ಬೋಡೋ ಒಪ್ಪಂದದ ಆಶಯ ಕನಸಿನ ಸಾಕಾರದತ್ತ ಈಶಾನ್ಯ ಭಾರತ

- ಎಂ.ಕುಸುಮ ಹಾಸನ

ಪ್ರತ್ಯೇಕತಾವಾದ ಮತ್ತು ಉಗ್ರಗಾಮಿ ಮನಸ್ಥಿತಿಯನ್ನು ಪರಿವರ್ತಿಸಿ, ಭಾರತ ದೇಶದ ಅಖಂಡತೆಯೆಡೆಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಯಶಸ್ವಿಯಾಗುವ ಲಕ್ಷಣಗಳು ತೋರುತ್ತಿವೆ. – ಎಂ.ಕುಸುಮ ಹಾಸನ ಸುಮಾರು ಐದು ದಶಕಗಳಿಂದ ಕುದಿಯುತ್ತಿದ್ದ ಅಸ್ಸಾಂ ಜನರ ಅಸಹನೆಯನ್ನು ಶಮನಗೊಳಿಸಲು ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಬೋಡೋ ಒಪ್ಪಂದವು ತ್ರಿಪಕ್ಷೀಯವಾಗಿ ಜನವರಿ 27, 2020 ರಂದು ಅಂಗೀಕೃತವಾಯಿತು. ಕೇಂದ್ರ ಸರ್ಕಾರ, ಅಸ್ಸಾಂನ ರಾಜ್ಯ ಸರ್ಕಾರ ಮತ್ತು ಮೂರು ಬಂಡುಕೋರ ಸಂಘಟನೆಗಳಾದ ಎನ್‍ಡಿಎಫ್‍ಬಿ (ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್), […]

ಆಸ್ಕರ್: ಅತ್ಯುನ್ನತ ಸಿನಿಮಾ ಸಮ್ಮಾನ

- ಪ್ರೇಮಕುಮಾರ್ ಹರಿಯಬ್ಬೆ

ಆಸ್ಕರ್: ಅತ್ಯುನ್ನತ ಸಿನಿಮಾ ಸಮ್ಮಾನ
- ಪ್ರೇಮಕುಮಾರ್ ಹರಿಯಬ್ಬೆ

– ಪ್ರೇಮಕುಮಾರ್ ಹರಿಯಬ್ಬೆ ಸಿನಿಮಾಗಳ ಕಲಾತ್ಮಕತೆ ಹಾಗೂ ತಾಂತ್ರಿಕತೆಯನ್ನು ಪರಿಗಣಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿಯೇ ಆಸ್ಕರ್. ಇದು ಜಗತ್ತಿನ ಅತ್ಯಂತ ಹಳೆಯ ಸಿನಿಮಾ ಪ್ರಶಸ್ತಿ. ಆಸ್ಕರ್‍ಗಿಂತ ದೊಡ್ಡ ಪ್ರಶಸ್ತಿ ಇನ್ನೊಂದಿಲ್ಲ ಎಂಬ ಭಾವನೆ ಅನೇಕರಲ್ಲಿದೆ. ಧರ್ಮಯುದ್ಧದಲ್ಲಿ ಬಳಸುವ ಖಡ್ಗವನ್ನು ಕೆಳಮುಖವಾಗಿ ಹಿಡಿದು ಸಾವಧಾನ್‍ಭಂಗಿಯಲ್ಲಿ ನಿಂತ ಯೋಧನ 34.3 ಸೆ.ಮೀ. ಎತ್ತರ, 3.8 ಕಿಲೋಗ್ರಾಂ ತೂಕದ ಚಿನ್ನ ಲೇಪಿತ, ಮಿಶ್ರಲೋಹದ ಪುತ್ಥಳಿಯೇ ಈ ಆಸ್ಕರ್ ಟ್ರೋಫಿ. ಈ ಪುತ್ಥಳಿ ಸಿನಿಮಾಕ್ಕಾಗಿ ದುಡಿಯುವ ನಟರು, ನಿರ್ದೇಶಕರು, ನಿರ್ಮಾಪಕರು, […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
-ಪುರುಷೋತ್ತಮ ಆಲದಹಳ್ಳಿ

-ಪುರುಷೋತ್ತಮ ಆಲದಹಳ್ಳಿ ಕೊರೊನಾ ವೈರಸ್‍ಗೆ ಚೀನಾ ತತ್ತರ ಚೀನಾ ಸರ್ಕಾರದ ಅಧಿಕೃತ ಮೂಲಗಳಂತೆಯೇ ಫೆಬ್ರವರಿ 24 ರವರೆಗೆ ಕೊರೊನಾ ವೈರಸ್ ಕಾರಣದಿಂದ 2,592 ಜನ ಸತ್ತು 77,000ಕ್ಕೂ ಹೆಚ್ಚು ಜನ ಸೋಂಕಿಗೆ ಗುರಿಯಾಗಿದ್ದಾರೆ. ಚೀನಾ ಮಧ್ಯಭಾಗದ ಹುಬೇ ಪ್ರಾಂತ್ಯದ ರಾಜಧಾನಿ ವುಹಾನ್‍ನಲ್ಲಿಯೇ ಬಹುತೇಕ ಜನ ಸೋಂಕಿಗೆ ಬಲಿಯಾಗಿದ್ದಾರೆ. ವುಹಾನ್ ನಗರ ಮತ್ತು ಹುಬೇ ಪ್ರಾಂತ್ಯದ ಎಲ್ಲೆಡೆ ಸಂಪೂರ್ಣ ಸಂಚಾರ ನಿಯಂತ್ರಣ ವಿಧಿಸಿ ಚೀನಾ ಸರ್ಕಾರವು ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಹರಸಾಹಸ ಮಾಡುತ್ತಿದೆ. 110 ಲಕ್ಷ ಜನರಿರುವ ವುಹಾನ್ […]

ಮೊಟ್ಟಮೊದಲ ಕಪ್ಪು ಸೆನೇಟರ್ ಹಿರಾಮ್ ರಿವೆಲ್ಸ್

ಮೊಟ್ಟಮೊದಲ ಕಪ್ಪು ಸೆನೇಟರ್ ಹಿರಾಮ್ ರಿವೆಲ್ಸ್

ಕೆಲ ದಿನಗಳ ಹಿಂದೆ ಹಿರಾಮ್ ರಿವೆಲ್ಸ್ ಅವರು ಅಮೆರಿಕೆಯ ಮೊದಲ ಕರಿಯ ಕಾಂಗ್ರೆಸ್ ಸದಸ್ಯರಾಗಿ ಚುನಾಯಿತರಾದ 150ನೆಯ ವರ್ಷಾಚರಣೆಯ ಅಂಗವಾಗಿ ಮುನ್ನೂರು ಮಂದಿ ಜಾಕ್ಸನ್ ನ ಓಲ್ಡ್ ಸ್ಟೇಟ್ ಕ್ಯಾಪಿಟೊಲ್ ನಲ್ಲಿ ಸೇರಿದರು. ಈ ವರ್ಷಾಚರಣೆಯ ಮಹತ್ವ ವಿವರಿಸುವ ಲೇಖನವಿದು. ಮೂಲ: ಎರಿಕ್ ಫೋನರ್  ಅನುವಾದ: ಕಾದಂಬಿನಿ ಎರಡು ಶತಮಾನಗಳಿಗೂ ಹೆಚ್ಚಿನ ಅವಧಿಯಲ್ಲಿ ಬರಾಕ್ ಒಬಾಮಾ ಅವರು ರಾಷ್ಟ್ರದಲ್ಲಿ ಏಕೈಕ ಕರಿಯ ಅಧ್ಯಕ್ಷರಾಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದಿದೆ. ಆದರೆ ಸೆನೆಟ್ ನಲ್ಲಿ ಸೇವೆ ಸಲ್ಲಿಸಿದ 2000 ಪುರುಷರು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟಿ.ಜಿ.ಶ್ರೀನಿಧಿ ವಿಶ್ವವ್ಯಾಪಿ ಜಾಲಕ್ಕೊಂದು ವಿಶೇಷ ದಿನ ವಿಶ್ವವ್ಯಾಪಿ ಜಾಲ, ಅಂದರೆ ವಲ್ರ್ಡ್‍ವೈಡ್ ವೆಬ್, ಆಧುನಿಕ ಜಗತ್ತಿನ ಅತ್ಯಂತ ಮಹತ್ವದ ಆವಿಷ್ಕಾರಗಳಲ್ಲೊಂದು. ಅಂತರಜಾಲದ (ಇಂಟರ್‍ನೆಟ್) ಮೂಲೆಮೂಲೆಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಹುಡುಕಲು ಹಾಗೂ ಪಡೆದುಕೊಳ್ಳಲು ಸಾಧ್ಯವಾಗಿಸಿದ್ದು ಇದೇ ವಿಶ್ವವ್ಯಾಪಿ ಜಾಲ. ವಿಶ್ವವ್ಯಾಪಿ ಜಾಲದ ಮೂಲ ಪರಿಕಲ್ಪನೆ ಟಿಮ್ ಬರ್ನರ್ಸ್-ಲೀ ಎಂಬ ವಿಜ್ಞಾನಿಯದ್ದು. ಸ್ವಿಟ್ಸರ್ಲೆಂಡಿನ ಸರ್ನ್ ಪ್ರಯೋಗಾಲಯದಲ್ಲಿ ಕೆಲಸಮಾಡುತ್ತಿದ್ದ ಅವಧಿಯಲ್ಲಿ ಅವರು ಈ ಪರಿಕಲ್ಪನೆಯನ್ನು ಒಂದು ಪ್ರಸ್ತಾವನೆಯ ರೂಪದಲ್ಲಿ ಸಲ್ಲಿಸಿದ್ದರು. 1989ನೇ ಇಸವಿಯಲ್ಲಿ ಅವರು ಆ ಪ್ರಸ್ತಾವನೆಯನ್ನು ತಮ್ಮ ಸಂಸ್ಥೆಗೆ ಸಲ್ಲಿಸಿದ […]

ಎನ್.ಆರ್.ನಾರಾಯಣಮೂರ್ತಿ ಮೂರು ಭಾಷಣ ನೂರು ಹೊಳಹು

ಉದ್ಯಮಲೋಕದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿರುವ ಇನ್ಫೋಸಿಸ್ ಸಂಸ್ಥೆಯ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಬದುಕು ಸರಳ ಮತ್ತು ನೇರ. ಬಡತನದ ಹಿನ್ನೆಲೆಯ ಮಧ್ಯಮ ವರ್ಗದ ಈ ವ್ಯಕ್ತಿ ಕೆಲವೇ ವರ್ಷಗಳಲ್ಲಿ ಜಾಗತಿಕ ಮಟ್ಟದ ಬೃಹತ್ ಉದ್ಯಮ-ಸಾಮ್ರಾಜ್ಯ ಕಟ್ಟಿದ ಪರಿ ಸೋಜಿಗ ಹುಟ್ಟಿಸುವಂತಹದು. ಉದ್ಯಮ ಕಟ್ಟುವ ಕಾರ್ಯದ ಹಿಂದೆ ಕೆಲಸ ಮಾಡಿದ ಅವರ ವ್ಯಕ್ತಿತ್ವ ಎಂತಹದಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ನಾರಾಯಣಮೂರ್ತಿ ಅವರ ಹೇಳಿಕೆ ಆಧರಿಸಿದ ಮುಖ್ಯಚರ್ಚೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಅವರ ವ್ಯಕ್ತಿತ್ವ, ಚಿಂತನೆಗಳನ್ನು ಅನಾವರಣಗೊಳಿಸುವ […]

ಎನ್.ಆರ್.ನಾರಾಯಣಮೂರ್ತಿ ಜೀವನಚರಿತ್ರೆ

- ಮೋಹನದಾಸ್

ಎನ್.ಆರ್.ನಾರಾಯಣಮೂರ್ತಿ  ಜೀವನಚರಿತ್ರೆ
- ಮೋಹನದಾಸ್

ಎನ್.ಆರ್.ನಾರಾಯಣಮೂರ್ತಿ  ಜೀವನಚರಿತ್ರೆ – ಮೋಹನದಾಸ್ ಸಾಧಕರ ಜೀವನವು ಸಂಕೀರ್ಣವಾದಷ್ಟು ಸಾಧಕರ ಜೀವನಚರಿತ್ರೆಗಳು ವಿಶಿಷ್ಟ ಆಯಾಮಗಳನ್ನು ಹಾಗು ವಿಭಿನ್ನ ಅರ್ಥೈಸುವಿಕೆಯನ್ನು ಒಳಗೊಂಡು ವಿಶೇಷವಾಗಿರಬಹುದು. ಆದರೆ ಸಾಧಕನ ಜೀವನ ಅತ್ಯಂತ ಸರಳವೂ, ನೇರವೂ ಹಾಗೂ ಸ್ಪಷ್ಟವೂ ಆದರೆ ಅದು ಹಲವಾರು ಜೀವನಚರಿತ್ರೆಗಳಿಗೆ ಸಾಮಗ್ರಿ ಒದಗಿಸಲಾಗದು. ಇದೇ ಪರಿಸ್ಥಿತಿ ನಾರಾಯಣಮೂರ್ತಿಯವರ ಜೀವನ ಚರಿತ್ರೆ ಬರೆಯುವವರಿಗೂ ಕಾಡಿರಬಹುದು. ಹಾಗಾಗಿಯೇ ಅವರ ಜೀವನ ಚರಿತ್ರೆ ಬರೆಯಲು ಬಹಳಷ್ಟು ಲೇಖಕರು ಮುಂದೆ ಬಂದಿಲ್ಲವೆಂದು ಅನ್ನಿಸುತ್ತಿದೆ. ಇವೆಲ್ಲದರ ಮಧ್ಯೆ ರಿತು ಸಿಂಘ್‍ರವರು ಬರೆದ ನಾರಾಯಣಮೂರ್ತಿಯವರ ಜೀವನಚರಿತ್ರೆ ಎಲ್ಲ […]

ಅಡಿಗರಿಗೆ ಗುಣಾತ್ಮಕ ಕಾವ್ಯನ್ಯಾಯ ಸಲ್ಲಿಸುವ ನೈಮಿತ್ತಿಕ

ಪ್ರೊ.ಶಿವರಾಮಯ್ಯ

ಪ್ರೊ.ಎನ್.ಬೋರಲಿಂಗಯ್ಯನವರು ಕುವೆಂಪು ಮತ್ತು ಅಡಿಗರನ್ನು ಎದುರು ಬದರಾಗಿ ನಿಲ್ಲಿಸಿ ಹೇಳುವ ಸತ್ಯವಾಕ್‍ವೊಂದಿದೆ ಇಲ್ಲಿ. ಅದೆಂದರೆ ಆರ್ಷೇಯ ಪರ ದೃಷ್ಟಿಯ ಅಡಿಗರಿಗೆ ಪಶ್ಚಿಮದಿಂದ ಆಗಿರುವ ಲಾಭ ಸಾಹಿತ್ಯಕವಾದದ್ದು ಮಾತ್ರ. ಸಾಂಸ್ಕೃತಿಕವಾದುದಲ್ಲ. ಪ್ರೊ.ಶಿವರಾಮಯ್ಯ ಪ್ರೊ.ಎನ್.ಬೋರಲಿಂಗಯ್ಯನವರು ಕನ್ನಡ ಸಾಹಿತ್ಯ ವಿಮರ್ಶನ ಕ್ಷೇತ್ರದ ಹಿರಿಯ ತಲೆಮಾರಿನ ಒಬ್ಬ ನಿಷ್ಠುರ ವಿಮರ್ಶಕರು. ಕುವೆಂಪು, ಬೇಂದ್ರೆ, ಅಡಿಗ ಮುಂತಾದ ದೊಡ್ಡ ಕವಿಗಳ ಬಗ್ಗೆ ಇವರು ಆಗಾಗ ಆಡಿರುವ ಮಾತುಗಳು ಆಯಾ ಕವಿಗಳ ಕಾವ್ಯ ಪ್ರವೇಶಕ್ಕೆ ಎಳೆಯರಿಗೆ ದಾರಿದೀಪಗಳಾಗಿವೆ. ಪ್ರಸ್ತುತ 98 ಪುಟಗಳ ‘ನೈಮಿತ್ತಿಕ’ ಎಂಬೀಕೃತಿಯಲ್ಲಿ ನವ್ಯ […]

ಬದುಕಿನ ಮೂಲ ಕೆದಕುವ ‘ದ ರೂಡೆಸ್ಟ್ ಬುಕ್ ಎವರ್’

ಪ್ರಸಾದ್ ನಾಯ್ಕ್

ಬದುಕಿನ ಮೂಲ ಕೆದಕುವ ‘ದ ರೂಡೆಸ್ಟ್ ಬುಕ್ ಎವರ್’
ಪ್ರಸಾದ್ ನಾಯ್ಕ್

ಶೀರ್ಷಿಕೆಯ ಟ್ಯಾಗ್ ಲೈನಿನಲ್ಲಿ ಹೇಳಿದಂತೆ ಓದುಗನೊಬ್ಬ ತನ್ನ ಭಾವನೆಗಳಿಗೆ, ನಂಬಿಕೆಗಳಿಗೆ, ಪೂರ್ವಗ್ರಹಗಳಿಗೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳಲು ಸಿದ್ಧನಾಗಿದ್ದರೆ ಮಾತ್ರ ಈ ಕೃತಿಯನ್ನು ಎತ್ತಿಕೊಳ್ಳಬೇಕು; ಇದು ಉಳಿದವರಿಗಲ್ಲ! ಪ್ರಸಾದ್ ನಾಯ್ಕ್ “ನಾನಿಲ್ಲಿ ನಿಮಗೆ ಪ್ರೇರಣೆಯನ್ನು ನೀಡಲು ಬಂದಿಲ್ಲ. ಬದಲಾಗಿ ಅದರ ವಿರುದ್ಧವಾದುದನ್ನು ನೀಡಲು ಬಂದಿದ್ದೇನೆ!’’ ‘ಪ್ರಜ್ಞೆ’ ಎಂಬ ಪುಟ್ಟ ಪದದ, ಆದರೆ ವ್ಯವಸ್ಥಿತವಾಗಿ ಬಳಸಿಕೊಂಡರೆ ಬದುಕನ್ನೇ ಬದಲಿಸಬಲ್ಲ ಸಂಗತಿಯೊಂದರ ಬಗ್ಗೆ ಅಂದು ವಾಗ್ಮಿ ವಿನೀತ್ ಅಗರ್ವಾಲ್ ಹೀಗೆ ಮಾತನಾಡುತ್ತಿದ್ದರೆ ನಮ್ಮೆಲ್ಲರ ಮೊಗದಲ್ಲೂ ನಗೆಯೊಂದು ಮೂಡಿ ಮರೆಯಾಗಿತ್ತು. ಏಕೆಂದರೆ ‘ಮೋಟಿವೇಷನ್’ […]

ಹೊಸ ಪುಸ್ತಕ

ಸ್ತೋಮ ಚನ್ನಪ್ಪ ಅಂಗಡಿ ಪುಟ: 111, ಬೆಲೆ: ರೂ.100 ನಿವೇದಿತ ಪ್ರಕಾಶನ, 9ನೇ ಅಡ್ಡರಸ್ತೆ, ಶಾಸ್ತ್ರಿ ನಗರ,  ಬಿಎಸ್‍ಕೆ 2ನೇ ಹಂತ, ಬೆಂಗಳೂರು-28 ಪ್ರಥಮ ಮುದ್ರಣ: 2019 ಹನ್ನೆರಡು ಕಥೆಗಳನ್ನೊಳಗೊಂಡ ಕಥಾ ಸಂಕಲನವಿದು. ಲೇಖಕರು ತಮ್ಮ ಬದುಕಿನ ಅನುಭವಗಳನ್ನು ಕಥನರೂಪಕ್ಕಿಳಿಸಿ, ಆಯಾ ಕಾಲದ ಸಾಮಾಜಿಕ ಸ್ಥಿತಿಯ ಪರಿಚಯ ಮಾಡುವ ಪ್ರಯತ್ನ ಮಾಡಿದ್ದಾರೆ. ಭಿನ್ನ ರೀತಿಯ ಕಥಾವಸ್ತುಗಳನ್ನಿಟ್ಟುಕೊಂಡು, ಆಧುನಿಕ ತಂತ್ರಜ್ಞಾನಗಳ ಪರಿಣಾಮ, ಹಳೆಕಾಲದ ಜೀವನ ಶೈಲಿ ಹಾಗೂ ಭೂಮಿ- ಬದುಕಿನ ಸಂಬಂಧಗಳ ಕುರಿತು ತಮ್ಮದೇ ಒಳನೋಟಗಳನ್ನು ಇಲ್ಲಿ ಬಿತ್ತರಿಸಿದ್ದಾರೆ. […]

ಅಷ್ಟಭಾಷಾ ಕವಿ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನಂ

ಡಾ.ಕೆ.ರವೀಂದ್ರನಾಥ

ಅಷ್ಟಭಾಷಾ ಕವಿ ಚಂದ್ರಶೇಖರ ವಿರಚಿತ ಪಂಪಾಸ್ಥಾನ ವರ್ಣನಂ
ಡಾ.ಕೆ.ರವೀಂದ್ರನಾಥ

ಹರಿಹರ ಕವಿಯ ಪಂಪಾಶತಕ, ಪಂಪಾಕ್ಷೇತ್ರರಗಳೆ, ಹಿರಿಯೂರು ರಂಗಕವಿಯ ವಿರೂಪಾಕ್ಷಶತಕಗಳಂತೆ ಹಂಪಿಯ ವಿರೂಪಾಕ್ಷನನ್ನು, ಆ ಪರಿಸರದ ಭೌಗೋಳಿಕ ಪರಿಸರವನ್ನು ಕುರಿತು ಮಹತ್ವದ ಸಂಗತಿಗಳನ್ನು ಬಿಚ್ಚಿಡುವ ಕೃತಿಯಿದು. ಡಾ.ಕೆ.ರವೀಂದ್ರನಾಥ ಕನ್ನಡದಲ್ಲಿ ಸ್ಥಳನಾಮಗಳನ್ನು ಕುರಿತು ಅಧ್ಯಯನ ಮಾಡುವ ನಾಮವಿಜ್ಞಾನ ಇಂದು ಒಂದು ಶಾಸ್ತ್ರವಾಗಿ ಬೆಳೆದು ಬಂದಿದೆ. ಆದರೆ ಈ ಶಾಸ್ತ್ರ ಒಂದು ಕಾಲಕ್ಕೆ “ಸ್ಥಳ ಮಹಾತ್ಮೆಗಳು” ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಸಾಹಿತ್ಯ ಪ್ರಕಾರವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಮೈಸೂರು ಅರಸರ ಕಾಲಘಟ್ಟದಲ್ಲಿ ತಲಕಾವೇರಿಮಾಹಾತ್ಮ್ಯೆ, ಕಕುದ್ಗಿರಿಮಾಹಾತ್ಮ್ಯೆ, ಶ್ರೀ ಪರ್ವತಮಾಹಾತ್ಮ್ಯೆ, ಬಿಳಿಗಿರಿ […]

ಆತ್ಮವಂಚನೆಯ ಪ್ರಸಂಗಗಳು

ಪ.ರಾಮಕೃಷ್ಣ ಶಾಸ್ತ್ರಿ

ಆತ್ಮವಂಚನೆಯ ಪ್ರಸಂಗಗಳು
ಪ.ರಾಮಕೃಷ್ಣ ಶಾಸ್ತ್ರಿ

ಎಷ್ಟೋ ಸಂದರ್ಭಗಳಲ್ಲಿ ಅಪ್ರಿಯವಾದ ಸತ್ಯವನ್ನು ಆಡಲು ಇಷ್ಟಪಡದೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಸುಳ್ಳು ಹೇಳುವವರ ಸಂಖ್ಯೆ ದೊಡ್ಡದು. ಅಂತಹವರಲ್ಲಿ ನೀವೂ ಒಬ್ಬರಾ…?! ಪ.ರಾಮಕೃಷ್ಣ ಶಾಸ್ತ್ರಿ ಒಂದು ದೊಡ್ಡ ಸಮಾರಂಭಕ್ಕೆ ಹೋಗಿದ್ದೀರಿ. ನಿಮ್ಮ ಹತ್ತಿರ ಕುಳಿತವರು ಭೈರಿಗೆಯ ಹಾಗೆ ಏನಾದರೊಂದು ಮಾತನಾಡುತ್ತ ನಿಮ್ಮ ಕಿವಿಯನ್ನು ಕೊರೆಯುವರು. ಮಾತನಾಡುತ್ತಾರೆ, ಮಾರನಾಡುತ್ತಾರೆ, ಮಾತನಾಡುತ್ತಾರೆ. ನಿಮ್ಮನ್ನು ತುಟಿ ತೆರೆಯಲು ಬಿಡದೆ ಮಾತನಾಡುತ್ತಾರೆ. ಹಳಿ ತಪ್ಪುತ್ತಿರುವ ಸಂಸ್ಕತಿಯ ಬಗೆಗೆ, ಇಂದಿನ ಹುಡುಗಿಯರ ಲಂಗ ಮೊಣಕಾಲು ದಾಟಿ ಮೇಲೇರುತ್ತಿರುವ ಬಗೆಗೆ, ಯುವಕರು ದಾರಿ ತಿಳಿಯದೆ ಪೇಚಾಡುತ್ತಿರುವ ಬಗೆಗೆ, […]

ಜ್ಯೋತಿಬಾ ಹೇಳಿದ ಕಥೆ

ಜಿ.ಎನ್.ರಂಗನಾಥ ರಾವ್

ಜ್ಯೋತಿಬಾ ಹೇಳಿದ ಕಥೆ
ಜಿ.ಎನ್.ರಂಗನಾಥ ರಾವ್

ಅಡಿಕೆ ಎಲೆ ಕುಟ್ಟಾಣಿ ಎತ್ತಿಕೊಂಡವನೇ ದತ್ತೂರಿ ಬೀಜ ಅದರಲ್ಲಿ ಸುರಿದು ಪುಡಿ ಮಾಡಿದ. ಅಲ್ಯುಮಿನಿಂ ಗ್ಲಾಸಿನಲ್ಲಿ ನೀರಿಗೆ ಬೆರಸಿ ಗಟಗಟ ಕುಡಿದ. ಅಂಗಳಕ್ಕೆ ಬಂದು ಅಂಗಾತ ಮಲಗಿಬಿಟ್ಟ. ಜಿ.ಎನ್.ರಂಗನಾಥ ರಾವ್ `ಯುರೇಕಾ’ “ಸಿಕ್ತು ಕಣ್ರೋ, ರಾಮಿ ಸಿಕ್ತು ಕಣೋ, ಅಂತಃಕರಣ ಕರಿಗಿಸೋ ಮಾನವಾಸಕ್ತಿಯ ಕಥೆ… ಬೇಗ ಬಾರೋ… ಆ ಮುದಿ ಸಂಪಾದಕನ ಕೈಯ್ಯಲ್ಲಿಡೊ ಮೊದಲು ನಿಂಗೆ ಅದನ್ ಓದಿಹೇಳಬೇಕು” -ಎಂದವನೇ ಗೆಳೆಯ ಮೌನಿಯಾದ. “ಹಲೋ.. ಹಲೋ..” -ಇಲ್ಲ, ಸಂಪರ್ಕ ಕಡಿದು ಹೋಗಿದೆ. ಅವನ ಈ ಸಂಭ್ರಮ ಕಂಡು […]

ಎಲ್ಲಿಂದಲೋ ಬಂದವರು!

ಬಾಲಚಂದ್ರ ಬಿ.ಎನ್.

ಎಲ್ಲಿಂದಲೋ ಬಂದವರು!
ಬಾಲಚಂದ್ರ ಬಿ.ಎನ್.

‘ಎಲ್ಲಿಂದಲೋ ಬಂದವರು’ ತಮಟೆ ಬಾರಿಸುತ್ತಾ, ‘ಎಲ್ಲಿದ್ರೀ ಇಲ್ಲೀ ತಂಕಾ? ಎಲ್ಲಿಂದ ಬಂದ್ರಣ್ಣಾ’ ಎಂದು ಹಾಡತೊಡಗಿದರು. ಮತ್ತೊಬ್ಬ ಪ್ರಶ್ನಿಸಿದವರ ಮುಖಕಮಲ ವರ್ಣವನ್ನು ವೀಕ್ಷಿಸುತ್ತಾ, ‘ಕೆಂಪಾದವೋ ಎಲ್ಲಾ ಕೆಂಪಾದವೋ…’ ಎಂದು ಕೆಂಬಾವುಟ ಹಾರಿಸಿದ! ಬಾಲಚಂದ್ರ ಬಿ.ಎನ್. ‘ನೀನು ಎಲ್ಲಿಂದ ಬಂದೆ?’ ಥಟ್ಟನೆ ತೂರಿ ಬಂದ ಪ್ರಶ್ನೆಗೆ ರಸ್ತೆ ಬದಿಯಲ್ಲಿ ಮಲಗಿ ಉತ್ತಮ ದಿನಗಳ ಕನಸು ಕಾಣುತ್ತಿದ್ದ ಜನ ಬೆಚ್ಚಿ ಬಿದ್ದರು. ಎದ್ದು ಕಣ್ಣೊರೆಸಿಕೊಂಡು ನೋಡಿದಾಗ ಒಬ್ಬ ದಾಡೀವಾಲ ಮತ್ತೊಬ್ಬ ದಡೂತಿವಾಲ ಕೈಯಲ್ಲಿ ರಾಜದಂಡವನ್ನು ಮತ್ತು ಪಟ್ಟಾಭಿಷಿಕ್ತ ಖಡ್ಗವನ್ನು ಹಿಡಿದು ನಿಂತಿದ್ದರು. […]

ಕಂಬಳ ಎಂಬ ಕಲರ್‍ಫುಲ್ ಕ್ರೀಡೆ

ಕೆ.ವಿ.ಪರಮೇಶ್

ಕಂಬಳ ಎಂಬ ಕಲರ್‍ಫುಲ್ ಕ್ರೀಡೆ
ಕೆ.ವಿ.ಪರಮೇಶ್

ಶರವೇಗದಿಂದ ಓಡಿ ದಾಖಲೆ ಸೃಷ್ಟಿಸಿರುವ ತುಳುನಾಡಿನ ಶ್ರೀನಿವಾಸಗೌಡ ಮತ್ತು ನಿಶಾಂತ್ ಶೆಟ್ಟಿ ಭಾರತದ ಉಸೇನ್ ಬೋಲ್ಟ್ ಎನ್ನಿಸಿಕೊಂಡಿದ್ದಾರೆ! ಅವರ ಸಾಧನೆಯ ಸಂದರ್ಭದಲ್ಲಿ ಕಂಬಳ ಕ್ರೀಡೆ ಕುರಿತ ಕುತೂಹಲಕಾರಿ ಲೇಖನ. ಕೆ.ವಿ.ಪರಮೇಶ್ ಐತಿಹಾಸಿಕ ಹಿನ್ನೆಲೆಯುಳ್ಳ ಕರಾವಳಿ ನಾಡಿನ ಈ ಸಾಂಪ್ರದಾಯಿಕ ಕಂಬಳ ಒಂದಿಲ್ಲೊಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಇದನ್ನು ಸಂಪ್ರದಾಯ, ಆಚರಣೆ, ಕ್ರೀಡೆ, ಜಾನಪದ ಹೀಗೆ ಹತ್ತು ಹಲವು ಬಗೆಯಲ್ಲಿ ವ್ಯಾಖ್ಯಾನಿಸಬಹುದು. ಯಾವ ನೆಲೆಗಟ್ಟಿನಲ್ಲಿ ಅವಲೋಕಿಸಿದರೂ ಅದಕ್ಕೆ ಅದರದ್ದೇ ಆದ ಐತಿಹಾಸಿಕ ಹಿನ್ನೆಲೆಯಿದೆ, ಸಂಪ್ರದಾಯಕ್ಕೆ ತನ್ನದೇ ಅರ್ಥವಿದೆ, ಆಚರಣೆಗೂ […]

ಜಾತಿ ವೈಷಮ್ಯ ಅನಾವರಣಗೊಳಿಸುವ ಪರಿಯೇರುಂ ಪೆರುಮಾಳ್

ಮ ಶ್ರೀ ಮುರಳಿ ಕೃಷ್ಣ

ಜಾತಿ ವೈಷಮ್ಯ ಅನಾವರಣಗೊಳಿಸುವ  ಪರಿಯೇರುಂ  ಪೆರುಮಾಳ್
ಮ ಶ್ರೀ ಮುರಳಿ ಕೃಷ್ಣ

ನಿರ್ದೇಶಕರಾಗಿ ಮಾರಿ ಸೆಲ್ವರಾಜ್ ತಮ್ಮ ಚೊಚ್ಚಲ ಚಲನಚಿತ್ರದಲ್ಲಿ ಶೋಷಿತರು ಜಾಗೃತರಾಗುವಲ್ಲಿ ಶಿಕ್ಷಣಕ್ಕಿರುವ ಮಹತ್ವದ ಪಾತ್ರವನ್ನು ಪ್ರಬಲವಾಗಿ ದಾಟಿಸಿದ್ದಾರೆ. ಮ ಶ್ರೀ ಮುರಳಿ ಕೃಷ್ಣ ಜಾತಿ ಮತ್ತು ಮತ ಮಾನವತೆಯ ವಿರೋಧಿ ಎಂಬ ಸಾಲು ಮಾರಿ ಸೆಲ್ವರಾಜ್ ನಿರ್ದೇಶನದ ‘ಪರಿಯೇರುಂ ಪೆರುಮಾಳ್’ (ಕುದುರೆಯ ಮೇಲಿನ ದೇವರು ಎಂದರ್ಥ) ಚಲನಚಿತ್ರದ ಪ್ರಾರಂಭದಲ್ಲೇ ವೀಕ್ಷಕರ ಗಮನವನ್ನು ಸೆಳೆಯುತ್ತದೆ. ಹೀಗಾಗಿ ಇದೊಂದು ಜಾತಿ/ಮತದ ಸುತ್ತ ಗಿರಕಿ ಹೊಡೆಯುವ ಚಲನಚಿತ್ರ ಎಂಬ ಸುಳಿವು ವೀಕ್ಷಕರ ಮನಸ್ಸಿನಲ್ಲಿ ಮೂಡಬಹುದು. ಅಂತ್ಯದಲ್ಲಿ ಇದು ಬರೀ ಜಾತಿಯ ಬಗೆಗೆ […]

ನನ್ನ ಕ್ಲಿಕ್

ರಕ್ಷಿತ್ ಜಕಾತಿ

ಕಬಿನಿ ನಿರಾಶೆಗೊಳಿಸುವುದಿಲ್ಲ!   ಇಲ್ಲಿರುವ ಚಿತ್ರಗಳನ್ನು ಕಳೆದ ಜನೆವರಿಯಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಬಿನಿ ನದಿ ಪರಿಸರದಲ್ಲಿ ತೆಗೆದಿದ್ದೇನೆ. ಮರದ ಮೇಲೆ ಕುಳಿತಿದ್ದ ಚಿರತೆಯನ್ನು ಬೆಳಿಗ್ಗೆ ಸಫಾರಿಯಲ್ಲಿ ಸೆರೆಹಿಡಿಯಲಾಗಿದೆ. ಹಿಂದಿನ ದಿನ ಈ ಚಿರತೆ ಮಚ್ಚೆಯ ಜಿಂಕೆಯೊಂದನ್ನು ಕೊಂದು ಆರಾಮವಾಗಿ ಮರದ ಮೇಲೆ ಕುಳಿತಿತ್ತು. ಹಾಗಾಗಿ ಚಿರತೆಯ ಚಿತ್ರ ಮತ್ತು ವಿಡಿಯೊ ತೆಗೆದುಕೊಳ್ಳಲು ಸಾಕಷ್ಟು ಸಮಯ ಸಿಕ್ಕಿತು. ಇನ್ನು ಈ ಭವ್ಯ ಹುಲಿರಾಯ ಕಬಿನಿ ಹಿನ್ನೀರಿನಲ್ಲಿ ಕಂಡುಬಂದ; ಪೊದೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಅವನು ಕಬಿನಿ ಹಿನ್ನೀರಿನ […]

ಕವಿತೆ

ಕವಿತೆ

ಪಾಟಿ ಪೇಣೆ   ನೆನಪಿದೆ ನನಗೆ ಸ್ಪಷ್ಟ ನಿನ್ನ ಮಗು ನಾನು ಎಂದೇ ಭಾವಿಸಿದ್ದಿ ಅಂದು ಮಂಗಳವಾರ. ಸಂತೆ. ಹೋಗಿದ್ದಿ. ಪಾಟಿ ಪೇಣೆ ನನಗಾಗಿ ಕೊಂಡು ತಂದಿದ್ದಿ. ಸಿಕ್ಕಷ್ಟೆ ಸಮಯದಲಿ ನಿನಗೆ ತಿಳಿದಷ್ಟು ಕಲಿಸಿದಿ ಹಾದಿ ತೋರಿಸಿದಿ ತೀಡಿಸಿದಿ ಕೈ ಹಿಡಿದು ಅಕ್ಷರಗಳೇ ಹಾದಿಯಾದುವು ಬೆಳಕಾದುವು ಈಗ ಕಲಿಯುತ್ತಿರುವೆ ಅಷ್ಟಷ್ಟೆ ಬರೆಯುತ್ತಿರುವೆ ನಾನು ಕಲಿಕಲಿತಂತೆ ನೀ ಮರೆತೆ ನಿನ್ನನ್ನೆ ಬರೆಯುವುದು ಅರಿಯುವುದು ಎಲ್ಲವನ್ನೂ ನೀ ಬರೆಯ ಹೇಳಿದ್ದಿ ಅರ್ಥ ಅಕ್ಷರಗಳುಣಿಸಿದ್ದಿ ಈಗ ಎತ್ತ ಹಾರಲಿ ನಾಳೆ ಯಾವ […]