2ನೇ ಶೀತಲ ಸಮರ

ಪುರುಷೋತ್ತಮ

2ನೇ ಶೀತಲ ಸಮರ
ಪುರುಷೋತ್ತಮ

ಅಮೆರಿಕಾ-ಚೀನಾ ಸುಂಕಯುದ್ಧದಲ್ಲಿ 21ನೇ ಶತಮಾನದ ಶೀತಲ ಸಮರ ಪ್ರಾರಂಭವಾಗಿದೆಯೇ? 20ನೇ ಶತಮಾನದ ಅಮೆರಿಕಾ-ರಷ್ಯಾಗಳ ನಡುವಿನ ಶೀತಲ ಸಮರಕ್ಕೂ ಈಗಿನ ಅಮೆರಿಕಾ-ಚೀನಾ ಶೀತಲ ಸಮರಕ್ಕೂ ಇರುವ ವ್ಯತ್ಯಾಸಗಳೇನು? ಚೀನಾದ ಏಕಪಕ್ಷೀಯ ರಫ್ತು ಆರ್ಥಿಕತೆಯ ಮೇಲೆ ಅಮೆರಿಕ ಸೆಟೆದು ನಿಂತಿದೆ. ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರ ಮುಚ್ಚುಮರೆಯಿಲ್ಲದ ಕೊಂಕು ನುಡಿಗಳಲ್ಲಿ ಅಮೆರಿಕವು ದಶಕಗಳ ಕಾಲ ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಆಗಿರುವ ನಷ್ಟದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಟ್ರಂಪ್‍ರವರ ಹೇಳಿಕೆಯಂತೆ,“ಪ್ರತಿವರ್ಷ ನಮಗೆ ಈಗಾಗಲೇ $500 ಬಿಲಿಯನ್‍ಗಳಷ್ಟು ರಫ್ತು-ಆಮದು ಕೊರತೆಯಿದ್ದರೆ, ಚೀನಾದ […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ಸ್ಮಾರ್ಟ್‍ ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್) ಪೈಕಿ ಬಹಳ ಜನಪ್ರಿಯವಾಗಿರುವುದು ಆಂಡ್ರಾಯ್ಡ್ ನ ಹೆಗ್ಗಳಿಕೆ. ಗೂಗಲ್ ಸಂಸ್ಥೆ ನಿರ್ವಹಿಸುವ ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿ – ಆಂಡ್ರಾಯ್ಡ್ ಕ್ಯೂ – ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಇಂಗ್ಲಿಷಿನ ಅಕಾರಾದಿ ಕ್ರಮವನ್ನುಅನುಸರಿಸುವ ಆಂಡ್ರಾಯ್ಡ್ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುವುದು (ನೌಗಾಟ್, ಓರಿಯೋ, ಪೈ, ಹೀಗೆ) ಗೂಗಲ್‍ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಪ್ರತಿಯೊಂದು ಹೊಸ ಆವೃತ್ತಿ ಘೋಷಣೆಯಾದಾಗಲೂ ಅದಕ್ಕೆ ಯಾವ ತಿಂಡಿಯ ಹೆಸರು ಸಿಗಬಹುದು […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರ್ಚ್2019ರ ಗಣತಿಯಲ್ಲಿಒಟ್ಟು 11.7 ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದರೆ ಅವರಲ್ಲಿ ಶೇಕಡಾ 50ರಷ್ಟು ಭಾರತ ಮತ್ತುಚೀನಾ ದೇಶಗಳಿಂದ ಬಂದವರಾಗಿದ್ದಾರೆ. ಶೈಕ್ಷಣಿಕ ಕೋರ್ಸ್‍ಗಳಿಗಾಗಿ ನೀಡುವ ‘ಎಫ್’ ವೀಸಾ ಮತ್ತು ಔದ್ಯೋಗಿಕ ವೃತ್ತಿ ಶಿಕ್ಷಣಕ್ಕಾಗಿ ನೀಡುವ ‘ಎಮ್’ ವೀಸಾಗಳೆರಡನ್ನೂ ಒಟ್ಟು ಸೇರಿಸಿ ನೋಡಿದರೆ 2018ರ ಮಾರ್ಚ್‍ನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 3ರಷ್ಟು ಇಳಿಮುಖ ಕಂಡಿದೆ. ವಲಸೆ ವಿರೋಧಿ ನೀತಿ ಅನುಸರಿಸುತ್ತಿರುವ ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರ ಹುಚ್ಚು ಘೋಷಣೆಗಳ ಕಾರಣಕ್ಕೆ […]

ಸಮಾನ ಮನಸ್ಕ ನಾಗರಿಕರು ಸ್ಥಾಪಿಸಿದ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ

-ಚಾಣಕ್ಯ

ಸಮಾನ ಮನಸ್ಕ ನಾಗರಿಕರು ಸ್ಥಾಪಿಸಿದ  ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ
-ಚಾಣಕ್ಯ

ಸಮಾಜಮುಖಿಯ ಸಂಪಾದಕೀಯ ತಂಡವು ಬಿ.ಐ.ಸಿ.ಯ ಗೌರವ ನಿರ್ದೇಶಕರಾದ ವಿ.ರವಿಚಂದರ್ ಅವರೊಡನೆ ಈ ಸಂಸ್ಥೆಯ ಉದ್ದೇಶಗಳು, ಪ್ರಸ್ತುತತೆ ಮತ್ತು ಬೆಂಗಳೂರಿನ ನಾಗರಿಕರೊಡನೆ ಹೊಂದಿರುವ ಸಂಬಂಧಗಳ ಬಗ್ಗೆ ಮುಕ್ತ ಚರ್ಚೆಯನ್ನು ನಡೆಸಿತು. ಈ ಚರ್ಚೆಯ ಸಂಕ್ಷಿಪ್ತರೂಪ ಇಲ್ಲಿದೆ. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿ.ಐ.ಸಿ.)ವು 2005ರಲ್ಲಿ ಬೆಂಗಳೂರಿನ ಸಮಾನ ಮನಸ್ಕ ಪ್ರಜ್ಞಾವಂತ ನಾಗರಿಕರು ಸ್ಥಾಪಿಸಿದ ವೇದಿಕೆ. ಇಂದಿನ ಬೆಂಗಳೂರಿನ ಕ್ರಿಯಾತ್ಮಕತೆ, ಮಹತ್ವಾಕಾಂಕ್ಷೆ ಮತ್ತು ಭವಿಷ್ಯಮುಖಿ ಆಯಾಮಗಳನ್ನು ಪ್ರತಿನಿಧಿಸುವ ಈ ವೇದಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು, ಬುದ್ಧಿಜೀವಿಗಳು, ಕಲಾವಿದರು ಮತ್ತು ವೃತ್ತಿಪರರು ಪಾಲುದಾರರಾಗಿದ್ದಾರೆ. ಕಳೆದ […]

ದೃಶ್ಯಕಲೆಯ ಮಹರ್ಷಿ ಲಿಯೋನಾರ್ಡೋ ಡ ವಿಂಚಿ

-ಡಾ.ಎಂ.ಎಸ್.ಮೂರ್ತಿ

ದೃಶ್ಯಕಲೆಯ ಮಹರ್ಷಿ ಲಿಯೋನಾರ್ಡೋ ಡ ವಿಂಚಿ
-ಡಾ.ಎಂ.ಎಸ್.ಮೂರ್ತಿ

2019 ಮೇ 2ನೇ ತಾರೀಖಿಗೆ ಲಿಯೋನಾರ್ಡೋ ಡ ವಿಂಚಿ ತೀರಿಕೊಂಡು ಐನೂರು ವರ್ಷಗಳು ಗತಿಸಿದವು. ಈ ಸಂದರ್ಭದಲ್ಲಿ ಕಾಲಾತೀತ ಕಲಾವಿದನನ್ನು ಪ್ರವೇಶಿಸಲು ಬೇಕಾದ ವ್ಯಕ್ತಿ ಮತ್ತು ಕಲಾಕೃತಿಗಳ ಪರಿಚಯ ಇಲ್ಲಿದೆ. ಲಿಯೊನಾರ್ಡೋ ಡ ವಿಂಚಿ ಕಾಲದಾಚೆಗೆ ಪಯಣಿಸಿದ ಕಲಾವಿದ. ಕಾಲ-ದೇಶದ ಸಂಕೀರ್ಣ ರಚನೆ ಮಹತ್ವದ ಚಿಂತನೆಗೆ ತನ್ನನ್ನು ತಾನು ಒಡ್ಡಿಕೊಂಡ ಮಹರ್ಷಿ. ಈತನ ತಂದೆ ಸೆರ್ ಪಿಯರೊ ಇಟಲಿಯ ಪ್ರಖ್ಯಾತ ನೋಟರಿ; ತಾಯಿ ಕ್ಯಾಥರಿನಾ. ಲಿಯೋನಾರ್ಡೊ ಹುಟ್ಟಿದಾಗ ತಂದೆತಾಯಿ ಮದುವೆಯಾಗಿರುವುದಿಲ್ಲ. ಶ್ರೀಮಂತ ಮನೆತನದ ಪಿಯರೊ ಕುಟುಂಬದೊಂದಿಗೆ ವಾಸಿಸುತ್ತಿದ್ದ […]

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ

-ಮಂಜುನಾಥ ಡಿ.ಎಸ್.

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ
-ಮಂಜುನಾಥ ಡಿ.ಎಸ್.

2014ರಲ್ಲಿ ಜಾರಿಯಾದ ಶಾಸನದ ಪ್ರಕಾರ ಕಾರ್ಪೋರೇಟ್ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಹೊರುವುದು ಕಡ್ಡಾಯ. ಈ ಸಂಸ್ಥೆಗಳು ತಮ್ಮ ವಾರ್ಷಿಕ ನಿವ್ವಳ ಲಾಭದಲ್ಲಿ ಕನಿಷ್ಠ ಶೇಕಡಾ ಎರಡರಷ್ಟನ್ನು ಸಾಮಾಜಿಕ ಚಟುವಟಿಕೆಗಳಿಗೆ ವ್ಯಯಿಸಬೇಕು. ಸಂಸ್ಥೆಯೊಂದರ ಸಿ.ಎಸ್.ಆರ್. ಕಾರ್ಯಕ್ರಮಗಳ ಜಾರಿಯಲ್ಲಿ ಸ್ವತಃ ತೊಡಗಿಸಿಕೊಂಡಿರುವ ಲೇಖಕರು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದವರು ಆ ಸಮಾಜಕ್ಕೆ ಅಲ್ಪವನ್ನಾದರೂ ಮರಳಿ ನೀಡುವ ಸತ್ಸಂಪ್ರದಾಯ ಭಾರತಕ್ಕೆ ಹೊಸದೇನಲ್ಲ. ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಅನೇಕ ನಿದರ್ಶನಗಳು ನಮ್ಮ […]

ಭಾರತದ ಭ್ರಷ್ಟ ಆರೋಗ್ಯ ವ್ಯವಸ್ಥೆಯ ಬುನಾದಿ

ಮೂಲ: ಋತುಪ್ರಿಯ ಪ್ರಾಚೀನ್ ಕುಮಾರ್ ಘೋಡಾಜ್‍ಕರ್ ಆರೋಗ್ಯ ಕ್ಷೇತ್ರದ ಭ್ರಷ್ಟಾಚಾರ ಕುರಿತು ಸಮಗ್ರ ಮಾಹಿತಿ ಹೊಂದಿರುವ ‘ಹೀಲರ್ಸ್ ಆರ್ ಪ್ರಿಡೇಟರ್ಸ್’ ಕೃತಿಯನ್ನು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿದೆ. ಅಮರ್ತ್ಯಸೇನ್ ಮುನ್ನುಡಿ ಬರೆದಿರುವ ಈ ಪುಸ್ತಕದ ಸಂಪಾದಕರು ಸಮಿರನ್ ನಂದಿ, ಕೇಶವ ದೇವರಾಜು ಮತ್ತು ಸಂಜಯ್ ನಾಗ್ರಾಲ್. ಸಮಾಜಮುಖಿ ಮುಖ್ಯಚರ್ಚೆಗೆ ಪೂರಕವಾಗಿ ಈ ಪುಸ್ತಕದಿಂದ ಆಯ್ದ ಲೇಖನದ ಸಂಗ್ರಹಾನುವಾದವನ್ನು ಇಲ್ಲಿ ನೀಡಿದ್ದೇವೆ. ಇಂದಿನ ದಿನಗಳಲ್ಲಿ ಆರೋಗ್ಯ ವ್ಯವಸ್ಥೆಯ ಭ್ರಷ್ಟಾಚಾರ ಎಂಬುದು ಜಾಗತಿಕ ವಿದ್ಯಮಾನ. ಆಯಾ ದೇಶದ ಆರೋಗ್ಯ ವ್ಯವಸ್ಥೆ […]

ಬ್ರೆಕ್ಟ್ ಪರಿಣಾಮ! ಒಂದು ರಾಜಕೀಯ ಕಾವ್ಯ

ಸಂದೀಪ್ ಈಶಾನ್ಯ

ಬ್ರೆಕ್ಟ್ ಪರಿಣಾಮ! ಒಂದು ರಾಜಕೀಯ ಕಾವ್ಯ
ಸಂದೀಪ್ ಈಶಾನ್ಯ

ಮಾತುಗಳಿಗೆ ಕಾವ್ಯದ ಲಯವಿದ್ದರೆ ಅಪಾಯವಲ್ಲ, ಕಾವ್ಯಗಳಿಗೆ ಮಾತುಗಳ ಪೋಷಾಕು ಬಿದ್ದರೆ ಕಾವ್ಯದ ದೃಷ್ಟಿಯಿಂದ ಅಪಾಯ. ರಾಜಕೀಯ ಕಾವ್ಯಗಳು ಅತ್ಯಂತ ಸಂಕೀರ್ಣವಾದವು. ಆ ಬಗೆಯ ಕಾವ್ಯಗಳನ್ನು ಬರೆಯುವ ಕವಿಯನ್ನು ಯಾವುದೋ ಒಂದು ನಿರ್ದಿಷ್ಟವಾದ ಸಿದ್ಧಾಂತ ಅಥವಾ ರಾಜಕೀಯ ಪಕ್ಷಗಳ ಧೋರಣೆಯನ್ನು ಪ್ರತಿನಿಧಿಸುವ ಮುಂಚೂಣಿ ನಾಯಕನಂತೆ ನೋಡುವ ಅಪಾಯವೇ ಹೆಚ್ಚು. ರಾಜಕೀಯ ಕಾವ್ಯಗಳನ್ನು ಮತ್ತೊಂದು ತೆರನಾದ ದೃಷ್ಟಿಕೋನದಿಂದ ನೋಡುವುದು ಸಾಧ್ಯವಾದರೆ, ಆ ಎಲ್ಲಾ ಕಾವ್ಯಗಳು ನಿರ್ದಿಷ್ಟ ಕಾಲಮಾನದ ರಾಜಕೀಯ ದೋಷಗಳನ್ನು ವಿರೋಧಿಸಿ ರಚಿತವಾಗುವ ಕಾವ್ಯಗಳ ಪರಿಮಿತಿಗೊಳಗೆ ಸಿಲುಕಿರುತ್ತವೆ. ಆ ಬಗೆಯ […]

ಅಧಿಕಾರಿ ದೃಷ್ಟಿಕೋನದಲ್ಲಿ ಆಡಳಿತಾತ್ಮಕ ಇತಿಹಾಸ

ಮೋಹನದಾಸ್

ಅಧಿಕಾರಿ ದೃಷ್ಟಿಕೋನದಲ್ಲಿ ಆಡಳಿತಾತ್ಮಕ ಇತಿಹಾಸ
ಮೋಹನದಾಸ್

ಈ ಪುಸ್ತಕವು ಸಂಸದೀಯ ಪ್ರಜಾಪ್ರಭುತ್ವದಲ್ಲಿನ ಬದಲಾವಣೆಯ ಪ್ರಕ್ರಿಯೆಯನ್ನು ಗುಮಾಸ್ತನೊಬ್ಬನ ದೃಷ್ಟಿಕೋನದಲ್ಲಿ ನೋಡಿದಂತಿದೆ. ಇಂಗ್ಲಿಷ್ ಮಾಧ್ಯಮದ ವೃತ್ತಪತ್ರಿಕೆಯಲ್ಲಿ ವರದಿಯಾದ ಘಟನೆಗಳನ್ನು ಮೆಲುಕು ಹಾಕಿದಂತಿದೆ… ಹಲವಾರು ವರ್ಷಗಳ ಕಾಲ ಬೆಂಗಳೂರು ನಗರದ ಆಡಳಿತಾತ್ಮಕ ಹೊಣೆ ಹೊಂದಿದ್ದ ಲೇಖಕರು ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಲೂ ಅಸಮರ್ಥವಾದಂತಿದೆ. ಒಟ್ಟಾರೆ ಪುಸ್ತಕದ ಉದ್ದೇಶವು ಇದ್ದದ್ದನ್ನು ಇದ್ದಂತೆ ವಿವರಿಸುವ ಮಿತಿ ಮೀರಿದಂತಿಲ್ಲ. ಕಳೆದ ಎಪ್ಪತ್ತು ವರ್ಷಗಳಿಂದಲೂ ಸ್ವತಂತ್ರ ಭಾರತದಲ್ಲಿ ನಾವು ಅಧಿಕಾರಶಾಹಿಯಿಂದ ಆಡಳಿತಕ್ಕೆ ಒಳಪಟ್ಟಿದ್ದರೂ ಈ ಕಾರ್ಯಾಂಗದ ಬಗೆಗಿನ ಗಭೀರ ಅಧ್ಯಯನಗಳು ಕಡಿಮೆಯೇ. ನಿವೃತ್ತಿಯ ನಂತರ […]

ಗಿರಮಿಟಿಯಾ ಗಾಂಧಿ ಸತ್ಯಾಗ್ರಹ ಚಳವಳಿಯ ಪೂರ್ವತಾಲೀಮು

ಪ್ರೊ.ಶಿವರಾಮಯ್ಯ

ಮೋಹನದಾಸ ಕರಮಚಂದ ಗಾಂಧಿಯವರ ದಕ್ಷಿಣ ಆಫ್ರಿಕಾದ ವಾಸ ಮತ್ತು ಅಲ್ಲಿ ಅವರು ನಡೆಸಿದ ಹೋರಾಟಗಳ ದೀರ್ಘ ಕಥಾನಕ `ಗಿರಮಿಟಿಯಾ’. ಬೇರೆ ದೇಶಗಳಿಗೆ ಹೋಗಿ ಜೀತದಾಳುಗಳಾಗಿ ದುಡಿಯಬೇಕಾಗಿ ಬಂದವರನ್ನು ಗಿರಮಿಟಿಯಾ (ಅಗ್ರಿಮೆಂಟ್‍ನ ಅಪಭ್ರಂಶ) ಎಂದು ಕರೆಯುತ್ತಾರೆ. ದಕ್ಷಿಣ ಆಪ್ರಿಕಾದಲ್ಲಿದ್ದ ಇಂತವರ ಸ್ಥಿತಿಗತಿಗಳನ್ನು ಬದಲಿಸಲು ಮೋಹನದಾಸರು ನಡೆಸಿದ ಸತ್ಯಾಗ್ರಹ ಚಳವಳಿಗಳ ದಾಖಲೆಗಳನ್ನು ಅಧ್ಯಯನ ಮಾಡಿ ಮತ್ತು ಆ ಪ್ರದೇಶಗಳಿಗೆ ಭೇಟಿ ಕೊಟ್ಟು ಕ್ಷೇತ್ರಕಾರ್ಯ ನಡೆಸಿ ಗಿರಿರಾಜ ಕಿಶೋರ ಅವರು ಈ ಕಾದಂಬರಿಯನ್ನು 1999ರಲ್ಲಿ ರಚಿಸಿರುತ್ತಾರೆ. ಬಿರ್ಲಾ ಪ್ರತಿಷ್ಠಾನದ ವ್ಯಾಸ ಸಮ್ಮಾನವನ್ನು […]

ಹೊಸ ಪುಸ್ತಕ

ಅರಿವೇ ಪರಮಾಣು ಮಹಾಂತಪ್ಪ ನಂದೂರ ಪುಟ: 208, ಬೆಲೆ: ರೂ.200 ಪ್ರಕಾಶಕರು: ಪಟ್ಟಣ ಪ್ರಕಾಶನ, 11, ‘ಬಸವ ಆಸರೆ’, ರಣಕಪುರ ಲೇಔಟ್, ಶಾಂತಿನಗರ, ಬೆಂಗೇರಿ ವಿಸ್ತೀರ್ಣ, ಹುಬ್ಬಳ್ಳಿ-580026. ದೂ: 9242205442 ಹನ್ನೆರಡನೆ ಶತಮಾನ ಶಿವಶರಣರು ಬಾಳಿ ಬದುಕಿದ ಸುವರ್ಣ ಯುಗ. ಆ ಕಾಲಘಟ್ಟದಲ್ಲಿ ಬದುಕಿದ ಬಹುತೇಕರು ವಚನ ಸಾಹಿತ್ಯದ ಮೂಲಕ ಜೀವನದ ಅನುಭವಗಳನ್ನು ಜಗತ್ತಿನ ಜನರಿಗೆ ಉಣಬಡಿಸಿದರು. ಅಂಥವರಲ್ಲಿ ಅಕ್ಕನಾಗಮ್ಮ ಕೂಡ ಒಬ್ಬರು. ಲೇಖಕ ಮಹಾಂತಪ್ಪ ಅವರು ಅಕ್ಕ ನಾಗಮ್ಮನವರ ಜೀವನ ಚರಿತ್ರೆಯನ್ನು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. […]

ಕುಮಾರವ್ಯಾಸನ ಭಾರತ ಕಥಾಮಂಜರಿ ಅಹಂಕಾರ ನಿರಶನದ ರೂಪಕ

ಕೃಷ್ಣಮೂರ್ತಿ ಹನೂರು

ಕುಮಾರವ್ಯಾಸನ ಭಾರತ ಕಥಾಮಂಜರಿ ಅಹಂಕಾರ ನಿರಶನದ ರೂಪಕ
ಕೃಷ್ಣಮೂರ್ತಿ ಹನೂರು

ಕುಮಾರವ್ಯಾಸನ ಪ್ರಕಾರ ಭೀಮನು ಅರಣ್ಯವನ್ನೇ ಬಗಿದು ಹೊಕ್ಕುಬಿಟ್ಟ. ಆದರೆ ಭೀಮನ ಈ ಬಲವು ಮುಂದೆ ಎದುರಾಗುವ ವಾನರನ ಬಾಲದ ಒಂದು ರೋಮವನ್ನು ಅಲ್ಲಾಡಿಸದಂತಾಯಿತು! ಆಂಜನೇಯನ ಬಾಲದ ರೋಮವು ಒಂದು ತೃಣ ತೂಕವಾದರೆ ಇತ್ತ ಭೀಮನ ಅಸದಳ ಆಡಂಬರ ಬೆಟ್ಟದಷ್ಟು. ಇವೆರಡರ ಬಲಾಬಲಗಳ ತುಲನೆ ಓದುಗರ ಕಣ್ಮುಂದೆಯೇ ಜರುಗುತ್ತದೆ. ಕುಮಾರವ್ಯಾಸನು ತಾನು ಸೃಷ್ಟಿಸುವ ಪಾತ್ರಗಳನ್ನು ಸಾಮಾನ್ಯ ರೂಪಿನಲ್ಲಿಯೂ ಅಂತೆಯೇ ಅಸಾಮಾನ್ಯ ರೂಪದಲ್ಲಿಯೂ ನೋಡಬಲ್ಲವನಾಗಿರುತ್ತಾನೆ. ಸೌಗಂಧಿಕಾ ಪುಷ್ಪವನ್ನು ತರಲು ಹೊರಟ ಭೀಮನಿಗೆ ಅರಣ್ಯದಲ್ಲಿ ಕಂಡ ಕಪಿ ಮೊದಲಿಗೆ ಸಾಮಾನ್ಯ ರೂಪಿ. […]

ಸಿನಿಮಾ ಟಾಕೀಸು

ರಹಮತ್ ತರೀಕೆರೆ

ಸಿನಿಮಾ ಟಾಕೀಸು
ರಹಮತ್ ತರೀಕೆರೆ

ಬಾಲ್ಯವನ್ನು ವರ್ಣರಂಜಿತಗೊಳಿಸಿದ ಟಾಕೀಸುಗಳನ್ನು ಈಚೆಗೆ ಊರಿಗೆ ಹೋದಾಗ ನೋಡಿದೆ. ಮತಾಪು ಉರಿದ ದೀಪಾವಳಿ ಹೂಕುಂಡಗಳಂತೆ, ಮಂತ್ರಶಕ್ತಿ ಕಳೆದುಕೊಂಡ ದಂಡಗಳಂತೆ ಕಂಡವು. ನಮ್ಮೂರಿನಲ್ಲಿ ಅದರ ಕಣ್ಣುಗಳಂತೆ ಎರಡು ಸಿನಿಮಾ ಟಾಕೀಸುಗಳಿವೆ ‘ಭಾರತ’-‘ವಿನಾಯಕ’. ಹಳಬರು ಇವನ್ನು ಸ್ಥಾಪನ ಚರಿತ್ರೆಯ ಆಧಾರದಲ್ಲಿ ಹಳೇಟಾಕೀಸ್ ಹೊಸಟಾಕೀಸ್ ಎನ್ನುವರು. ಇವೆರಡೂ ಊರೆದೆಯ ಮೇಲೆ ಹಾದುಹೋಗಿರುವ ಬೆಂಗಳೂರು-ಹೊನ್ನಾವರ ರಸ್ತೆಯ ಎರಡು ದಿಕ್ಕಿನಲ್ಲಿವೆ. `ಭಾರತ’ದಲ್ಲಿ ಸಮಸ್ತ ಭಾರತೀಯ ಭಾಷಾ ಚಿತ್ರಗಳು; `ವಿನಾಯಕ’ದಲ್ಲಿ ಹೆಚ್ಚಾಗಿ ಕನ್ನಡ ಸಿನಿಮಾ. ಇವು ಜನರ ಅಭಿರುಚಿಗೆ ಅನುಸಾರ ಸಿನಿಮಾ ಹಾಕುತ್ತಿದ್ದವೊ, ಜನರ ಅಭಿರುಚಿಯನ್ನೂ […]

ನಮ್ಮ ಊರಿನ ಮಾತಿನ ಚತುರರು

ಪ್ರೊ.ಜಿ.ಶರಣಪ್ಪ

ನಮ್ಮ ಊರಿನ ಮಾತಿನ ಚತುರರು
ಪ್ರೊ.ಜಿ.ಶರಣಪ್ಪ

ನಮ್ಮ ಊರಿನ ಜನರೇ ವಿಚಿತ್ರ. ಅದು ಎಲ್ಲಿ ಮಾತು ಕಲಿತುಕೊಂಡು ಬಂದರೋ ಏನೋ ಸಂದರ್ಭಕ್ಕೆ ತಕ್ಕಂತಹ ಮಾತುಗಳನ್ನು ಆಡಿ ಕೇಳುಗರನ್ನು ಮೈಮರೆಯಿಸಿ ಬಾಯಿ ಮುಚ್ಚುವಂತೆ ಮಾಡಿಬಿಡುತ್ತಾರೆ. ಅವರ ಮಾತು ಸಂದರ್ಭಕ್ಕೆ ತಕ್ಕಂತೆ ಬಹಳ ಸೊಗಸಾಗಿರುತ್ತದೆ. ನನ್ನ ಊರು ಸೂರಗೊಂಡನಹಳ್ಳಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿದೆ. ಸುಮಾರು ಮೂರು ನೂರು ಮನೆಗಳಿರುವ ಈ ಗ್ರಾಮದಲ್ಲಿ, ಎಲ್ಲಾ ಜನಾಂಗದವರಿದ್ದಾರೆ. ಪ್ರತಿ ಒಂದು ಜನಾಂಗಕ್ಕೂ ಅವರದೇ ಆದ ದೇವರು. ಯಾವುದೇ ದೇವರ ಹಬ್ಬ-ಜಾತ್ರೆ ಆದರೂ ಅಲ್ಲಿಗೆ ಪ್ರತಿ ಒಂದು ಜಾತಿಯವರೂ ಕಲೆತು […]

ಕಬಡ್ಡಿ ಎಂಬ ದೈಹಿಕ ಕಸರತ್ತಿನ ಆಟ

ಕೆ.ವಿ.ಪರಮೇಶ್

ಕಬಡ್ಡಿ ಎಂಬ ದೈಹಿಕ ಕಸರತ್ತಿನ ಆಟ
ಕೆ.ವಿ.ಪರಮೇಶ್

ಕಬಡ್ಡಿ ಪ್ರಸಕ್ತ ವಿಶ್ವಕಪ್ ಮಟ್ಟದಲ್ಲಿ ನಡೆಯುವಷ್ಟರಮಟ್ಟಿಗೆ ಖ್ಯಾತಿ ಪಡೆದಿದೆ. ಏಷ್ಯಾಕಪ್ ಜೊತೆಗೆ ವಿಶ್ವಕಪ್‍ನಲ್ಲಿಯೂ ಭಾರತವೇ ಫೇವರೇಟ್ ಎನ್ನುವುದು ನಮ್ಮವರ ಪ್ರಬಲತೆಗೆ ಹಿಡಿದ ಕೈಗನ್ನಡಿ. ಹೌದು ಕಬಡ್ಡಿ ನಿಜಕ್ಕೂ ದೈಹಿಕ ಕಸರತ್ತಿನ ಗೇಮ್. ಯಾವ ವಯಸ್ಸಿನವರು ಬೇಕಿದ್ದರೂ ಆಡಬಹುದಾದ ಈ ಆಟ ಅಪ್ಪಟ ಗ್ರಾಮೀಣ ಕ್ರೀಡೆ ಎನ್ನುವುದು ನಿಸ್ಸಂಶಯ. ಈವತ್ತಿಗೆ ಈ ಕ್ರೀಡೆ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದರೆ ಅದು ಭಾರತೀಯರ ಹೆಮ್ಮೆ. ಇತ್ತೀಚೆಗೆ ಹೊನಲುಬೆಳಕಿನಲ್ಲಿ ಆಡುವ ಕಬಡ್ಡಿ ಮತ್ತಷ್ಟು ಪ್ರಖ್ಯಾತಿ ಪಡೆದಿದೆ. ಇದು ಎಷ್ಟು ರೋಚಕವೋ ಅಷ್ಟೇ […]

ಕನ್ನಡ ಚಿತ್ರರಂಗದ ದುಃಸ್ಥಿತಿ ಯಾರನ್ನು ದೂರುವುದು?

ಡಾ.ಎಂ.ಮಹ್ಮದ್‍ಬಾಷ ಗೂಳ್ಯಂ

ಕನ್ನಡ ಚಿತ್ರರಂಗದ ದುಃಸ್ಥಿತಿ ಯಾರನ್ನು ದೂರುವುದು?
ಡಾ.ಎಂ.ಮಹ್ಮದ್‍ಬಾಷ ಗೂಳ್ಯಂ

ವರ್ಷಕ್ಕೆ 250 ರಿಂದ 300 ಕನ್ನಡ ಚಿತ್ರಗಳು ರಿಲೀಸ್ ಆಗುತ್ತವೆ. ಇದರಲ್ಲಿ 50 ರಿಂದ 60 ಚಿತ್ರಗಳು ಬೇರೆಬೇರೆ ಕಾರಣಕ್ಕೆ ಬಿಡುಗಡೆ ಆಗೋದೇ ಇಲ್ಲ. ಪರವಾಗಿಲ್ಲ ಅಂತ ಹೇಳುವ ಚಿತ್ರಗಳ ಸಂಖ್ಯೆ 10 ರಿಂದ 20 ಮಾತ್ರ. ಇದರಲ್ಲೂ ಇಣುಕಿ ನೋಡಿದಾಗ 10 ರಿಂದ 15 ಸಿನಿಮಾ ಕತೆಗಳು ಅನ್ಯಭಾಷೆಯವಾಗಿರುತ್ತವೆ. ಶೇ.3 ರಷ್ಟು ಚಿತ್ರಗಳು ಮಾತ್ರ ಪಾಸಾಗುತ್ತವೆ. ಬಾಕಿ ಚಿತ್ರಗಳೆಲ್ಲಾ ತೋಪು. ಒಂದು ಕಾಲಕ್ಕೆ ಇಡೀ ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರರಂಗ ಹೆಸರುವಾಸಿ. ಇಲ್ಲಿ ರಿಲೀಸ್ ಆದ […]

ಕಮಲೇಂದ್ರನ ಹಲವು ಅವತಾರ!

ಬಾಲಚಂದ್ರ ಬಿ.ಎನ್.

ಐದನೇ ಕಮಲೇಂದ್ರ ಕೆಲವರನ್ನು ಗುರುತು ಹಿಡಿದ: ಕೀರ್ತಿಶೇಷ ಸರ್ದಾರ್ ಸುಂದ್ರಬಾಬು ನಾಯ್ಡು, ಸಮರಸಿಂಹ ಗೌಡೇಂದ್ರ, ವೀರಮಾತಾ ಬ್ಯಾನರ್ಜಿ, ಮಾಯಾ ಯುದ್ಧವತೀ…. ಇವರೊಡನೆ ಬೆರಳು ಚೀಪುತ್ತಾ ನಿಂತಿದ್ದ ರಾವುಲೇಶ್ವರ! ಐತಿಹಾಸಿಕ ಕುರುಕ್ಷೇತ್ರ ಕದನ ನಡೆದು ಅಕ್ಷೋಹಿಣಿ ಸೈನ್ಯಗಳು ಧ್ವಂಸವಾದ ಮೂರು ದಿನಗಳ ಬಳಿಕ, ದೆಹಲಿಯ ಶೆಖೆಯಲ್ಲಿ ಇಳಿಯುತ್ತಿದ್ದ ಬೆವರನ್ನೂ ಲೆಕ್ಕಿಸದೆ ರಾಜಭವನವೊಂದರ ಮುಂದೆ ಮೈಲಿಯುದ್ದದ ಸಾಲೊಂದು ನಿಂತಿತ್ತು. ಆಂಧ್ರಾಧೀಶ ಸರ್ದಾರ್ ಸುಂದ್ರಬಾಬುನಾಯ್ಡು, ವಂಗದ ವೀರಮಾತಾ ಬ್ಯಾನರ್ಜಿ, ಉತ್ತರದೇಶದ ಮುಲಾಮುಸಿಂಹ ಮತ್ತು ಮಾಯಾಯುದ್ಧವತಿ, ಕಾಶ್ಮೀರದೇಶದ ಅಬುದುಲ್ಲಾ ಮುಂತಾದವರೊಡನೆ ಕರುನಾಡಿನ ಸಮರಸಿಂಹ […]

ಚಾದಂಗಡಿ ಪ್ಯಾನೆಲ್

-ಎಸ್. ಮೆಣಸಿನಕಾಯಿ

ನಮ್ಮ ಸಂಗಪ್ಪಜ್ಜನ ಚಾದಂಗಡಿ ಅಂದರ ಅದು ಯಾವುದೇ ಟಿವಿ ಚಾನೆಲ್‍ ಪ್ಯಾನೆಲ್ ಡಿಸ್ಕಶನ್ಗೂ ಕಡಿಮೆ ಇಲ್ಲದ ಹರಟೆ ಕಟ್ಟೆ. ‘ನಾನೂ ಒಮ್ಮೆರ ಎಲೆಕ್ಷನ್ಗೆ ನಿಲ್ಲಬೇಕಂತ ಮಾಡೀನಿ’ಅಂತ ಚಾ ಕುಡಕೊಂತ ಹೇಳಿದ ನಮ್ಮ ಕಡೆಮನಿ ಮಲ್ಲಪ್ಪ. ರಾಜಕೀಯ ಅಂದರ ಸಿಡಿಮಿಡಿಗೊಳ್ತಿದ್ದ ಮಲ್ಲಪ್ಪನ ಮಾರ್ನಿಂಗ್ ರಾಗ ಯಾಕೋ ಬದಲಾದಂಗ ಕಾಣಿಸ್ತು. ‘ಯಾಕಪಾ ಮಲ್ಲಪ್ಪ ಇವತ್ತ ನಿನ್ನ ರಾಗನ ಬದಲಾಗೈತೆಲ್ಲ…ಎಲೆಕ್ಷನ್ ನಡಿವಾಗ ಕುಂದಗೋಳ ಕಡೆ ಏನರ ಹೋಗಿದ್ದೆನು ಮತ್ತ..?’ ಕೆಂಡಕ್ಕ ಸೆದಿ ಹಾಕದ ನಾಗಪ್ಪ,‘ಕುಂದಗೋಳಕ್ಕ ಅಷ್ಟ ಅಲ್ಲ ಅದಕ್ಕಿಂತ ಮೊದಲ ಮಂಡ್ಯಕ್ಕೂ […]

ಕವಿತೆ

ಕವಿತೆ

ಬೀದಿಯಲ್ಲಿ ಒಬ್ಬ ಮನುಷ್ಯ ಹೊರಟಿದ್ದಾನೆ ಕಾಲೆಳೆದುಕೊಂಡು ಬೀದಿಯಲ್ಲಿ ಜೇಬಿನಿಂದ ತೆಗೆದ ಬೀಡಿಯನ್ನು ಹೊತ್ತಿಸಿಕೊಂಡು ಕಡು ಬಿಸಿಲಲ್ಲಿ ಇತಿಹಾಸದ ಕಾರ್ಗತ್ತಲು ಹಕ್ಕಿಗಳ ಕಲರವ ಹಸಿರು ಹೊದ್ದ ಮರಗಳತ್ತಲೂ ಧ್ಯಾಸವಿಲ್ಲ ಅವನಿಗೆತಂತಿಯ ಮೇಲೆ ತೂಗುವ ಹಕ್ಕಿ ಅವನನ್ನು ಕಂಡಿತೋ ಇಲ್ಲವೋ ಹೇಳಲಾಗದು ಆದರೆ ಗಾಳಿ ಅವನ ಬೀಡಿಯ ಧೂಮವನು ಹೊತ್ತೊಯ್ಯುತಿದೆ ತಾ ಸಾಗುವ ಎಲ್ಲೆಯವರೆಗೂಅವನು ಬೀದಿಯಲ್ಲಿ ಹೊರಟಿದ್ದಾನೆ ಹೆಗಲಿಗೆ ಸುಖ ದುಃಖದ ಮೂಟೆ ಹೊತ್ತು ಒಟ್ಟಿನಲ್ಲಿ ಅವನ ಹೋಗುವಿಕೆಯಿಂದ ಯಾರಿಗೂ ಏನೂ ಆಗಬೇಕಿಲ್ಲ ಅವನತ್ತ ಯಾರ ಗಮನವೂ ಇಲ್ಲ ದೇವತೆಗಳಿಗೂ, […]