ಕುಸಿದುಬಿದ್ದ ಕಲಿಸುವ ವ್ಯವಸ್ಥೆಯಲ್ಲಿ ಉತ್ಕøಷ್ಟತೆ ಹೇಗೆ ಸಾಧ್ಯ?

-ಎ.ನಾರಾಯಣ

ಕುಸಿದುಬಿದ್ದ ಕಲಿಸುವ ವ್ಯವಸ್ಥೆಯಲ್ಲಿ ಉತ್ಕøಷ್ಟತೆ ಹೇಗೆ ಸಾಧ್ಯ?
-ಎ.ನಾರಾಯಣ

-ಎ.ನಾರಾಯಣ ಮೂಲಭೂತವಾಗಿ ಸಂಶೋಧನೆ ಅಂದರೆ ಏನು ಮತ್ತು ಅದನ್ನು ಹೇಗೆ ನಡೆಸುವುದು ಎಂಬುದನ್ನೇ ಕಲಿಸುವ ವ್ಯವಸ್ಥೆ  ಇಲ್ಲದ ಒಂದು ದೇಶದಲ್ಲಿ ಅದ್ಭುತ ಸಂಶೋಧನೆಗಳಾಗಬೇಕು, ಜಾಗತಿಕ ಗಮನ ಸೆಳೆಯಬೇಕು, ಸಮಾಜಕ್ಕೆ ಪ್ರಯೋಜನಕಾರಿಯಾಗಿರಬೇಕು, ನೊಬೆಲ್ ಪ್ರಶಸ್ತಿ ಗಳಿಸಬೇಕು ಎಂಬ ಗುರಿ ಇಟ್ಟುಕೊಳ್ಳುವುದು ಸಂಪೂರ್ಣ ಹಾಸ್ಯಾಸ್ಪದ! ವಿಶ್ವವಿದ್ಯಾನಿಲಯಗಳಲ್ಲಿ ಈಗಾಗಲೇ ಪಿಹೆಚ್‍ಡಿ ಪಡೆದವರು ಗಂಭೀರ ಸಂಶೋಧನೆಗಳಲ್ಲಿ ತೊಡಗಿರಬೇಕು ಅವರ ಕೈಕೆಳಗೆ ಪಿಹೆಚ್‍ಡಿ ವಿದ್ಯಾರ್ಥಿಗಳು ಸಂಶೋಧನೆ ಮಾಡುವುದು ಹೇಗೆ ಅಂತ ಕಲಿಯಬೇಕು. ಅದ್ಯಾಕೋ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಈ ಸಂಬಂಧ ಮುರಿದುಬಿದ್ದಿದೆ. ಗಂಭೀರ ಸಂಶೋಧನೆಗಳಲ್ಲಿ ತೊಡಗುವ […]

ನೇಮಕಾತಿ-ಬಡ್ತಿಗೆ ಬಂತು ಮಹತ್ವ ಹರಾಜಾಯ್ತು ಪಿ.ಎಚ್.ಡಿ. ಮಾನ!

-ಡಾ.ಸಿ.ಕೆ.ರೇಣುಕಾರ್ಯ

ನೇಮಕಾತಿ-ಬಡ್ತಿಗೆ ಬಂತು ಮಹತ್ವ ಹರಾಜಾಯ್ತು ಪಿ.ಎಚ್.ಡಿ. ಮಾನ!
-ಡಾ.ಸಿ.ಕೆ.ರೇಣುಕಾರ್ಯ

-ಡಾ.ಸಿ.ಕೆ.ರೇಣುಕಾರ್ಯ ವಿಶ್ವವಿದ್ಯಾಲಯಗಳು ತಮ್ಮ ಮೂಲ ಕರ್ತವ್ಯ ಮರೆತು ಎಷ್ಟೋ ಕಾಲವಾಗಿರುವುದರಿಂದ, ಅವುಗಳ ಕಾರ್ಯದ ಒಂದು ಭಾಗವಾದ ಸಂಶೋಧನೆ ಸಹ ತನ್ನ ಮೌಲ್ಯ ಕಳೆದುಕೊಂಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹೀಗಾಗಿಯೇ, ಮೈಸೂರು ವಿವಿಯ ಕುಲಪತಿಗಳೊಬ್ಬರು ಪಿ.ಎಚ್.ಡಿ. ಪ್ರಬಂಧಗಳನ್ನು ಬಚ್ಚಲ ನೀರಿಗೆ ಹೋಲಿಸಿದ್ದಾರೆ! ವಿಶ್ವವಿದ್ಯಾಲಯಗಳಲ್ಲಿನ ಅಧ್ಯಾಪಕರ ನೇಮಕಾತಿ ಮತ್ತು ಬಡ್ತಿ, ಪಿ.ಎಚ್.ಡಿ.ಯೊಡನೆ ಗಂಟು ಹಾಕಿಕೊಂಡಿರುವುದರಿಂದ, ಹೇಗಾದರೂ ಮಾಡಿ ಪಿ.ಎಚ್.ಡಿ. ಸಂಪಾದಿಸಬೇಕೆಂಬ ಮನೋಭಾವ ಸಹಜವಾದದ್ದೇ. ಆದರೆ ಈ ಪಿ.ಎಚ್.ಡಿ. ಪಡೆಯುವುದು ಹೇಗೆ? ಇದರ ಮಾನದಂಡಗಳು ಯಾವುವು ಎನ್ನುವುದನ್ನು ನೋಡಿದಾಗ ಇಡೀ ಪ್ರಕ್ರಿಯೆಯ ಹುಳುಕುಗಳು […]

ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಶೂನ್ಯ ಸಾಧನೆ!

-ಡಾ.ಜ್ಯೋತಿ

ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಶೂನ್ಯ ಸಾಧನೆ!
-ಡಾ.ಜ್ಯೋತಿ

-ಡಾ.ಜ್ಯೋತಿ ನಮ್ಮ ಪಠ್ಯಕ್ರಮ ವಿದ್ಯಾರ್ಥಿಗಳನ್ನು ಹಂತ ಹಂತವಾಗಿ ಸಂಶೋಧನೆಗೆ ಸೆಳೆಯುವುದರಲ್ಲಿ ವಿಫಲವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಉನ್ನತ ಶಿಕ್ಷಣದ ಪಠ್ಯಕ್ರಮಗಳನ್ನು ಮೂರು ಸಂಬಂಧಿತ ಕೊಂಡಿಗಳಂತೆ ಅಣಿಗೊಳಿಸುತ್ತಾರೆ; ಸ್ನಾತಕ ಶಿಕ್ಷಣದ ಪಠ್ಯಕ್ರಮ, ವಿದ್ಯಾರ್ಥಿಯನ್ನು ಸ್ನಾತಕೋತ್ತರ ಮಟ್ಟಕ್ಕೆ ರೆಡಿಯಾಗಿಸುತ್ತದೆ. ಸ್ನಾತಕೋತ್ತರ ವಿದ್ಯಾರ್ಥಿ ಸಂಶೋಧನಾ ಪ್ರವೃತ್ತಿ ಮೈಗೂಡಿಸಿಕೊಂಡು ತನ್ನ ಸಂಶೋಧನಾ ಪ್ರಶ್ನೆಯೊಂದಿಗೆ ಶೋಧಕ್ಕೆ ಸಿದ್ಧನಾಗಿರುತ್ತಾನೆ. ಈ ನಿಟ್ಟಿನಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆ ಬಹಳ ಹಿಂದುಳಿದಿದೆ. ಒಂದು ವಿಷಯವಂತೂ ಸ್ಪಷ್ಟ. ಸಂಶೋಧನೆಯೆನ್ನುವ ಒಂದು ವ್ಯವಸ್ಥಿತ ಅಧ್ಯಯನ, ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವೇನಲ್ಲ. ಕನ್ನಡವೂ ಸೇರಿದಂತೆ, […]

ಹಲವು ವಿಶೇಷಗಳನ್ನು ಹೊತ್ತುಬಂದ 2020ರ ನೊಬೆಲ್ ಪುರಸ್ಕಾರಗಳು

-ಡಾ.ಟಿ.ಎಸ್.ಚನ್ನೇಶ್

ಹಲವು ವಿಶೇಷಗಳನ್ನು ಹೊತ್ತುಬಂದ 2020ರ ನೊಬೆಲ್ ಪುರಸ್ಕಾರಗಳು
-ಡಾ.ಟಿ.ಎಸ್.ಚನ್ನೇಶ್

-ಡಾ.ಟಿ.ಎಸ್.ಚನ್ನೇಶ್ ಆಲ್ಫ್ರೆಡ್ ನೊಬೆಲ್ ಮರಣ ಹೊಂದಿದ ತಿಂಗಳಾದ ಡಿಸೆಂಬರ್‍ನಲ್ಲಿ ಮಾತ್ರವೇ ಸಾಮಾನ್ಯವಾಗಿ ಪ್ರಶಸ್ತಿಯನ್ನು ಕೊಡಲಾಗುವುದು. ಆತ ಜನಿಸಿದ ಅಕ್ಟೋಬರ್ ತಿಂಗಳಲ್ಲಿ ಪ್ರಶಸ್ತಿಗಳು ಪ್ರಕಟಣೆಯಾಗುತ್ತವೆ. ಅಂತಯೇ ಈ ವರ್ಷದ ಬಹುಮಾನಗಳನ್ನು ಅಕ್ಟೋಬರ್ 5ರಿಂದ 12ನೆಯ ದಿನಾಂಕಗಳ ನಡುವೆ ಪ್ರಕಟಿಸಲಾಗಿದೆ. ಅಕ್ಟೋಬರ್ ತಿಂಗಳು ಜಾಗತಿಕವಾಗಿ ಅನೇಕರ ಕಣ್ಣು-ಕಿವಿಗಳು ಸ್ವೀಡನ್ನಿನ ಸ್ಟಾಕ್‍ಹೋಂ ಕಡೆಗೆ ಇರುತ್ತವೆ. ನೊಬೆಲ್ ಸಮಿತಿಯೇ ಇಡೀ ಜಗತ್ತಿನ ಜನಸಮುದಾಯವನ್ನು ವಿಭಜಿಸಿರುವಂತೆ -ನೊಬೆಲ್ ಗಳಿಸಿದವರು ಮತ್ತು ನೊಬೆಲ್ ಗಳಿಸಬೇಕಿರುವವರು- ಎರಡೂ ಪಂಗಡದವರಿಗೂ ಆಸಕ್ತಿಯು ಸಹಜ. ಈ ವರ್ಷದ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
-ಪುರುಷೋತ್ತಮ ಆಲದಹಳ್ಳಿ

ನ್ಯೂಜಿಲ್ಯಾಂಡಿನಲ್ಲಿ ಮತ್ತೆ ಪ್ರಧಾನಿಯಾದ ಜಸಿಂಡ ಅರ್ಡನ್ ದೇಶದ ಪ್ರಧಾನಿಯಾಗಿದ್ದಾಗಲೇ ಮಗುವೊಂದನ್ನು ಹೆತ್ತು ದಾಖಲೆ ಸೃಷ್ಟಿಸಿದ್ದ ನ್ಯೂಜಿಲ್ಯಾಂಡಿನ ಪ್ರಧಾನಿ ಜಸಿಂಡ ಅರ್ಡನ್ (40 ವರ್ಷಗಳು) ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಜಸಿಂಡ ಅವರ ಲೇಬರ್ ಪಕ್ಷವು ಒಟ್ಟು ಚಲಾಯಿಸಿದ ಮತಗಳಲ್ಲಿ ಶೇಕಡಾ 49ಕ್ಕೂ ಹೆಚ್ಚು ಮತಗಳನ್ನು ಪಡೆದು ನ್ಯೂಜಿಲ್ಯಾಂಡಿನ ಸಂಸತ್ತಿನಲ್ಲಿ ಬಹುಮತ ಪಡೆದಿದೆ. ವಿರೋಧಿ ಪಕ್ಷವಾದ ನ್ಯಾಶನಲ್ ಪಕ್ಷವು ಕೇವಲ 27ರಷ್ಟು ಮತ ಪಡೆದು ಹೀನಾಯ ಸೋಲು ಕಂಡಿದೆ. ಐವತ್ತು ಲಕ್ಷ ಜನಸಂಖ್ಯೆಯ ನ್ಯೂಜಿಲ್ಯಾಂಡ್ ದೇಶವು ಪ್ರೊಪೋರ್ಶನೇಟ್ ಪದ್ಧತಿ ಅನುಸರಿಸುತ್ತಿದೆ. ಇದರಂತೆ […]

ಡೀಪ್‍ಫೇಕ್ ಪ್ರಜಾತಂತ್ರ: ಸುಳ್ಳುಸುದ್ದಿ ಸುಳಿಯಲ್ಲಿ ಚುನಾವಣೆ

ಅನುವಾದ: ನಾ ದಿವಾಕರ

ಅನುವಾದ: ನಾ ದಿವಾಕರ ಡೀಪ್‍ಫೇಕ್ ಎನ್ನಲಾಗುವ ತಂತ್ರ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದರೂ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ. ಮೂಲ ಭಾವಚಿತ್ರದಲ್ಲಿರುವ ವ್ಯಕ್ತಿಯ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿಯ ಭಾವಚಿತ್ರವನ್ನು ಅಳವಡಿಸುವ ಮೂಲಕ ನಕಲಿ ಸುದ್ದಿಗಳನ್ನು ಹರಡುವ ಈ ತಂತ್ರಜ್ಞಾನ ಇದೀಗ ಚುನಾವಣಾ ರಾಜಕಾರಣದಲ್ಲೂ ವ್ಯಾಪಕವಾಗಿ ಬಳಸಲಾಗುತ್ತಿದ್ದು ರಾಜಕೀಯ ವೈರಿಗಳ ವಿರುದ್ಧ ಬಳಸುವ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಡೀಪ್‍ಫೇಕ್ ತಂತ್ರಜ್ಞಾನದ ಬಳಕೆ ವಿಶ್ವದಾದ್ಯಂತ ಚುನಾವಣಾ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಹುಶಃ ಪ್ರಜಾಸತ್ತಾತ್ಮಕ ಚುನಾವಣೆಗಳ […]

ಕೋವಿಡ್ ನಂತರ… ಶಿಕ್ಷಣ-ಉದ್ಯೋಗ ಕ್ಷೇತ್ರದಲ್ಲಿ ಹೊಸ ಕ್ರಾಂತಿ!

ಥಾಮಸ್ ಫ್ರೆಡ್‍ಮನ್

ಕೋವಿಡ್ ನಂತರ… ಶಿಕ್ಷಣ-ಉದ್ಯೋಗ ಕ್ಷೇತ್ರದಲ್ಲಿ ಹೊಸ ಕ್ರಾಂತಿ!
ಥಾಮಸ್ ಫ್ರೆಡ್‍ಮನ್

ಥಾಮಸ್ ಫ್ರೆಡ್‍ಮನ್ ಹೊಸ ಸನ್ನಿವೇಶದಲ್ಲಿ ಕೆಲಸಗಳ ವಿಧಾನ, ಕೆಲಸದ ಸ್ಥಳ ಮತ್ತು ಕೆಲಸಗಾರರು ರೂಪಾಂತರಗೊಳ್ಳಬೇಕಾಗುತ್ತದೆ. ಉದ್ಯಮಗಳು ಅಪೇಕ್ಷಿಸುವುದು ಉದ್ಯೋಗಕ್ಕೆ ಅಗತ್ಯವಾದ ಕುಶಲತೆ ಮತ್ತು ನಿರಂತರ ಕಲಿಕೆ. ಇದು ‘ಪದವಿಯಿಂದ ಕುಶಲತೆಯೆಡೆಗಿನ’ ನಡಿಗೆÀ; ಡಿಗ್ರಿ ಇಲ್ಲದವರಿಗೂ ಸಾಫ್ಟ್‍ವೇರ್ ಕಂಪನಿಯಲ್ಲಿ ನೌಕರಿ, ಹೋಟೆಲ್ ಕಾರ್ಮಿಕ ಸೈಬರ್ ರಕ್ಷಣೆ ಮಾಡೋ ತಂತ್ರಜ್ಞ, ಟಿಕೆಟ್ ಕೊಡೋ ಗುಮಾಸ್ತೆ ಡೇಟಾ ಸಲಹಾಗಾರ್ತಿ… ಎಲ್ಲವೂ ಸಾಧ್ಯ! ಅನುವಾದ: ಹನುಮಂತರೆಡ್ಡಿ ಸಿರೂರು ನಿಸರ್ಗದ ಲೀಲೆಗಳು ನಿಗೂಢವಾಗಿರುತ್ತವೆ. ಅದು ಕೋವಿಡ್ ಅನ್ನೋ ಸಾಂಕ್ರಾಮಿಕ ಪಿಡುಗನ್ನ ನಮ್ಮ ಅಂಗಳಕ್ಕೆಸೆದು ನಮ್ಮ […]

ವಿಭಿನ್ನ ಇತಿಹಾಸಕಾರ ಪ್ರೊ.ಷ.ಶೆಟ್ಟರ್

ಪವನಗಂಗಾಧರ

ವಿಭಿನ್ನ ಇತಿಹಾಸಕಾರ ಪ್ರೊ.ಷ.ಶೆಟ್ಟರ್
ಪವನಗಂಗಾಧರ

ವಿಭಿನ್ನ ಇತಿಹಾಸಕಾರ ಮತ್ತು ಬರಹಗಾರರಾದ ಪ್ರೊ.ಷ.ಶೆಟ್ಟರ್‍ರವರಿಗೆ ಶ್ರದ್ಧಾಂಜಲಿ ಅರ್ಪಿಸುವುದೆಂದರೆ ಅವರು ಒಬ್ಬ ಬರಹಗಾರರಾಗಿ ಮತ್ತು ದಕ್ಷಿಣ ಭಾರತದ ಕಲೆಯ ಇತಿಹಾಸ, ಅಭಿಜಾತ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಸಂಶೋಧಕರಾಗಿ ರೂಪುಗೊಂಡ ಬಗೆಯನ್ನು ಪುನರ್‍ರಚಿಸುವುದೆಂದು ನಾವು ನಂಬುತ್ತೇವೆ. ಅವರ ಸಂಶೋಧನಾ ಆಸಕ್ತಿಯು ಚರಿತ್ರೆ, ಪ್ರಾಕ್ತನಶಾಸ್ತ್ರ, ಕಲೆಯ ಇತಿಹಾಸ, ದರ್ಶನ ಶಾಸ್ತ್ರ, ಜೈನ ಜೀವನ ಶೈಲಿ, ಶಾಸನಶಾಸ್ತ್ರ, ಅಭಿಜಾತ ಕನ್ನಡದಂತಹ ವಿವಿಧ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿತ್ತು. ಈಗಾಗಲೇ ಪ್ರಕಟಗೊಂಡ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು ನೂರಕ್ಕೂ ಹೆಚ್ಚು ಸಂಶೋಧನಾ […]

ಡಾ‘ನೀರ ಮೇಲಣ ಗುಳ್ಳೆ’ .ಜಿ.ಎಸ್.ಆಮೂರ ಆತ್ಮಕತೆ

-ಮಾಲತಿ ಪಟ್ಟಣಶೆಟ್ಟಿ

ಡಾ‘ನೀರ ಮೇಲಣ ಗುಳ್ಳೆ’ .ಜಿ.ಎಸ್.ಆಮೂರ ಆತ್ಮಕತೆ
-ಮಾಲತಿ ಪಟ್ಟಣಶೆಟ್ಟಿ

–ಮಾಲತಿ ಪಟ್ಟಣಶೆಟ್ಟಿ ಇತ್ತೀಚೆಗೆ ಅಗಲಿದ ಕನ್ನಡದ ವಿಶಿಷ್ಟ ವಿಮರ್ಶಕ ಡಾ.ಜಿ.ಎಸ್.ಆಮೂರ ಅವರ ಬದುಕು-ಬರಹಗಳ ಮೆಲಕು ಹಾಕಿದ್ದಾರೆ ಧಾರವಾಡದಲ್ಲಿ ಅವರನ್ನು ಹತ್ತಿರದಿಂದ ಗಮನಿಸಿದ ಸಾಹಿತಿ ಮಾಲತಿ ಪಟ್ಟಣಶೆಟ್ಟಿ. ನೀರ ಮೇಲಣ ಗುಳ್ಳೆ ಗ್ರಂಥವನ್ನು ಓದಿ ಮುಗಿಸಿದಾಗ ಅನ್ನಿಸಿತು… ಬೇರೆ ಆತ್ಮಕಥೆಗಳಿಗಿಂತ ಇದೆಷ್ಟು ಭಿನ್ನ! …ಯೋಚಿಸುತ್ತ ಕುಳಿತೆ. ಉಳಿದವುಗಳು ಆತ್ಮ ಸಮರ್ಥನೆ, ಸ್ವಪ್ರಶಂಸೆ, ತಪ್ಪುಗಳನ್ನು ತಿರುಚಿ ಬರೆದ ಹುಸಿಕಥನಗಳಿಂದ ತುಂಬಿರುತ್ತವೆ. ಇದು ಆತ್ಮವಂಚನೆಯಲ್ಲವೆ? ಡಾ.ಆಮೂರರ ಆತ್ಮಕಥೆಯು  ಒಂದು ಹೂ ಅರಳಿದಂತೆ; ಸಹಜ, ಸ್ವಾಭಾವಿಕ ಅಭಿವ್ಯಕ್ತಿ! ಈ ಹೂವಿನಿಂದ ಹೊರಸೂಸುವ ಸುಗಂಧವು […]

ಪುಕ್ಕ ಬಿಚ್ಚದ ನೆನಪಿನ ಹಕ್ಕಿ!

-ಡಾ.ರಿಯಾಜ಼್ ಪಾಷ

ಪುಕ್ಕ ಬಿಚ್ಚದ ನೆನಪಿನ ಹಕ್ಕಿ!
-ಡಾ.ರಿಯಾಜ಼್ ಪಾಷ

-ಡಾ.ರಿಯಾಜ಼್ ಪಾಷ ಒಂದು ದಿನದ ಕ್ರಿಕೆಟ್ ಪಂದ್ಯಾವಳಿಯ “ಹೈಲೈಟ್ಸ್” ನ ಕೆಲವು ತುಣುಕುಗಳನ್ನು ವಾರ್ತೆಗಳಲ್ಲಿ ತೋರಿಸುವಂತೆ, ಲೇಖಕರು ಹಾರಲು ಬಿಟ್ಟ ನೆನಪಿನ ಹಕ್ಕಿಯನ್ನು ಸಣ್ಣಸಣ್ಣ ಅಧ್ಯಾಯಗಳಲ್ಲಿ ಹುಡುಕುತ್ತಾ ಹೋಗಿದ್ದಾರೆ. ಇವರು ಹುಟ್ಟಿನಿಂದ ದಲಿತರಾಗಿದ್ದರೂ, ಬೇರೆ ದಲಿತ ಲೇಖಕರಂತೆ ಹೆಚ್ಚು ಅವಮಾನಗಳನ್ನು ಅನುಭವಿಸಿದ ಯಾತನೆ ಕಾಣುವುದಿಲ್ಲ ಅಥವಾ ಅವುಗಳನ್ನು ಹೇಳಿಕೊಳ್ಳಬೇಕೆಂಬ ಇರಾದೆ ಇಲ್ಲ. ನೆನಪಿನ ಹಕ್ಕಿಯ ಹಾರಲು ಬಿಟ್ಟು ಮೂಡ್ನಾಕೂಡು ಚಿನ್ನಸ್ವಾಮಿ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು ಮೊದಲ ಮುದ್ರಣ: 2020 ಮೂಡ್ನಾಕೂಡು ಚಿನ್ನಸ್ವಾಮಿಯವರ `ನೆನಪಿನ ಹಕ್ಕಿ ಹಾರಲು […]

ಸರ್ಕಾರಿ ಬ್ಯಾಂಕುಗಳು ಮುಳುಗುತ್ತಿವೆಯೇ? ತೇಲುತ್ತಿವೆಯೇ?

-ಪದ್ಮರಾಜ ದಂಡಾವತಿ

ಸರ್ಕಾರಿ ಬ್ಯಾಂಕುಗಳು ಮುಳುಗುತ್ತಿವೆಯೇ? ತೇಲುತ್ತಿವೆಯೇ?
-ಪದ್ಮರಾಜ ದಂಡಾವತಿ

-ಪದ್ಮರಾಜ ದಂಡಾವತಿ ಬೆವರು ಸುರಿಸಿ ಗಳಿಸಿದ “ಒಳ್ಳೆಯ ಹಣ”ದ ಸುರಕ್ಷತೆ ಕುರಿತು ಕಾಳಜಿ ಇರುವ ಯಾರಾದರೂ ಓದಲೇಬೇಕಾದ ಪುಸ್ತಕ “ಬ್ಯಾಡ್ ಮನಿ.” ಬ್ಯಾಡ್ ಮನಿ ಇನ್‍ಸೈಡ್ ಎನ್‍ಪಿಎ ಮೆಸ್ ಅಂಡ್ ಹೌ ಇಟ್ ಥ್ರೆಟನ್ಸ್ ದಿ ಇಂಡಿಯನ್ ಬ್ಯಾಂಕಿಂಗ್ ಸಿಸ್ಟಂ ಲೇ: ವಿವೇಕ್ ಕೌಲ್ ಪ್ರ: ಹಾರ್ಪರ್ ಬಿಜಿನೆಸ್ 2020. ಪುಟಗಳು: 339 ಬೆಲೆ: ರೂ.599 ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಸ್ಥಿತಿಯಲ್ಲಿ ಇದೆಯೇ? ಸುಸ್ತಿ ಸಾಲದ ಮೊತ್ತ ನೂರಾ ಮೂರರ ಜ್ವರದ ಹಾಗೆ ಏರುತ್ತಿರುವಾಗ ಅಲ್ಲಿ ಸಾಮಾನ್ಯ […]

ಹೊಸ ಪುಸ್ತಕ

ವರ್ಜಿನ್ ಮೊಹಿತೊ ಕಥೆಗಳು ಸತೀಶ್ ಚಪ್ಪರಿಕೆ ಪುಟ: 120 ಬೆಲೆ: ರೂ.120 ಪ್ರಥಮ ಮುದ್ರಣ: 2020 ಅಂಕಿತ ಪುಸ್ತಕ, ನಂ. 53, ಶಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004 ಪತ್ರಕರ್ತ ಸತೀಶ್ ಚಪ್ಪರಿಕೆ ಅವರ ಎರಡನೇ ಕಥಾಸಂಕಲನವಿದು. ಒಟ್ಟು ಹತ್ತು ಕಥೆಗಳಿವೆ. ಸೃಜನಶೀಲತೆ ಅವರ ಬರವಣಿಗೆಯಲ್ಲಿ ಎದ್ದು ಕಾಣುವ ಅಂಶ. ವಿಭಿನ್ನತೆ, ಹೊಸತನ, ವರ್ತಮಾನ ಸ್ಪಂದನೆ-ಸAಘರ್ಷ, ಒಳನೋಟ-ಒಲವುಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಯಾವ ಕಥೆಯೂ ಬೇರೆಲ್ಲೂ ಪ್ರಕಟವಾಗಿಲ್ಲ. ಕಥೆಗಾರಿಕೆಯ ಭಾಷೆ, ತಂತ್ರ, ಹೆಣೆದ […]

ಜೀವಸಂಬೋಧನಂ ವಸಂತತಿಲಕೆಯ ಕಥೆ

-ಡಾ.ಚಂದ್ರಕಲಾ ಹೆಚ್.ಆರ್.

ಜೀವಸಂಬೋಧನಂ ವಸಂತತಿಲಕೆಯ ಕಥೆ
-ಡಾ.ಚಂದ್ರಕಲಾ ಹೆಚ್.ಆರ್.

-ಡಾ.ಚಂದ್ರಕಲಾ ಹೆಚ್.ಆರ್. ಇದು ಶಾಸ್ತ್ರಗ್ರಂಥವಾಗಿದ್ದರೂ ಕಾವ್ಯಲಕ್ಷಣಗಳನ್ನು ಪ್ರತಿಧ್ವನಿಸುತ್ತದೆ. ಗಾದೆ, ಉಪಮೆಗಳು, ಒಗಟು ಯಥೇಚ್ಛವಾಗಿವೆ. ಜೈನ ಮತೀಯ ಗ್ರಂಥವಾದರೂ ಪರಮತ ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ, ಕಂದ, ಗದ್ಯ, ರಗಳೆ ರಚನೆಯಲ್ಲಿದೆ. ಗಾದೆಗಳು, ಪಡೆನುಡಿಗಳು ಬೆರೆತ ಕಾವ್ಯಶೈಲಿಯಿದೆ. ಹನ್ನೆರಡನೆಯ ಶತಮಾನವನ್ನು ಸುವರ್ಣ ಕಾಲಘಟ್ಟವೆಂದು ಪರಿಭಾವಿಸುವುದಕ್ಕೆ ಶಿವಶರಣರ ವಚನ ಸಾಹಿತ್ಯವು ಸಾಮಾಜಿಕ ಮತ್ತು ಸಾಂಸ್ಕøತಿಕ ಪಲ್ಲಟಗಳನ್ನು ಕನ್ನಡನಾಡಿನ ಬದುಕಿನಲ್ಲಿ ದಾಖಲಿಸಿದ ಕಾರಣ ಮತ್ತು ಧರ್ಮದ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಬರೆದ ಕಾರಣವೂ ಆಗಿದೆ. ವೀರಶೈವಧರ್ಮ ಜನಸಾಮಾನ್ಯರನ್ನು ಎಲ್ಲಾ ತಾರತಮ್ಯಗಳಿಂದ ಬಿಡುಗಡೆಗೊಳಿಸಲು […]

ಅತ್ತೆ ಅಮ್ಮನಾಗುವ ಅಚ್ಚರಿ!

-ಡಾ.ವಸುಂಧರಾ ಭೂಪತಿ

ಅತ್ತೆ ಅಮ್ಮನಾಗುವ ಅಚ್ಚರಿ!
-ಡಾ.ವಸುಂಧರಾ ಭೂಪತಿ

-ಡಾ.ವಸುಂಧರಾ ಭೂಪತಿ ಜಗತ್ತಿನ ಓಟದ ಜೊತೆಗೆ ನನ್ನ ಅತ್ತೆಯವರ ನಡಿಗೆಯೂ ಇದೆ. ಅವರು ಆಧುನಿಕತೆಗೆ ತೆರೆÀದುಕೊಳ್ಳುವ ಮನೋಭಾವದವರು; ಸ್ತ್ರೀವಾದವನ್ನು ಓದದೆಯೇ ಸ್ತ್ರೀವಾದಿಯಾಗಿರುವವರು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯವರನ್ನು ಓದದಿದ್ದರೂ ಅವರ ವಿಚಾರಗಳನ್ನು ಬದುಕಾಗಿಸಿಕೊಂಡವರು. ಒಂದು ಕುಟುಂಬದಲ್ಲಿ ಅತ್ತೆ ಸೊಸೆ ಅನ್ಯೋನ್ಯವಾಗಿದ್ದರು. ಒಮ್ಮೆ ಮನೆಗೆ ನೆಂಟರು ಬಂದಿರುತ್ತಾರೆ. ಅವರು ಮಾತಾಡ್ತಾ ಅತ್ತೆಗೆ ಸೊಸೆಯ ಬಗ್ಗೆ ಕೇಳ್ತಾರೆ. ಆಗ ಅತ್ತೆ, ‘ಮಗಳು ಸಕ್ಕರೆ ಇದ್ದಂತೆ, ಸೊಸೆ ಉಪ್ಪು ಇದ್ದಂತೆ’ ಎನ್ನುತ್ತಾರೆ. ಸೊಸೆಯ ಕಿವಿಗೆ ಆ ಮಾತು ಬಿದ್ದು ತುಂಬ ದುಃಖವೆನಿಸುತ್ತದೆ, […]

ಓವರ್ ಹೆಡ್ ಟ್ಯಾಂಕು ಓವರ್ ವೇಟ್ ಓನರು!

-ಎಚ್.ಗೋಪಾಲಕೃಷ್ಣ

ಓವರ್ ಹೆಡ್ ಟ್ಯಾಂಕು ಓವರ್ ವೇಟ್ ಓನರು!
-ಎಚ್.ಗೋಪಾಲಕೃಷ್ಣ

-ಎಚ್.ಗೋಪಾಲಕೃಷ್ಣ ಸರ್ವತಂತ್ರ ಸ್ವಾತಂತ್ರ್ಯ ಅನುಭವಿಸಬೇಕು ಅನ್ನುವ ಆಸೆ ಯಾರುಯಾರಿಗೆ ಇದೆಯೋ ಅವರಿಗೆ ನನ್ನ ಪುಕ್ಕಟೆ ಸಲಹೆ ಅಂದರೆ ಓವರ್ ಹೆಡ್ ಟ್ಯಾಂಕು ನೀವೇ ಸ್ವತಃ ಕ್ಲೀನ್ ಮಾಡಿ! ಓವರ್ ಹೆಡ್ ಟ್ಯಾಂಕಿನಲ್ಲಿ ಎಷ್ಟು ನೀರಿದೆ ನೋಡಿ, ನಾಳೆ ನೀರು ಬರೋದು ಅಂತ ಆದೇಶ ಬಂತು. ಆದೇಶ ಯಾರಿಂದ ಬಂತು ಎಂದು ವಿಚಾರಿಸದೇ ಓವರ್ ಹೆಡ್ ಟ್ಯಾಂಕು ತಲಾಷಿಸಲು ಉದ್ಯುಕ್ತನಾದೆ. ಅದಕ್ಕೆ ಮೊದಲು ನಿಮಗೆ ನಮ್ಮ ಮನೆಯ ಟೋಪೋಗ್ರಾಫಿ ವಿವರಿಸಬೇಕು. ಮೊದಲು ನಲವತ್ತು ವರ್ಷ ಹಿಂದೆ ಮನೆಕಟ್ಟಿದಾಗ ಓವರ್ […]

ಬೆಂಗಳೂರಿನ ಹತ್ತು ಸ್ಥಳಗಳ ಕುತೂಹಲಕಾರಿ ಕತೆಗಳು

-ಪ್ರೊ.ಪದ್ಮನಾಭ ರಾವ್

ಬೆಂಗಳೂರಿನ ಹತ್ತು ಸ್ಥಳಗಳ ಕುತೂಹಲಕಾರಿ ಕತೆಗಳು
-ಪ್ರೊ.ಪದ್ಮನಾಭ ರಾವ್

-ಪ್ರೊ.ಪದ್ಮನಾಭ ರಾವ್ ಪ್ರತಿಯೊಂದು ಊರಿಗೂ ತನ್ನದೇ ಆದ ಕುರುಹುಗಳು ಇರುತ್ತವೆ. ಅವು ಆ ಊರಿನ ವ್ಯಕ್ತಿತ್ವದ ಭಾಗವೇ ಆಗಿರುತ್ತವೆ. ಈಗ ಮಹಾನಗರವಾಗಿ ಬೆಳೆದು ನಿಂತಿರುವ ಬೆಂಗಳೂರಿನ ಹಳೆಯ ಗುರುತುಗಳನ್ನು ಹುಡುಕುವ ಪ್ರಯತ್ನ ಇಲ್ಲಿದೆ. ಮಡ್ ಟ್ಯಾಂಕ್  ಈಗ ಕರ್ನಾಟಕ ರಾಜ್ಯ ಹಾಕಿ ಕ್ರೀಡಾಂಗಣ ಮತ್ತು ಅದರ ಪಕ್ಕದ ಕ್ರಿಕೆಟ್ ಪಿಚ್ ಇರುವ ಪ್ರದೇಶವು ಹಿಂದೊಮ್ಮೆ ಅಕ್ಕಿತಿಮ್ಮೇನಹಳ್ಳಿ ಕೆರೆ ಆಗಿತ್ತು. ಅದನ್ನು ನಂತರ ಬ್ರಿಟಿಷ್ ನಿವಾಸಿಗಳು ‘ಮಡ್ ಟ್ಯಾಂಕ್’ (ಮಣ್ಣಿನ ಕೆರೆ) ಎಂದು ಕರೆದರು. ಇದನ್ನು ಅಕ್ಕಿತಿಮ್ಮೇನಹಳ್ಳಿ (ಈಗ […]

ಮಲಯಾಳಂ ಸಿನಿಮಾಗಳ ಯಶಸ್ಸು ಕನ್ನಡ ಚಿತ್ರರಂಗದ ಬಿಕ್ಕಟ್ಟು

-ಯತಿರಾಜ್ ಬ್ಯಾಲಹಳ್ಳಿ

ಮಲಯಾಳಂ ಸಿನಿಮಾಗಳ ಯಶಸ್ಸು ಕನ್ನಡ ಚಿತ್ರರಂಗದ ಬಿಕ್ಕಟ್ಟು
-ಯತಿರಾಜ್ ಬ್ಯಾಲಹಳ್ಳಿ

-ಯತಿರಾಜ್ ಬ್ಯಾಲಹಳ್ಳಿ ಸಿನಿಮಾ ಎಂಬ ಜನಪ್ರಿಯ ಮಾಧ್ಯಮ ದೇಶ, ಭಾಷೆಗಳಾಚೆ ಚಲಿಸುವ ಗುಣವನ್ನು ಮಲಯಾಳಂ ಚಿತ್ರರಂಗ ಅಳವಡಿಸಿಕೊಂಡಿದೆ. ಒಂದು ಕಾಲದಲ್ಲಿ ‘ಎ’ ಸರ್ಟಿಫಿಕೇಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ಈಗ ಬ್ರಿಡ್ಜ್ ಸಿನಿಮಾಗಳನ್ನು ಬೆಳೆಯುವ ಭೂಮಿಯಾಗಿದ್ದು ಹೇಗೆ? “ಮತ್ತೆ ಮತ್ತೆ ನೀವ್ಯಾಕೆ ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳತ್ತ ಬೆಟ್ಟು ತೋರಿಸುತ್ತಾ, ಕನ್ನಡ ಚಿತ್ರರಂಗವನ್ನು ದ್ವಿತೀಯ ದರ್ಜೆಯಲ್ಲಿ ನೋಡುತ್ತೀರಿ? ಕನ್ನಡದಲ್ಲಿ ಪ್ರತಿಭಾವಂತರು ಇಲ್ಲವಾ? ನೀವು ಕನ್ನಡ ವಿರೋಧಿಗಳು” ಎನ್ನುವ ಕನ್ನಡ ಸಿನಿಮಾ ಪ್ರೇಮಿಗಳಿಗೇನೂ ಕೊರತೆ ಇಲ್ಲ. ಕನ್ನಡ ಸಿನಿಮಾಗಳ ಮೇಲಿನ […]

ಕವಿತೆ

ವಿ.ಹರಿನಾಥ ಬಾಬು ಸಿರುಗುಪ್ಪ

ಕವಿತೆ
ವಿ.ಹರಿನಾಥ ಬಾಬು ಸಿರುಗುಪ್ಪ

-ವಿ.ಹರಿನಾಥ ಬಾಬು ಸಿರುಗುಪ್ಪ ಹಾಯ್ಕುಗಳು 1 ಶರಾಬಿನ ಅಂಗಡಿಯಿಂದ ಅವನು ಈಗ ತಾನೆ ಹೊರಬಿದ್ದ ಜೋಲಿ ಹೊಡೆಯುತಿದೆ ರಸ್ತೆ 2 ಅವಳ ನೆನಪಾಗಿ ಕುಡಿದೆ ಎಂದುಸುರಿದ ಅವನು ಪಾಪ ರಸ್ತೆ ಕಣ್ಣೀರಾಯ್ತು 3 ಯಾವ ಹಾದಿ ತುಳಿದರೂ ಅದು ಅವಳ ಮನೆಗೆ ಕರೆದೊಯ್ಯುತ್ತದೆ ಅವಳ ಮನೆಯೀಗ ಪ್ರೇಮ ಸ್ಮಾರಕ! 4 ನಾವಂದು ನಡೆದಾಡಿದ ರಸ್ತೆಗಳು ಇಂದಿಗೂ ಹಾಗೇ ಇವೆ ನಮ್ಮ ನೆನಪು ಯುವ ಪ್ರೇಮಿಗಳ ಎದೆಯಾಳದಲ್ಲಿ 5 ಅವಳ ನೆನಪುಗಳ ನೆರಳು ಸುಡುವ ವಿರಹದ ತಲೆಯ ಕಾಯುತಿವೆ […]