ಸಂಪಾದಕೀಯ

ಸಂಪಾದಕ

ತರವಲ್ಲ ತಾರತಮ್ಯ! ‘ಹೋ…ಹೋ… ನೀವು ಆ ಕಡೆಯವರಾ…?! ಅಲ್ಲಿ ತುಂಬಾ ಬಿಸಿಲು, ದೂಳು ಅಲ್ವಾ? ಜನಾನೂ ಒರಟು. ಅಲ್ಲಿ ಹೇಗಿರ್ತೀರಪ್ಪಾ…’ -ಇದು ಉತ್ತರ ಕರ್ನಾಟಕದವರನ್ನು ಕುರಿತು ಹಳೆಯ ಮೈಸೂರು ಪ್ರಾಂತ್ಯದ ಜನ ಹೊರಡಿಸುವ ಸಾಮಾನ್ಯ ಉದ್ಗಾರ. ಹೀಗೆ ಮೂದಲಿಸುವುದರಲ್ಲಿ ಉತ್ತರಭಾಗದವರೇನೂ ಕಡಿಮೆಯಿಲ್ಲ; ‘ನೀವು ತುಂಗಭದ್ರಾ ನದಿ ಆಕಡೆಯವರಲ್ಲವೇ… ತುಂಬಾ ನಾಜೂಕು. ನಯವಾದ ಮಾತಿನಲ್ಲೇ ಮರುಳು ಮಾಡಿಬಿಡುತ್ತೀರಿ!’ ಎಂದು ಚುಚ್ಚುತ್ತಾರೆ. ಒಂದು ಪ್ರದೇಶದ ಪ್ರಾಕೃತಿಕ ವಾತಾವರಣ, ಮಾತಿನ ಶೈಲಿ, ಸಾಮೂಹಿಕ ಸ್ವಭಾವ ಅತ್ಯಂತ ಸಹಜವಾಗಿ ಕಾಲಾನುಕ್ರಮೇಣ ರೂಪುಗೊಂಡಿರುವಂತಹದು. ಅಲ್ಲಿ […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. […]

ಕೊಡಗಿನಲ್ಲಿ ಸಮಾಜಮುಖಿ ನಡಿಗೆ

ಕೊಡಗಿನಲ್ಲಿ ಸಮಾಜಮುಖಿ ನಡಿಗೆ

ಸಮಾಜಮುಖಿ ಬಳಗದ ‘ನಡೆದು ನೋಡು ಕರ್ನಾಟಕ’ ಸರಣಿಯ ಮೂರನೆಯ ನಡಿಗೆ ಕೊಡಗು ಪ್ರದೇಶದಲ್ಲಿ ಏಪ್ರಿಲ್ 12 ರಿಂದ 14ರವರೆಗೆ ನಡೆಯಿತು. ಏಪ್ರಿಲ್ 12ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡಿಗೆಗೆ ಚಾಲನೆ ಹಾಗೂ ಸಮಾಜಮುಖಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಡಗಿನ `ಪ್ರಜಾಸತ್ಯ ದಿನಪತ್ರಿಕೆ’ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ‘ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಪರ್ಯಾಯವಾಗಿ ಅಧ್ಯಯನ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತೋಷದ […]

ಓದುಗರ ಅಭಿಪ್ರಾಯಗಳು

ನೂರು ಪಟ್ಟು ಗುಣಮಟ್ಟ ಹುಬ್ಬಳ್ಳಿಯ ಸ್ನೇಹಿತನ ಮನೆಯಲ್ಲಿ ‘ಸಮಾಜಮುಖಿ’ ನೋಡಿ ಬಹಳಷ್ಟು ಖುಷಿಯಾಯಿತು. ಪತ್ರಿಕೆಯಲ್ಲಿಯ ಲೇಖನಗಳು ಓದಿಸಿಕೊಂಡು ಹೋದವು. ಪತ್ರಿಕೆಯ ಗುಣಮಟ್ಟ ಇತರೇ ಪತ್ರಿಕೆಗೆಗಿಂತ 100 ಪಟ್ಟು ಹೆಚ್ಚಾಗಿರುವಂತೆ ತೋರಿತು. ಮಾಧ್ಯಮ ಭ್ರಷ್ಟಾಚಾರ ಕುರಿತಾದ ಲೇಖನಗಳು ಪ್ರಸ್ತುತವಾಗಿದ್ದವು. ಮೋದಿ ಕುರಿತಾದ ಬರಹಗಳು ಪತ್ರಿಕೆಯ ಘನತೆಯನ್ನು ಹೆಚ್ಚಿಸಿದ್ದವು. ಪೂರಕವೆಂಬಂತೆ ನಾಮದೇವ ಕಾಗದಗಾರ ಅವರ ವ್ಯಂಗ್ಯಚಿತ್ರಗಳು ಉತ್ತಮವಾಗಿದ್ದವು. -ಪವನ್ ತಹಶೀಲ್ದಾರ ,ಮಲಗಿ. ಮೋದಿ ಚಿತ್ರ ಏಕೆ? ರಘುನಂದನ ಅವರ ಕವಿತೆ ಬಹಳ ಅದ್ಭುತವಾಗಿದೆ. ಆದರೆ ಈ ಕವಿ ಮತ್ತು ನಾಟಕಕಾರ […]

ಕನ್ನಡ ಪತ್ರಿಕೋದ್ಯಮದ ಅನೀತಿ ಪರ್ವದ ಆರಂಭ!

- ಜಾಣಗೆರೆ ವೆಂಕಟರಾಮಯ್ಯ

ಮುಂದುವರಿದ ಚರ್ಚೆ ಸಮಾಜವನ್ನು ಸುಸ್ಥಿತಿಗೆ ಕರೆದೊಯ್ಯುವ, ಅನ್ಯಾಯ-ಅಕ್ರಮಗಳನ್ನು ಎತ್ತಿ ಹೇಳುವ, ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳನ್ನು ಸದಾ ಎಚ್ಚರಿಸುವ ಮಹತ್ತರ ಹೊಣೆಗಾರಿಕೆಯನ್ನು ಹೊಂದಿದ್ದ ಮಾಧ್ಯಮರಂಗವು ಅಡ್ಡದಾರಿ ಹಿಡಿದ ಅಧ್ವಾನದ ಕತೆ ಹೀಗಿದೆ. ‘ಚಿಂತನಶೀಲ ಸಮಾಜಮುಖಿ’ ಸಂಪಾದಕೀಯಕ್ಕೆ ‘ಮಾಧ್ಯಮ ರಂಗದ ವ್ಯಭಿಚಾರ’ ಎಂಬ ತಲೆಬರಹ ಕೊಟ್ಟಿರುವುದನ್ನು ಓದಿ ರೋಮಾಂಚನಗೊಂಡೆ. ಅದರಲ್ಲಿ ‘ಹಣ ಮಾಡುವುದು ಹೇಗೆ? ಯಶಸ್ಸು ಗಳಿಸುವುದು ಹೇಗೆ?’ ಎಂಬುದನ್ನು ಕುರಿತು ಬೇಕಾದಷ್ಟು ಪುಸ್ತಕಗಳು ಪ್ರಕಟವಾಗಿವೆ. ಆದರೆ ‘ಪ್ರಾಮಾಣಿಕವಾಗಿ ಬದುಕುವುದು ಹೇಗೆ?’ ಎಂಬುದರ ಕುರಿತಂತೆ ಯಾವುದೇ ಕೈಪಿಡಿ ಅಥವಾ ಕೃತಿಗಳು ಪ್ರಕಟವಾಗದಿರುವುದಕ್ಕೆ ವಿಷಾದ […]

ಪತ್ರಿಕೆಯ ಆತ್ಮ ಕೊಲ್ಲುವ ನೈತಿಕ ಭ್ರಷ್ಟಾಚಾರ

- ಜಿ.ಎನ್.ರಂಗನಾಥ ರಾವ್

 ಪತ್ರಿಕೆಯ ಆತ್ಮ ಕೊಲ್ಲುವ ನೈತಿಕ ಭ್ರಷ್ಟಾಚಾರ <p><sub> - ಜಿ.ಎನ್.ರಂಗನಾಥ ರಾವ್ </sub></p>

ಮುಂದುವರಿದ ಚರ್ಚೆ ಪತ್ರಕರ್ತರೂ ಲೋಕಾಯುಕ್ತ ಕಾಯಿದೆಯ ವ್ಯಾಪ್ತಿಗೊಳಪಡುತ್ತಾರೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಬಂದಿರುವ ಭ್ರಷ್ಟಾಚಾರ ನಿರೋಧ (ಎಸಿಬಿ) ಕಾನೂನಿನ ವ್ಯಾಪ್ತಿಗೂ ಸೇರುತ್ತಾರೆ. ಆದರೆ ಹಿಂದಿನ ಲೋಕಾಯುಕ್ತರಿಗಾಗಲೀ ಅಥವಾ ಈಗಿನ ವ್ಯವಸ್ಥೆಗಾಗಲೀ ಇಂಥ ದೂರು ಹೋಗಿರುವುದು ವರದಿಯಾಗಿಲ್ಲ. ಭ್ರಷ್ಟಾಚಾರಕ್ಕಾಗಿ ಪತ್ರಕರ್ತರಿಗೆ ಶಿಕ್ಷೆಯಾದ ಪ್ರಕರಣಗಳು ಇಲ್ಲವೇ ಇಲ್ಲ! ಪತ್ರಿಕಾ ವೃತ್ತಿಯು ನೇಗಿಲ ಯೋಗಿಯಂಥ ನಿಸ್ವಾರ್ಥ ಸೇವೆಯ ಪತ್ರಿಕಾ ವ್ಯವಸಾಯವಾಗಿದ್ದ ದಿನಗಳಿದ್ದವು. ಅದು ಸ್ವಾತಂತ್ರ್ಯಪೂರ್ವದಲ್ಲಿ. ಸ್ವಾತಂತ್ರ್ಯಾನಂತರ ಪತ್ರಿಕಾ ವ್ಯವಸಾಯವು ಪತ್ರಿಕೋದ್ಯಮವಾಗಿ ಬೆಳೆದದ್ದು ಈಗ ಇತಿಹಾಸ. ಇತ್ತೀಚೆಗಿನ ದಿನಗಳಲ್ಲಂತೂ ಪತ್ರಿಕೋದ್ಯಮ ಸ್ವಾರ್ಥ ಲಾಲಸೆಯಿಂದ, ಭ್ರಷ್ಟಾಚಾರಗಳಿಂದ […]

ಅಭಿಯಾನ

ಮಾಧ್ಯಮಗಳ ಭ್ರಷ್ಟಾಚಾರ ವಿರೋಧಿಸಿ! ಏಕೆ ಮಾತನಾಡುತ್ತಿಲ್ಲ? ಮಾಧ್ಯಮಗಳಲ್ಲಿ ಭ್ರಷ್ಟಾಚಾರ ಇದೆ. ಹಾಗೆಂದು ಎಲ್ಲರೂ ಭ್ರಷ್ಟರಲ್ಲ. ಪ್ರಮಾಣಿಕರೂ ಇದ್ದಾರೆ. ಆದರೆ ಅವರು ಭ್ರಷ್ಟ ಪತ್ರಕರ್ತರ ಬಗ್ಗೆ ಮಾತನಾಡುವುದಿಲ್ಲ. ನಮಗೇಕೆ ಇವರ ವಿಚಾರ ಎಂದು ಸುಮ್ಮನಾಗುತ್ತಾರೆ. ಭ್ರಷ್ಟ ಪತ್ರಕರ್ತರ ನಿಯಂತ್ರಣಕ್ಕೆ ಯಾವುದೇ ಕಾನೂನಿಲ್ಲ. ಆದಾಯ ತೆರಿಗೆ ಇಲಾಖೆ ಭ್ರಷ್ಟ ಪತ್ರಕರ್ತರ ಮೇಲೆ ದಾಳಿ ಮಾಡಿ ಆದಾಯದ ಮೂಲದ ಬಗ್ಗೆ ತನಿಖೆ ಮಾಡುವುದಿಲ್ಲ. ಕಾನೂನು ರೂಪಿಸುವ ಶಾಸಕಾಂಗ ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಪತ್ರಕರ್ತರ ಉಸಾಬರಿ ನಮಗೆ ಬೇಡ ಎಂದು ಎಲ್ಲರೂ […]

ಹಳೆಯ ವೈಫಲ್ಯಗಳು ಹೊಸ ಭರವಸೆಗಳು

ಶಶಿಧರ ಭಟ್

ಮುಂದುವರೆದ ಚರ್ಚೆ ದೇಶಪ್ರೇಮ, ದೇಶದ ಭದ್ರತೆಯ ಪ್ರಶ್ನೆಗಳನ್ನು ಇವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಇವು ಭಾವನಾತ್ಮಕ ವಿಚಾರಗಳು. ಈ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಕಷ್ಟ. ಹಾಗೆ ದೇಶ ಎದುರಿಸುತ್ತಿರುವ ಪ್ರಮುಖ ಜ್ವಲಂತ ಸಮಸ್ಯೆಗಳ ಬಗ್ಗೆ ಯೋಚಿಸದಂತೆ ಇವು ಮಾಡುತ್ತವೆ. ಸೈನಿಕರು ಮತ್ತು ದೇಶಪ್ರೇಮದ ಮುಂದೆ ಉಳಿದ ಎಲ್ಲ ವಿಚಾರಗಳು ಮರೆಯಾಗಿಹೋಗುತ್ತವೆ. ಈಗ ಆಗಿರುವುದು ಅದೇ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರ ಮುಂದಿದ್ದ ಪ್ರಶ್ನೆ ನರೇಂದ್ರ ಮೋದಿ ಅವರನ್ನು ಮತ್ತೆ ಯಾಕೆ ಆಯ್ಕೆ ಮಾಡಬೇಕು? ಇನ್ನೊಂದು […]

ಮೋದಿಗೆ ಕೊನೆಯ ನಮಸ್ಕಾರ

-ಎಚ್.ಎ.ನಂಜುಂಡಸ್ವಾಮಿ, ವಕೀಲರು, ಮೈಸೂರು.

ಮುಂದುವರೆದ ಚರ್ಚೆ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು 2014ರ ಚುನಾವಣೆಯಲ್ಲಿ ದೇಶದ ಜನತೆ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದಿಂದ ಆರಿಸಿ ಕಳಿಸಿದ್ದರು. ಆ ಸಂದರ್ಭದಲ್ಲಿ ದೇಶದ ಜನರಿಗೆ ಅವರು ಮೂರು ಭರವಸೆಗಳನ್ನು ಕೊಟ್ಟಿದ್ದರು. ಅವುಗಳೆಂದರೆ: 1. ಅಭಿವೃದ್ಧಿ ಭಾರತ ಮಾಡುವುದು. 2. ಸ್ವಿಸ್ ಬ್ಯಾಂಕಿನ ಹಣವನ್ನು ದೇಶಕ್ಕೆ ವಾಪಸ್ಸು ತರಿಸಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಬ್ಯಾಂಕಿನ ಖಾತೆಗೆ ಹಾಕುವುದು. 3. ವರ್ಷವೊಂದಕ್ಕೆ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿ ಯುವಕರಿಗೆ ಕೊಡುವುದು. ಮನಮೋಹನ್ ಸಿಂಗ್ ಅವರ ಕೆಟ್ಟ ಆಡಳಿತದಿಂದ ದಿಕ್ಕು […]

ಕಲಬುರ್ಗಿಯಲ್ಲಿ ವಿನೂತನ ಪ್ರಯೋಗ

ವಿಶ್ವಾರಾಧ್ಯ ಸತ್ಯಂಪೇಟೆ

 ಕಲಬುರ್ಗಿಯಲ್ಲಿ ವಿನೂತನ ಪ್ರಯೋಗ <p><sub> ವಿಶ್ವಾರಾಧ್ಯ ಸತ್ಯಂಪೇಟೆ </sub></p>

‘ಉದ್ಯೋಗ ಖಾತ್ರಿ’ ಯೋಜನೆಗೆ ಸಂಘಟನೆಗಳ ಸಹಯೋಗ ಕಲಬುರ್ಗಿಯಲ್ಲಿ ವಿನೂತನ ಪ್ರಯೋಗ ಈ ಬಳಗದ ವಿಶೇಷ ಮುತುವರ್ಜಿ, ಪ್ರಯೋಗ, ಸಾಧನೆ ಬೇರೆ ಜಿಲ್ಲೆಗಳಿಗೂ ಮಾದರಿಯಾಗಬಾರದೇಕೆ? ಸರಕಾರದ ಹಲವು ಯೋಜನೆಗಳು ಜನಪರವಾಗಿಯೇ ರೂಪಿತವಾಗಿರುತ್ತವೆ. ಆದರೆ ಯೋಜನೆಗಳನ್ನು ಪ್ರಜೆಗಳಿಗೆ ತಲುಪಿಸುವಲ್ಲಿ ಸರಕಾರಗಳು ಸೋಲುತ್ತವೆ; ಕಾದುಕುಳಿತ ಪುಢಾರಿಗಳು, ಅಧಿಕಾರಿಗಳು ಹಣ ಬಾಚುತ್ತಾರೆ. ಇದಕ್ಕೆ ನರೇಗಾ ಯೋಜನೆಯೂ ಹೊರತಲ್ಲ. ಆದರೆ ಇಂತಹ ಅನರ್ಥ ತಪ್ಪಿಸಲೆಂದೇ ಕಲಬುರ್ಗಿಯಲ್ಲಿ ರೈತಪರ ಕಾಳಜಿಯ ಬಳಗ ಕ್ರಿಯಾಶೀಲವಾಗಿದೆ. ಮಳೆಗಾಲದ ಕೊರತೆಯಿಂದ ಭಾರತದ ಬಹುಪಾಲು ರೈತರು, ಕೂಲಿ ಕಾರ್ಮಿಕರು ಊರನ್ನು ಬಿಟ್ಟು […]

ಪಂಥಗಳಲಿ ಹಂಚಿಹೋಗುತ್ತಿದೆಯೇ?

ಪ್ರಸಾದ್ ನಾಯ್ಕ್

ಸಾಹಿತ್ಯ ಡಿಜಿಟಲ್ ಮಾಧ್ಯಮವು ಇಷ್ಟು ಪ್ರಬಲವಾಗಿರುವ ಈ ದಿನಗಳಲ್ಲಿ ಸಾಹಿತ್ಯಕ್ಷೇತ್ರದ ಇತರ ವಿಚಾರಗಳು ಕೂಡ ಪರಿಣಾಮಕಾರಿಯಾಗಿ ಚರ್ಚೆಯಾಗಬಹುದಿತ್ತು. ಆದರೆ ಇಂತಹ ಆರೋಗ್ಯಕರ ಚರ್ಚೆಗಳು ತಮ್ಮ ಬಿಸಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ಇಂದು ನಮ್ಮ ಸಾಮಾಜಿಕ ಜಾಲತಾಣಗಳನ್ನು ನೋಡಿದಾಗಲೆಲ್ಲಾ ಬದುಕು ಹಲವು ತುಣುಕುಗಳಲ್ಲಿ ಚದುರಿಹೋದಂತೆ ಕಾಣುತ್ತಿದೆ. ನಾನು ಚಿಕ್ಕವನಿದ್ದಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಹದಿನೈದು ನಿಮಿಷಗಳ ವಾರ್ತಾಪ್ರಸಾರವನ್ನು ನೋಡುತ್ತಿದ್ದೆ. ಅದು ಬಿಟ್ಟರೆ ಆಕಾಶವಾಣಿ ಮತ್ತು ಪತ್ರಿಕೆಗಳಿದ್ದವು. ದಿನಕ್ಕಿಂತಿಷ್ಟು ಅವಧಿ ಸುದ್ದಿಗಳನ್ನು ಓದಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದಷ್ಟೇ ಇಲ್ಲಿ ಉದ್ದೇಶವಾಗಿರಲಿಲ್ಲ. […]

ಕುಟುಂಬ ರಾಜಕಾರಣ: ಕಾರಣವೇನು?

ಪೃಥ್ವಿದತ್ತ ಚಂದ್ರಶೋಭಿ

 ಕುಟುಂಬ ರಾಜಕಾರಣ: ಕಾರಣವೇನು? <p><sub> ಪೃಥ್ವಿದತ್ತ ಚಂದ್ರಶೋಭಿ </sub></p>

ವಂಶ ಪಾರಂಪಾರ್ಯ ಆಡಳಿತವನ್ನು ಹುಟ್ಟುಹಾಕುವ ಕೌಟುಂಬಿಕ ರಾಜಕಾರಣಕ್ಕೂ ರಾಜಪ್ರಭುತ್ವಕ್ಕೂ ಹೆಚ್ಚಿನ ಅಂತರವಿಲ್ಲ. ಕೌಟುಂಬಿಕ ರಾಜಕಾರಣಕ್ಕೆ ಉತ್ತೇಜನ ಮತ್ತು ಸಮರ್ಥನೆಗಳು ಯಾವುದೇ ನೆಲೆಯಿಂದ ದೊರಕಲಿ, ಅದರ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇಂದು ನಮಗಿದೆ. ಇಂದಿನ ದಿನಗಳಲ್ಲಿ ಅಧಿಕಾರ ಮತ್ತು ಚುನಾವಣೆಗಳ ರಾಜಕಾರಣವು ಕೌಟುಂಬಿಕ ವ್ಯವಹಾರವಾಗಿ ಪರಿವರ್ತಿತವಾಗಿರುವುದು ಭಾರತೀಯ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಿ. ಈ ಮಾತನ್ನು ಒಪ್ಪುವವರೂ ಸಹ ಈ ವಿದ್ಯಮಾನವನ್ನು ಒಂದು ಅನಿವಾರ್ಯತೆಯಂತೆಯೆ ನೋಡುತ್ತಿದ್ದಾರೆ. ಇದು ಒಂದು ರಾಜ್ಯಕ್ಕೆ, ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವ ವಿದ್ಯಮಾನವೇನಲ್ಲ. ಕೌಟುಂಬಿಕ […]

ಅಡ್ವಾಣಿಗೇಕೆ ಈ ಅನುಕಂಪ?

ಕೇಸರಿ ಹರವೂ

ಅಡ್ವಾಣಿಯವರ ಇಂದಿನ ಮಾತುಗಳು ಸ್ವಾರ್ಥದಿಂದ ಹುಟ್ಟಿರುವುದೇ ಹೊರತು ದೇಶದ ಹಿತಾಸಕ್ತಿಯಿಂದಂತೂ ಖಂಡಿತಾ ಅಲ್ಲ. ಹೋಗಲಿ, ಅವರು ನಂಬಿರುವ ಸಿದ್ಧಾಂತದ ಹಿತಾಸಕ್ತಿಯಿಂದಲೂ ಅಲ್ಲ. ಅಡ್ವಾಣಿಯವರು ದೇಶದ ಭವಿಷ್ಯದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ತೋರಿದ್ದಾರೆ. ಅವರಿಗೆ ಈಗಷ್ಟೇ ಜ್ಞಾನೋದಯವಾಯಿತೇ? ಈ ಮೊದಲು ತಮ್ಮ ಇಡೀ ರಾಜಕೀಯ ಜೀವನದಲ್ಲಿ ಈ ರೀತಿ ಮಾತಾಡಿರುವುದು ನಮ್ಮ ಗಮನಕ್ಕೆ ಬಂದಿದೆಯೇ? ದೇಶ, ಸಂವಿಧಾನ, ಬಹುತ್ವ, ರಾಜಕೀಯ ವೈರುಧ್ಯ ಮುಂತಾದ ಪ್ರಜಾಪ್ರಭುತ್ವವಾದೀ ಚಿಂತನೆಗಳನ್ನು ವಿರೋಧಿಸುತ್ತಲೇ ತನ್ನ ರಾಜಕೀಯ ಬದುಕನ್ನು ಕಟ್ಟಿಕೊಂಡವರು ಇವರು. ರಥ ಯಾತ್ರೆಯ […]

ಬೃಹತ್ ಕಸದ ರಾಶಿ ತತ್ತರಿಸುತ್ತಿರುವ ಬಿ.ಬಿ.ಎಂ.ಪಿ

ಎಲ್.ಚಿನ್ನಪ್ಪ

ಇತ್ತೀಚೆಗೆ, ಸಚಿವ ಜಿ.ಪರಮೇಶ್ವರ ಅವರು ಕಸನಿರ್ವಹಣೆ ಅಧ್ಯಯನ ಮಾಡಲು ಫ್ರಾನ್ಸ್ ದೇಶಕ್ಕೆ ಹೋಗಿದ್ದರು. ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುವ ವಿದೇಶಿ ತಂತ್ರಜ್ಞಾನವನ್ನು ಇಲ್ಲಿಯೂ ಅಳವಡಿಸಿಕೊಳ್ಳಬೇಕೆಂಬ ಸರ್ಕಾರದ ಆಶಯವೇನೋ ಸರಿ. ಆದರೆ ಇಲ್ಲಿ ಅದರ ಅನುಷ್ಠಾನ ಕಾಣದಾಗಿದೆ. ನಗರಗಳು ಬೆಳೆದಂತೆ ಸಂಗ್ರಹವಾಗುವ ಹೆಚ್ಚುವರಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವಲ್ಲಿ ಇಂದು ನಗರಪಾಲಿಕೆಗಳು ಮಿತಿಮೀರಿದ ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರಲ್ಲೂ ನಮ್ಮ ಉದ್ಯಾನ ನಗರಿ, ವಿಜ್ಞಾನದ ನಗರಿ, ಜ್ಞಾನದ ನಗರಿ, ಆರೋಗ್ಯ ನಗರಿ, ಸಿಲಿಕಾನ್ ವ್ಯಾಲಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರು ನಗರ ಇಂದು […]

ಮುಖ್ಯಚರ್ಚೆಗೆ ಪ್ರವೇಶ

ಸಮ್ಮಿಶ್ರ ಸರ್ಕಾರ ಒಂದು ವರ್ಷ ಹೇಳಿದ್ದೇನು ಮಾಡಿದ್ದೇನು? ಕರ್ನಾಟಕ ಸರ್ಕಾರದ ಮುಂದೆ ಸಮಸ್ಯೆ ಗಳ ಸರಮಾಲೆಯೇ ಇದೆ. ಕನ್ನಡಿಗರ ಶಿಕ್ಷಣ-ಆರೋಗ್ಯ ಉದ್ಯೋಗ ಗಳ ಸಮಸ್ಯೆಗಳು ಉಲ್ಬಣಗೊಳ್ಳುತ್ತಲೇ ಇವೆ. ರೈತರ ಗೋಳನ್ನು ಕೇಳುವವರು ಇಲ್ಲವಾಗಿದ್ದಾರೆ. ಕೈಗಾರಿಕೆ-ಉದ್ಯಮಗಳು ಭ್ರಷ್ಟಾಚಾರದ ಭಾರದಲ್ಲಿ ನಲುಗಿಹೋಗಿವೆ. ಸರ್ಕಾರಿ ಆಡಳಿತ ವ್ಯವಸ್ಥೆ ಕುಸಿದು ಹೋಗಿರುವ ಅನುಭವವಾಗುತ್ತಿದೆ. ರಾಜ ಕೀಯ ಪ್ರಾತಿನಿಧಿಕ ಪ್ರಕ್ರಿಯೆ ಪೊಳ್ಳಾಗಿದೆ. ಅಧಿಕಾರಿವರ್ಗ ನಿಷ್ಕ್ರಿಯವಾಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಈ ಸಮಯದಲ್ಲಿ ಈ ಎಲ್ಲಾ ವಿಷಯಗಳನ್ನು ನಾವು ಎತ್ತಲೇ ಬೇಕಾಗಿದೆ. […]

ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ!

ಡಾ.ಎಂ.ಚಂದ್ರ ಪೂಜಾರಿ

 ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ! <p><sub> ಡಾ.ಎಂ.ಚಂದ್ರ ಪೂಜಾರಿ </sub></p>

ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ವಿಮರ್ಶಿಸಲು ಮಾನದಂಡದ ಅಗತ್ಯವಿದೆ. ಮೂಲಸೌಕರ್ಯಗಳನ್ನು, ಜನರು ದುಡಿದು ಗಳಿಸುವ ಪರಿಸರವನ್ನು ಸೃಷ್ಟಿಸುವುದು ಚುನಾಯಿತ ಸರಕಾರದ ಜವಾಬ್ದಾರಿಯೆನ್ನುವ ಒಂದು ಸಾಮಾನ್ಯ ಮಾನದಂಡದಿಂದ ಸರಕಾರದ ಸಾಧನೆಯನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸಿದ್ದೇನೆ. ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮ್ಮಿಶ್ರ ಸರಕಾರವನ್ನು ರಚಿಸಿವೆ. ಈ ಪಕ್ಷಗಳ ಅಭಿವೃದ್ಧಿ ಧೋರಣೆಯಲ್ಲಿ ವಿಶೇಷ ಭಿನ್ನತೆ ಇಲ್ಲ. ಈ ಪಕ್ಷಗಳು ಏಕೆ ದೇಶದಲ್ಲಿರುವ ಬಹುತೇಕ ಲಿಬರಲ್ ಪಕ್ಷಗಳ ಅಭಿವೃದ್ಧಿ ಧೋರಣೆಯಲ್ಲಿ ತೊಂಬತ್ತರ ನಂತರ ವಿಶೇಷ ಭಿನ್ನತೆ ನೋಡಲು […]

ವಿತ್ತೀಯ ಹೊಣೆಗಾರಿಕೆಯಲ್ಲಿ ಹಳಿತಪ್ಪಿದ ಸರ್ಕಾರ

-ಮೋಹನದಾಸ್

ರಾಜ್ಯ ಜಿಡಿಪಿ ಅನುಪಾತದಲ್ಲಿ ಕರ್ನಾಟಕ ಸರ್ಕಾರವು ಸಾಲ ಮಾಡಿ ತನ್ನ ಆಯವ್ಯಯವನ್ನು ಸರಿದೂಗಿಸುವ ಪ್ರಯತ್ನ ದೋಷಪೂರಿತವಾಗಿದೆ. ಬಜೆಟ್‍ನಲ್ಲಿಯ ಅಂಕಿಅಂಶಗಳು ‘ಜೇಬಿನ ಹಣ’ವಾಗಿದ್ದರೆ ಜಿಡಿಪಿಯ ಅಂಕಿಅಂಶಗಳು ‘ಕನ್ನಡಿ ಗಂಟು’ ಆಗಿದೆ. ಈ ಕನ್ನಡಿ ಗಂಟಿನ ಅನುಪಾತದಲ್ಲಿ ಸಾಲ ಮಾಡಿ ಜೇಬಿನ ಖರ್ಚನ್ನು ಸರಿದೂಗಿಸುವ ಹುನ್ನಾರ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಲಿದೆ. ಸಾಲಮನ್ನಾ ಮತ್ತಿತರ ಅವೈಜ್ಞಾನಿಕ ಬಾಬತ್ತುಗಳಿಗೆ ಹಣ ಮೀಸಲಿಟ್ಟ ಕುಮಾರಸ್ವಾಮಿ ಸರ್ಕಾರವು ಕಳೆದ ಎರಡು ಬಜೆಟ್ ನಿರೂಪಣೆಯಲ್ಲಿ ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. 2018-19ರ ಮತ್ತು 2019-20ರ ಬಜೆಟ್ […]

ಸರ್ಕಾರ ಉಳಿದಿದ್ದೇ ದೊಡ್ಡ ಸಾಧನೆ!

ಹರೀಶ್ ನರಸಪ್ಪ

 ಸರ್ಕಾರ ಉಳಿದಿದ್ದೇ ದೊಡ್ಡ ಸಾಧನೆ! <p><sub> ಹರೀಶ್ ನರಸಪ್ಪ </sub></p>

ಸಾಮಾಜಿಕ ಅಧ್ಯಯನ, ಸಮೀಕ್ಷೆ ಇತ್ಯಾದಿ ಚಟುವಟಿಕೆಗಳ ಮೂಲಕ ದೇಶದಲ್ಲಿ ವಿವಿಧ ಸರಕಾರಗಳು ಉತ್ತಮ ಆಡಳಿತ ನೀಡಲು ಮತ್ತು ಜನತೆಗೆ ಉತ್ತರದಾಯಿಯಾಗಿರುವಂತೆ ಉತ್ತೇಜಿಸುವ ಸ್ವಯಂ ಸೇವಾ ಸಂಸ್ಥೆಯೇ ದಕ್ಷ. ಇದರಲ್ಲಿ ಪ್ರಾಧ್ಯಾಪಕರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ತೊಡಗಿಕೊಂಡಿದ್ದಾರೆ. 2008ರಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ವೃತ್ತಿಯಿಂದ ವಕೀಲರಾಗಿರುವ ದಕ್ಷ ಸಂಘಟನೆಯ ಸಹಸಂಸ್ಥಾಪಕ ಹರೀಶ್ ನರಸಪ್ಪ ಅವರು ಸಮ್ಮಿಶ್ರ ಸರ್ಕಾರ ಕುರಿತು ಹೀಗೆ ಹೇಳುತ್ತಾರೆ. ಲೋಕಸಭೆ ಚುನಾವಣೆ ಮಧ್ಯದಲ್ಲಿ ಕರ್ನಾಟಕ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು […]

ಸಣ್ಣ ಕೈಗಾರಿಕೆಗಳಿಗೆ ಪೂರಕ ಸರ್ಕಾರ

ಬಸವರಾಜ ಎಸ್.ಜವಳಿ

ನನ್ನ 25 ವರ್ಷಗಳ ಅನುಭವದಲ್ಲಿ ಸಣ್ಣ ಕೈಗಾರಿಕೆಗಳಿಗೆ ಪೂರಕವಾಗಿರು ವುದು ಮುಖ್ಯವಾಗಿ ಒಂದು ಮಾರುಕಟ್ಟೆ, ಇನ್ನೊಂದು ಹಣಕಾಸು. ಈ ಸರಕಾರ ಅವಧಿ ಸಾಲದ ಮೂಲಕ ಹಣಕಾಸನ್ನು ಸರಳಗೊಳಿಸಿದೆ. ಇನ್ನು ಮಾರುಕಟ್ಟೆ ವಿಚಾರದಲ್ಲಿ ‘ಸಾರ್ಥಕ’ ಎಂಬ ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದೆ. ಅದು ಇನ್ನು ಜಾರಿಗೆ ಬಂದಿಲ್ಲ. ಕೃಷಿಯ ನಂತರ ದೇಶದಲ್ಲಿಅತೀ ಹೆಚ್ಚಿನ ಉದ್ಯೋಗ ಸೃಷ್ಟಿಸುವುದೆಂದರೆ ಸಣ್ಣ ಕೈಗಾರಿಕೆಗಳ ಕ್ಷೇತ್ರ. ಸಣ್ಣ ಕೈಗಾರಿಕೆಗಳು ಕಡಿಮೆ ವಿದ್ಯಾಭ್ಯಾಸ ಮಾಡಿದವರನ್ನು ಅಲ್ಲದೇ ಏನೂ ಬರಲಾರದವರನ್ನೂ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಅಗತ್ಯ ಉದ್ಯೋಗದ […]

1 2 3