ಅಧಿಕಾರಿಗಳು ಹೀಗೇಕೆ?

ಅಧಿಕಾರಿಗಳು ಹೀಗೇಕೆ?

ಅವರೊಬ್ಬ ನಿವೃತ್ತ ಐಎಎಸ್ ಅಧಿಕಾರಿ; ಬರೆವಣಿಗೆಯಲ್ಲಿ ಅಷ್ಟಿಷ್ಟು ತೊಡಗಿಸಿಕೊಂಡವರು. ಒಂದು ಅನುವಾದಿತ ಲೇಖನವನ್ನು ಸಮಾಜಮುಖಿಗೆ ಪ್ರಕಟಣೆಗಾಗಿ ಕಳಿಸಿದರು. ಅದೇ ವಿಷಯದ ಲೇಖನವೊಂದು ಹಿಂದಿನ ಸಂಚಿಕೆಯಲ್ಲಿಯೇ ಪ್ರಕಟವಾಗಿದ್ದರಿಂದ ಅವರ ಲೇಖನವನ್ನು ಪ್ರಕಟಿಸಲಾಗದೆಂದು ವಿನಯದಿಂದ ತಿಳಿಸಿದೆ. ಆ ವ್ಯಕ್ತಿ ಎಷ್ಟು ವಿಚಲಿತರಾದರೆಂದರೆ ಕೂಡಲೇ ನನಗೆ ಸಂದೇಶ ರವಾನಿಸಿದರು: “ನಾನು ಆರಂಭದಿಂದಲೂ ನಿಮ್ಮ ಪತ್ರಿಕೆಯ ಜೊತೆಗಿದ್ದೆ; ಆದರೆ ಈಗ ಬೇರ್ಪಡುವ ಕಾಲ ಬಂದಿದೆ, ಇನ್ನುಮೇಲೆ ನನಗೆ ಪತ್ರಿಕೆ ಕಳುಹಿಸಬೇಡಿ, ಚಂದಾಹಣ ಹಿಂದಿರುಗಿಸಿ”. ನಾನೂ ತಡಮಾಡಲಿಲ್ಲ, “ಸಮಾಜಮುಖಿ ಒಂದು ಪತ್ರಿಕೆಯಾಗಿ ಈವರೆಗೆ ತನ್ನ […]

ಬಳ್ಳಾರಿ ಜಿಲ್ಲೆಯ ಮಾನವ-ಕರಡಿ ಸಂಘರ್ಷ

-ಡಾ.ಸಮದ್ ಕೊಟ್ಟೂರು

ಬಳ್ಳಾರಿ ಜಿಲ್ಲೆಯ ಮಾನವ-ಕರಡಿ ಸಂಘರ್ಷ
-ಡಾ.ಸಮದ್ ಕೊಟ್ಟೂರು

-ಡಾ.ಸಮದ್ ಕೊಟ್ಟೂರು ಮುಸ್ಸಂಜೆ ವೇಳೆ ಕಾಡಿನಿಂದ ಹೊರಬರುವ ಕರಡಿಯ ದಾರಿಯಲ್ಲಿ ಮನುಷ್ಯರು ಅಡ್ಡಬಂದರೆ ಅದಕ್ಕೆ ಎರಡೇ ಮಾರ್ಗಗಳು. ಒಂದೋ ತಪ್ಪಿಸಿಕೊಂಡು ಓಡುವುದು, ಎರಡನೇ ಮಾರ್ಗ ದಾಳಿ! ದಖನ್ ಪ್ರಸ್ಥಭೂಮಿಯ ಪ್ರಮುಖ ಲಕ್ಷಣವಾದ ಕಲ್ಲು ಬಂಡೆಗಳ ಬೆಟ್ಟಗುಡ್ಡಗಳು ಹಾಗೂ ಕುರುಚಲು ಕಾಡು ವೈವಿಧ್ಯಮಯವಾದ ಜೀವಜಾಲವನ್ನು ವಿಕಸಿಸಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಿಂದ ಬೆಂಗಳೂರಿನ ಬಳಿಯ ರಾಮನಗರದವರೆಗಿನ ಈ ಕಲ್ಲು ಬಂಡೆಗಳ ಪ್ರದೇಶವು ಕರಡಿಗಳಿಗೆ ಅತ್ಯಂತ ಸೂಕ್ತ ಆವಾಸವನ್ನೊದಗಿಸಿದೆ. ಇಡೀ ದಿನ ಕಲ್ಲುಬಂಡೆಗಳ ಗುಹೆಯೊಳಗೆ ನಿದ್ರಿಸಿ, ಸಂಜೆ ವೇಳೆ […]

ಕಾಡಿನಲ್ಲಿ ಚಿರತೆಯೇ..? ಅಥವಾ ಚಿರತೆಯಿದ್ದಲ್ಲಿ ಕಾಡೇ..?

-ಮೋಹನದಾಸ್

ಕಾಡಿನಲ್ಲಿ ಚಿರತೆಯೇ..?  ಅಥವಾ ಚಿರತೆಯಿದ್ದಲ್ಲಿ ಕಾಡೇ..?
-ಮೋಹನದಾಸ್

-ಮೋಹನದಾಸ್ ಚಿರತೆಗಳ ಉಳಿವಿಗೆ ನೈಸರ್ಗಿಕ ಆವಾಸಸ್ಥಾನ ಮತ್ತು ದೊಡ್ಡ ಬಲಿ ಪ್ರಾಣಿಗಳ ಇರುವಿಕೆ ಬಹು ಅವಶ್ಯಕ: ಭಾರತದಲ್ಲಿ ಚಿರತೆಗಳ ಬಗ್ಗೆ ನಡೆದ ಅತೀ ದೊಡ್ಡ ಸಮೀಕ್ಷೆಯ ಫಲಿತಾಂಶ. ಕಾಡುಗಳು ಮತ್ತು ಕಲ್ಲುಬಂಡೆಗಳಿರುವ ನೈಸರ್ಗಿಕ ಆವಾಸಸ್ಥಾನ, ಮತ್ತು ದೊಡ್ಡ ಬಲಿ ಪ್ರಾಣಿಗಳು (೨೦ ಕೆ.ಜಿಗಿಂತ ಹೆಚ್ಚಿರುವ, ಗೊರಸುಳ್ಳ ಪ್ರಾಣಿಗಳು) ಚಿರತೆಗಳ ಉಳಿವಿಗೆ ಬಹು ಅವಶ್ಯಕವೆಂದು ಹೊಸ ಅಧ್ಯಯನವೊಂದು ನಿರೂಪಿಸುತ್ತದೆ. ದಟ್ಟ ಜನವಸತಿ ಪ್ರದೇಶಗಳಲ್ಲಿ ಕೂಡ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜೀವಿಸುತ್ತವೆ ಎಂಬುದು ಸಾಮಾನ್ಯವಾಗಿರುವ ನಂಬಿಕೆ. ಆದರೆ ಅಂತಾರಾಷ್ಟ್ರೀಯ ವೈಜ್ಞಾನಿಕ […]

ಆನೆ ಬಂದವು ‘ದಾರಿ’ಬಿಡಿ!

-ರಾಘವೇಂದ್ರ ಬೆಟ್ಟಕೊಪ್ಪv

ಆನೆ ಬಂದವು ‘ದಾರಿ’ಬಿಡಿ!
-ರಾಘವೇಂದ್ರ ಬೆಟ್ಟಕೊಪ್ಪv

-ರಾಘವೇಂದ್ರ ಬೆಟ್ಟಕೊಪ್ಪ ಆನೆ ನಡೆದದ್ದೇ ದಾರಿ’ ಎಂಬ ಗಾದೆ ಮಾತೊಂದಿದೆ. ಆನೆ ನಡೆದಲ್ಲಿ ದಾರಿ ಆಗುತ್ತದೆ ಎಂಬುದು ಅದರ ಅರ್ಥ. ಆದರೆ, ಇಲ್ಲಿ ಆನೆ ನಡೆದ ದಾರಿಯನ್ನು ಸಂರಕ್ಷಿಸಲು ಸ್ವತಃ ಅರಣ್ಯ ಇಲಾಖೆ ಜವಾಬ್ದಾರಿ ಹೊತ್ತಿದೆ. ಆನೆ ದಾರಿ ಉಳಿಸಿಕೊಳ್ಳದೇ ಹೋದರೆ ಭವಿಷ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ! ಉತ್ತರ ಕನ್ನಡ ಜಿಲ್ಲೆಯ ಆನೆಗಳು ಇನ್ನೇನು ಭತ್ತದ ಫೈರು ಬರುವ ವೇಳೆಗೆ ಹಾಲುಭತ್ತ ತಿನ್ನಲು ಗದ್ದೆಗೆ ದಾಂಗುಡಿ ಇಡುತ್ತವೆ. ಕಾಡಿನಲ್ಲಿ ಆಹಾರದ ಕೊರತೆ ಆದಾಗ ತೋಟಗಳಿಗೂ ನುಗ್ಗಿ […]

ಸಂಘರ್ಷದ ಜೊತೆಗೆ ಸಂಧಾನವೂ ಸಾಧ್ಯ!

ಧೀ

ಸಂಘರ್ಷದ ಜೊತೆಗೆ ಸಂಧಾನವೂ ಸಾಧ್ಯ!
ಧೀ

ಧೀ ಜಗತ್ತಿನಾದ್ಯಂತ ನಡೆದಿರುವ ಸಮಾಜಶಾಸ್ತ್ರೀಯ ಅಧ್ಯಯನಗಳು ಮಾನವ ಮತ್ತು ವನ್ಯಜೀವಿಗಳು ಒಂದೇ ಭೌಗೋಳಿಕ ಸ್ಥಳ ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡು ಬಂದಿರುವುದನ್ನೂ, ಪರಸ್ಪರರ ಇರುವಿಕೆಯನ್ನು ಒಪ್ಪಿಕೊಳ್ಳುತ್ತಲೇ ಪರಸ್ಪರ ಸಂಧಾನ ನಡೆಸುತ್ತಿರುವುದನ್ನೂ ಗುರುತಿಸುತ್ತಾ ಬಂದಿವೆ. ವನ್ಯಜೀವಿ-ಮಾನವರ ನಡುವಿನ ಸಂಬಂಧ ಪ್ರಾಚೀನವಾದದ್ದು. ಪ್ರತಿಯೊಂದು ಜೀವಿಯ ಜೊತೆಗೂ ಮನುಷ್ಯ ಅನಾದಿಕಾಲದಿಂದಲೂ ವಿಭಿನ್ನ ರೀತಿಯ ಸಂಬಂಧಗಳನ್ನು ಕಟ್ಟಿಕೊಳ್ಳುತ್ತಾ ಬಂದಿದ್ದಾನೆ. ಈ ಸಂಬಂಧದ ಕೊಂಡಿಗಳನ್ನು ಕಡೆಗಣಿಸಿ ಅದರ ಒಂದು ಆಯಾಮವಾದ ‘ಸಂಘರ್ಷ’ ಎಂಬ ನಕಾರಾತ್ಮಕವಾದ ಅಂಶವನ್ನು ಮುಂದಿಟ್ಟುಕೊಂಡು ಚರ್ಚೆಗೆ ತೊಡಗುವುದು ಏಕಮುಖಿಯಾದ ವಿಧಾನವಾಗಿರುತ್ತದೆ. ಆದ್ದರಿಂದ ಇದನ್ನು […]

ಕೋಕೋ ಚಾಕಲೇಟ್: ದೊರೆಸ್ವಾಮಿ ಅವರ ಮಾಹಿತಿ ನಿಜವಲ್ಲ!

-ಸಹನಾ ಕಾಂತಬೈಲು

ಕೋಕೋ ಚಾಕಲೇಟ್:  ದೊರೆಸ್ವಾಮಿ ಅವರ ಮಾಹಿತಿ ನಿಜವಲ್ಲ!
-ಸಹನಾ ಕಾಂತಬೈಲು

-ಸಹನಾ ಕಾಂತಬೈಲು ಕ್ಯಾಡ್‌ಬರಿ ಕಂಪೆನಿಯಿಂದ ವಂಚಿತರಾದ ರೈತರು ಕೋಕೋ ಬೆಳೆಯುವುದನ್ನೇ ಕೈಬಿಟ್ಟರು ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಎಚ್.ಎಸ್.ದೊರೆಸ್ವಾಮಿ ಅವರು ಯಾವ ಆಧಾರದಿಂದ ಇದನ್ನು ಬರೆದರೋ ಪ್ರತಿಬಿಂಬ ವಿಭಾಗದಲ್ಲಿನ ಎಚ್.ಎಸ್.ದೊರೆಸ್ವಾಮಿ ಅವರ ‘ಮಾರಕ ಜಾಗತೀಕರಣ’ ಬರಹ ಗಮನ ಸೆಳೆಯಿತು. ಅವರು ಜಾಗತೀಕರಣ ದೇಶಕ್ಕೆ ಹೇಗೆ ಮಾರಕ ಎಂಬುದಕ್ಕೆ ಉದಾಹರಣೆ ಕೊಡುತ್ತಾ ಒಂದು ಕಡೆ ಹೀಗೆ ಬರೆದಿದ್ದಾರೆ- ‘ಚಾಕಲೇಟ್ ತಯಾರು ಮಾಡುವ ಕ್ಯಾಡ್‌ಬರಿ ಕಂಪೆನಿ ಕರ್ನಾಟಕಕ್ಕೆ ಬಂತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೋಕೋ ಬೆಳೆಯಲು ಆರ್ಥಿಕ […]

‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’: ಸಂಯಮದ ಸಮೀಕ್ಷೆ ಬೇಕಿತ್ತು

-ಪ್ರೊ.ಶಿವರಾಮಯ್ಯ

‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’:  ಸಂಯಮದ ಸಮೀಕ್ಷೆ ಬೇಕಿತ್ತು
-ಪ್ರೊ.ಶಿವರಾಮಯ್ಯ

-ಪ್ರೊ.ಶಿವರಾಮಯ್ಯ ಪ್ರಸ್ತುತ ಬರಹದಲ್ಲಿ ಶ್ರೀಧರರು ಎತ್ತುತ್ತಿರುವ ಪ್ರಶ್ನೆ ಅಸಂಬದ್ಧವೂ ಅತಾರ್ಕಿಕವೂ ಲಘುತರವೂ ಆಗಿದ್ದು ಇವರು ಕಾವ್ಯದ ಅಂತರಂಗಕ್ಕೆ ಪ್ರವೇಶಿಸಿದಂತೆಯೇ ಕಂಡುಬರುವುದಿಲ್ಲ. ಶ್ರೀಧರ ಆರ್.ವಿ ಅವರು ಕಳೆದ ಸಂಚಿಕೆಯ ಹಳಗನ್ನಡ ಕಾಲಂನಲ್ಲಿ ‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’ ಎಂಬ ಲೇಖನವನ್ನು ಬರೆದಿರುತ್ತಾರೆ. ಪಂಪನ ಒಂದು ಪ್ರಸಿದ್ಧ ಪದ್ಯ ‘ಇದರೊಳ್ ಶ್ವೇತಾತ ಪತ್ರ? ಸ್ಥಗಿತ – (ಪಂಪಭಾರತ ೧೨-೧೫೬) ಎಂಬುದು. ಇನ್ನೂ ಸಂಶೋಧನಾ ವಿದ್ಯಾರ್ಥಿಯಾಗಿರುವ ಶ್ರೀಧರರು ಈ ಪದ್ಯವನ್ನು ಆಧುನಿಕ ಸ್ತ್ರೀವಾದಿ ಪರಿಕಲ್ಪನೆಗೆ ಒಗ್ಗಿಸಿ ಬಗ್ಗಿಸಿ ನೋಡುವ […]

ಅನಿಸಿಕೆಗಳು

ವಿಶ್ವವಿದ್ಯಾಲಯದ ಕೆಲಸ ಕೋವಿಡ್ ಬಗ್ಗೆ ಇಷ್ಟೊಂದು ವ್ಯವಸ್ಥಿತವಾದ ಲೇಖನ ಸರಣಿ ಕನ್ನಡದಲ್ಲಿ ನಿಮ್ಮದೇ ಮೊದಲು. ಒಂದು ವಿ.ವಿ. ಮಾಡಬೇಕಾದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಹೆಮ್ಮೆಯಿದೆ! -ಡಾ.ಕಿರಣ್ ವಿ.ಎಸ್., ಬೆಂಗಳೂರು.   ಆಕರ್ಷಕ ಕ್ಲಿಕ್ ಅಕ್ಟೋಬರ್ ಸಂಚಿಕೆಯ ‘ನನ್ನ ಕ್ಲಿಕ್’ ಅಂಕಣದಲ್ಲಿ ಪ್ರಕಟವಾದ ಛಾಯಾಚಿತ್ರಗಳು ಆಕರ್ಷಕವಾಗಿವೆ.  ಮೃಗ ಪಕ್ಷಿಗಳು ಜೀವ ತಳೆದು ಕಣ್ಮುಂದೆ ಬಂದಂತೆ ಭಾಸವಾಯಿತು. ಇಂತಹ ನೇತ್ರಾನಂದಕರ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ಛಾಯಾಗ್ರಾಹಕ ದಿನೇಶ್ ಅಲ್ಲಮಪ್ರಭು ಅವರಿಗೆ ಅಭಿನಂದನೆಗಳು. -ಮಂಜುನಾಥ ಡಿ.ಎಸ್., ಬೆಂಗಳೂರು.   ಶಿರಸಿ ಕಾಲೇಜುಗಳಿಗೆ […]

ಜಾತಿಗಳಿಗೆ ಜೋತುಬಿದ್ದ ಮೂರೂ ರಾಜಕೀಯ ಪಕ್ಷಗಳು!

-ನೀರಕಲ್ಲು ಶಿವಕುಮಾರ್

ಜಾತಿಗಳಿಗೆ ಜೋತುಬಿದ್ದ  ಮೂರೂ ರಾಜಕೀಯ ಪಕ್ಷಗಳು!
-ನೀರಕಲ್ಲು ಶಿವಕುಮಾರ್

-ನೀರಕಲ್ಲು ಶಿವಕುಮಾರ್ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಲ್ಲಿ ‘ಮನೆಯೊಂದು ಮೂರು ಬಾಗಿಲು’ ಎಂಬAತಹ ಪರಿಸ್ಥಿತಿ. ರಾಜ್ಯದ ಪ್ರಬಲ ಅಹಿಂದ, ಒಕ್ಕಲಿಗ, ಲಿಂಗಾಯತ ಸಮುದಾಯಗಳ ರಾಜಕೀಯ ಚಲನೆಯಲ್ಲಿ ಮಹತ್ವದ ಬದಲಾವಣೆ ಹತ್ತಿರವಾಗುತ್ತಿರುವ ಸಂಕೇತಗಳು ಗೋಚರಿಸುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲಗಾಮು ಹಾಕಿರುವ ಬಿಜೆಪಿ ಹೈಕಮಾಂಡ್ ಬಿ.ಎಲ್.ಸಂತೋಷ್ ಪಟ್ಟಾಭಿಷೇಕಕ್ಕೆ ವೇದಿಕೆ ಸಜ್ಜುಗೊಳಿಸುವ ಕಾರ್ಯವನ್ನು ವೇಗವಾಗಿ ಮಾಡುತ್ತಿದೆ. ಕೊರೊನಾ ಕಂಟಕ ನಿವಾರಣೆ ಬಳಿಕ ಯಡಿಯೂರಪ್ಪ ಅವರನ್ನು ಗೌರವಪೂರ್ವಕವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಬೀಳ್ಕೊಡುವ ಯೋಜನೆ ಸಿದ್ಧವಾಗಿದೆ. ಹುದ್ದೆ ಬಿಡಲು ಒಪ್ಪದೆ ಪ್ರತಿರೋಧ […]

ಕನ್ನಡ ಸಾಹಿತ್ಯ ಪರಿಷತ್ತಿಗೆ ಕಾಯಕಲ್ಪದ ನಿರೀಕ್ಷೆ

-ಲಕ್ಷ್ಮಣ ಕೊಡಸೆ

ಕನ್ನಡ ಸಾಹಿತ್ಯ ಪರಿಷತ್ತಿಗೆ  ಕಾಯಕಲ್ಪದ ನಿರೀಕ್ಷೆ
-ಲಕ್ಷ್ಮಣ ಕೊಡಸೆ

-ಲಕ್ಷ್ಮಣ ಕೊಡಸೆ ಪರಿಷತ್ತಿನ ಅಧ್ಯಕ್ಷರಾಗಿ ಬಂದವರೆಲ್ಲರೂ ತಮ್ಮ ತಮ್ಮ ಕರ‍್ಯಸೂಚಿಯಂತೆ ಬೇಕಾದವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ನೀಡುವುದಕ್ಕೆ ಮತ್ತು ವಿವಿಧ ದತ್ತಿಗಳ ಪ್ರಶಸ್ತಿ ಪುರಸ್ಕಾರಗಳನ್ನು ವಿತರಿಸುವುದಕ್ಕೆ ಸೀಮಿತರಾದ ಕಾರಣ ಪರಿಷತ್ತಿನ ಮೂಲ ಆಶಯ ನೇಪಥ್ಯಕ್ಕೆ ಸರಿದು ದಶಕಗಳೇ ಆಗಿವೆ. 1915ರ ಮೇ 5ರಂದು ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಆರಂಭದ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಮೊದಲ ಐವತ್ತು ವರ್ಷಗಳ ಕಾಲ ಪರಿಷತ್ತಿನ ಚಟುವಟಿಕೆಗಳು ನಾಡಿನ ಸಾಂಸ್ಕøತಿಕ ಅಸ್ಮಿತೆಯನ್ನು ಬಲಪಡಿಸುವುದರತ್ತ ಕೇಂದ್ರೀಕರಣವಾಗಿದ್ದುದು […]

ಸೋಂಕು ಸಮಯದಲ್ಲಿ ಬೇಕು ಸನ್ನದ್ಧ ಪಡೆ!

-ಡಾ.ಕೆ.ಎಸ್.ಪವಿತ್ರ

ಸೋಂಕು ಸಮಯದಲ್ಲಿ  ಬೇಕು ಸನ್ನದ್ಧ ಪಡೆ!
-ಡಾ.ಕೆ.ಎಸ್.ಪವಿತ್ರ

-ಡಾ.ಕೆ.ಎಸ್.ಪವಿತ್ರ `ಕೊರೋನಾ’ ದಂತಹ ಸೋಂಕಿನ ಸಂದರ್ಭದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ, ಕೈ ತೊಳೆದುಕೊಳ್ಳುವ ಕಾರ್ಯಗಳಿಗೆ ನಾವು ಸಲಹೆ ನೀಡುತ್ತೇವಷ್ಟೆ. ಆದರೆ ಮನಸ್ಸಿನ `ಭಯ’ವನ್ನು ನಿಭಾಯಿಸುವ ಬಗ್ಗೆ? ನಿಧಾನವಾಗಿ ಕೊರೋನಾ ಆತಂಕಕ್ಕೆ ಜಗತ್ತು ಹೊಂದಿಕೊಳ್ಳುತ್ತಿದೆ. ಕೊರೋನಾ ನಮಗೆ ಬರಬಹುದೇನೋ ಎಂಬ ಆತಂಕದ ಜೊತೆಗೇ, ಕೊರೋನಾ ಸೋಂಕು ಬಂದವರಲ್ಲಿಯೂ ಪ್ರತಿರೋಧಕ ಕಾಯಗಳು (ಆ್ಯಂಟಿಬಾಡಿಗಳು) ಉತ್ಪತ್ತಿಯಾಗದಿರುವುದು ಆತಂಕ ಮತ್ತಷ್ಟು ಹೆಚ್ಚಿಸಿದೆ. ಅಂದರೆ ಲಸಿಕೆ ಬಂತು ಎಂದರೂ ಕೊರೋನಾದಂತಹ ಸೋಂಕಿನಿಂದ ತಪ್ಪಿಸಿಕೊಳ್ಳುವುದು ಖಂಡಿತವಲ್ಲ ಎಂಬುದು ಗೊತ್ತಾಗುತ್ತಿದೆ. ಈ ಅನುಭವ ವೈದ್ಯಕೀಯ […]

ಒಂದು ಕನ್ನಡ ಶಾಲೆಯ ಕತೆ ಹಲವು ಸಾಧ್ಯತೆಗಳ ದೀವಿಗೆ!

-ವೀರಣ್ಣ ಮಡಿವಾಳರ

ಒಂದು ಕನ್ನಡ ಶಾಲೆಯ ಕತೆ ಹಲವು ಸಾಧ್ಯತೆಗಳ ದೀವಿಗೆ!
-ವೀರಣ್ಣ ಮಡಿವಾಳರ

-ವೀರಣ್ಣ ಮಡಿವಾಳರ ಒಬ್ಬ ಶಿಕ್ಷಕನ ಮನಸು ಮತ್ತು ಕನಸು ಬೆರೆತರೆ ಒಂದು ಸರ್ಕಾರಿ ಶಾಲೆ ಹೇಗೆ ಅರಳಬಹುದು, ಮಕ್ಕಳು ನಳನಳಿಸಬಹುದು, ನೆರವು ಹರಿದುಬರಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಜೀವಂತ ನಿದರ್ಶನ. ಸರ್ಕಾರಿ ಶಾಲೆಯನ್ನು ಮಾದರಿಯಾಗಿ ರೂಪಿಸಿದ ಶಿಕ್ಷಕರೇ ಸ್ವತಃ ತಮ್ಮ ಅನುಭವಗಾಥೆ ನಿರೂಪಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ಪ್ರಯೋಗ ಹಲವು ಶಿಕ್ಷಕರಿಗೆ ಪ್ರೇರಣೆಯಗಲಿ ಎಂಬುದು ಸಮಾಜಮುಖಿಯ ಆಶಯ. ಕಣ್ಣಿರುವುದು ಕನಸಿಗೋ ಕಣ್ಣೀರಿಗೋ ಎಂಬ ಅನುಮಾನವೇ ಹಾಸುಹೊಕ್ಕಾಗಿದ್ದ ದಿನಗಳವು. ಓದು, ತಿರುಗಾಟ ಶಿಬಿರ ಕಮ್ಮಟಗಳ ಒಡನಾಟಕ್ಕೆ ಸಿಕ್ಕಮೇಲೆ […]

ಬಾಬ್ರಿ ಮಸೀದಿ ಧ್ವಂಸ ನ್ಯಾಯಾಲಯದ ತೀರ್ಪಿನ ಸುತ್ತಮುತ್ತ…

-ಡಾ.ವೆಂಕಟಾಚಲ ಹೆಗಡೆ

ಬಾಬ್ರಿ ಮಸೀದಿ ಧ್ವಂಸ  ನ್ಯಾಯಾಲಯದ ತೀರ್ಪಿನ ಸುತ್ತಮುತ್ತ…
-ಡಾ.ವೆಂಕಟಾಚಲ ಹೆಗಡೆ

-ಡಾ.ವೆಂಕಟಾಚಲ ಹೆಗಡೆ ಬಾಬ್ರಿ ಮಸೀದಿ ನೆಲಸಮದ ಘಟನೆಯು ‘ಸ್ವಯಂಪ್ರೇರಿತ’ ವಾದದ್ದು ಮತ್ತು ಅದಕ್ಕೆ ಸಮಾಜವಿರೋಧಿ ಶಕ್ತಿಗಳೆ ಕಾರಣವೆಂಬ ವಾಖ್ಯಾನವನ್ನು ಲಖ್ನೋ ಸಿಬಿಐ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮುಂದಿಟ್ಟಿದೆ! ಸಾಮಾನ್ಯವಾಗಿ ಇತಿಹಾಸ ಮತ್ತು ಚರಿತ್ರೆಗಳ ಸತ್ಯಾಸತ್ಯತೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನ್ಯಾಯಾಂಗ, ಅದರಲ್ಲೂ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನ ಮುಖ್ಯ ಅಂಶಗಳನ್ನು ರೂಪಿಸುವುದಿಲ್ಲ. ಅದರ ನಿಶ್ಚಯಗಳ ಎಲ್ಲ ನೆಲೆಗಳು ಪಕ್ಕಾ ಕಾನೂನಿನ ತಳಹದಿಯಲ್ಲೆ ರೂಪಗೊಳ್ಳುವುದು ಸಹಜವಾದ ಪ್ರಕ್ರಿಯೆ. ಯಾಕೆಂದರೆ ಕಾನೂನಿನ್ವಯ ದೇಶದ ಮತ್ತು ಜನಸಮುದಾಯದ ಎಲ್ಲ ವಿವಾದಗಳನ್ನು ಬಗೆಹರಿಸುವುದು ನ್ಯಾಯಾಂಗದ ಮೇಲೆ […]

ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು

-ಹನುಮೇಶ್ ಗುಂಡೂರು

ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು
-ಹನುಮೇಶ್ ಗುಂಡೂರು

-ಹನುಮೇಶ್ ಗುಂಡೂರು ಮೀಸಲಾತಿ ಹುಟ್ಟಿಗೆ ಕಾರಣವಾದ ಅಸ್ಪøಶ್ಯ ವರ್ಗ ಈಗ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ ವಿಸ್ತರಣೆಯಾಗಿದೆ; ಬುಟ್ಟಿಯಲ್ಲಿನ ಹಣ್ಣುಗಳು ಹಸಿದ ದುರ್ಬಲರಿಗೆ ಸಿಗದೆ ತಾಕತ್ತಿದ್ದವರ ಪಾಲಾಗಬಾರದು ಎಂದು ತೀರ್ಪು ನೀಡಿದೆ ಸುಪ್ರೀಂ ಕೋರ್ಟು. ಕರ್ನಾಟಕದಲ್ಲಿ ಸದ್ಯ ಜೀವ ಉಳಿಸಿಕೊಳ್ಳಲು ಹೆಣಗಾಡುವÀ ಕೊರೋನಾದ ಕರಾಳ ದೃಶ್ಯಗಳಾಚೆ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಬೇಕು ಎಂಬ ಅರ್ಥದಲ್ಲಿ ಮೀಸಲಾತಿ ಚರ್ಚೆಗಳು ಮುನ್ನಲೆಗೆ ಬಂದಿವೆ. ನಾಯಕರು ಶೇ.7.5 ಮೀಸಲಿಗೆ ವಾಲ್ಮೀಕಿ […]

ಸತ್ತಂತಿಹರನು ಬಡಿದೆಚ್ಚರಿಸು: ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕøಷ್ಟತೆ ತರುವುದು ಹೇಗೆ?

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿನ ಪಿಹೆಚ್‍ಡಿ ಪ್ರಬಂಧಗಳನ್ನು ಯಾವುದೇ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳು ಉಪಯುಕ್ತವೆಂದು ಉದ್ಧರಿಸಿದ್ದನ್ನು ಅಥವಾ ಬಳಸಿದ್ದನ್ನು ನೀವು ಕಂಡಿದ್ದೀರಾ..? ಈ ‘ಸಂಶೋಧಿತ’ ಪ್ರಬಂಧಗಳನ್ನು ಯಾವುದೇ ಯೋಜನೆ, ನೀತಿ ರಚನೆ ಅಥವಾ ಕಾರ್ಯಕ್ರಮಗಳಿಗೆ ಆಧಾರವಾಗಿ ಉಪಯೋಗಿಸಿದ್ದನ್ನು ನೀವು ಕೇಳಿದ್ದೀರಾ..? ನಿಮ್ಮ ಉತ್ತರ ‘ಇಲ್ಲ’ವೆನ್ನುವುದು ನಮ್ಮ ಎಣಿಕೆ. ಆದರೆ ‘ಇಲ್ಲ’ ಎನ್ನುವಾಗ ನಿಮಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನಮ್ಮ ವಿವಿಗಳ ಒಳಗೆ ಮತ್ತು ಹೊರಗೆ ಸಂಶೋಧನೆಯಾಗುತ್ತಿರುವ ಬರಹಗಳು ದಶಕಗಳ ಹಿಂದಿನಿಂದಲೇ ತಮ್ಮ ಉಪಯುಕ್ತತೆ, ಸಾಂದರ್ಭಿಕತೆ ಮತ್ತು ಗುಣಮಟ್ಟವನ್ನು ಕಳೆದುಕೊಂಡಿವೆ. ಈಗ ನಮ್ಮ ವಿವಿಗಳು […]

ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ?

-ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ  ಉತ್ಕೃಷ್ಟತೆ ತರುವುದು ಹೇಗೆ?
-ಪೃಥ್ವಿದತ್ತ ಚಂದ್ರಶೋಭಿ

-ಪೃಥ್ವಿದತ್ತ ಚಂದ್ರಶೋಭಿ ಅಧ್ಯಾಪಕ-ಸಂಶೋಧಕರನ್ನು ಸ್ವಾಯತ್ತ ಘಟಕವೆಂದು ಗುರುತಿಸುವ ಪ್ರಜಾಸತ್ತಾತ್ಮಕ ಸಂಸ್ಕೃತಿ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಬೇಕು. ಸ್ವಾಯತ್ತತೆ ಬೇಕಾಗಿರುವುದು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅದರಲ್ಲಿ ಕೆಲಸ ಮಾಡುವ ಅಧ್ಯಾಪಕ-ಸಂಶೋಧಕರಿಗೆ. ರಾಜಕೀಯ ಹಸ್ತಕ್ಷೇಪ ನಿಲ್ಲಬೇಕಿರುವುದು ಕುಲಪತಿಗಳು ಮತ್ತಿತರ ಅಧಿಕಾರವರ್ಗಗಳಿಗೆ ಮಾತ್ರವಲ್ಲ; ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು ಅಧ್ಯಾಪಕ-ಸಂಶೋಧಕರ ಕೆಲಸಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದೂ ನಿಲ್ಲಬೇಕು. ವಿಪರ್ಯಾಸವೊಂದನ್ನು ಗಮನಿಸುವ ಮೂಲಕ ಈ ಬಾರಿಯ ಮುಖ್ಯ ಚರ್ಚೆಯನ್ನು ಪ್ರಾರಂಭಿಸಬಹುದು. ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳನ್ನು ನಡೆಸಲು ಉತ್ಸುಕರಾಗಿರುವವರಿಗೆ 2020ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಂಪನ್ಮೂಲಗಳು ಲಭ್ಯವಿವೆ. ವಿದ್ಯಾರ್ಥಿ ವೇತನಗಳು ದೊರಕುತ್ತವೆ. ವಿಚಾರ […]

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಾದರಿ

-ಕೆ.ವಿ.ನಾರಾಯಣ

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ  ಶೈಕ್ಷಣಿಕ ಮಾದರಿ
-ಕೆ.ವಿ.ನಾರಾಯಣ

-ಕೆ.ವಿ.ನಾರಾಯಣ ಈಗ ಎಲ್ಲವೂ ಇಳಿಜಾರಿನಲ್ಲಿದೆ ಎಂದು ಹೇಳುವಾಗ ಎಲ್ಲವೂ ಏರುಗತಿಯಲ್ಲಿದ್ದ ಹೊತ್ತು ಒಂದಿತ್ತು ಎಂಬ ನಂಬಿಕೆ ಹಲವರಲ್ಲಿ ಇದ್ದಂತಿದೆ. ಒಂದು ಸುವರ್ಣ ಯುಗವಿತ್ತು, ನಾವದನ್ನು ಕಳೆದುಕೊಂಡಿದ್ದೇವೆ; ಮರಳಿ ಅದನ್ನು ಪಡೆಯಬೇಕೆಂಬ ಹಂಬಲ ಎಲ್ಲೆಡೆಯೂ ಇದ್ದಂತಿದೆ. ಹಾಗೆ ಎಲ್ಲ ಸರಿಯಾಗಿದ್ದುದು ಯಾವಾಗ? ನೀವು ಪಟ್ಟಿ ಮಾಡಿರುವ ಕೇಳ್ವಿಗಳೆಲ್ಲ ಒಂದಕ್ಕೊಂದು ನಂಟನ್ನು ಪಡೆದಿವೆಯಾಗಿ ಅವೆಲ್ಲಕ್ಕೂ ಬಿಡಿಬಿಡಿಯಾಗಿ ಹೇಳುವುದರ ಬದಲು ಒಟ್ಟಾರೆಯಾಗಿ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ. ನಿಮ್ಮ ಕೇಳ್ವಿಗಳಲ್ಲಿ ಆತಂಕ, ಹತಾಶೆ, ಹಳಹಳಿಕೆ, ವಿಷಾದ ಇವೆಲ್ಲದರ ನೆರಳು ಕವಿದಿದೆ. ನಮ್ಮ ಸಂದರ್ಭದಲ್ಲಿ […]

ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ

-ಹರೀಶ್ ರಾಮಸ್ವಾಮಿ

ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ
-ಹರೀಶ್ ರಾಮಸ್ವಾಮಿ

-ಹರೀಶ್ ರಾಮಸ್ವಾಮಿ ಇಂದಿನ ವಿಶ್ವವಿದ್ಯಾಲಯಗಳು ಸಮಾಜದ ಬೆಳವಣಿಗೆಯ ಅವಶ್ಯಕತೆಗೆ ಹಾಗೂ ರಚನೆಗೆ ಬೇಕಾದ ಜ್ಞಾನದಿಂದ ‘ಡಿ-ಅಂಕ್’ ಆಗಿವೆ ಮತ್ತು ‘ಉದ್ಯಮ ಕೇಂದ್ರಿತ’ ಚಿಂತನೆಯ ಕ್ರಮದಿಂದ ಪ್ರೇರೇಪಿತವಾಗಿವೆ. ಪ್ರಸ್ತುತ ಸಮಾಜದಲ್ಲಿ ವಿಶ್ವವಿದ್ಯಾಲಯಗಳು ಸಾಮಾಜಿಕ ಜೀವನದ ವಾಸ್ತವಿಕತೆಯಿಂದ ಹೊರಗಿದ್ದು ‘ಪರಕೀಯ’ ಪ್ರಪಂಚದಲ್ಲಿ ಇದ್ದಂತೆ ಇವೆ. ಇದಕ್ಕೆ ಕಾರಣ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ ಬಂಡವಾಳಶಾಹಿ ನಿರ್ದೇಶಿತ, ಮಾರುಕಟ್ಟೆ ಆಧಾರಿತ ವ್ಯವಸ್ಥೆಗಳು. ಕೆಲವೊಬ್ಬರು ಈ ಚರ್ಚೆಯನ್ನು ಅಲ್ಲಗಳೆದು ನವ ಉದಾರವಾದದ ನಂತರ ವಿಶ್ವವಿದ್ಯಾಲಯಗಳು ವಾಸ್ತವಿಕತೆಯೆಡೆಗೆ ನಡೆಯುತ್ತಿವೆ. ಹಾಗಾಗಿ ಈ ಬಂಡವಾಳಶಾಹಿ ಹಾಗೂ […]

ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ

-ಕಮಲಾಕರ ಕಡವೆ

ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ
-ಕಮಲಾಕರ ಕಡವೆ

-ಕಮಲಾಕರ ಕಡವೆ ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅದಕ್ಕೆ ಪರಿಹಾರಗಳು ವ್ಯಾಪಕವಾಗಿ ಚರ್ಚಿತ ವಿಷಯಗಳು. ಪ್ರಶ್ನೆಗಳಿವೆ, ಉತ್ತರಗಳೂ ಇವೆ, ಆದರೆ ಸಮಸ್ಯೆ ಇದ್ದ ಹಾಗೇ ಇದೆ. ಇದರ ಅರ್ಥವೇನೆಂದರೆ, ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿಗಿಂತ, ಪರಿಹರಿಸದೇ ಜೀವಂತ ಇರಿಸುವ ಇಚ್ಛಾಶಕ್ತಿ ಪ್ರಬಲವಾಗಿದೆ. ನಮ್ಮ ಸಮಾಜದಲ್ಲಿ -ಅಂದರೆ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿ ಕೂಡ- ಜ್ಞಾನಸೃಷ್ಟಿಯ ಪ್ರಶ್ನೆಯನ್ನು ಪದೇಪದೆ ಎತ್ತಲಾಗಿದೆ. ಈ ಪ್ರಶ್ನೆ ಉದ್ಭವಿಸಿರುವ ಸಂದರ್ಭ, ಸಾಂಸ್ಥಿಕ ಚೌಕಟ್ಟು, ಮತ್ತು ಪ್ರಶ್ನೆಯ ವಿಸ್ತಾರ ಪ್ರತಿ ಬಾರಿ ವಿಭಿನ್ನವಾಗಿದ್ದರೂ ಮೂಲಭೂತವಾಗಿ ನಮ್ಮ ಸಮಾಜದಲ್ಲಿ ಯಾರು, […]

ವಿಶ್ವವಿದ್ಯಾಲಯ ಪರಿಕಲ್ಪನೆಯ ಮರುಸ್ಥಾಪನೆಯೇ ಪರಿಹಾರ

-ಡಾ.ಎನ್.ಎಸ್.ಗುಂಡೂರ

ವಿಶ್ವವಿದ್ಯಾಲಯ ಪರಿಕಲ್ಪನೆಯ ಮರುಸ್ಥಾಪನೆಯೇ ಪರಿಹಾರ
-ಡಾ.ಎನ್.ಎಸ್.ಗುಂಡೂರ

-ಡಾ.ಎನ್.ಎಸ್.ಗುಂಡೂರ ವಿಸ್ಮøತಿಗೆ ಒಳಗಾದ ವಿವಿಯ ಪರಿಕಲ್ಪನೆಯನ್ನು ಹುಡುಕಿಕೊಳ್ಳುವ ಕಾರ್ಯಕ್ರಮ ಒಂದೆಡೆಗಿದ್ದರೆ, ವಿವೇಕ ಕಳೆದುಕೊಂಡಿರುವ ಸಂಶೋಧನಾ ಚಟುವಟಿಕೆಯನ್ನು ಅರ್ಥಪೂರ್ಣಗೊಳಿಸುವ ಜರೂರು ಮತ್ತೊಂದೆಡೆ ಇದೆ. ನಮ್ಮ ಸಂಶೋಧನೆಗಳು ಮತ್ತು ವಿವಿಗಳ ಬೌದ್ಧಿಕ ಬಿಕ್ಕಟ್ಟಿನ ಚರ್ಚೆಯನ್ನು ಭ್ರಷ್ಟ ವ್ಯವಸ್ಥೆ, ಜಾತೀಯತೆ, ಸ್ವಜನಪಕ್ಷಪಾತ, ಬೌದ್ಧಿಕ ಅಸಾಮಥ್ರ್ಯ, ಮೂಲ ಸೌಕರ್ಯಗಳ ಕೊರತೆ, ಯುಜಿಸಿಯ ಅತಾರ್ಕಿಕ ನಿರ್ಧಾರಗಳು, ಸರಕಾರದ ನೀತಿನಿಯಮ, ಸಂಶೋಧನಾರ್ಥಿಗಳ ಆಲಸ್ಯ -ಇತ್ಯಾದಿಗಳನ್ನು ದೂರುವುದರ ಮುಖಾಂತರ ಚರ್ಚಿಸಬಹುದು. ಆದರೆ ಈ ಎಲ್ಲ ಸಮಸೆÀ್ಯಗಳನ್ನು ಬಗೆಹರಿಸಿದರೂ ನಾವು ಉತ್ಕøಷ್ಟವಾದ ಸಂಶೋಧನೆಗಳನ್ನು ಉತ್ಪಾದಿಸುತ್ತೇವೆ ಎನ್ನುವುದು ಅನುಮಾನ. ಆದ್ದರಿಂದ […]