ಪ್ರಿಯ ಓದುಗ ಬಂಧು,

ಪ್ರಿಯ ಓದುಗ ಬಂಧು,

ನಿಮ್ಮ ನೆಚ್ಚಿನ ‘ಸಮಾಜಮುಖಿ’ ಇನ್ನೆರಡು ತಿಂಗಳಲ್ಲಿ ನಿರಂತರ ಪ್ರಕಟಣೆಯ ಮೂರನೇ ವರುಷ ಪೂರೈಸಲಿದೆ. ಈ ಸಂದರ್ಭದಲ್ಲಿ ಪತ್ರಿಕೆ ಪ್ರಕಟಣೆಯ ಕಷ್ಟ-ಸುಖಕ್ಕೆ ಸಂಬಂಧಿಸಿದ ಒಂದೆರಡು ಅಂತರಂಗದ ಮಾತುಗಳು… ಬೌದ್ಧಿಕ ನೆಲೆಯಲ್ಲಿ ಅದೆಷ್ಟೇ ಆದರ್ಶ, ಪಾವಿತ್ರ್ಯ, ಪಾತೀರ್ವತ್ಯದ ಅಡಿಪಾಯದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಅಂತಿಮವಾಗಿ ಪತ್ರಿಕೆಯೊಂದು ಮಾರುಕಟ್ಟೆಯ ‘ಸರಕು’ ಎಂಬುದು ಕಹಿಸತ್ಯ. ಸರಕು ಎಂದಾಕ್ಷಣ ಲಾಭನಷ್ಟದ ಲೆಕ್ಕಾಚಾರ ರಂಗ ಪ್ರವೇಶಿಸುತ್ತದೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುವ ಎರಡು ವಸ್ತುಗಳೆಂದರೆ, ರೈತರ ಉತ್ಪನ್ನ ಮತ್ತು ಪತ್ರಿಕೆ. ಸಮಾಜಮುಖಿ ಮಾಸಿಕದ […]

ವೈದ್ಯರ ಸಂದರ್ಶನ

ವೈದ್ಯರ ಸಂದರ್ಶನ

ಡಾ.ಮಧುಸೂದನ ಕಾರಿಗನೂರು ಡಾ.ಮಧುಸೂದನ ಕಾರಿಗನೂರು ಅವರು ಖ್ಯಾತ ಶಸ್ತ್ರಚಿಕಿತ್ಸಕರು; ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಶಿರುಗುಪ್ಪದಲ್ಲಿ ವೃತ್ತಿನಿರತರು. ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ (ಎಎಸ್‌ಐ) ಕಾರ್ಯಕಾರಿ ಸಮಿತಿ ಸದಸ್ಯರು. ಸೃಜನ ಸೊಸೈಟಿ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.   ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕರ್ನಾಟಕದ ಪ್ರಥಮ ಮಹಿಳಾ ಹೃದ್ರೋಗ ತಜ್ಞರು. ಮೊದಲಬಾರಿಗೆ ಮಕ್ಕಳ ಹೃದ್ರೋಗ ವಿಭಾಗ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಭಾರತ ರತ್ನ ಅಬ್ದುಲ್ ಕಲಾಂ […]

ಕೊರೊನಾ ಜೊತೆಗೆ ಬದುಕುವ ಭರವಸೆ!

-ಕೆ.ಎಂ.ವೀರಮ್ಮ

ಕೊರೊನಾ ಜೊತೆಗೆ ಬದುಕುವ ಭರವಸೆ!
-ಕೆ.ಎಂ.ವೀರಮ್ಮ

ಕೊರೋನ ಸೋಂಕಿಗೊಳಗಾಗಿ, ಮನೆಯಲ್ಲೇ ಕ್ವಾರಂಟೈನಾಗಿ ಇಂದು ಈ ಬರಹ ಮುಗಿಸಿದೆ. ಒಂದೊಮ್ಮೆ ಈ ಬರಹ ಪತ್ರಿಕೆಯಲ್ಲಿ ಪ್ರಕಟವಾದರೆ ನಿಮ್ಮೆಲ್ಲರೊಂದಿಗೆ ಓದಿಕೊಳ್ಳಲು ‘ನಾನಿರುವೆ’ ಎಂಬ ಭರವಸೆಯೊಂದಿಗೆ ಪತ್ರಿಕೆಗೆ ರವಾನಿಸುತ್ತಿದ್ದೇನೆ. -ಕೆ.ಎಂ.ವೀರಮ್ಮ ಮೊನ್ನೆ ವರಮಹಾಲಕ್ಷ್ಮೀ ಹಬ್ಬದ ದಿನ ನನ್ನ ತಂಗಿ ಮನೆಗೆ ಬಂದವಳೇ ಶಾರದಾದೇವಿ ದೇವಸ್ಥಾನಕ್ಕೆ ಹೋಗಿಬರೋಣ ಬಾ ಎಂದಳು. `ಅಯ್ಯೋ ತೀರ ಅವಶ್ಯಕತೆ ಇದ್ದಾಗಷ್ಟೇ ಹೊರಗೆ ಕಾಲಿಡಿ ಅಂತ ಬೆಳಗಿನಿಂದ ರಾತ್ರಿವರೆಗೂ ಹೊಡ್ಕೊತಾರೆ. ಮನೆಯಿಂದಲೇ ಕೈಮುಗಿದು ಪ್ರಾರ್ಥನೆ ಮಾಡಿದರಾಗಲ್ಲವೇ?’ ಎಂದೆ. ಅದಕ್ಕವಳು, ‘ಇರ್ಲಿ ಬಾ ನಿತೀಶ ನೀಟ್ ಎಕ್ಸಾಂ […]

ಕೋವಿಡ್ ಕೊನೆಗೆ ದಾರಿ ಯಾವುದಯ್ಯ…?

- ಹೇಮಂತ್ ಎಲ್.

ಕೋವಿಡ್ ಕೊನೆಗೆ ದಾರಿ ಯಾವುದಯ್ಯ…?
- ಹೇಮಂತ್ ಎಲ್.

ಯೋಜನೆಯಂತೆ ಎಲ್ಲವೂ ನಡೆದರೆ ಈ ವರ್ಷದ ಕೊನೆಗೆ ಅಥವಾ 2021ರ ಮಧ್ಯಭಾಗದಲ್ಲಿ ಲಸಿಕೆ ಸಿದ್ಧವಾಗುತ್ತದೆ. ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದವರಿಗೆ ಲಸಿಕೆ ನೀಡಿ ಪಾಸಿಟಿವ್ ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆ ಮುಂದುವರೆಸಿದರೆ ಕೋವಿಡ್ ಗೆ ಕಡಿವಾಣ ಹಾಕಬಹುದು. – ಹೇಮಂತ್ ಎಲ್. ಕೊರೋನಾ ಯಾವಾಗ ಮರೆಯಾಗುತ್ತದೆ, ಜಗತ್ತು ಯಾವಾಗ ಸಹಜ ಸ್ಥಿತಿಗೆ ಮರಳುತ್ತದೆ? 2020ರ ಬಹುಮುಖ್ಯ ಪ್ರಶ್ನೆ ಇದು. ಕೊರೋನಾ ನಮ್ಮಲ್ಲೇ ನಮ್ಮೊಳಗೊಂದಾಗಿ ಉಳಿಯುತ್ತದೆಂದು ವಿಜ್ಞಾನಿಗಳು ಮತ್ತು ಪರಿಣತರು ಹೇಳಿಯಾಗಿದೆ. ಇನ್ನೇನಿದ್ದರೂ ಅದರ ಹಾವಳಿಯನ್ನು ನಿಯಂತ್ರಿಸಿ ಆಗಬಹುದಾದ […]

ಅನಿಸಿಕೆಗಳು

-ಎನ್.ಬೋರಲಿಂಗಯ್ಯ, ಮೈಸೂರು.

-ಎನ್.ಬೋರಲಿಂಗಯ್ಯ, ಮೈಸೂರು. ಸಹನೆ – ಇಂದಿನ ಅಗತ್ಯ 1) ಸೆಪ್ಟೆಂಬರ್ ತಿಂಗಳ ಸಮಕಾಲೀನದ ಆರೂ ಲೇಖನಗಳು ಪತ್ರಿಕೆಯ ಮುಖ್ಯ ಚರ್ಚೆಯಷ್ಟೇ ಆಕರ್ಷಕವಾಗಿರುವುದು ವಿಶೇಷ ಎನಿಸುತ್ತದೆ. ಮಂದಿರ ನಿರ್ಮಾಣದ ರಾಜಕೀಯ ಔಚಿತ್ಯವನ್ನು ಕುರಿತ ಮೂರೂ ಲೇಖನಗಳು ತಮ್ಮಷ್ಟಕ್ಕೆ ತಾವು ಅರ್ಥವತ್ತಾಗಿ ಕಂಡರೂ ಚಾರಿತ್ರಿಕ ಸನ್ನಿವೇಶದ ದೃಷ್ಟಿಯಿಂದ ಆರೋಗ್ಯಕರ ಚರ್ಚೆಯನ್ನು ಆಹ್ವಾನಿಸುವಂತಿರುವುದೂ ಗಮನಾರ್ಹ. ಸರಳವಾಗಿ ಹೇಳಬೇಕೆಂದರೆ, ಆಧುನಿಕಪೂರ್ವ ರಾಜಕೀಯ ಮತ್ತು ದೇವಮಂದಿರಗಳ ನಿರ್ಮಾಣದ ಒಡನಾಟ ಒಂದು ಬಗೆಯ ಮುಗ್ಧತೆಯ ಲೋಕಕ್ಕೆ ಸೇರಿದಂತಿದ್ದರೆ ಈಗ ಪ್ರಜಾಪ್ರಭುತ್ವ ಮತ್ತು ವೈಜ್ಞಾನಿಕ ಜಾಗೃತಿಯ ಸಂದರ್ಭದಲ್ಲಿ […]

ನಾನು ಮತ್ತು ವೈರಾಣು

- ಡಾ.ಕೆ.ಕೆ.ಜಯಚಂದ್ರ ಗುಪ್ತ

ನಾನು ಮತ್ತು ವೈರಾಣು
- ಡಾ.ಕೆ.ಕೆ.ಜಯಚಂದ್ರ ಗುಪ್ತ

– ಡಾ.ಕೆ.ಕೆ.ಜಯಚಂದ್ರ ಗುಪ್ತ ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಹುಟ್ಟೂರಿನಲ್ಲಿ ಸಿಡುಬು, ಸೀತಾಳೆ, ಡಡಾರ ಇತ್ಯಾದಿ ಜಡ್ಡುಗಳು ಆಗಾಗ ಬರುತ್ತಿದ್ದವು. ಊರಿನಲ್ಲಿ ಅದೆಷ್ಟೋ ಜನರಿಗೆ ತಗುಲಿ ಕೊನೆಗೊಮ್ಮೆ ಕಡಿಮೆಯಾಗುತ್ತಿದ್ದವು. ಬಳಿಕ ಮನೆಯವರೆಲ್ಲ ಹತ್ತಿರದ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಮನೆಗೆ ಬರುತ್ತಿದ್ದರು. 1956ರಲ್ಲಿ ಏಷ್ಯನ್ ಫ್ಲೂ ಎಂಬ ವೈರಾಣು ಸಮಸ್ಯೆ ಕಾಣಿಸಿಕೊಂಡಿತ್ತು. ಜ್ವರ, ಚಳಿ, ವಿಪರೀತ ತಲೆನೋವು ಹಾಗೂ ಅದಕ್ಕಿಂತ ಮುಖ್ಯವಾಗಿ ಕೆಂಪಡರಿದ ಕಣ್ಣುಗಳು ಈ ರೋಗದ ಲಕ್ಷಣಗಳಾಗಿದ್ದವು. ಇದು ಕ್ರಮೇಣ ಸಿಂಗಪೂರ […]

ಕೃಷಿ ಮಾರುಕಟ್ಟೆ ಮಸೂದೆಗಳು: ಶಾಸನಗಳ ಪಠ್ಯ v/s ಜನರ ಅಭಿಮತ

- ಹರೀಶ್ ದಾಮೊಧರನ್

ಕೃಷಿ ಮಾರುಕಟ್ಟೆ ಮಸೂದೆಗಳು:  ಶಾಸನಗಳ ಪಠ್ಯ v/s ಜನರ ಅಭಿಮತ
- ಹರೀಶ್ ದಾಮೊಧರನ್

ಈ ಶಾಸನಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡುವ ‘ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಒಂದು ಆರ್ಥಿಕ ವ್ಯವಸ್ಥೆಯಾಗಿದೆ ಎಂದು ಸರ್ಕಾರವು ಪ್ರತಿಪಾದಿಸಲು ಪ್ರಯತ್ನಿಸುತ್ತಿದೆ. – ಹರೀಶ್ ದಾಮೊಧರನ್ ಅನೇಕ ಪ್ರಸಂಗಗಳಲ್ಲಿ ಶಾಸನಗಳಿಗಿಂತ ಅವು ಏನನ್ನು ಪ್ರತಿಪಾದಿಸುತ್ತವೆ ಮತ್ತು ಸದರಿ ಶಾಸನಗಳನ್ನು ರೂಪಿಸಿದ ಸಂದರ್ಭ ಯಾವುದು ಎನ್ನುವ ಸಂಗತಿಗಳು ಹೆಚ್ಚು ಪ್ರಸ್ತುತವಾಗಿರುತ್ತದೆ. ಈ ಮಾತು ಸಂಸತ್ತಿನಲ್ಲಿ ಅನುಮೋದನೆ ಪಡೆದು ಶಾಸನವಾಗುತ್ತಿರುವ ‘ಫಾರ್ಮರ್ಸ ಪ್ರೋಡ್ಯೂಸ್ ಟ್ರೇಡ್ ಆಂಡ್ ಕಾರ್ಮಸ್ (ಪ್ರೋಮೋಶನ್ ಆಂಡ್ ಫೆಸಿಲಿಟೇಶನ್) ಶಾಸನ […]

ಸುದ್ದಿ ವಾಹಿನಿಗಳಿಗೆ ಬುದ್ಧಿ ಹೇಳುವುದು ಹೇಗೆ?

- ಎನ್.ರವಿಕುಮಾರ್ ಟೆಲೆಕ್ಸ್

ಸುದ್ದಿ ವಾಹಿನಿಗಳಿಗೆ ಬುದ್ಧಿ ಹೇಳುವುದು ಹೇಗೆ?
- ಎನ್.ರವಿಕುಮಾರ್ ಟೆಲೆಕ್ಸ್

ರಾಗಿಣಿ, ಸಂಜನಾ ಮತ್ತಿತರರು ಮಾಡಿರಬಹುದಾದ ಅಪರಾಧಗಳನ್ನು ಎತ್ತಿ ತೋರಿಸುವ ಅತ್ಯುತ್ಸಾಹದಲ್ಲಿ ಸುದ್ದಿ ವಾಹಿನಿಗಳು ವಿವೇಕ ಕಳೆದುಕೊಂಡು ತಮಗೆ ತಾವೆ ಬೆತ್ತಲಾಗುತ್ತಿವೆ! – ಎನ್.ರವಿಕುಮಾರ್ ಟೆಲೆಕ್ಸ್ ಡ್ರಗ್ಸ್ ದಂಧೆಯಲ್ಲಿ ಆರೋಪಿತರಾಗಿ ಕಟಕಟೆಯಲ್ಲಿರುವ ಚಿತ್ರತಾರೆಯರಾದ ರಾಗಿಣಿ, ಸಂಜನಾ ಮುಂತಾದವರು ಕನ್ನಡ ಚಿತ್ರರಂಗದ HOT STARಗಳೇ ನಿಜ. ಕಲೆಯ ವ್ಯಾಪ್ತಿಯಲ್ಲಿ ಅವರಿಗಿರಬಹುದಾದ ಪ್ರತಿಭಾ ಸಾಮರ್ಥ್ಯವೂ ಕೂಡ. ಈ ನಟಿಯರು ಸದ್ಯಕ್ಕೆ ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ‘Salable HOT Material’ಗಳಂತೆ ಬಳಕೆಯಾಗಲ್ಪಡುತ್ತಿದ್ದಾರೆ. ನೀವು ಗಮನಿಸಿರಬಹುದು. ಡ್ರಗ್ಸ್ ದಂಧೆ ಪ್ರಕರಣದಲ್ಲಿ ರಾಗಿಣಿ, ಸಂಜನಾ […]

ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ?

- ಡಿ.ಉಮಾಪತಿ

ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ?
- ಡಿ.ಉಮಾಪತಿ

ಸಾಂವಿಧಾನಕ ಸಂಸ್ಥೆಗಳು ಒಂದೊಂದಾಗಿ ಮೋದಿ ಯುಗದೊಂದಿಗೆ ಕೈ ಕುಲುಕಿರುವ ದುರಂತದ ನಡುವೆ ಬೆಳಕಿನ ಭರವಸೆಯಾಗಿ ಉಳಿದದ್ದು ಸುಪ್ರೀಮ್ ಕೋರ್ಟ್ ಮಾತ್ರವೇ. ಜನತಂತ್ರದ ಈ ಕಟ್ಟಕಡೆಯ ಕಂಬದಲ್ಲೂ ಬಿರುಕುಗಳು ಬಾಯಿ ತೆರೆದಿವೆ; ನ್ಯಾಯಮೂರ್ತಿಗಳ ನಡೆ ನುಡಿಗಳು, ತೀರ್ಪುಗಳ ಕುರಿತು ಪ್ರಶ್ನೆಗಳೆದ್ದಿವೆ. – ಡಿ.ಉಮಾಪತಿ 1990ರ ನಂತರ ದಶಕಗಳ ಕಾಲ ಸರ್ಕಾರಗಳನ್ನು ಮುತ್ತಿದ್ದ ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರದ ಕಾರಣ ದೇಶದ ನ್ಯಾಯಾಂಗ ‘ಧರ್ಮಯುದ್ಧ’ ನಡೆಸಿ, ಕಾರ್ಯಾಂಗದ ಕಾರ್ಯಭಾರವನ್ನು ತಾನೇ ಜರುಗಿಸಿತು. ಐತಿಹಾಸಿಕ ತೀರ್ಪುಗಳಿಂದಾಗಿ ಜನಮನ ಗೆದ್ದಿತು. ಏನೇ ಹಾಳು ಬಿದ್ದು […]

ಕೊರೊನಾ ವೈರಾಣು ಯಾವ ಅಂಗ? ಏನು ಪರಿಣಾಮ?

- ಡಾ.ವಸುಂಧರಾ ಭೂಪತಿ

ಕೊರೊನಾ ವೈರಾಣು  ಯಾವ ಅಂಗ? ಏನು ಪರಿಣಾಮ?
- ಡಾ.ವಸುಂಧರಾ ಭೂಪತಿ

ಈಗಾಗಲೇ ಕೊರೊನಾ ವೈರಸ್ ಲಕ್ಷಾಂತರ ಜನರನ್ನು ಸ್ಪರ್ಶಿಸಿ, ತಬ್ಬಿ ಬೈಬೈ ಹೇಳಿದೆ. ಒಮ್ಮೆ ಬೈಬೈ ಹೇಳಿದ್ದು ಮತ್ತೆ ವಾಪಾಸು ಬರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಕೊರೊನಾ ಶ್ವಾಸಕೋಶಕ್ಕೆ ನೇರವಾಗಿ ಲಗ್ಗೆ ಹಾಕಿದರೂ ಅನೇಕರಲ್ಲಿ ಹೃದಯದ ಬಾಗಿಲು ತಟ್ಟಿ ಜೀವವನ್ನೇ ಹೊತ್ತೊಯ್ದಿದೆ. ಇನ್ನು ಕೆಲವರಲ್ಲಿ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಿದೆ. ಹಾಗಾಗಿ ಕೊರೊನಾ ವೈರಾಣು ಮಾನವ ದೇಹದ ವಿವಿಧ ಅಂಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ವೈದ್ಯರು ಮತ್ತು ಜನಸಾಮಾನ್ಯರಲ್ಲಿ ಸಮಾನ ಕುತೂಹಲ, ಆತಂಕ ಹುಟ್ಟಿಸಿದೆ. ಈ […]

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

ಪ್ರವೇಶ

ಬೆಂಗಳೂರಿನ ವೃತ್ತಪತ್ರಿಕೆಗಳಲ್ಲಿ ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನೀವು ಓದಿರುತ್ತೀರಿ. ಆದರೆ ಮಲೆನಾಡು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸ್ಥಳೀಯ ವೃತ್ತಪತ್ರಿಕೆಗಳಲ್ಲಿ ಸರಿಸುಮಾರು ಪ್ರತಿದಿನವೂ ಈ ಕಾಡು-ನಾಡು ವೈಮನಸ್ಸಿನ ವರದಿಗಳನ್ನು ಓದಬೇಕಾಗುತ್ತದೆ. ಅಲ್ಲಲ್ಲಿ ಹುಲಿ-ಚಿರತೆಗಳ ಹಾವಳಿಯನ್ನು ನೀವು ಗಮನಿಸಿದ್ದರೆ ಇಲ್ಲಿ ದೈನಂದಿನ ಉಪಟಳವಾಗಿ ಕಾಡಾನೆಗಳ ದಾಂಧಲೆ ಕಾಣಿಸುತ್ತದೆ. ಪ್ರಾಣಭೀತಿ, ಬೆಳೆನಷ್ಟ ಹಾಗೂ ಕೆಲಸಗಾರರ ಪಲಾಯನದೊಂದಿಗೆ ಈ ಜಿಲ್ಲೆಗಳ ವನ್ಯಗಡಿ ತಾಲ್ಲೂಕುಗಳ ಕೃಷಿ ಆಧಾರಿತ ಬದುಕು ಡೋಲಾಯಮಾನವಾಗಿದೆ. ಇದೇಕೆ ಹೀಗೆ..? ಈ ತಾಲ್ಲೂಕುಗಳ […]

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

-ಮೋಹನದಾಸ್.

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?
-ಮೋಹನದಾಸ್.

ನಾವು ಚಾಪೆಯ ಕೆಳಗೆ ತಳ್ಳಿ ಗಡದ್ದಾಗಿ ನಿದ್ರೆ ಮಾಡುತ್ತಾ ನಿರ್ಲಕ್ಷಿಸಿರುವ ಹಲವು ವಿಷಯಗಳಲ್ಲಿ ಈ ಮುಖ್ಯವಿಷಯವೂ ಒಂದಾಗಿದೆ. ತಂದೆ-ತಾಯಿ-ಪೋಷಕರಾಗಲಿ ಅಥವಾ ವಾರಸುದಾರರಾಗಲಿ ಇರದ ಈ ಸಮಸ್ಯೆಯನ್ನು ನಾವು ಎತ್ತಿ ಹೇಳಲೇಬೇಕಾಗಿತ್ತು. ಏಕೆಂದರೆ ಈ ವಿಷಯ ಕಾಡಂಚಿನಲ್ಲಿ ವಾಸಮಾಡುತ್ತಿರುವ ನಿವಾಸಿಗಳ ಹಾಗೂ ಸಾಮಾನ್ಯ ರೈತರ ಬದುಕನ್ನು ಮೂರಾಪಾಲಾಗಿ ಮಾಡಹೊರಟಿದೆ. -ಮೋಹನದಾಸ್. ನಮ್ಮ ದೇಶದ ಹಲವು ಹೋಲಿ ಕೌ (ಪವಿತ್ರ ಅಸ್ಪೃಶ್ಯತೆ) ವಿಷಯಗಳಲ್ಲಿ ಅರಣ್ಯಗಳು ಹಾಗೂ ಅಲ್ಲಿನ ವನ್ಯಜೀವಿಗಳು ಕೂಡಾ ಸೇರಿವೆ. ಈ ತೆರನಾದ ವಿಷಯಗಳಲ್ಲಿನ ನಮ್ಮ ದ್ವಂದ್ವ ನಡವಳಿಕೆ […]

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕೊನೆಯೆಲ್ಲಿ?

- ಕೆ.ಜೀವನ್ ಚಿಣ್ಣಪ್ಪ

ಕೊಡಗಿನಲ್ಲಿ ಆನೆ-ಮಾನವ  ಸಂಘರ್ಷಕ್ಕೆ ಕೊನೆಯೆಲ್ಲಿ?
- ಕೆ.ಜೀವನ್ ಚಿಣ್ಣಪ್ಪ

ಯಾವುದನ್ನೂ ಯಾಚಿಸಿ ಪಡೆಯದ, ಕಷ್ಟವನ್ನು ಸರಕಾರದ ಜೊತೆ ಹೇಳಿಕೊಂಡರೂ ಪರಿಹಾರ ಸಿಗದ, ಸಿಗದಿದ್ದರೂ ಮುನಿಸಿಕೊಳ್ಳದ, ಕೊಡಗಿನ ಮುಗ್ಧ ಜನ ಮೌನವಾಗಿ ನೋವು ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ಹೊಂದಿಕೊಂಡು ಬದುಕುವ ನಮ್ಮ ಸಂಯಮ, ಶಕ್ತಿ, ಎಲ್ಲಿವರೆಗೆ ಇರುತ್ತೋ… ಕಾದು ನೋಡಬೇಕಾಗಿದೆ! – ಕೆ.ಜೀವನ್ ಚಿಣ್ಣಪ್ಪ   ಆಗಸ್ಟ್ 12ರಂದು “ವಿಶ್ವ ಆನೆ ದಿನ” ಆಚರಿಸಲ್ಪಟ್ಟಾಗ ಕೊಡಗಿನ ಮಟ್ಟಿಗೆ ಯಾವುದೇ ರೀತಿಯ ಆಡಂಬರವು ಕಂಡು ಬರದಿದ್ದದ್ದು ಅಸಹಜ ಎನಿಸಿಕೊಳ್ಳಲಿಲ್ಲ. ಏಕೆಂದರೆ ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ಎಡೆಬಿಡದೆ ಮುಂದುವರೆದಿದೆ. ಆನೆಗಳ ಮೇಲೆ ಪ್ರೀತಿ, […]

ನೆಲ-ಜಲ ಬಳಕೆಗೊಂದು ನೀತಿ ಇರಬೇಕಲ್ಲವೇ?

- ಡಾ.ಕೇಶವ ಎಚ್. ಕೊರ್ಸೆ

ನೆಲ-ಜಲ ಬಳಕೆಗೊಂದು  ನೀತಿ ಇರಬೇಕಲ್ಲವೇ?
- ಡಾ.ಕೇಶವ ಎಚ್. ಕೊರ್ಸೆ

ವನ್ಯಜೀವಿ ದಾಳಿ ಸಮಸ್ಯೆಗಳೆಲ್ಲವನ್ನೂ ಒಂದೇ `ರಾಮಬಾಣ’ದಿಂದ ಪರಿಹರಿಸಲಾಗದು. ಆಯಾ ಪ್ರದೇಶಕ್ಕನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ರೈತರಿಗೆ ನಿಜಕ್ಕೂ ಬೇಕಾದದ್ದು, ಸಶಕ್ತ ಹಾಗೂ ಜನಸಹಭಾಗಿತ್ವದ ಅರಣ್ಯ ಸಂರಕ್ಷಣಾ ನೀತಿ. ದೂರಗಾಮಿ ದೃಷ್ಟಿಕೋನವುಳ್ಳ ವಿವೇಕಪೂರ್ಣ ನೀತಿಯೊಂದಕ್ಕಾಗಿ ನಾವು ಪ್ರಯತ್ನಿಸಬೇಕಿದೆ. – ಡಾ.ಕೇಶವ ಎಚ್. ಕೊರ್ಸೆ   ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರಲ್ಲಿ ಸರ್ಕಾರ ಹಾಗೂ ಜನರೂ ಕೂಡ ಹೊಣೆಗಾರರೇ? ಸರ್ಕಾರದ ಜವಾಬ್ದಾರಿ ಇದ್ದೇ ಇದೆ. ನಾಡಿನ ಜಲಮೂಲವಾದ ಪಶ್ಚಿಮಘಟ್ಟದಲ್ಲಿ ಅದೆಷ್ಟು ಅರಣ್ಯ ಛಿದ್ರವಾಗುತ್ತಿದೆಯೆಂದರೆ, ಅಭಯಾರಣ್ಯಗಳ ಹೊರಗೆ ಒಂದೆರಡು ಚ.ಕಿ.ಮಿ. […]

ಮನುಷ್ಯ-ಪ್ರಾಣಿ ಸಂಘರ್ಷ; ಈಗೇನು? ಮುಂದೇನು?

- ಪ್ರಸಾದ್ ರಕ್ಷಿದಿ

ಮನುಷ್ಯ-ಪ್ರಾಣಿ ಸಂಘರ್ಷ; ಈಗೇನು? ಮುಂದೇನು?
- ಪ್ರಸಾದ್ ರಕ್ಷಿದಿ

ಇಡೀ ಘಟ್ಟ ಪ್ರದೇಶವನ್ನೇ ಸಂರಕ್ಷಿತ ಪ್ರದೇಶವನ್ನಾಗಿಸಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ ಮಾರ್ಗ. ಇದು ಪ್ರಾಣಿಗಳ ಉಳಿವಿಗೆ ಮಾತ್ರವಲ್ಲ ಇಡೀ ಪಶ್ಚಿಮಘಟ್ಟಗಳ, ಆ ಮೂಲಕ ಜೀವಸಂಕುಲದ ಉಳಿವಿಗೆ ಅನಿವಾರ್ಯ. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ… ನಮಗೂ ಇಲ್ಲ, ಆನೆಗಳಿಗೂ ಇಲ್ಲ! – ಪ್ರಸಾದ್ ರಕ್ಷಿದಿ ಕಾಡಾನೆಗಳಿಂದ, ಇತರ ಪ್ರಾಣಿಗಳಿಂದ ದಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. […]

ವನ್ಯಜೀವಿ-ಮಾನವ ಸಂಬಂಧ ಸಂಘರ್ಷವಲ್ಲ, ಒಡನಾಟ!

- ಅಖಿಲೇಶ್ ಚಿಪ್ಪಳಿ

ವನ್ಯಜೀವಿ-ಮಾನವ ಸಂಬಂಧ ಸಂಘರ್ಷವಲ್ಲ, ಒಡನಾಟ!
- ಅಖಿಲೇಶ್ ಚಿಪ್ಪಳಿ

ಸಾವಿರಾರು ವರ್ಷದಿಂದ ಕಾಡು ಮತ್ತು ನಾಡು ಸೌಹಾರ್ದಯುತವಾಗಿಯೇ ಬದುಕುತ್ತಿದ್ದವು. ಕಳೆದ ಐವತ್ತು ವರ್ಷಗಳಲ್ಲಿ ಇದು ಏರುಪೇರಾಗಿದೆ. ಸಮೃದ್ಧವಾದ, ವೈವಿಧ್ಯಮಯವಾದ ವನ್ಯಲೋಕ ಆ ಪ್ರದೇಶದ ಆರೋಗ್ಯದ ಸೂಚಕವೂ ಹೌದು. – ಅಖಿಲೇಶ್ ಚಿಪ್ಪಳಿ   ಮಾನವ-ವನ್ಯಜೀವಿ ಸಂಘರ್ಷವೆಂಬ ಪದಗಳಿಗೆ ಬಹಳ ದೊಡ್ಡ ಇತಿಹಾಸವಿಲ್ಲ. ಬಲು ಸಂಕೀರ್ಣವಾದ ಈ ವಿಷಯವನ್ನು ವಿಶಾಲ ಪರದೆಯ ಮೇಲೆ ನೋಡಬೇಕಾಗುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ 2/3 ಭಾಗ ಜೀವಿವೈವಿಧ್ಯ ನಾಶವಾಗಿದೆ ಎಂಬ ಜಾಗತಿಕ ವರದಿ; ಪ್ರಾಣಿಗಳಿಂದಾಗಿ ಸತ್ತ ಮನುಷ್ಯರ ಸಂಖ್ಯೆ; ಮನುಷ್ಯರಿಂದಾಗಿ ಸತ್ತ ಪ್ರಾಣಿಗಳ […]

ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..

- ಆರ್.ಕೆ.ಮಧು

ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..
- ಆರ್.ಕೆ.ಮಧು

ನಮ್ಮ ಜೀವನ ವನ್ಯಜೀವಿಗಳೊಂದಿಗೆ, ಪರಿಸರದೊಂದಿಗೆ ಇರಬೇಕು. ಇಲ್ಲಿ ಎಲ್ಲರಿಗೂ ಜೀವಿಸಲು ಹಕ್ಕಿದೆ. ಮುಖ್ಯವಾಗಿ ವನ್ಯಜೀವಿಗಳಿಗೆ. ಏಕೆಂದರೆ ಅವುಗಳಿಲ್ಲದಿದ್ದರೆ ನಾವಿಲ್ಲ. ಆದರೆ ನಾವಿಲ್ಲದಿದ್ದರೆ ಅವು ಸಂತಸದಿಂದ ಬದುಕುತ್ತವೆ! – ಆರ್.ಕೆ.ಮಧು    ಚಾಮರಾಜನಗರ ಜಿಲ್ಲೆ ವಿಸ್ತಾರವಾದ ಜೀವವೈವಿಧ್ಯಗಳ ನೆಲೆಯ ಹೊಂದಿರುವ ಅಭೇದ್ಯ, ಅದ್ಭುತ ಅರಣ್ಯಗಳ ಆಗರ. ಅಂತರ ರಾಜ್ಯಗಳೊಂದಿಗೆ ಹುಲಿ ಪ್ರದೇಶಗಳನ್ನು ಹೊಂದಿದ್ದು ಮಹದೇಶ್ವರ ಬೆಟ್ಟದಿಂದ ಬಂಡೀಪುರದವರೆಗೆ ವನ್ಯಜೀವಿಗಳ ನೆಮ್ಮದಿಗೆ ಬಹಳ ಹಿಂದಿನಿಂದಲೂ ನೆಲೆ ಒದಗಿಸಿತ್ತು. ಆದರೆ ಇಂದು ವನ್ಯಜೀವಿಗಳ ನೆಮ್ಮದಿಗೆ ಭಂಗಬಂದಿದೆ. ಅವೂ ಸಂಘರ್ಷ ನಡೆಸಬೇಕಿದೆ. ನೆಮ್ಮದಿಯ […]

ಮಾಡಿದ್ದುಣ್ಣೋ ಮಹಾರಾಯ…

- ಎ.ಸಿ. ಲಕ್ಷ್ಮಣ

ಮಾಡಿದ್ದುಣ್ಣೋ ಮಹಾರಾಯ…
- ಎ.ಸಿ. ಲಕ್ಷ್ಮಣ

ಎ.ಸಿ.ಲಕ್ಷ್ಮಣ ಅವರು ನಿವೃತ್ತ ಐಎಫ್.ಎಸ್. ಅಧಿಕಾರಿ; ರಾಜ್ಯ ಸರ್ಕಾರದ ಅರಣ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು. ಮಾನವ-ವನ್ಯಜೀವಿ ಸಂಘರ್ಷದ ಇತಿಹಾಸ ವಿವರಿಸುತ್ತಾ ವರ್ತಮಾನದ ವಾಸ್ತವತೆ ತೆರೆದಿಟ್ಟಿದ್ದಾರೆ. – ಎ.ಸಿ. ಲಕ್ಷ್ಮಣ   ಪ್ರಸ್ತುತ ಸಕಾಲದಲ್ಲಿ ಮಳೆ ಬರ್ತಿಲ್ಲ.. ಒಂದೆಡೆ ಅತಿವೃಷ್ಟಿ. ಮತ್ತೊಂದೆಡೆ ಅನಾವೃಷ್ಟಿ. ಪ್ರಕೃತಿಯಲ್ಲಿ ಅನಿರೀಕ್ಷಿತ ಏರುಪೇರು ಆಗುತ್ತಿವೆ. ಇವೆಲ್ಲಕ್ಕೂ ಕಾರಣ ಅರಣ್ಯ. ದುರಂತ ಅಂದರೆ ಅಮೂಲ್ಯ ಅರಣ್ಯ ಸಂಪತ್ತನ್ನು ಮನುಕುಲ ಮನಬಂದಂತೆ ಲೂಟಿ ಮಾಡುತ್ತಿದೆ. ಇದೆಲ್ಲದರ ಪರಿಣಾಮ ಮಾನವ-ವನ್ಯಜೀವಿ ಸಂಘರ್ಷಕ್ಕೆ ನಾಂದಿಯಾಗಿದೆ… ಈ ಸಂಘರ್ಷ ಅನ್ನೋ ಪದವನ್ನೇ […]

ಮಾನವ ನಿರ್ಮಿತ ಸಂಘರ್ಷ!

- ಕೆ.ಎಂ.ಚಿಣ್ಣಪ್ಪ

ಮಾನವ ನಿರ್ಮಿತ ಸಂಘರ್ಷ!
- ಕೆ.ಎಂ.ಚಿಣ್ಣಪ್ಪ

ನಿವೃತ್ತ ಅರಣ್ಯಾಧಿಕಾರಿ ಹಾಗೂ ವೈಲ್ಡ್ ಲೈಫ್ ಫಸ್ಟ್ ಸಂಘಟನೆ ರೂವಾರಿ ಕೆ.ಎಂ.ಚಿಣ್ಣಪ್ಪ ಅವರನ್ನು ಈ ಸಂಚಿಕೆಯ ಮುಖ್ಯಚರ್ಚೆ ವಿಷಯದ ಬಗ್ಗೆ ಸಮಾಜಮುಖಿ ಮಾತಿಗೆಳೆದಿದ್ದೇ ತಡ ತಮ್ಮಲ್ಲಿನ ಸಾತ್ವಿಕ ಆಕ್ರೋಶವನ್ನು ನಿರರ್ಗಳವಾಗಿ ಹೊರಹಾಕಿದರು.. – ಕೆ.ಎಂ.ಚಿಣ್ಣಪ್ಪ ವನ್ಯಜೀವಿ ಮಾನವ ಸಂಘರ್ಷ ಸಂಪೂರ್ಣವಾಗಿ ಮನುಕುಲದ ಸೃಷ್ಟಿ. ಮೂರು ದಶಕದಲ್ಲಿ ಇದು ಪರಾಕಾಷ್ಠೆ ತಲುಪಿದೆ. ಯಾಕೆ ಹೀಗೆ ಎಂದು ಸ್ವಲ್ಪ ಹಿಂದಿರುಗಿ ನೋಡಿದರೆ ನಮ್ಮ ತಪ್ಪುಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ. ವನ್ಯಜೀವಿಗಳು ಸ್ವಚ್ಛಂದವಾಗಿ ಅರಣ್ಯದಲ್ಲಿ ವಿಹರಿಸುತ್ತಿದ್ದವು. ಅವು ದುಷ್ಟ ಮಾನವನಂತೆ ಐಷಾರಾಮಿ ಬದುಕು […]

ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನ ಹೀಗಿರಲಿ

- ಸಹನಾ ಕಾಂತಬೈಲು

ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನ ಹೀಗಿರಲಿ
- ಸಹನಾ ಕಾಂತಬೈಲು

ಕಳೆದ ವರ್ಷ ನಾವು ಬೆಳೆದ 1,000ಕ್ಕಿಂತ ಅಧಿಕ ಬಾಳೆ, 90ಕ್ಕಿಂತ ಅಧಿಕ ತೆಂಗಿನ ಗಿಡಗಳನ್ನು ಆನೆ ತಿಂದು ಒಂದು ಲಕ್ಷಕ್ಕಿಂತ ಹೆಚ್ಚು ನಷ್ಟ ಆಗಿತ್ತು. ಸರಕಾರ ಕೊಟ್ಟ ಪರಿಹಾರ ಧನ ಕೇವಲ 22,000 ರೂಪಾಯಿ! – ಸಹನಾ ಕಾಂತಬೈಲು `ವನ್ಯಗಡಿ ತಾಲ್ಲೂಕುಗಳ ರೈತರು ನೂರಾರು ವರ್ಷಗಳಿಂದ ಬೇಸಾಯ-ತೋಟಗಾರಿಕೆ ಮಾಡಿದ ಜಮೀನುಗಳಲ್ಲಿಯೇ ಇಂದೂ ಕೂಡಾ ಕೃಷಿ ಮಾಡುತ್ತಿದ್ದಾರೆ. ಕಾಡಿನಲ್ಲಿ ನಡೆದಿರಬಹುದಾದ ಯಾವುದೇ ಆಗುಹೋಗುಗಳಿಗೂ ಇವರು ಕಾರಣರಲ್ಲ. ಇವರ ಊರುಗಳಲ್ಲಿನ ಜನಸಂಖ್ಯೆ-ಕೃಷಿಭೂಮಿಯೂ ಗಣನೀಯವಾಗಿ ಬದಲಾಗಿಲ್ಲ’- ಎಂಬುದೇ ಸತ್ಯಕ್ಕೆ ದೂರವಾದ ಮಾತು. […]