ನ್ಯೂ ನಾರ್ಮಲ್!

ನ್ಯೂ ನಾರ್ಮಲ್!

ಈ ಕೋವಿಡ್ ಸಂದರ್ಭದಲ್ಲಿ ದೈಹಿಕ ಆರೋಗ್ಯದ ಸಹಜ ಏರುಪೇರುಗಳು ಸಹ ಅನೇಕರಲ್ಲಿ ವಿಪರೀತ ಅನುಮಾನಗಳಿಗೆ ಕಾರಣವಾಗಿ ಭಯ ಹುಟ್ಟಿಸುತ್ತಿವೆ. ಕೆಲ ದಿನಗಳಿಂದ ನನಗೂ ಎದೆಯಲ್ಲಿ ಏನೋ ಅಸೌಖ್ಯ ಅನುಭವ ಉಂಟಾಗುತ್ತಿತ್ತು; ಅಸಿಡಿಟಿ ಇರಬಹುದೆಂದು ನಿರ್ಲಕ್ಷಿಸುತ್ತಲೇ ಬಂದಿದ್ದೆ. ಕೊನೆಗೆ ಯಾಕೋ ರಿಸ್ಕ್ ಬೇಡ ಎಂದೆನಿಸಿ ಪರಿಚಿತ ಹೃದಯತಜ್ಞ ಡಾ.ಮಹಾಂತೇಶ ಅವರನ್ನು ಸಂಪಕರ್ಿಸಿದೆ. ಸಕ್ಕರೆ ಪ್ರಮಾಣ, ರಕ್ತದೊತ್ತಡ, ಆಕ್ಸಿಜೆನ್ ಸ್ಯಾಚುರೇಷನ್, ಇಸಿಜಿ, ಎಕ್ಸರೇ… ಇತ್ಯಾದಿ ತಪಾಸಣೆ ಮಾಡಿ ಮುಗಿಸಿದ ವೈದ್ಯರು ಕೊನೆಗೆ, `ಎಲ್ಲಾ ನಾರ್ಮಲ್’ ಎಂದು ಘೋಷಿಸಿದರು. ಅದು ನನ್ನ […]

ಬೆಂಗಳೂರು-ಮಾಗಡಿ-ಸೋಮವಾರಪೇಟೆ ನೂತನ ಹೆದ್ದಾರಿ ಏಕೆ ಅಗತ್ಯವಿದೆ?

ದಕ್ಷಿಣ ಕರ್ನಾಟಕದಲ್ಲಿ ಸದ್ಯಕ್ಕೆ ನೆಲಮಂಗಲ-ಕುಣಿಗಲ್- ಚನ್ನರಾಯಪಟ್ಟಣ-ಹಾಸನ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಡದಿ-ರಾಮನಗರ-ಚನ್ನಪಟ್ಟಣ-ಮಂಡ್ಯ-ಮೈಸೂರು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಡದಿ-ಮೈಸೂರು ಹೆದ್ದಾರಿ ಈಗಾಗಲೇ ತುಂಬಿ ತುಳುಕುತ್ತಿದ್ದರೆ ನೆಲಮಂಗಲ-ಹಾಸನ ಹೆದ್ದಾರಿ ಮುಂದಿನ ಕೆಲವೇ ವರ್ಷಗಳಲ್ಲಿ ದಟ್ಟಣೆಗೆ ಒಳಗಾಗಲಿದೆ. ಹೆದ್ದಾರಿಗಳು ವಾಣಿಜ್ಯ-ಕೈಗಾರಿಕೆ-ಪ್ರವಾಸೋದ್ಯಮಗಳಿಗೆ ರಹದಾರಿಗಳಾಗುವುದಲ್ಲದೆ ಕೃಷಿ-ತೋಟಗಾರಿಕೆ -ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಬಲ್ಲವು. ನೈಸ್ ರಸ್ತೆಯಲ್ಲಿನ ಗೊಲ್ಲರಹಟ್ಟಿ ಎಕ್ಸಿಟ್‌ನಿಂದ ಮಾಗಡಿ-ಹುಲಿಯೂರುದುರ್ಗ-ನೆಲಮಂಗಲ-ಕೆ.ಆರ್.ಪೇಟೆ-ಭೇರ್ಯ-ಕೇರಳಾಪುರ-ರಾಮನಾಥಪುರ-ಕೊಣನೂರು ಮಾರ್ಗವಾಗಿ ಸೋಮವಾರಪೇಟೆಗೆ ಹೆದ್ದಾರಿ ನಿರ್ಮಾಣವಾದರೆ ಸುಮಾರು ೨೩೦ ಕಿ.ಮೀ.ಗಳ ಈ ರಸ್ತೆಯಲ್ಲಿನ ಎಲ್ಲ ಹಿಂದುಳಿದ ತಾಲ್ಲೂಕುಗಳಲ್ಲಿ ಕೃಷಿಯೇತರ ಅಭಿವೃದ್ಧಿಗೆ […]

ಗಾಂಧಿ ಯುಗಕ್ಕೆ ಭಾರತ

-  ನೂತನ ದೋಶೆಟ್ಟಿ

ಗಾಂಧಿ ಯುಗಕ್ಕೆ ಭಾರತ
-  ನೂತನ ದೋಶೆಟ್ಟಿ

ಈಗ ಗಾಂಧೀಜಿ ಹೆಜ್ಜೆ ಹೆಜ್ಜೆಗೂ ಬೇಕಾಗಿದ್ದಾರೆ. ಕಳೆದ 70 ವರ್ಷಗಳಲ್ಲಿ ಅವರಿಂದ ದೂರ ದೂರ ಸಾಗಿದ ನಮ್ಮ ದೇಶ ಈಗಲಾದರೂ ಅವರ ನೀತಿಗಳನ್ನು ಅರಿತು ಅಳವಡಿಸಿಕೊಳ್ಳಬೇಕಾಗಿದೆ. ಅಂಥ ಚಮತ್ಕಾರ ನಡೆಯಲಿ! –  ನೂತನ ದೋಶೆಟ್ಟಿ ನಮ್ಮ ದೇಶ ಅನಿವಾರ್ಯವಾಗಿ ಅರಿವಿಲ್ಲದೆಯೇ ಗಾಂಧಿ ಯುಗಕ್ಕೆ ಸಾಗುತ್ತಿದೆಯೋ ಅಥವಾ ಗಾಂಧಿಮಾರ್ಗ ಪ್ರಸ್ತುತ ಸಂದರ್ಭದಲ್ಲಿ ಉಳಿದಿರುವ ಏಕೈಕ ಮಾರ್ಗವೋ! ಈ ಪ್ರಶ್ನೆ ಇಂದಿನ ಕೊರೊನಾ ಹಿನ್ನೆಲೆಯಲ್ಲಿ ಜಾಗತೀಕರಣದ ಆವಶ್ಯಕತೆ ಕುರಿತಾ ಚರ್ಚೆಗೂ ಪ್ರಸ್ತುತವಾಗಿದೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಹಾಗೂ ಆನಂತರ […]

ಆತ್ಮ ನಿರ್ಭರ; ದೇಶ ಬರ್ಬರ!

-  ಸುನೀಲಕುಮಾರ ಸುಧಾಕರ

ಆತ್ಮ ನಿರ್ಭರ; ದೇಶ ಬರ್ಬರ!
-  ಸುನೀಲಕುಮಾರ ಸುಧಾಕರ

ಸ್ವಾವಲಂಬನೆಗೆ ಆರ್ಥಿಕ ನೆರವು ಬೇಕಾಗಿದೆ. ಅತಿಯಾದ ಬಡ್ಡಿ ಸಾಲ, ಬಡವರನ್ನು ಸಾಯಿಸುತ್ತದೆ. –  ಸುನೀಲಕುಮಾರ ಸುಧಾಕರ ಬೆತ್ತಲೆ ದೇಹದ ಹೊಟ್ಟೆಯ ಹುತ್ತಿನೊಳಗೆ ಹಸಿವಿನ ಹಾವು ಇಟ್ಟುಕೊಂಡು ಕತ್ತಲೆ ಗುಹೆಯೊಳಗೆ ಆದಿ ಮಾನವ ಜೋರಾಗಿ ಬಾಯಿತೆರೆದು ಅರಚಿದ ಆಹಾರಕ್ಕಾಗಿ! ಆಗ ನಾಗರಿಕತೆಯ ಮೊದಲ ಶಬ್ದ ಲೋಕವನ್ನು ವ್ಯಾಪಿಸಿತು! ಹಾಗೇ ಅವನ ಬಾಯಿಯಿಂದ ಸಾಂಕ್ರಾಮಿಕ ರೋಗವೂ ದೇಹವನ್ನು ಸೇರಿತು! ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು, ಆದಿ ಮಾನವರೆಂಬ ಮೂಲ ಸ್ತ್ರೀ ಪುರುಷರಿಂದ ನಾಗರಿಕತೆ ಬೆಳೆಯಿತು. ಚಕ್ರದ ಉಗಮವಾಯಿತು, ಭಾಷೆ, […]

ಸ್ವಾವಲಂಬನೆ ವರ್ಸಸ್ ಜಾಗತೀಕರಣ

-  ರಮಾನಂದ ಶರ್ಮಾ

ಸ್ವಾವಲಂಬನೆ ವರ್ಸಸ್ ಜಾಗತೀಕರಣ
-  ರಮಾನಂದ ಶರ್ಮಾ

ಸ್ವಾವಲಂಬನೆ ಮತ್ತು ಜಾಗತೀಕರಣ, ಇವೆರಡೂ ಪರಸ್ಪರ ಭಾವನೆಗಳನ್ನು ಕೆರಳಿಸುವ ಸುಂದರವಾದ ಪರಿಕಲ್ಪನೆಗಳು. ಯಾವುದೇ ಒಂದನ್ನು ಸಂಪೂರ್ಣವಾಗಿ ಅವಲಂಬಿಸುವುದು ಸದಾ ಬದಲಾಗುತ್ತಿರುವ ವಿದ್ಯಮಾನಗಳಲ್ಲಿ ತಂಬಾ ಕ್ಲಿಷ್ಟಕರ ಮತ್ತು ಸರಿಯಾದ ಮಾರ್ಗವಲ್ಲ ಕೂಡಾ. –  ರಮಾನಂದ ಶರ್ಮಾ ತೊಂಬತ್ತರ ದಶಕದಲ್ಲಿ ಮನಮೋಹನಸಿಂಗ್ ಮತ್ತು ನರಸಿಂಹರಾಯರ ಸರ್ಕಾರ ಆರ್ಥಿಕ ಸುಧಾರಣೆ ತಂದು, ಜಾಗತೀಕರಣದ ಬೀಜ ಬಿತ್ತಿ ಹದಗೆಡುತ್ತಿರುವ ಆರ್ಥಿಕತೆಯನ್ನು ಹಳಿ ಏರಿಸಲು ಕೆಲವು ದಿಟ್ಟ ನಿರ್ಧಾರ ತೆಗೆದುಕೊಳ್ಳುವವರೆಗೆ, ದೇಶವು ಜವಾಹರಲಾಲ ನೆಹರೂ ಬಿತ್ತಿದ ಸ್ವಾವಲಂಬನೆ ಪಥದಲ್ಲಿ ಸಾಗುತ್ತಿತ್ತು. ಸೇವೆ ಮತ್ತು ಉತ್ಪಾದನೆ […]

ಆನ್ ಲೈನ್ ಯುಗದಲ್ಲಿ ಪೋಷಕರ ಹೊಣೆ

-  ಬಾಲಚಂದ್ರ ಬಿ.ಎನ್.

ಆನ್ ಲೈನ್ ಯುಗದಲ್ಲಿ ಪೋಷಕರ ಹೊಣೆ
-  ಬಾಲಚಂದ್ರ ಬಿ.ಎನ್.

ಶಿಕ್ಷಣದ ನೆಪದಲ್ಲಿ ಮಕ್ಕಳ ಕೈಗೆ ಗ್ಯಾಜೆಟ್ ಕೊಡುವ ಮೊದಲು ಅದರ ಬಳಕೆ ಬಗ್ಗೆ ತಿಳಿಹೇಳುವುದು, ನಿಯಂತ್ರಿಸುವುದು ಇಂದಿನ ಪೋಷಕರ ಎದುರಿರುವ ಬಹುದೊಡ್ಡ ಸವಾಲು. –  ಬಾಲಚಂದ್ರ ಬಿ.ಎನ್. ಸಾಮಾಜಿಕ ಸಂಪರ್ಕ, ಮನರಂಜನೆ, ಶಿಕ್ಷಣ, ಮಾರುಕಟ್ಟೆ ಇವು ಗಾಜೆಟ್‌ಗಳಿಂದ ಇರುವ ನಾಲ್ಕು ಬಹುಮುಖ್ಯ ಉಪಯೋಗಗಳು. ಈ ಉಪಯೋಗಗಳನ್ನು ಯಾವ ವಯೋಮಾನದವರು ಎಷ್ಟು ಬಳಸಬೇಕೆಂದು ಮಿತಿ ಹೇರಬೇಕಿರುವುದೇ ಇಂದಿನ ಬಹುಮುಖ್ಯ ಸಮಸ್ಯೆಗಳಲ್ಲೊಂದು. ಆದರೆ ಸಣ್ಣ ಮಕ್ಕಳಿಗೆ ಶಿಕ್ಷಣದ ನೆಪದಲ್ಲಿ ಸ್ಮಾರ್ಟ್ ಫೋನ್‌ಗಳನ್ನೋ ಅಥವಾ ಟ್ಯಾಬ್, ಕಂಪ್ಯೂಟರ್‌ಗಳನ್ನೋ ಕೈಗೆ ಕೊಡುವ ಮೊದಲು […]

ಅನಿಸಿಕೆಗಳು

ನೇರ ಸತ್ಯ ಬರಹ ಕಿ.ರಂ.ನಾಗರಾಜ್ ಅವರ ‘ಮತ್ತೆ ಮತ್ತೆ ಬೇಂದ್ರೆ’ ಕೃತಿಯನ್ನು ಎನ್.ಬೋರಲಿಂಗಯ್ಯ ಅವರು ವಿಮರ್ಶಿಸಿರುವ ರೀತಿ (ಪುಸ್ತಕ ಪ್ರಪಂಚ) ಅಧ್ಯಯನಶೀಲ ನಡೆಯಾಗಿದೆ. ‘ಒಲು’ ಪ್ರತ್ಯಯದಿಂದ ‘ಒಲುಮೆ’ ಎಂಬ ನಾಮಪದ ಮೂಡಿಸಿಕೊಳ್ಳುತ್ತಿರುವುದು ಆಶಾಸ್ತ್ರೀಯವಾಗಿದೆ ಎಂಬ ಎನ್.ಬೋರಲಿಂಗಯ್ಯ ಅವರ ಮಾತನ್ನು ಅರಿತು ಬೇಂದ್ರೆಕಾವ್ಯದ ಪದಪದದ ಆಂತರ್ಯ ಮಿಡಿಯಬೇಕು. ‘ಸಾಹಿತ್ಯ ಚರ್ಚೆ’ಯಲ್ಲಿ ವಸಂತ ಬನ್ನಾಡಿ ಅವರ ‘ಅಡಿಗ ಮತ್ತು ಅನಂತಮೂರ್ತಿ ಹಬ್ಬಿಸಿದ ಸಾಂಸ್ಕೃತಿಕ ಮಂಪರು’ ಲೇಖನ ಬೇಂದ್ರೆ ನುಡಿಯಂತೆ ‘ಉರಿಯ ನಾಲಗೆ’ಯಿಂದ ನಿಜವನ್ನು ತಣ್ಣನೆ ಹೇಳಿದೆ. ಇಂತಹ ಸ್ಪಷ್ಟ ನೇರ […]

ಬೆಂಗಳೂರು ಗಲಭೆಯಲ್ಲಿ ಬೆಂಕಿ ಹಚ್ಚಿಸಿ ಜಂತಿ ಎಣಿಸಿದ ರಾಜಕಾರಣಿಗಳು!

- ಜಯಾತನಯ

ಬೆಂಗಳೂರು ಗಲಭೆಯಲ್ಲಿ ಬೆಂಕಿ ಹಚ್ಚಿಸಿ ಜಂತಿ ಎಣಿಸಿದ ರಾಜಕಾರಣಿಗಳು!
- ಜಯಾತನಯ

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ-ಬೆಂಕಿ-ಗೋಲಿಬಾರ್ ಪ್ರಕರಣಕ್ಕೆ ಹೊಲಸು ರಾಜಕಾರಣವೇ ಕಾರಣ. ಬೆಂಕಿಯಲ್ಲಿ ಬೇಳೆ ಬೇಯಿಸಿಕೊಂಡವರು, ಜಂತಿ ಎಣಿಸಿದವರು ರಾಜಕಾರಣಿಗಳು ಎಂಬುದರಲ್ಲಿ ಅನುಮಾನ ಉಳಿದಿಲ್ಲ. ಬೆಂದದ್ದು ಮಾತ್ರ ಅವರ ಮಾತು ಕೇಳಿ ಕಂಡಕAಡಲ್ಲಿ ಬೆಂಕಿ ಹಚ್ಚಿ, ಜೈಲು ಸೇರಿದವರು!. – ಜಯಾತನಯ ದೇಶದಲ್ಲಿ ಎಲ್ಲಿಯವರೆಗೆ ಕೋಮುವ್ಯಾಧಿ ಹರಡುವವರು, ಕೋಮುವಾದ ರಕ್ಷಿಸುವವರು ಇರುತ್ತಾರೋ ಅಲ್ಲಿಯವರೆಗೆ ಮತಾಂಧರು ಬಾಲ ಅಲ್ಲಾಡಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಲೇ ಇರುತ್ತಾರೆ. ಕೋಮು ದಳ್ಳುರಿಗೆ ಕುಮ್ಮಕ್ಕು ಕೊಟ್ಟವರು ಟಿವಿಗಳ ಮೈಕ್ ಮುಂದೆ […]

ಅನಿಶ್ಚಿತ ಆರ್ಥಿಕ ನೀತಿ ಅಭಿವೃದ್ಧಿಗೆ ಕಾಡುವ ಭೀತಿ!

- ಡಾ.ಟಿ.ಆರ್.ಚಂದ್ರಶೇಖರ

ಅನಿಶ್ಚಿತ ಆರ್ಥಿಕ ನೀತಿ ಅಭಿವೃದ್ಧಿಗೆ ಕಾಡುವ ಭೀತಿ!
- ಡಾ.ಟಿ.ಆರ್.ಚಂದ್ರಶೇಖರ

ರೈತರ ವರಮಾನವನ್ನು 2022ರಲ್ಲಿ ದುಪ್ಪಟ್ಟು ಮಾಡುತ್ತೇವೆ, ಭಾರತದ ಜಿಡಿಪಿಯನ್ನು 2024ರಲ್ಲಿ ಐದು ಟ್ರಿಲಿಯನ ಡಾಲರ್ ಮಾಡುತ್ತೇವೆ ಎಂಬುದೆಲ್ಲ ಕೇವಲ ‘ಭಾಷಣದ ಸರಕು’ ಎಂಬುದು ಜನಕ್ಕೆ ಈಗ ತಿಳಿದಿದೆ!. – ಡಾ.ಟಿ.ಆರ್.ಚಂದ್ರಶೇಖರ ಇಂದು ಭಾರತವು ಸಂಪೂರ್ಣ ಖಾಸಗೀಕರಣ ಪರ್ವದಲ್ಲಿ ಹಾದು ಹೋಗುತ್ತಿದೆ. ಉದಾರವಾದಿ ನೀತಿಯು ಆರಂಭವಾದ 1991ರಿಂದ 2014ರವರೆಗೆ ನಮಲ್ಲಿದ್ದುದು ಮಿತ ಖಾಸಗೀಕರಣ. ಈಗ 2014ರ ನಂತರ ಆರ್ಥಿಕತೆಯ ಪೂರ್ಣ ಖಾಸಗೀಕರಣ ನಡೆದಿದೆ. 1991 ಮತ್ತು 2014ರ ಆರ್ಥಿಕ ನೀತಿಗಳಲ್ಲಿನ ಈ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೇಂದ್ರ […]

ಭಕ್ತಿ ಮತ್ತು ಪ್ರಭುತ್ವ ಪರಂಪರೆ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರ

- ಪೃಥ್ವದತ್ತ ಚಂದ್ರಶೋಭಿ

ಭಕ್ತಿ ಮತ್ತು ಪ್ರಭುತ್ವ ಪರಂಪರೆ ಹಿನ್ನೆಲೆಯಲ್ಲಿ ಅಯೋಧ್ಯೆಯ ರಾಮ ಮಂದಿರ
- ಪೃಥ್ವದತ್ತ ಚಂದ್ರಶೋಭಿ

ರಾಮಮಂದಿರದ ನಿರ್ಮಾಣವು ರಾಜಕಾರಣದ ಪ್ರೇರಣೆಯನ್ನು ಹೊಂದಿದೆ ಎನ್ನುವ ಮಾತು ಆಗಾಗ ಕೇಳಿಬರುತ್ತದೆ. ಇದು ಸತ್ಯ. ದೇವಾಲಯಗಳು ಐತಿಹಾಸಿಕವಾಗಿ ಸಹ ಯಾವಾಗಲೂ ರಾಜಕಾರಣದ ಗುರಿಗಳು ಮತ್ತು ಆಶಯಗಳನ್ನು ಪ್ರತಿಪಾದಿಸುವ ಯೋಜನೆಗಳೆ ಆಗಿದ್ದವು. – ಪೃಥ್ವದತ್ತ ಚಂದ್ರಶೋಭಿ ಕಳೆದ ಮೂರು ದಶಕಗಳಿಂದ ಭಾರತೀಯ ಸಮಾಜ ಮತ್ತು ರಾಜಕಾರಣಗಳನ್ನು ಗಾಢವಾಗಿ ಕಲಕಿದ ಮತ್ತು ಬದಲಿಸಿದ ರಾಮಜನ್ಮಭೂಮಿ ವಿವಾದಕ್ಕೆ ಆಗಸ್ಟ್ 5ರಂದು ಒಂದು ತಾರ್ಕಿಕ ಅಂತ್ಯ ದೊರಕಿದೆ. ಆ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮನಿಗೆ ಹೊಸದೊಂದು ದೇವಾಲಯವನ್ನು ಕಟ್ಟುವ ಕೆಲಸ […]

ಇತಿಹಾಸದಲ್ಲಿ ಪೂಜಾಸ್ಥಳಗಳ ನಿರ್ಮಾಣ ಧರ್ಮ ಮತ್ತು ರಾಜಕಾರಣ

- ರಾಜೇಂದ್ರ ಚೆನ್ನಿ

ಇತಿಹಾಸದಲ್ಲಿ ಪೂಜಾಸ್ಥಳಗಳ ನಿರ್ಮಾಣ ಧರ್ಮ ಮತ್ತು ರಾಜಕಾರಣ
- ರಾಜೇಂದ್ರ ಚೆನ್ನಿ

ಚರಿತ್ರೆ ಹೇಳುವ ಸತ್ಯವೆಂದರೆ ಎಲ್ಲಾ ಧರ್ಮಗಳ ಪೂಜಾಸ್ಥಳಗಳು ಪಾರಮಾರ್ಥಿಕ ಸತ್ಯಗಳ ಪ್ರತೀಕಗಳಾಗುವ ಜೊತೆಗೆ ಅಂದಂದಿನ ರಾಜಕೀಯದ ಭಾಗವೂ ಆಗಿದ್ದವು; ಆಗಿವೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಪ್ರಾಯಶಃ ಎಲ್ಲಾ ದೇಶಗಳಲ್ಲಿ ಪ್ರತಿನಿತ್ಯವೂ ಅವುಗಳ ಬಗ್ಗೆ ವಿವಾದಗಳು ಸಂಘರ್ಷಗಳು ನಡೆಯುತ್ತಿವೆ. – ರಾಜೇಂದ್ರ ಚೆನ್ನಿ ಮಾರ್ಕಂಡೇಯರು ಹೇಳಿದರು: “ಕೃತಯುಗದಲ್ಲಿ ಈ ಭೂಮಿಯ ಮೇಲೆ ದೇವಸ್ಥಾನವನ್ನು ಕಟ್ಟಲಿಲ್ಲ, ಓ ದೊರೆಯೆ, ಜನರು ದೇವರುಗಳನ್ನು ತಮ್ಮ ಕಣ್ಣೆದುರಿಗೆ ಕಾಣುತ್ತಿದ್ದರು. ತ್ರೇತ ಹಾಗೂ ದ್ವಾಪರ ಯುಗಗಳಲ್ಲಿ, ಜನರು ದೇವರುಗಳನ್ನು ತಮ್ಮ ಕಣ್ಣೆದುರಿಗೇ ನೋಡುತ್ತಿದ್ದರೂ […]

ಕಾವ್ಯನಾಯಕನ ಆದರ್ಶದ ಬೆಳಕಿಗಾಗಿ ರಾಮಮಂದಿರ

- ಗ.ನಾ.ಭಟ್ಟ

ಕಾವ್ಯನಾಯಕನ ಆದರ್ಶದ ಬೆಳಕಿಗಾಗಿ ರಾಮಮಂದಿರ
- ಗ.ನಾ.ಭಟ್ಟ

ಭಾರತದ ಮಹಾಕಾವ್ಯವೊಂದರ ನಾಯಕನ ಆದರ್ಶದ ಬೆಳಕಿನಲ್ಲಿ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಇದೇ ಮೊದಲು. ಬಹುಶಃ ಭಾರತದ ಯಾವ ದೇವಾಲಯಕ್ಕೂ, ದೇವರಿಗೂ ಇಂತಹ ಮಹಾಕಾವ್ಯದ ಹಿನ್ನೆಲೆಯಿಲ್ಲ. – ಗ.ನಾ.ಭಟ್ಟ ಭಾರತದಲ್ಲಿ ಅಸಂಖ್ಯಾಕ ದೇವಾಲಯಗಳಿವೆ. ಒಂದೊಂದು ದೇವಾಲಯವೂ ಒಂದೊಂದು ಇತಿಹಾಸವನ್ನು, ಚರಿತ್ರೆಯನ್ನು, ದಂತಕಥೆಯನ್ನು, ಮಹಾತ್ಮ್ಯವನ್ನು ಹೇಳುತ್ತದೆ. ಭಕ್ತರೂ ಕೂಡಾ ತಂಡೋಪತಂಡವಾಗಿ ದೇವಾಲಯಗಳಿಗೆ ಭೇಟಿಯಿತ್ತು, ದೇವರ ದರ್ಶನ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸಿ, ಧನ್ಯತೆಯನ್ನು ಪಡೆಯುತ್ತಾರೆ. ಆದರೂ ದೇವಾಲಯಗಳ ಕಟ್ಟಡ, ನಿರ್ಮಾಣ, ಪ್ರತಿಷ್ಠಾಪನೆ, ಪೂಜೆ, ಅರ್ಚನೆ, ಧ್ಯಾನ, ಭಜನೆ ಯಾವುದೂ ನಿಂತಿಲ್ಲ. […]

ಇಂದಿನ ನ್ಯಾಯಾಂಗ ವ್ಯವಸ್ಥೆ ಸ್ವರೂಪಗಳು, ‘ಭಿನ್ನ’ ರೂಪಗಳು!

- ಡಾ.ವೆಂಕಟಾಚಲ ಹೆಗಡೆ

ಇಂದಿನ ನ್ಯಾಯಾಂಗ ವ್ಯವಸ್ಥೆ  ಸ್ವರೂಪಗಳು, ‘ಭಿನ್ನ’ ರೂಪಗಳು!
- ಡಾ.ವೆಂಕಟಾಚಲ ಹೆಗಡೆ

ಕೆಲವು ಮುಖ್ಯ ನ್ಯಾಯಾಧೀಶರನ್ನು ಕುರಿತು ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ್ ಮಾಡಿದ ಟ್ವೀಟ್ ಮತ್ತು ಸರ್ವೋಚ್ಚ ನ್ಯಾಯಾಲಯದ ಪೀಠ ಅವರ ವಿರುದ್ಧ ಹೂಡಿರುವ ನ್ಯಾಯಾಲಯ ನಿಂದನೆ ಮೊಕದ್ದಮೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. – ಡಾ.ವೆಂಕಟಾಚಲ ಹೆಗಡೆ ನಮ್ಮ ದೇಶದ ಆಗುಹೋಗುಗಳ ಎಲ್ಲ ನಿಯಂತ್ರಣ ಸಂವಿಧಾನದ ಪರಿಧಿಯಲ್ಲೆ ಆಗಬೇಕೆಂಬುದನ್ನು ನಾವೆಲ್ಲ ಒಪ್ಪಿಕೊಳ್ಳುತ್ತೇವೆ. ಅದಕ್ಕಾಗಿ ನಾವು ಎಪ್ಪತ್ತು ವಸಂತಗಳ ಹಿಂದೆ ಅತ್ಯಂತ ವಿವರವಾದ ಮತ್ತು ಎಲ್ಲವನ್ನು ಒಳಗೊಳ್ಳುವಂತಿರುವ ಸಂವಿಧಾನವನ್ನು ಸಾಕಷ್ಟು ವಿಚಾರ ವಿನಿಮಯಗಳ ನಂತರ ಆರಿಸಿಕೊಂಡಿದ್ದೇವೆ. ನಮ್ಮ ಸರಕಾರ ಹೇಗಿರಬೇಕು […]

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ರೋಗನಿರೋಧಕ ಶಕ್ತಿಯೋ..?

ಪ್ರವೇಶ

ಕೊರೊನಾ ವೈರಾಣುವಿನಿಂದ ಹಬ್ಬಿದ ಕೋವಿಡ್-19 ಸಾಂಕ್ರಾಮಿಕ ರೋಗ ಕೊನೆಗಾಣುವುದು ಹೇಗೆ ಎಂಬ ಚರ್ಚೆ ಇಂದು ಪ್ರಸ್ತುತವಾಗಿದೆ. ಯಾವ ದಾರಿಯಲ್ಲಿ ವೈರಾಣುವಿನಿಂದ ಪ್ರಾಣಭಯ ದೂರವಾಗುವುದೋ ಹಾಗೂ ಯಾವ ರೀತಿಯಲ್ಲಿ ವೈರಾಣುವಿನ ಹರಡುವಿಕೆ ತಪ್ಪುವುದೋ ಎಂಬುದು ಮುಂದಿನ ತಿಂಗಳುಗಳಲ್ಲಿ ನಿರ್ಧಾರವಾಗಲಿದೆ. ಹಲವು ಚುಚ್ಚುಮದ್ದು ಹಾಗೂ ಔಷಧಿಗಳು ಬಂದಿವೆ. ಆದರೆ ಯಾವುದೂ ನೂರಕ್ಕೆ ನೂರರಷ್ಟು ಪ್ರಾಣಹಾನಿ ತಡೆಯುವ ಭರವಸೆ ನೀಡುತ್ತಿಲ್ಲ. ಅನೇಕ ಲಸಿಕೆಗಳು ಲ್ಯಾಬೊರೇಟರಿಗಳಿಂದ ಆಚೆ ಬಂದು ಜನರ ನಡುವೆ ಪ್ರಯೋಗವಾಗುತ್ತಿವೆ. ಇವು ದೊಡ್ಡ ಸಂಖ್ಯೆಯಲ್ಲಿ ಎಲ್ಲರಿಗೂ ಲಭ್ಯವಾಗಲು ತಿಂಗಳುಗಳೇ ಬೇಕು. […]

ಸಾಂಕ್ರಾಮಿಕದ ಅಂತ್ಯ ಹೇಗೆ..? ಚಿಕಿತ್ಸೆಯೋ..? ಲಸಿಕೆಯೋ..? ಸಮೂಹ ರೋಗನಿರೋಧಕ ಶಕ್ತಿಯೋ..?

- ಡಾ.ಬಿ.ಆರ್.ಮಂಜುನಾಥ್

ಸಾಂಕ್ರಾಮಿಕದ ಅಂತ್ಯ ಹೇಗೆ..?  ಚಿಕಿತ್ಸೆಯೋ..? ಲಸಿಕೆಯೋ..?  ಸಮೂಹ ರೋಗನಿರೋಧಕ ಶಕ್ತಿಯೋ..?
- ಡಾ.ಬಿ.ಆರ್.ಮಂಜುನಾಥ್

ಅನೇಕ ವಿದ್ಯಾವಂತರು, ಕ್ರಿಯಾಶೀಲರು ಮತ್ತೆ ಮತ್ತೆ ಕೇಳುವ, ತಮ್ಮನ್ನೇ ಕೇಳಿಕೊಳ್ಳುವ ಪ್ರಶ್ನೆಗಳು… ನಮ್ಮ ಬದುಕು ಮತ್ತೆ ಮಾಮೂಲಾಗುತ್ತದೆಯೇ? ಮತ್ತೆ ನಾನು ರಸ್ತೆಯಲ್ಲಿ ನಿಂತು ನಿರಾತಂಕವಾಗಿ ತಿಂಡಿ ತಿಂದು ಟೀ ಕುಡಿಯಬಲ್ಲೆನೇ? ಮತ್ತೆ ಸಹಸ್ರಾರು ಜನರೊಂದಿಗೆ ಬೆರೆಯಬಲ್ಲೆನೇ? ಈ ಪ್ರಶ್ನೆಗಳಿಗೆ ವಿಜ್ಞಾನದ ಉತ್ತರವೇನು? ಕೋವಿಡ್ ಕಲಿಗಾಲ ಮುಗಿಯುತ್ತದೆಯೇ? ಮುಗಿಯುವುದಿದ್ದರೆ ಯಾವಾಗ ಮುಗಿಯುತ್ತದೆ, ಹೇಗೆ ಮುಗಿಯುತ್ತದೆ, ಯಾವ ಕ್ರಮಗಳಿಂದ, ಎಷ್ಟರಮಟ್ಟಿಗೆ ಮುಗಿಯುತ್ತದೆ? ಇದೆಲ್ಲಕ್ಕೂ ಖಚಿತವಾದ ಉತ್ತರಗಳು ಕಷ್ಟವಾದರೂ, ವಿವಿಧ ದೇಶಗಳಲ್ಲಿ ಖಂಡಗಳಲ್ಲಿ ನಡೆದಿರುವ ಹಲವಾರು ಅಧ್ಯಯನಗಳು ಚೆಲ್ಲಿರುವ ಬೆಳಕು ಇಲ್ಲಿದೆ. […]

ರೋಗರಕ್ಷಣಾ ವ್ಯವಸ್ಥೆಯೇ ಸಮರ್ಥ ಮಾರ್ಗ

- ಡಾ.ಶ್ರೀನಿವಾಸ ಕಕ್ಕಿಲ್ಲಾಯ

ರೋಗರಕ್ಷಣಾ ವ್ಯವಸ್ಥೆಯೇ  ಸಮರ್ಥ ಮಾರ್ಗ
- ಡಾ.ಶ್ರೀನಿವಾಸ ಕಕ್ಕಿಲ್ಲಾಯ

2021ರ ಮಧ್ಯದ ವೇಳೆಗಷ್ಟೇ ಲಸಿಕೆಗಳು ಲಭ್ಯವಾಗಬಹುದು; ಅವನ್ನು ಉತ್ಪಾದಿಸಿ, ಎಲ್ಲರಿಗೆ ಕೊಡುವುದಕ್ಕೆ ವರ್ಷಗಳು ಬೇಕಾಗಬಹುದು, ಕೋಟಿಗಟ್ಟಲೆ ಹಣವೂ ಬೇಕು. ವೈರಾಣು ಅದಕ್ಕೆಲ್ಲ ಕಾಯದೆ ಈ ವರ್ಷಾಂತ್ಯದೊಳಗೆ 60-70% ಜನರನ್ನು ಸೋಂಕಿ, ಸಾಮೂಹಿಕವಾಗಿ ಸೋಂಕು ನಿರೋಧಕ ಶಕ್ತಿಯನ್ನುಂಟು ಮಾಡಿ ತಾನಾಗಿ ವಿರಳಗೊಳ್ಳಲಿದೆ. – ಡಾ.ಶ್ರೀನಿವಾಸ ಕಕ್ಕಿಲ್ಲಾಯ ಹೊಸ ಕೊರೋನ ವೈರಸ್ ಚೀನಾದಿಂದ ಬಂದಾಗಿದೆ, ಭಾರತದಲ್ಲಿ ಹರಡಲಿದೆ, ಶತಮಾನಗಳವರೆಗೆ ಶಾಶ್ವತವಾಗಿ ಇರಲಿದೆ ಎಂದು ಮಾರ್ಚ್ನಲ್ಲಿ ಹೇಳಿದ್ದಾಗ ಸರಕಾರದ ಬೆಂಬಲಿಗರೆಂಬವರು ಗೇಲಿ ಮಾಡಿದ್ದರು. ಭಾರತದಂತಹ ಪುಣ್ಯಭೂಮಿಗೆ ಕೊರೋನದಂತಹ ಚೀನಿ ವೈರಸ್ ಬರಲು […]

ಕೊರೋನಾ ವೈರಸ್ ಬಿಕ್ಕಟ್ಟು

- ನೈಗೇಲ್ ಮ್ಯಾಕ್ ಮಿಲನ್

ಕೊರೋನಾ ವೈರಸ್ ಬಿಕ್ಕಟ್ಟು
- ನೈಗೇಲ್ ಮ್ಯಾಕ್ ಮಿಲನ್

ಒಂದು ವ್ಯಾಕ್ಸಿನ್ ಮತ್ತು ಸಮೂಹ ರೋಗ ನಿರೋಧಕ ಸಾಮರ್ಥ್ಯವು ಕೊರೋನಾ ವೈರಸ್ ಸಾಂಕ್ರಾಮಿಕ ರೊಗವನ್ನು ಕೊನೆಗಾಣಿಸಬಹುದೇ?. – ನೈಗೇಲ್ ಮ್ಯಾಕ್ ಮಿಲನ್ ನಾವು ಒಟ್ಟಾಗಿ ಕಾಫಿ ಕುಡಿಯುತ್ತಿದ್ದ, ಜೊತೆಯಾಗಿ ಕುಳಿತು ಸಿನಿಮಾ ನೋಡುತ್ತಿದ್ದ, ಗುಂಪಾಗಿ ನೆರೆದು ಸಂಗೀತ ಕೇಳಿ ಕಾಲಿನಲ್ಲಿ ತಾಳ ಹಾಕುತ್ತಾ, ಆಟಗಳನ್ನು ನೋಡುತ್ತ ಆನಂದಿಸುತ್ತಿದ್ದ ಹಿಂದಿನ ಜಗತ್ತಿನ ಬದುಕಿಗೆ ನಾವು ಮರಳುವುದು ಹೇಗೇ? ಇದರ ಸಾಧ್ಯತೆಯ ಬಗ್ಗೆ ಎರಡು ಅಭಿಪ್ರಾಯಗಳು ಕೇಳಿಬರುತ್ತವೆ. ಒಂದು- ಪರಿಣಾಮಕಾರಿಯಾದ ಲಸಿಕೆ (ವ್ಯಾಕ್ಸಿನ್). ಮತ್ತೊಂದು ಸಮೂಹ ಬೆಳೆಸಿಕೊಳ್ಳುವ ನಿರೋಧಕ ಶಕ್ತಿ […]

ಗಾಢ ಮಬ್ಬಿನಲ್ಲಿ ಮಹಾಮಾರಿ: ಇದರ ಅಂತ್ಯಕ್ಕೆ ಎಲ್ಲಿದೆ ದಾರಿ?

- ನಾಗೇಶ ಹೆಗಡೆ

ಗಾಢ ಮಬ್ಬಿನಲ್ಲಿ ಮಹಾಮಾರಿ: ಇದರ ಅಂತ್ಯಕ್ಕೆ ಎಲ್ಲಿದೆ ದಾರಿ?
- ನಾಗೇಶ ಹೆಗಡೆ

ಕೊರೊನಾ ವೈರಾಣುವನ್ನು ಮಣಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಮೂಲೆಗೊತ್ತಲಂತೂ ನಮಗೆ ಸಾಧ್ಯವಿದೆ. ಅದು ಒಂದು ರಾಷ್ಟ್ರದ ಇಚ್ಛಾಶಕ್ತಿಗೆ ಸಂಭಂದಿಸಿದ ವಿಚಾರ. – ನಾಗೇಶ ಹೆಗಡೆ ಈಗಿನ್ನೂ ಇದು ಸರಿಯಾಗಿ ಆರಂಭವೇ ಆದಂತಿಲ್ಲ, ಆಗಲೇ ಸಂಪಾದಕರು “ಈ ಸಾಂಕ್ರಾಮಿಕದ ಅಂತ್ಯ ಹೇಗೆ?” ಎಂದು ಕೇಳುತ್ತಿದ್ದಾರಲ್ಲ! ಇರಲಿ, ಆರಂಭವಾಗಿದ್ದಕ್ಕೆಲ್ಲ ಒಂದು ಅಂತ್ಯ ಅನ್ನೋದು ಇದ್ದೇ ಇರುತ್ತದೆ ಎಂಬ ಆಶಾವಾದಿಗಳು ಈ ಜಗತ್ತಿನಲ್ಲಿ ತುಂಬ ಜನರಿದ್ದಾರೆ. ಕೆಲವರಂತೂ ಕೋವಿಡ್ ನಂತರದ ಬದುಕು ಹೇಗಿರುತ್ತದೆ ಎಂಬ ಘನಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. “ಕೋವಿಡ್ ನಂತರದ ಬದುಕು” […]

ಸೋಂಕು ಮಣಿಸುವಲ್ಲಿ ಸಮಾಜದ ಪಾತ್ರವೇ ಪ್ರಮುಖ

- ಡಾ.ಕಿರಣ್ ವಿ.ಎಸ್.

ಸೋಂಕು ಮಣಿಸುವಲ್ಲಿ ಸಮಾಜದ ಪಾತ್ರವೇ ಪ್ರಮುಖ
- ಡಾ.ಕಿರಣ್ ವಿ.ಎಸ್.

ಕೋವಿಡ್-19 ಸಮಸ್ಯೆಯ ಅಂತ್ಯ ಯಾವ ದಾರಿಯಲ್ಲಾದರೂ ಆಗಬಹುದು. ಯಾವಾಗ ಎಂಬ ಪ್ರಶ್ನೆಗೆ ನಿಖರ ಉತ್ತರವಿಲ್ಲ! ಇದು ಹಲವಾರು ಅಸ್ಥಿರತೆಗಳ ಮೂಲಕ ಹಾದುಹೋಗುವುದರಿಂದ, ನಿಶ್ಚಿತವಾಗಿ ಹೇಳಲಾಗದು. ಆದರೆ, ಅದರ ಅಂತ್ಯವಂತೂ ಖಚಿತ! ಅಂತ್ಯದ ಕೆಲವು ಮಾರ್ಗಗಳನ್ನು ಊಹಿಸಬಹುದು. – ಡಾ.ಕಿರಣ್ ವಿ.ಎಸ್. “ಈ ಹಾಳು ಕರೊನಾವೈರಸ್ ಕಾಯಿಲೆ ಯಾವಾಗ ಕೊನೆಯಾಗುತ್ತೋ ಕಾಣೆ” ಎನ್ನುವುದು ಪ್ರತಿಯೊಬ್ಬರ ಅಂತರಾಳದ ಮಾತು! ಮಾನವ ಇತಿಹಾಸ ಇಂತಹ ಹಲವಾರು ಜಾಗತಿಕ ವಿಪತ್ತುಗಳನ್ನು ಕಂಡಿದೆ. 1961ರಲ್ಲಿ ಆರಂಭವಾದ ಕಾಲರಾ ರೋಗದ 7ನೆಯ ಜಾಗತಿಕ ಆವೃತ್ತಿ ಇಂದಿಗೂ […]

ಮೂವರು ವೈದ್ಯರು ಎಂಟು ಪ್ರಶ್ನೆಗಳು!

ಡಾ.ಸಿ.ಎನ್.ಮಂಜುನಾಥ

ಮೂವರು ವೈದ್ಯರು ಎಂಟು ಪ್ರಶ್ನೆಗಳು!
ಡಾ.ಸಿ.ಎನ್.ಮಂಜುನಾಥ

ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಪಡೆಯಲು ‘ಸಮಾಜಮುಖಿ’ ಮೂವರು ತಜ್ಞ ವೈದ್ಯರನ್ನು ಸಂದರ್ಶಿಸಿತು. ತಮ್ಮ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಈ ವೈದ್ಯರು ತಮ್ಮೆದುರು ಇರಿಸಿದ ಎಂಟು ನಿರ್ದಿಷ್ಟ ಪ್ರಶ್ನೆಗಳಿಗೆ ಸಮಚಿತ್ತದಿಂದ ನೀಡಿದ ಉತ್ತರಗಳು ಇಲ್ಲಿವೆ. ಡಾ.ಸಿ.ಎನ್.ಮಂಜುನಾಥ 1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ. ಸ್ವತಃ ಹೃದಯರೋಗ ತಜ್ಞರಾಗಿರುವ ಡಾ.ಸಿ.ಎನ್.ಮಂಜುನಾಥ ಅವರು ಮುಖ್ಯಸ್ಥರಾಗಿ ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ […]