ರೇಡಿಯೋ ಸಿಟಿ ಎಫ್‍ಎಂ 91.1 ಆರ್.ಜೆ. ರೌಂಡ್ ರೌಂಡ್ ರಜಸ್

ಹನುಮಂತರಾವ್ ಕೌಜಲಗಿ

ರೇಡಿಯೋ ಸಿಟಿ ಎಫ್‍ಎಂ 91.1 ಆರ್.ಜೆ. ರೌಂಡ್ ರೌಂಡ್ ರಜಸ್
ಹನುಮಂತರಾವ್ ಕೌಜಲಗಿ

ಮೂಲತಃ ಸಿವಿಲ್ ಎಂಜಿನಿಯರ್ ಆದ ರಜಸ್ ಜೈನ್, ರೇಡಿಯೋ ಸಿಟಿ ಎಫ್‍ಎಂ 91.1 ರೇಡಿಯೋ ಮೂಲಕ ರೌಂಡ್ ರೌಂಡ್ ರಜಸ್ ಅಂತಾ ಫೇಮಸ್ ಆದವರು. ಕನ್ನಡ ಬಳಸುವ-ಬೆಳೆಸುವ ವಿಚಾರದಲ್ಲಿ ರೇಡಿಯೋ ಜಾಕಿ ಅವರ ಹೊಸ ಬಗೆಯ ನಿರೂಪಣೆ ಬಹಳಷ್ಟು ಹೊಸ ಪೀಳಿಗೆಯವರಿಗೆ ಇಷ್ಟ ಆಗಿದೆ, ಜೊತೆಗೆ ಕನ್ನಡೇತರರಲ್ಲಿ ಕನ್ನಡದ ಆಸಕ್ತಿ ಬೆಳೆಸಲು ಸಾಧ್ಯವಾಗಿದೆ ಅಂತ ಹೇಳ್ತಾರೆ. ಹಾಗೆಯೇ ಮೂಲ ಕನ್ನಡ ಶಬ್ದಗಳನ್ನು ತಿರುಚುತ್ತಾರೆ, ಉಚ್ಛಾರ ಅಪಭ್ರಂಶವಾಗ್ತಾ ಇದೆ, ಇಂಗ್ಲಿಷ್ ಶಬ್ದಗಳ ಬಳಕೆಯೇ ಹೆಚ್ಚಾಗಿದೆ ಅನ್ನೋ ಮಾತಿದೆ. ನೀವೇನ್ಹೇಳ್ತೀರಾ.? […]

ಕನ್ನಡ ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ

ರಂಗಸ್ವಾಮಿ ಮೂಕನಹಳ್ಳಿ

ಕನ್ನಡ ವೀಕ್ಷಕ ವಿವರಣೆಕಾರ  ಚಂದ್ರಮೌಳಿ ಕಣವಿ
ರಂಗಸ್ವಾಮಿ ಮೂಕನಹಳ್ಳಿ

ಖ್ಯಾತ ಕ್ರೀಡಾ ವೀಕ್ಷಕ ವಿವರಣೆಕಾರ ಚಂದ್ರಮೌಳಿ ಕಣವಿ ಅವರು ಕರ್ನಾಟಕ ವಿವಿಯಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. ಅವರಿಗೆ ಎಲ್ಲಾ ಆಟಗಳಲ್ಲಿ ಆಸಕ್ತಿಯಿದ್ದರೂ ಕ್ರಿಕೆಟ್ ಆಟದ ಮೇಲಿನ ವ್ಯಾಮೋಹ ಒಂದು ಮುಷ್ಟಿ ಹೆಚ್ಚು; ಆ ಆಸಕ್ತಿ ಮುಂದಿನ ಎರಡು ದಶಕ ಅವರ ಬದುಕಾಗುತ್ತದೆ. 15 ವರ್ಷ ಫಸ್ಟ್ ಡಿವಿಷನ್ ಕ್ರಿಕೆಟ್ ಆಡಿ, ಮೂರು ವರ್ಷ ಕರ್ನಾಟಕ ಯೂನಿವರ್ಸಿಟಿಯನ್ನು ಮತ್ತು ಒಂದು ವರ್ಷ ಸ್ಟೇಟ್ ಜೂನಿಯರ್ ಟೀಮ್ ಪ್ರತಿನಿಧಿಸಿದ್ದಾರೆ. 1991ರಲ್ಲೇ ಕನ್ನಡದಲ್ಲಿ ಕ್ರಿಕೆಟ್ ಕಾಮೆಂಟರಿ ಕೊಡಲು ಆರಂಭಿಸಿದರು. ಅಂದಹಾಗೆ ಇವರು […]

‘ಕನ್ನಡ ಉಳಿಸಲು ಅಲ್ಲ, ಬಳಸಲು ಹೋರಾಡಿ’

-ರವಿ ಬಸ್ರೂರ್

‘ಕನ್ನಡ ಉಳಿಸಲು ಅಲ್ಲ, ಬಳಸಲು ಹೋರಾಡಿ’
-ರವಿ ಬಸ್ರೂರ್

ಕೆಜಿಎಫ್ ಮೂಲಕ ಕನ್ನಡ ಸಿನಿರಂಗದ ಕಡೆಗೆ ಅಂತರರಾಷ್ಟ್ರೀಯ ಸಿನಿಮಾ ಸಂಸ್ಥೆಗಳೂ ತಿರುಗಿ ನೋಡುವಂತೆ ಮಾಡಿದ್ದರಲ್ಲಿ ರವಿ ಬಸ್ರೂರ್ ಸಂಗೀತ ನಿರ್ದೇಶನದ ಪಾಲು ದೊಡ್ಡದಿದೆ. ‘ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ… ಒಂದು ಚೂರು ಬಯ್ಯುದಿಲ್ಲ ರಾತ್ರಿ ಕುಡ್ಕಂಬಂದ್ರೆ…’ ಎಂಬ ‘ಅಂಜನೀಪುತ್ರ’ ಸಿನಿಮಾದ ಹಾಡು ಎರಡು ವರ್ಷಗಳ ಹಿಂದೆ ರಾಜ್ಯದಾದ್ಯಂತ ಎಲ್ಲಿಲ್ಲದ ಜನಪ್ರಿಯತೆ ಗಳಿಸಿತು. ಊರೂರಿನ ಬಸ್ಸಿನಲ್ಲಿ, ಆಟೋಗಳಲ್ಲಿ, ಹಲವರ ಮೊಬೈಲ್‍ಗಳಲ್ಲಿ ಈ ಹಾಡಿನದ್ದೇ ಅಬ್ಬರ. ತನ್ನೂರಿನ ಭಾಷೆ ಅಳಿವಿನಂಚಿಗೆ ಸೇರುವ ಮುನ್ನ ಅದನ್ನು ಉಳಿಸಿ, […]

ಸಮೂಹ ಮಾಧ್ಯಮಗಳು ಮತ್ತು ಕನ್ನಡ ಭಾಷೆ

-ಪುರುಷೋತ್ತಮ ಬಿಳಿಮಲೆ

ಸಮೂಹ ಮಾಧ್ಯಮಗಳು ಮತ್ತು ಕನ್ನಡ ಭಾಷೆ
-ಪುರುಷೋತ್ತಮ ಬಿಳಿಮಲೆ

ಕನ್ನಡಿಗರ ಸಹಾಯದಿಂದ ಬದುಕುತ್ತಿರುವ ಮಾಧ್ಯಮಗಳು ಕನ್ನಡದ ಅಭಿವೃದ್ಧಿಗೆ ಯಾವ ಕೊಡುಗೆಯನ್ನೂ ನೀಡುತ್ತಿಲ್ಲ, ಬದಲು ಭಾಷೆಯನ್ನೇ ಕಲುಷಿತಗೊಳಿಸುತ್ತಿವೆ. ಪ್ರಸ್ತಾವನೆ ಪ್ರಾದೇಶಿಕ ಭಾಷಾ ಮಾಧ್ಯಮಗಳ ಮಹತ್ವದ ಬಗ್ಗೆ ನಾವಿಂದು ಚರ್ಚೆ ನಡೆಸಬೇಕಾಗಿಲ್ಲ. ‘ರಾಷ್ಟ್ರೀಯ’ ಎಂದು ಕರೆಯಿಸಿಕೊಳ್ಳುವ ಯಾವುದೇ ಮಾಧ್ಯಮಗಳಿಗಿಂತ ಇವು ಹೆಚ್ಚು ಪ್ರಭಾವಶಾಲಿಗಳು. ಏಕೆಂದರೆ ಇವು ಜನ ಭಾಷೆಯಲ್ಲಿ ಮಾತಾಡುತ್ತವೆ. ಜನರನ್ನು ಮುಟ್ಟುವ, ಸಂಘಟಿಸುವ ಮತ್ತು ಅವರನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಶಕ್ತಿಯೂ ಇವಕ್ಕಿವೆ. ವಸಾಹತು ಕಾಲದಲ್ಲಿ ಬ್ರಿಟಿಷರ ವಿರುದ್ಧ ಜನ ಸಂಘಟನೆ ಮಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಪ್ರಾದೇಶಿಕ […]

ಕನ್ನಡ ಚಳವಳಿ: ಹೋರಾಟದಿಂದ ಮಾರಾಟದವರೆಗೆ!

ಜಾಣಗೆರೆ ವೆಂಕಟರಾಮಯ

ಕನ್ನಡ ಚಳವಳಿ: ಹೋರಾಟದಿಂದ ಮಾರಾಟದವರೆಗೆ!
ಜಾಣಗೆರೆ ವೆಂಕಟರಾಮಯ

1960ರ ದಶಕದಲ್ಲಿ ಕನ್ನಡ ಮತ್ತು ಕನ್ನಡಿಗರ ಪಾಲಿಗೆ ಜೋರು ಧ್ವನಿಯೆತ್ತುವವರು ಯಾರಾದರೂ ಬಂದಾರೆಯೇ ಎಂದು ಜನರು ನಿರೀಕ್ಷಿಸುತ್ತಿದ್ದರು. ಆದರೆ, ಈ 60 ವರ್ಷಗಳ ದೀರ್ಘಾವಧಿಯ ಕನ್ನಡ ಚಳವಳಿಯನ್ನು ಕಂಡಿರುವ ಜನ, ಯಾಕಾದರೂ ಕನ್ನಡ ಚಳವಳಿ ನಡೆಸುವವರು ಹುಟ್ಟುಕೊಳ್ಳುತ್ತಾರೋ ಎಂದು ಪರಿತಪಿಸುವಂತಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡ ಏಕೀಕರಣ ಚಳವಳಿ ಸ್ವಾತಂತ್ರ್ಯೋತ್ತರದಲ್ಲೂ ಮುಂದುವರಿದಿತ್ತು. ಸ್ವಾತಂತ್ರ್ಯ ಪಡೆದ ಹುರುಪು-ಹುಮ್ಮಸ್ಸಿನಲ್ಲಿದ್ದ ರಾಷ್ಟ್ರದ ನಾಯಕರಿಗೆ ಕನ್ನಡಿಗರ ಅಳಲು ಅರ್ಥವಾಗುವ ಹೊತ್ತಿಗೆ ವರ್ಷಗಳು ಉರುಳಿದ್ದವು. ಹರಿದು ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಿದ ರಾಜ್ಯವೊಂದನ್ನು ಕೊಡಬಹುದು ಅನ್ನಿಸಿದ್ದು ತಡವಾಗಿ. […]

2019ರ ನೊಬೆಲ್ ಪ್ರಶಸ್ತಿಗಳು

-ಎಲ್.ಪಿ.ಕುಲಕರ್ಣಿ ಬಾದಾಮಿ

ವಿಜ್ಞಾನಿ ಆಲ್ಫ್ರೇಡ್ ನೊಬೆಲ್ ಉಯಿಲಿನ ಪ್ರಕಾರ ವ್ಯಕ್ತಿಗಳ, ಸಂಘಸಂಸ್ಥೆಗಳ ಜನೋಪಕಾರಿ ಸಂಶೋಧನೆ, ಆವಿಷ್ಕಾರ, ಕಾರ್ಯಸಾಧನೆಗಳನ್ನು ಗಮನದಲ್ಲಿರಿಸಿಕೊಂಡು, ಪ್ರತೀ ವರ್ಷ ಡಿಸೆಂಬರ್ 10ರಂದು ಆರು ಕ್ಷೇತ್ರಗಳ ಸಾಧಕರಿಗೆ ನೊಬೆಲ್ ಪ್ರಶಸ್ತಿ ಕೊಡಲಾಗುತ್ತಿದೆ. 2019ರ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಭಾಜನರಾದವರ ವಿವರಗಳು ಇಲ್ಲಿವೆ. ವೈದ್ಯ ವಿಜ್ಞಾನ ಹಾಗೂ ಔಷಧಿ ವಿಜ್ಞಾನ ವಿಭಾಗ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಬಲ್ಲ ವಿಶಿಷ್ಟ ಸಂಶೋಧನೆಗಾಗಿ ಈ ಸಾರಿ ಮೂವರು ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ ಸಂದಿದೆ. ಅಮೆರಿಕದ ಇಬ್ಬರು ಮತ್ತು ಓರ್ವ ಬ್ರಿಟಿಷ್ ವಿಜ್ಞಾನಿ ಒಟ್ಟಿಗೆ 9,18,000 […]

ಪ್ರಜಾಪ್ರಭುತ್ವದ ಅಂತ್ಯ ಸಮೀಪಿಸುತ್ತಿದೆಯೇ?

ಟಿ.ಎಸ್.ವೇಣುಗೋಪಾಲ್

ಪ್ರಜಾಪ್ರಭುತ್ವದ ಅಂತ್ಯ ಸಮೀಪಿಸುತ್ತಿದೆಯೇ?
ಟಿ.ಎಸ್.ವೇಣುಗೋಪಾಲ್

ಜಗತ್ತಿನಾದ್ಯಂತ ತೀವ್ರ ಬಲಪಂಥೀಯ ನಿಲುವು ಏಕಪ್ರಕಾರವಾಗಿ ಬೆಳೆಯುತ್ತಿದೆ. ಅಮೆರಿಕೆಯ ವಿಷಯಕ್ಕೆ ಬಂದರೆ ಸಮಸ್ಯೆ ಕೇವಲ ಒಬ್ಬ ಟ್ರಂಪ್ ಎನ್ನುವ ಮನುಷ್ಯನದಲ್ಲ, ಅದಕ್ಕಿಂತಲೂ ತುಂಬಾ ದೊಡ್ಡದು. ರೋಸೆನ್‍ಬರ್ಗ್ ಹೇಳುವುದೇ ನಿಜವಾಗಿದ್ದಲ್ಲಿ, ಆಧಿಕಾರಕ್ಕೆ ಯಾರೇ ಬರಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಲಿಸ್ಬನ್ನಿನಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ರಾಜಕೀಯ ಮನೋವಿಜ್ಞಾನಿಗಳ ವಾರ್ಷಿಕ ಸಮ್ಮೇಳನ ನಡೆಯಿತು. ನೂರಕ್ಕೂ ಹೆಚ್ಚು ಸಂಶೋಧಕರು ಸೇರಿದ್ದರು. ಅಲ್ಲಿ ಮಾತನಾಡುತ್ತಾ “ಪ್ರಜಾಪ್ರಭುತ್ವ ತನ್ನನ್ನೇ ತಿಂದುಕೊಂಡು ಬಿಡುತ್ತಿದೆ. ಅದು ಬಹುಕಾಲ ಉಳಿಯುವುದಿಲ್ಲ,” ಎಂದು ಪ್ರಖ್ಯಾತ ರಾಜಕೀಯ ಮನೋವಿಜ್ಞಾನಿ ಷಾನ್ ರೋಸೆನ್‍ಬರ್ಗ್ ಭವಿಷ್ಯ ನುಡಿದ. […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಎಫ್‍ಎಟಿಎಫ್‍ನಿಂದ ಕಡೆಯ ಎಚ್ಚರಿಕೆ ಪಡೆದ ಪಾಕಿಸ್ತಾನ ಭಯೋತ್ಪಾದಕ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ತಡೆಗಟ್ಟಲು ಕಳೆದ ಮೂವತ್ತು ವರ್ಷಗಳಿಂದ ಭಾರತ ಹೆಣಗುತ್ತಲೇ ಬಂದಿದೆ. ಈ ಯಾವುದೇ ಪ್ರಯತ್ನಗಳಿಗೆ ಸಿಗದ ಸಫಲತೆ ಈಗ ಎಫ್‍ಎಟಿಎಫ್‍ನಿಂದ ಆಗುತ್ತಿದೆ. ಭಯೋತ್ಪಾದಕ ಮೂಲಸೌಲಭ್ಯಕ್ಕೆ ಕೊಡಲಿಪೆಟ್ಟು ನೀಡುವ ನಿಟ್ಟನಲ್ಲಿ ಎಫ್‍ಎಟಿಎಫ್ ಪಾಕಿಸ್ತಾನವನ್ನು ‘ನಸುಗಪ್ಪು’ (ಗ್ರೇ) ಪಟ್ಟಿಯಲ್ಲಿ ಮುಂದುವರೆಸಿದೆ. ಮುಂದಿನ 2020ರ ಫೆಬ್ರವರಿಯೊಳಗೆ ತಾನು ಬಯಸಿರುವ ನಿಬಂಧನೆಗಳನ್ನು ಪಾಲಿಸದೇ ಹೋದರೆ ‘ಕಪ್ಪು ಪಟ್ಟಿ’ಗೆ ಸೇರಿಸುವುದಾಗಿ ಬೆದರಿಕೆ ಒಡ್ಡಿದೆ. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‍ಎಟಿಎಫ್) ಶುರುವಾಗಿದ್ದು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಇ-ಜ್ಞಾನ
ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ದೂರದಲ್ಲಿರುವ ವಸ್ತುಗಳ (ಉದಾ: ವಿಮಾನ) ಪ್ರತಿಫಲನ ಸಾಮಥ್ರ್ಯ ಬಳಸಿಕೊಂಡು ಅವು ಇರುವ ಸ್ಥಾನ, ದೂರ, ಚಲನೆಯ ದಿಕ್ಕುಗಳನ್ನೆಲ್ಲ ಪತ್ತೆಮಾಡುವ ರೇಡಾರ್‍ಗಳ ಹೆಸರನ್ನು ನಾವು ಕೇಳಿರುತ್ತೇವೆ. ಗೂಗಲ್ ಸಂಸ್ಥೆ ಇತ್ತೀಚೆಗೆ ಪರಿಚಯಿಸಿದ ‘ಪಿಕ್ಸೆಲ್ 4′ ಮಾದರಿಯ ಮೊಬೈಲುಗಳ ಜೊತೆಗೆ ಈ ತಂತ್ರಜ್ಞಾನ ಮೊಬೈಲ್ ಫೋನುಗಳಿಗೂ ಬಂದಿದೆ. ಆ ಫೋನಿನ ಮೋಶನ್ ಸೆನ್ಸರ್ ಸಾಧನದಲ್ಲಿ ರೇಡಾರ್ ತಂತ್ರಜ್ಞಾನವನ್ನು ಬಳಸಲಾಗಿದೆಯಂತೆ. ರೇಡಾರ್ ತಂತ್ರಜ್ಞಾನದ ಬಳಕೆಯ ಮೇಲೆ ನಮ್ಮಲ್ಲಿ ನಿರ್ಬಂಧಗಳಿರುವುದರಿಂದ ಈ ಮೊಬೈಲ್ ಫೋನು ಭಾರತದಲ್ಲಿ ದೊರಕುವುದಿಲ್ಲ. ಟೆಕ್ ಪದ […]

ಬೆಂಕಿಯಿಂದ ಹೊರಬಂದ ಬರಸಿಡಿಲು (ಪರಶುರಾಮನ ಗಾಥೆಯನ್ನು ಅರ್ಥೈಸುವ ನಿಟ್ಟಿನಲ್ಲಿ)

ಹೊ.ಮ.ಮಂಜುನಾಥ

ಬೆಂಕಿಯಿಂದ ಹೊರಬಂದ ಬರಸಿಡಿಲು (ಪರಶುರಾಮನ ಗಾಥೆಯನ್ನು ಅರ್ಥೈಸುವ ನಿಟ್ಟಿನಲ್ಲಿ)
ಹೊ.ಮ.ಮಂಜುನಾಥ

“ಭಾರತದಂತಹ ಸಂಸ್ಕೃತಿಯಲ್ಲಿ, ಭೂತವು ಹಿಂದೆ ಸರಿಯುವುದಿಲ್ಲ. ಅದು ವರ್ತಮಾನಕ್ಕೆ ಬೇರೆಬೇರೆ ಚೌಕಟ್ಟುಗಳನ್ನು ಅಥವಾ ವ್ಯಂಗ್ಯಗಳನ್ನು ನೀಡುತ್ತಾ ಹೋಗುತ್ತದೆ ಅಥವಾ ನಮಗೆ ಹಾಗೆನ್ನಿಸುತ್ತದೆ” -ಎ.ಕೆ.ರಾಮಾನುಜನ್ ಪ್ರಾರಂಭಿಕ ಪುರಾಣ ಹಾಗೂ ದಂತಕಥೆಗಳು ಜನಾಂಗವೊಂದರ ಅಮೂರ್ತದ್ರವ್ಯದ ಮೇಲೆ ಕಟ್ಟಲಾದ ಕಲಾಕೃತಿಗಳು. ಅವು ಭಾವಗಮ್ಯ ತಿಳಿವು ಹಾಗೂ ತಾರ್ಕಿಕ ಅರಿವುಗಳ ನಡುವಿನ ಬಿಂದುವಿನ ಹಿನ್ನೆಲೆಯಲ್ಲಿ ಕಾಲ ದೇಶಗಳನ್ನು ಮೀರಿ ಅಂಟಿಕೊಂಡಿರಬಲ್ಲ ಪ್ರತಿಮೆಗಳನ್ನು, ರೂಪಕಗಳನ್ನು ಸೃಷ್ಟಿಸುತ್ತವೆ. ಹಾಗೆಂದೇ, ಜನಾಂಗದ ಸಾಮಾಜಿಕ-ಸಾಂಸ್ಕೃತಿಕ ಜೀವನದ ಅನೇಕ ಮುಖಗಳನ್ನು ಪುರಾಣಗಳು ಮೈಗೂಡಿಸಿಕೊಂಡಿರುತ್ತವೆ. ಒಂದು ಸಮುದಾಯ ಅಥವಾ ರಾಷ್ಟ್ರವು ಕಾಲದಲ್ಲಿ […]

ವಸಾಹತುಶಾಹಿ ಸ್ವರೂಪ ಅರ್ಥೈಸುವ ಕೃತಿ

- ಪ್ರತಿವಿಂಧ್ಯ

ಇಂತಹ ಒಂದು ಕಥನವನ್ನು ರಚಿಸಲು ಇಂಗ್ಲೀಷ್, ಹಿಂದೂಸ್ತಾನಿ ಮತ್ತಿತರ ಭಾಷೆಗಳಲ್ಲಿನ ಹಲವಾರು ಅಪರೂಪದ ಆಕರಗಳನ್ನು ವಿಶದವಾಗಿ ಅಭ್ಯಸಿಸಿದ್ದಾರೆ. ಎಂದಿನಂತೆ ಬರವಣಿಗೆಯ ಶೈಲಿ ಓದುಗನ ಆಸಕ್ತಿ ಮತ್ತು ಕುತೂಹಲಗಳನ್ನು ಉಳಿಸಿಕೊಳ್ಳುತ್ತ ಹೋಗುತ್ತದೆ. ಭಾರತದ ಆಧುನಿಕ ಇತಿಹಾಸದ ಬಗ್ಗೆ ಆಸಕ್ತ ಓದುಗರೆಲ್ಲರೂ ಗಮನಿಸಿಲೇಬೇಕಾಗಿರುವ ಕೃತಿಯಿದು. ವಿಲಿಯಮ್ ಡಾಲರಿಂಪಲ್ ನಮ್ಮ ಕಾಲದ ಅತ್ಯಂತ ಜನಪ್ರಿಯ ಇತಿಹಾಸಕಾರರಲ್ಲೊಬ್ಬರು. ವಸಾಹತುಶಾಹಿ ಯು ಭಾರತಕ್ಕೆ ಕಾಲಿಡುತ್ತಿದ್ದ 18 ಮತ್ತು 19ನೆಯ ಶತಮಾನಗಳ ಇತಿಹಾಸಗಳ ಬಗ್ಗೆ ಹಲವಾರು ಮೌಲಿಕ ಕೃತಿಗಳನ್ನು ರಚಿಸಿರುವ ಡಾಲರಿಂಪಲ್ ಒಂದು ರೀತಿಯಲ್ಲಿ ಅಸಾಂಪ್ರದಾಯಿಕ […]

ಹೊಸ ಪುಸ್ತಕ

ಹಳತು ಹೊನ್ನು ಸಂಪಾದಕರು: ಡಾ. ಮನು ಬಳಿಗಾರ್, ಡಾ. ಪದ್ಮರಾಜ ದಂಡಾವತಿ ಪುಟ: 276+20 ಬೆಲೆ: ರೂ.210 ಪ್ರಥಮ ಮುದ್ರಣ: 2019 ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು. 560018 ಇದು ಪ್ರಥಮ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಗ್ರಹ. ನಾಡಿನ ಹಲವು ಪ್ರಮುಖ ವಿದ್ವಾಂಸರು ಮಂಡಿಸಿದ ಪ್ರಬಂಧಗಳ ಬರಹ ರೂಪವನ್ನು ಇಲ್ಲಿ ಕಾಣಲು ಸಾಧ್ಯ. ಪ್ರಸಿದ್ಧ ಇತಿಹಾಸಕಾರ ಷ. ಶೆಟ್ಟರ್ ಅವರ ಅಧ್ಯಕ್ಷ ಭಾಷಣ, ಪ್ರೊ. ಹಂಪ […]

ಆಂಡಯ್ಯ ಕವಿಯ ವಿಶಿಷ್ಟ ಖಂಡಕಾವ್ಯ ಕಬ್ಬಿಗರ ಕಾವ

-ಡಾ.ಜಾಜಿ ದೇವೇಂದ್ರಪ್ಪ

ಆಂಡಯ್ಯ ಕವಿಯ ವಿಶಿಷ್ಟ ಖಂಡಕಾವ್ಯ  ಕಬ್ಬಿಗರ ಕಾವ
-ಡಾ.ಜಾಜಿ ದೇವೇಂದ್ರಪ್ಪ

ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ? -ಇದು ಕವಿ ಅಂಡಯ್ಯ ಬೀಸುವ ಚಾಟಿ ಏಟು! ಹಳಗನ್ನಡ ಪರಂಪರೆಯಲ್ಲಿ ‘ಕಬ್ಬಿಗರ ಕಾವ’ ಹೆಸರಿನ ಖಂಡಕಾವ್ಯಕ್ಕೆ ವಿಶೇಷವಾದ ಸ್ಥಾನವಿದೆ. ಇದನ್ನು ರಚಿಸಿದ ಕವಿ ಆಂಡಯ್ಯ. ಇವನ ಕಾಲ ಹನ್ನೊಂದನೆ ಶತಮಾನದ ಕೊನೆ, ಹನ್ನೆರಡನೆ ಶತಮಾನದ ಆರಂಭ. ಈ ಕಾಲಘಟ್ಟ ಕನ್ನಡ ಸೃಜನಶೀಲ ಪ್ರಯೋಗದ ಸಂಕೀರ್ಣ ಕಾಲ. ಆಂಡಯ್ಯ ಚಂಪೂ ಕಾವ್ಯದ ಯುಗದಲ್ಲಿ ಇದ್ದರೂ ಅದಕ್ಕೆ ಸವಾಲೆಸೆದು ಹೊಸನೆಲೆಯ ಕಾವ್ಯ ರಚನೆಗೆ ಮುಂದಾದದ್ದು ಕನ್ನಡದ ಮಟ್ಟಿಗೆ ಅಪರೂಪದ ಸಂಗತಿ. ಕನ್ನಡಕ್ಕೊಡೆಯನೋರ್ವನೆ […]

ಹರಕಲು ಬನೀನು…

ಜಿ.ಎನ್.ರಂಗನಾಥ ರಾವ್

ಹರಕಲು ಬನೀನು…
ಜಿ.ಎನ್.ರಂಗನಾಥ ರಾವ್

ಹೆಂಡತಿ ಮತ್ತು ಹರಕಲು ಬನಿಯನ್ ಎರಡರಲ್ಲಿ ಒಂದನ್ನು ಆರಿಸಿಕೊ ಎಂದರೆ ನಾನು ನಿಶ್ಚಯವಾಗಿಯೂ ಹರಕಲು ಬನಿಯನ್ ಆರಿಸಿಕೊಳ್ಳುವವನೇ. ಏಕೆಂದರೆ, ಅದು ಹೆಂಡತಿ ಬರುವುದಕ್ಕೂ ಮುಂಚಿನಿಂದಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ! ನನಗೆ ಈ `ಈ ಮೇಲ್’ ಮತ್ತು `ಫೀ-ಮೇಲ್’ಗಳ ಬಗ್ಗೆ ತುಂಬ ಕಿರಿಕಿರಿ. ಕಿರಿಕಿರಿಯಾದರೂ ಕಾಳಜಿ ಮಾಡಲೇಬೇಕು ಅನ್ನುವಂಥ ಜರೂರಿನೊಂದಿಗೆ ಅವು ವಕ್ಕರಿಸುತ್ತವೆ. ಅಂಚೆಯವನು ತಂದುಕೊಡುವ ಮೈಲ್ ಇದೆಯಲ್ಲ, ಅದು ಹಾಗಲ್ಲ. ಸಾವಧಾನವಾಗಿ ಪರೀಶಿಲಿಸುವಂಥಾದ್ದು. ಬೇಡವಾದ್ದನ್ನು, ನಮ್ಮ ವರಕವಿ ಬೇಂದ್ರೆಯವರು ಬೇಡವಾದ ಅತಿಥಿಗಳನ್ನು `ಸಕ್ಕರಿ ಕೊಟ್ಟು ಕಳಿಸು’ ಅಂಬೋ […]

ಕನ್ನಡ ಚಿತ್ರಸಾಹಿತ್ಯ: ಅಂದು ಇಂದು

-ಪ್ರೊ.ಮೈಸೂರು ಕೃಷ್ಣಮೂರ್ತಿ

ಕನ್ನಡ ಚಿತ್ರಸಾಹಿತ್ಯ:  ಅಂದು ಇಂದು
-ಪ್ರೊ.ಮೈಸೂರು ಕೃಷ್ಣಮೂರ್ತಿ

ಕನ್ನಡ ಚಲನಚಿತ್ರ ಚರಿತ್ರೆಯಲ್ಲಿ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನವಿದೆ; ಆರಂಭದ ದಿನಗಳಿಂದ ಇಂದಿನವರೆಗೆ ಚಿತ್ರಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ ಭಾವ, ಭಾಷೆ, ಅಭಿರುಚಿ, ಅಭಿವ್ಯಕ್ತಿಗಳು ಬದಲಾಗಿವೆ. ಆದರೆ ಹೊಸತಿನ ಹೊಳಪಿನಲ್ಲಿ ಹಳತು ಮಸುಕಾಗಿಲ್ಲವೆಂಬುದೇ ವಿಶೇಷ. ಕನ್ನಡ ನಾಡು, ನುಡಿ, ಸಂಸ್ಕತಿಯನ್ನು ಆಯಾ ಕಾಲಘಟ್ಟದಲ್ಲಿ ಕನ್ನಡ ಚಲನಚಿತ್ರ ಸಾಹಿತ್ಯ ಎದುರುಗೊಂಡ ಬಗೆ ಇಲ್ಲಿದೆ. ಎಂಬತ್ತೈದು ವರ್ಷಗಳಷ್ಟು ಸದ್ಯದ ಇತಿಹಾಸವನ್ನು ಹೊಂದಿರುವ ಕನ್ನಡ ಚಲನಚಿತ್ರ ಪರಂಪರೆಯ ಪ್ರಮುಖ ಘಟಕವಾದ ಸಾಹಿತ್ಯವನ್ನು ಕುರಿತು ಚರ್ಚಿಸುವಾಗ ಮೊದಲಿಗೇ ಹೇಳಬೇಕಾದ ಮುಖ್ಯವಾದ ಮಾತೆಂದರೆ, ಕನ್ನಡ ಚಲನಚಿತ್ರ ಸಾಹಿತ್ಯವನ್ನು […]

ವೀಕ್ಷಕವಿವರಣೆ: ಕ್ರೀಡಾಲೋಕದಲ್ಲಿ ಕನ್ನಡ ನುಡಿನಡಿಗೆ

-ಕೆ.ವಿ.ಪರಮೇಶ್

ವೀಕ್ಷಕವಿವರಣೆ:  ಕ್ರೀಡಾಲೋಕದಲ್ಲಿ ಕನ್ನಡ ನುಡಿನಡಿಗೆ
-ಕೆ.ವಿ.ಪರಮೇಶ್

ಈವರೆಗೆ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಪ್ರಸಾರವಾಗುವ ವೀಕ್ಷಕವಿವರಣೆಗೆ ಕನ್ನಡದ ಪ್ರೇಕ್ಷಕ ಹೊಂದಿಕೊಂಡಿದ್ದ. ಇದೀಗ ಕ್ರೀಡಾ ಜಗತ್ತಿನ ಪ್ರಮುಖ ಚಾನೆಲ್, ‘ಸ್ಟಾರ್ ಸ್ಪೋಟ್ರ್ಸ್’, ಪ್ರಾದೇಶಿಕ ಭಾಷೆಗಳಲ್ಲಿ ಕ್ರೀಡೆಯ ವೀಕ್ಷಕವಿವರಣೆ ನೀಡಲು ಶುರುಮಾಡಿದೆ. ಇದು ಹೊಸಕಾಲದ ತಾಂತ್ರಿಕ ಬೆಳವಣಿಗೆಯೊಂದಿಗೆ ಕನ್ನಡ ನುಡಿಯ ನಡಿಗೆ. ಕ್ರಿಕೆಟ್ ವೀಕ್ಷಕವಿವರಣೆ ಕೇಳಲು ರೇಡಿಯೋಗೆ ಕಿವಿಯಾದ ಅನುಭವ ಹಳೆಯ ತಲೆಮಾರಿನ ಎಲ್ಲರಿಗೂ ಇರುತ್ತದೆ. ಪಂದ್ಯಾವಳಿ ವಿದೇಶಗಳಲ್ಲಿ ನಡೆದಾಗ ಭಾರತದ ಸಮಯ ವ್ಯತಿರಿಕ್ತವಾಗಿರುತ್ತದೆ. ಆದರೂ ಕೇಳುವ ಉತ್ಸಾಹ ಭಂಗವಾಗಲಾರದು. ಕಾಮೆಂಟರಿ ಅರ್ಥಾತ್ ವೀಕ್ಷಕವಿವರಣೆ ಆಲಿಸುವುದು ಕ್ರೀಡೆ ಬಗ್ಗೆ […]

ಪುಟ್ಟನಾಡು ಸ್ಲೊವೆನಿಯಾ

-ರಹಮತ್ ತರೀಕೆರೆ

ಪುಟ್ಟನಾಡು ಸ್ಲೊವೆನಿಯಾ
-ರಹಮತ್ ತರೀಕೆರೆ

ಯೂರೋಪಿನಲ್ಲಿ ನೂರಿನ್ನೂರು ಕಿಮೀ ಹಾದರೆ ಇನ್ನೊಂದು ದೇಶವೇ ಸಿಗುತ್ತದೆಯಷ್ಟೆ. ಸ್ಲೊವೇನಿಯಾ ತನ್ನ ಚರಿತ್ರೆಯುದ್ದಕ್ಕೂ ಬೇರೆಬೇರೆ ಶಕ್ತಿಗಳಿಂದ ಆಳಿಸಿಕೊಂಡ ದೇಶ. ಹೀಗಾಗಿಯೇ ಇಲ್ಲಿ ವಿವಿಧ ಭಾಷಿಕರ ಮತ್ತು ಜನಾಂಗಗಳ ವಲಸೆ ನಿರಂತರ ನಡೆದಿದೆ. ಯೂರೋಪಿನಲ್ಲಿ ನಮಗೆ ಪ್ರಿಯವಾಗಿದ್ದು ಅಷ್ಟೇನೂ ಖ್ಯಾತವಲ್ಲದ ಪುಟ್ಟದೇಶ ಸ್ಲೊವೆನಿಯಾ. ಬಿಗಿಹುಬ್ಬಿನ ಅತಿಶಿಸ್ತಿನ ಜರ್ಮನಿಯಲ್ಲಿದ್ದು ಹೋದ ಕಾರಣವಿದ್ದೀತು, ಅಲ್ಲಿ ನಿರಾಳತೆ ಅನುಭವಿಸಿದೆವು. ಸ್ಲೊವೆನಿಯನರು ಭಾರತೀಯರಂತೆ ಅತಿಯಾದ ಖಾಸಗಿತನ ಪ್ರಜ್ಞೆಯಿಲ್ಲದೆ ಎದೆತೆರೆದು ಮಾತಾಡುವರು. ಇಟಲಿ ಆಸ್ಟ್ರಿಯಾ ಹಂಗೇರಿಗಳ ನಡುವೆ ಅದು ಇರುಕಿಕೊಂಡಿದೆ. ಮಹಾಯುದ್ಧಗಳ ಕಾಲದಲ್ಲಿ ಯುಗೊಸ್ಲಾವಿಯಾ ದೇಶದೊಳಗೆ […]

ಸ್ವರ್ಗವಾಸಿ ಸಾಹಿತಿಗಳ ರಾಜ್ಯೋತ್ಸವ ಸಿದ್ಧತೆ!

ಬಾಲಚಂದ್ರ ಬಿ.ಎನ್.

ಇಂದ್ರನು ಆತ್ಮಹತ್ಯೆ ಮಾಡಿಕೊಂಡು ಸಾಯಲಾರದ ತನ್ನ ಅಮರತ್ವಕ್ಕೆ ಶಾಪ ಹಾಕುತ್ತಾ ಗೊಳೋ ಎಂದು ಅಳತೊಡಗಿದ. ಕನ್ನಡದ ಹಿತರಕ್ಷಣೆಗಾಗಿ ನೀವೆಲ್ಲಾ ಮತ್ತೆ ಕರುನಾಡಿನಲ್ಲಿ ಜನ್ಮತಳೆಯಬೇಕು ಎಂದು ಬೇಡಿಕೊಂಡ. ಸ್ವರ್ಗವಾಸಿ ಸಾಹಿತಿಗಳೆಲ್ಲರೂ ತುಂಬು ಸಂತೋಷದಿಂದ ಸಮ್ಮತಿ ಸೂಚಿಸಿದರು! ಸನ್ ಎರಡ್ಸಾವಿರದ ಹತ್ತೊಂಬತ್ತನೇ ಇಸ್ವಿ ಅಕ್ಟೋಬರ್ ವೀಕೆಂಡಿನಲ್ಲಿ ಸಹಸ್ರಾಕ್ಷನಾದ ಇಂದ್ರನು ಸ್ವರ್ಗದಲ್ಲೊಂದು ಮೀಟಿಂಗ್ ಕರೆದ. ಈ ಮೀಟಿಂಗ್ ವಿಶೇಷ ಏನಪಾ ಅಂದ್ರೆ ಇದು ಕನ್ನಡದ ಸಾಹಿತಿಗಳಿಗೆ, ಕರುನಾಡಿಗಾಗಿ ಜೀವತೇಯ್ದ ಹೃದಯವಂತರಿಗೆ ಮಾತ್ರ ಮೀಸಲಾಗಿತ್ತು. ಇದನ್ನು ನವೆಂಬರ್ ಒಂದನೇ ತಾರೀಖು ಕನ್ನಡ ರಾಜ್ಯೋತ್ಸವದ […]

ಬಾಪು ನೆನಪಿನಲ್ಲಿ

-ಸತ್ಯನಾರಾಯಣರಾವ್ ಅಣತಿ

ಬಾಪು ನೆನಪಿನಲ್ಲಿ
-ಸತ್ಯನಾರಾಯಣರಾವ್ ಅಣತಿ

ನಾವು ನಿನ್ನ ನೋಡುವ ಹೊತ್ತಿಗಾಗಲೇ ಅರೆಬೆತ್ತಲಾಗಿ ಕೋಲು ಹಿಡಿದು ನಡೆದಾಡುತ್ತಿದ್ದೆ ಇಬ್ಬರು ಹುಡುಗಿಯರ ಭುಜ ಹಿಡಿದು ಬಂದು ಕೂತು ಪ್ರಾರ್ಥನೆ ನಡೆಸುತ್ತಿದ್ದೆ ಪ್ರವಚನ ನೀಡುತ್ತಿದ್ದೆ ನಾನು ಚಿಕ್ಕವನಿದ್ದಾಗ ಪಿಕೆಟಿಂಗ್‍ಗೆ ಹೋಗಿ ಈಚಲಮರಕ್ಕೆ ಕಟ್ಟಿದ್ದ ಹೆಂಡದ ಗಡಿಗೆಗಳ ಒಡೆದು ಸಂಜೆವರೆಗೂ ಪೋಲೀಸ್‍ಠಾಣೆಯಲ್ಲಿ ಕೂತು ಬಂದಿದ್ದೆ ನೀನು ನಮ್ಮೂರಿಗೆ ಬಂದಾಗ ನೆಟ್ಟ ತೆಂಗಿನಮರಗಳ ನೆರಳಲ್ಲಿ ನಡೆದಾಡಿ ಎಳನೀರು ಕುಡಿದಿದ್ದೇನೆ ನೀನು ಕೂರುವ ಭಂಗಿಯಲ್ಲಿ ಕುಳಿತು ನಟಿಸಲು ಬೆನ್ ಕಿಂಗ್‍ಸ್ಲೆ ಅದೆಷ್ಟುದಿನ ಅಭ್ಯಾಸ ಮಾಡಿದ್ದ ಕುಡಿಯುವುದು ಬಿಟ್ಟಿದ್ದ ತಿನ್ನುವುದು ಬಿಟ್ಟಿದ್ದ ನಿನ್ನಂತೆ […]