ನಿರ್ಗಮನದ ಸಿದ್ಧತೆ

ನಿರ್ಗಮನದ ಸಿದ್ಧತೆ

ವ್ಯಕ್ತಿಯೊಬ್ಬ ಅಸುನೀಗಿದಾಗ ಸಂತಾಪದ ಸಾಲಿನಲ್ಲಿ ‘ತುಂಬಲಾಗದ ನಷ್ಟ’ಪದ ಸಲೀಸಾಗಿ, ಸಹಜವಾಗಿ ಸೇರಿರುತ್ತದೆ. ಅಗಲಿದ ವ್ಯಕ್ತಿಗೆ ಸಂಬಂಧಿಸಿದ ಕುಟುಂಬ, ಗೆಳೆಯರು, ರಾಜಕೀಯ ಪಕ್ಷ, ಸಂಸ್ಥೆ, ಸಮುದಾಯ, ಕಾರ್ಯಕ್ಷೇತ್ರ… ಹೀಗೆ ಒಂದೆಡೆ ನಷ್ಟ ಸಂಭವಿಸಿದೆ ಎಂದು ಭಾವಿಸಲಾಗುತ್ತದೆ. ಕೆಲವು ಸಾವುಗಳು ವಿಶ್ವ, ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ಊರು, ಕೊನೆಗೆ ವಾಸಿಸುವ ಓಣಿಗಾದರೂ ನಷ್ಟ ಉಂಟು ಮಾಡಿರುತ್ತವೆ. ಇತ್ತೀಚೆಗೆ ‘ಮತ್ತೆ ಹುಟ್ಟಿ ಬಾ’ ಎಂಬ ಬೇಡಿಕೆಹೊತ್ತ ಸೋವಿ ಮುದ್ರಣದ ಫ್ಲೆಕ್ಸ್ ಪಟಗಳು ಗಲ್ಲಿಗಲ್ಲಿಗಳಲ್ಲಿ ರಾತ್ರೋರಾತ್ರಿ ಕಾಣಿಸಿಕೊಳ್ಳುತ್ತವೆ. ಮರುಹುಟ್ಟಿನ ಮೂಲಕವಾದರೂ ನಷ್ಟ ತುಂಬಿಸಿಕೊಳ್ಳುವ ಹತಾಶ […]

ಬೆಂಗಳೂರಿನಲ್ಲಿ ‘ಸಮಾಜಮುಖಿ’ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ

ಬೆಂಗಳೂರಿನಲ್ಲಿ ‘ಸಮಾಜಮುಖಿ’ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ

ಬೆಂಗಳೂರಿನಲ್ಲಿ ‘ಸಮಾಜಮುಖಿ’ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ ಸೆಪ್ಟೆಂಬರ್ 16ನೇ ತಾರೀಖು ಸಂಜೆ ಬೆಂಗಳೂರಿನಲ್ಲಿ ‘ಶ್ರೀ ಕೃಷ್ಣಾರ್ಜುನ’ ಯಕ್ಷಗಾನ ಆಖ್ಯಾನ ಏರ್ಪಡಿಸಲಾಗಿತ್ತು. ಉತ್ತರ ಕನ್ನಡ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರು ರಾಜಧಾನಿಯಲ್ಲಿ ಸಂಸ್ಥೆಯ ದಶಮಾನೋತ್ಸ ವದ ಸಂಭ್ರಮದ ಪ್ರಥಮ ಯಕ್ಷಗಾನ ಪ್ರದರ್ಶನ ನೀಡಿದರು. ಗ್ರಾಮೀಣ ಭಾಗದ ವಿವಿಧ ಜನಪದ ಕಲಾಪ್ರಕಾರಗಳು ಮತ್ತು ಪ್ರತಿಭಾವಂತ ಕಲಾವಿದರನ್ನು ಬೆಂಗಳೂರು ಮಹಾ ನಗರದ ಜನತೆಗೆ ಪರಿಚಯಿಸುವ, ದೇಸೀ ಕಲೆಯ ಸವಿಯುಣಿಸುವ ಉದ್ದೇಶದಿಂದ ಸಮಾಜಮುಖಿ ಪತ್ರಿಕಾ ಬಳಗ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ […]

ಈಗ ಯಾವ ವೃತ್ತಿಗೆ ಗೌರವ ಇದೆ?

ಪದ್ಮರಾಜ ದಂಡಾವತಿ

ಒಂದು ವೃತ್ತಿಗೆ ಗೌರವ ಬರುವುದು ಆ ವೃತ್ತಿಯಲ್ಲಿ ಕೆಲಸ ಮಾಡುವವರ ಪ್ರಾಮಾಣಿಕತೆಯಿಂದ, ನಿಷ್ಠೆಯಿಂದ, ಅವರು ಸಂಪಾದಿಸುವ ಪರಿಣತಿಯಿಂದ, ತೋರಿಸುವ ಶ್ರದ್ಧೆಯಿಂದ, ಬದ್ಧತೆಯಿಂದ, ರೂಢಿಸಿಕೊಳ್ಳುವ ಹಾಗೂ ಪ್ರತಿಪಾದಿಸುವ ಮೌಲ್ಯಗಳಿಂದ. ಈಗ ಶಿಕ್ಷಕ ವೃತ್ತಿಗೆ ಬರುವ ಎಷ್ಟು ಜನರಲ್ಲಿ ಈ ಗುಣಗಳನ್ನು ಕಾಣಬಹುದು? ನಾವು ಜೀವನದಲ್ಲಿ ನೆನಪಿಸಿಕೊಳ್ಳುವುದು ಇಬ್ಬರನ್ನು: ಒಬ್ಬಳು ತಾಯಿ, ಇನ್ನೊಬ್ಬರು ಶಿಕ್ಷಕ. ಇದು ನನ್ನ ಜೀವನಕ್ಕೂ ಅನ್ವಯಿಸುವ ಮಾತು. ಈಗ ನಾನು ಏನಾಗಿದ್ದೇನೆಯೋ ಅದಕ್ಕೆ ನನ್ನ ತಾಯಿ ಕಾರಣ ಹಾಗೂ ನನ್ನ ಶಿಕ್ಷಕರು ಕಾರಣ. ಹಾಗೆಂದು ನಾನು […]

ಇಷ್ಟಪಟ್ಟು ಆಯ್ದುಕೊಂಡರೆ ವೃತ್ತಿಯಲ್ಲಿ ನೆಮ್ಮದಿ

ಗುರುಪ್ರಸಾದ ಕುರ್ತಕೋಟಿ

ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುವ ಅತಿ ಮುಖ್ಯವಾದ ಗುರು ವೃತ್ತಿಯ ಆಯ್ಕೆಗೆ ಆಕರ್ಷಣೀಯ ಸವಲತ್ತುಗಳ ಜೊತೆಗೆ ವಿಶಿಷ್ಟ ಮಾನದಂಡವೂ ಇರಬೇಕು. 1980ರ ಆಚೀಚೆ ಇರಬಹುದು. ನಾನು ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ಅದೊಂದು ಸರಕಾರಿ ಪ್ರಾಥಮಿಕ ಶಾಲೆ. ನಮ್ಮ ತರಗತಿಗಂತೂ ಒಂದು ಸ್ವಂತದ್ದು ಅಂತ ಕಟ್ಟಡವೂ ಇರಲಿಲ್ಲ. ಒಂದು ಪುರಾತನ ಕಲ್ಲಿನ ಗುಡಿಯಲ್ಲಿ ನಮ್ಮ ದೈನಂದಿನ ಪಾಠಗಳು ಜರಗುತ್ತಿದ್ದವು. ನಮಗದೊಂದು ಕೊರತೆ ಅಂತಲೂ ಅನ್ನಿಸುತ್ತಿರಲಿಲ್ಲ. ಕಲಿಯಲು ಗುಡಿಯಾದರೇನು… ಮನೆಯಾದರೇನು? ಅಲ್ಲಿದ್ದವರು ಇಬ್ಬರು ಗುರುಗಳು. ಇಬ್ಬರದೂ ಗಾಂಧಿ ಟೋಪಿ, ಧೋತ್ರದ […]

ಬದಲಾಗಬೇಕಿದೆ ಪ್ರಭುತ್ವದ ಧೋರಣೆ ಮತ್ತು ಚಿಂತನೆ

ಜನಾರ್ದನ ಸಿ.ಎಸ್

ಒಂದೆಡೆ ಶಾಲೆಗಳು ಕಲಿಕೆಯ ಪ್ರಕ್ರಿಯೆಯನ್ನೇ ಒಂದು ಇಂದ್ರಜಾಲದ ವೇದಿಕೆಯನ್ನಾಗಿಸಿ ಪೋಷಕರನ್ನು ಹೊರಗಿಟ್ಟು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ಪೋಷಕರು ತಮ್ಮ ಮಕ್ಕಳು ಶಿಕ್ಷಣದ ಕೊನೆಯಲ್ಲಿ ಒಂದು ಉದ್ಯೋಗ ದೊರಕಿಸುವ ಪ್ರಮಾಣ ಪತ್ರ ಪಡೆದರೆ ಇಡೀ ಪ್ರಕ್ರಿಯೆ ಸಾರ್ಥಕ ಎಂಬ ಭಾವನೆಯಲ್ಲಿದ್ದಾರೆ. ಸೆಪ್ಟೆಂಬರ್ ಸಂಚಿಕೆಯ ಮುಖ್ಯಚರ್ಚೆ ವಿಷಯ ಕುರಿತು ನನ್ನ ಚಿಂತನೆ ಹೀಗಿದೆ: ಮೊದಲಿಗೆ ನೀವು ವಿಷಯ ಮಂಡಿಸಿರುವುದರಲ್ಲಿಯೇ ಶಿಕ್ಷಣದಲ್ಲಿ ಅಂಕಗಳಿಗೇ ಪ್ರಾಶಸ್ತ್ಯ ಎಂಬ ಸೂಚನೆ ಕಾಣುತ್ತಿದೆ. ಮೂರನೇ ವರ್ಗದ ಶಿಕ್ಷಣ ಅಥವಾ ಮೊದಲ ವರ್ಗದ ಶಿಕ್ಷಣ ಎಂದು […]

ನಿವೃತ್ತ ಶಿಕ್ಷಕರ ನಿಟ್ಟುಸಿರು!

ಜಿ.ರಂಗನಗೌಡ ನಿಲೋಗಲ್

ಸೆಪ್ಟೆಂಬರ್ ಸಂಚಿಕೆಯ ಮುಖ್ಯಚರ್ಚೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಸಂದರ್ಭದಲ್ಲಿ 4 ಅಂಶಗಳ ಬಗ್ಗೆ ಬೆಳಕು ಚೆಲ್ಲಬಹುದಾದರೆ… 1. ಮೊದಲ ದರ್ಜೆ ಶಿಕ್ಷಣ ಪಡೆದವರನ್ನ ಶಿಕ್ಷಕ ವೃತ್ತಿ ಏಕೆ ಆಕರ್ಷಿಸುತ್ತಿಲ್ಲ? ಸುಮಾರು 25-30 ವರ್ಷಗಳಿಂದೀಚಿಗೆ ಮೊದಲ ದರ್ಜೆಯ ಶಿಕ್ಷಣ ಪಡೆದವರೆಲ್ಲರ ಗುರಿ ಸಮಾಜದಲ್ಲಿ ವೈದ್ಯ/ಇಂಜಿನಿಯರ್, ಐಎಎಸ್/ಐಪಿಎಸ್… ಅಧಿಕಾರಿಗಳಾಬೇಕೆಂಬ ಪೂರ್ವಗ್ರಹ ಪೀಡಿತಕ್ಕೆ ಒಳಗಾಗಿದೆ. ಕಾರಣ ಸಮಾಜದಲ್ಲಿ ಇವರಿಗೆ ದೊರಕುವ ಸ್ಥಾನ-ಮಾನ, ಅಧಿಕಾರ ಹಾಗೂ ಆರ್ಥಿಕಾಭಿವೃದ್ಧಿಯ ಗುರಿ. ತಂದೆತಾಯಿ/ಪೋಷಕರಿಗೂ ಮಕ್ಕಳನ್ನ ಈ ಹೈಟೆಕ್ ವೃತ್ತಿಗಳಲ್ಲೇ ಕಾಣುವ ಹಂಬಲ. ಸಮಾಜ ವಿವಿಧ ವೃತ್ತಿಯವರನ್ನು […]

ಗುರು, ನೀ ಲಘುವಲ್ಲ!

ಡಾ.ಚಂದ್ರಕಲಾ ಹೆಚ್.ಆರ್

ಭಾರತದ ಸಂಸ್ಕೃತಿಗೆ ಧಕ್ಕೆಯಾದಾಗಲೆಲ್ಲಾ ಆಚಾರ್ಯರು, ಗುರುಗಳೇ ಅಲ್ಲಿ ನಿಂತಿರುವುದು. ಭಾರತ ಗುರುಪರಂಪರೆಯ ಸತ್ಯದರ್ಶನದಿಂದ ಹಿರಿಮೆ ಸಂಪಾದಿಸಿರುವುದರಿಂದಲೇ ಜಗತ್ತು ಭಾರತದೆಡೆಗೆ ಮುಖ ಮಾಡಿರುವುದು. ಇಂತಹ ಪರಂಪರೆಯನ್ನು ಶಿಕ್ಷಕರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿ ಪ್ರೇರೇಪಿಸುವುದರಿಂದ ಮಕ್ಕಳಲ್ಲಿ ಶಿಕ್ಷಕನಾಗುವ ಛಲ ಬಂದೀತು. ‘ಗುರು ನೀ ಲಘುವಲ್ಲ. ಲಘುವಾದರೆ (ವ್ಯಾಕರಣದ) ನೀ ಗುರುವೆ ಅಲ್ಲ’ ಎಂಬ ಗುರುತರ ಜವಾಬ್ದಾರಿಯಲ್ಲಿ ಶಿಕ್ಷಕನ ಪಾತ್ರವಿದೆ. ಆದರೆ ಇಂದು ಕೆಲವು ಶಿಕ್ಷಕರು ಪ್ರಕರಣಗಳಲ್ಲಿ ಸಿಲುಕಿ ಸಾರ್ವಜನಿಕರಿಂದ ಗೂಸ ತಿಂದು ಮಾಧ್ಯಮಗಳಲ್ಲಿ ರಾರಾಜಿಸಿ ಲಘುವಾಗುತ್ತಿರುವುದು ದುರಂತವೇ. ಹಿಂದೆ ಒಬ್ಬ […]

ಸಂವಾದವೆನ್ನುವುದು ಬೀದಿಜಗಳವಲ್ಲ!

ಡಾ.ದಿನೇಶ್ ನಾಯಕ್

ಸಮಾಜಮುಖಿ ಸೆಪ್ಟೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ರಾಜಾರಾಮ ತೋಳ್ಪಾಡಿ ಮತ್ತು ನಿತ್ಯಾನಂದ ಬಿ.ಶೆಟ್ಟಿಯವರ ‘ಸಿದ್ಧಾಂತಿಗಳ ರಾದ್ಧಾಂತ: ಒಂದು ಸ್ವ-ವಿಮರ್ಶೆ’ ಲೇಖನ ಬಹಳ ಮುಖ್ಯವಾದ ಕೆಲವು ಅಂಶಗಳನ್ನು ಪ್ರಸ್ತಾಪಿಸಿದೆ. ಈ ಚರ್ಚೆಯನ್ನು ಮುಂದುವರಿಸುವುದು ಈ ಕಾಲದ ಅತ್ಯಗತ್ಯ ಕಾರ್ಯಸೂಚಿ ಎಂದು ಭಾವಿಸಿ ಕೆಲವೊಂದು ವಿಚಾರಗಳನ್ನು ಇಲ್ಲಿ ಮಂಡಿಸುತ್ತೇನೆ. ಪ್ರಜಾಸತ್ತೆಯ ಮೂಲಾಧಾರಗಳು ಕಂಪನಕ್ಕೊಳಗಾಗುತ್ತಿರುವ ಒಂದು ಬಗೆಯ ಬಿಕ್ಕಟ್ಟಿನ ಸಾಂಸ್ಕೃತಿಕ-ರಾಜಕೀಯ ಸನ್ನಿವೇಶದಲ್ಲಿ ಇಂದು ನಾವೆಲ್ಲರೂ ಬದುಕುತ್ತಿದ್ದೇವೆ. ಈ ಬಿಕ್ಕಟ್ಟು ಅತ್ಯಂತ ಸಂಕೀರ್ಣವಾಗಿದೆ, ಹಾಗೆಯೇ ಬಿಗುವಿನಿಂದಲೂ ಕೂಡಿದೆ. ಇಂತಹ ಒಂದು ಪರಿಸ್ಥಿತಿ ಈ ಹಿಂದೆ […]

ಆರ್ಥಿಕ ಮಹಾಕುಸಿತದ ದುರಂತ!

ಡಾ.ಟಿ.ಆರ್.ಚಂದ್ರಶೇಖರ

ಪ್ರಧಾನಮಂತ್ರಿ ಮತ್ತು ಆಡಳಿತ ಪಕ್ಷದ ವಕ್ತಾರರು ’70 ವರ್ಷಗಳಲ್ಲಿ ಸಾಧಿಸಿದ್ದನ್ನು ಎನ್‍ಡಿಎ-2 ಸರ್ಕಾರವು 70 ದಿನಗಳಲ್ಲಿ ಸಾಧಿಸಿದೆ’ ಎಂಬುದನ್ನು ಗರ್ವದಿಂದ ಘೋಷಿಸುತ್ತಿರುತ್ತಾರೆ. ಆದರೆ ವಾಸ್ತವವಾಗಿ ನಮ್ಮ ಆರ್ಥಿಕತೆಯಲ್ಲಿ ಸಂಭವಿಸುತ್ತಿರುವುದೇನು? ಇದನ್ನು ಸಾಧನೆ ಎಂದು ಹೇಳಿಕೊಳ್ಳಬಹುದೆ? ಪ್ರಸ್ತುತ ಪ್ರಬಂಧದಲ್ಲಿ ಇಂದು ನಮ್ಮ ಆರ್ಥಿಕತೆಯು ಎದುರಿಸುತ್ತಿರುವ ಮಹಾ ಕುಸಿತದ ಕಾರಣ ಮತ್ತು ಪರಿಣಾಮಗಳನ್ನು ಪರಿಶೀಲಿಸಲಾಗಿದೆ. ಕಳೆದ ಆಗಸ್ಟ್ 23 ರಂದು ನಮ್ಮ ಆರ್ಥಿಕತೆ ಎದುರಿಸುತ್ತಿರುವ ಆರ್ಥಿಕ ಮಹಾ ಕುಸಿತದ ಹಿನ್ನೆಲೆಯಲ್ಲಿ ವಿತ್ತಮಂತ್ರ್ರಿ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ‘ಜಗತ್ತಿನಲ್ಲಿ ಆರ್ಥಿಕತೆಗಳು […]

ಹರಪ್ಪ ನಾಗರಿಕತೆ: ಪ್ರಾಚೀನ ವಂಶವಾಹಿ ಸಂಶೋಧನೆಗಳು ಹೇಳಿರುವುದೇನು?

ಹರ್ಷಕುಮಾರ್ ಕುಗ್ವೆ

ಹರಪ್ಪ ನಾಗರಿಕತೆ: ಪ್ರಾಚೀನ ವಂಶವಾಹಿ ಸಂಶೋಧನೆಗಳು ಹೇಳಿರುವುದೇನು?
ಹರ್ಷಕುಮಾರ್ ಕುಗ್ವೆ

ಸಂಶೋಧನೆಯ ಫಲಿತಾಂಶಗಳು ಮೊದಲಿನಿಂದಲೂ ವೈದಿಕಶಾಹಿ ಆಲೋಚನೆಗಳನ್ನು ಪ್ರತಿಪಾದಿಸುತ್ತಿದ್ದವರ ಹುಸಿ ಸಿದ್ಧಾಂತದ ಬುಡಕ್ಕೇ ಅಗ್ನಿಸ್ಪರ್ಶ ಮಾಡಿವೆ. ಈ ಕಾರಣದಿಂದಲೇ ಇವುಗಳನ್ನು ತಿರುಚಿ ಹೇಳುವ ಕೆಲಸ ಈಗಾಗಲೇ ಶುರುವಾಗಿದೆ. ಈ ಶತಮಾನದ ಅತ್ಯಂತ ಮಹತ್ವದ ಸಂಶೋಧನೆಗಳಲ್ಲಿ ಒಂದು ಎನ್ನಬಹು+ದಾದ ಹರಪ್ಪ ನಾಗರಿಕತೆಗೆ ಸಂಬಂಧಿಸಿ ಜನರ ವಂಶವಾಹಿ ಸಂಶೋಧನೆಗಳು ಕೊನೆಗೂ ಅಧಿಕೃತವಾಗಿ ಹೊರಬಂದಿವೆ. ಕಳೆದ ಒಂದೆರಡು ವರ್ಷಗಳಿಂದಲೂ ಈ ಸಂಶೋಧನೆಗಳ ಕುರಿತು ಸಂವಾದ-ವಾಗ್ವಾದಗಳು ನಡೆಯುತ್ತಲೇ ಇದ್ದವು. ಅಂತಿಮವಾಗಿ ಕಳೆದ ಸೆಪ್ಟೆಂಬರ್ 5 ಮತ್ತು 6ರಂದು ಅಂತರರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಾದ […]

ಭಾರತೀಯರನ್ನು ಒಗ್ಗೂಡಿಸಬಲ್ಲದೇ ಹಿಂದಿ?

ಹಿಂದಿ ಭಾಷೆ ದೇಶ ಒಗ್ಗೂಡಿಸಬಲ್ಲದು ಎಂಬ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ಹೇಳಿಕೆ ದಕ್ಷಿಣದ ರಾಜ್ಯಗಳು ಭುಗಿಲೇಳಲು ಕಾರಣವಾಯ್ತು. ಕೊನೆಗೆ ತಾವು ಹಿಂದಿ ದ್ವಿತೀಯ ಭಾಷೆಯಾಗಲಿ ಎಂದು ಹೇಳಿದ್ದಾಗಿ ಶಾ ಸಮಜಾಯಿಷಿ ನೀಡಿದರು. ಭಾರತದಂತಹ ಭಾಷಾ ವೈವಿಧ್ಯದ ರಾಷ್ಟ್ರದಲ್ಲಿ ಏಕಭಾಷಾ ಸೂತ್ರ ತಂದೊಡ್ಡುವ ಅಪಾಯಗಳನ್ನು ಕುರಿತು ಭಾಷಾತಜ್ಞ ಜಿ.ಎನ್.ದೇವಿ ಮತ್ತು ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಇಲ್ಲಿ ಬೆಳಕು ಚೆಲ್ಲಿದ್ದಾರೆ. ಅವರ ಸಂಭಾಷಣೆಯನ್ನು ನಿರ್ವಹಿಸಿದವರು ಅನುರಾಧಾ ರಾಮನ್. ಹಿಂದಿ ಎಲ್ಲರ ಭಾಷೆಯೇ? ಜಿ.ಎನ್.ದೇವಿ: ‘ಶಾ’ […]

ಅಸ್ಮಿತೆ: ಅಭಿವೃದ್ಧಿಯಷ್ಟೇ ಮುಖ್ಯ

ರಾಜೀವ್ ಭಾರ್ಗವ

ಅಸ್ಮಿತೆ: ಅಭಿವೃದ್ಧಿಯಷ್ಟೇ ಮುಖ್ಯ
ರಾಜೀವ್ ಭಾರ್ಗವ

ಒಕ್ಕೂಟ ವ್ಯವಸ್ಥೆಯು ಪ್ರಾದೇಶಿಕ ಜನರ ವಿಶಿಷ್ಟ ಚಹರೆ, ಸ್ವಂತಿಕೆ ಕಾಪಿಡಬೇಕಾಗುತ್ತದೆ. ಅಸ್ಮಿತೆ ಹದಗೆಡಿಸುವುದು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಕಾಶ್ಮೀರದಲ್ಲಿನ ಇಂದಿನ ಸನ್ನಿವೇಶದಲ್ಲಿ ಈ ಕುರಿತು ಒಂದು ವಿಶ್ಲೇಷಣೆ. ಆರ್ಥಿಕ ಪ್ರಗತಿಯ ಲಾಭ ಜನರಿಗೆ ಸಿಕ್ಕರೆ ಸಾಕು ಅವರು ತಮ್ಮ ಸ್ವಂತಿಕೆ ಹಕ್ಕು (ಐಡೆಂಟಿಟಿ) ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಎಂದು ಆಗಾಗ ನಾವು ಹೇಳುವುದುಂಟು. ಜನರಿಗೆ ಬೇಕಾಗಿರುವುದು ರೋಟಿ, ಕಪಡಾ ಔರ್ ಮಕಾನ್ ಅಷ್ಟೇ ಎಂಬುದೂ ಇದೇ ಧೋರಣೆ. ಮನುಷ್ಯನಿಗೆ ಹಣವೇ ಮುಖ್ಯ. ಹಣದ ಮುಂದೆ […]

ಭಾರತದ ಮುಸಲ್ಮಾನರು ದಂಗೆ ಏಳುತ್ತಾರಾ?

ಹರಿಪ್ರಸಾದ್ ಸಿಂಹ

ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಹೆಚ್ಚಾದಲ್ಲಿ ಭಾರತದ ಮುಸ್ಲೀಮರು ದಂಗೆ ಏಳುತ್ತಾರೆ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಈ ಮಾತುಗಳ ಹಿಂದಿನ ಭ್ರಮೆ ಮತ್ತು ದುಷ್ಟತನ ಬಿಚ್ಚಿಡುವ ವಾಸ್ತವ ಘಟನೆಗಳು ಹೀಗಿವೆ. 1992 ಮಾರ್ಚ್ ತಿಂಗಳ ಇಪ್ಪತ್ತೈದನೇ ತಾರೀಖು ಪಾಕಿಸ್ತಾನ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯಾಟದಲ್ಲಿ ವಿಶ್ವಕಪ್ ಫೈನಲ್ ಜಯಿಸಿದಾಗ ಇದೇ ಇಮ್ರಾನ್ ಖಾನ್ ಪಾಕ್ ತಂಡದ ನಾಯಕರಾಗಿದ್ದರು. ಅಂದು ಕಪ್ ಜಯಿಸಿದ ಖುಷಿಯಲ್ಲಿ ಮಾಧ್ಯಮಗಳಿಗೆ […]

ಮುಖ್ಯಚರ್ಚೆಗೆ ಪ್ರವೇಶ

ಉದ್ಯಮಶೀಲತೆಗೆ ಕರ್ನಾಟಕದಲ್ಲಿ ಒದಗಿಬಂದಿರುವ ತೊಡಕುಗಳೇನು..? ಸಾಫ್ಟ್‍ವೇರ್, ಆರ್ ಅಂಡ್ ಡಿ, ಆನ್‍ಲೈನ್ ಸರ್ವಿಸ್ ವಲಯಗಳಲ್ಲಿ ಹೆಸರು ಗಳಿಸಿದ್ದ ಕರ್ನಾಟಕದಲ್ಲಿ ಕ್ರಮೇಣ ಉದ್ಯಮಶೀಲತೆಗೆ ಕಡಿವಾಣ ಬೀಳುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಕಳೆದ ಹತ್ತುಹನ್ನೆರಡು ವರ್ಷಗಳಲ್ಲಿ ಯಾವುದೇ ಹೊಸ ಕೈಗಾರಿಕೆ, ಸ್ಥಳೀಯ ಉದ್ಯಮ ಹಾಗೂ ಹೂಡಿಕೆ ಸಾಧ್ಯವಾಗದ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾಗಿದೆಯೇ ಎಂಬ ಸವಾಲು ನಮ್ಮ ಮುಂದಿದೆ. ಸರಣಿಯಂತೆ ಕರ್ನಾಟಕದ ಉದ್ಯಮಗಳು ಬೇರೆಬೇರೆ ಕಾರಣಗಳಿಗೆ ಸೋಲು ಕಂಡಿವೆ. ಬಿಪಿಎಲ್, ಯುಬಿ-ಕಿಂಗ್‍ಫಿಶರ್, ಡೆಕ್ಕನ್ ಏವಿಯೇಶನ್ ಮತ್ತು ಈಗ ಕೆಫೆ ಕಾಫಿ ಡೇ […]

ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು..?

ಮೋಹನದಾಸ್

ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು..?
ಮೋಹನದಾಸ್

ಚರ್ಚೆಯ ವಿಷಯವೊಂದು ಮುಕ್ತವಾಗಿರಬೇಕು ಹಾಗೂ ಪೂರ್ವ ನಿರ್ಧಾರಿತವಾಗಿರಬಾರದು ಎಂದು ನೀವು ಬಯಸಬಹುದು. ನಿಮ್ಮ ಬಯಕೆಯು ಸಹಜವೂ ಆಗಿದೆ. ಆದರೆ ಕರ್ನಾಟಕದಲ್ಲಿ ಉದ್ಯಮಶಿಲತೆಗೆ ತೊಂದರೆಗಳೇನು ಎಂದು ನಾವು ಚರ್ಚಿಸುವ ಕಾಲ ಮುಗಿದುಹೋಗಿದೆ. ಈ ವಿಷಯದಲ್ಲಿ ನಾವು ಮುಕ್ತ ಚರ್ಚೆಯನ್ನು ಬಯಸಿದರೆ ಬಾಲಿಶವಾಗಿಯೂ ಹಾಗೂ ಸ್ಪಂದನೆ ರಹಿತವಾಗಿಯೂ ಕಾಣುವ ಅಪಾಯವಿದೆ. ಕಳೆದ ಒಂದು ದಶಕದ ಹಲವಾರು ಘಟನೆಗಳು ಕರ್ನಾಟಕದ ಉದ್ಯಮಶೀಲತೆಗೆ ಅಗಾಧ ಧಕ್ಕೆ ಉಂಟುಮಾಡಿ ಇದೀಗ ಒದಗಿಬಂದಿರುವ ತೊಡಕುಗಳನ್ನು ಪಟ್ಟಿ ಮಾಡಬೇಕಾದ ಅನಿವಾರ್ಯ ಕಾರ್ಯಕ್ಕೆ ನಮ್ಮನ್ನು ದೂಡಿವೆ. ಕರ್ನಾಟಕದ ಯಾವುದೇ […]

ಬೃಹತ್ ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್

ಸಂದರ್ಶನ: ಮೂರಾರಂ

ಬೃಹತ್ ಕೈಗಾರಿಕಾ ಮಂತ್ರಿ ಜಗದೀಶ್ ಶೆಟ್ಟರ್
ಸಂದರ್ಶನ: ಮೂರಾರಂ

ಜಗದೀಶ ಶೆಟ್ಟರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಈಗ ರಾಜ್ಯದ ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಮಂತ್ರಿ. ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು ಎಂಬ ಸಮಾಜಮುಖಿ ಮುಖ್ಯಚರ್ಚೆ ವಿಷಯ ಕುರಿತು ಅವರನ್ನು ಮಾತನಾಡಿಸಿದಾಗ… ಕಾಗದಪತ್ರ ಸರಿಯಿದ್ದರೆ ಭ್ರಷ್ಟಾಚಾರದ ಮಾತೇ ಬರುವುದಿಲ್ಲ ಕರ್ನಾಟಕದಲ್ಲಿ ಉದ್ಯಮಶೀಲತೆ ಕಡಿಮೆಯಾಗುತ್ತಿದೆ ಎಂದು ನಿಮಗನಿಸುತ್ತಿದೆಯೇ? ಇಲ್ಲ. ಹಾಗೊಮ್ಮೆ ಅಲ್ಪಸ್ವಲ್ಪ ಕಡಿಮೆಯಾಗಿದ್ದರೂ ಅದು ತಾತ್ಕಾಲಿಕ. ನೀವೇ ಗಮನಿಸಿ ನೋಡಿ, ಎಲ್ಲಾ ಸೆಕ್ಟರ್‍ಗಳಲ್ಲಿ ಉದ್ಯಮಶೀಲತೆ ಕಡಿಮೆಯಾಗಿಲ್ಲ. ಆಟೋಮೊಬೈಲ್, ಜವಳಿ ಹೀಗೆ ಕೆಲವೊಂದು ವಲಯಗಳಲ್ಲಿ ಒಂದಷ್ಟು ತೊಂದರೆಗಳು […]

ಹೋಟೆಲ್ ಉದ್ಯಮಿ ಡಾ.ಸದಾನಂದ ಮಯ್ಯ

ಸಂದರ್ಶನ: ರಂಗಸ್ವಾಮಿ ಮೂಕನಹಳ್ಳಿ

ಹೋಟೆಲ್ ಉದ್ಯಮಿ ಡಾ.ಸದಾನಂದ ಮಯ್ಯ
ಸಂದರ್ಶನ: ರಂಗಸ್ವಾಮಿ ಮೂಕನಹಳ್ಳಿ

ಖ್ಯಾತ ಹೋಟೆಲ್ ಉದ್ಯಮಿ ಡಾ.ಸದಾನಂದ ಮಯ್ಯ ಎಂ.ಟಿ.ಆರ್. ಕುಟುಂಬಕ್ಕೆ ಸೇರಿದವರು, ಮಯ್ಯಾ’ಸ್ ಬಿವರೇಸಸ್ ಅಂಡ್ ಫುಡ್ಸ್ ಸಂಸ್ಥಾಪಕರು; ಜನಿಸಿದ್ದು ಉಡುಪಿಯ ಪಾರಂಪಳ್ಳಿಯಲ್ಲಿ. ಪ್ರತಿಷ್ಠಿತ ಬಿ.ಎಂ.ಎಸ್. ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ‘ನ್ಯಾನೋ ಟೆಕ್ನಾಲಜಿ ಇನ್ ಫುಡ್ ಸೈನ್ಸ್’ ಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿ, ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‍ಗೂ ಭಾಜನರಾಗಿದ್ದರೆ. ಕರ್ನಾಟಕದಲ್ಲಿ ಉದ್ಯಮಶೀಲತೆ ಕಡಿಮೆಯಾಗುತ್ತಿದೆಯೇ? ಪ್ರಮುಖ ಕಾರಣಗಳೇನು? ಹೌದು, ಖಂಡಿತ ಉದ್ಯಮಶೀಲತೆ ಕಡಿಮೆಯಾಗಿದೆ. ಇದಕ್ಕೆ ಪ್ರಮುಖವಾಗಿ ಉದ್ಯಮಸ್ನೇಹಿ ವಾತಾವರಣ ಇಲ್ಲದೆ ಇರುವುದು ಕಾರಣ. ಮೊದಲೆಲ್ಲ ಗ್ಲೋಬಲ್ ಇನ್ವೆಸ್ಟ್ಮೆಂಟ್ ಮೀಟ್ […]

ಮಹಿಳಾ ಉದ್ಯಮಿಯ ಅನುಭವ ಕಥನ

ಶಾಂತಾಕುಮಾರಿ

ಕರ್ನಾಟಕದಲ್ಲಿ ಒಂದು ಉದ್ಯಮವನ್ನು ಸ್ಥಾಪಿಸಲು ಪ್ರಥಮ ಹಂತದಲ್ಲೇ ಎಷ್ಟೆಲ್ಲಾ ಕಾನೂನು ತೊಡಕುಗಳಿವೆ. ಇವನ್ನೆಲ್ಲಾ ದಾಟಿ ಉದ್ಯಮ ಸ್ಥಾಪಿಸಲು ವರ್ಷಗಟ್ಟಲೆ ಸಮಯ ಬೇಕು; ಅಷ್ಟೊತ್ತಿಗೆ ಓವರ್ ಹೆಡ್ಸ್ ವಿಪರೀತವಾಗಿರುತ್ತವೆ. ಮೊದಲು ಈ ಕಾನೂನು ತೊಡಕುಗಳನ್ನು ಸರಳೀಕರಿಸಿ ಲಂಚ ಪ್ರಭಾವಗಳನ್ನು ನಿವಾರಿಸಿದರಷ್ಟೇ ಉದ್ಯಮಗಳು ಕಣ್ತೆರೆಯಲು ಸಾಧ್ಯ. ಇತ್ತೀಚೆಗಿನ ಟೈಮ್ಸ್ ವರದಿ ಪ್ರಕಾರ ಸ್ಟಾರ್ಟ್‍ಅಪ್ ಸಿಟಿ ದೆಹಲಿ, ಸಿಲಿಕಾನ್ ಸಿಟಿ ಬೆಂಗಳೂರು ಅಲ್ಲ! ದೆಹಲಿಯಲ್ಲಿ ಸುಮಾರು 7039 ಸ್ಟಾರ್ಟ್‍ಅಪ್‍ಗಳು ಚಟುವಟಿಕೆಗಳಿಂದ ಕೂಡಿದ್ದರೆ ಬೆಂಗಳೂರಿನಲ್ಲಿ ಕೇವಲ 5234 ಸ್ಟಾರ್ಟ್‍ಅಪ್‍ಗಳು ನೋಂದಣಿಯಾಗಿವೆ. ಕರ್ನಾಟಕದ ಉದ್ಯಮರಂಗದಲ್ಲಿ […]

ತೊಡಕುಗಳ ನಡುವೆ… ಹುಡುಕಬೇಕಿದೆ ಹೊಸ ಮಾಡೆಲ್!

ನಿರೂಪಣೆ: ಸಂದೀಪ್ ಈಶಾನ್ಯ

ಅವರು ದಕ್ಷಿಣ ಕನ್ನಡದ ಯುವಕ; ಉದ್ಯಮ ಕುಟುಂಬಕ್ಕೆ ಸೇರಿದವರು. ವಿದೇಶದಲ್ಲಿ ಎಂಬಿಎ ವ್ಯಾಸಂಗ ಮಾಡಿ ದೊಡ್ಡ ವಾಣಿಜ್ಯ ಸಂಸ್ಥೆ ಕಟ್ಟುವ ಕನಸು ಹೊತ್ತು ಭಾರತಕ್ಕೆ ಹಿಂದಿರುಗಿದವರು. ಇಲ್ಲಿಗೆ ಬಂದಮೇಲೆ ಕುಟುಂಬದ ಸಾಂಪ್ರದಾಯಿಕ ಆಹಾರ ಸಂಸ್ಕರಣೆ ವ್ಯವಹಾರದ ಜೊತೆಗೆ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅದೇಕೋ ಲೇಖನದೊಂದಿಗೆ ತಮ್ಮ ಹೆಸರನ್ನು ಪ್ರಕಟಿಸಲು ಒಪ್ಪಲಿಲ್ಲ. ಆದರೆ ಈ ಯುವ ಉದ್ಯಮಿಯ ಅಭಿಪ್ರಾಯಗಳು ಗಮನಾರ್ಹ. ಇಂದಿನ ಉದ್ಯಮದ ಸ್ಥಿತಿ ಕುರಿತ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಉತ್ತರಿಸಲು ಆರಂಭಿಸಿದರು ಯುವ ಉದ್ಯಮಿ: ಪ್ರತಿಕ್ಷಣವೂ ನೂತನ […]

ಗೋಡಂಬಿ ಉದ್ಯಮ ಕಾಡುವ ಸಮಸ್ಯೆಗಳು

ಪ.ರಾಮಕೃಷ್ಣ ಶಾಸ್ತ್ರಿ

ಗೋಡಂಬಿ ಉದ್ಯಮ ಕಾಡುವ ಸಮಸ್ಯೆಗಳು
ಪ.ರಾಮಕೃಷ್ಣ ಶಾಸ್ತ್ರಿ

ಕರಾವಳಿಯ ಉದ್ಯಮಕ್ಕೆ ಬಲ ತುಂಬಿದ್ದು ಹೆಂಚು ಮತ್ತು ಗೋಡಂಬಿ ಕಾರ್ಖಾನೆಗಳು. ಬಳಕೆ ಕಡಿಮೆಯಾಗಿ ಹೆಂಚು ಉದ್ಯಮ ಅವಸಾನ ಕಂಡಿತು. ಇದೀಗ ಗೋಡಂಬಿ ಉದ್ಯಮ ಕೂಡ ತೂಗುಯ್ಯಾಲೆಯಲ್ಲಿದೆ. ಗೋಡಂಬಿ ಉದ್ಯಮ ಯಾವತ್ತಿಗೂ ನಿಶ್ಚಿಂತವಾಗಿ ನಡೆಸುವ ಉದ್ಯಮವಲ್ಲ. ಅದಕ್ಕೆ ಸವಾಲುಗಳ ಬೆಟ್ಟವನ್ನೇ ಹೊರುವ ತಾಕತ್ತು ಬೇಕಾಗುತ್ತದೆ. ದೇಶದಲ್ಲಿ ಬೆಳೆಯುವ ಕಚ್ಚಾ ಗೋಡಂಬಿ ಈ ಕಾರ್ಖಾನೆಗಳಿಗೆ ಯಾವ ಮೂಲೆಗೂ ಸಾಕಾಗುವುದಿಲ್ಲ. ಗುಡ್ಡ ಪ್ರದೇಶದಲ್ಲಿ ಗೋಡಂಬಿ ಕೃಷಿ ಮಾಡಿದರೂ ಬೆಳೆಗಾರರು ಅದರ ಲಾಭ-ನಷ್ಟದ ಕಡೆಗೂ ಗಮನ ಹರಿಸುತ್ತಾರೆ. ಬೆಳೆಗಾರನ ದೃಷ್ಟಿಯಲ್ಲಿ ಇದು ಅಡಕೆಯಂತೆ […]