ನೀಚತನಕ್ಕೂ ಒಂದು ಸಮಯಪ್ರಜ್ಞೆ ಬೇಡವೇ?

ನೀಚತನಕ್ಕೂ ಒಂದು ಸಮಯಪ್ರಜ್ಞೆ ಬೇಡವೇ?

ಕಳೆದ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ನನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ‘ಇದು ಕಳೆದುಕೊಳ್ಳುವ, ಕಳೆದುಹೋಗುವ ಕಾಲ!’ ಎಂದು ಒಂದು ಸಾಲು ಬರೆದಿದ್ದೆ. ಆಗ ನನ್ನ ಸುತ್ತಲಿನ ಮತ್ತು ಹತ್ತಿರದವರ ಸಾವುನೋವುಗಳು ನನ್ನ ಮನಕಲಕಿದ್ದವು. ಕೆಲವು ತಿಂಗಳುಗಳ ನಂತರ ಆ ಕಾಲ ಕಳೆದುಹೋಯಿತು. ಅದು ಸುಮ್ಮನೆ ಕಣ್ಮರೆಯಾಗಲಿಲ್ಲ; ಜೊತೆಗೆ ಅನೇಕ ಜೀವಗಳನ್ನು ಸೆಳೆದುಕೊಂಡು ಹೋಯಿತು. ಅದಾದ ನಂತರ ಬದುಕು ಸಹಜ ಸ್ಥಿತಿಯತ್ತ ಸಾಗುವಾಗ ನಾವೆಲ್ಲಾ ಮನದ ನೋವುಗಳನ್ನು ಮರೆಯುವ, ಮರೆತಂತೆ ನಟಿಸುವ ತಾಲೀಮಿನಲ್ಲಿ ತೊಡಗಿದ್ದೆವು ಅಂತ ಕಾಣಿಸುತ್ತದೆ. ಅಷ್ಟರೊಳಗೆ […]

ಆರಕ್ಕೇಳದ ಮೂರಕ್ಕಿಳಿಯದ ಸರ್ಕಾರ ಕಾಣದ ಅಡಿಗಲ್ಲು-ರಿಬನ್ ಕಟ್!

-ರಮಾನಂದ ಶರ್ಮಾ

 ಆರಕ್ಕೇಳದ ಮೂರಕ್ಕಿಳಿಯದ ಸರ್ಕಾರ ಕಾಣದ ಅಡಿಗಲ್ಲು-ರಿಬನ್ ಕಟ್! <p><sub> -ರಮಾನಂದ ಶರ್ಮಾ </sub></p>

ಯಡಿಯೂರಪ್ಪನವರ ಸಾಧನೆ ಕಳಪೆ ಏನಲ್ಲ. ಆದರೆ, ಉತ್ತಮ ಎಂದು ಎದೆ ತಟ್ಟಿ ಹೇಳುವಂತಿಲ್ಲ. ಭಿನ್ನಮತೀಯರು ಮತ್ತು ಪಕ್ಷಾಂತರಿಗಳನ್ನು ನಿಭಾಯಿಸಿ ಕಾಲದೂಡುವುದು ಹೇಗೆನ್ನುವ ನಿಟ್ಟಿನಲ್ಲಿ ಅವರ ಸಾಧನೆ ರಾಜಕೀಯ ಶಾಸ್ತದ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅಧ್ಯಾಯ! -ರಮಾನಂದ ಶರ್ಮಾ ಅತಿವೃಷ್ಟಿ, ಭಿನ್ನಮತ ಮತ್ತು ಕೋವಿಡ್ ಮಧ್ಯೆ ಗದ್ದುಗೆ ಏರಿದ ಯಡಿಯೂರಪ್ಪನವರಿಗೆ ಸಿಂಹಾಸನ ಮುಳ್ಳಿನ ಹಾಸಿಗೆ ಆಗಿದೆಯೇ ವಿನಾ, ಒಂದೇ ಒಂದು ದಿನ ಹೂವಿನ ಹಾಸಿಗೆಯಾಗಲಿಲ್ಲ. ವಿಪರ್ಯಾಸವೋ ಅಥವಾ ವಿಚಿತ್ರವೋ, ಅಧಿಕಾರ ಸ್ವೀಕರಿಸಿದ ದಿನದಿಂದ ‘ಮುಖ್ಯಮಂತ್ರಿ ಬದಲಾವಣೆ’ ಎನ್ನುವ ವದಂತಿಗಳ […]

ಮಲೆನಾಡ ಮಡಿಲಲ್ಲಿ ಸಮಾಜಮುಖಿ ನಡಿಗೆ

ವಿಜಯಲಕ್ಷ್ಮಿ ಡಿ. ‘ಸಮಾಜಮುಖಿ’ಯ ಸಾಗರ ನಡಿಗೆಯ ನೆನಪಿನ್ನೂ ಗರಿಗರಿಯಾಗಿದೆ. ಆಗಲೇ ಓಡೋಡಿ ಬಂತು ತರೀಕೆರೆಗೆ ಸಮಾಜಮುಖಿ ನಡಿಗೆ ಬಳಗ! ಏಪ್ರಿಲ್ 9, 10 ಮತ್ತು 11ರ ನಡಿಗೆಗೆ ತಂಡದವರೆಲ್ಲ ಕೆಮ್ಮಣ್ಣುಗುಂಡಿಯ ಪದತಲದ ವಸತಿ ಸ್ಥಳಕ್ಕೆ ಮೊದಲ ದಿನ ಬೆಳಗ್ಗೆಯೇ ಬಂದು ಸೇರಿದ್ದರು. ಈ ಬಾರಿಯ ವಿಶೇಷವೆಂದರೆ ಕುಟುಂಬದ ಸದಸ್ಯರು, ಯುವಕರ ದಂಡು ಅದರಲ್ಲೂ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು. ಸಹ್ಯಾದ್ರಿಯ ಗಿರಿಶ್ರೇಣಿ ಮಡಿಲ ನಮ್ಮ ತಂಗುದಾಣದ ಪರಿಸರ, ಅದಕ್ಕೆ ಮೆರುಗು ನೀಡುವಂತಿದ್ದ ನಡಿಗೆಯ ಸ್ನೇಹಿತರ ನಲಿವು, ಆಯೋಜಕರ ಹುಮ್ಮಸ್ಸು […]

ಬರಹಗಾರನ ಮನೋಧರ್ಮ ಬಿಂಬಿಸುವ ಕೃತಿ

ವಸುಧೇಂದ್ರ ‘ಕೆಂಪು ಗಿಣಿ’ಯಂತಹ ಕತೆಗಳನ್ನು ಬರೆದು, ಜಾಗತೀಕರಣದ ಕೇಡಿಗತವನ್ನು, ಅದರ ರೂಕ್ಷ ಕ್ರೌರ್ಯವನ್ನು ಈಗಲೂ ಓದುಗರು ಕೆಂಧೂಳು ಒದರಿಕೊಳ್ಳುವಂತೆ ಸಂವೇದನೆ ಉಂಟು ಮಾಡಿದ್ದಾರೆ. ಆದರೆ, ನಿಮ್ಮ ನಿಕಟ ಓದಿನ ಗ್ರಹಿಕೆಯಂತೆ ‘ತೇಜೋ ತುಂಗಭದ್ರ’ ಕಾದಂಬರಿಯಲ್ಲಿ ವಸುಧೇಂದ್ರ ಸನಾತನ ಮೌಲ್ಯಗಳನ್ನು ಮನ್ನಿಸುವಂತಿದ್ದರೆ, ನಿಜಕ್ಕೂ ಪ್ರತಿಗಾಮಿ ನಡೆಯೇ ಸರಿ. ಆದರೆ ಕೃತಿಯ ವಸ್ತು ಮಧ್ಯಕಾಲೀನ ಕಾಲಘಟ್ಟವೇ ಆಗಿ ಆಯ್ಕೆಗೊಂಡಿರುವುದು ಯಾಕೆ? ಗತಮುಖಿಯಾದ ವಸ್ತು ಸಹಜವಾಗಿ ಮೇಲ್ವರ್ಗದ ನೆಲೆಯ ನಿರೂಪಣೆ ಆಗಿರಬಹುದೆ? ಕಾದಂಬರಿಕಾರನ ವಸ್ತು ಆಯ್ಕೆಯು ಕೂಡ ಆತನ ಮನೋಧರ್ಮವನ್ನು ಎತ್ತಿಹಿಡಿಯುತ್ತದೆ […]

ಕೃಷಿ ನೀತಿಯ ಗುರಿ ನೈಜ ಕೃಷಿಕರ ಪರ ಇರಬೇಕು

-ಹರೀಶ್ ದಾಮೋದರನ್

 ಕೃಷಿ ನೀತಿಯ ಗುರಿ ನೈಜ ಕೃಷಿಕರ ಪರ ಇರಬೇಕು <p><sub> -ಹರೀಶ್ ದಾಮೋದರನ್ </sub></p>

ಸರ್ಕಾರದ ಬಹುತೇಕ ಜನಕಲ್ಯಾಣ ಯೋಜನೆಗಳು ಬಡತನ ನಿರ್ಮೂಲನೆ ಮತ್ತು ತಳಮಟ್ಟದ ಜನರನ್ನು ಸಬಲೀಕರಿಸುವ ಉದ್ದೇಶದಿಂದಲೇ ರೂಪಿಸಲ್ಪಟ್ಟಿವೆ. ಇಲ್ಲಿ ಮಧ್ಯದಲ್ಲಿರುವವರು ತಳಮಟ್ಟಕ್ಕೆ ಜಾರುವ ಅಪಾಯವೂ ಇದ್ದು ಇದರ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ. -ಹರೀಶ್ ದಾಮೋದರನ್ ಭಾರತದಲ್ಲಿರುವ ರೈತರ ಸಂಖ್ಯೆ ಎಷ್ಟು? 2016-17ರ ಕೇಂದ್ರ ಕೃಷಿ ಸಚಿವಾಲಯದ ಆಂತರಿಕ ಸಮೀಕ್ಷೆಯ ಅನುಸಾರ ಭಾರತದಲ್ಲಿ ಒಟ್ಟು 146.19 ದಶಲಕ್ಷ ಜನರು ವ್ಯವಸಾಯದಲ್ಲಿ ತೊಡಗಿದ್ದಾರೆ.  ನಬಾರ್ಡ್ ಸಂಸ್ಥೆಯ ಅಖಿಲ ಭಾರತ ಗ್ರಾಮೀಣ ಹಣಕಾಸು ಒಳಗೊಳ್ಳುವಿಕೆ ಸಮೀಕ್ಷೆಯ (2016-17) ಅನುಸಾರ ಭಾರತದಲ್ಲಿ ಕೃಷಿಯನ್ನು […]

ಲಸಿಕೆಯೆಂಬ ಉನ್ಮಾದ ಕೊರೊನಾ ಎಂಬ ವಾಸ್ತವ

-ರಾಜಾರಾಂ ತಲ್ಲೂರು

ಲಸಿಕೆ ಪಡೆದು `ಅಮರ’ ಆಗುವ ಹಾಗೂ ಲಸಿಕೆ ಕೊಟ್ಟು `ಕೀರ್ತಿ’ ಪಡೆಯುವ ಉನ್ಮಾದ ದೇಶದಲ್ಲಿ ಹಬ್ಬಿದಂತಿದೆ. ಸರಳವಾಗಿ ಹೇಳಬೇಕೆಂದರೆ ಇದು `ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ’. -ರಾಜಾರಾಂ ತಲ್ಲೂರು ಕಳೆದ ಅಕ್ಟೋಬರ್ ಕೊನೆಯ ವೇಳೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಸಾರ್ವಜನಿಕವಾಗಿ, “ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ನೀಡಲಾಗುವುದು; ಯಾರನ್ನೂ ಅದರಿಂದ ವಂಚಿತಗೊಳಿಸುವುದಿಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅಂತಹ ಒಂದು ಖಚಿತ ಸಂದರ್ಭ ಎಂದರೆ, ಅಕ್ಟೋಬರ್ 31ರಂದು ಪ್ರಕಟಗೊಂಡ ಅವರ ಎಕನಾಮಿಕ್ ಟೈಮ್ಸ್ […]

ನಗರಗಳಲ್ಲಿ ಉದ್ಯೋಗಕ್ಕಾಗಿ ‘ಡ್ಯುಯೆಟ್’ ಯೋಜನೆ

ಇದು ನಗರ ನಿರುದ್ಯೋಗಿಗಳಿಗೆ ನೆರವಾಗುವುದರ ಜೊತೆಗೆ ಲಾಕ್ ಡೌನ್ ನಂತರದ ಅವಧಿಯಲ್ಲಿ ಆರ್ಥಿಕ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಭಾರತದ ಒಟ್ಟು ದೇಶೀಯ ಉತ್ಪನ್ನದ 2020-21ರ ಮೊದಲ ತ್ರೈಮಾಸಿಕ ಆವಧಿಯ ಅಂದಾಜು ಬಿಡುಗಡೆಯಾಗುತ್ತಿದ್ದಂತೆ ಆತಂಕ ವ್ಯಕ್ತವಾಗಿದೆ. ಈ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರವಾಗಿ ಕುಸಿದಿದ್ದವು. ಇದನ್ನು ಹಲವು ಕೌಟುಂಬಿಕ ಸಮೀಕ್ಷೆಗಳು ಸ್ಪಷ್ಟವಾಗಿ ತಿಳಿಸಿವೆ. ನಿರುದ್ಯೋಗ, ಬಡತನ, ಮತ್ತು ಹಸಿವು ಇವೆಲ್ಲಾ ವ್ಯಾಪಕವಾಗಿದ್ದಾಗ ಆರ್ಥಿಕತೆ ಒಳ್ಳೆಯ ಸ್ಥಿತಿಯಲ್ಲಿರುವ ಸಾಧ್ಯತೆಗಳು ಕಡಿಮೆ. ಇತ್ತೀಚೆಗೆ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್‍ನ ಆರ್ಥಿಕ ಪರಿಸ್ಥಿತಿಯ […]

ಹನುಮನ ಜನ್ಮಸ್ಥಳ ‘ನವೋದ್ಯಮ’ ಆಗಿದೆಯೇ?

-ಡಾ.ಟಿ.ಗೋವಿಂದರಾಜು

ರಾಮ ಜನ್ಮಭೂಮಿಯ ವಿವಾದ ಮುಗಿಯಿತು ಎನ್ನುತ್ತಿರುವಾಗಲೇ ಹನುಮ ಜನ್ಮಭೂಮಿಯ ತಗಾದೆ ಶುರುವಾಗಿದ್ದು ಆಕಸ್ಮಿಕವಿದ್ದಿರಲಾರದು. ತಿರುಪತಿ ಹಾಗೂ ಆನೆಗೊಂದಿಯ ಹಿತಾಸಕ್ತ ಭಕ್ತರು ‘ಪಿತ್ರಾರ್ಜಿತ ಆಸ್ತಿ’ಗೆಂಬಂತೆ ಸಮರ ಘೋಷಣೆ ಮಾಡಿಕೊಂಡಿದ್ದಾರೆ! ಜನಸಾಮಾನ್ಯರನ್ನು ಮುಂದಿಟ್ಟುಕೊಂಡು ತಮ್ಮ ಪ್ರಾಬಲ್ಯವರ್ಧನೆಯ ಬಿಜಿನೆಸ್‍ಗೆ ಹಾತೊರೆವ ಹಿತಾಸಕ್ತಿಗಳು ಸದಾ ಹೊಸ ಹೊಸ ಸ್ಥಳ, ಸಂಗತಿಗಳನ್ನು ಹುಡುಕುತ್ತಿರುತ್ತವೆ. ಅಂತಹವಕ್ಕೆ ಸರಕಾರಗಳೂ ಬೆಂಬಲವಾಗಿ ನಿಂತರೆ ಪರಿಣಾಮ ಏನಾಗಬಹುದು ಎಂಬುದಕ್ಕೆ ಈಗ ಹನುಮ ಜನ್ಮಭೂಮಿ ಮತ್ತೊಂದು ಪಾಠವಾದೀತು. -ಡಾ.ಟಿ.ಗೋವಿಂದರಾಜು ಸರಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎಂಬುದಕ್ಕೆ ಅಯೋಧ್ಯಾ ರಾಮನ […]

“ಪ್ರಾಣಗಳನ್ನು ರಕ್ಷಿಸಿ, ಯಾತನೆಯನ್ನು ನಿವಾರಿಸಿ”

-ಸೋನಿಯಾ ಗಾಂಧಿ

– ಸಂದೀಪ ಪುಕನ್ “ಕಾಂಗ್ರೆಸ್ ಪಕ್ಷವು ಈ ಸಂಕಷ್ಟದ ಸಮಯದಯಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತಿದೆ ಮತ್ತು ನೀಡುವ ನೆರವನ್ನು ಯಾವ ಪ್ರಚಾರವು ಇಲ್ಲದೆ ಮಾಡುವುದನ್ನು ಬಯಸುತ್ತದೆ.” ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು `ದಿ ಹಿಂದು’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ದೇಶದ ಜನರ ಜೀವಗಳನ್ನು ರಕ್ಷಿಸಲು ಹಾಗು ಅವರನ್ನು ನೋವಿನಿಂದ ಪಾರು ಮಾಡಲು ಒಂದು ಅಂಶದ ಕಾರ್ಯಕ್ರಮದ ಅವಶ್ಯಕತೆ ಈ ದೇಶಕ್ಕೆ ಈ ವಿಪತ್ತಿನ ಕಾಲದಲ್ಲಿ ಜರೂರಿದೆ ಎಂದು ಮತ್ತು ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು […]

ಕರ್ನಾಟಕದಲ್ಲಿ ಸಂಗೀತ: ಹೊಸತೇನು.? ಹೊಸಬರಾರು..?

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಅನನ್ಯ ಸ್ಥಾನವಿದೆ. ಕರ್ನಾಟಕದಲ್ಲಿ ಮಾತ್ರ ಹಿಂದೂಸ್ತಾನಿ ಮತ್ತು ಕರ್ನಾಟಕಿ ಪದ್ಧತಿಗಳೆರೆಡೂ ಸರಿಸಮಾನವಾಗಿ ಮೇಳೈಸಿವೆ. ಬೇರೆಲ್ಲಿಗಿಂತ ಇಲ್ಲಿ ಅತ್ಯಂತ ವೈವಿಧ್ಯಮಯ ಜನಪದ ಮತ್ತು ಲಘು ಸಂಗೀತ ಪರಂಪರೆಗಳು ತಮ್ಮ ಶ್ರೀಮಂತಿಕೆಯನ್ನು ಮೆರೆದಿವೆ. ಬೆಂಗಳೂರಿನ ಪರಿಸರ ಪಾಶ್ಚಾತ್ಯ ಜಾಝ್, ರಾಕ್ ಮತ್ತು ರ್ಯಾಪ್ ಸಂಗೀತಗಳಿಗೂ ಆಸರೆ ನೀಡಿದೆ. ಕನ್ನಡದ ಸಿನಿಮಾ ಸಂಗೀತವೂ ತನ್ನ ನಾದಲಯಗಳಿಗೆ ಹೆಸರು ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ಸಂಗೀತ ಕ್ಷೇತ್ರ ಬದಲಾವಣೆ ಕಂಡಿದೆ. ಮಲ್ಲಿಕಾರ್ಜುನ ಮನ್ಸೂರ್-ಭೀಮಸೇನ ಜೋಷಿ ಪೀಳಿಗೆಯ […]

ಸಂಗೀತವೂ ಈಗ ಸರಕಾಗಿಬಿಟ್ಟಿದೆ!

-ಎನ್.ಎಸ್.ಶ್ರೀಧರ ಮೂರ್ತಿ

ಇದು ಕಾರ್ಪೋರೇಟ್ ಯುಗ. ಟಿ.ವಿ.ಚಾನಲ್‍ಗಳು, ಎಫ್.ಎಂಗಳು, ಐಪ್ಯಾಡ್, ಯೂಟ್ಯೂಬ್ ಎಲ್ಲೆಡೆ ಸಂಗೀತದ ಹೊನಲೇ ಹರಿಯುತ್ತಿದೆ. ಆದರೆ ಸ್ವಂತಿಕೆಯಿಂದ ಅಲ್ಲ. ಸರಕಾಗಿ.. ಹೀಗೆ ಸರಕಾಗಿರುವ ಕಡೆ ಬೆಲೆ ನಿರ್ಧಾರವಾಗುತ್ತದೆಯೇ ಹೊರತು ಮೌಲ್ಯವಲ್ಲ! -ಎನ್.ಎಸ್.ಶ್ರೀಧರ ಮೂರ್ತಿ ಕರ್ನಾಟಕದಲ್ಲಿ ಸಂಗೀತಕ್ಕೆ ಮಹತ್ವ ಮತ್ತು ಪ್ರೋತ್ಸಾಹ ಕಡಿಮೆ ಆಗುತ್ತಿದೆಯೇ ಎಂಬ ಪ್ರಶ್ನೆ ಬಂದಾಗ ಇಲ್ಲಿ  ಸಂಗೀತಕ್ಕೆ ಪರಂಪರಾನುಗತವಾಗಿ ಪ್ರಮುಖ ಸ್ಥಾನವಿತ್ತೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಇಲ್ಲ ಎಂಬುದೇ ಆಗಿದೆ. ಕರ್ನಾಟಕದಲ್ಲಿಯೇ ಸಂಗೀತ ಕಲಿಯುವುದು ಅದನ್ನೇ ವೃತ್ತಿಯನ್ನಾಗಿ ಮಾಡಿ ಕೊಳ್ಳುವುದು ಮರ್ಯಾದಸ್ಥರ […]

“ಕರ್ನಾಟಕದಿಂದ ಹೊರಹೋದವರು ಗೆದ್ರು!”

-ಪಂ.ರಾಜೀವ ತಾರಾನಾಥ್

ಸಂದರ್ಶನ: ಜಿ.ಪಿ.ಬಸವರಾಜು ಪಂ.ರಾಜೀವ ತಾರಾನಾಥ್, 88. ನೇರ, ಹರಿತ, ಚೂಪು, ಮಾತು, ಆಳ ಚಿಂತನೆ. ಅಪರೂಪದ ಒಳನೋಟ. ಅದ್ಭುತ ಎನಿಸುವ ನೆನಪಿನ ಶಕ್ತಿ. ಕೇಳುಗರನ್ನು ಹಿಡಿದಿಡಬಲ್ಲ ಮಾತಿನ ಕಲೆ. ಎಂದೋ ಆಗಿ ಹೋದ ಘಟನೆಗಳಿಗೆ ಜೀವತುಂಬಿ ಇದೀಗ ನಡೆಯುವಂತೆ ಕಣ್ಮುಂದೆ ತರಬಲ್ಲ ಮೋಡಿ. ಗುಂಡು ಹೊಡೆದಂತೆ ಖುಲ್ಲಂ ಖುಲ್ಲಾ ಎಲ್ಲವನ್ನು ಹೇಳಿ ಎದುರಾಳಿಯ ಎದೆ ನಡುಗಿಸಬಲ್ಲ ದಿಟ್ಟತನ. ಸಂಗೀತದ ಆಳ ಅಗಲಗಳನ್ನು ಕಂಡು, ನಿಖರವಾಗಿ ತೂಗಿ, ಬೆಲೆಕಟ್ಟಬಲ್ಲ ಸಾಮಥ್ರ್ಯ. ತಮ್ಮ ಗುರುವನ್ನು ದೇವರೆಂದು ಕಂಡ, ನಿತ್ಯವೂ ಕಾಣುತ್ತಿರುವ […]

ಮೇಕಿಂಗ್ ಆಫ್ ಆ್ಯನ್ ಆರ್ಟಿಸ್ಟ್

-ವಸಂತ

ಹಿಂದೂಸ್ತಾನೀ ಗಾಯಕ ಪಂ.ಗಣಪತಿ ಭಟ್ ಹಾಸಣಗಿ ಅವರ ಜೊತೆಯಲ್ಲಿ ಆಗಾಗ ನಡೆಸಿದ ಮಾತುಕತೆಯ ಕೆಲ ನೆನಪುಗಳ ಮೂಲಕ ಒಂದು ಕೊಲಾಜ್ ಚಿತ್ರಣವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಅವರ ಮಗ ವಸಂತ. -ವಸಂತ ಚಿತ್ರಗಳು: ಸಾಗ್ಗೆರೆ ರಾಧಾಕೃಷ್ಣ ಆಗೆಲ್ಲ ಪತ್ರವ್ಯವಹಾರದ ಕಾಲ. ಪತ್ರಗಳು ಮತ್ತು ಟೆಲಿಗ್ರಾಂ ಮೂಲಕವೇ ಎಲ್ಲ ಸಂವಹನಗಳು. ಟ್ರಂಕ್ ಬುಕಿಂಗ್ ಟೆಲಿಫೋನ್ ಆಗಷ್ಟೇ ಹಳ್ಳಿ ಊರುಗಳಿಗೂ ಕಾಲಿಡುತ್ತಿದ್ದ ಕಾಲ. 1985ರ ಎಪ್ರಿಲ್ ಅಥವಾ ಮೇ ತಿಂಗಳ ಸಮಯವಿರಬಹುದು. ಕರ್ನಾಟಕದ ಚಿಕ್ಕ ಹಳ್ಳಿಯಲ್ಲಿ ವಾಸವಾಗಿದ್ದ ಯುವ […]

ಕಲಿಯುತ್ತಾ ಕಲಿಯುತ್ತಾ… ಸಂಗೀತಕ್ಕೆ ಹರೆಯ ಬರ್ತದೆ, ದೇಹ ಮುಪ್ಪಾಗ್ತದೆ!

-ಪಂ. ಕಾಶಿನಾಥ ಪತ್ತಾರ

ಈಗಿನ ಯುವ ಪೀಳಿಗೆಯಲ್ಲಿ ತುಂಬಾ ಪ್ರತಿಭೆ ಇರುವವರೂ ಇದ್ದಾರೆ. ತುಂಬಾ ಅಂದ್ರೆ ವಿಪರೀತ ಟ್ಯಾಲೆಂಟ್. ಅಲ್ಲಿಯೇ ತಪ್ಪಾಗ್ತಾ ಇರೋದು! -ಪಂ. ಕಾಶಿನಾಥ ಪತ್ತಾರ ಸಂಗೀತಕ್ಕೆ ಲಭ್ಯವಿರುವ ದಾಖಲೆಗಳ ಪ್ರಕಾರ ಸುಮಾರು 9 ಸಾವಿರ ವರ್ಷಗಳ ಇತಿಹಾಸವಿದೆ. ಹಿಂದೂಸ್ತಾನಿಯಲ್ಲಿ ಈವರೆಗೆ ಸುಮಾರು 38,848 ರಾಗಗಳು ಲಭ್ಯವಿವೆ. ಏಳೇಳು ಜನ್ಮಗಳೆತ್ತಿದರೂ ಅದರಲ್ಲಿ 48 ರಾಗಗಳನ್ನು ಸಂಪೂರ್ಣವಾಗಿ ಅರಿಯುವುದು ಅಸಾಧ್ಯ. ಹಿಂದಿನ ಸಾಧಕರಾದ ಪಂ.ಪಂಚಾಕ್ಷರಿ ಗವಾಯಿಗಳು, ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳು, ಭಾರತರತ್ನ ಪಂ.ಭೀಮಸೇನ ಜೋಶಿ, ಪಂ.ಮಲ್ಲಿಕಾರ್ಜುನ ಮನ್ಸೂರ್, ವಿದುಷಿ ಗಂಗೂಬಾಯಿ […]

ಧಾರವಾಡ: ಹಲವು ತಲೆಮಾರುಗಳ ಸಂಗೀತ ಶಾಲ್ಮಲೆ

-ಶಶಿ ಸಾಲಿ

ವಿದ್ಯಾರ್ಥಿ ದೆಸೆಯಿಂದಲೂ ಧಾರವಾಡದ ದಿವ್ಯ ಪರಿಸರದಲ್ಲಿ ಬೆಳೆದವನು ನಾನು. ನನ್ನ ಫೋಟೊಗ್ರಫಿ ವೃತ್ತಿಯಿಂದಾಗಿ ಅನೇಕ ಸಾಹಿತಿಗಳ, ವಿದ್ವಜ್ಜನರ, ಕಲಾವಿದರ, ಸಂಗೀತಗಾರರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತಲ್ಲ. ಅದು ನನ್ನ ಜೀವನದ ಪರಮ ಸೌಭಾಗ್ಯ. -ಶಶಿ ಸಾಲಿ ಧಾರವಾಡದ ಕಣ ಕಣದಲ್ಲೂ ಸಂಗೀತ ಅನುರುಣಿಸುತ್ತದೆ. ಅನೇಕ ತಲೆಮಾರುಗಳಿಂದ, ತಮ್ಮ ಸಂಗೀತದ ಪ್ರತಿಭೆ, ಪ್ರಭೆಯಿಂದ ಈ ನೆಲದ ಕಣ ಕಣವನ್ನು ಸಂಗೀತಮಯವಾಗಿ ಮಾಡಿ ಸಿರಿಗಂಧವನ್ನು ಹರಡಿದವರಿದ್ದಾರೆ. ‘ಭಾರತರತ್ನ’ ಪ್ರಶಸ್ತಿ ಪುರಸ್ಕøತ ಡಾ.ಭೀಮಸೇನ ಜೋಶಿ ಅವರ ಗುರುಗಳಾಗಿದ್ದ ಸವಾಯಿ ಗಂಧರ್ವರಿಂದ ಆರಂಭವಾಗಿದ್ದ […]

ಬೆಂಗಳೂರಿನ ಶ್ರೀ ರಾಮಸೇವಾ ಮಂಡಲಿ

-ಶಶಿಧರ ಭಾರಿಘಾಟ್

ಪ್ರತಿವರ್ಷ ರಾಮನವಮಿಯ ಸಂದರ್ಭದಲ್ಲಿ ಕನಿಷ್ಠ 31 ದಿನಗಳ ಕಾಲ ಸತತ ಸಂಗೀತ ರಸದೌತಣವನ್ನು ಉಣಬಡಿಸುವ ಬೆಂಗಳೂರು ಚಾಮರಾಜಪೇಟೆಯ ಶ್ರೀ ರಾಮಸೇವಾ ಮಂಡಲಿಗೆ ಈಗ 83ರ ಹರೆಯ. -ಶಶಿಧರ ಭಾರಿಘಾಟ್ ಸಂಗೀತ ವಿಶ್ವಾತ್ಮಕ ಕಲೆ. ದೈವಿಕ ಕಲೆಯೂ ಎನ್ನುತ್ತಾರೆ. ರಸಿಕರನ್ನು ನಾದಮಾಧುರ್ಯದಿಂದ ಮಂತ್ರ ಮುಗ್ಧಗೊಳಿಸುವ ಸಂಗೀತಕ್ಕೆ ಕಲೆಗಳಲ್ಲೇ ವಿಶೇಷ ಸ್ಥಾನಮಾನವಿದೆ. ಸಂಗೀತವನ್ನು ಮಾನವನ ವಿಕಾಸದ ಸಾಧನವೆನ್ನುತ್ತಾರೆ. ಅಂತರಾತ್ಮದ ದರ್ಶನ ಸಂಗೀತದಿಂದ ಮಾತ್ರ ಸಾಧ್ಯ, ಇದು ದೈವದತ್ತವಾದದ್ದು ಎಂದು ಹೇಳುತ್ತಾರೆ. ಇದು ನಾದದ ಭಾಷೆ ನಾದಕ್ಕೆ ಆಕಾರವಿಲ್ಲ. ಬೇರೆ ಲಲಿತಕಲೆಗಳಿಗೆ […]

ಭಾರತದಲ್ಲಿ ಕೋವಿಡ್ ನಿರ್ವಹಣೆ ಅಸಹಾಯಕತೆಯೇ ಸಮರ್ಥನೆಯಾದಾಗ…

-ಎಂ.ಕೆ.ಆನಂದರಾಜೇ ಅರಸ್

ಸರ್ಕಾರದ ಕೈಗಳಿಗೆ ರಕ್ತ ಅಂಟಿಕೊಂಡಿದೆ. ಲೇಡಿ ಮ್ಯಾಕ್‍ಬೆತ್‍ಳ ಮಾತುಗಳು ನೆನಪಿಗೆ ಬರುತ್ತವೆ, “ಇಲ್ಲಿ ರಕ್ತದ ವಾಸನೆ ಇನ್ನೂ ಇದೆ. ಅರೇಬಿಯಾದ ಎಲ್ಲಾ ಸುಗಂಧ ದ್ರವ್ಯಗಳು ಈ ಪುಟ್ಟ ಕೈಯನ್ನು ಶುದ್ಧಗೊಳಿಸುವುದಿಲ್ಲ.” –ಎಂ.ಕೆ.ಆನಂದರಾಜೇ ಅರಸ್ ಏಪ್ರಿಲ್ 23-24, ಶುಕ್ರವಾರ ರಾತ್ರಿ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ 20 ಕೋವಿಡ್ ರೋಗಿಗಳು ವಿಧಿವಶರಾಗುತ್ತಾರೆ. ಕೆಲವರು ಆಮ್ಲಜನಕದ ಅಭಾವದಿಂದ ಮೃತಪಟ್ಟರೆ, ಕೆಲವರ ಸಾವು ಬೇರೆ ಆರೋಗ್ಯ ತೊಡಕುಗಳಿಂದಾಗಿರುತ್ತದೆ. ಹಾಗೇ ಅವರು ಮೃತರಾಗುವಾಗ ಅವರ ಸಂಬಂಧಿಗಳು, ಹಿತೈಷಿಗಳು ಹಾಗೂ ಆಸ್ಪತ್ರೆಯ ವೈದ್ಯರು, ಅರೆವೈದ್ಯಕೀಯ […]

ಕೊರೊನ ಎರಡನೆಯ ಅಲೆ ಉಸಿರುಗಟ್ಟಿದ ಭಾರತ

-ಡಾ.ಬಿ.ಆರ್.ಮಂಜುನಾಥ್

ಇನ್ನು ಸತ್ಯವನ್ನು ನಿರಾಕರಿಸಿ ಉಪಯೋಗವಿಲ್ಲ. ನಮ್ಮ ಸರ್ಕಾರಗಳು ಭಾರೀ ಎಡವಟ್ಟು ಮಾಡಿಕೊಂಡಿವೆ. ಈಗ ಆಗಿರುವ ಪ್ರಮಾದಗಳಿಗೆ ಭಾರೀ ಅಪರಾಧದ, ನರಮೇಧದ ಆಯಾಮವೇ ಇದೆ. -ಡಾ.ಬಿ.ಆರ್.ಮಂಜುನಾಥ್ ಈ ಲೇಖನ ಅಚ್ಚಿಗೆ ಹೋಗುವ ವೇಳೆಗೆ ಭಾರತದಲ್ಲಿ ಒಂದು ದಿನದ ಕೊರೊನ ಸಾವಿನ ಸಂಖ್ಯೆ 3700 ಮುಟ್ಟಿದೆ. ಆದರೆ ಇದಕ್ಕಿಂತ ಗಾಬರಿ ಹುಟ್ಟಿಸುವ ಸಂಗತಿ ಎಂದರೆ ಅನೇಕ ರಾಜ್ಯಗಳಲ್ಲಿ ಸಾವಿನ ಸಂಖ್ಯೆಯನ್ನು ಸರಿಯಾಗಿ ಬಹಿರಂಗಪಡಿಸುತ್ತಿಲ್ಲ. ಉತ್ತರ ಪ್ರದೇಶವು ಎಂದಿನಂತೆ ವಾಸ್ತವವನ್ನು ನಿರಾಕರಿಸುವ ಕುಯುಕ್ತಿ, ಕುತಂತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್‍ನಲ್ಲಿ ಅಲ್ಲಿನ ಹೈಕೋರ್ಟ್ ದಂತಗೋಪುರದಿಂದ […]