9/11 ದುರಂತಕ್ಕೆ 18 ವರ್ಷ ಮರೆತೇನೆಂದರ ಮರೆಯಲಿ ಹ್ಯಾಂಗ…

ಹನುಮಂತರೆಡ್ಡಿ ಶಿರೂರು

9/11 ದುರಂತಕ್ಕೆ 18 ವರ್ಷ ಮರೆತೇನೆಂದರ ಮರೆಯಲಿ ಹ್ಯಾಂಗ…
ಹನುಮಂತರೆಡ್ಡಿ ಶಿರೂರು

9/11 ನಂತರ ನಡೆದ ಘಟನಾವಳಿಗಳೆಲ್ಲ ಈಗ ಚರಿತ್ರೆ. ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಕಾರ್ಯಾಚರಣೆ ನಡೆಸಿದ ಅಮೆರಿಕಾದ ಬೊಕ್ಕಸಕ್ಕೆ ಟ್ರಿಲಿಯನ್ಗಟ್ಟಲೆ ಡಾಲರ್ ಖೋತಾ, ಅದರ ಜೊತೆ ಬೆಲೆ ಕಟ್ಟಲಾರದಷ್ಟು ಜೀವ ನಾಶ. ಅದರಲ್ಲಿ ಅಸು ನೀಗಿದ 8000ಕ್ಕೂ ಅಧಿಕ ಅಮೆರಿಕನ್ ಸೈನಿಕರು, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಮಕ್ಕಳು ಮುದುಕರೆನ್ನದೇ ವಿನಾಕಾರಣ ಸತ್ತ 165000ಕ್ಕೂ ಹೆಚ್ಚು ಅಮಾಯಕರೂ ಸೇರಿದ್ದಾರೆ. ನನಗಿನ್ನೂ ಚೆನ್ನಾಗಿ ನೆನಪಿದೆ. 2001ರ ಸೆಪ್ಟೆಂಬರ್ 11. ಆಗ ನಾನು ಮಿಲ್ಲಿಪೋರ್ ಅನ್ನೋ ಸಂಸ್ಥೆಯಲ್ಲಿ ಪರಿಸರ ವಿಜ್ಞಾನಿಯಾಗಿದ್ದೆ. ತುರ್ತು ಕೆಲಸದ […]

ಸಾಲಮನ್ನಾ ಬೇಡವೆಂದ ಆರ್‍ಬಿಐ

ಪುರುಷೋತ್ತಮ ಆಲದಹಳ್ಳಿ

ರಾಜ್ಯ ಸರ್ಕಾರಗಳು ಸಾಲಮನ್ನಾ ಘೋಷಣೆ ಮಾಡುವ ವಿಷಯದಲ್ಲಿ ಕಡೆಗೂ ಆರ್‍ಬಿಐ ತನ್ನ ನಿರ್ಲಿಪ್ತತೆಯಿಂದ ಹೊರಬಂದಿದೆ. ಇತ್ತೀಚಿನ ಇಂಟರ್ನಲ್ ವರ್ಕಿಂಗ್ ಗ್ರೂಪ್‍ನ ವರದಿಯಲ್ಲಿ ಆರ್‍ಬಿಐ ರಾಜ್ಯ ಸರ್ಕಾರಗಳು ಸಾಲಮನ್ನಾ ಮಾಡಿದ್ದರ ಪ್ರತಿಕೂಲ ಪರಿಣಾಮಗಳನ್ನು ವಿಶ್ಲೇಷಿಸಿದೆ. ಈ ವರದಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲಮನ್ನಾದಂತಹ ಘೋಷಣೆಗಳನ್ನು ಮಾಡುವುದನ್ನು ಸಾರಾಸಗಟಾಗಿ ತಿರಸ್ಕರಿಸಿದೆ. “ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೃಷಿ ನೀತಿ ಮತ್ತು ಅದರ ಅನುಷ್ಠಾನವನ್ನು ಸಮಗ್ರವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಪ್ರಸ್ತುತ ಕೃಷಿ ಸಬ್ಸಿಡಿ ನೀತಿ ಹಾಗೂ ಕೃಷಿ […]

ವಿಶ್ವ ವಿದ್ಯಮಾನ

ಪುರುಶೋತ್ತಮ ಆಲದಹಳ್ಳಿ

ಸೌದಿ ಅರೇಬಿಯಾಗೆ ಬಂದಿಳಿದ ಶಿಯಾ-ಸುನ್ನಿ ಬಿಕ್ಕಟ್ಟು ಇಸ್ಲಾಮಿಕ್ ಶಿಯಾ ಪಂಗಡದ ಇರಾನ್‍ನ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನದ ಬಿಕ್ಕಟ್ಟು ಇದೀಗ ಸೌದಿ ಅರೇಬಿಯಾದ ನೆಲಕ್ಕೆ ಕಾಲಿಟ್ಟಿದೆ. ಇರಾನಿನ ಸರ್ಕಾರದಿಂದ ಬೆಂಬಲಿತರಾದ ಯೆಮೆನ್‍ನ ‘ಹೂಥಿ’ ಬಂಡುಕೋರರು ಸೆಪ್ಟೆಂಬರ್ 14 ರಂದು ದಕ್ಷಿಣ-ಪೂರ್ವ ಸೌದಿ ಅರೇಬಿಯಾದಲ್ಲಿನ ತೈಲ ಸಂಸ್ಕರಣ ಘಟಕಗಳ ಮೇಲೆ ಡ್ರೋನ್ ಹಾಗೂ ಕ್ರೂಸ್ ಕ್ಷಿಪಣಿ ದಾಳಿ ಮಾಡಿದ್ದಾರೆ. ಅಪಾರ ಪ್ರಮಾಣದ ನಷ್ಟದ ಜೊತೆಗೆ ಸೌದಿ ಅರೇಬಿಯಾದಿಂದ ಜಾಗತಿಕ ತೈಲ ಮಾರುಕಟ್ಟೆಗೆ ಪೂರೈಕೆಯಾಗುವ ಕಚ್ಚಾತೈಲದ ಸರಬರಾಜಿನ ಮೇಲೆಯೂ ಇದು […]

ಮೌನಓದಿಗೆ ಹೊಸಬಗೆಯ ತಾಣ ಸೈಲೆಂಟ್ ಬುಕ್ ಕ್ಲಬ್

ಕಾದಂಬಿನಿ

ಮೌನಓದಿಗೆ ಹೊಸಬಗೆಯ ತಾಣ ಸೈಲೆಂಟ್ ಬುಕ್ ಕ್ಲಬ್
ಕಾದಂಬಿನಿ

ಸೈಲೆಂಟ್ ಬುಕ್ ಕ್ಲಬ್ ಗಳು ಇಂದು ಪ್ರಪಂಚದಾದ್ಯಂತ ಹಬ್ಬಿಕೊಂಡಿದ್ದು ಓದಿನ ಸಂಸ್ಕೃತಿಯನ್ನು ವಿನೂತನವಾಗಿ ಮುಂದುವರೆಸುತ್ತಿರುವುದು ಮಾತ್ರವಲ್ಲದೆ ಅಂತರ್ಮುಖಿಗಳು ಸಾಮಾಜಿಕವಾಗಿ ಬೆರೆಯಲು ಅವಕಾಶವನ್ನು ಕಲ್ಪಿಸುತ್ತಿವೆ. ಸಮಾನ ಮನಸ್ಕರು ಒಂದೆಡೆ ಸೇರಿ ನಿಮ್ಮೂರಲ್ಲೂ ಇಂತಹ ಒಂದು ಕ್ಲಬ್ ಸ್ಥಾಪಿಸಬಾರದೇಕೇ? ನೋಡ ನೋಡುತ್ತ ಒಬ್ಬೊಬ್ಬರಾಗಿ ಬಂದು ಗುಂಪುಗೂಡುತ್ತಾರೆ. ಆದರೆ ಅವರು ಮಾತನಾಡುತ್ತಿಲ್ಲ. ಬಾರಿನ ಕುರ್ಚಿಗಳಲ್ಲಿ ಅವರು ಆಸೀನರಾಗುತ್ತಾರೆ. ಆದರೆ ಅವರು ಕುಡಿಯುವುದಿಲ್ಲ. ಮೇಜಿನ ಮೇಲೆ ನೀರಿನ ಉಂಗುರದ ಕಲೆಗಳಿದ್ದ ಜಾಗದಲ್ಲಿ ಪೇಪರ್ ಬ್ಯಾಕ್‍ಗಳು ಅಲಂಕರಿಸುತ್ತವೆ ಮತ್ತವರ ಬ್ಯಾಕ್‍ಪ್ಯಾಕ್‍ಗಳು ಕುರ್ಚಿಗಳ ಬೆನ್ನಿಗೆ ತೂಗುಬೀಳುತ್ತವೆ. […]

ಔಷಧಿ ಪ್ರಸವಿಸುವ ಸುಧಾರಿತ ತಂತ್ರಜ್ಞಾನಗಳು

ಡಾ.ಜೆ.ಎಸ್.ಪಾಟೀಲ

ಔಷಧಿ ಪ್ರಸವಿಸುವ ವ್ಯವಸ್ಥೆಯ ಕ್ಷೇತ್ರದಲ್ಲಿ ಕಳೆದ ಕೆಲವು ದಶಕಗಳಿಂದ ಬಹಳ ನಾಟಕೀಯ ಬದಲಾವಣೆಗಳು ಘಟಿಸಿವೆ ಮತ್ತು ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗುತ್ತಿದೆ. ಒಂದು ಔಷಧಿಯು ಆವಿಷ್ಕಾರಗೊಂಡು ಮಾರುಕಟ್ಟೆ ಪ್ರವೇಶಿಸುವ ಹಂತದಲ್ಲಿ ಅದು ರೋಗಿಯ ದೇಹದಲ್ಲಿ ಪ್ರಸವಿಸಲು ಅನುಕೂಲವಾಗುವಂತಹ ಸೂಕ್ತ ವಿಧಾನವನ್ನು ಔಷಧ ವಿಜ್ಞಾನಿಗಳು ವಿನ್ಯಾಸಗೊಳಿಸುತ್ತಾರೆ. ಸೂಕ್ತ ವಿನ್ಯಾಸವಿಲ್ಲದೆ ಕೇವಲ ಮೂಲಭೂತ ಔಷಧಿಯನ್ನು ಪದ್ರೂಪದಲ್ಲಿ ರೋಗಿಗೆ ನೀಡಲಾಗುವುದಿಲ್ಲ. ಈ ವಿಧಾನವನ್ನು ಔಷಧ ಪ್ರಸವಿಸುವ ವ್ಯವಸ್ಥೆ (Drug Delivery System) ಎಂದು ಕರೆಯುತ್ತಾರೆ. ಇದೊಂದು ಸುಧಾರಿತ ತಂತ್ರಜ್ಞಾನಗಳಿಂದ ವಿನ್ಯಾಸಗೊಳಿಸಿದ ಹಾಗೂ […]

ಇತ್ತೀಚೆಗಿನ ಹೊಸ ಆವಿಷ್ಕಾರಗಳು!

ಎಲ್.ಪಿ.ಕುಲಕರ್ಣಿ, ಬಾದಾಮಿ.

ಇತ್ತೀಚೆಗಿನ ಹೊಸ ಆವಿಷ್ಕಾರಗಳು!
ಎಲ್.ಪಿ.ಕುಲಕರ್ಣಿ, ಬಾದಾಮಿ.

ಮಾನವನ ಬದುಕಿಗೆ ಗತಿ ಮತ್ತು ಗರಿ ಮೂಡಿಸಬಲ್ಲ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಕೆಲವು ಕುತೂಹಲಕಾರಿ ಸಂಶೋಧನೆಗಳು ಇಲ್ಲಿವೆ. ಕಾರ್ಬನ್ ಡೈಆಕ್ಸೈಡ್: ಅನಿಲರೂಪದಿಂದ ಘನರೂಪದೆಡೆಗೆ! ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲೊಂದು ಈ ಕಾರ್ಬನ್ ಡೈ ಆಕ್ಸೈಡ್ (ಅಔ2) ಅನಿಲ. ಈ ವಿಷಕಾರಿ ಅನಿಲವನ್ನು ನಿಯಂತ್ರಿಸಲು ಅದನ್ನು ಅನಿಲ ರೂಪದಿಂದ ಘನರೂಪಕ್ಕೆ ಪರಿವರ್ತಿಸುವ ಮಹತ್ವದ ಸಂಶೋಧನೆಯು ಮೆಲ್ಬೋರ್ನ್ ನ ಆರ್.ಎಂ.ಐ.ಟಿ. ವಿಶ್ವವಿದ್ಯಾಲಯದ ಸಂಶೋಧಕರಿಂದ ಅಭಿವೃದ್ಧಿಗೊಂಡಿದೆ. ಇದರ ಮೂಲಕ ಕಾರ್ಬನ್ ನ್ನು ಬಂಧಿಸಿಟ್ಟು ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ನ್ನು ಸುರಕ್ಷಿತವಾಗಿ ಮತ್ತು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ಭಾರತದ ಜನಗಣತಿ 19ನೇ ಶತಮಾನದಿಂದಲೇ ನಡೆದುಕೊಂಡು ಬಂದಿರುವ ದಶವಾರ್ಷಿಕ ಚಟುವಟಿಕೆ. ಈ ಚಟುವಟಿಕೆಯ 15ನೇ ಆವೃತ್ತಿ 2011ರಲ್ಲಿ ನಡೆದಿತ್ತು. 121 ಕೋಟಿಗೂ ಹೆಚ್ಚು ಭಾರತೀಯರಿದ್ದಾರೆಂದೂ, ಕರ್ನಾಟಕದ ಜನಸಂಖ್ಯೆ 6.1 ಕೋಟಿ ದಾಟಿದೆಯೆಂದೂ ನಮಗೆ ತಿಳಿದದ್ದು ಆಗಲೇ. ಮುಂದಿನ ಜನಗಣತಿ 2021ರಲ್ಲಿ ನಡೆಯಲಿದ್ದು, ಅದಕ್ಕೆ ಪೂರ್ವತಯಾರಿ ಈಗಾಗಲೇ ಪ್ರಾರಂಭವಾಗಿದೆ. ಈ ಬಾರಿಯ ಗಣತಿಯಲ್ಲಿ ಕಾಗದದ ಬದಲು ಮೊಬೈಲ್ ಆಪ್ ಬಳಕೆಯಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಆ ದೃಷ್ಟಿಯಿಂದ ಇದು ಡಿಜಿಟಲ್ ಜನಗಣತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. […]

ಅಮೆಜಾನ್ ಮಳೆಕಾಡಿಗೆ ಅಗ್ನಿಪರೀಕ್ಷೆ

ಟಿ.ಆರ್.ಅನಂತರಾಮು

ಭೂ ಇತಿಹಾಸದಲ್ಲಿ 560 ಲಕ್ಷ ಮತ್ತು 340 ಲಕ್ಷ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿದೆ ಅಮೆಜಾನ್ ಕಾಡು. ಹಿಮಯುಗವನ್ನು ಎದುರಿಸಿ ಎದ್ದು ನಿಂತ ಕಾಡಂತೆ ಇದು. ನಮ್ಮ ಭೂಮಿಯ ಮೇಲಿನ ಶೇ.20 ಭಾಗ ಆಕ್ಸಿಜನ್‍ಗೆ  ಅಮೆಜಾನ್ ಕಾಡಿನ ಕೊಡುಗೆ ಇದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಆ ಲೆಕ್ಕದಲ್ಲಿ ಭೂಮಿಯ ಇಡೀ ಜೀವಿ ಸಂಕುಲವೇ ಅಮೆಜಾನ್ಕಾಡಿಗೆ ಋಣಿ. ಅದಕ್ಕೇ ಅಮೆಜಾನ್ ಮಳೆಕಾಡಿಗೆ `ಭೂಮಿಯ ಶ್ವಾಸಕೋಶ’ ಎಂಬ ಬಿರುದು. ಇದೇ ಕಾರಣಕ್ಕೆ, ಅಲ್ಲಿ ಬೆಂಕಿಬಿದ್ದರೆ ಜಗತ್ತೇ ಬೆಚ್ಚಿಬೀಳುತ್ತದೆ. ಅಮೆಜಾನ್ ಕಾಡಿಗೆ ತಗುಲಿದ ಬೆಂಕಿಯ ಕಾರಣ, ರಾಜಕಾರಣ, ಜಾಗತಿಕ […]

‘ಬೇಗಂಪುರ’

ಬಲಬೀರ್ ಮಾಧೋಪುರಿ

‘ಬೇಗಂಪುರ’
ಬಲಬೀರ್ ಮಾಧೋಪುರಿ

ಸಂತಕವಿ ಗುರು ರವಿದಾಸರ ಸಮತೆ ಕನಸಿನ ನಾಡು ‘ಬೇಗಂಪುರ’ ಹದಿನಾಲ್ಕನೇ ಶತಮಾನದ ಸಂತ ಕವಿ ಗುರು ರವಿದಾಸರು ಸಮಾಜದ ಎಲ್ಲ ವರ್ಗದ ಜನರೂ ಮೇಲು ಕೀಳಿಲ್ಲದೆ ಬಾಳಬಲ್ಲಂಥ ಸಮಸಮಾಜದ ಕನಸನ್ನು ಕಂಡರು. ಅವರು ಅಂತಹ ಆದರ್ಶ ಸಮಾಜವನ್ನು ‘ಬೇಗಂಪುರ’ ಎಂಬ ಹೆಸರಿನಿಂದ ಕರೆದರು. ‘ಬೇಗಂಪುರ’ ಎಂದರೆ ನೋವಿಲ್ಲದ ನೆಲ. ಗುರು ರವಿದಾಸರು 16 ರಾಗಗಳಲ್ಲಿ ಸಂಯೋಜಿದ 40 ಕಂದಗಳು ‘ಗುರುಗ್ರಂಥ ಸಾಹಿಬ್’ನ ಭಾಗವಾಗಿವೆ. ಅದರ ಹೊರತಾಗಿಯೂ ದೇವ ಹಾಗೂ ನಿರ್ಗುಣ ತತ್ವಗಳ ಕುರಿತು ಅವರು ಬರೆದ ಅನೇಕ ಪದ್ಯಗಳು […]

ಜಿ.ಎನ್.ನಾಗರಾಜ್ ಅವರ ನಿಜರಾಮಾಯಣದ ಅನ್ವೇಷಣೆ

ಡಾ.ರಾಜೇಗೌಡ ಹೊಸಹಳ್ಳಿ

ಜಿ.ಎನ್.ನಾಗರಾಜ್ ಅವರ  ನಿಜರಾಮಾಯಣದ ಅನ್ವೇಷಣೆ
ಡಾ.ರಾಜೇಗೌಡ ಹೊಸಹಳ್ಳಿ

ಈ ಕೃತಿಯು ರಾಮಾಯಣ ಪೂರ್ವಕಾಂಡ ಹಾಗೂ ಉತ್ತರಖಾಂಡವೆಂದು (15+20) ಅಧ್ಯಾಯ ಮಾಡಿಕೊಂಡಿದೆ. ಇಷ್ಟಾದರೂ ಈ ಪುಸ್ತಕದ ಮಿತಿ ಕೇವಲ 169 ಪುಟ. ಪಿರಿದನ್ನು ಕಿರಿದಾಗಿ ಹೇಳುವ ಹೊಸ ಸಂಶೋಧನಾ ಪರಿಷ್ಕಾರ. ಈ ಕೃತಿಯು ಲೇಖಕರೇ ಹೇಳುವಂತೆ ಒಂದು ಅನ್ವೇಷಣೆ ಅರ್ಥಾತ್ ಸಂಶೋಧನೆ. ಪತ್ರಿಕೆಯೊಂದಕ್ಕೆ ಅಂಕಣರೂಪದಲ್ಲಿ ಬರೆದ ರಾಮಾಯಣಗಳ ನಿಜಸಾರ. ಎ.ಕೆ.ರಾಮಾನುಜಂ ಅವರ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಿವೆ ಎಂಬ ಅನ್ವೇಷಣೆ ರೂಪದ ಪಠ್ಯವೊಂದನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಬಿಟ್ಟ ವಿಚಾರವಿದೆಯಷ್ಟೆ. ಅಂದರೆ ವಾಲ್ಮೀಕಿ ರಾಮಾಯಣವೊಂದಕ್ಕೆ ದೇಶದಲ್ಲಿ ಪಠ್ಯವಾಗುವ ಅವಕಾಶ. […]

ಸಸ್ಯೋದ್ಯಾನ ಕಾರ್ಮಿಕನ ‘ಪಕ್ಷಿನೋಟ’

ಡಾ.ನದಾಫ ಹತ್ತಿಮತ್ತೂರು.

ವ್ಯಕ್ತಿಯ ಸಚ್ಚಾರಿತ್ರ್ಯ ವ್ಯಕ್ತಿತ್ವಕ್ಕೆ ಒಡನಾಟ ಬಹುಮುಖ್ಯವಾಗುತ್ತದೆ. ನಾವು ಯಾರ ಜೊತೆಯಲ್ಲಿ ನಮ್ಮ ಒಡನಾಟವನ್ನು ಇಟ್ಟುಕೊಂಡಿರುತ್ತೇವೆಯೋ ಅಂಥವರ ಗುಣಗಳು ನಮ್ಮನ್ನು ಆಕ್ರಮಿಸಿಕೊಳ್ಳುತ್ತವೆ. ಹಾಗಾಗಿಯೇ ಜನಪದರು ಸಗಣಿ ಕೂಡ ಸರಸಕ್ಕಿಂತ ಗಂಧದ ಕೂಡ ಗುದ್ದಾಡುವುದು ಲೇಸು ಎಂದಿರುವರು. ಸಹವಾಸದ ಮಹತ್ವವನ್ನು ತಿಳಿಸಲು ಕಾಗಕ್ಕಗುಬ್ಬಕ್ಕ, ಮಂಗಮೊಸಳೆ, ಆನೆನರಿಯಂತಹ ಗೆಳೆತನದ ಕಥೆಗಳನ್ನು ಹೇಳಿ ತಮ್ಮ ಮಕ್ಕಳಿಗೆ ಒಡನಾಟ ಅಥವಾ ಸಹವಾಸದ ತಿಳಿವಳಿಕೆಯನ್ನು ನೀಡುವುದರ ಜೊತೆಗೆ ಹೂವಿನ ಸಹವಾಸದಿಂದ ನಾರು ಸ್ವರ್ಗಕಂಡಿತಂತೆ ಎಂಬ ಹೂವು ಮತ್ತು ನಾರಿನ ರೂಪಕವನ್ನು ಹೇಳಿ ಅವರಿಗೆ ಸಹವಾಸದ ಮಹತ್ವವನ್ನು […]

ಹೊಸ ಪುಸ್ತಕ

ಗಾಂಧಿ ತೋರಿದ ಬೆಳಕು ಮತ್ತು ಇತರ ಕಿರು ನಾಟಕಗಳು ಶಶಿಧರ ಭಾರಿಘಾಟ್ ಪುಟ: 128 ಬೆಲೆ: ರೂ.90 ಚಾರುಮತಿ ಪ್ರಕಾಶನ ನಂ.224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು 560018 ಕಿರು ನಾಟಕ ಪ್ರಸಂಗಗಳ ಕೃತಿ. ವಿವಿಧ ವಿಷಯಗಳನ್ನು ಸಾಧಾರಣ ರಂಗಸಜ್ಜಿಕೆಯ ಮೂಲಕ ಚರ್ಚಿಸುವ ರಂಗಪ್ರಸಂಗಗಳು ಮುಖ್ಯವಾಗಿ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶ ಹೊಂದಿವೆ. ಗೆಲಿಲಿಯೊ, ಆಲ್ಬರ್ಟ್, ಐನ್‍ಸ್ಟೀನ್, ಚಂದ್ರಲೋಕದೊಳಿನ್ನು, ಹಲಗಲಿ ಬೇಡರ ದಂಗೆ, ಬಾಲ್ಯವಿವಾಹ ಮುಂತಾದ ಪ್ರಸಂಗಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತಹವು. ಭಾರತ ಒಂದು ಮರುಶೋಧನೆ […]

ನೀತಿಕತೆಗಳ ಸಂಕಲನ ಬಂಧುವರ್ಮನ ‘ಜೀವಸಂಬೋಧನಂ’

ಡಾ.ರಾಜಣ್ಣ ತಗ್ಗಿ

ನೀತಿಕತೆಗಳ ಸಂಕಲನ ಬಂಧುವರ್ಮನ ‘ಜೀವಸಂಬೋಧನಂ’
ಡಾ.ರಾಜಣ್ಣ ತಗ್ಗಿ

ಈ ಕೃತಿಯು ಜೀವಕ್ಕೆ ಒಳಿತನ್ನು ಮತ್ತು ಮಾನವಧರ್ಮವನ್ನು ಬೋಧಿಸುತ್ತಲೇ ಜೈನಧರ್ಮದ ತತ್ವಗಳನ್ನು ಅನುಸರಿಸಿ ಮೋಕ್ಷದ ಕಡೆಗೆ ಸಾಗಲು ಅನುವಾಗುವ ಅನೇಕ ಅಂಶಗಳನ್ನು ಉದಾಹರಣೆ ಸಹಿತವಾಗಿ ವಿವರಿಸುವ ಗ್ರಂಥವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜೈನಸಾಹಿತ್ಯದ ಹರಹು ತುಂಬ ವಿಸ್ತಾರವಾದುದು. ಈ ಜೈನಸಾಹಿತ್ಯದಲ್ಲಿ ಕಾವ್ಯಕೃತಿಗಳ ಜೊತೆಗೆ ಲಕ್ಷಣ, ಅಲಂಕಾರ, ಛಂದಸ್ಸು, ಜ್ಯೋತಿಷ್ಯ, ವೈದ್ಯ… ಹೀಗೆ ಅನೇಕ ಬಗೆಯ ಶಾಸ್ತ್ರ ಕೃತಿಗಳನ್ನೂ ಕಾಣಬಹುದು. ಕಾವ್ಯಕೃತಿಗಳು ಲೌಕಿಕ, ಆಗಮಿಕ ಎಂಬ ಎರಡು ಕಾವ್ಯ ಮಾದರಿಗಳಲ್ಲಿ ಅಭಿವ್ಯಕ್ತಿಗೊಂಡಿದ್ದರೆ, ಇತ್ತ ಲೌಕಿಕವೂ ಧಾರ್ಮಿಕವೂ ಅಲ್ಲದ, ಅತ್ತ […]

ವೀಸಾ ಇಲ್ಲದ ಪರದೇಶಿ!

ಎಸ್.ಮೆಣಸಿನಕಾಯಿ

ವೀಸಾ ಇಲ್ಲದ ಪರದೇಶಿ!
ಎಸ್.ಮೆಣಸಿನಕಾಯಿ

ವಿದೇಶಕ್ಕೆ ಹೋಗಬೇಕಾದರೆ ಆ ದೇಶದ ವೀಸಾ ಬೇಕೇಬೇಕು. ಕಳೆದ ವರ್ಷ ಲೇಖಕರ ಸಮಾವೇಶದಲ್ಲಿ ಭಾಗವಹಿಸಲು ಫಿಲಿಪೈನ್ಸ್‍ನ ರಾಜಧಾನಿ ಮನೀಲಾಗೆ ಹೋಗಬೇಕಾಗಿ ಬಂತು. ‘ವಿಮಾನ, ವಸತಿ, ಸಮಾವೇಶದ ಖರ್ಚು ನಮ್ಮದೇ. ವೀಸಾ ವೆಚ್ಚವನ್ನೂ ನಂತರದಲ್ಲಿ ಭರಿಸುತ್ತೇವೆ. ಅದನ್ನೆಲ್ಲ ಸಿದ್ಧಪಡಿಸುವ ಹೊಣೆ ನಿಮ್ಮದು’ ಅಂದಿದ್ದರು ಸಂಘಟಕರು. ನಾನು ಮಾತ್ರ ವೀಸಾ ಗಿಟ್ಟಿಸುವ ನಿಟ್ಟಿನಲ್ಲಿ ಸೋತು ಹೈರಾಣಾದೆ. ಆದರೂ ಆ ದೇಶ ಕಂಡುಬಂದೆ! ಈ ವೀಸಾ ನಿಯಮಗಳು ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗ್ತಾನೇ ಇರ್ತವೆ. ಅದರಲ್ಲೂ ಭಯೋತ್ಪಾದಕರ ದಾಳಿ, ಮಾರಕ […]

ಬಳೆ ಬಳೆ ಎಂದು ಹೀಗಳಿಯದಿರಿ!

ಭುವನೇಶ್ವರಿ ಹೆಗಡೆ

ಬಳೆ ಬಳೆ ಎಂದು ಹೀಗಳಿಯದಿರಿ!
ಭುವನೇಶ್ವರಿ ಹೆಗಡೆ

‘ನಾನು ಹಾಕಿರುವುದು ಬಳೆಯಲ್ಲ, ಕಡಗ’ ಎಂದು ಟ್ವೀಟ್ ಮಾಡಿ ಪೌರುಷ ಮೆರೆಯುವವರು ಒಮ್ಮೆ ಈ ‘ಬಳೆ’ಯ ಕಹಳೆ ಕೇಳುವುದೊಳಿತು! ‘ಯಾರ್ತೊಟ್ಕೊಳ್ತಾರೆ ಬಿಡಮ್ಮ’ ಎಂದಳು ಮಗಳು. ಕೈಲಿದ್ದ ಬಳೆಯನ್ನು ಬಾಕ್ಸಿನಲ್ಲಿ ಇಟ್ಟೆ. ಮಗಳು ಹೊರಹೋದಳು. ನಾನು ಹಾಗೆಯೇ ಕುರ್ಚಿಯಲ್ಲಿ ಒರಗಿದೆ. ಬಾಕ್ಸಿನಿಂದ ಬಳೆ ಉರುಳುತ್ತಾ ಹೊರಬಂತು. ‘ನಮ್ಮ ಪರಂಪರೆಯನ್ನು ಮಗಳಿಗೇಕೆ ಹೇಳಲಿಲ್ಲ?’ ಎಂದು ಸವಾಲು ಎಸೆಯಿತು. ‘ಏನೆಂದು ಹೇಳಲಿ?’ ಎಂದೆ. ‘ನನ್ನನ್ನು ದಿಟ್ಟಿಸಿ ನೋಡು. ನನ್ನ ಆದಿ, ಅಂತ್ಯಗಳು ತಿಳಿಯುತ್ತವೇನು? ನಾನು ಅನಾದಿ, ಅನಂತ್ಯ. ವೃತ್ತಾಕಾರವಾಗಿ ಇರುವುದಕ್ಕೆ ಆದಿ, […]

ಕ್ರೀಡೆ ಸಂಭಾವನೆ ತಾರತಮ್ಯ

ಕೆ.ವಿ.ಪರಮೇಶ್

ಕ್ರೀಡೆ  ಸಂಭಾವನೆ  ತಾರತಮ್ಯ
ಕೆ.ವಿ.ಪರಮೇಶ್

ಪ್ರತಿಷ್ಠೆ, ಪ್ರಭಾವ, ಲಾಬಿ, ಹಸ್ತಕ್ಷೇಪ, ತಾರತಮ್ಯ ಇವು ಪ್ರಸ್ತುತ ಎಲ್ಲ ಕ್ಷೇತ್ರಗಳ ಅವಿಭಾಜ್ಯ ಅಂಗ ಎಂದರೆ ಅತಿಶಯೋಕ್ತಿಯಾಗಲಾರದು. ಅದರಲ್ಲಿಯೂ ಕ್ರೀಡಾಕ್ಷೇತ್ರದಲ್ಲಿ ಇದು ದೊಡ್ಡ ಮಟ್ಟದಲ್ಲೇ ತಾಂಡವವಾಡುತ್ತಿದೆ. `ಸಂ’ಭಾವನೆ ವಿಷಯದಲ್ಲಿ ಇದರ ಪ್ರಮಾಣ ತುಸು ಹೆಚ್ಚು. ಈ ವಿಚಾರದ ಆಸುಪಾಸಿನ ಸಂಗತಿಗಳು ಹೀಗಿವೆ. ಪ್ರತಿಯೊಬ್ಬ ಕ್ರೀಡಾಪಟು ಅಥವಾ ಕೋಚ್ ಈ ಸಂಭಾವನೆ ವಿಚಾರದಲ್ಲಿ ಭಾರೀ ಚ್ಯೂಸಿ ಮತ್ತು ಚೌಕಾಸಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಒಬ್ಬ ಕೋಚ್ ಇಲ್ಲದೇ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಸ್ಥಿರತೆ ಕಾಯ್ದುಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ […]

ಋತ್ವಿಕ್ ಘಟಕ್ ಅವರ ಮೇಘೆ ಢಾಕಾ ತಾರಾ

ಪ್ರದೀಪಕುಮಾರ್ ಶೆಟ್ಟಿ ಕೆಂಚನೂರು.

ಋತ್ವಿಕ್ ಘಟಕ್ ಅವರ ಮೇಘೆ ಢಾಕಾ ತಾರಾ
ಪ್ರದೀಪಕುಮಾರ್ ಶೆಟ್ಟಿ ಕೆಂಚನೂರು.

ಋತ್ವಿಕ್ ಘಟಕ್ ಅವರ ಏಳು ಪ್ರಮುಖ ಚಲನಚಿತ್ರಗಳಲ್ಲಿ 1960ರಲ್ಲಿ ತಯಾರಾದ ‘ಮೇಘೆ ಢಾಕಾ ತಾರಾ’ (ಮೋಡ ಮುಚ್ಚಿದ ನಕ್ಷತ್ರ) ಬಹಳ ಮಹತ್ವದ್ದು. ಈ ವರ್ಷ ಈ ಸಿನಿಮಾಕ್ಕೆ 60 ವರ್ಷ ತುಂಬುವ ಕಾರಣದಿಂದ ಅದರ ಚರ್ಚೆ ಮಹತ್ವದ್ದು ಮತ್ತು ಪ್ರಸ್ತುತ. ಭಾರತೀಯ ಸಿನಿಮಾ ಸಂದರ್ಭದಲ್ಲಿ, ವಿಶೇಷವಾಗಿ ಸಿನಿಮಾ ಚರಿತ್ರೆಯ ಬಗೆಗೆ ಯಾವಾಗಲೂ ಕೆಲವು ತಾತ್ವಿಕ ತಕರಾರು ತೆಗೆಯುವ ಕೆಲವು ವಿದ್ವಾಂಸರು (ಆಶೀಷ್ ರಾಜ್ಯಾಧ್ಯಕ್ಷ, ಮದನ್ ಗೋಪಾಲ್ ಸಿಂಗ್ ಮತ್ತು ಇರಾ ಭಾಸ್ಕರ್) ಸಿನಿಮಾ ಚರಿತ್ರೆಯನ್ನು ಸತ್ಯಜಿತ್ ರೇ […]

ಗಜಲ್

ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಗಜಲ್
ಸಿದ್ಧರಾಮ ಹಿರೇಮಠ ಕೂಡ್ಲಿಗಿ

1. ಹಣತೆ ಹಚ್ಚಿಟ್ಟಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು ಕನಸು ಕಟ್ಟಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು ಸಂಜೆಯ ರವಿ ಮುತ್ತಿಟ್ಟನು ಧರೆಗೆ ಶಶಿಯ ಬರುವಿಕೆಗೆ ದಾರಿ ತೋರಲೆಂದು ಚುಕ್ಕೆಗಳಿಗೆ ಮಿನುಗಲು ಕೋರಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು ಉಸಿರ ಬಸಿರ ಬಗೆದು ಮೌನದಲೇ ಹಾಡುತಿದೆ ಎನ್ನೆದೆಯಾಳದ ಒಲವು ನಿರೀಕ್ಷೆಯಲೇ ಉರಿಯುತಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು ಬುವಿಯ ಜಡತೆಯೆಲ್ಲವೂ ಮೈ ಕೊಡಹಿ ಜೀವ ಜಾತ್ರೆಯಲಿ ನಲಿದಿಹುದು ಶಬ್ದದೊಳಗಣ ನಿಶ್ಶಬ್ದವಾಗಿರುವೆ ನಾನು […]