ಚಿಕ್ಕ ಚೊಕ್ಕ ಕುಟುಂಬ

-ವಿದ್ಯಾ ವೆಂಕಟೇಶ್

ಈ ಕುಟುಂಬ ಯಾವುದೇ ಅಪೇಕ್ಷೆಗಳನ್ನು ಹೊಂದಿಲ್ಲ. ಕುಟುಂಬದವರೆಲ್ಲ ಆರೋಗ್ಯವಂತರಾಗಿರಬೇಕೆಂಬುದು ಇವರ ಆಶಯ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಹುಲಿಕೆರೆ ಗ್ರಾಮದ 54 ವರ್ಷದ ಪ್ರಸಾದ್ ಕುಟುಂಬದ ಯಜಮಾನ. ಹೆಂಡತಿ 40 ವರ್ಷದ ಶಿವಮ್ಮ ಹಾಗೂ ಇಬ್ಬರು ಗಂಡು ಮಕ್ಕಳ ಚಿಕ್ಕ ಕುಟುಂಬ ಇವರದು. ಹಿರಿಯ ಮಗ ಯಶವಂತ 13 ವರ್ಷದವನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎರಡನೆಯ ಮಗ ಪ್ರವೀಣ 11 ವರ್ಷದವನಿದ್ದು 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರಿಗೆ ಯಾರೂ ಅವಲಂಬಿತರಿಲ್ಲ; ಚಿಕ್ಕ-ಚೊಕ್ಕ ಕುಟುಂಬ. ಪ್ರಸಾದ್ ರೂ.2000 ಮನೆ […]

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!

-ಪ.ರಾಮಕೃಷ್ಣ ಶಾಸ್ತ್ರಿ

 ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ! <p><sub> -ಪ.ರಾಮಕೃಷ್ಣ ಶಾಸ್ತ್ರಿ </sub></p>

ಕೊರತೆಗಳ ಎಲ್ಲ ದುಃಖವನ್ನೂ ಮರೆಸುವ ನಿರಂತರ ನಗುವೇ ಜಿನ್ನಪ್ಪ ಪೂಜಾರಿಯವರ ಆಸ್ತಿಯಾಗಿದ್ದರೂ ಅದನ್ನು ಮೀರಿಸಿದ ನೋವಿನ ಹೊಳಹು ನಗೆಯ ನಡುವೆ ಚಿಮ್ಮುತ್ತದೆ. ಇವರು ಜಿನ್ನಪ್ಪ ಪೂಜಾರಿ. ಅರುವತ್ನಾಲ್ಕರ ಹರಯ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಗಾಂಧಿನಗರದಲ್ಲಿ ಅವರ ವಾಸ. ಒಂದು ಕಾಲದಲ್ಲಿ ತಾಳೆಮರವೇರಿ ಕಳ್ಳು ಇಳಿಸಿ ಬದುಕುತ್ತಿದ್ದ ಬಿಲ್ಲವ ಜನಾಂಗ ಅವರದು. ಸರಕಾರದ ನೀತಿಯಿಂದಾಗಿ ಈ ಗ್ರಾಮೀಣ ಕಸುಬನ್ನು ಹಲವು ಕಾನೂನು ಕಟ್ಟಳೆಗಳು ಪೀಡಿಸಿದ ಪರಿಣಾಮ ವೃತ್ತಿ ಅಳಿವಿನಂಚು ಸೇರಿತು. ಮುಕ್ತವಾದ ಸೇಂದಿ ಮಾರಾಟಕ್ಕೂ ಕಾಯಿದೆಯ ಕಬಂಧ […]

ಸಂಪಾದಕೀಯ

ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳೀಮನೆಯ ಬಾಗಿಲಿಗೆ ‘ನಾಳೆ ಬಾ’ ಎಂದು ಸುಣ್ಣದ ಕಲ್ಲಿನಲ್ಲೋ, ಕರಕಲು ಇದ್ದಿಲಿನಿಂದಲೋ ಗೀಚುತ್ತಿದ್ದೆವು. ನಡುರಾತ್ರಿ ಬಂದು ಕದ ತಟ್ಟುವ ದೆವ್ವ ಈ ಸಂದೇಶವನ್ನು ಓದಿ ಹಿಂದಿರುಗಿ ಹೋಗಲಿ, ಹೋಗುತ್ತದೆ ಎಂಬ ನಂಬಿಕೆ ಈ ಕ್ರಿಯೆಯ ಹಿಂದಿತ್ತು. ಕೇಡುಗಳಿಂದ ತಪ್ಪಿಸಿಕೊಳ್ಳಲು ಹಳ್ಳಿಗರು ತಮ್ಮದೇ ಆದ ರೀತಿಯಲ್ಲಿ ಅತಿಯಾದ ಮುಗ್ಧತೆ, ತುಸು ಬುದ್ಧಿ ಬೆರೆಸಿ ಹೂಡುವ ಸರಳ ತಂತ್ರಗಳಿಗೆ ಇದೊಂದು ನಿದರ್ಶನ. ದೆವ್ವ ಇದೆಯೇ, ಅದು ಅಕ್ಷರಜ್ಞಾನ ಹೊಂದಿದೆಯೇ, ಅದಕ್ಕೆ ಕನ್ನಡ ಬರುತ್ತದೆಯೇ ಎಂಬ ಪ್ರಶ್ನೆಗಳಿಗೆ […]

ನಡೆದು ನೋಡಿದ ಮೇಲುಕೋಟೆ

ನಡೆದು ನೋಡು ಕರ್ನಾಟಕ ಸರಣಿಯ ಎರಡನೆಯ ನಡಿಗೆ ಮೇಲುಕೋಟೆ ಕಡೆಗೆ ಸಾಗಿತು ಫೆಬ್ರವರಿ 8ರ ಮುಂಜಾನೆ. ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ನಡಿಗೆಯ ಉದ್ಘಾಟನಾ ಸಮಾರಂಭ ಏರ್ಪಾಡಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಸಮಾಜಮುಖಿಗಳಾಗಿ ಬದುಕಿದ ನಿತ್ಯ ಸಚಿವ ಕೆ.ವಿ.ಶಂಕರೇಗೌಡ, ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಮತ್ತು ಲೇಖಕ ಎಚ್.ಎಲ್.ಕೇಶವಮೂರ್ತಿ ಅವರ ಸ್ಮರಣೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಲೇಖಕ ಪ್ರೊ.ಜಯಪ್ರಕಾಶಗೌಡರು ಮಾತನಾಡಿ ಈ ಮಹಾನೀಯರು ಮಂಡ್ಯಕ್ಕೆ ನೀಡಿದ ಕೊಡುಗೆ ಸ್ಮರಿಸಿದರು. ರಂಗ ನಿರ್ದೇಶಕ ರಘುನಂದನ […]

ಮನೆ ಕಟ್ಟುವ ಆಸೆ

-ಎಂ.ಕುಸುಮ

ಹಾಸನದ ಈ ಕುಟುಂಬದ ಯಜಮಾನ 55 ವರ್ಷದ ನಾಗೇಶ್ ಎ.ಟಿ. ಪತ್ನಿ 48 ವರ್ಷದ ನಂಜಮ್ಮ ಹಾಗೂ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಕುಟುಂಬದ ಇತರ ಸದಸ್ಯರು. ಮಗ 23 ವರ್ಷದ ಸಂಜಯ್ ಎ.ಎನ್. ಹಿರಿಯ ಮಗಳು 22 ವರ್ಷದ ಸಂಗೀತ ಎ.ಎನ್ ಮತ್ತು ಕೊನೆಯ ಮಗಳು 20 ವರ್ಷದ ಸುಷ್ಮ ಎ.ಎನ್. ಹಾಸನದ ಆಡುವಳ್ಳಿ, ಕೆ.ಎಸ್.ಆರ್.ಟಿ.ಸಿ ವಸತಿ ಸಮುಚ್ಚಯದ ಪಕ್ಕದಲ್ಲಿ ಇವರ ವಾಸ. ಇವರ ಮೂಲ ಹಾಸನ ಪಟ್ಟಣವೇ ಆಗಿದ್ದು, ಜಾತಿ ಪರಿಶಿಷ್ಟ ಜಾತಿಗೆ (ಆದಿ […]

ಇಂದು ಸಂತೃಪ್ತ, ನಾಳೆ ಗೊತ್ತಿಲ್ಲ!

-ಡಾ. ಜಾಜಿ ದೇವೇಂದ್ರಪ್ಪ

 ಇಂದು ಸಂತೃಪ್ತ, ನಾಳೆ ಗೊತ್ತಿಲ್ಲ! <p><sub> -ಡಾ. ಜಾಜಿ ದೇವೇಂದ್ರಪ್ಪ </sub></p>

ಭೋವಿ ರಾಘವೇಂದ್ರ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಜಂಗಮರಹಟ್ಟಿಯವ. ಬದುಕನ್ನು ಅರಸಿಕೊಂಡು ತಂದೆ ರಾಮಾಂಜನೇಯ ತಾಯಿ ಅಂಬಮ್ಮನೊಂದಿಗೆ ಗಂಗಾವತಿಗೆ ಗುಳೆ ಬಂದವನು. ಮಿನಿಲಾರಿಯನ್ನು ಖರೀದಿ ಮಾಡಿ ಅದರಲ್ಲಿ ಒಂದು ಅಚ್ಚುಕಟ್ಟಾದ ಎಗ್‍ ಐಟಂ ಪ್ರಧಾನವಾದ ಫಾಸ್ಟ್ ಫುಡ್ ಸೆಂಟರ್ ಆರಂಭಿಸಿದ್ದಾನೆ. ಗಂಗಾವತಿಯ ಬಸ್‍ನಿಲ್ದಾಣದ ಪಕ್ಕದಲ್ಲಿರುವ ನಗರಸಭೆಯ ಗೋಡೆಗೆ ಹೊಂದಿಕೊಂಡಂತೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಯುವಕನೊಬ್ಬ ಕೈ-ಕಾಲಿಗೆ ಒಂದಿಷ್ಟೂ ಬಿಡುವಿಲ್ಲದೆ ಎಗ್‍ರೈಸ್, ಎಗ್‍ಚಪಾತಿ, ಎಗ್‍ಬಾತ್, ಎಗ್‍ಬಿರಿಯಾನಿ, ಆಮ್ಲೇಟ್ ಹಾಕುತ್ತಿದ್ದರೆ ಘಮಘಮಿಸುವ ಎಗ್ […]

ಮುಖ್ಯಚರ್ಚೆಗೆ ಪ್ರವೇಶ

ಸಾಮಾನ್ಯ ಕನ್ನಡಿಗನ ಅಸಾಮಾನ್ಯ ಚಿತ್ರಣ. ನೀವು ಪತ್ರಿಕೆಗಳಲ್ಲಿ ರಾಜಕಾರಣಿಗಳ, ಮಂತ್ರಿಗಳ, ಹೆಸರಾಂತರ ಅಥವಾ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದವರ ಜೀವನಚಿತ್ರಣಗಳನ್ನು ಓದುತ್ತೀರಿ. ಚುನಾವಣೆಯ ಸಮಯದಲ್ಲಂತೂ ಅಭ್ಯರ್ಥಿಗಳ ಆಸ್ತಿ, ಋಣ, ವಾಹನಗಳು, ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿ ವಿವರಗಳನ್ನು ಓದುತ್ತೀರಿ. ಕೆಲವು ವಾಹಿನಿಗಳಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಧರಿಸಿದ ಕೂಲಿಂಗ್ ಗ್ಲಾಸ್‍ನಿಂದ ಹಿಡಿದು ಅವರ ಹೆಂಡತಿಯರ ನಡುವಿನ ಜಗಳದ ‘ಪಿನ್ ಟು ಪಿನ್’ ವಿವರಗಳನ್ನೂ ಕೇಳಿಸಿಕೊಂಡಿರುತ್ತೀರಿ. ಆದರೆ ಸಾಮಾನ್ಯ ಕನ್ನಡಿಗನೊಬ್ಬನ ಜೀವನದ ಚಿತ್ರಣವನ್ನು ನಿಮಗೆ ಯಾರೂ ನೀಡಿರಲಿಕ್ಕಿಲ್ಲ. ಅವನ ಕುಟುಂಬದ ಆದಾಯ, […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ಕೊಡುಗೆ

ಬದುಕು ಕಟ್ಟಿಕೊಳ್ಳಲು, ಬೌದ್ಧಿಕವಾಗಿ ಬೆಳೆಯಲು ಅಗತ್ಯವಾದ ಮಾಹಿತಿ, ವಿಶ್ಲೇಷಣೆ, ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಹೊತ್ತು ಬರುತ್ತಿರುವ ‘ಸಮಾಜಮುಖಿ’ ಮಾಸಿಕವನ್ನು ನೀವೆಲ್ಲಾ ಗಮನಿಸಿದ್ದೀರಿ. ಅಂತಃಸತ್ವ ಮತ್ತು ಬಾಹ್ಯ ಸ್ವರೂಪ ಎರಡರಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಈ ಪತ್ರಿಕೆಯನ್ನು ನೀವು ಅಷ್ಟೇ ವಾತ್ಸಲ್ಯದಿಂದ ಬರಮಾಡಿಕೊಡಿರುವಿರಿ. ಸಮಾಜಮುಖಿಗೆ ವರ್ಷ ತುಂಬಿದ ಈ ಸಂದರ್ಭದಲ್ಲಿ ಓದುಗರ ಬಳಗವನ್ನು ವಿಸ್ತರಿಸಿಕೊಳ್ಳುವ ತವಕ ನಮ್ಮದು. ಈ ನಿಟ್ಟಿನಲ್ಲಿ ಹೀಗೊಂದು ಯೋಜನೆಯನ್ನು ನಿಮ್ಮೆದುರು ಮಂಡಿಸುತ್ತಿದ್ದೇವೆ. ಯೋಜನೆಯ ವಿವರ ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ […]

ಕಾಶ್ಮೀರ ಮೂಲನಿವಾಸಿಗಳ ವೇದನೆ, ನಿವೇದನೆ

ನೀರಕಲ್ಲು ಶಿವಕುಮಾರ್

ಪುಲ್ವಾಮಾ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ತಳಸ್ಪರ್ಶಿಯಾಗಿ ಮರುಪರಿಶೀಲಿಸುವ ಸಂದರ್ಭ ಸೃಷ್ಟಿಯಾಗಿದೆ. ಇತ್ತೀಚೆಗೆ ಕಣಿವೆರಾಜ್ಯಕ್ಕೆ ಅಧ್ಯಯನ ಪ್ರವಾಸ ಹೋಗಿದ್ದ ಲೇಖಕರು ಅಲ್ಲಿನ ಒಳಸುಳಿಗಳು, ಸ್ಥಳೀಯರ ಆಲೋಚನೆ, ಹಿರಿಯರ ವಿಷಾದ, ಕಿರಿಯರ ಆಕ್ರೋಶ ಕುರಿತು ಆಳನೋಟ ಬೀರಿದ್ದಾರೆ. ಈತನಕ ಹೊರಗಿನವರ ಗಮನಕ್ಕೆ ನಿಲುಕದ ಅನೇಕ ನಿಜಗಳು ಇಲ್ಲಿವೆ. ಕಾಶ್ಮೀರ ಭೂಮಿಯ ಮೇಲಿನ ಸ್ವರ್ಗ. ಹಿಮಾಚ್ಛಾದಿತ ಗಿರಿ ಶಿಖರಗಳ ಸಾಲು, ಹಸಿರು ಹಾಸಿ ಹೊದ್ದ ಕಣಿವೆ ಕಾನನಗಳು, ಹಿಮಾಲಯದಿಂದ ಇಳಿದು ಬಂದು ಸಮೃದ್ದಿ ಸೃಷ್ಟಿಸಿ ವರ್ಷವಿಡಿ ಹರಿಯುವ ಜೀವನದಿಗಳು; […]

ಏನಿದು ಅಸಾಮಾನ್ಯ ಚಿತ್ರಣ..?

-ಮೋಹನದಾಸ್.

ಪ್ರಾತಿನಿಧಿಕ ಮಾದರಿ ಅಧ್ಯಯನದ ರೂಪುರೇಶೆ ಇದೀಗ ಮತ್ತೆ ಚುನಾವಣಾ ಪರ್ವ. ಪಕ್ಷಗಳು ನಮ್ಮ ದೇಶದ ಬಡತನ ಮತ್ತು ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಹೊಸಹೊಸ ಯೋಜನೆಗಳನ್ನು ರೂಪಿಸುವ ಸಮಯ. ಅಭ್ಯರ್ಥಿಗಳು ನಮ್ಮ ಅಗತ್ಯಗಳನ್ನು ನಮಗಿಂತಲೂ ಚೆನ್ನಾಗಿ ಅರಿತು ನಮ್ಮ ‘ಪ್ರಗತಿ-ವಿಕಾಸ-ಅಭಿವೃದ್ಧಿ’ಗೆ ಕಾರ್ಯಕ್ರಮಗಳನ್ನು ಘೋಷಿಸುವ ಸಮಯ. ನಮ್ಮಲ್ಲಿನ ಹಲವು ಅಸಹಾಯಕರಿಗಾಗಿ ‘ಭಾಗ್ಯ-ಭತ್ಯೆ-ಅನುದಾನ-ಕಲ್ಯಾಣ-ಪಿಂಚಣಿ’ ಭರವಸೆಗಳನ್ನು ನೀಡುವ ಸಮಯ. ‘ಸಮಗ್ರ-ಸರ್ವಾಂಗೀಣ’ ಅಭಿವೃದ್ಧಿಗೆ ‘ಆಮೂಲಾಗ್ರ’ವಾಗಿ ಎಲ್ಲ ಜಾತಿ-ವರ್ಗಗಳನ್ನು ಓಲೈಸಲು ಪ್ರಣಾಳಿಕೆಗಳಲ್ಲಿ ಗೊತ್ತು-ಗುರಿ-ಆಶಯ-ಉದ್ದೇಶಗಳನ್ನು ಹೇಳಿಕೊಳ್ಳುವ ಸಮಯ. ಪ್ರಜಾಪ್ರಭುತ್ವದಲ್ಲಿ ಇದೆಲ್ಲವೂ ಸಹಜವೇ. ನಮ್ಮವರೇ ನಮ್ಮನ್ನು ಆಳುವ ಸಂದರ್ಭದಲ್ಲಿ […]

‘ಬಡವ’ರಿಗೆ ಮೀಸಲಾತಿ: ಮೋದಿಯವರ ‘ಗರೀಬಿ ಹಠಾವೋ’ ಕಾರ್ಯಕ್ರಮ!

-ಡಿ.ಎಸ್.ನಾಗಭೂಷಣ

ಕಳೆದ ಸಂಚಿಕೆಯಲ್ಲಿ ಆರ್ಥಿಕತೆ ಆಧಾರದ ಮೀಸಲಾತಿಯ ಸಾಂವಿಧಾನಿಕ ಮಾನ್ಯತೆ ಕುರಿತು ಕಾನೂನು ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಸತೀಶ್‍ಗೌಡ ಅವರು ವಿಶ್ಲೇಷಿಸಿದ್ದರು. ಚರ್ಚೆಯ ಮುಂದುವರಿದ ಭಾಗವಾಗಿ ಹೆಸರಾಂತ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರು ಇಲ್ಲಿ ತಮ್ಮ ವಿಚಾರ ಮಂಡಿಸಿದ್ದಾರೆ. ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೀಸಲಾತಿ ವ್ಯಾಪ್ತಿಗೆ ಸೇರದ (ಮೇಲ್ಜಾತಿಗಳ) ಬಡ ಎಂದು ಅದು ಹೇಳುವ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ಕಲ್ಪಿಸುವ ಅವಸರದ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ಮುಂದಿನ ಲೋಕಸಭಾ ಚುನಾವಣೆಗಳ ಎರಡೂವರೆ ತಿಂಗಳ […]

ಮಿಲ್ಲರ್ ವರದಿಗೆ 100 ವರ್ಷ

-ಪ್ರೊ.ಜಿ.ಶರಣಪ್ಪ

ಇಂದು ಮುಂದೆ ಬಂದಿರುವ ಜನಾಂಗ, ತಮ್ಮವರ ಹಿಂದಿನ ದುರಂತಮಯ ಮಟ್ಟವನ್ನು ತಿಳಿದುಕೊಳ್ಳಲು ಸರ್ ಲೆಸ್ಲಿ ಮಿಲ್ಲರ್ ವರದಿಯನ್ನು ಓದುವುದು ಸೂಕ್ತ. ಹೀಗೆ ಓದುವುದರಿಂದ ತಮ್ಮ ಹಿಂದಿನ ಜನಾಂಗದ ಅವಸ್ಥೆ ಅರ್ಥವಾಗುತ್ತದೆ. ಕೊನೆಯ ಪಕ್ಷ ಇಂದು ಮೀಸಲಾತಿ ಇಲ್ಲದವರನ್ನು ಕಂಡಾಗ ಅವರ ಬಗ್ಗೆ ಇರಿಸಿಕೊಂಡಿರುವ ಧಿಮಾಕಿನ ಪ್ರಮಾಣ ಕಡಿಮೆ ಆದರೂ ಆಗುತ್ತದೆ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದವರ ಏಳ್ಗೆಗೆ ರಚಿಸಿದ್ದ ಜಸ್ಟೀಸ್ ಲೆಸ್ಲಿ ಮಿಲ್ಲರ್ ಸಮಿತಿ ವರದಿ ಸಲ್ಲಿಸಿ (1919) ನೂರು ವರ್ಷಗಳಾಗುತ್ತಿವೆ. ಮೈಸೂರು ಮಹಾರಾಜರು […]

ಕರ್ನಾಟಕ ಮತ್ತು ಮಹಾರಾಷ್ಟ್ರ ರೈತ ಚಳವಳಿಗಳ ವೈರುಧ್ಯಗಳು

-ಮುಜಾಫರ್ ಅಸ್ಸಾದಿ

ರೈತ ಚಳವಳಿಗಳ ಕಾಲ ಮುಗಿಯಿತೇ? ಅಥವಾ ಅವು ಸೋತುಹೋದವೇ? ಚಳವಳಿಗಳಿಗೆ ಕೆಲವು ಸಂದರ್ಭದಲ್ಲಿ ಹಿನ್ನಡೆಯಾದದ್ದು ಸತ್ಯ. ಅವು ರೈತರ ಆತ್ಮಹತ್ಯೆಯನ್ನು ತಡೆಯಲು ವಿಫಲವಾದದ್ದು ದಿಟ. ಆದರೆ ಚಳವಳಿಗಳ ಕಾಲ ಮುಗಿದಿಲ್ಲ. ರೈತ ಚಳವಳಿಗಳ ಬಗ್ಗೆ ಶಾಸ್ತ್ರೀಯ ಚರ್ಚೆಗಳು ಆರಂಭಗೊಂಡದ್ದು 1990ರ ದಶಕದಲ್ಲಿ. ಅಷ್ಟರ ತನಕ ಇದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು. ಈ ಚರ್ಚೆಗಳಲ್ಲಿ ಹೆಚ್ಚು ಒತ್ತು ಸಿಗುತ್ತಿದ್ದದ್ದು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಿಕಾಯತ್‍ರವರ ಚಳವಳಿಗಳಿಗೆ. ಕರ್ನಾಟಕ ಮತ್ತು ತಮಿಳುನಾಡು ಇದಕ್ಕೆ ಅಪವಾದಗಳಾಗಿದ್ದವು. ಮಹಾರಾಷ್ಟ್ರ ಚಳವಳಿ ಚರ್ಚೆಯ […]