೇಗುದಿಗಳ ಬೇಗೆಯಲ್ಲಿ ಸಮ್ಮಿಶ್ರ ಸರ್ಕಾರ

ಎಸ್.ವೈ.ಗುರುಶಾಂತ್

ಆರಂಭದ ವರುಷವೇ ಸರ್ಕಾರದ ಎಲ್ಲವನ್ನೂ ಮೌಲ್ಯಮಾಪನ ಮಾಡಿ ಇಷ್ಟೇ ಎಂದು ಹೇಳುವುದು ಕಷ್ಟ ಹಾಗೂ ಸೂಕ್ತವಲ್ಲ. ಆದರೂ ಅದರ ನಡಿಗೆಯ ಹಾದಿಯನ್ನು ಗುರುತಿಸಲು ಈ ಒಂದು ವರ್ಷ ಸಾಕು. ಕರ್ನಾಟಕದಲ್ಲಿನ ಜೆಡಿಎಸ್  ಮತ್ತು ಕಾಂಗ್ರೆಸ್  ಪಕ್ಷಗಳ  ಸಮಿಶ್ರ  ಸರ್ಕಾರ  ಉರುಳುವುದೋ  ಅಥವಾ  ಉಳಿಯುವುದೋ  ಎಂಬ  ಪ್ರಶ್ನೆ  ಸ್ವತಃ  ಆ  ಪಕ್ಷಗಳಿಗೂ, ರಾಜ್ಯದ ಜನತೆಗೂ ಸತತವಾಗಿ ಕಾಡುತ್ತಲೇ ಇದೆ. ಇಂತಹ ಅತಂತ್ರದ ಸನ್ನಿವೇಶವನ್ನು ವಿರೋಧ  ಪಕ್ಷವಾಗಿರುವ  ಬಿಜೆಪಿ  ಸೃಷ್ಟಿಸುತ್ತಲೇ ಇದೆ. ಇದಕ್ಕೆ ಸಮ್ಮಿಶ್ರ ಸರ್ಕಾರದ ಪಕ್ಷಗಳ ಆಂತರಿಕ  ಬೇಗುದಿ  […]

ಪಟ್ಟಕ್ಕೇರಿದ ಮೋದಿ ಹುಟ್ಟು ಹಾಕಿರುವ ಪ್ರಶ್ನೆಗಳು

ಪೃಥ್ವಿದತ್ತ ಚಂದ್ರಶೋಭಿ

 ಪಟ್ಟಕ್ಕೇರಿದ ಮೋದಿ ಹುಟ್ಟು ಹಾಕಿರುವ ಪ್ರಶ್ನೆಗಳು <p><sub> ಪೃಥ್ವಿದತ್ತ ಚಂದ್ರಶೋಭಿ </sub></p>

ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ರಾಜಕಾರಣ ಮತ್ತು ಅದರ ಲೆಕ್ಕಾಚಾರ ಮೇ 23ರಿಂದ ಬದಲಾಗಿದೆ. ಈ ಬೆಳವಣಿಗೆಯ ಒಳಿತು-ಕೆಡುಕುಗಳನ್ನು ಕಾಲವೆ ಹೇಳಬೇಕು. ದೆಹಲಿಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಜನತಾ ಪಕ್ಷವು ಕೇಂದ್ರ ಸರ್ಕಾರದ ಚುಕ್ಕಾಣಿಯನ್ನು ಹಿಡಿದಿದೆ. 2014ರಲ್ಲಿ ಬಿಜೆಪಿಯು 30 ವರ್ಷಗಳ ನಂತರ ಲೋಕಸಭೆಯಲ್ಲಿ ಬಹುಮತವನ್ನು ಗಳಿಸಿತ್ತು. 2019ರಲ್ಲಿ ಅರ್ಧ ಶತಮಾನದ ನಂತರ ಬಹುಮತವನ್ನು ಹೊಂದಿದ್ದ ಸರ್ಕಾರವು ಮುಂದಿನ ಚುನಾವಣೆಯಲ್ಲಿ ತನ್ನ ಬಹುಮತವನ್ನು ಉಳಿಸಿಕೊಂಡ ಶ್ರೇಯಸ್ಸನ್ನು ಗಳಿಸಿಕೊಂಡಿದೆ. ಈ ಎರಡೂ ಸಾಧನೆಗಳ ರೂವಾರಿ ನರೇಂದ್ರ ಮೋದಿಯವರು. […]

ಮಿತ್ರದ್ರೋಹ ರಾಜಕೀಯದ ಫಲಿತಾಂಶ

ಡಾ.ಕೆ.ಪುಟ್ಟಸ್ವಾಮಿ

ಮಂಡ್ಯ, ಮೈಸೂರು, ಹಾಸನ ಮತ್ತು ತುಮಕೂರು ಕ್ಷೇತ್ರಗಳು ಸಾಂಪ್ರದಾಯಿಕ ಲೆಕ್ಕಾಚಾರದಿಂದ ಭಿನ್ನವಾದ ಫಲಿತಾಂಶ ನೀಡಿವೆ. ಮೈತ್ರಿಯೆಂಬುದು ಎಷ್ಟು ನಾಜೂಕಾಗಿದೆ, ಅಪನಂಬಿಕೆ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ನಿರೂಪಿಸಿದ ನಿದರ್ಶನಗಳಿವು. ಮೋದಿ ಅವರ (ಬಿ.ಜೆ.ಪಿ. ಅಲ್ಲ) ಅಭೂತಪೂರ್ವ ಯಶಸ್ಸು ಎಕ್ಸಿಟ್ ಪೋಲ್‍ನ ಫಲಿತಾಂಶಗಳು ಬರುವ ಮೊದಲೇ ನಿಚ್ಛಳವಾಗಿತ್ತು. ಆದರೆ ಎದ್ದು ಕಾಣುತ್ತಿದ್ದ ಈ ಗೋಡೆಬರಹವನ್ನು, ಅವರನ್ನು ವಿರೋಧಿಸಿದ ಪಕ್ಷಗಳು ಮತ್ತು ಪ್ರಗತಿಪರರು ಓದಿಕೊಳ್ಳಲು ಸಿದ್ಧರಾಗಿರಲಿಲ್ಲ. ಹಾಗೆ ನೋಡಿದರೆ ಯಾವುದೇ ಗಂಭೀರ ವಿಷಯಗಳನ್ನಾಧರಿಸದೆ, ಕೇವಲ ವ್ಯಕ್ತಿಯ ಆರಾಧನೆ, ಯುದ್ಧೊನ್ಮಾದ, ಹುಸಿರಾಷ್ಟ್ರೀಯತೆಯ ಭಾವಾವೇಶ, […]

ಎತ್ತಣ ಸಾಗುವುದೀ ಎತ್ತಿನಹೊಳೆ?

ಕೇಸರಿ ಹರವೂ

 ಎತ್ತಣ ಸಾಗುವುದೀ ಎತ್ತಿನಹೊಳೆ? <p><sub> ಕೇಸರಿ ಹರವೂ </sub></p>

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದ ಎಲ್ಲ ಅರ್ಜಿ, ಕೇಸುಗಳನ್ನೂ ವಜಾ ಮಾಡಿ, ರಾಷ್ಟ್ರೀಯ ಹಸಿರು ನ್ಯಾಯಪೀಠ ಯೋಜನೆಗೆ ಪೂರ್ಣ ಹಸಿರು ನಿಶಾನೆ ತೋರಿಸಿದೆ. ಜೊತೆಗೆ ಈ ಭಾಗದ ಪಶ್ಚಿಮಘಟ್ಟದ ಪರಿಸರ ನಾಶವಾಗಬಾರದು ಎಂದೂ ಹೇಳಿದೆ. ಅದು ಹೇಗೆ ಸಾಧ್ಯ? ಸಾಮಾನ್ಯವಾಗಿ ನೀರಾವರಿ ಯೋಜನೆಯೊಂದರ ಶಂಕುಸ್ಥಾಪನೆ ಮಾಡುವುದು ಯೋಜನೆಯ ಆರಂಭದ ಭಾಗದಲ್ಲಿ. ಆದರೆ ಎತ್ತಿನಹೊಳೆ ತಿರುವು ಯೋಜನೆಯ ಶಂಕುಸ್ಥಾಪನೆಯನ್ನು ಎತ್ತಿನಹೊಳೆ ಬಳಿ ಮಾಡಲಿಲ್ಲ, ಯೋಜನೆಯ ನೀರು ಕೊನೆಗೆ ತಲುಪಬೇಕಾದ ಸ್ಥಳದಲ್ಲಿ ಮಾಡಲಾಯಿತು. ಇದರಿಂದಲೇ ನಮಗೆ ತಿಳಿಯಬೇಕು ಈ ಯೋಜನೆಯಲ್ಲಿ ಏನೋ […]

ಉದ್ಯೋಗ ಸರಪಳಿ ತುಂಡರಿಸಿದ ಜಿಂದಲ್ ಕಂಪನಿಯ ಕನ್ವೇಯರ್ ಬೆಲ್ಟ್

ಎಸ್.ಎಸ್.ಅಲಿ

 ಉದ್ಯೋಗ ಸರಪಳಿ ತುಂಡರಿಸಿದ ಜಿಂದಲ್ ಕಂಪನಿಯ ಕನ್ವೇಯರ್ ಬೆಲ್ಟ್ <p><sub> ಎಸ್.ಎಸ್.ಅಲಿ </sub></p>

ಸಂಡೂರು ತಾಲೂಕಿನ ತೋರಣಗಲ್ಲು ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಿರುವ ಜಿಂದಲ್ ಕಂಪನಿ ಈಗ ಅದಿರು ಸಾಗಾಣಿಕೆಗೆ ಆಧುನಿಕ ಕನ್ವೇಯರ್ ಬೆಲ್ಟ್ ಅಳವಡಿಸಿದೆ. ಇದು ಪರಿಸರಸ್ನೇಹಿ ಕ್ರಮ ಎಂಬುದೇನೋ ಸರಿ. ಆದರೆ ಇದರಿಂದ ಅದಿರು ಸಾಗಾಣಿಕೆ ಅವಲಂಬಿಸಿದ್ದ ಬಹುದೊಡ್ಡ ಕಾರ್ಮಿಕ ವರ್ಗದ ಬದುಕು ಮುರಿದು ಬೀಳುತ್ತದೆ. ಇವರಿಗೆ ಪರ್ಯಾಯ ಉದ್ಯೋಗ, ಬದುಕು, ಪರಿಹಾರ ಕಲ್ಪಿಸುವ ಹೊಣೆ ಯಾರದು? ಬಳ್ಳಾರಿ ಜಿಲ್ಲೆಯ ಸಂಡೂರು ಸುಂದರವಾದ ಊರು. ಉತ್ತರ ಕರ್ನಾಟಕದ ಬಯಲು ಸೀಮೆಯ ಮಲೆನಾಡು, ಹಸಿರು ಬೆಟ್ಟಗುಡ್ಡಗಳ ತಾಣ, ಉತ್ಕೃಷ್ಠ […]

ಮುಖ್ಯಚರ್ಚೆಗೆ ಪ್ರವೇಶ

ಇಂದಿನ ವೈದ್ಯಕೀಯ ರಂಗ ಸೇವೆಯೋ? ಸುಲಿಗೆಯೋ? ಪಾರಂಪಾರಿಕವಾಗಿ ವೈದ್ಯಕೀಯ ಸೇವೆಯನ್ನು ಅತ್ಯಂತ ಗೌರವದಿಂದ ನೋಡುತ್ತಾ ವೈದ್ಯರನ್ನು ದೇವರ ದೂತರೆಂದೇ ಕಂಡಿದ್ದೇವೆ. ಇದಕ್ಕೆ ತಕ್ಕಂತೆ ನಮ್ಮೆಲ್ಲರ ನಡುವೆ ನಿರಪೇಕ್ಷೆ ಯಿಂದ ಸೇವೆ ಮಾಡುತ್ತಾ ಬಂದಿರುವ ಹಲವಾರು ನಿಷ್ಕಳಂಕ ವೈದ್ಯರ ಕಥೆಗಳು ಇಂದಿಗೂ ಜನಜನಿತವಾಗಿವೆ. ಇಂತಹ ನೂರಾರು ವೈದ್ಯರು ನಮ್ಮೊಡನಿದ್ದಾರೆ. ಆದರೆ ಅತ್ಯಂತ ವ್ಯಾಪಕವಾಗಿ ವಾಣಿಜ್ಯೀಕರಣಗೊಂಡಿರುವ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸೇವೆಗೆ ಕಿಮ್ಮತ್ತಿಲ್ಲದಂತೆ, ಕರುಣೆಗೆ ಕವಡೆ ಕಾಸಿಲ್ಲದಂತೆ ಹಾಗೂ ಜೀವಕ್ಕೆ ಎಳ್ಳಷ್ಟೂ ದಯೆಯಿಲ್ಲದಂತೆ ಆಗಿದೆ. ಎಗ್ಗಿಲ್ಲದ ಲಾಭಕೋರತನದಲ್ಲಿ ಅಮಾಯಕ ಜನರನ್ನು […]

ವೈದ್ಯಕೀಯ ವೃತ್ತಿಯ ವ್ಯಾಪಾರೀಕರಣ ರೂಪಿಸಿದ ನೆಲೆಗಳು

ಡಾ.ಎನ್.ಎಸ್.ಗುಂಡೂರ

ವೈದ್ಯಕೀಯ ಕ್ಷೇತ್ರವನ್ನು ವಿಶ್ಲೇಷಿಸುವುದೆಂದರೆ ಸಮಕಾಲೀನ ವ್ಯಾಪಾರೀಕರಣದ ಬಗೆಯನ್ನು ಅರ್ಥಮಾಡಿಕೊಳ್ಳುವುದೇ ಎಂದರ್ಥ. ಇಷ್ಟು ದಿನ ವೈದ್ಯರು ಸೇವಾ ಮನೋಭಾವನೆಯನ್ನು ಹೊಂದಿದವರಾಗಿದ್ದು, ಈಗ ಏಕಾಏಕಿ ನೈತಿಕ ಅಧಃಪತನಕ್ಕೆ ಒಳಗಾಗಿದ್ದಾರೆಂದು ತಿಳಿಯಬಾರದು. ಈ ವೃತ್ತಿಯ ರೂಪಾಂತರದ ಹಿಂದೆ ಒಂದು ಐತಿಹಾಸಿಕ ಪ್ರಕ್ರಿಯೆ ಇದೆ. ಪತ್ರಿಕೆಗಳು ಸಮಕಾಲೀನ ಸಮಸ್ಯೆಗಳ ಮೇಲೆ ಪ್ರತಿಫಲಿಸಲು ಸಾರ್ವಜನಿಕ ವಲಯದ ಮುಂದೆ ಪ್ರಶ್ನೆಗಳನ್ನಿಡುವುದು ಉತ್ತಮವಾದ ಬೌದ್ಧಿಕ ನಡೆ. ಸಾರ್ವಜನಿಕರನ್ನು ಚಿಂತನೆಗೆ ಹಚ್ಚಿಸುವುದಲ್ಲದೆ, ಇಂತಹ ಪ್ರಯತ್ನಗಳು ನಮ್ಮ ಪ್ರಜ್ಞೆ, ಸಂವೇದನೆಗಳನ್ನು ರೂಪಿಸುತ್ತವೆಂಬುದು ಬಹುಮುಖ್ಯವಾದ ಪ್ರಯೋಜನ. ಈ ಬಾರಿ ಸಮಾಜಮುಖಿ ಪ್ರಸ್ತುತ […]

ಸೇವೆ ಸುಲಿಗೆಯಾದ ಬಗೆ

ಡಾ.ಎ.ಅನಿಲ್‍ಕುಮಾರ್

ಪ್ರಸಕ್ತ ಸುಲಿಗೆ ವ್ಯವಸ್ಥೆಯನ್ನು ಸರಿಪಡಿಸಲು ‘ವೈದ್ಯಕೀಯ ರಂಗದ ಕ್ರಾಂತಿ’ ಆಗದೇ ಗತ್ಯಂತರ ಇಲ್ಲ ಎನಿಸುತ್ತದೆ. ಅದಕ್ಕಾಗಿ ಶ್ರಮಿಸಲು ನಾನಂತೂ ಸಿದ್ಧ. ಜನಸಾಮಾನ್ಯರಲ್ಲಿ ಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು ಹೊಂದಿದ್ದ ವೈದ್ಯಕೀಯರಂಗ ಈಗ ದ್ವೇಷ, ಅನುಮಾನಗಳಿಂದ ಕೂಡಿದೆ. ಸೇವೆಯಾಗಿದ್ದ ವೈದ್ಯಕೀಯ ರಂಗ ಯಾವುದೇ ಸಂಶಯವಿಲ್ಲದೆ ಸುಲಿಗೆಯಾಗಿದೆ. ಇದು ಮನುಕುಲದ ಒಂದು ಬಹಳ ದೊಡ್ಡ ದುರಂತ. ಮಾನವನ ಸಾಮಾಜಿಕ ಬೆಳವಣಿಗೆಯ ಹಾಗೂ ಇತಿಹಾಸದ ಒಂದು ಕಪ್ಪು ಚುಕ್ಕೆ ಇಂದಿನ ವೈದ್ಯಕೀಯ ರಂಗ. ಈ ಲೇಖನವನ್ನು ಬರೆಯುವಾಗ ನನಗೆ ಒಬ್ಬ ವೈದ್ಯನಾಗಿ […]

ಆಯುರ್ವೇದದ ವಾಣಿಜ್ಯೀಕರಣ

ಡಾ.ವಸುಂಧರಾ ಭೂಪತಿ

 ಆಯುರ್ವೇದದ ವಾಣಿಜ್ಯೀಕರಣ <p><sub> ಡಾ.ವಸುಂಧರಾ ಭೂಪತಿ </sub></p>

ಎಲ್ಲರ ಕೈಗೆಟುಕುವಂತಿದ್ದ ಆಯುರ್ವೇದ ಇಂದು ‘ದುಬಾರಿ’ ಚಿಕಿತ್ಸೆಯಾಗಿ ಬದಲಾಗುತ್ತಿದೆ. ಪಂಚಕರ್ಮ ಅಂದರೆ ಕೇವಲ ಮಸಾಜ್ ಎಂಬ ಬಗೆಯಲ್ಲಿ ಚಿತ್ರಿತವಾಗುತ್ತಿದೆ; ಆರೋಗ್ಯ ಪ್ರವಾಸೋದ್ಯಮದ ಭಾಗವಾಗಿದೆ. ಕೇರಳ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಕಡೆ ರೆಸಾರ್ಟ್‍ಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ದುಬಾರಿ ಶುಲ್ಕ ತೆರುವವರ ಸಂಖ್ಯೆ ಕಡಿಮೆಯಿಲ್ಲ. ಆಯುರ್ವೇದ ಭಾರತೀಯ ಚಿಕಿತ್ಸಾ ಪದ್ಧತಿ. ಕೆಲವರಿಗೆ ಆಯುರ್ವೇದ ಅಂದ್ರೆ ‘ಮನೆಮದ್ದು’, ಇನ್ನು ಕೆಲವರಿಗೆ ‘ಪಂಚಕರ್ಮ’. ಮತ್ತೆ ಕೆಲವರಿಗೆ ಗಿಡಮೂಲಿಕೆಗಳ (ಹರ್ಬಲ್) ಚಿಕಿತ್ಸೆ. ಆದರೆ ಇದು ಅರ್ಧಸತ್ಯ. ಮೂರ್ನಾಲ್ಕು ದಶಕಗಳ ಹಿಂದೆ […]

‘ಮಾನವೀಯತೆಯೇ ನಮ್ಮ ಲಾಂಛನ’

ಸಂದರ್ಶನ: ಬಸವರಾಜ ಭೂಸಾರೆ

 ‘ಮಾನವೀಯತೆಯೇ ನಮ್ಮ ಲಾಂಛನ’ <p><sub> ಸಂದರ್ಶನ: ಬಸವರಾಜ ಭೂಸಾರೆ </sub></p>

1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ ಎಂಬುದು ಹೆಮ್ಮೆಯ ವಿಚಾರ. ಸ್ವತಃ ಹೃದಯರೋಗ ತಜ್ಞರಾಗಿರುವ ಡಾ.ಸಿ.ಎನ್.ಮಂಜುನಾಥ ಅವರು ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ ಆಸ್ಪತ್ರೆಗಳಿಗಿಂತಲೂ ಉತ್ತಮವಾಗಿ ಮುನ್ನೆಡೆಸುತ್ತಿದ್ದಾರೆ. ಸರಕಾರಿ ವೈದ್ಯ ಸಂಸ್ಥೆಯೊಂದರ ನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳು, ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸಲು ಸರಕಾರ ಮಾಡಬೇಕಾದ ಕೆಲಸಗಳನ್ನು ಕುರಿತ ಡಾ.ಮಂಜುನಾಥ ಅವರ ಅನುಭವದ ನುಡಿಗಳು ಇಲ್ಲಿವೆ. ಸರಕಾರಿ ಆಸ್ಪತ್ರೆಗಳನ್ನು ಮುನ್ನೆಡೆಸುವ ನಿಮ್ಮ ಒಂದು ದಶಕದ […]

ರೋಗಗ್ರಸ್ತ ವೈದ್ಯಶಿಕ್ಷಣಕ್ಕೆ ಚಿಕಿತ್ಸೆ ಬೇಕಿದೆ!

ಡಾ.ಎಚ್.ಎಸ್.ಅನುಪಮಾ

ಇಂದು ವೈದ್ಯಕೀಯ ಶಿಕ್ಷಣ ಮಾರಾಟಕ್ಕಿದೆ. ಅದೊಂದು ಹಣ ಸುಲಿಯುವ ಸದವಕಾಶವೆಂದೇ ಭಾವಿಸಲಾಗಿದೆ. ಶಿಕ್ಷಣವೇ ಹಾಗಾದರೆ ಸಾಮಾಜಿಕ ನೈತಿಕತೆಯ ಮೂಲಸೆಲೆಗಳೆಲ್ಲ ಭ್ರಷ್ಟಗೊಂಡ ಕಾಲದಲ್ಲಿ ಹೊಸತಲೆಮಾರಿನ ವೈದ್ಯರು ಕಾಲದ ಸಂಕಟಗಳನ್ನು, ರೋಗರುಜಿನಗಳ ಕಾರಣವಾದ ಬದುಕಿನ ಕಷ್ಟ ಮೂಲಗಳನ್ನು ಅರಿಯುವುದು ಹೇಗೆ? ಉತ್ತಮ ವೈದ್ಯರಾಗಲು ಜೀವ ಪ್ರೀತಿಯ ಸೂಕ್ಷ್ಮ ಗ್ರಹಿಕೆ ಇರಬೇಕು. ತಾವು ವ್ಯವಹರಿಸುತ್ತಿರುವುದು ಯಂತ್ರಗಳೊಡನಲ್ಲ, ರಕ್ತ ಮಾಂಸತುಂಬಿದ ಮನಸಿನೊಂದಿಗೆ ಎಂಬ ಅರಿವಿರಬೇಕು. ಪ್ರಕೃತಿ, ಸಮಯ, ತಾಳ್ಮೆ ಈ ಮೂರೂ ತನಗಿಂತ ಉತ್ತಮ ವೈದ್ಯರೆಂಬ ವಿನಯವಿರಬೇಕು. ಬದುಕಿನ ಬಗೆಗೆ ದೀರ್ಘ ಮುನ್ನೋಟ […]

ವೈದ್ಯರ ದೊಡ್ಡ ಬಿಲ್ಲು ಹಲ್ಲೆಗೆ ಕಾರಣ!

ಡಾ.ಸುನಂದಾ ಕುಲಕರ್ಣಿ

ನಮ್ಮ ದೇಶದಲ್ಲಿ ಮದುವೆಗೆ, ಮನೆಕಟ್ಟಲು, ಮುಂಜಿಗೆ, ನಾಮಕರಣಕ್ಕೆ, ಶಿಕ್ಷಣಕ್ಕೆ ಹೀಗೆ ಹಲವಾರು ಕಾರಣಕ್ಕೆ ಹಣ ತೆಗೆದು ಇಡುತ್ತಾರೆ. ಆದರೆ ತಮ್ಮ ಆರೋಗ್ಯಕ್ಕೆ ಅಂತ ಹಣ ತೆಗೆದಿಡುವವರು ಕಡಿಮೆ. ಆರೋಗ್ಯ ಮಾತ್ರ ಹಣವಿಲ್ಲದೆಯೇ ಆಗಬೇಕೆಂದು ಬಯಸುತ್ತಾರೆ. ವೈದ್ಯರು ಸಲಹೆ, ಚಿಕಿತ್ಸೆಗೆ ದುಡ್ಡು ಕೇಳಬಾರದು, ಕೇಳಿದರೂ ತೀರ ಕಡಿಮೆಯಿರಬೇಕೆಂಬುದು ಅನೇಕರ ವಾದ. ಎಲ್ಲ ರಂಗಗಳ ಜೊತೆ ವೈದ್ಯಕೀಯ ರಂಗದಲ್ಲಿಯೂ ಅಪಾರ ಪ್ರಗತಿಯಾಗಿದೆ. ಈ ಪ್ರಗತಿಗೆ ಅನುಸಾರವಾಗಿ, ರೋಗ ನಿದಾನ (ಅಂದರೆ ರೋಗದ ಕಾರಣಗಳನ್ನು ಕಂಡು ಹಿಡಿಯುವ ಪರೀಕ್ಷೆಗಳು) ಅವರಿಗೆ ಕೊಡುವ […]

ಸೇವೆಯೋ? ಸುಲಿಗೆಯೋ? ಸೀಮಿತ ನೋಟ ಸರಿಯಲ್ಲ!

ಡಾ.ಶ್ರೀನಿವಾಸ ಕಕ್ಕಿಲ್ಲಾಯ

ವೈದ್ಯರೆಲ್ಲರೂ ಧನಪಿಪಾಸುಗಳಾಗಿದ್ದಾರೆ, ವ್ಯಾಪಾರಿಗಳಾಗಿದ್ದಾರೆ, ಸುಲಿಗೆಕೋರರಾಗಿದ್ದಾರೆ ಎಂಬ ದೂಷಣೆಗಳು ಸಾಮಾನ್ಯವಾಗುತ್ತಿವೆ, ಜೋರಾಗುತ್ತಿವೆ. ರಾಜಕಾರಣಿಗಳು, ಕೆಲವು ಹಿರಿಯ ವೈದ್ಯರು, ಹೆಚ್ಚಿನ ಮಾಧ್ಯಮಗಳು ಮತ್ತು ಜನಸಾಮಾನ್ಯರು ಇದನ್ನೇ ಹೇಳುತ್ತಿರುತ್ತಾರೆ. ಪ್ರಸ್ತುತ ಸಮಾಜಮುಖಿ ಚರ್ಚೆಯೂ ಈ ಸೇವೆ ಮತ್ತು ಸುಲಿಗೆಗಳ ಬಗ್ಗೆಯೇ ಇದೆ.ವೈದ್ಯಕೀಯ ರಂಗವನ್ನು ಕೇವಲ ಸೇವೆ ಮತ್ತು ಸುಲಿಗೆಗಳೆಂದು ನೋಡುವುದರ ಬಗ್ಗೆ ಓರ್ವ ವೈದ್ಯನಾಗಿ ನನ್ನದಂತೂ ತೀವ್ರವಾದ ಆಕ್ಷೇಪವಿದೆ. ನಾನು 1982ರಲ್ಲಿ ಎಂಬಿಬಿಎಸ್‍ ವ್ಯಾಸಂಗಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಹೊಸಬರ ದಿನ ಏರ್ಪಾಡಾಗಿತ್ತು. ಆಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಅಧ್ಯಕ್ಷತೆ ವಹಿಸಿದ್ದರು.  ಅವರಿಗಿಂತ […]

ಸೇವೆಯ ಸೋಗು ಸುಲಿಗೆಯ ಕಳಂಕ

ಡಾ.ಅರವಿಂದ ಪಟೇಲ್

ವೈದ್ಯಕೀಯ ಕ್ಷೇತ್ರವನ್ನು ಸೇವೆಯ ವ್ಯಾಪ್ತಿಗೆ ಅಥವಾ ಸುಲಿಗೆಯ ಸುಪರ್ದಿಗೆ ಏಕಾಏಕಿ ಬಿಟ್ಟುಕೊಡಲು ಬರುವುದಿಲ್ಲ. ಇದು ನೂರಾರು ಹೆಣಿಗೆಗಳು ಇರುವ ಬಲೆಯೊಳಗೆ ಸಿಲುಕಿದ ಹುಳುವಿನ ಸ್ಥಿತಿಯಂತಿದೆ. ಯಾವುದೇ ಒಂದು ದೇಶದ ಪ್ರಗತಿಗೆ ಬಹು ಮುಖ್ಯ ಎನಿಸಿದ ಮಾನವ ಸಂಪನ್ಮೂಲವನ್ನು ಆರೋಗ್ಯವಂತ ಸ್ಥಿತಿಯಲ್ಲಿ ಇಡಲು ವೈದ್ಯಕೀಯ ಕ್ಷೇತ್ರದ ಕಾಣಿಕೆ ಬಹುದೊಡ್ಡದು. ಆದರೀಗ ಅದನ್ನು ಸೇವೆಯೋ ಸುಲಿಗೆಯೋ ಎನ್ನುವ ಶೀರ್ಷಿಕೆಯಡಿ ಚರ್ಚಿಸಬೇಕಾದ ಸ್ಥಿತಿಯೇ ವಿಷಾದಕರ ಸಂಗತಿ. ಮೂರು ದಶಕಗಳ ಹಿಂದೆ ವೈದ್ಯಕೀಯ ಕ್ಷೇತ್ರ ಅಕ್ಷರಶಃ ಸೇವೆ ಎಂಬುದನ್ನೇ ಧರ್ಮವನ್ನಾಗಿ ಪರಿಪಾಲಿಸಿದ ಅಂಗಳವಾಗಿತ್ತು. […]

ಆಸ್ಪತ್ರೆಗಳ ಕಾರ್ಯತಂತ್ರ ಗೊತ್ತಿರಲಿ!

ಡಾ.ಕೆ.ಕೆ.ಜಯಚಂದ್ರ ಗುಪ್ತಾ

ಆರು ದಶಕಗಳ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ವೈದ್ಯಕೀಯ ಜ್ಞಾನವನ್ನು ಸಂಪೂರ್ಣವಾಗಿ ಪಡೆಯಲು ಐದೂವರೆ ವರ್ಷಗಳ ಕಾಲ ಕಲಿಯಬೇಕಿತ್ತು. ಪ್ರತಿ ರೋಗಿಯನ್ನು ವಿವರವಾಗಿ ಪರೀಕ್ಷಿಸಿ, ರೋಗಿ ಹೇಳುವ ವಿವರಗಳು ಹಾಗೂ ವೈದ್ಯರು ಪತ್ತೆ ಮಾಡುವ ರೋಗ ಲಕ್ಷಣಗಳಿಂದಲೇ ರೋಗ ನಿರ್ಣಯ ಮಾಡಬೇಕಾಗಿತ್ತು. ಅತ್ಯಗತ್ಯವಾದ ಲ್ಯಾಬ್ ಪರೀಕ್ಷೆ, ಕ್ಷಕಿರಣ ಇತ್ಯಾದಿಗಳನ್ನು ಬಳಿಕವಷ್ಟೇ ಮಾಡಿಸಬೇಕಾಗಿತ್ತು. ಈಗ ಕಲಿಯುವ ಅವಧಿಯನ್ನು ನಾಲ್ಕೂವರೆ ವರ್ಷಕ್ಕೆ ಇಳಿಸಲಾಗಿದೆ. ‘ರೋಗಿಯನ್ನು ಉಪಚರಿಸು ರೋಗವನ್ನಲ್ಲ’ ಎಂಬ ಆದೇಶ ಹಾಗೂ ಅದರ ಪಾಲನೆ ಮಾಯವಾಗಿ ‘ಟ್ರೀಟ್ ದ ಡಿಸೀಸ್ ನಾಟ್ […]

ಪ್ರತಿಜೀವಕಗಳು ಮತ್ತು ಲಸಿಕೆ ಅತಿಯಾಯಿತೇ ಬಳಕೆ?

ಡಾ.ಪ್ರಕಾಶ ಸಿ.ರಾವ್

ಇಂದು ಪ್ರತಿಜೀವಕಗಳು ಹಾಗೂ ಲಸಿಕೆ ಬಳಕೆಯಲ್ಲಿ ಸುಲಿಗೆ ಅಪಾರವಾಗಿದೆ. ಸರಕಾರ ಮೌನ ಮುರಿಯಬೇಕಿದೆ. ಪ್ರತಿಜೀವಕಗಳು (ಆ್ಯಂಟಿಬಯಾಟಿಕ್ಸ್) ಹಾಗೂ ಲಸಿಕೆಗಳು ಜೀವರಕ್ಷಕಗಳು. ತೀವ್ರತರ ಸೋಂಕು ರೋಗಕ್ಕೆ ಪ್ರತಿಜೀವಕಗಳನ್ನು ಉಪಯೋಗಿಸುತ್ತಾರೆ. ಔಷಧಿಗಳ ಆವಿಷ್ಕಾರದಲ್ಲಿ ಈ ಔಷಧಿಗಳು ಪ್ರಮುಖ ಸ್ಥಾನ ಹೊಂದಿವೆ. ಲಸಿಕೆಗಳು ಮಕ್ಕಳಲ್ಲಿಯ ಮಾರಣಾಂತಿಕ ರೋಗಗಳನ್ನು ತಡೆಗಟ್ಟಲು ಸಹಾಯಕವಾಗುತ್ತವೆ. ಇಲ್ಲಿಯವರೆಗೆ ಕೋಟ್ಯಂತರ ಮಕ್ಕಳ ಜೀವ ಉಳಿಸಲು ಅವು ಸಹಾಯಕವಾಗಿವೆ. ಈ ಲಸಿಕೆ ಹಾಗೂ ಪ್ರತಿಜೀವಕಗಳು ಆಧುನಿಕ ಯುಗದಲ್ಲಿ ವಿಜ್ಞಾನದ ಅತ್ಯಮೂಲ್ಯ ಕೊಡುಗೆ ಹಾಗೂ ಜಗತ್ತಿನ ಎಲ್ಲೆಡೆ ಬಳಕೆಯಲ್ಲಿವೆ. ಪ್ರತಿಜೀವಕಗಳನ್ನು ಸಾಮಾನ್ಯ […]

ವೈದ್ಯಕೀಯಲೋಕದಲ್ಲಿ ಒಳಗೊಳ್ಳುವಿಕೆಯ ಅಗತ್ಯ

ಕಲ್ಗುಂಡಿ ನವೀನ್

ಇಂದು ಇರುವ ವ್ಯವಸ್ಥೆ ಜನಸಂಖ್ಯಾನುಸಾರವಾಗಿಲ್ಲ. ಈ ವೈಫಲ್ಯವನ್ನು ಖಾಸಗಿ ಆಸ್ಪತ್ರೆಗಳು ಬಳಸಿಕೊಳ್ಳುತ್ತಿವೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ, ಗುಣಮಟ್ಟ ಹೆಚ್ಚಬೇಕಾಗಿರುವುದು ಇಂದಿನ ತುರ್ತು ಅಗತ್ಯಗಳೊಲ್ಲೊಂದು. ಇಂದು ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ವೈದ್ಯಕೀಯ ಜಗತ್ತು ವ್ಯಾಪಾರೀಕರಣವಾಗುತ್ತಿರುವುದು ಬಹುಮುಖ್ಯವಾದುದು. ಎಲ್ಲವೂ ವ್ಯಾಪಾರವಾಗಿರುವ ಇಂದಿನ ದಿನಮಾನದಲ್ಲಿ ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಯಾಕೆ ಈ ಮಾತೆಂದರೆ ಇದು ನಮ್ಮ ದಿನನಿತ್ಯದ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ಇಂದು ಕಾಯಿಲೆ ಬೀಳುವುದನ್ನು ಯೋಚಿಸಿದರೇ ಜ್ವರ ಬರುವಂತಹ ಪರಿಸ್ಥಿತಿಯಿದೆ ಎನ್ನಲಾಗುತ್ತಿದೆ. ಈ ಕುರಿತಾಗಿ […]

ಸುಧಾರಣೆಗೆ ಸರ್ಕಾರ ಮನಸ್ಸು ಮಾಡಬೇಕು

ಡಾ.ಕೆ.ಯಂ.ಬೋಜಪ್ಪ

ಸರಕಾರ ಬಡ ರೋಗಿಗಳಿಗಾಗಿ ಎಲ್ಲಾ ರೀತಿಯಲ್ಲಿ ಟಾಪ್ ಕ್ಲಾಸ್ ಸರಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿ ಜನರ ಕಷ್ಟಗಳನ್ನು ನಿವಾರಿಸಲು ಮನಸ್ಸೇಕೆ ಮಾಡಬಾರದು? ಇಂದು ವೈದ್ಯರು ಮತ್ತು ಇಡೀ ವೈದ್ಯಕೀಯ ಕ್ಷೇತ್ರ ಜನರ ಸೇವೆಗೆ ಹುಟ್ಟಿಕೊಂಡಿದೆಯೋ ಇಲ್ಲ ಅವರ ಸುಲಿಗೆಗೆ ಹುಟ್ಟಿಕೊಂಡಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಜನರ ಈ ಭಾವನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಹೊರಗೆ ಹಾಕಲೇಬೇಕಾಗಿದೆ. ಇಲ್ಲವಾದರೆ ಇದೊಂದು ಆರೋಪವಾಗಿಯೇ ಮುಂದುವರಿಯಬಹುದು. ಆದುದರಿಂದ ದೇಶದ ಬುದ್ಧಿಜೀವಿಗಳು, ವೈದ್ಯಕೀಯ ಕ್ಷೇತ್ರದ ಅನುಬಂಧಗಳನ್ನು ವಿಧಿಸುವ ಅಧಿಕಾರಿಗಳು, ರಾಜಕಾರಣಿಗಳು, ಎಲ್ಲಕ್ಕಿಂತ […]

1 2 3