ನವೆಂಬರ್ ಅಂದರೆ…

ನವೆಂಬರ್ ಅಂದರೆ…

ತೀರಾ ಕಟ್ಟುನಿಟ್ಟಾಗಿ ನೋಡುವುದಾದರೆ ನವೆಂಬರ್ ಅಂದರೆ ಪ್ರತೀ ವರ್ಷ ಕ್ಯಾಲೆಂಡರಿನಲ್ಲಿ ತೆರೆದುಕೊಳ್ಳುವ ಒಂದು ತಿಂಗಳು,  ಅಷ್ಠೆ ಆದರೆ ಕರ್ನಾಟಕದ ಮಟ್ಟಿಗೆ ಅದು ಅಷ್ಠೆ ಅಲ್ಲ; ಸರ್ಕಾರಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸುವ ತವಕ, ಹೋರಾಟಗಾರರಿಗೆ ಹಣ ಸಂಗ್ರಹಣೆಯ ತರಾತುರಿ, ನೌಕರರಿಗೆ ರಜೆಯ ಸಂಭ್ರಮ, ಪತ್ರಿಕೆಗಳಿಗೆ ಸಾಂದರ್ಭಿಕ ಲೇಖನ-ಸಂದರ್ಶನ ಹೊಂದಿಸುವ ಹೊಣೆ, ಭಾಷಣಕಾರರಿಗೆ ಬಹುಬೇಡಿಕೆ, ಬಾವುಟ ಮಾರಾಟಗಾರರಿಗೆ ಹೊಟ್ಟೆಯ ಪಾಡು… ಹೀಗೆ ಕನ್ನಡ ರಾಜ್ಯೋತ್ಸವ ಅಂದರೆ, ನವೆಂಬರ್ ಬಂದರೆ ಕನ್ನಡದ ಮನಗಳು ನಾನಾ ನಮೂನೆಗಳಲ್ಲಿ ಗರಿಕೆದರಿ ನರ್ತಿಸುವ ನವಿಲು. ಆದರೆ ಅಬ್ಬರ, ಆಡಂಬರದ […]

ಓದುಗ ಬಂಧುಗಳಲ್ಲಿ ಒಂದು ಬಿನ್ನಹ

ಚಂದ್ರಕಾಂತ ವಡ್ಡು

ಎರಡು ಕನಿಷ್ಟ ಹೆಚ್ಚಿಗೆ ನಿಮ್ಮಿಷ್ಟ ಪ್ರಿಯರೇ, ನಮಸ್ಕಾರ. ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಿಜ ಹೇಳಬೇಕೆಂದರೆ ನಿಮ್ಮನ್ನು ಕೇವಲ ಓದುಗರಾಗಿ ಗುರುತಿಸಲು ಅಥವಾ ಚಂದಾದಾರರೆಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ; ಗ್ರಾಹಕರೆಂದು ಭಾವಿಸಲಂತೂ ಸಾಧ್ಯವೇ ಇಲ್ಲ! ನಿಮ್ಮನ್ನು ಸಮಾಜಮುಖಿ ಕುಟುಂಬದ ಗೌರವಾನ್ವಿತ ಸದಸ್ಯರು ಎಂದು ಪರಿಗಣಿಸುವುದು ನನಗೆ ಹೆಮ್ಮೆಯ ಸಂಗತಿ. ನೀವು ಸಮಾಜಮುಖೀ ಪಯಣದ ಸಹವರ್ತಿಗಳಾಗಿ ಕಳೆದ ಎರಡು ವರ್ಷಗಳಿಂದ ಜೊತೆಗಿದ್ದೀರಿ. ನಮ್ಮ ದಾರಿ, ಗುರಿ, ಗಡಿ, ಗೋಡೆಗಳನ್ನು ಗಮನಿಸಿದ್ದೀರಿ. ನಮ್ಮ ಬಳಗದ ಗಂಭೀರ ಪ್ರಯೋಗ, ಚಟುವಟಿಕೆಗಳತ್ತ ಕುತೂಹಲ […]

ಆನ್‍ಲೈನ್ ಸೇವೆಯಲ್ಲಿ ಆಮೆಗತಿ!

ರವೀಶ್ ಹೆಗಡೆ

ಅಂತೂ ಇಂತೂ ಅನುಮತಿ ಪಡೆದು ಉದ್ದಿಮೆ ಪ್ರಾರಂಭಿಸಿದಲ್ಲಿ ಕೇಂದ್ರ ಸರ್ಕಾರದ ಹೊರಲಾಗದ ತೆರಿಗೆ ಹೊರೆ, ಕರ್ನಾಟಕ ರಾಜ್ಯದ ರೋಗಗ್ರಸ್ತ ಹಣಕಾಸು ಸಂಸ್ಥೆಗಳು, ಕಾರ್ಮಿಕರ ಕೊರತೆಗಳು ಕೈಗಾರಿಕೆ ಬೆಳೆಯಲು ಅವಕಾಶ ನೀಡುತ್ತಿಲ್ಲ. ನಮ್ಮ ರಾಜ್ಯದಲ್ಲಿ ಸರ್ ಎಮ್.ವಿಶ್ವೇಶ್ವರಯ್ಯನವರ ಕಾಲದಲ್ಲಿ ಅನೇಕ ಕೈಗಾರಿಕೆಗಳು, ಬ್ಯಾಂಕ್‍ಗಳು ಸ್ಥಾಪನೆಯಾದವು. ಇತ್ತೀಚಿಗಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೀತಿಯಿಂದಾಗಿ ರಾಜ್ಯದಲ್ಲಿನ ಕೈಗಾರಿಕೆಗಳಿಗೆ ಸುಟ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದ ಎಲ್ಲಾ ವಲಯದ ಕೈಗಾರಿಕೆಗಳು ದುಡಿಯುವ ಬಂಡವಾಳದ ಕೊರತೆ, ವಿದೇಶಿ ಮಾರುಕಟ್ಟೆಯ ಅಹಿತಕರ ಪೈಪೋಟಿ, […]

ಮಹಿಳೆಯರ ಉದ್ಯಮಶೀಲತೆಗೆ ಬೆಂಬಲವೇ ಬೆಳಕು

ಡಿ.ಯಶೋದಾ

ಒಂದು ಕಡೆ ಮನೆಯೊಡತಿ ಹೊರಗೆ ಹೋದರೆ ಮನೆ ನಿರ್ವಹಣೆಗೆ ತೊಂದರೆಯಾಗಬಹುದೇನೋ ಎಂಬ ಸಂಕುಚಿತ ಮನೋಭಾವ. ಮತ್ತೊಂದೆಡೆ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಸಮಸ್ಯೆ. ಈ ಕಾರಣದಿಂದ ಮಹಿಳೆಯರ ಉದ್ಯಮಶೀಲತೆಗೆ ತೊಡಕಾಗಿರುವುದು ನಿಜ. ನಮ್ಮಲ್ಲಿ ಕೆಲವರಿಗೆ ಯಾರಾದರೂ ಮುಂದೆ ಬರುತ್ತಾರೆ ಎಂದರೆ ಅವರ ಕಾಲೆಳೆಯುವ ಸ್ವಭಾವವೇ ಹೆಚ್ಚು. ಎಷ್ಟೋ ಉದ್ಯಮಿಗಳಾಗಿ ರೂಪುಗೊಳ್ಳಬೇಕಾದವರು ಇಂಥ ಚಟುವಟಿಕೆಯಿಂದ ತೀರಾ ಆರಂಭದಲ್ಲೇ ಹಿಂದೆ ಸರಿದುಬಿಟ್ಟಿಧಾರೆ. ಒಂದು ಕಡೆ ಅವರಿಗೆ ತಮ್ಮ ಉದ್ಯಮಕ್ಕೆ ಅಗತ್ಯವಾದ ಸೌಲಭ್ಯಗಳು, ನೈತಿಕ ಬೆಂಬಲ ಇಲ್ಲದೇ ಹೋಗಬಹುದು. ಕೆಲವರಂತು ಯಾರಾದರೂ […]

ಉತ್ತರ ಭಾರತೀಯರ ರಾಜಕೀಯ ಸಂಚು

ಉತ್ತರ ಭಾರತೀಯರ ರಾಜಕೀಯ ಸಂಚು ಸಂಪಾದಕೀಯ ಲೇಖನ ‘ನಿರ್ಗಮನದ ಸಿದ್ಧತೆ’ ಓದಿದೆ. ತುಂಬಾ ಚೆನ್ನಾಗಿತ್ತು. ಅಲ್ಲದೆ ‘ಭಾರತೀಯರನ್ನು ಒಗ್ಗೂಡಿಸಬಲ್ಲದೇ ಹಿಂದಿ?’ ಎಂಬ ಲೇಖನವನ್ನೂ ಓದಿದೆ. ನಿಜಕ್ಕೂ ಅದು ಅಸಾಧ್ಯ. ಈವರಗೆ ತ್ರಿಭಾಷಾ ಸೂತ್ರದನ್ವಯ ದಕ್ಷಿಣ ಭಾರತದ ಐದೂ ರಾಜ್ಯಗಳಲ್ಲಿ ಹಿಂದಿಯನ್ನು ಹೇರಲಾಗುತ್ತಿದೆ. ಇದರಿಂದಾಗಿ ಈ ರಾಜ್ಯಗಳ ಸಣ್ಣಪುಟ್ಟ ಮಕ್ಕಳೂ ಎಳೆಯ ವಯಸ್ಸಿನಲ್ಲೇ ಎರಡು ಅಪರಿಚಿತ ಭಾಷೆಗಳನ್ನು ಕಲಿಯಬೇಕಿದೆ. ಇಂಗ್ಲಿಷ್, ಹಿಂದಿ ಕಲಿಯುವ ಭರದಲ್ಲಿ ಸಹಜವಾಗಿಯೇ ಗಣಿತ ವಿಜ್ಞಾನದಂತಹ ವಿಷಯಗಳನ್ನು ಅಲಕ್ಷಿಸುತ್ತಾರೆ. ಹೀಗೆ ತಮ್ಮ ಶೈಕ್ಷಣಿಕ ಪ್ರಗತಿಯಲ್ಲಿ ಹಿಂದೆ […]

ಆಗ ‘ಮೇಯರ್ ಮುತ್ತಣ್ಣ’ ಈಗ ‘ಮೇಯರ್ ಸೇಟಣ್ಣ’!

-ಸಿ.ಎಸ್.ದ್ವಾರಕಾನಾಥ್

ಇಲ್ಲಿನ ಭಾಷೆ, ಸಂಸ್ಕೃತಿ, ಗಡಿ, ಮನುಷ್ಯ ಸಂಬಂಧಗಳಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಇಲ್ಲದವರಿಗೆ ಮೇಯರ್ ಹುದ್ದೆ ದೊರಕಿದರೆ ಯಾರಿಗೆ ಪ್ರಯೋಜನವಾದೀತು? ಬೆಂಗಳೂರು ಮಹಾನಗರಪಾಲಿಕೆಯ ಮುಖ್ಯ ಕಚೇರಿಗೆ ಹೋಗುತ್ತಿದ್ದಂತೆ ಅದರ ಹೆಬ್ಬಾಗಿಲಲ್ಲಿ ‘ಕನ್ನಡವೇ ಉಸಿರು ಕನ್ನಡವೇ ಹಸಿರು’ ಎಂಬ ಘೋಷವಾಕ್ಯ ಹಸಿರು ಬಣ್ಣದಲ್ಲಿ ನಿಮ್ಮನ್ನು ಸ್ವಾಗತಿಸುತ್ತದೆ. ಮಹಾನಗರಪಾಲಿಕೆಯ ಕನ್ನಡ ಪರಂಪರೆಯನ್ನು ಇದು ತೋರುತ್ತದೆ. ಇಂತಹ ಮಹಾನಗರಪಾಲಿಕೆಗೆ ಮಾರ್ವಾಡಿಯೊಬ್ಬರು ಮೇಯರ್ ಆಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ! ಬಹುತೇಕ ಸ್ಥಳೀಯರು ಮತ್ತು ಕನ್ನಡಿಗರು ಗೌತಮ್ ಕುಮಾರ್ ಜೈನ್ ಆಯ್ಕೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ […]

ನ್ಯಾಯದಾನಕ್ಕೆ ಬೆನ್ನು ತೋರಿಸುವುದೇಕೆ?

ಡಾ.ಬಸವರಾಜ ಸಾದರ

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಹತ್ತು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಸುದ್ದಿ, ಸಂಶಯ ಮತ್ತು ಸೋಜಿಗಕ್ಕೆ ಕಾರಣವಾಗಿದೆ. ಎಂ.ಎಸ್.ಪುಟ್ಟಣ್ಣ ಅವರು ಹೊಸಗನ್ನಡ ಪುನರುಜ್ಜೀವನ ಘಟ್ಟದ ಪ್ರಸಿದ್ಧ ಲೇಖಕರು. ‘ಮಾಡಿದ್ದುಣ್ಣೊ ಮಹಾರಾಯ’, ‘ಮುಸುಕು ತೆಗೆಯೇ ಮಾಯಾಂಗನೆ’, ‘ಅವರಿಲ್ಲದೂಟ’ ಮೊದಲಾದ ಮೌಲಿಕ ಕಾದಂಬರಿಗಳ ಮೂಲಕ ಖ್ಯಾತರಾಗಿರುವ ಅವರು ಅಮಲ್ದಾರರಾಗಿ ಸರಕಾರಿ (1897) ಕೆಲಸವನ್ನೂ ಮಾಡಿದವರು. ಬ್ರಿಟೀಷರ ಕಾಲದ ಅಮಲ್ದಾರರೆಂದರೆ ಆಗ ತಾಲೂಕಿನ ದಂಡಾಧಿಕಾರಿಗಳೂ ಆಗಿದ್ದರು. ಅವರು, ಮೈಸೂರು […]

“ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ”

ಸಚಿವ ಸುರೇಶ್ ಕುಮಾರ್

ಹತ್ತನೇ ತರಗತಿಗೆ ಬರುವವರೆಗೂ ಮಕ್ಕಳಿಗೆ ಪರೀಕ್ಷೆಯ ಗಾಂಭೀರ್ಯ ಇಲ್ಲದ ಕಾರಣ ಕಲಿಕಾಸಕ್ತಿ ಕಡಿಮೆಯಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರ ಈ ನಿಲುವು ಶೈಕ್ಷಣಿಕ ವಲಯದಲ್ಲಿ ವಿವಾದ ಹುಟ್ಟಿಸಿದೆ. ಈ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಹೀಗಿವೆ: ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಉದ್ದೇಶವೇನು? ಅಗತ್ಯ ಇತ್ತೇ? ಮಕ್ಕಳಲ್ಲಿ ಪರೀಕ್ಷೆಯ ಗಾಂಭೀರ್ಯ ತರುವ ಉದ್ದೇಶದಿಂದ […]

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಅವೈಜ್ಞಾನಿಕ, ಅನರ್ಥಕಾರಿ ಶಿಕ್ಷಣ ನೀತಿ

ಬಿ.ಶ್ರೀಪಾದ ಭಟ್

 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ:  ಅವೈಜ್ಞಾನಿಕ, ಅನರ್ಥಕಾರಿ ಶಿಕ್ಷಣ ನೀತಿ <p><sub> ಬಿ.ಶ್ರೀಪಾದ ಭಟ್ </sub></p>

ಶಿಕ್ಷಣ ಮಂತ್ರಿ ಸುರೇಶಕುಮಾರ್ ಅವರು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, 10ನೆಯ ತರಗತಿಯಲ್ಲಿ ಮಕ್ಕಳ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸಲು 7ನೆಯ ತರಗತಿಯಿಂದ ಪಬ್ಲಿಕ್ ಪರೀಕ್ಷೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಅವರು ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಇಲ್ಲಿನ ಮಕ್ಕಳನ್ನು ಬಲಿಪಶು ಮಾಡುತ್ತಿದ್ದಾರೆ. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರದಿಂದಾಗಿ ತಳ ಸಮುದಾಯದ, ದಲಿತ, ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಅಲ್ಲದೆ ಶಿಕ್ಷಣ ಮಂತ್ರಿಗಳ ಈ ನಿರ್ಧಾರವು 54 ಪರಿಚ್ಛೇದಗಳನ್ನೊಳಗೊಂಡ ‘ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ’ (UNCRC) ನೀತಿಗಳಿಗೆ […]

ಗಾಂಧಿ ಇಲ್ಲದ ಭಾರತ ಊಹಿಸಲು ಸಾಧ್ಯವೇ?

-ಅಡೂರ್ ಗೋಪಾಲಕೃಷ್ಣನ್

ಮಹಾತ್ಮಾ ಗಾಂಧೀಜಿ ತಪಸ್ಸಿನಂತೆ, ಪ್ರಾಮಾಣಿಕವಾಗಿ ಬದುಕಿದವರು. ಅವರ ಜೀವನನವೇ ಒಂದು ಪಾಠಶಾಲೆ ಮತ್ತು ಸ್ಫೂರ್ತಿ. ನನ್ನ ಜೀವನವೇ ನನ್ನ ಸಂದೇಶ ಎಂದು ಅವರು ಹೇಳುತ್ತಿದ್ದರು. ನುಡಿದಂತೆ ನಡೆದವರು ಅವರು. ಅದರಲ್ಲಿ ಯಾವ ದ್ವಂದ್ವವೂ ಇರಲಿಲ್ಲ. ಮಹಾತ್ಮನ ಪರಂಪರೆಯನ್ನು ಹೀಗಳೆಯುವವರು ಉತ್ತರ ನೀಡಬೇಕು! ಈ ವರ್ಷದ ಜನವರಿ 30, ಅಂದರೆ ಗಾಂಧೀಜಿ ಪುಣ್ಯತಿಥಿಯ ದಿನ ದಿಗ್ಭ್ರಾಂತಿಪಡುವಂಥ ಘಟನೆಯೊಂದು ನಡೆಯಿತು. ಮಹಿಳೆಯೊಬ್ಬಳ ನೇತೃತ್ವದ ಒಂದು ಗುಂಪು ಗಾಂಧೀಜಿಯ ಆಳೆತ್ತರದ ಕಟೌಟ್ ಮುಂದೆ ನಿಂತಿತ್ತು. ತನ್ನ ಬಳಿ ಇದ್ದ ಪಿಸ್ತೂಲು ತೆಗೆದ […]

ಬೆಲೆ ಏರಿಕೆಯ ಲಾಭ ರೈತರಿಗೇಕೆ ಸಿಗಬಾರದು?

-ಹರೀಶ್ ದಾಮೋದರನ್

 ಬೆಲೆ ಏರಿಕೆಯ ಲಾಭ  ರೈತರಿಗೇಕೆ ಸಿಗಬಾರದು? <p><sub> -ಹರೀಶ್ ದಾಮೋದರನ್ </sub></p>

ಕೇವಲ ಈರುಳ್ಳಿ ವಿಚಾರದಲ್ಲಷ್ಟೇ ಅಲ್ಲ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದರೆ 16 ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದು. ಇದು ಭಾರತದ ಮಾರುಕಟ್ಟೆಗೆ ಕಡಿಮೆ ಅಗ್ಗದ ಹಾಲಿನ ಹುಡಿ, ಬೆಣ್ಣೆಕೊಬ್ಬು ಮುಂತಾದ ಉತ್ಪನ್ನಗಳನ್ನು ನ್ಯೂಜಿಲಾಂಡ್ ಮತ್ತು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ‘ಹಣಕಾಸಿನ ಪರಿಸ್ಥಿತಿ ಹದಗೆಟ್ಟಾಗ ಜನರು ಅದರ ಸುಧಾರಣೆ ಬಯಸುತ್ತಾರೆ. ಹಣ ಹೆಚ್ಚು ಇದ್ದಾಗ ಅವರು ಇತರ ವಿಷಯಗಳ ಕಡೆ ಗಮನ ಹರಿಸುತ್ತಾರೆ’ ಜಾನ್ ಕೆನ್ನೆತ್ […]

ಮುಖ್ಯಚರ್ಚೆಗೆ-ಪ್ರವೇಶ

ಕನ್ನಡ ಕಟ್ಟುವ ಕಾಯಕದ ಕಾರ್ಮಿಕರು ಬದಲಾದರೇ..? ‘ಕನ್ನಡ ಕಟ್ಟುವ’ ಕೆಲಸ 20ನೇ ಶತಮಾನದ ಮೊದಲ ದಶಕಗಳಿಂದಲೂ ಅವ್ಯಾಹತವಾಗಿ ನಡೆದುಬಂದರೂ ಕನ್ನಡದ ಕಟ್ಟಡ ಅಪೂರ್ಣವಾಗಿಯೇ ಉಳಿದಿದೆ. ಬಿಎಂಶ್ರೀ., ತೀನಂಶ್ರೀ, ಆಲೂರು ವೆಂಕಟರಾಯರ ಪೀಳಿಗೆಯ ನಂತರದಲ್ಲಿ ಕುವೆಂಪು ಕಾರಂತರ ಪೀಳಿಗೆ ಈ ಕಟ್ಟಡ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು. ಎಪ್ಪತ್ತು ಎಂಬತ್ತರ ದಶಕದಲ್ಲಿ ಕನ್ನಡದ ಬಹುತೇಕ ಸಾಹಿತಿ-ಚಿಂತಕರು ಸಂಪೂರ್ಣವಾಗಿ ತಮ್ಮನ್ನು ತಾವು ಈ ಕಾಯಕಕ್ಕೆ ತೊಡಗಿಸಿಕೊಂಡಿದ್ದರು. ನಂತರದಲ್ಲಿ ಚಳವಳಿಗಾರರು, ಹುಟ್ಟು ಹೋರಾಟಗಾರರು, ಸಂಘಟಕರು, ಬಂಡಾಯದವರು, ದಲಿತರು, ರೈತ ನಾಯಕರು ಮತ್ತಿತರರು ಕನ್ನಡ […]

ಹೊಸ ಪೀಳಿಗೆಯ  ನಳನಳಿಸುವ ಮಾದರಿಗಳು

-ವಸಂತ ಶೆಟ್ಟಿ

ಇದು ಕರ್ನಾಟಕ ರಾಜ್ಯೋತ್ಸವ ಸಂದರ್ಭ. 22 ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಸರಿಸುಮಾರು ಏಳು ನೂರು ವರ್ಷಗಳ ನಂತರ ಒಂದೇ ರಾಜಕೀಯದ ಆಳ್ವಿಕೆಯಡಿ ಬರಲು ಐವತ್ತು ವರ್ಷಗಳ ಕಾಲ ಹೋರಾಡಿ ಪಡೆದುಕೊಂಡಿದ್ದು ಕರ್ನಾಟಕದ ಏಕೀಕರಣ. ಮೌಢ್ಯ, ಅನಕ್ಷರತೆಯೇ ತುಂಬಿದ್ದ ಕಾಲದಲ್ಲಿ, ರಸ್ತೆ, ರೈಲು ಸಂಪರ್ಕವಾಗಲಿ, ಟಿವಿ, ರೇಡಿಯೋ, ಪತ್ರಿಕೆ, ಇಂಟರ್ ನೆಟ್ ತರಹದ ಸಮೂಹ ಮಾಧ್ಯಮಗಳ ಅನುಕೂಲ ಇಲ್ಲದ ಕಾಲದಲ್ಲಿ, ಇಂತಹದೊಂದು ಚಳವಳಿ ರೂಪಿಸಿ ಗೆಲುವು ಪಡೆದಿದ್ದು ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಿಗರು ಕನ್ನಡದ ಹೆಸರಲ್ಲಿ ಪಡೆದ ಅತೀ […]

ತಂತ್ರಜ್ಞಾನ ಶತಮಾನದಲ್ಲಿ ಕನ್ನಡ

-ಪವಮಾನ್ ಅಥಣಿ

 ತಂತ್ರಜ್ಞಾನ ಶತಮಾನದಲ್ಲಿ ಕನ್ನಡ <p><sub> -ಪವಮಾನ್ ಅಥಣಿ </sub></p>

ನುಡಿಸಮುದಾಯವೊಂದು, ಅದರಲ್ಲೂ ಕನ್ನಡದಂತಹ `ಮಾಡುಗತನವಿಲ್ಲದ’ ನುಡಿಸಮುದಾಯವೊಂದು ಟೆಕ್ನಾಲಜಿಯ ಈ ಶತಮಾನವನ್ನು ಹೇಗೆ ಎದುರಿಸಬೇಕು, ಯಾವ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು ಅನ್ನುವುದು ನಾವು ನಿನ್ನೆಯೇ ಚರ್ಚಿಸಬೇಕಿದ್ದ ತುರ್ತು ವಿಷಯ ಎಂದು ನಾನು ಭಾವಿಸುವೆ. ನುಡಿಸಮುದಾಯವೊಂದು ಹೊರಗಿನ ಯಾವುದೇ ನುಡಿಯ, ಸಂಸ್ಕೃತಿಯ ಪ್ರಭಾವವಿಲ್ಲದೇ ತನ್ನಷ್ಟಕ್ಕೆ ತಾನೇ ಸೀಮಿತವಾಗಿ ಉಳಿಯುವಂತಹ ರಾಜಕೀಯದ ಏರ್ಪಾಡುಗಳಿದ್ದಲ್ಲಿ ಹೊರ ಪ್ರಪಂಚದಲ್ಲಿ ಆಗುವ ಯಾವುದೇ ಕ್ರಾಂತಿಕಾರಕ ಬದಲಾವಣೆ ಅದರ ಮೇಲೆ ಹೆಚ್ಚಿನ ಪರಿಣಾಮ ಬೀರದು. ಆದರೆ ಈ ರೀತಿ ಪ್ರಪಂಚದ ಯಾವುದೇ ನುಡಿಸಮುದಾಯಗಳು ಇರಲು ಸಾಧ್ಯವಿಲ್ಲ. ಔದ್ಯೋಗಿಕ […]

ಕಲಿಕಾ ವ್ಯವಸ್ಥೆ ಮತ್ತು ನಾಡಿನ ಏಳಿಗೆ

-ಪ್ರಶಾಂತ ಸೊರಟೂರ

ನಾವು ಗೆದ್ದ ನಾಡುಗಳಾವುದರಿಂದಲೂ ಕಲಿಕೆಯ ವಿಷಯದಲ್ಲಿ ಏನನ್ನೂ ಕಲಿತಿಲ್ಲ. ಕಲಿತಿದ್ದರೆ ಮಗು ಕನಸು ಕಾಣುವ, ಆಲೋಚಿಸುವ ನುಡಿಯ ಕೈಬಿಟ್ಟು ಇನ್ನೊಂದು ನುಡಿಯಲ್ಲಿ ಜ್ಞಾನದ ಸಮಾಜ ಕಟ್ಟುತ್ತೇವೆ ಅನ್ನುವ ಭ್ರಮೆಯಲ್ಲಿ ಸಾಗುತ್ತಿರಲಿಲ್ಲ. ನಿಮ್ಮ ಬಳಿ ಭೂಮಿ, ಬಂಡವಾಳ ಇಲ್ಲವೇ ಜ್ಞಾನ -ಈ ಮೂರರಲ್ಲಿ ಒಂದಾದರೂ ಇರದೇ ನಿಮ್ಮ ನಾಡು ಏಳಿಗೆಯಾಗದು ಅನ್ನುವ ಮಾತು ಪಬ್ಲಿಕ್ ಪಾಲಿಸಿ ವೃತ್ತಗಳಲ್ಲಿ ಚರ್ಚೆಯಾಗುವಂತದ್ದು. ಏನು ಹೀಗಂದರೆ ಅನ್ನುವ ಪ್ರಶ್ನೆಗೆ ಸರಳ ಉತ್ತರ: ಖನಿಜ ಇಲ್ಲವೇ ತೈಲ ಸಂಪನ್ಮೂಲ ಇರುವ ಗಲ್ಫನಂತಹ ನಾಡು, ಇಲ್ಲವೇ […]

ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಅವಸ್ಥೆ!

-ರಕ್ಷಿತ್ ಪೊನ್ನಾಥಪುರ

ಭಾರತ ಒಕ್ಕೂಟ ವ್ಯವಸ್ಥೆಯ ಭಾಗವಾದ ಕರ್ನಾಟಕ ಬಹುಬಗೆಯ ಅನ್ಯಾಯ ಅನುಭವಿಸುತ್ತಿದೆ. ಈ ಸಮಸ್ಯೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧವನ್ನು ಪುನರ್ ಪರಿಶೀಲನೆಗೆ ಒಳಪಡಿಸುವಷ್ಟು ಗಂಭೀರವಾಗಿವೆ. ಆದರೆ ಈ ಬಗ್ಗೆ ನಮ್ಮ ರಾಜಕಾರಣಿಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲದಿರುವುದು ಅಕ್ಷಮ್ಯ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅಧಿಕಾರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಕೇಂದ್ರ ಪಟ್ಟಿ (ಕೇಂದ್ರ ಸರ್ಕಾರ ಅಧಿಕಾರ ಚಲಾಯಿಸಬಹುದು), ರಾಜ್ಯ ಪಟ್ಟಿ (ರಾಜ್ಯ ಸರ್ಕಾರ ಅಧಿಕಾರ ಚಲಾಯಿಸಬಹುದು) ಹಾಗೂ ಸಮವರ್ತಿ ಪಟ್ಟಿ (ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಅಧಿಕಾರ ಚಲಾಯಿಸಬಹುದು, ಕೇಂದ್ರಕ್ಕೆ […]

ಕನ್ನಡ ಕೇಂದ್ರಿತ ಗ್ರಾಹಕ ಚಳವಳಿ: 21ನೇ ಶತಮಾನದ ಕನ್ನಡ ಚಳವಳಿ

-ಸುಹೃತಾ ಯಜಮಾನ್

ಮಾರುಕಟ್ಟೆಯಲ್ಲಿ ಅರ್ಧ ಲೀಟರ್ ಹಾಲು ಕೊಳ್ಳುವವನಿಂದ ಹಿಡಿದು ಸಿಂಗಾಪುರ್ ಏರ್‍ಲೈನ್ಸ್‍ನಲ್ಲಿ ಬ್ಯುಸಿನೆಸ್ ಕ್ಲಾಸ್ ಪ್ರಯಾಣ ಮಾಡುವವನವರೆಗೆ ಪ್ರತಿಯೊಬ್ಬರು ಗ್ರಾಹಕನೂ ಹೌದು, ಕನ್ನಡಿಗನೂ ಹೌದು. ತನ್ನ ಹಣಕ್ಕೆ ತಕ್ಕ ಸೇವೆ ಕನ್ನಡದಲ್ಲಿ ದೊರೆಯಲೇಬೇಕು ಮತ್ತು ಅದಕ್ಕಾಗಿ ದನಿ ಎತ್ತಲು ಹಿಂಜರಿಯೇ ಅನ್ನುವ ಮನಸ್ಥಿತಿಯ ಕನ್ನಡಿಗರನ್ನು ಹುಟ್ಟುಹಾಕುವ ಕನ್ನಡ ಕೇಂದ್ರಿತ ಗ್ರಾಹಕ ಚಳವಳಿಯೇ ಇಪ್ಪತ್ತೊಂದನೆಯ ಶತಮಾನದ ಕನ್ನಡ ಚಳವಳಿಯ ಬಹುಮುಖ್ಯ ಭಾಗವಾಗಬೇಕಿದೆ. ಯಾವುದೇ ಊರಿಗೆ ಒಂದು ಸೊಗಡು ಇಲ್ಲವೇ ಗುರುತು ದೊರೆಯುವುದು ಅದರ ಸಂಸ್ಕೃತಿಯಿಂದ. ಅಲ್ಲಿನ ಸ್ಥಳೀಯ ಭಾಷೆಯೆನ್ನುವುದು ಆ […]

‘ಮಾಹಿತಿ ತಂತ್ರಜ್ಞಾನದ ಮೂಲೋದ್ದೇಶವೇ ಸಂವಹನ’

-ಗುರುರಾಜ ದೇಶಪಾಂಡೆ

 ‘ಮಾಹಿತಿ ತಂತ್ರಜ್ಞಾನದ ಮೂಲೋದ್ದೇಶವೇ ಸಂವಹನ’ <p><sub> -ಗುರುರಾಜ ದೇಶಪಾಂಡೆ </sub></p>

ಕನ್ನಡ ಕಟ್ಟುವ ಕೆಲಸಕ್ಕೆ ತಂತ್ರಜ್ಞಾನವನ್ನು ಬಳಸಿಕೊಂಡರೆ, ಕನ್ನಡದ ಯುವಕರು ಇತರ ಭಾಷೆಗಳನ್ನು ಕಲಿತರೆ ಕನ್ನಡದ ಭವಿಷ್ಯ ಉಜ್ವಲವಾಗಿಯೇ ಇದೆ ಎಂಬ ಆಶಾವಾದ ಉದ್ಯಮಿ ಗುರುರಾಜ ದೇಶಪಾಂಡೆ ಅವರದು. ಕನ್ನಡಿಗರು ಭೇಟಿಯಾದರೆ ಅವರೊಳಗಿನ ಅಪ್ಪಟ ಧಾರವಾಡ ಶೈಲಿಯ ಕನ್ನಡ ನಿರರ್ಗಳವಾಗಿ ಹೊರಹೊಮ್ಮುತ್ತದೆ. ಇಲ್ಲಿದೆ ಅವರೊಂದಿಗಿನ ಮಾತುಕತೆಯ ಸಾರ. ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಇಂಗ್ಲಿಷ್‍ನಿಂದ ಕನ್ನಡ ಭಾಷೆಗೆ ಅಪಾಯ ಇದೆಯೇ? ಖಂಡಿತ ಇಲ್ಲ. ಐಟಿಯ ಮುಖ್ಯ ಉದ್ದೇಶವೇ ಎಲ್ಲರೊಂದಿಗೆ ಸಂವಹನ ನಡೆಸುವುದು. ಹಾಗಾಗಿ ಇದು ಎಲ್ಲ ಭಾಷಿಕರನ್ನು ಬೆಸೆಯುವ […]

ಸವಿಸವಿ ನೆನಪು ಖ್ಯಾತಿಯ ಆರ್‍ಜೆ ಪ್ರಸನ್ನ

ಸಂದರ್ಶನ: ಮಹಮ್ಮದ್ ಷರೀಫ್

ಸವಿಸವಿ ನೆನಪು ಎಂಬ ಒಂದೇ ಕಾರ್ಯಕ್ರಮವನ್ನು ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಏಕೈಕ ಆರ್‍ಜೆ ಎಂದರೆ ಮಂಗಳೂರಿನ ಪ್ರಸನ್ನ. 93.5 ರೆಡ್ ಎಫ್‍ಎಂ ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳ ಕಡೆಗೆ ಕೇಳುಗರನ್ನು ಕರೆದೊಯ್ಯುವ ಪ್ರಸನ್ನ, ತನ್ನ ಧ್ವನಿಯ ಮೂಲಕ ಎಂಥವರನ್ನೂ ಸೆಳೆದುಬಿಡುತ್ತಾರೆ. ‘ಸವಿಸವಿ ನೆನಪು’ ಪಯಣದಲ್ಲಿನ ನಿಮ್ಮ ಸವಿಸವಿ ನೆನಪುಗಳು…? ತುಂಬಾ ಖುಷಿಯಾಗುತ್ತಿದೆ. ಹತ್ತು ವರ್ಷ ಆಗಿದೆ ಅಂತ ಅನಿಸುವುದಿಲ್ಲ. ಪ್ರತಿ ದಿನವೂ ನನಗೆ ಹೊಸ ದಿನವೇ. ವರ್ಷ ಎಷ್ಟಾಯ್ತು ಎನ್ನುವುದಕ್ಕಿಂತ, […]