ಇದು ಕೆಲಸ ಮಾಡುವ ಸರಕಾರ ಅಲ್ಲ

ಡಾ.ವಾಮನ ಆಚಾರ್ಯ

ಸಂಪುಟಸಭೆ ಎಂದರೆ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಾದ ಯೋಜನೆಗಳು ಮತ್ತು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳುವ ಅಧಿಕಾರ ಕೇಂದ್ರದ ಉನ್ನತ ಸ್ಥಾನ. ಇಂಥ ಮಹತ್ವದ ಸಂಪುಟ ಸಭೆಯಲ್ಲಿ ಈ ಸರಕಾರದ ಸಚಿವರು ತಮಗೆ ಆ ಖಾತೆ ಕೊಟ್ಟಿಲ್ಲ, ಈ ಖಾತೆ ಬೇಕಿತ್ತು, ಆ ಶಾಸಕರಿಗೆ ಅಂಥ ನಿಗಮ-ಮಂಡಳಿ ಕೊಡಬೇಕು, ಇವರಿಗೆ ಇಂಥದು ಕೊಡಬೇಕು ಎಂಬ ಕಚ್ಚಾಟವೇ ಹೆಚ್ಚಾಗಿ ನಡೆದಿದೆ. ಕರ್ನಾಟಕದಲ್ಲಿ ಈಗಿರುವ ಸಮ್ಮಿಶ್ರ ಸರಕಾರ ಒಂದು ಅನಿವಾರ್ಯ ಸ್ಥಿತಿಯಲ್ಲಿ ನಿರ್ಮಾಣವಾದ ಒಪ್ಪಂದದ ಸರಕಾರ. ಜನರು ಕಳೆದ […]

ಕರ್ನಾಟಕ ಎಂದರೆ… ಆ ಮೂರು ಜಿಲ್ಲೆಗಳೇ?

ಡಾ.ರಝಾಕ ಉಸ್ತಾದ

ರಾಜ್ಯದಲ್ಲಿ ನಡೆಯುತ್ತಿರುವ ನೇಮಕಾತಿಗಳಲ್ಲಿ ಕೆಲವೊಂದು ಇಲಾಖೆಗಳು 371ಜೆ ಮೀಸಲಾತಿ ಕೈಬಿಟ್ಟು ಮುಂದುವರೆಯುತ್ತಿರುದರಿಂದ ಈ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡುತ್ತಿದೆ. ಈಗಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ರಾಜ್ಯದ ಎಲ್ಲ ನಾಲ್ಕು ವಿಭಾಗಗಳಿಗೆ ಏಕಮುಖವಾದ ಅಭಿವೃದ್ಧಿ ಯೋಜನೆ ಜಾರಿ ಮಾಡುವ ಕುರಿತು ಸಾಕಷ್ಟು ಅನುಮಾನಗಳು ಕೇಳಿಬಂದಿವೆ ಮತ್ತು ಸರಕಾರ ಅದೇ ರೀತಿ ನಡೆದುಕೊಂಡು ಬಂದಿದೆ. ಕಳೆದ ಒಂದು ವರ್ಷದಲ್ಲಿ ಸರಕಾರ ಎರಡು ಬಜೆಟ್ ಮಂಡಿಸಿದೆ, ಎರಡೂ ಬಜೆಟ್‍ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಲ್ಲಿ […]

ರೈತ ಸಮುದಾಯಕ್ಕೆ ಮೋಸ!

ನುಲೇನೂರು ಶಂಕರಪ್ಪ

ರೈತ ಸಮುದಾಯಕ್ಕೆ ಮೋಸ!
ನುಲೇನೂರು ಶಂಕರಪ್ಪ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಯಾವುದೇ ಚರ್ಚೆ ಇಲ್ಲದೇ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದಿತು. ಸರಕಾರದ ಯೋಜನೆಗಳಿಗೆ ಮಾರ್ಗದರ್ಶಿ ಬೆಲೆಯನ್ನು ಮಾತ್ರ ಕೊಟ್ಟು ರೈತರ ಭೂಮಿಯನ್ನು ಪಡೆಯಬಹುದೆಂದು ಕಾಯ್ದೆಗೆ ತಿದ್ದುಪಡಿ ಮಾಡಿತು. ಇದು ರೈತ ಸಮುದಾಯಕ್ಕೆ ಮಾಡಿದ ಮೋಸವೇ ಆಗಿದೆ. ಹಿಂದಿನ ಎಲ್ಲ ಸರಕಾರಗಳಿಗಿಂತ ಇದು ಅತ್ಯಂತ ನಿರಾಶಾದಾಯಕ ಸರಕಾರ. ಇದೊಂದು ಸಾಂದರ್ಬಿಕವಾಗಿ ರಚನೆಯಾದ ಸರಕಾರ. ಇಲ್ಲೊಂದು ಸರಕಾರ ಇದೆ ಎಂಬ ಬಾವನೆ ನಮಗೆ ಬರುತ್ತಿಲ್ಲ. ಒಂದು ಸರಕಾರ ಇದೆ ಎಂಬ ಬಾsವನೆ ಬರಬೇಕಾದರೆ ಸರಕಾರದಲ್ಲಿನ ಎಲ್ಲ […]

ಇಂದಿನ ವೈದ್ಯಕೀಯ ರಂಗ ಸೇವೆಯೋ? ಸುಲಿಗೆಯೋ?

ಜೂನ್ ಸಂಚಿಕೆಯ ಮುಖ್ಯಚರ್ಚೆ ಪಾರಂಪಾರಿಕವಾಗಿ ವೈದ್ಯಕೀಯ ಸೇವೆಯನ್ನು ಅತ್ಯಂತ ಗೌರವದಿಂದ ನೋಡುತ್ತಾ ವೈದ್ಯರನ್ನು ದೇವರ ದೂತರೆಂದೇ ಕಂಡಿದ್ದೇವೆ. ಇದಕ್ಕೆ ತಕ್ಕಂತೆ ನಮ್ಮೆಲ್ಲರ ನಡುವೆ ನಿರಪೇಕ್ಷೆಯಿಂದ ಸೇವೆ ಮಾಡುತ್ತಾ ಬಂದಿರುವ ಹಲವಾರು ನಿಷ್ಕಳಂಕ ವೈದ್ಯರ ಕಥೆಗಳು ಇಂದಿಗೂ ಜನಜನಿತವಾಗಿವೆ. ಇಂತಹ ನೂರಾರು ವೈದ್ಯರು ನಮ್ಮೊಡನಿದ್ದಾರೆ. ಆದರೆ ಅತ್ಯಂತ ವ್ಯಾಪಕವಾಗಿ ವಾಣಿಜ್ಯೀಕರಣಗೊಂಡಿರುವ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸೇವೆಗೆ ಕಿಮ್ಮತ್ತಿಲ್ಲದಂತೆ, ಕರುಣೆಗೆ ಕವಡೆ ಕಾಸಿಲ್ಲದಂತೆ ಹಾಗೂ ಜೀವಕ್ಕೆ ಎಳ್ಳಷ್ಟೂ ದಯೆಯಿಲ್ಲದಂತೆ ಆಗಿದೆ. ಎಗ್ಗಿಲ್ಲದ ಲಾಭಕೋರತನದಲ್ಲಿ ಅಮಾಯಕ ಜನರನ್ನು ಅಕ್ಷರಶಃ ಸುಲಿಗೆ ಮಾಡಲಾಗುತ್ತಿದೆ. […]

ಸಮಯದ ಉಳಿತಾಯ ಖಾತೆ ಟೈಮ್ ಬ್ಯಾಂಕಿಂಗ್

ಪೂರ್ಣಿಮಾ ಮಾಳಗಿಮನಿ

ಸಮಯದ ಉಳಿತಾಯ ಖಾತೆ ಟೈಮ್ ಬ್ಯಾಂಕಿಂಗ್
ಪೂರ್ಣಿಮಾ ಮಾಳಗಿಮನಿ

ನಾವು ನಮ್ಮ ಬಳಿ ಇರುವ ಹೆಚ್ಚುವರಿ ಸಮಯವನ್ನು ಹಣದಂತೆ ಬ್ಯಾಂಕಿನಲ್ಲಿ ಕೂಡಿಡಬಹುದು. ಇದಕ್ಕೆ ಟೈಮ್ ಬ್ಯಾಂಕಿಂಗ್ ಅಂತ ಹೆಸರು. ಏಕೆಂದರೆ ಈ ವ್ಯವಸ್ಥೆಯಲ್ಲಿ ಎಲ್ಲವೂ ಬ್ಯಾಂಕ್ ರೀತಿಯಲ್ಲೇ ನಡೆಯುತ್ತದೆ, ಆದರೆ ಹಣದ ಬದಲಿಗೆ ಗಂಟೆಗಳ ಚಲಾವಣೆಯಾಗುತ್ತದೆ! ಅದೊಂದು ನೀರವ ರಾತ್ರಿ, ಕರೆಂಟು ಹೋಗಿದ್ದರಿಂದ, ಗಕ್ಕನೆ ಫ್ಯಾನ್ ನಿಂತು, ಪಕ್ಕನೆ ಎಚ್ಚರವಾಗಿಬಿಟ್ಟಿತು. ಕೆಲವೇ ಕ್ಷಣಗಳಲ್ಲಿ ನಿಶ್ಯಬ್ದವಾದ ಕೋಣೆಯನ್ನೆಲ್ಲಾ ಬಚ್ಚಲು ಮನೆಯಲ್ಲಿ ಸೋರುತ್ತಿದ್ದ ನಲ್ಲಿಯ ಟಿಪ್ ಟಿಪ್ ಮತ್ತು ಗೋಡೆಯ ಮೇಲಿನ ಗಡಿಯಾರದ ಟಿಕ್ ಟಿಕ್ ಆವರಿಸಿಕೊಂಡಿತು. ರೆಪೇರಿಯಾಗದ ನಲ್ಲಿಯನ್ನು […]

ಇ-ಜ್ಞಾನ

-ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸುವ ಅನೇಕರನ್ನು ನಾವು ನೋಡಿದ್ದೇವೆ. ಈ ಅಭ್ಯಾಸದಿಂದಾಗಿ ಅನೇಕ ಅಪಘಾತಗಳಾಗುವುದೂ ಉಂಟು. ಚಾಲಕರು ಮೊಬೈಲ್ ಬಳಸುವುದನ್ನು ತಡೆಯಲು ತಂತ್ರಜ್ಞಾನದ ಸಹಾಯ ಪಡೆದುಕೊಳ್ಳುವ ಹಲವು ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆಯುತ್ತಿವೆ. ಚಲಿಸುತ್ತಿರುವ ವಾಹನದಲ್ಲಿ ಮೊಬೈಲ್ ಬಳಕೆಯಾಗುತ್ತಿದ್ದರೆ ಅದನ್ನು ಪತ್ತೆಮಾಡುವ ವ್ಯವಸ್ಥೆಯೊಂದನ್ನು ಯುನೈಟೆಡ್‍ ಕಿಂಗ್‍ಡಂನ ಪೊಲೀಸರು ಪರಿಚಯಿಸಿದ್ದಾರೆ. ವಾಹನದಲ್ಲಿನ ಮೊಬೈಲ್ ಸಂಕೇತಗಳನ್ನು ಹೊರಗಿನಿಂದಲೇ ವಿಶ್ಲೇಷಿಸುವ ಮೂಲಕ ಇದು ಮೊಬೈಲ್ ಬಳಕೆಯನ್ನು ಪತ್ತೆಮಾಡಲಿದೆಯಂತೆ. ಸದ್ಯ ಈ ವ್ಯವಸ್ಥೆ ಎಚ್ಚರಿಕೆಯ ಸಂದೇಶವನ್ನು ಮಾತ್ರ ಪ್ರದರ್ಶಿಸಲಿದ್ದು, ಮುಂದೆ ಅಪರಾಧಿ […]

ಸಮಾಜಮುಖಿಯಲ್ಲಿ ಪಿಹೆಚ್‍ಡಿ ಸಾರಾಂಶ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷವೂ ನೂರಾರು ಪಿಹೆಚ್‍ಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ವಿವಿಯ ಒಳಗಿನ ಹಾಗೂ ಹೊರಗಿನ ನುರಿತ ಪ್ರಾಧ್ಯಾಪಕರಿಂದ ಪರಿಶೀಲಿಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಸಂಶೋ ಧನೆಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ. ಈ ಕೊರತೆಯನ್ನು ಸರಿದೂಗಿಸಲು ಸಮಾಜಮುಖಿ ಪತ್ರಿಕೆ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ನಿಮ್ಮ ಪಿಹೆಚ್‍ಡಿ ಪ್ರಬಂಧವನ್ನು 1000 ಶಬ್ದಗಳ ಸಾರಾಂಶದೊಂದಿಗೆ ಪ್ರಕಟಣೆಗೆ ಸಲ್ಲಿಸಿ. ಆಯ್ದ ಸಾರಾಂಶಗಳನ್ನು ಮಾಸ ಪತ್ರಿಕೆಯಲ್ಲಿ […]

ಐಎಎಸ್‍ಗೆ ಅರ್ಹತೆ ಪಡೆದ ಬಳ್ಳಾರಿಯ ಆಶ್ವೀಜ

ಸಂದರ್ಶನ: ಡಾ.ಅರವಿಂದ  ಪಟೇಲ್

ಐಎಎಸ್‍ಗೆ ಅರ್ಹತೆ ಪಡೆದ ಬಳ್ಳಾರಿಯ ಆಶ್ವೀಜ
ಸಂದರ್ಶನ: ಡಾ.ಅರವಿಂದ  ಪಟೇಲ್

ಈ ಬಾರಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಐಎಎಸ್‍ಗೆ ಅರ್ಹತೆ ಪಡೆದಿರುವ ಬಳ್ಳಾರಿಯ ಆಶ್ವೀಜ ಅವರ ಮನದ ಮಾತುಗಳು ಇಲ್ಲಿವೆ ನಿಮ್ಮ ಬಾಲ್ಯದ ಶಿಕ್ಷಣ ಹಾಗೂ ಮನೆಯಲ್ಲಿನ ವಾತಾವರಣದ ಬಗ್ಗೆ ತಿಳಿಸುವಿರಾ? ಮೊದಲನೆಯ ತರಗತಿಯಿಂದ ಹತ್ತನೇ ತರಗತಿಯವರೆಗೂ ಬಳ್ಳಾರಿ ಯ ಡ್ರೀಮ್ ವರ್ಲ್ಡ್ ಶಾಲೆಯಲ್ಲಿ ಓದಿದೆ. ಆ ಶಾಲೆಯ ಮೊದಲನೇ ಬ್ಯಾಚ್ ವಿದ್ಯಾರ್ಥಿನಿ ಎಂಬ ಹೆಮ್ಮೆ ನನಗೆ. ನಂದಿ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದೆ. ನಿಮ್ಮ ನೆಚ್ಚಿನ ಶಿಕ್ಷಕರು ಅಥವಾ ಸ್ಫೂರ್ತಿ ನೀಡಿದವರು ಯಾರು? ನನ್ನ ಪ್ರತಿಭೆಯನ್ನು ಗುರುತಿಸಿ […]

ಅಜ್ಜಂದಿರಿಂದ ಪ್ರೇರಣೆ ಹುಬ್ಬಳ್ಳಿಯ ರಾಹುಲ ಸಂಕನೂರ

ಸಂದರ್ಶನ: ಶ್ರೀನಿವಾಸ ಶಾಸ್ತ್ರೀ

ಅಜ್ಜಂದಿರಿಂದ ಪ್ರೇರಣೆ ಹುಬ್ಬಳ್ಳಿಯ ರಾಹುಲ ಸಂಕನೂರ
ಸಂದರ್ಶನ: ಶ್ರೀನಿವಾಸ ಶಾಸ್ತ್ರೀ

ಕೇಂದ್ರ ಲೋಕಸೇವಾ ಆಯೋಗದ 2018ನೇ ಸಾಲಿನ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಹಾಗೂ ದೇಶಕ್ಕೆ 17ನೇ ಸ್ಥಾನ ಪಡೆದ ಹುಬ್ಬಳ್ಳಿಯ ರಾಹುಲ ಸಂಕನೂರ ಅವರೊಂದಿಗಿನ ಮಾತುಕತೆ. ನಿಮ್ಮ ಬಾಲ್ಯ ಹಾಗೂ ವಿದ್ಯಾಭ್ಯಾಸದ ಪರಿಚಯ ಮಾಡಿಕೊಡಿ. ಸಂಕನೂರ ಪರಿವಾರದ ಮೂಲ ಗದಗ ಜಿಲ್ಲೆಯ ರೋಣ ತಾಲೂಕು. ನಮ್ಮದು ಬಹಳ ದೊಡ್ಡ ಕುಟುಂಬ. ತಂದೆಯವರು ಸರಕಾರಿ ಕೆಲಸದಲ್ಲಿದ್ದರು. ನನ್ನ ಬಾಲ್ಯದ ವಿದ್ಯಾಭ್ಯಾಸ ಬೆಳಗಾವಿಯ ಖಾನಾಪುರದಲ್ಲಿ ಕನ್ನಡ ಮಾಧ್ಯಮದಲ್ಲಾಗಿದೆ. ನಂತರ ಮೈಸೂರಿನ ರಾಮಕೃಷ್ಣ ಆಶ್ರಮದ ವಿದ್ಯಾಮಂದಿರ ಶಾಲೆಯಲ್ಲಿ ಹೈಸ್ಕೂಲ್‍ನಿಂದ ಪಿಯುಸಿವರೆಗೆ ಮುಂದುವರೆಯಿತು. ಸಿ.ಇ.ಟಿ.ಯಲ್ಲಿ […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
-ಪುರುಷೋತ್ತಮ ಆಲದಹಳ್ಳಿ

ನಾಟರ್ ಡಾಮ್ ಬೆಂಕಿ ದುರಂತ ಪ್ಯಾರಿಸ್ ನಗರದ ಕೇಂದ್ರಭಾಗದಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ ‘ನಾಟರ್ ಡಾಮ್’ ಚರ್ಚ್‍ನ ಬಹುಭಾಗ ಬೆಂಕಿಗೆ ಆಹುತಿಯಾಗಿದೆ. 12ನೇ ಶತಮಾನದಲ್ಲಿ ಕಟ್ಟಲಾಗಿದ್ದ ಈ ಐತಿಹಾಸಿಕ ‘ಯುನೆಸ್ಕೋ’ ವಿಶ್ವ ಪರಂಪರೆಯ ಸ್ಥಾವರದ ಛಾವಣಿ, ಮೆಟ್ಟಿಲುಗಳು ಮತ್ತು ಒಳಭಾಗದ ಪ್ರದೇಶ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಸುಟ್ಟು ಕರಕಲಾಗಿದೆ. ಏಪ್ರಿಲ್ 15ರಂದು ನಡೆದ ಈ ಬೆಂಕಿ ದುರಂತವು ತಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಹೆಮ್ಮೆ ಪಡುವ ಫ್ರೆಂಚ್‍ ಜನರ ಮನ ಕಲಕಿದೆ. ನಾಟರ್ ಡಾಮ್ ನಲ್ಲಿ […]

ಅಭಿವೃದ್ಧಿಯ ವಿರೋಧಾಭಾಸ

-ಡಾ.ಎ.ರವೀಂದ್ರ.

ಅಭಿವೃದ್ಧಿಯ ವಿರೋಧಾಭಾಸ
-ಡಾ.ಎ.ರವೀಂದ್ರ.

ಡಾ.ಎ.ರವೀಂದ್ರ ಅವರ ‘ಗವರ್ನಿಂಗ್ ಅ್ಯನ್ ಇಂಡಿಯನ್ ಸ್ಟೇಟ್‍ ಕರ್ನಾಟಕ ಇನ್ ಫೋಕಸ್’ ಕೃತಿಯಿಂದ ಆಯ್ದ ‘ದಿ ಡೆವಲೆಪ್‍ಮೆಂಟ್ ಪ್ಯಾರಾಡಾಕ್ಸ್’ ಸಂಗ್ರಹಾನುವಾದ. ರಾಜ್ಯಶಾಸ್ತ್ರಜ್ಞ ಸಂದೀಪ್ ದೇಸಾಯಿ ಅವರು ಕೃತಿಯ ಬೆನ್ನುಡಿಯಲ್ಲಿ ಹೇಳಿದಂತೆ: ಈ ಪುಸ್ತಕದ ಮೂಲ ಉದ್ದೇಶ ಭಾರತದ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಹೇಗೆ ಆಡಳಿತ ನಡೆಸಲ್ಪಡುತ್ತದೆ ಎಂಬುದನ್ನು ಪರಿಶೀಲಿಸುವುದಾಗಿದೆ. ಬೃಹತ್ತಾದ ಮತ್ತು ವೈವಿಧ್ಯದಿಂದ ಕೂಡಿದ ನಮ್ಮ ದೇಶದಲ್ಲಿ ಪ್ರತಿಯೊಂದು ರಾಜ್ಯವೂ ವಿಶಿಷ್ಟವಾಗಿರುತ್ತದೆ. ಹಾಗಾಗಿ ತನ್ನದೇ ಆದ ಭಾಷೆ, ಸಂಸ್ಕೃತಿ, ಪರಂಪರೆ, ಆರ್ಥಿಕಾಭಿವೃದ್ಧಿಯ ಸ್ಥಾನ ಹೊಂದಿರುವ ರಾಜ್ಯಗಳನ್ನು ಪ್ರತ್ಯೇಕವಾಗಿಯೇ […]

ಮಲೆಗಳಲ್ಲಿ ಮದುಮಗಳು ವಿಮರ್ಶೆಯ ಅವಸರ ಸಾವಧಾನದ ಬೆನ್ನೇರಬೇಕು!

-ಎನ್.ಬೋರಲಿಂಗಯ್ಯ.

‘ಸಮಾಜಮುಖಿ’ ಏಪ್ರಿಲ್ ಸಂಚಿಕೆಯಲ್ಲಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತು ತುಮಕೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ನಿತ್ಯಾನಂದ ಬಿ.ಶೆಟ್ಟಿ ಅವರು ಬರೆದ ‘ಕಾದಂಬರಿಯಲ್ಲಿ ಕಾಡು: ಓದಲು ತೊಡಗಿದವನ ಪಾಡು’ ಲೇಖನ ಪ್ರಕಟವಾಗಿತ್ತು. ಈ ಲೇಖನಕ್ಕೆ ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಎನ್.ಬೋರಲಿಂಗಯ್ಯ ಅವರ ಪ್ರತಿಕ್ರಿಯೆ ಇಲ್ಲಿದೆ. ಕುವೆಂಪು ಅವರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯನ್ನು ಕುರಿತು ಸಾಕಷ್ಟು ಅಧ್ಯಯನ ಚರ್ಚೆ ನಡೆದಿದೆ, ನಡೆಯುತ್ತಿದೆ, ನಡೆಯುತ್ತಿರುತ್ತದೆ. ಅವರು ಬದುಕಿರುವ ಕಾಲದಲ್ಲಿಯೇ ಸ್ವತಃ ಅವರೇ ತಕ್ಕ ಮಟ್ಟಿಗಾದರೂ […]

ದಿ ವರ್ಡಿಕ್ಟ್ ಚುನಾವಣೆ ವ್ಯವಸ್ಥೆಗೆ ಹಿಡಿದ ಕನ್ನಡಿ

-ಪದ್ಮರಾಜ ದಂಡಾವತಿ.

ಪ್ರಣಯ್ ರಾಯ್ ಅವರು 80 ರ ದಶಕದಷ್ಟು ಹಿಂದಿನಿಂದ, ಭಾರತದ ಚುನಾವಣಾ ಅಂಕಿ ಅಂಶಗಳ ವಿಶ್ಲೇಷಣೆಗೆ ಅಗ್ರಶ್ರೇಣಿಯ ಹೆಸರು ಎನಿಸಿದವರು. ಈಗಿನ ಅಬ್ಬರದ ಟೀವಿ ಪತ್ರಿಕೋದ್ಯಮದ ನಡುವೆ ಮೆಲುದನಿಯ, ಸ್ವತಂತ್ರ ಮತ್ತು ಹರಿತ ಪತ್ರಿಕೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ ಎಂದು ತೋರಿಸಿ ಕೊಟ್ಟವರು. ಈಗ ತುಂಬಾ ಜನಪ್ರಿಯವಾಗಿರುವ ಆದರೆ, ಅಷ್ಟೇನು ನಿಜವಲ್ಲ ಎಂದು ಜನರಿಗೆ ಅನಿಸುತ್ತಿರುವ, ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಅವರೇ ಹರಿಕಾರರು. ದೇಶದ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರಾದ ರಾಯ್, ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿ. ಚುನಾವಣಾ ಸಮಯದಲ್ಲಿ ಪ್ರಣಯ್ […]

ಬದುಕುವುದು ಹೇಗೆ?

-ರಂಗನಾಥ ಕಂಟನಕುಂಟೆ.

ಇಂದು ಅಂತರಂಗದ ಇಲ್ಲವೇ ಬಹಿರಂಗದ ಯಾವುದೇ ಬಗೆಯ ಕೌಶಲಗಳನ್ನು ಕಲಿಸಿಕೊಡುವ ದುಸ್ಥಿತಿ ಏಕೆ ಸೃಶ್ಟಿಯಾಗಿದೆ? ಇತರೆ ಜೀವಜಾತಿಗಳಿಗೆ ಯಾರು ಬದುಕುವ ಈ ಕಲೆಯನ್ನು ಕಲಿಸಿಕೊಡುತ್ತಾರೆ? ಬದುಕು ‘ಅತ್ಯುತ್ತಮ’ವಾದುದು. ಮಾನವರು ಬದುಕುವುದು ಕಲಿಯಬೇಕಷ್ಟೆ. ಆದರೆ ಇಂದು ಇದನ್ನು ಕಲಿಸಿಕೊಡುವುದು ಒಂದು ಉದ್ಯಮವಾಗಿಬಿಟ್ಟಿದೆ. ‘ಬದುಕುವುದನ್ನು ಕಲಿಯಿರಿ’, ‘ವ್ಯಕ್ತಿತ್ವ ವಿಕಸನ’, ‘ಜೀವನ ಕೌಶಲಗಳು’ ಮುಂತಾದ ಹೆಸರುಗಳಲ್ಲಿ ಸಾವಿರಾರು ಪುಸ್ತಕಗಳು ಪ್ರತಿ ವರುಶ ಪ್ರಕಟವಾಗುತ್ತವೆ. ಕಲಿಸಿಕೊಡಲು ಅನೇಕ ಶ್ರೀಶ್ರೀಗಳು ಹುಟ್ಟಿಕೊಂಡಿದ್ದಾರೆ. ಕಂಪನಿಗಳು, ವೃತ್ತಿಪರ ತರಬೇತುದಾರರು ಹುಟ್ಟಿಕೊಂಡು ಸಾವಿರಾರು ಶಿಬಿರಗಳನ್ನು ನಡೆಸುತ್ತಾರೆ. ಇದಕ್ಕಾಗಿ ಸಾವಿರಾರು […]

ಹೊಸ ಪುಸ್ತಕ

ಕಲ್ಲೆದೆಯ ಮೇಲೆ ಕೂತ ಹಕ್ಕಿ ಕಾದಂಬಿನಿ ಪುಟ: 160, ಬೆಲೆ: ರೂ.140 ಪ್ರಕಾಶಕರು: ಮೇಘಮಾಲಾ ಪ್ರಕಾಶನ, ಡಿ ‘ಮೆಲ್ಲೊ’ಸ್‍ ನೆಸ್ಟ್, ಯಡೇಹಳ್ಳಿ, ಆನಂದಪುರಂ-577412, ಶಿವಮೊಗ್ಗಜಿಲ್ಲೆ .ದೂ: 9591575019 ಇದೊಂದು ಕವನ ಸಂಕಲನ. ಕವಯತ್ರಿ ಕಾದಂಬಿನಿ ಅವರೇ ಒಂದೆಡೆ ಹೇಳಿಕೊಂಡಂತೆ ಬದುಕಿನ ಒಂದು ಹಂತದಲ್ಲಿ ಅನುಭವಿಸಿದ ನೋವು ಅವರನ್ನು ಕಾವ್ಯ ರಚನೆಗೆ ಪ್ರೇರೇಪಿಸಿತು. ಹಾಗಾಗಿ ಈ ಕವನ ಸಂಕಲನದಲ್ಲಿನ ಕವಿತೆಗಳಲ್ಲೂ ಜೀವನದ ನೋವು-ನಲಿವುಗಳು ಅಭಿವ್ಯಕ್ತವಾಗಿವೆ. ಪ್ರೀತಿ ಮತ್ತು ನಿಸರ್ಗಮುಖಿ ಕವಿತೆಗಳೂ ಇಲ್ಲಿವೆ. ಫೆಮಿನಿಸ್ಟ್‍ ಮ್ಯಾನಿಫೆಸ್ಟೊ ಕನ್ನಡಕ್ಕೆ: ಕಾವ್ಯಶ್ರೀ.ಎಚ್ ಪುಟ:64, […]

ಜೈಮಿನಿ ಭಾರತದ ಸೀತೆ

-ಪದ್ಮಶ್ರೀ ಕಂಪ್ಲಿ.

ಜೈಮಿನಿ ಭಾರತದ ಸೀತೆ
-ಪದ್ಮಶ್ರೀ ಕಂಪ್ಲಿ.

ಸೀತೆ ನಿಜಕ್ಕೂ ಹೆಣ್ಣೊಬ್ಬಳ ಆಂತರಿಕ ಶಕ್ತಿಯ ಪ್ರತೀಕವಾಗಿ ಕಾಣುತ್ತಾಳೆ. ಅಷ್ಟು ಗಂಡುಗಳ ಮಧ್ಯೆ ತನ್ನನ್ನು ತಾನು ಯಾವ ಹಿಂಜರಿಕೆಯಿಲ್ಲದೆ ಸಾಬೀತು ಪಡಿಸುತ್ತಾಳೆ. ಸೀತೆಯಿಂದಲೂ ದೂರವಿದ್ದ ರಾಮನನ್ನು ಅವಳೆಂದೂ ಶಂಕಿಸುವುದಿಲ್ಲ. ಮಧ್ಯಕಾಲಿನ ಕನ್ನಡದ ಶಿಷ್ಟ ಕಾವ್ಯ ಪರಂಪರೆಯಲ್ಲಿ ಕುಮಾರವ್ಯಾಸ ಭಾರತದಂತೆ ಪ್ರಸಿದ್ಧವಾದ ಕೃತಿ ಲಕ್ಷ್ಮೀಶನ ‘ಜೈಮಿನಿ ಭಾರತ’. ಈ ಕಾವ್ಯವು ಮೂವತ್ನಾಲ್ಕು ಸಂಧಿಗಳಲ್ಲಿ ನಿರೂಪಿತಗೊಂಡಿದೆ. ಜೈಮಿನಿ ಮುನಿಯು ಜನಮೇಜಯನಿಗೆ ಹೇಳಿದ ಮಹಾಭಾರತದ ಕಥೆಯಿದು. ಈ ಕಾವ್ಯದಲ್ಲಿ ಸಂದರ್ಭೊಚಿತವಾಗಿ ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಬಳಸಿದ್ದಾನೆ ಕವಿ ಲಕ್ಷ್ಮೀಶ. ಈ ಕಾವ್ಯದ […]

ಸಂಸ್ಕೃತಿಕ ಪರಂಪರೆಯ ಊರು

-ಎಂ.ಎಂ.ಶಿವಪ್ರಕಾಶ್.

ಸಂಸ್ಕೃತಿಕ ಪರಂಪರೆಯ ಊರು
-ಎಂ.ಎಂ.ಶಿವಪ್ರಕಾಶ್.

ಊರ ಮುಂದೆ ಒಂದು ಬಾವಿ, ಬದಿಯಲ್ಲೇ ನೂರಾರು ವರ್ಷಗಳ ಹಳೆಯ ದೊಡ್ಡ ಅರಳಿಮರ. ಇದರ ಕೆಳಗೆ ಯಾರಿಗಾದರೂ ಜ್ಞಾನೋದಯ ಆಗಿದ್ದನ್ನು ಯಾರೂ ಕಂಡಿಲ್ಲ. ಆದರೆ ಮರದ ಕೆಳಗಿನ ಬಾವಿಯಲ್ಲಿ ಹಲವಾರು ಜನರ ಬದುಕು ಅಂತ್ಯವಾಗಿದ್ದು ಗೊತ್ತು. ಜಾತ್ರೆಗೆಂದು ನಮ್ಮೂರಿಗೆ ಹೋಗಿದ್ದೆ. ಊರು ಹೊಕ್ಕೊಡನೆ ನಮ್ಮೂರು ಹೌದೋ, ಅಲ್ಲವೋ ಎಂದೆನಿಸಿತು; ರಸ್ತೆ ಅಗಲೀಕರಣಕ್ಕಾಗಿ ಮನೆ-ಮಠ-ಮರಗಳನ್ನು ಒಡೆದು ಹಾಕಿದ್ದರು. ಅಳಿದುಳಿದ ಮನೆಗಳ ಅವಶೇಷಗಳನ್ನು ನೋಡಿದಾಗ, ನಮ್ಮೂರಿನ ಸಾಂಸ್ಕೃತಿಕ ಹೊಟ್ಟೆಯನ್ನೇ ಸೀಳಿದಂತೆ ಭಾಸವಾಯಿತು. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಹಡಗಲಿ ನನ್ನೂರು. […]

ಹೆದರಿ ಸಾಯೋರು

-ಗುರುಪ್ರಸಾದ ಕುರ್ತಕೋಟಿ.

ಹೆದರಿ ಸಾಯೋರು
-ಗುರುಪ್ರಸಾದ ಕುರ್ತಕೋಟಿ.

ಉತ್ತರ ಕರ್ನಾಟಕದ ಕಡೆ, ಯಾವನಾದರೂ ಯಾವುದೋ ವಿಷಯಕ್ಕೆ ಹೆದರಿದ ಅಂದ್ರೆ ಸಾಮಾನ್ಯವಾಗಿ ಅವನನ್ನು ಗದರಿಸುವ ಪರಿ ಎಂದರೆ `ಯಾಕ್ ಹೆದರಿ ಸಾಯ್ತಿ?’ ಅಂತ. ಮೊದಲೇ ಕಂಗಾಲಾದವನನ್ನು ಹೀಗೆ ಬೈದರೆ ಅವನ ಪರಿಸ್ಥಿತಿ ಏನಾಗಬೇಡ! ಈ ಬೈಗಳು ಒಂದು ತರಹ ಧೈರ್ಯವನ್ನು ತುಂಬೋ ಪ್ರಯತ್ನ ಕೂಡ ಹೌದು. `ಕೂಲ್ ಡೌನ್ ಬ್ರೋ’ ಅಂದಂಗೆ! ಹೆದರಿಕೆ ಯಾವುದ್ಯಾವುದಕ್ಕೆ ಅಥವಾ ಯಾವ್ಯಾವಾಗ ಬರುತ್ತದೆ ಅನ್ನುವುದು ಆಯಾ ಪರಿಸ್ಥಿತಿಗೆ ಸಂಬಧಿಸಿದ್ದು. ಆದರೆ ಕೆಲವರು, ನಾನು ಯಾರಿಗೂ ಹೆದರೋದೇ ಇಲ್ಲ ಅಂತ ಹೇಳ್ತಿರ್ತಾರೆ. ಅಂಥವರಲ್ಲೂ […]

ನನ್ನ ಹೊಟ್ಟೆಯ ಕತೆ

-ಸಹನಾ ಕಾಂತಬೈಲು.

ನನ್ನ ತೋಟ, ಮನೆಕೆಲಸಕ್ಕೆ ಬರುವ ಹೆಂಗಸರು ಯಾವ ಡಯಟನ್ನೂ ಮಾಡುವುದಿಲ್ಲ. ನಾನು ಕೊಟ್ಟ ಸಿಹಿತಿನಸು, ಎಣ್ಣೆತಿಂಡಿ, ರಾಶಿಅನ್ನ ಎಲ್ಲವನ್ನೂ ಚೂರೂ ಬಿಡದೆ ಪ್ರಸಾದವೆಂಬಂತೆ ತಿನ್ನುತ್ತಾರೆ. ಆದರೂ ಅವರ ಹೊಟ್ಟೆ ಚಪ್ಪಟೆ. ಇದು ಹೇಗೆ ಸಾಧ್ಯ? ಎಲ್ಲರೂ ನನ್ನನ್ನು ಸುಂದರಿ ಎಂದು ಯಾವ ಅಳತೆಮಾಪನ ಇಟ್ಟು ಹೇಳುತ್ತಾರೋ ಗೊತ್ತಿಲ್ಲ. ಏಕೆಂದರೆ ನನ್ನ ಹೊಟ್ಟೆಯನ್ನು ಅಲ್ಲಲ್ಲ ಹೊಟ್ಟೆಯ ಗಾತ್ರವನ್ನು ನೋಡುವಾಗ ನನಗೇ ನಾಚಿಕೆಯಾಗುತ್ತದೆ. ಅದುವರೆಗೂ ಬೆನ್ನಿಗೆ ಅಂಟಿಕೊಡಿದ್ದ ಹೊಟ್ಟೆ ಮದುವೆಯಾಗಿ ಮಕ್ಕಳಾದ ಮೇಲೆ ಅದ್ಹೇಗೆ ಬಲೂನು ಅಡಗಿಸಿಟ್ಟುಕೊಂಡಂತೆ ಉಬ್ಬಿತು ಎಂದು […]

ಲಗೋರಿ ಎಂಬ ಲವ್ಲಿ ಗೇಮ್

-ಕೆ.ವಿ.ಪರಮೇಶ್.

ಲಗೋರಿ ಎಂಬ ಲವ್ಲಿ ಗೇಮ್
-ಕೆ.ವಿ.ಪರಮೇಶ್.

ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟ ‘ಲಗೋರಿ’. ಈ ಹೆಸರು ಪುಟಾಣಿಗಳಲ್ಲಷ್ಟೇ ಅಲ್ಲ, ಯುವಕರು ಹಾಗೂ ಹಿರಿಯರಲ್ಲೂ ಉತ್ಸಾಹದ ಚಿಲುಮೆ ಮೂಡಿಸುವಂತಹದ್ದು. ಜನಪದ ಅಥವಾ ಸಾಂಪ್ರದಾಯಿಕ ಕ್ರೀಡೆಗಳು ಮನರಂಜನೆಯೊಂದಿಗೆ, ದೈಹಿಕ ಕಸರತ್ತು ಮತ್ತು ಒಗ್ಗಟ್ಟನ್ನು ಕಾಪಾಡುವ ಮೂಲ ಉದ್ದೇಶ ಹೊಂದಿವೆ ಎನ್ನುವುದು ಅನೇಕ ಸಂದರ್ಭಗಳಲ್ಲಿ ಇತಿಹಾಸಕಾರರಿಂದಲೇ ಉಲ್ಲೇಖಿಸಲ್ಪಟ್ಟಿವೆ. ಈ ಆಟಗಳಿಗೆ ಸರಳವಾಗಿ ಎಲ್ಲೆಡೆ ಲಭ್ಯವಾಗುವ ಕ್ರೀಡಾ ಸಾಮಗ್ರಿಗಳನ್ನು ಬಳಸುವುದು ಮತ್ತೊಂದು ಧನಾತ್ಮಕ ಅಂಶ. ಇಂತಹ ಅಪರೂಪದ ಹಾಗೂ ಅಷ್ಟೇ ಉಲ್ಲಾಸಕರ ಆಟ ‘ಲಗೋರಿ’. ಈ ಹೆಸರು ಪುಟಾಣಿಗಳಲ್ಲಷ್ಟೇ […]