ಕೋಚೆ ನೆನಪು

ಇತ್ತೀಚೆಗೆ ನಿಧನರಾದ ನಿವೃತ್ತ ನ್ಯಾಯಾಧೀಶ, ಸಾಹಿತಿ, ಚಿಂತಕ, ಪ್ರಾಂಜಲ ಮನದ ಕೋ.ಚೆನ್ನಬಸಪ್ಪ ಅವರು ಸಮಾಜಮುಖಿಯ ಹಿತೈಷಿಗಳು, ಖಾಯಂ ಓದುಗರು; ದಿನಾಂಕ 08-12-2017ರಂದು ಅವರು ಬರೆದ ಪತ್ರ ಹೀಗಿತ್ತು: ಸಮಾಜಮುಖಿಯ ಉದ್ದೇಶ, ಸಾಧಿಸಬೇಕಾಗಿರುವ ಗುರಿ ಶ್ಲಾಘನೀಯವಾದವು. ಆ ಗುರಿಯ ಸಿದ್ಧಿಗೆ ಬೇಕಾದ ಸಕಲ ಪರಿಕರಗಳ, ಸಲಕರಣೆಗಳ, ಉಪಕರಣಗಳನ್ನು ಗುರುತಿಸಿದ್ದೀರಿ. ಆದರೆ ಆ ಗುರಿಯನ್ನು ತಲುಪಲು ಬೇಕಾದ ಮುಖ್ಯ ಬೀಗದ ಕೈಯನ್ನು ಹುಡುಕಬೇಕಾಗಿದೆ ಎಂದು ಗ್ರಹಿಸಿದ್ದೀರಿ. ಆ ಬೀಗದ ಕೈ ಯಾವುದು? ಅದೀಗ ಮುಖ್ಯವಾದ ಸಂಗತಿ. ಈ ಹುಡುಕಾಟದಲ್ಲಿ […]

ಅತ್ಯುತ್ತಮ ಸಂದರ್ಶನ

-ಡಾ.ಎನ್.ಟಿ.ಅನಿಲ್, ಬೆಂಗಳೂರು.

ಐಪಿಎಸ್ ಅಧಿಕಾರಿ ಆರ್.ಚೇತನ್ ಅವರು ಬೆಳೆದ ಪರಿಸರ, ಹವ್ಯಾಸ, ಆಸಕ್ತಿ, ಮನೆಯ ವಾತಾವರಣ, ಬಾಲ್ಯದ ಶಿಕ್ಷಣ, ಅವರು ಕಂಡ ಸಿವಿಲ್ ಸರ್ವಿಸ್ ಪರೀಕ್ಷೆಯ ಕನಸು ಮತ್ತು ನನಸು ಮಾಡಿದ ದಿಟ್ಟ ನಡೆ, ಪೊಲೀಸ್ ಇಲಾಖೆಯ ಸವಾಲುಗಳು, ಅಧಿಕಾರಿ ವರ್ಗದ ಹಾಗೂ ಜನಸಾಮಾನ್ಯರ ಸಹಕಾರದ ಪ್ರಾಮುಖ್ಯ, ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನದ ನುಡಿಗಳು ಅತ್ಯುತ್ತಮ ಸಂದರ್ಶನವಾಗಿ ಮೂಡಿಬಂದಿದೆ. ಜೊತೆಗೆ ಅವರ ತುಂಬು ಕುಟುಂಬದ ಭಾವಚಿತ್ರವನ್ನು ನೋಡಿ ತುಂಬಾ ಸಂತೋಷವಾಯಿತು. ಈ ಅಂಕಣ ನಾಗರಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅಚ್ಚಳಿಯದೆ ಉಳಿಯುತ್ತದೆ. ದಕ್ಷ ಅಧಿಕಾರಿ […]

ಕನ್ನಡ ಲಿಪಿಯನ್ನು ತರ್ಕಬದ್ದಗೊಳಿಸುವ ಯತ್ನ

-ರಂಗನಾಥ ಕಂಟನಕುಂಟೆ, ಹೊನ್ನಾವರ.

ಲೇಖಕರ ವಿವರಣೆ : ‘ಸಮಾಜಮುಖಿ’ಯ 2018ರ ಜುಲೈ, ನವೆಂಬರ್ ಮತ್ತು ಡಿಸೆಂಬರ್ ಸಂಚಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿದ್ದವು. ಅವುಗಳಲ್ಲಿ ಲಿಪಿ ಸುಧಾರಣೆಯ ಭಾಗವಾಗಿ ಕನ್ನಡದಲ್ಲಿ ನಡೆಯುತ್ತಿರುವ ಚಿಂತನೆಗಳನ್ನು ಅನುಸರಿಸುತ್ತ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಬರೆಹವನ್ನು ಮಾಡಿದ್ದೆ. ಅವುಗಳಲ್ಲಿ ‘ಷ’ ಬದಲಾಗಿ ‘ಶ’ವನ್ನು, ರ್‘’ ಅರ್ಕಾವೊತ್ತಿಗೆ ಬದಲಾಗಿ ಸೂರ್ಯ, ವರ್ಗ, ವರ್ಣ ಹೀಗೆ ಬಳಸಲಾಗಿತ್ತು. ಇದರ ಬಗೆಗೆ ಹಿರಿಯರೂ, ಪರಿಚಿತರೂ ಮತ್ತು ಕನ್ನಡ ಸಾಹಿತ್ಯದ ಗಂಭೀರ ಓದುಗರೂ ಆದ ಚಿಕ್ಕತಿಮ್ಮಯ್ಯನವರು ಸ್ಪಶ್ಟನೆ ಬಯಸಿದ್ದಾರೆ. ಹಾಗಾಗಿ ಇಲ್ಲಿ ನನ್ನ ಅಭಿಪ್ರಾಯವನ್ನು […]

‘ಷ’ ‘ಶ’ ಸಂದೇಹ ನಿವಾರಿಸಿ

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ.

ರಂಗನಾಥ ಕಂಟನಕುಂಟೆ ಅವರು ಕನ್ನಡ ಭಾಷಾ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ತೆರೆಯುವುದರ ಕುರಿತು ಸಮಾಜಮುಖಿಯಲ್ಲಿ ಮೌಲಿಕವಾದ ಲೇಖನಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ನಾನು ನನ್ನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡೆ. ಆದರೆ ಅವರು ಬಳಸುವ ಕೆಲವು ಪದ ಪ್ರಯೋಗಗಳ ಬಗ್ಗೆ ನನಗೆ ಸ್ವಲ್ಪ ಮಟ್ಟಿಗೆ ಗೊಂದಲವಿದೆ. ಲೇಖನದ ಕೊನೆಯ ನಿಮ್ಮ ಅಡಿಟಿಪ್ಪಣಿಯನ್ನು ಗಮನಿಸಿಯೂ ಅನುಮಾನ ಬಗೆಹರಿದಿಲ್ಲ. ಲೇಖಕರು ‘ಷ’ ಬದಲು ‘ಶ’, ‘ವರ್ಗ’ ಬದಲು ‘ವರ್ಗ’, ‘ಕರ್ನಾಟಕ’ ಬದಲು ‘ಕರ್ನಾಟಕ’ ಇತ್ಯಾದಿ ಏಕೆ ಬಳಸುತ್ತಾರೆ? […]

ಪತ್ರಿಕೆಯ ಉದ್ದೇಶವೇ ವಿಫಲವಾದೀತು!

-ಪ್ರೊ. ಶಿವರಾಮಯ್ಯ, ಬೆಂಗಳೂರು.

‘ಅನ್ನದ ಭಾಷೆಯ ಚಿನ್ನದ ಮಾಸಿಕ’ ಎಂಬ ಅಭೀಪ್ಸೆಗೆ ತಕ್ಕಂತೆ ‘ಸಮಾಜಮುಖಿ’ ಪತ್ರಿಕೆ ಒಂದು ವರ್ಷ ಕಳೆದು ಬೆಳೆದದ್ದು ಸಂತೋಷದಾಯಕ. ಫೆಬ್ರವರಿ 2019ರ ಸಂಚಿಕೆಯು ಕರ್ನಾಟಕ ರೈತ ಚಳವಳಿ ಪ್ರಸ್ತುತತೆ ಉಳಿಸಿಕೊಂಡಿದೆಯೆ? ಎಂಬ ಮುಖ್ಯಚರ್ಚೆಯನ್ನು ಕೈಗೆತ್ತಿಕೊಂಡು, ರೈತ ಚಳವಳಿಯ ಆಗು-ಹೋಗುಗಳನ್ನು ಕುರಿತು ಅದರಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಇಂದಿಗೂ ಚಳವಳಿಯ ಭಾಗವಾಗಿರುವ ಕೆಲವರಿಂದ ಬರೆಸಿ ದಾಖಲಿಸಿರುವುದು ಸ್ವಾಗತಾರ್ಹ. ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸುವವರಿಗೆ ಇದೊಂದು ಪಾಠ ಕೈಪಿಡಿಯಾಗಬಹುದು. ಹೀಗೆ ‘ದಲಿತ ಸಂಘರ್ಷ ಸಮಿತಿ’, ಹಾಗೂ ‘ಮಹಿಳಾ ಚಳವಳಿ’ಗಳ ಬಗ್ಗೆಯೂ ದಾಖಲೆಗಳಾಗಬೇಕು. ಈ […]

ತಪ್ಪು ಮಾಡದಿದ್ದರೆ ಆತಂಕವೇಕೇ?

-ಕೆ.ಎಂ.ಶಿವಲಿಂಗೇಗೌಡ

ತಪ್ಪು ಮಾಡದಿದ್ದರೆ ಆತಂಕವೇಕೇ?
-ಕೆ.ಎಂ.ಶಿವಲಿಂಗೇಗೌಡ

ಬಿಜೆಪಿಯವರು ‘ಎಸ್.ಐ.ಟಿ. ತನಿಖೆ ಬೇಡವೇ ಬೇಡ. ನಾವು ತಪ್ಪು ಮಾಡಿದ್ದೇವೆ, ಕ್ಷಮಿಸಿ’ ಎಂದು ಮೂರು ದಿನಗಳ ಕಾಲ ಸದನದಲ್ಲಿ ಅಂಗಲಾಚಿ ಬೇಡಿಕೊಂಡರು. ಮಾಧುಸ್ವಾಮಿ, ಯಡಿಯೂರಪ್ಪನವರೇ ಒಳಗೆ ಕರೆದು ಮಾತುಕತೆ ಮೂಲಕ ಬಗೆಹರಿಸಿಬಿಡಿ, ಎಸ್.ಐ.ಟಿ. ತನಿಖೆ ಬೇಡ ಎಂದು ಕೇಳಿಕೊಂಡರು. ಆಪರೇಷನ್ ಕಮಲ ನಡೆಸುವ ಧ್ವನಿಸುರುಳಿ ಬಿಡುಗಡೆಯಾಗಿದೆ. ಈಗ ಆ ಪ್ರಕರಣವನ್ನು ತನಿಖೆ ಮಾಡಲು ಎಸ್.ಐ.ಟಿಯನ್ನು ರಚಿಸಲಾಗಿದೆ. ಅದಕ್ಕೂ ಮೊದಲು ನಾನು ಹೇಳುವುದಾದರೆ, ಈ ಪ್ರಜಾಪ್ರಭುತ್ವದಲ್ಲಿ ಸಮ್ಮಿಶ್ರ ಸರಕಾರಗಳು ಅನಿವಾರ್ಯ. ಸಾಂದರ್ಭಿಕವಾಗಿ ಸಮ್ಮಿಶ್ರ ಸರಕಾರಗಳು ಅಸ್ತಿತ್ವಕ್ಕೆ ಬರುತ್ತವೆ. ಹಾಗೆ […]

ರಾಜಕಾರಣ ವ್ಯಾಪಾರವೇ?

-ಎ.ಟಿ.ರಾಮಸ್ವಾಮಿ

ಇತ್ತೀಚೆಗಿನ ಬೆಳವಣಿಗೆಗಳಿಂದ ಬೇಸರಗೊಂಡು ನಾನು ಈ ಸದನದಲ್ಲಿ ಇರುವುದಕ್ಕಿಂತ ಕ್ಷೇತ್ರದ ಮತದಾರರ ನಡುವೆ ಇದ್ದು ಕೆಲಸ ಮಾಡುವುದು ವಾಸಿ ಎಂದು ಭಾವಿಸಿದೆ. ಅದಕ್ಕಾಗಿ ಸದನಕ್ಕೆ ಗೈರಾಗಿರಲು ಅನುಮತಿ ನೀಡುವಂತೆ ಸಭಾಧ್ಯಕ್ಷರಿಗೆ ಪತ್ರ ಬರೆದೆ. ವಿಧಾನ ಮಂಡಲ ಅಧಿವೇಶನ ಇರುವುದು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು. ದುರಂತವೆಂದರೆ ಕಳೆದ ಬಜೆಟ್ ಅಧಿವೇಶನದಲ್ಲಿ ನಾಡಿನ ಹಲವು ಜ್ವಲಂತ ಸಮಸ್ಯೆಗಳನ್ನು ಬದಿಗೊತ್ತಿ ಶಾಸಕರ ನಡವಳಿಕೆ ಬಗ್ಗೆ ಚರ್ಚಿಸುವಂತಾಯಿತು. ಅವರು ಅಲ್ಲಿ ಹೋದರು, ಇವರು ಇಲ್ಲಿ ಹೋದರು […]

ಪ್ರಜಾಪ್ರಭುತ್ವದಲ್ಲಿ ಮರುಸ್ಥಾಪಿಸಬೇಕಾದ ರಾಜಕೀಯ ನೈತಿಕತೆ

ಡಾ.ಬಿ.ಎಲ್.ಶಂಕರ್

ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಶಾಸಕರ ರೆಸಾರ್ಟ್-ಹೊೈಕೈ ರಾಜಕಾರಣ, ಕುದುರೆ ವ್ಯಾಪಾರ ಹಾಗೂ ಇವೆಲ್ಲಕ್ಕೂ ಮುಕುಟವಿಟ್ಟಂತೆ ನಡೆದ ಆಡಿಯೋ ಪ್ರಕರಣ ಪ್ರಜಾಪ್ರಭುತ್ವದ ಮೇಲೆ ಜನಸಾಮಾನ್ಯರಿಗೆ ಇರುವ ನಂಬಿಕೆ ಮತ್ತು ಭರವಸೆಗಳ ಮೇಲೆ ತೀವ್ರ ಪರಿಣಾಮ ಬೀರಿದ ವಿದ್ಯಮಾನ. ಸಂವಿಧಾನದ ಚೌಕಟ್ಟಿನಲ್ಲಿ ರೂಪಿತವಾಗುವ ಆಳ್ವಿಕೆಯು ಮೇಲಿನಿಂದ ಹೇರಲ್ಪಟ್ಟ ಆಳ್ವಿಕೆಯಾಗಿರದೆ ಜನರ ಆಶೋತ್ತರಗಳನ್ನು ಪ್ರತಿನಿಧಿಸಬೇಕು. ಇದು ಭಾರತದ ಪ್ರಜೆಗಳಾದ ನಾವು ನಮಗೇ ಕೊಟ್ಟುಕೊಂಡ ಸಂವಿಧಾನದ ಮುನ್ನುಡಿಯ ಪ್ರಾರಂಭದ ಸಾಲುಗಳು. ಇದರರ್ಥ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಪ್ರಭುಗಳಾಗಿರಬೇಕು; ಪ್ರಜಾಪ್ರತಿನಿಧಿಗಳು ಸೇವಕರಾಗಿರಬೇಕು. ಆದರೆ ದೇಶದಲ್ಲಿ […]

ಕುಮಾರಸ್ವಾಮಿ ಮಂಡಿಸಿದ 19-20ರ ರಾಜ್ಯ ಮುಂಗಡ ಪತ್ರ ಬೆಂಗಳೂರಿನ ಪ್ರಾಮುಖ್ಯತೆ ಅರಿತ ಬಜೆಟ್

ಕಳೆದ ಆರೆಂಟು ತಿಂಗಳುಗಳಲ್ಲಿ ವಿಧಾನ-ವಿಕಾಸ ಸೌಧಗಳ ಕಾರಿಡಾರಿನಲ್ಲಿ ಕಂಗಾಲು ವಾತಾವರಣ ಕಂಡುಬಂದಿತ್ತು. ಈ ಸರ್ಕಾರ ಇರುವುದೋ ಇಲ್ಲವೋ ಎಂಬ ಗಾಭರಿಯ ಜೊತೆಗೆ, ಈ ಸರ್ಕಾರದಲ್ಲಿ ಯಾವುದೇ ಕೆಲಸವಾಗುತ್ತಿಲ್ಲ ಹಾಗೂ ಯಾವುದೇ ಕೆಲಸಕ್ಕೆ ಹಣ ಬಿಡುಗಢೆ ಆಗುತ್ತಿಲ್ಲ ಎಂಬ ಅಳಲು ಎಲ್ಲರದ್ದಾಗಿತ್ತು. ಕುಮಾರಸ್ವಾಮಿಯವರ ಬಜೆಟ್ ಓದಿದ ಮೇಲೆ ಏಕೆ ಈ ಸರ್ಕಾರದ ಬಳಿ ಹಣಕ್ಕೆ ಈ ಪಾಟಿ ಮುಗ್ಗಟ್ಟು ಆಗಿದೆಯೆಂದು ಸ್ವಲ್ಪ ನಿಮಗೂ ಗೊತ್ತಾಗಬಹುದು. ಮೊದಲಿಗೆ ಬಜೆಟ್‍ನ ಕೆಲವು ಗುಣಾತ್ಮಕ ಅಂಶಗಳನ್ನು ಗುರುತಿಸೋಣ. ಏನಿಲ್ಲವೆಂದರೂ ಈ ಮುಖ್ಯಮಂತ್ರಿ ಬೆಂಗಳೂರಿನ […]

ಕವನಗಳು

ಕವನಗಳು

ಅಂತಿಂಥ ಹೆಣ್ಣಲ್ಲ! ನೆನಪಿರಕೇನು ಕಮ್ಮಿ ವಯಸೆ? ಪಾಪ ಅರಳು ಮರಳು! ಅಷ್ಟು ಕಾಣದೆ ನಿಮಗೆ? ಒಮ್ಮೊಮ್ಮೆ ಬೀದಿ ತಿರುಗಿರಬೋದು ಸೆರಗು ಹಾರಿಸಿ ಕಣ್ಣು ಹೊಡೆದಿರಬೋದು ಗಂಡನೆಂಬ ಪ್ರಾಣಿ ಇದ್ದಿದ್ದರೆ ಇದೆಲ್ಲ ಏಕಿತ್ತು? ಪಾಪ ಹೊಟ್ಟೆಪಾಡು! ಇಡೀ ಜೀವನ ಪರಗಂಡನ ಜತೆ ನವೆದಳಲ್ಲ ಅವಳೇನು ಬೇಕಂತ ಮಾಡಿದಳೆ? ಕೂತುಣ್ಣುವವರೆ ಎಲ್ಲ ದುಡಿವವರೆ ಇಲ್ಲವಲ್ಲ ತನ್ನನ್ನೂ ತನ್ನವರನ್ನೂ ಸಂಭಾಳಿಸಿದ್ದೇನು ಸಾಮಾನ್ಯನ? ಅವಳದೂ ಪಾಪ ಹೇಸದ ಜೀವ ತಾನೆ? ಹಿರಿತನದ ಅಧಿಕಾರ ಹೇಳಿಕೇಳಿ ಬಂದೀತೆ? ಎಳೆಯರು ದಾರಿ ತಪ್ಪಿದರೆ ಎಷ್ಟು ಕಳವಳ […]

ಮಾರುವೇಷದಲ್ಲಿ ಮಹಾರಾಜರು

-ಬಾಲಚಂದ್ರ ಬಿ.ಎನ್.

ರಾಜ್ಯಲಕ್ಷ್ಮಿಯ ದುಃಖ ಶಮನಕ್ಕಾಗಿ ರಾಜಕಾರಣಿಗಳ ಶ್ರೀಮುಖಗಳಿಂದ ಹೊರಬಂದ ಅಮೃತವಾಣಿಗಳನ್ನು ಬಿತ್ತರಿಸಲು ನಿರ್ಧರಿಸಿದರು. ‘ನಾನು ಈ ಪರಿಸ್ಥಿತಿಯ ಸಾಂದರ್ಭಿಕ ಶಿಶು ಅಷ್ಟೇ’ ಎಂಬ ಮಹಾ ಹಾಸ್ಯಾಸ್ಪದ ರಾಜಾವಾಣಿಯಿಂದ ಆರಂಭವಾದ ಕಾರ್ಯಕ್ರಮ ‘ನಮ್ಮ ಕುಟುಂಬಕ್ಕೆ ಅಧಿಕಾರದ ಮೇಲೆ ಆಸೆ ಇಲ್ಲ’ ಎಂಬ ದೊಡ್ಡಗೌಡರ ಹೇಳಿಕೆಯೊಂದಿಗೆ ಮುಂದುವರಿಯಿತು. ಕೊನೆಗೆ ರಾಜ್ಯಲಕ್ಷ್ಮಿ ಇತ್ತ ವರಗಳು ಎಂಥವು? ಪ್ರಜಾಜನ ಮಂದಾರ ಎಂದೇ ಹೆಸರಾದ ರಾಜರು ಒಮ್ಮೆ ಮಾರುವೇಷ ತೊಟ್ಟು ರಾಜ್ಯದ ಪರ್ಯಟನೆಗೆ ಹೊರಟರು. ಎಲ್ಲೆಲ್ಲೂ ಸುಭಿಕ್ಷೆ ತಾಂಡವವಾಡುತ್ತಿತ್ತು. ಎತ್ತ ನೋಡಿದರತ್ತ ಜನರು ಅಗ್ಗದ ಮದ್ಯ […]

ಬರ್ನಿಂಗ್ (2018) ಸದ್ಯದ ಬದುಕು, ಅಸ್ತಿತ್ವ ಮತ್ತು ಸೋಸಿಯಾಲಜಿ ಕುರಿತ ಪ್ರಶ್ನೆಯ ರೂಪಕ.

-ಪ್ರದೀಪಕುಮಾರ್ ಶೆಟ್ಟಿ ಕೆಂಚನೂರು.

ಬರ್ನಿಂಗ್ (2018) ಸದ್ಯದ ಬದುಕು, ಅಸ್ತಿತ್ವ ಮತ್ತು ಸೋಸಿಯಾಲಜಿ ಕುರಿತ ಪ್ರಶ್ನೆಯ ರೂಪಕ.
-ಪ್ರದೀಪಕುಮಾರ್ ಶೆಟ್ಟಿ ಕೆಂಚನೂರು.

‘ಬಾರ್ನ್ ಬರ್ನಿಂಗ್’ ಎಂಬ ಸಣ್ಣ ಕಥೆಯಾಧರಿಸಿದ ಈ ಕೊರಿಯಾ ಚಿತ್ರ 2018ರ ಕಾನ್ ಚಿತ್ರೋತ್ಸವದಲ್ಲಿ ಅಧಿಕೃತ ಸ್ಪರ್ಧೆಯಲ್ಲಿತ್ತು. ಇದು ಮೊತ್ತಮೊದಲಬಾರಿಗೆ ಕೊರಿಯಾ ದೇಶವನ್ನು ಆಸ್ಕರ್‍ನಲ್ಲಿ ವಿದೇಶೀ ಚಿತ್ರ ವಿಭಾಗದಲ್ಲಿ ಪ್ರತಿನಿಧಿಸಿದೆ. ಏಶ್ಯಾದ ರಾಷ್ಟ್ರಗಳ ಪೈಕಿ ಉತ್ತರ ಮತ್ತು ದಕ್ಷಿಣ ಕೊರಿಯಾಗಳು ಅತ್ಯಂತ ವಿಲಕ್ಷಣ ಚರಿತ್ರೆ ಮತ್ತು ವರ್ತಮಾನವನ್ನು ಹೊಂದಿವೆ. ಅಲ್ಲಿನ ಚರಿತ್ರೆ ಮತ್ತು ಅದಕ್ಕೆ ಅನುರೂಪವಾಗಿ ಒದಗಿರುವ ಕ್ರಿಯಾಶೀಲ ವೈವಿಧ್ಯದ ಅಭಿವ್ಯಕ್ತಿಗಳು ನಮಗೆ ಇಂತಹ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿವೆ. ವಸಾಹತೋತ್ತರ ಕೊರಿಯಾದ ಸಮಾಜದಲ್ಲಿ ಬಹಳ ಪ್ರಧಾನವಾಗಿ ಕಾಣಿಸುವ […]

ವಿಶಿಷ್ಟ ಆಚರಣೆಯ ಜನಪದ ಕ್ರೀಡೆಗಳು

-ಕೆ.ವಿ.ಪರಮೇಶ್.

ವಿಶಿಷ್ಟ ಆಚರಣೆಯ  ಜನಪದ ಕ್ರೀಡೆಗಳು
-ಕೆ.ವಿ.ಪರಮೇಶ್.

ಗ್ರಾಮೀಣ ಕ್ರೀಡೆಗಳಲ್ಲಿ ಹಲವು ವಿಶಿಷ್ಟ ಮತ್ತು ವಿಚಿತ್ರ ಆಟಗಳಿವೆ. ಕೆಲವು ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಂಡುಬರುವಂತಹ ಆಟಗಳು. ಅವುಗಳಿಗೆ ಗ್ರಾಮಮಟ್ಟವೇ ದೊಡ್ಡ ವೇದಿಕೆ. ಇವುಗಳಿಗೆ ಬೇರೆಲ್ಲೂ ಹೇಳಿಕೊಳ್ಳುವಂತಹ ಹೆಸರಿಲ್ಲ. ಹಾಗಾಗಿ ಹುಟ್ಟಿದ ಜಾಗದಲ್ಲೇ ಅಸ್ತಿತ್ವ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇವುಗಳಿಗಿದೆ. ಇಂತಹ ಕ್ರೀಡೆಗಳ ಪಟ್ಟಿಯಲ್ಲಿ ಕಪ್ಪೆಗುಪ್ಪಾಟ, ಟೊಪ್ಪಿಯಾಟ, ಗೋಣಿಚೀಲ ಓಟ, ನಿಂಬೆಹಣ್ಣಿನ ಓಟ ಮತ್ತಿತರ ಆಟಗಳಿವೆ.   ಕಪ್ಪೆಗುಪ್ಪಾಟ ಈ ಬಗೆಯ ಆಟಗಳಿಗೆ ಪ್ರಾಚೀನ ಹಿನ್ನೆಲೆ ಇದ್ದರೂ ಹೇಳಿಕೊಳ್ಳುವಂತಹ ಮನ್ನಣೆ ಸಿಗಲಿಲ್ಲ. ಹಾಗಾಗಿ ಆಯಾ ಊರು ಅಥವಾ ಸೀಮಿತ […]

ಕನ್ನಡ ಗಜಲ್ ಹಾದಿ

-ಶ್ರೀದೇವಿ ಕೆರೆಮನೆ.

ಕನ್ನಡ ಗಜಲ್ ಹಾದಿ
-ಶ್ರೀದೇವಿ ಕೆರೆಮನೆ.

ಕನ್ನಡದ ಸಮಕಾಲೀನ ಕಾವ್ಯ ಪರಂಪರೆಯಲ್ಲಿ ಮುಂಚೂಣಿಯಲ್ಲಿ ಮುನ್ನುಗ್ಗುತ್ತಿರುವ ಪ್ರಕಾರವೆಂದರೆ ಗಜಲ್. ಉರ್ದು ಕಾವ್ಯದ ರಾಣಿ ಗಜಲ್ ಈಗ ಕನ್ನಡ ಕಾವ್ಯಾಸಕ್ತರ, ಕವಿಗಳ ಕಣ್ಮಣಿ. ಈ ಹೊತ್ತಿನಲ್ಲಿ ಓದುಗರಿಂದ ಹಿಡಿದು ಬರೆಯುವ ಎಲ್ಲರೂ ಗಜಲ್ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದಿರಬೇಕಾದುದು ತೀರಾ ಆವಶ್ಯಕ. ಮೂಲತಃ ಅರಬ್ಬಿ ಭಾಷೆಯಿಂದ ಬಂದ ಗಜಲ್‍ನ ಮೂಲ ಹುಡುಕಿದರೆ ಧೀರರ ಹೊಗಳಿಕೆ, ದಾರ್ಶನಿಕತೆಯನ್ನು ತುಂಬಿzಮಧುರ, ಪ್ರೀತಿ-ಪ್ರೇಮದ ಅನುಭೂತಿಗಳಿಂದ ಕೂಡಿದ ಯೌವನ, ಮಧು, ಮುಕ್ತತೆ, ಶೃಂಗಾರಭಾವಗಳಿಂದ ಕೂಡಿದ ಪೀಠಿಕೆಯ ದ್ವಿಪದಿಗಳನ್ನು ಹೊಂದಿರುವ ಕಸೀದ್ ಎನ್ನುವ ಕಾವ್ಯ […]

ನಾನು ಫಿನ್ನಿಶ್ ಭಾಷೆ ಕಲಿತದ್ದು!

-ಜಯಶ್ರೀ ದೇಶಪಾಂಡೆ.

ನಾನು ಫಿನ್ನಿಶ್ ಭಾಷೆ ಕಲಿತದ್ದು!
-ಜಯಶ್ರೀ ದೇಶಪಾಂಡೆ.

ಅದೇಕೋ ಮೂರ್ನಾಲ್ಕು ಕ್ಲಾಸುಗಳು ಮುಗಿಯುವ ಹೊತ್ತಿಗೆ ಆ ಅಪರಿಚಿತ ಭಾಷೆಯ ಮೇಲೆ ನನಗಂತೂ ಏನೋ ಅಕ್ಕರೆ ಹುಟ್ಟಿಬಿಟ್ಟಿತು. ವಾರಕ್ಕೆ ಮೂರು ದಿನ ಮಾತ್ರ ಕ್ಲಾಸು ಎಂದು ಟೈಮ್ ಟೇಬಲ್ ಕೊಟ್ಟುಬಿಟ್ಟಿದ್ದರು. ಹಾಗಾಗಿ ಮಂಗಳವಾರ, ಗುರುವಾರ, ಶುಕ್ರವಾರಗಳಿಗಾಗಿ ಚಾತಕಪಕ್ಷಿಯಂತೆ ಕಾದು ಕೂತಿರುತ್ತಿದ್ದೆ. ಪ್ರತಿಬಾರಿಯಂತೆ ಈ ಸಲವೂ ಫಿನ್ಲೆಂಡ್‍ಗೆ ಹೊರಡುವ ಮುನ್ನ ನಾನು ನಿರ್ಧಾರವೊಂದನ್ನು ಮಾಡಿದ್ದೆ. ಅದೇನೆಂದರೆ ಅಲ್ಲಿರುವಾಗ ಫಿನ್ನಿಶ್ ಭಾಷೆಯನ್ನು ಕಲಿತುಬಿಡುವುದು! ಹಾಗೆ ಈ ನಿರ್ಧಾರವನ್ನು ಪ್ರತಿ ಸಲವೂ ಮಾಡಿರುತ್ತಿದ್ದೆ. ಆದರೆ ಅದನ್ನು ಪೂರ್ಣಗೊಳಿಸುವುದು ಆ ನಿರ್ಧಾರದ ದ್ವಿತೀಯಾರ್ಧ […]

ನನ್ನ ಕ್ಲಿಕ್

ಮೀನುಗಾರನ ಚಿತ್ತಾರ ಮೀನುಗಾರಿಕೆ ಒಂದು ಕಲೆ. ಗಾಳ ಹಾಕಿ, ಅಥವಾ ಬಲೆಯಿಂದ ಮೀನು ಹಿಡಿಯುವುದು ಮೀನುಗಾರರ ಕುಲಕಸಬು. ಆದರೆ ಇಲ್ಲಿರುವ ಮೀನುಗಾರ ತನ್ನ ಕೆಲಸದಲ್ಲಿ ಮಗ್ನನಾಗಿರುವಾಗಲೇ ದೃಶ್ಯಕಾವ್ಯ ಮೂಡಿಸಿದ್ದಾನೆ. ಮುಸ್ಸಂಜೆಯ ಹೊತ್ತಿನಲ್ಲಿ ಮೀನುಗಾರ ನಿಂತ ನೀರಿನಲ್ಲಿ ಬಲೆ ಹರಡಿದ ನಂತರ ಉದ್ದ ಬೆತ್ತದಿಂದ ನೀರಿಗೆ ಬಡಿಯುತ್ತಾನೆ. ಇದರಿಂದಾದ ತಲ್ಲಣಕ್ಕೆ ಮೀನುಗಳು ಚದುರಿ ಬಲೆಯಲ್ಲಿ ಬೀಳಲಿ ಎಂಬುದು ಆತನ ಉದ್ದೇಶ. ಆದರೆ ಆತ ಬಡಿದ ರಭಸಕ್ಕೆ ನೀರು ಚಿಮ್ಮಿ, ಸಂಜೆಯ ಸೂರ್ಯ ಕಿರಣಗಳನ್ನು ಪ್ರತಿಫಲಿಸಿ ಚಿತ್ತಾರ ಮೂಡಿರುವುದು ಮೀನುಗಾರನ […]

ಕೌತುಕಗಳ ಕಣಜ

-ಪೂರೀಗಾಲಿ ಮರಡೇಶಮೂರ್ತಿ.

ಕೌತುಕಗಳ ಕಣಜ
-ಪೂರೀಗಾಲಿ ಮರಡೇಶಮೂರ್ತಿ.

ನಿನಗೆ ಲಾಭ ಬರದಿದ್ದರೂ ನನ್ನಿಂದ ಲಾಸ್ ಆಯ್ತು ಅನ್ನೋ ಮಾತು ಬ್ಯಾಡ ಅನ್ನೋರೆ ಜಾಸ್ತಿ ನಮ್ಮ ಹಳ್ಳೀಲಿ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪೂರೀಗಾಲಿ ನನ್ನ ಊರು. ಊರ ಮುಂದೆ ಗೌತಮ ಬುದ್ಧನನ್ನು ನೆನೆಸುವ ದೊಡ್ಡ ಅರಳಿಮರವಿದೆ. ಯಾವ ಕಾಲದ್ದೋ, ಯಾರು ನೆಟ್ಟಿದ್ದೋ. ಭೀಷ್ಮನ ಛಾಯೆ ಆ ಮರಕ್ಕಿದೆ. ಅಲ್ಲೇ ಬದಿಗೆ ಸುತ್ತಮುತ್ತಲು ಗಡ್ಡ ಬಿಟ್ಟುಕೊಂಡು ಧ್ಯಾನಸ್ಥನಾಗಿರುವ ಮುನಿದೇವರ ಮರವೂ ಉಂಟು. ಊರಿನ ಮೊಗಸಾಲೆಯ ಬಯಲಿಗೊಂದು ದೊಡ್ಡ ಕೆರೆ. ಅಲ್ಲೇ ಊರಿಗೆ ಬೇಕಾದ ನೀರೆತ್ತುವ ಬಾವಿ, ಜತೆಗೆ […]

ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…

-ಕಾವ್ಯಶ್ರೀ ಎಚ್.

ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…
-ಕಾವ್ಯಶ್ರೀ ಎಚ್.

ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ ಶಿವಭಕ್ತಿನಿಷ್ಠೆಯನ್ನು ಪಾಲಿಸಿದ್ದಕ್ಕಾಗಿ. ಹರಿಹರನ ರಗಳೆಯನ್ನು ಓದುತ್ತಿದ್ದರೆ ನಿಮ್ಮ ಎದೆಯೊಳಗೊಂದು ಡಮರು ನಿನಾದ ಚಿಮ್ಮಿ ಹೊಮ್ಮುತ್ತಲಿರುತ್ತದೆ ಎಂದರೆ ಉತ್ಪ್ರೇಕ್ಷೆಯಾಗದು. ಅವನ ಭಾಷೆ, ಲಯ, ಭಕ್ತಿಯ ತೀವ್ರತೆ ಅಂತಹದು. ಅವನ ಹೆಸರಿನಲ್ಲೇ ಶಿವನನ್ನು ಹೊತ್ತವನು. ಪೆರೆಯಾಳದೇವ- ಹೆರೆಯಾಳದೇವ-ಹರಿಹರದೇವ ಎಂಬುದು ಹರಿಹರನ ಹೆಸರಿನ ಮೂಲವಾಗಿರಬಹುದೆಂದು ಡಾ.ಕಲಬುರ್ಗಿಯವರು ಹೇಳುತ್ತಾರೆ. ಇದರರ್ಥ ಅರ್ಧಚಂದ್ರನನ್ನು ಧರಿಸಿದವ ಎಂದು. […]

ಹೊಸ ಪುಸ್ತಕ

ಕಾಮನ ಹುಣ್ಣಿಮೆ ನಟರಾಜ್ ಹುಳಿಯಾರ್ ಪುಟ: 218, ಬೆಲೆ: ರೂ.180 ಟೆಲಿಪೋನ್ ಸುಲಭವಾಗಿ ದಕ್ಕದ ಕಾಲದ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಈಗಿನ ಕಾಲದ ಓದುಗರನ್ನೂ ಆವರಿಸುವಂತೆ ರಚಿಸಿದ ಕಾದಂಬರಿ ಇದಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಲೇಖಕ ಡಾ. ನಟರಾಜ್ ಹುಳಿಯಾರ್, ಸಾಮಾನ್ಯ ಜನ ಬಡತನ, ಬಿಕ್ಕಟ್ಟುಗಳ ನಡುವೆಯೂ ಘನತೆಯಿಂದ ಬದುಕಲೆತ್ನಿಸುವ ಜೀವನ ಹೋರಾಟವನ್ನು ಮತ್ತು ಅದರಲ್ಲಿ ಅವರು ಪಡೆಯುವ ಗೆಲುವುಗಳನ್ನು ಈ ಕಾದಂಬರಿಯಲ್ಲಿ ದಾಖಲಿಸಿದ್ದಾರೆ.   ಕನ್ನಡಿ ನಟರಾಜ್ ಹುಳಿಯಾರ್ ಪುಟ: 362, ಬೆಲೆ: […]

ಓದುಗರ ಸಂವೇದನೆ ಕಲಕುವ ಕೃತಿ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ

-ಡಾ.ಸುಭಾಷ್ ರಾಜಮಾನೆ.

ಕನ್ನಡದ ಹೆಸರಾಂತ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಂಕಣ ಬರಹಗಳ ಸಂಕಲನ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಕೃತಿಯು ಆರು ತಿಂಗಳಲ್ಲಿ ಮರು ಮುದ್ರಣಗೊಂಡಿದೆ. ಸಂಸ್ಕೃತಿಕವಾಗಿ ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ವಿಸ್ತರಿಸುತ್ತಿರುವ ಕೃತಿಯಾಗಿದೆ. ಕನ್ನಡದ ಜನಪ್ರಿಯ ‘ಸುಧಾ’ ಸಾಪ್ತಾಹಿಕದ ‘ವಿಚಾರ ಲಹರಿ’ಯಲ್ಲಿ ನಿಯತವಾಗಿ ನಾಲ್ಕು ವರ್ಷಗಳ ಕಾಲ ಈ ಅಂಕಣ ಬರಹಗಳು ಪ್ರಕಟವಾಗಿದ್ದವು. ಸಾಮಾನ್ಯವಾಗಿ ಬಹುಸಂಖ್ಯಾತ ಜನರು ಓದುವ, ಮೆಚ್ಚುವ ಬರಹಗಳನ್ನು ಜನಪ್ರಿಯ ಎಂಬ ಹಣೆಪಟ್ಟಿಯನ್ನು ಅಂಟಿಸಿ ನೇತ್ಯಾತ್ಮಕವಾಗಿ ನೋಡಲಾಗುತ್ತದೆ. ಜನಪ್ರಿಯ ಬರಹಗಳು ಬಹುಜನರು ಒಪ್ಪುವ […]

1 2 3