ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ?

-ಪ್ರೊ.ದೇವಿ ಶ್ರೀಧರ್

 ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ? <p><sub> -ಪ್ರೊ.ದೇವಿ ಶ್ರೀಧರ್ </sub></p>

-ಪ್ರೊ.ದೇವಿ ಶ್ರೀಧರ್ ಅನು: ಹೇಮಂತ್ ಎಲ್. ವಿಶ್ವವ್ಯಾಪಿಯಾಗಿರುವ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲು ಸಂಚಾರ ನಿಯಂತ್ರಣ ಹೇರುವುದು ಮತ್ತು ಎಲ್ಲಾ ದೇಶಗಳಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಬಹುಮುಖ್ಯ. ವಸಂತಕಾಲದ ಅಸ್ತವ್ಯಸ್ತತೆಗೆ ಈಗಾಗಲೇ ಹಲವಾರು ಮಂದಿ ತಮ್ಮ ಆಶಾಭಾವನೆಗಳನ್ನು ಹೊಂದಿಸಿಕೊಂಡಿದ್ದರೂ, ಮತ್ತಷ್ಟು ಜನ ಸದ್ದಿಲ್ಲದೆ ಬೇಸಿಗೆಗೆ ಅಥವಾ ಶರತ್ಕಾಲದ ಒಳಗೆ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ (ಯುನೈಟೆಡ್ ಕಿಂಗ್ಡಮ್- ಯುಕೆ)ನ ಪರಿಸ್ಥಿತಿ ಸುಧಾರಿಸಬಹುದೆಂಬ ಅಂದಾಜಿನಲ್ಲಿದ್ದಾರೆ. ಅವರ ಆತ್ಮವಿಶ್ವಾಸವಾದರೂ ಎಷ್ಟರ ಮಟ್ಟಿಗೆ ಸರಿ? ಲಾಕ್ ಡೌನ್‍ನಂತಹ ಕ್ರಮಗಳತ್ತ ಮತ್ತೆ ಜಾರದಿರಲು […]

ಸಂಪಾದಕೀಯ

ಸಂಪಾದಕೀಯ

ಏಕಮುಖೀ ಓಟ ಮತ್ತು ನೋಟ ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಮಾಜದ ನೆಮ್ಮದಿಯನ್ನು ಕಲಕುತ್ತಿರುವುದಷ್ಟೇ ಅಲ್ಲ; ಇಲ್ಲಿ ಏನು ನಡೆಯುತ್ತಿದೆ, ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದು ಕಲ್ಪನೆಗೂ ನಿಲುಕುತ್ತಿಲ್ಲ.  ಅರಾಜಕತೆಯ ಅಪಾಯ ಅರಿವಿಲ್ಲದಂತೆಯೇ ಅಮರಿಕೊಳ್ಳುತ್ತಿರುವ ಸಂದರ್ಭ. ಓದುವ ಕವಿತೆ, ಕೂಗುವ ಘೋಷಣೆ, ತರುವ ಕಾನೂನು, ಮಾಡುವ ಭಾಷಣ, ನೀಡುವ ಹೇಳಿಕೆ, ಕೈಗೊಳ್ಳುವ ಕ್ರಮ… ಎಲ್ಲವೂ ಪರಸ್ಪರರ ಅಸ್ತ್ರಗಳು. ಯಾವುದರ ಸತ್ಯಾಸತ್ಯತೆಯನ್ನೂ ಪರಿಶೀಲಿಸುವ ವ್ಯವಧಾನವಾಗಲೀ, ಮುಕ್ತ ಮನಸ್ಸಾಗಲೀ ಯಾರಲ್ಲೂ ಇಲ್ಲ; ಎಲ್ಲರಿಗೂ ಯಾವ ಅಸ್ತ್ರ ಝಳಪಿಸಿ ಎದುರಾಳಿಯನ್ನು ಎಷ್ಟು ಹೆದರಿಸಲು, […]

ಮುಕ್ತ ಸಮಾಜದಲ್ಲಿ ಪ್ರತಿಭಟಿಸುವ ಹಕ್ಕು

- ರಾಜೀವ ಭಾರ್ಗವ

ಯಾವುದೇ ದೇಶದ ಸಂವಿಧಾನವು ಅದರ ಶಬ್ದಾರ್ಥದಿಂದ ತನ್ನ ಕಸುವನ್ನು ಪಡೆದುಕೊಳ್ಳುವುದಿಲ್ಲ.  ಅದು ಚಾರಿತ್ರಿಕ ಅನುಭವಗಳ ಮೂಸೆಯಿಂದ ಬಸಿದ ಭಾವಾರ್ಥಗಳಿಂದ ಪಡೆಯುತ್ತದೆ. – ರಾಜೀವ ಭಾರ್ಗವ ನಾವೀಗ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಸಾರ್ವಜನಿಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ನಾಗರಿಕ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಬಗ್ಗೆ ಮರುಚಿಂತಿಸಬೇಕೆಂದು ಒತ್ತಾಯಿಸಿ ಸಾವಿರಾರು ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅಂತಹ ಸಾರ್ವಜನಿಕ ಪ್ರತಿಭಟನೆಗಳು ಒಂದು ಮುಕ್ತವಾದ ಮತ್ತು ಪ್ರಜಾತಂತ್ರೀಯ ಸಮಾಜದ ಹೆಗ್ಗುರುತುಗಳು. ಅಂತಹ ಸಮಾಜವು ಅಧಿಕಾರಸ್ಥರು […]

ರಾಷ್ಟ್ರಪ್ರೇಮದ ಪುನರ್ ವ್ಯಾಖ್ಯಾನ: ಅತ್ಯಗತ್ಯ

- ಡಾ.ಜ್ಯೋತಿ

 ರಾಷ್ಟ್ರಪ್ರೇಮದ ಪುನರ್ ವ್ಯಾಖ್ಯಾನ: ಅತ್ಯಗತ್ಯ <p><sub> - ಡಾ.ಜ್ಯೋತಿ </sub></p>

ಸಾರ್ವಜನಿಕ ಮಟ್ಟದಲ್ಲಿ ಸರಕಾರದ ನಿಲುವುಗಳನ್ನು ಚರ್ಚಿಸಿದಷ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗುತ್ತದೆ. ಅಲ್ಲದೆ, ಈ ಚರ್ಚೆಗಳ ಫಲವಾಗಿ ಮಾಡಲ್ಪಡುವ ತಿದ್ದುಪಡಿಗಳು, ಜನಸಾಮಾನ್ಯರಿಗೆ ವ್ಯವಸ್ಥೆಯಲ್ಲಿ ವಿಶ್ವಾಸ ಹೆಚ್ಚಿಸುವುದಲ್ಲದೆ, ದೇಶದ ಪ್ರಗತಿಗೆ ಕೈಜೋಡಿಸುವಂತೆ ಪ್ರೇರೇಪಿಸುತ್ತವೆ. – ಡಾ.ಜ್ಯೋತಿ ಪಕ್ಷವೊಂದು ಅತ್ಯಧಿಕ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಏನೆಲ್ಲ ಏಕಮುಖ ನಿರ್ಧಾರಗಳನ್ನು ನಾಗರಿಕರ ಮೇಲೆ ಹೇರಬಹುದೋ, ಅದೆಲ್ಲವನ್ನು ಪ್ರಸ್ತುತ ನಮ್ಮ ಕೇಂದ್ರ ಸರಕಾರ ಮಾಡುತ್ತಿದೆ. ಇಂತಹ ಸ್ವಕೇಂದ್ರಿತ ಅಧಿಕಾರ ಧೋರಣೆ ನಮ್ಮ ದೇಶದಲ್ಲಿ ಹೊಸತೇನಲ್ಲ. ಹಿಂದಿನ ಕಾಂಗ್ರೆಸ್ ಸರಕಾರಗಳು ಕೂಡ ಸಂವಿಧಾನವನ್ನು ತಮಗೆ […]

ಹುಟ್ಟು ಹೋರಾಟಗಾರ ಚಿಮೂ

ಡಾ.ಟಿ.ಗೋವಿಂದರಾಜು ಅವರ ಡಾ.ಎಂ.ಚಿದಾನಂದ ಮೂರ್ತಿ ಕುರಿತ ಲೇಖನ ನನಗೆ ಮೆಚ್ಚಿಗೆಯಾಯಿತು. ಈ ಲೇಖನ ಚಿಮೂ ಕುರಿತ ನನ್ನ ಹಿಂದಿನ ನೆನಪುಗಳನ್ನು ಪುನರ್‍ಮನನ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸಿತು. ನಾನು ಅವರ ನೇರ ಶಿಷ್ಯನಲ್ಲ. ಆದರೆ ಅವರ ಬಗ್ಗೆ ಮತ್ತು ಎಂ.ಎಂ.ಕಲಬುರ್ಗಿಯವರ ಬಗ್ಗೆ ನನ್ನ ಕಾಲೇಜು ದಿನಗಳಲ್ಲೇ (1972) ಸಾಕಷ್ಟು ತಿಳಿದು ಅವರ ಅಭಿಮಾನಿಯಾಗಿಬಿಟ್ಟೆ. ಅನಂತರ ನಾನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಕಲಿಯುವಾಗ ಮೌಖಿಕ ಪರೀಕ್ಷೆಯ ಪರೀಕ್ಷಕರಾಗಿ ಚಿಮೂ ಬಂದಿದ್ದರು. ನಾನು ಅಪಾರವಾಗಿ ಪ್ರೀತಿಸುವ ಗುರುವನ್ನು ಕಂಡದ್ದು ಆಗ. ಚಿಮೂ […]

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರವ್ಯಾಪಿ ಪರಿಣಾಮ ಬೀರಬಹುದೇ?

- ಡಾ.ಹರೀಶ್ ರಾಮಸ್ವಾಮಿ

 ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ  ರಾಷ್ಟ್ರವ್ಯಾಪಿ ಪರಿಣಾಮ ಬೀರಬಹುದೇ? <p><sub> - ಡಾ.ಹರೀಶ್ ರಾಮಸ್ವಾಮಿ </sub></p>

ಧ್ರುವೀಕರಣದ ರಾಜಕಾರಣ, ರಾಷ್ಟ್ರವಾದಿ ರಾಜಕಾರಣ, ಜಾತಿ ರಾಜಕಾರಣ, ಓಟುಗಳ ಕ್ರೋಡೀಕರಣದ ರಾಜಕಾರಣಗಳನ್ನು ‘ಕಾಮ್ ಕಾ ರಾಜಕಾರಣ’ ಮಾದರಿ ಮೀರಿನಿಲ್ಲುವ ಶಕ್ತಿಹೊಂದಿದೆ ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ. -ಡಾ.ಹರೀಶ್ ರಾಮಸ್ವಾಮಿ ಚುನಾವಣೆಗಳು ದೇಶದ ಹಣೆಬರಹ ಬದಲಿಸುವ ದಿಕ್ಸೂಚಿಗಳು. ಆದರೆ ಎಲ್ಲಾ ಚುನಾವಣೆಗಳು ಈ ನಿಟ್ಟಿನಲ್ಲಿ ಪ್ರಭಾವಿಯಾಗಿರದೆ ದೇಶಕ್ಕೆ ಮಾರಕವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಫೆಬ್ರವರಿ 11, 2020ರಂದು ಹೊರಬಿದ್ದ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಭಾರತದ ಪಾಲಿಗೆ ದಿಕ್ಸೂಚಿಯಾದಂತಿದ್ದರೂ, ಇದು ರಾಷ್ಟ್ರವ್ಯಾಪಿ ಪರಿಣಾಮ ಬೀರಿ ಭಾರತದ ಪ್ರಸಕ್ತ ಸಾಂಸ್ಕತಿಕ ಹಾಗೂ […]

ಕೇಂದ್ರ ಸರ್ಕಾರದ ಬಜೆಟ್ ಖಾಸಗಿ ವಲಯದ ವೈಭವೀಕರಣ ಜನರ ಬದುಕಿನ ಅಭದ್ರೀಕರಣ

- ಟಿ.ಆರ್.ಚಂದ್ರಶೇಖರ್

ಪ್ರಸಿದ್ಧ ಆರ್ಥಿಕ ತಜ್ಞೆ ಜಯತಿ ಘೋಷ್ ಅವರೇನೋ ಬಜೆಟ್ಟಿನಲ್ಲಿರುವ ಪ್ರತಿ ಅಂಕಿಯೂ ‘ಸುಳ್ಳು’ ಎಂದು ಹೇಳಿದ್ದಾರೆ. ಹಾಗೆ ಹೇಳಲು ನನಗೆ ಧೈರ್ಯವಿಲ್ಲ. ಆದರೆ ನನಗೆ ಈ ಬಗ್ಗೆ ಅನುಮಾನಗಳಿವೆ. – ಟಿ.ಆರ್.ಚಂದ್ರಶೇಖರ್ ನಮ್ಮ ಆರ್ಥಿಕತೆಯು ಇಂದು ಎಂದೂ ಕಂಡರಿಯದ ಬಿಕ್ಕಟ್ಟ್ಟು-ಇಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದು ಕೇವಲ ಜಿಡಿಪಿ ಬೆಳವಣಿಗೆಯ ಕುಸಿತಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ಸರ್ಕಾರವೇನೋ ವ್ಯಸನದಂತೆ ಐದು ಟ್ರಿಲಿಯನ್ ಡಾಲರ್ ಜಿಡಿಪಿ ಬಗ್ಗೆ, ರೈತರ ವರಮಾನವನ್ನು ದುಪ್ಪಟ್ಟು ಮಾಡುವುದರ ಬಗ್ಗೆ, ಆರ್ಥಿಕ ಪುನಶ್ಚೇತನದ ಬಗ್ಗೆ ಮಾತನಾಡುತ್ತಿದೆ. ಫೆಬ್ರವರಿ […]

ಕಲಬುರಗಿ ಸಾಹಿತ್ಯ ಸಮ್ಮೇಳನ ಹೇಗಿತ್ತು? ಹೇಗಿರಬೇಕು?

ಸಮಾಜಮುಖಿಯ ಪ್ರಶ್ನೆಗೆ ತೂರಿಬಂದ ಉತ್ತರಗಳು ಇಲ್ಲಿವೆ. ಕನ್ನಡತೇರು ಮತ್ತು ಎರಡನೇ ಹೆಂಡತಿ! ‘ಸ್ವಚ್ಛ ಭಾರತದ’ ಗೊಡವಿಗೆ ಹೋಗದ ಹೆಬ್ಬಂಕ ಬೆಳಿಗ್ಗೆಬೆಳಿಗ್ಗೆ ಚೆಂಬು ಹಿಡ್ಕೊಂಡು ಹೊರ್ಕಡಿಗೆ ಹೊಂಟಿದ್ದ. ಗೆಳೆಯ ಒಕ್ಕಣ್ಣ ಕಾಣುತ್ತಲೆ ಗಕ್ಕನೇ ನಿಂತುಕೊಂಡ. ‘ಯಾಕೋ ಹೆಬ್ಬಂಕ ಎಲ್ಲಿ ಹೋಗಿದ್ದಿ? 2-3 ದಿನ ಕಾಣ್ಸಲೇ ಇಲ್ಲ’ ‘ಕಲ್ಬುರ್ಗಿಗೆ ಹೋಗಿದ್ದೆ’ ‘ಹೌಂದಾ… ಶರಣಬಸಪ್ಪಗ ಕಾಯಿ-ಕರ್ಪೂರ ಮಾಡ್ಸಕ ಹೋಗಿದ್ದೇನು?’ ‘ಇಲ್ಲ, ಮೈ ತಿಂಡಿ ಇಟ್ಟಿತ್ತು. ಬಂದೇನವಾಜ್ ದರ್ಗಾದ ಅಂಗಳದಾಗ ಉಳ್ಯಾಡಿ ಬರಾಕ ಹೋಗಿದ್ದೆ’ ಕ್ಷಣ ಹೊತ್ತು ಮೌನ. ಇಬ್ಬರು ಮಾತಾಡಲಿಲ್ಲ. ಹೆಬ್ಬಂಕನೆ […]

ಯಡಿಯೂರಪ್ಪ ಕುಟುಂಬ ರಾಜಕಾರಣ ರೇವಣ್ಣ ಪಾತ್ರದಲ್ಲಿ ವಿಜಯೇಂದ್ರ!

- ರವಿ ಮಾಳೇನಹಳ್ಳಿ

 ಯಡಿಯೂರಪ್ಪ ಕುಟುಂಬ ರಾಜಕಾರಣ  ರೇವಣ್ಣ ಪಾತ್ರದಲ್ಲಿ ವಿಜಯೇಂದ್ರ! <p><sub> - ರವಿ ಮಾಳೇನಹಳ್ಳಿ </sub></p>

ಈಗ ಯಡಿಯೂರಪ್ಪ ಹೆಸರಿಗೆ ಮಾತ್ರ ಮುಖ್ಯಮಂತ್ರಿ; ಆಡಳಿತದ ಜುಟ್ಟು ಇರುವುದು ಅವರ ಪುತ್ರ ಬಿ.ವೈ.ವಿಜಯೇಂದ್ರ ಕೈಲಿ ಎಂಬ ಮಾತುಗಳು ಬಹಿರಂಗವಾಗಿಯೇ ಕೇಳಿಬರುತ್ತಿವೆ. – ರವಿ ಮಾಳೇನಹಳ್ಳಿ ಯಾವುದೇ ಹಸ್ತಕ್ಷೇಪ, ಪಕ್ಷಪಾತದ ನಿಲುವುಗಳಿಲ್ಲದ, ಒಂದು ಕೋಮಿಗೆ ಅಥವಾ ಸಮುದಾಯದ ಓಲೈಕೆ ಇಲ್ಲದೇ ಆಡಳಿತ ನಡೆದರೆ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯ. ಹೀಗಾದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಸಿಗಲು ಇದು ದಾರಿದೀಪವಾಗಬಲ್ಲದು. ಒಂದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ ಗಟ್ಟಿಗೊಳ್ಳಲು ಈ ಅಂಶಗಳು ಅತ್ಯಗತ್ಯವಾಗಿರುತ್ತವೆ. ಆದರೆ, ಇಂದಿನ ನಮ್ಮ […]

ಪ್ರತಿಭಟನೆಯ ಭಿನ್ನ ಸ್ವರೂಪ ಬೆಂಗಳೂರಿನ ‘ಬಿಲಾಲ್ ಬಾಗ್’

- ಶರೀಫ್ ಕಾಡುಮಠ

ಬೆಂಗಳೂರಿನ ಟಾನರಿ ರಸ್ತೆಯ ಬಿಲಾಲ್ ಮಸೀದಿ ಪಕ್ಕದ ರಸ್ತೆಯಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿರುವ ವಿನೂತನ ಹೋರಾಟ ‘ಬಿಲಾಲ್ ಬಾಗ್’ ಪ್ರತಿಭಟನೆ ಎಂದು ಗುರುತಿಸಿಕೊಂಡಿದೆ. ಇದಕ್ಕೆ ದೆಹಲಿಯ ಹಲವು ಮಹಿಳಾ ಸಂಘಟನೆಗಳು ನಡೆಸುತ್ತಿರುವ ‘ಶಹೀನ್ ಬಾಗ್’ ಪ್ರತಿಭಟನೆಯೇ ಪ್ರೇರಣೆ ಮತ್ತು ಮಾದರಿ. -ಶರೀಫ್ ಕಾಡುಮಠ ಮಹಿಳಾ ಸಂಘಟನೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಸೇರಿ ನಡೆಸುತ್ತಿರುವ ‘ಬಿಲಾಲ್ ಬಾಗ್’ ಪ್ರತಿಭಟನೆ ಈಗಾಗಲೇ ಎರಡು ವಾರ ದಾಟಿದೆ. ಹಗಲಿರುಳು ನಿರಂತರವಾಗಿ ನಡೆಯುತ್ತಿರುವ ಹಲವಾರು ಸೃಜನಶೀಲ ಚಟುವಟಿಕೆಗಳು ಈ ಪ್ರತಿಭಟನೆಯ ಭಾಗವಾಗಿದ್ದು, ದಿನದಿಂದ […]

ಮುಖ್ಯಚರ್ಚೆಗೆ ಪ್ರವೇಶ

ನಮ್ಮ ಹಿಂದುಳಿದಿರುವಿಕೆಗೆ ಕಾರಣವಾಗಿರುವ ಭಾರತೀಯ ಸಂಸ್ಕೃತಿಯ ಬದಲಾವಣೆಗೆ ಸಾವಿರ ವರ್ಷಗಳಾದರೂ ಬೇಕೆ..? ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಡಿನ ಅಗ್ರಗಣ್ಯ ಉದ್ಯಮಿ ಎನ್.ಆರ್.ನಾರಾಯಣಮೂರ್ತಿ ಅವರು ಭಾರತೀಯ ಸಂಸ್ಕೃತಿಯು ಅರ್ಹತೆ, ಪ್ರಾಮಾಣಿಕತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಸೋತಿದೆ ಹಾಗೂ ಈ ಕಾರಣದಿಂದ ದೇಶದಲ್ಲಿನ ವೈಜ್ಞಾನಿಕ ಸಂಶೋಧನೆಯು ಶೈಶವಾವಸ್ಥೆಯಲ್ಲಿದೆ ಎಂದು ಹೇಳಿದ್ದಾರೆ. ತನ್ನ ಅತ್ಯುತ್ತಮ ಮೇಧಾವಿಗಳನ್ನು ದೇಶದಲ್ಲಿಯೇ ಉಳಿಸಿಕೊಳ್ಳಲು ಆಗದಿರುವ ಕಾರಣಕ್ಕೆ ನಾರಾಯಣಮೂರ್ತಿಯವರು ಸಂಶೋಧನೆಗೆ ಪೂರಕ ವಾತಾವರಣ ಇಲ್ಲದಿರುವುದು ಹಾಗೂ ಸಂಶೋಧನೆಗೆ ಬೇಕಿರುವ ಸರ್ಕಾರಿ ಸವಲತ್ತಿನ ವಿಳಂಬವನ್ನು ಗುರುತಿಸಿದ್ದಾರೆ. […]

ಸಾರ್ವಜನಿಕ ಒಳಿತಿ’ನ ಮರುಪರಿಶೀಲನೆಯ  ಅಗತ್ಯ

-ಮೋಹನದಾಸ

ನಮ್ಮ ಸಂಸ್ಕೃತಿ-ಮನೋಭಾವನೆ ಬದಲಾಗಲು ಸಾವಿರ ವರ್ಷಗಳದರೂ ಬೇಕು ಎಂಬ ನಾರಾಯಣಮೂರ್ತಿಯವರ ಮಾತಿನ ಸತ್ಯಾಸತ್ಯತೆ ಹುಡುಕುವ ಜೊತೆಗೆ ಅವರ ಮಾತಿನಲ್ಲಿರುವ ಕಾಳಜಿ, ಆತಂಕ ಮತ್ತು ಹತಾಶೆಯನ್ನು ನಾವು ಗಮನಿಸಬೇಕಿದೆ. ನಮ್ಮ ಸಾಂಸ್ಕೃತಿಕ ಹಿನ್ನೆಲೆ ನಮಗೆ ಗುಣಾತ್ಮಕವಾಗಿ ನೀಡಿರುವ ಅಂಶಗಳ ಜೊತೆಯಲ್ಲಿಯೇ ನಮಗೆ ನೀಡಿರುವ ಮಾನಸಿಕ ರೋಗಗಳನ್ನು ಗುರುತಿಸುವ ಕೆಲಸ ಇಂದು ಆಗಬೇಕಿದೆ. ಅನವಶ್ಯಕವಾಗಿ ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುವ ಬದಲು ಹಲವು ಸಂಸ್ಕೃತಿಗಳ ಮಿಶ್ರಣವಾದ ಭಾರತೀಯತೆಯನ್ನು ಒಪ್ಪಿಕೊಂಡು ಸಾಂವಿಧಾನಿಕವಾಗಿ ‘ಸಾರ್ವಜನಿಕ ಒಳಿತು’ ಎಂಬ ಅಮೂರ್ತವನ್ನು ಸತ್ಯವಾಗಿಸಬೇಕಿದೆ. -ಮೋಹನದಾಸ ನಾರಾಯಣಮೂರ್ತಿಯವರ ಹೇಳಿಕೆ […]

ಸಾರ್ವಜನಿಕ ಸತ್ಯ-ಮೌಲ್ಯಗಳ ಅನುಷ್ಠಾನ ಎಲ್ಲಾ ತಲೆಮಾರುಗಳ ಕರ್ತವ್ಯ

-ಪೃಥ್ವಿದತ್ತ ಚಂದ್ರಶೋಬಿ

ನಾರಾಯಣಮೂರ್ತಿಯವರು ಗುರುತಿಸಿರುವ ಮಿತಿಗಳು ನಮ್ಮ ದೇಶದಲ್ಲಿ ಇಂದು ಎದ್ದುಕಾಣುತ್ತವೆ. ಹಾಗಾಗಿ ಅವರೇನು ಮಿಥ್ಯೆಗಳನ್ನು ಹರಡುತ್ತಿಲ್ಲ. ಆದರೆ ಅವರು ಭಾರತದ ಮಿತಿಗಳನ್ನು ವಿವರಿಸಲು ಮುಂದಿಡುತ್ತಿರುವ ಸಾಂಸ್ಕೃತಿಕ ವಿಶ್ಲೇಷಣೆಯು ಐತಿಹಾಸಿಕ ನೆಲೆಯಲ್ಲಿ ನೋಡಿದಾಗ ನಮ್ಮ ಮನ ಮುಟ್ಟುವುದಿಲ್ಲ. -ಪೃಥ್ವಿದತ್ತ ಚಂದ್ರಶೋಬಿ 1ಹಿಂದುಳಿದಿರುವಿಕೆಗೆ ಸಾಂಸ್ಕೃತಿಕ ಕಾರಣಗಳಿವೆಯೆ? ಶ್ರಮದ ನೈತಿಕತೆಯೇನು? ಈ ಪ್ರಶ್ನೆಗಳನ್ನು ಕುರಿತಂತೆ ಐತಿಹಾಸಿಕವಾಗಿ ಚಿಂತಿಸುವುದು ಹೇಗೆ? ಸಂಸ್ಕೃತಿ ಮತ್ತು ಆರ್ಥಿಕ ಅಭಿವೃದ್ಧಿಗಳ ನಡುವಣ ಸಂಬಂಧವನ್ನು ಮೊದಲ ಬಾರಿಗೆ ಶಾಸ್ತ್ರೀಯವಾಗಿ ವಿಶ್ಲೇಷಿಸಿದವನು ಜರ್ಮನ್ ಸಮಾಜಶಾಸ್ತ್ರಜ್ಞನಾದ ಮ್ಯಾಕ್ಸ್ ವೆಬರ್ (1864-1920). ಅವನು ಕೇಳಿಕೊಂಡಿದ್ದು […]

ಭಾರತೀಯ ಮನಸ್ಸಿನ ಹಂಬಲ ಮೊನಚಾಗುವುದಲ್ಲ, ಅರಳುವುದು!

- ಲಕ್ಷ್ಮೀಶ ತೋಳ್ಪಾಡಿ

ಒಂದು ಮಟ್ಟದಲ್ಲಿ ಮೂರ್ತಿಯವರು ಸತ್ಯವನ್ನೇ ಹೇಳಿದ್ದಾರೆ ಎಂದು ನಾನು ಒಪ್ಪುವೆ. ಆದರೆ ಈ ಸತ್ಯವು ‘ವ್ಯಾವಹಾರಿಕ ಸತ್ಯ’! ವ್ಯಾವಹಾರಿಕ ಸತ್ಯವನ್ನೇ ಪಾರಮಾರ್ಥಿಕ ಸತ್ಯವೆಂದು ಬಿಂಬಿಸಲು ಮೂರ್ತಿಯವರು ಯತ್ನಿಸುತ್ತಿದ್ದಾರೆ. ಇದು ಸಮಸ್ಯಾತ್ಮಕ. – ಲಕ್ಷ್ಮೀಶ ತೋಳ್ಪಾಡಿ  ನಾರಾಯಣಮೂರ್ತಿಯವರು ನಮ್ಮ ದೇಶದ ಸದ್ಯದ ಪರಿಸ್ಥಿತಿಯ ಬಗೆಗೆ -ಮುಖ್ಯವಾಗಿ ವೈಜ್ಞಾನಿಕ ಸಂಶೋಧನೆಯ ಕ್ಷೇತ್ರದಲ್ಲಿ- ಮತ್ತು ಸರ್ಕಾರೀ ವಲಯದ ನಮ್ಮ ಅಧಿಕಾರೀವರ್ಗದ ಸಂವೇದನಾ ದಾರಿದ್ರ್ಯದ ಬಗೆಗೆ- ಒಟ್ಟು ನಮ್ಮ ಜನರ ಮಾನಸಿಕತೆಯ ಬಗ್ಗೆ ತೀರಾ ನಿರಾಶೆಯನ್ನು ಉಂಟುಮಾಡುವಂಥ ಕೆಲವು ಮಾತುಗಳನ್ನಾಡಿದ್ದಾರೆಂದು ವರದಿಯಾಗಿದೆ. ಒಂದು […]

ಅಶೋಕ ಚಕ್ರ ಸಾರುವ ಇಪ್ಪತ್ನಾಲ್ಕು ಗುಣಗಳು ಎಲ್ಲಿ?

- ಡಾ.ವಿನತೆ ಶರ್ಮ

ಕೇವಲ ಇಪ್ಪತ್ತು ವರ್ಷಗಳಲ್ಲಿ ಬೇರೂರಿದ ಜಾಗತೀಕರಣದ ಫಲವನ್ನು ಉಂಡು ತೇಗುತ್ತಿರುವ ಭಾರತೀಯ ಸಮಾಜ ಬದಲಾಗುವುದಕ್ಕೆ ಸಾವಿರಾರು ವರ್ಷಗಳು ಹಿಡಿಸುವುದಿಲ್ಲ. ಏಕೆಂದರೆ, ಜಾಗತೀಕರಣವನ್ನು ಹುಟ್ಟುಹಾಕಿದ ಪಾಶ್ಚಾತ್ಯದೇಶಗಳಲ್ಲೇ ಈಗ ಗಮನಾರ್ಹ ಬದಲಾವಣೆಗಳಾಗುತ್ತಿವೆ. – ಡಾ.ವಿನತೆ ಶರ್ಮ ಭಾರತ ದೇಶದ ಸಂಸ್ಕೃತಿಯ ಅವಲಕ್ಷಣಗಳು ಕಳೆದ 2000 ದಿಂದ 3000 ವರ್ಷಗಳಿಂದಲೂ ಮನೆಮಾಡಿಕೊಂಡಿವೆ ಎಂದು ಯಾರೇ ಹೇಳಿದರೂ ಆಶ್ಚರ್ಯವಾಗುತ್ತದೆ. ಯಾಕೆಂದರೆ ಮೂರು ಮತ್ತು ಎರಡು ಸಾವಿರ ವರ್ಷಗಳ ನಡುವೆ ಇದ್ದಂಥ ಸಂಸ್ಕೃತಿಗಳ ಬಗ್ಗೆ, ಅವುಗಳಲ್ಲಿ ಅತ್ಯಂತ ಹೆಸರುವಾಸಿಯಾದ ಮೌರ್ಯರ ಕಾಲದ ಸುವರ್ಣಯುಗದ ಬಗ್ಗೆ […]

ಭಾರತೀಯ ಸಮಾಜದ ಮರುಸಂಘಟನೆಯ ಪ್ರಶ್ನೆಗಳು

- ರಾಜಾರಾಮ ತೋಳ್ಪಾಡಿ, - ನಿತ್ಯಾನಂದ ಬಿ ಶೆಟ್ಟಿ

ನಾರಾಯಣಮೂರ್ತಿ ಅವರು ಹೇಳುವ ಭಾರತೀಯ ಸಂಸ್ಕೃತಿ ಯಾವುದು? ಅದರ ಸ್ವರೂಪ ಹೇಗಿದೆ? ಆ ಸಂಸ್ಕೃತಿಯನ್ನು ವಿವರಿಸುವ ಮಾಪನಗಳು ಯಾವುವು? ನಮಗೆ ಗೊತ್ತಿಲ್ಲ. ಆದರೆ ನಮ್ಮ ತಿಳಿವಳಿಕೆಯ ಪ್ರಕಾರ ನಮ್ಮ ದೇಶದಲ್ಲಿ ಅನೇಕ ಬಗೆಯ ಸಂಸ್ಕೃತಿಗಳಿವೆ. ಅವು ಪ್ರತಿಯೊಂದೂ ಸ್ವಾಯತ್ತವಾಗಿವೆ, ಪರಸ್ಪರ ವಿಭಿನ್ನವೂ ಆಗಿವೆ ಮತ್ತು ವಿಶಿಷ್ಟವೂ ಆಗಿವೆ. – ರಾಜಾರಾಮ ತೋಳ್ಪಾಡಿ, – ನಿತ್ಯಾನಂದ ಬಿ ಶೆಟ್ಟಿ ಪ್ರತಿಷ್ಠಿತ ಉದ್ಯಮಿಯಾಗಿರುವ ಎನ್.ಆರ್.ನಾರಾಯಣ ಮೂರ್ತಿಯವರ ಮಾತುಗಳ ಹಿಂದಿನ ಪ್ರಾಮಾಣಿಕ ಕಾಳಜಿಯ ಬಗ್ಗೆ ನಮಗೆ ಗೌರವವಿದೆ. ಇದೇ ಮಾದರಿಯ ಮಾತುಗಳನ್ನು […]

ಉತ್ಕೃಷ್ಟತೆ ನಮ್ಮ ಸಂಸ್ಕೃತಿಯ ಭಾಗವಾಗದಿದ್ದಾಗ…

- ಎಂ.ಕೆ.ಆನಂದರಾಜೇ ಅರಸ್

ಶಿಸ್ತು, ಪ್ರಾಮಾಣಿಕತೆ, ಕ್ಷಮತೆ ಹಾಗೂ ಉತ್ಕೃಷ್ಟತೆ ನಮ್ಮಲ್ಲಿ ವಿರಳವಾಗಿರುವ ಗುಣಗಳು. ನಮ್ಮ ಸಂಸ್ಕೃತಿಯಲ್ಲಿ ಅವು ಹಾಸುಹೊಕ್ಕಾಗದಿರುವುದೇ ನಮ್ಮ ಇಂದಿನ (ದು)ಸ್ಥಿತಿಗೆ ಕಾರಣ. – ಎಂ.ಕೆ.ಆನಂದರಾಜೇ ಅರಸ್ ಎರಡು ದಶಕಗಳ ಹಿಂದಿನ ಮಾತು. ಮುಂಬೈನಲ್ಲಿ ಉದ್ಯೋಗದಲ್ಲಿದ್ದೆ. ನಾನು ಉದ್ಯೋಗದಲ್ಲಿದ್ದ ಸಂಸ್ಥೆಯ ಎಂ.ಡಿ. ನನ್ನನ್ನು ಇನ್ನೊಂದು ಸಂಸ್ಥೆಯ ಎಂ.ಡಿ.ಗೆ ಪರಿಚಯಿಸಬೇಕಿತ್ತು. ಆ ಸಂಸ್ಥೆಗೆ ನಮ್ಮ ಸಂಸ್ಥೆಯ ಸೇವೆಗಳನ್ನು ನೀಡಲು ನನ್ನನ್ನು ನಿಯೋಜಿಸಿದ್ದರು. ನಮ್ಮ ಎಂ.ಡಿ. ನನ್ನನ್ನು ಪರಿಚಯಿಸುತ್ತ, ‘ಆನಂದ ಈಸ್ ಎ ವೆರಿ ನೈಸ್ ಪರ್ಸನ್’ ಎಂದರು. ಆ ಸಂಸ್ಥೆಯ […]

ಶ್ರೇಷ್ಠ ಭಾರತಕ್ಕೆ ಬೇಕು ವೈಜ್ಞಾನಿಕ ದೃಷ್ಟಿಕೋನ

- ಪಿ.ಬಿ.ಕೋಟೂರ

 ಶ್ರೇಷ್ಠ ಭಾರತಕ್ಕೆ ಬೇಕು  ವೈಜ್ಞಾನಿಕ ದೃಷ್ಟಿಕೋನ <p><sub> - ಪಿ.ಬಿ.ಕೋಟೂರ </sub></p>

ಶೈಕ್ಷಣಿಕ ವ್ಯವಸ್ಥೆಯಲ್ಲಿ ಓದಿನ ಬೇರುಗಳಿಗೆ ಹುಳು ಹತ್ತಿವೆ. ವೈಜ್ಞಾನಿಕ, ವೈಚಾರಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಶಾಲೆ-ಕಾಲೇಜುಗಳಲ್ಲಿ ಜಾಗವಿಲ್ಲ. ಅಲ್ಲೇನಿದ್ದರೂ ಪರೀಕ್ಷೆಗೆ ತಯಾರಾಗುವುದು. ಹೆಚ್ಚಿನ ಅಂಕಗಳನ್ನು ಹೇಗೆ ಪಡೆಯುವುದು ಎಂದು ಧ್ಯೇನಿಸುವುದು. – ಪಿ.ಬಿ.ಕೋಟೂರ 21ನೇ ಶತಮಾನ ಮತ್ತು ಮುಂಬರುವ ಸಹಸ್ರಮಾನದಲ್ಲಿ, ಯಾವುದೇ ದೇಶವು ಪ್ರಭಾವಿಯಾಗಿ, ಪ್ರಭುವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರಪಂಚದಲ್ಲಿ ಮಿನುಗಬೇಕೆಂದರೆ, ಆ ದೇಶದಲ್ಲಿ ವೈಜ್ಞಾನಿಕ ಮನೋಭಾವ, ವೈಜ್ಞಾನಿಕ ಪ್ರಜ್ಞೆ, ನಿಶಿತ ಮತ್ತು ನಿರಂತರ ವಿಜ್ಞಾನ ವಿಷಯದ ಅಧ್ಯಯನ ಹಾಗೂ ಪ್ರೀತಿಯನ್ನು ಮೂಡಿಸಿಕೊಳ್ಳುವುದಷ್ಟೇ ಅಲ್ಲ ರೂಢಿಸಿಕೊಂಡು ಬೆಳೆಯಬೇಕಾಗುತ್ತದೆ. […]

‘ಸಾಂಸ್ಕೃತಿಕ’ ಮನಸ್ಸಿನ ಒಳ ಸೂಕ್ಷ್ಮಗಳು…

- ಡಾ.ಟಿ.ಗೋವಿಂದರಾಜು

ಉದ್ಯಮಿ ನಾರಾಯಣಮೂರ್ತಿ ಅವರು ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಚರ್ಚಾರ್ಹವಾಗಿವೆ. ಅವರು ದೊಡ್ಡ ಉದ್ಯಮಶೀಲ ವ್ಯಕ್ತಿ. ನಾನು ‘ಸಂಸ್ಕೃತಿ’ ಕುರಿತು ಎಂ.ಎ. ಪದವಿ ತರಗತಿಯಲ್ಲಿ ಜಗತ್ತಿನ ಬಹುದೊಡ್ಡ ಸಂಸ್ಕೃತಿ ಚಿಂತಕ ಕ್ರೋಬರ್ ಅಂತಹವರ ವ್ಯಾಖ್ಯೆಯನ್ನು ಓದಿಕೊಂಡ, ಒಪ್ಪಿಕೊಂಡ, ಕಳೆದ ಮೂವತ್ತು ವರ್ಷಗಳಿಂದ ನಾಡಿನ ಅನೇಕ ಸಮುದಾಯಗಳನ್ನು ಅದೇ ನೆಲೆಯಲ್ಲಿ ಅಧ್ಯಯನ ಮಾಡಿ  ಕೃತಿಗಳನ್ನು ರಚಿಸಿರುವ ಒಂದಿಷ್ಟು ತಿಳಿವಳಿಕೆಯ ಹಿನ್ನೆಲೆಯಲ್ಲಿ ಅವರ ಅಭಿಪ್ರಾಯಗಳಿಗೆ ಹೀಗೆ ಪ್ರತಿಕ್ರಿಯಿಸಬಯಸುತ್ತೇನೆ:  – ಡಾ.ಟಿ.ಗೋವಿಂದರಾಜು 1 ಶ್ರೀಯುತರ ಸದರಿ ಅಭಿಪ್ರಾಯಗಳು, ಇಂದು ಈ ದೇಶ ಮಠಮಾನ್ಯಗಳ […]

ಎಪ್ರಿಲ್ ಸಂಚಿಕೆಯ ಮುಖ್ಯ ಚರ್ಚೆ

ಕರ್ನಾಟಕದಲ್ಲಿ ಪರಿಸರ ಸಮತೋಲನ  ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ..? ಪೃಥ್ವಿಯ ಮೇಲಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ತಾಪಮಾನ ಹೆಚ್ಚಳದಿಂದ ಕರ್ನಾಟಕವೇನೂ ಹೊರತಾಗಿಲ್ಲ. ಬ್ರೆಜಿಲ್‍ನಲ್ಲಿ ಕಾಡು ಕಡಿದರೆ, ರಷ್ಯಾದಲ್ಲಿ ಕಲ್ಲಿದ್ದಲು ಸುಟ್ಟರೆ ಅಥವಾ ಅಭಿವೃದ್ಧಿಯ ಧಾವಂತದಲ್ಲಿ ಯುರೋಪಿಯನ್ ರಾಷ್ಟ್ರಗಳು ಓಝೋನ್ ಪದರ ಛೇದ ಮಾಡಿದರೆ ಅದರ ನೇರ ಪರಿಣಾಮ ಕರ್ನಾಟಕದ ಪರಿಸರದ ಮೇಲೆಯೂ ಬೀಳುತ್ತದೆ. ಪೆಸಿಫಿಕ್ ಸಾಗರದ ಮೇಲಿನ ‘ಎಲ್‍ನಿನೋ’ ಪರಿಣಾಮ ಕರ್ನಾಟಕದಲ್ಲಿ ಅತಿವೃಷ್ಟಿ-ಅನಾವೃಷ್ಟಿಗೆ ಎಡೆಮಾಡಿಕೊಡುತ್ತದೆ. ಹಾಗೆಂದ ಮಾತ್ರಕ್ಕೆ ಪರಿಸರ ಸಮತೋಲನದ ಬಗ್ಗೆ ನಾವು ಕರ್ನಾಟಕದಲ್ಲಿ ಅಸಡ್ಡೆ-ಅನಾದರ ತೋರುವಂತಿಲ್ಲ. ನಮ್ಮ ರಾಜ್ಯದಲ್ಲಿ ನಾವು […]