ಅಫೀಮು ಯಾವ ಧರ್ಮದ್ದಾದರೂ ನಶೆ ಒಂದೇ!

ಸಂಪಾದಕೀಯ

ಅಫೀಮು ಯಾವ ಧರ್ಮದ್ದಾದರೂ ನಶೆ ಒಂದೇ!
ಸಂಪಾದಕೀಯ

ಸಂಪಾದಕೀಯ ಹರಡುತ್ತಿರುವ ಮುಸ್ಲಿಂ ದ್ವೇಷ ಕುರಿತು ಒಮ್ಮೆ ಪ್ರಗತಿಪರ ಗೆಳೆಯರೊಬ್ಬರು ತಾವು ಸಿದ್ಧಪಡಿಸಿದ `ಜಂಟಿ ಪತ್ರಿಕಾ ಹೇಳಿಕೆ‘ ಪ್ರತಿಯೊಂದನ್ನು ವಾಟ್ಸಾಪ್‍ನಲ್ಲಿ ಕಳಿಸಿ, `ಇದಕ್ಕೆ ನಿಮ್ಮ ಹೆಸರನ್ನು ಬಳಸಿಕೊಳ್ಳಬಹುದೇ?’ ಎಂದು ಕೇಳಿದರು. ಅವರಿಗೆ ನೀಡಿದ ಉತ್ತರ: ಅಭ್ಯಂತರವಿಲ್ಲ. ಆದರೆ ಸಮಾನ ಮನಸ್ಕರು ಎಂದು ಗುರುತಿಸಿಕೊಳ್ಳುವ ನಮ್ಮಂತಹವರು ಇಂತಹ ಸಂದರ್ಭದಲ್ಲಿ ಈವರೆಗೆ ನೀಡುತ್ತಾ ಬಂದಿರುವ ಈ ಬಗೆಯ ಹೇಳಿಕೆಗಳ ಫಲಿತಾಂಶವನ್ನು ತುಸು ಪರಿಶೀಲಿಸುವ ಅಗತ್ಯವಿದೆ. ಇಲ್ಲದಿದ್ದರೆ ಇಂತಹ ಒಮ್ಮುಖದ ಟಿಪ್ಪಣಿಯನ್ನು ನಾವೇ ತಯಾರಿಸಿ, ನಾವೇ ಪ್ರಕಟಿಸಿ, ನಾವೇ ಓದಿ ಸುಮ್ಮನಾಗಬೇಕಷ್ಟೇ. […]

ಕೋಲಾರವೆಂದರೆ ಬರೀ ಬಿಸಿಲಲ್ಲೋ ಅಣ್ಣ

-ಡಾ.ಕಲೀಮ್ ಉಲ್ಲಾ

ಕೋಲಾರವೆಂದರೆ ಬರೀ ಬಿಸಿಲಲ್ಲೋ ಅಣ್ಣ
-ಡಾ.ಕಲೀಮ್ ಉಲ್ಲಾ

–ಡಾ.ಕಲೀಮ್ ಉಲ್ಲಾ ನಡೆದು ಜಗವ ನೋಡುವ ಮನುಷ್ಯ ಹೆಚ್ಚು ಸೂಕ್ಷ್ಮಗಳನ್ನು ಗ್ರಹಿಸುತ್ತಾನೆ. ಹೊಸ ಜಾಗೆಯಲ್ಲಿನ ಓಡಾಟ ಮತ್ತು ಒಡನಾಟಗಳು ಆತನ ಕಣ್ಣ ರೆಪ್ಪೆಗಳ ಅಚ್ಚರಿಯಿಂದ ಹಿಗ್ಗಿಸುತ್ತವೆ. ತೆರೆದ ಮನಸ್ಸಿನಿಂದ ಕಾಣುವ ಹೊಸ ಜಗತ್ತು ನಮ್ಮ ಅನುಭವ ಲೋಕದ ವಿಸ್ತಾರವಾಗಬಲ್ಲದು. “ನಮ್ಮ ಸುತ್ತಮುತ್ತಲ ಸ್ಥಳಗಳನ್ನೇ ನೆಟ್ಟಗೆ ನೋಡದ ನಾವು ದೂರದೂರದ ಸ್ಥಳಗಳಿಗೆ ಪ್ರವಾಸ ಹೋಗುವುದು ವ್ಯರ್ಥ” ಎಂದು ತೇಜಸ್ವಿ ಆಗಾಗ ಹೇಳುತ್ತಿದ್ದರು. ಪೂಚಂತೇ ಅವರ ಮಾತು ಅಕ್ಷರಶಃ ಸತ್ಯ. ನಮ್ಮ ನೆಲೆಯ ಕಾಡು, ನದಿ, ಪರ್ವತ, ಗದ್ದೆ ಹೊಲಗಳ […]

ಸ್ವಾತಂತ್ರ್ಯದ 75 ವರ್ಷಗಳ ಆರ್ಥಿಕ ವಿಶ್ಲೇಷಣೆ

-ಡಾ.ಎಸ್.ಆರ್.ಕೇಶವ

ಸ್ವಾತಂತ್ರ್ಯದ 75 ವರ್ಷಗಳ ಆರ್ಥಿಕ ವಿಶ್ಲೇಷಣೆ
-ಡಾ.ಎಸ್.ಆರ್.ಕೇಶವ

–ಡಾ.ಎಸ್.ಆರ್.ಕೇಶವ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿ; ಬಡತನ, ಜಾತಿ ಮತ್ತು ಭ್ರಷ್ಟಾಚಾರವನ್ನು ಸಮಯದ ಚೌಕಟ್ಟಿನೊಳಗೆ ನಿರ್ಮೂಲನೆ ಮಾಡಿದರೆ ಭಾರತವು ಸ್ವಾತಂತ್ರ್ಯದ 100ನೇ ವರ್ಷಾಚರಣೆ ಹೊತ್ತಿಗೆ ಸಾಮಾಜಿಕ–ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುತ್ತದೆ. ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಕೇವಲ ಸಂತೋಷಪಡುವ ಸಮಯವಲ್ಲ. ಸ್ವಾತಂತ್ರ್ಯ ಹೋರಾಟದ ನಮ್ಮ ನಾಯಕರ ತ್ಯಾಗವನ್ನು ಗೌರವ ಮತ್ತು ಕೃತಜ್ಞತೆಯಿಂದ ನೆನಪಿಟ್ಟುಕೊಳ್ಳುವುದು ಮತ್ತು ಅದೇ ಸಮಯದಲ್ಲಿ, ಸ್ವತಂತ್ರ ಭಾರತದ ಈವರೆಗಿನ ಪ್ರಯಾಣವನ್ನು ಮರುಪರಿಶೀಲಿಸುವುದು, ಆತ್ಮಾವಲೋಕನ ಮಾಡುವುದು ಸಹ ಮುಖ್ಯವಾಗಿದೆ. ಮುಂದಿನ ಹೆಜ್ಜೆಯನ್ನು ಸೂಚಿಸಲು […]

ಪತ್ರಕರ್ತರ ಕಲಾವಿದರ ಆತ್ಮಾವಲೋಕನ ಯಾವಾಗ?

-ಹೇಮಲತಾ ಎನ್.ಎಸ್., ದಾವಣಗೆರೆ.

ಪತ್ರಕರ್ತರ ಕಲಾವಿದರ ಆತ್ಮಾವಲೋಕನ ಯಾವಾಗ? ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ಅವರು ಬರೆದ ‘ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರೂ ಕಲಾವಿದರೂ’ ಲೇಖನ ಕಲಾವಿದರು ಮತ್ತು ಪತ್ರಕರ್ತರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಎಲ್ಲರೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಕ್ಕಾಗಿ ಸತ್ಯಕ್ಕೆ ಬದ್ಧರಾಗದೆ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಳ್ಳುವ ನಡೆ ಸತ್ಯಕ್ಕೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತರುವಂತದ್ದು. ಕಲೆ ಮತ್ತು ಸಾಹಿತ್ಯವು ನಮ್ಮ ಸುತ್ತಮುತ್ತ ನಡೆಯುವ ಘಟನೆಗಳ ಪ್ರತಿಬಿಂಬವಾಗಿರುತ್ತದೆ. ಹಾಗೆಯೇ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಘನತೆ, ಗೌರವ, ಪ್ರಾಶಸ್ತ್ಯ ದೊರೆಯುವುದು ಸಮಕಾಲೀನ ಸಂದರ್ಭದಲ್ಲಿ ನಡೆಯುವ […]

ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ

-ಡಿ.ಉಮಾಪತಿ

ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ
-ಡಿ.ಉಮಾಪತಿ

–ಡಿ.ಉಮಾಪತಿ ತಮ್ಮ ಮೇಲೆ ಬೆಟ್ಟದಂತೆ ಎರಗಿ ಬರುವ ಆಪತ್ತುಗಳು ಹತ್ತಿಯಂತೆ ಕರಗಿ ಹೋಗುತ್ತವೆ ಎಂಬುದು ಮೋದಿ–ಅಮಿತ್ ಶಾ ಜೋಡಿಯ ಗಟ್ಟಿ ನಂಬಿಕೆ. ಆಕ್ರಮಣಕಾರಿ ಆಡಳಿತಪಕ್ಷವು ದೈತ್ಯ ಸದಸ್ಯಬಲ ಹೊಂದಿರುವ ಮತ್ತು ಪ್ರತಿಪಕ್ಷಗಳು ನಿಸ್ತೇಜವಾಗಿರುವ, ಜನತಾಂತ್ರಿಕ ವ್ಯವಸ್ಥೆ ಶಿಥಿಲಗೊಂಡಿರುವ ಇಂದಿನ ಸನ್ನಿವೇಶದಲ್ಲಿ ಈ ನಂಬಿಕೆ ಇಲ್ಲಿಯವರೆಗೆ ಬಹುಮಟ್ಟಿಗೆ ನಿಜವಾಗಿದೆ. ಪೆಗಸಸ್ ಹಗರಣ ಕೂಡ ನಿಧಾನ ಸಾವನ್ನು ಕಾಣಲಿದೆ! ಸರ್ವಾಧಿಕಾರಿ ಸರ್ಕಾರ ಸಂಸತ್ತಿನಲ್ಲಿ ಅದುಮಿ ತುಳಿದಿಟ್ಟ ಪೆಗಸಸ್ ಬೇಹುಗಾರಿಕೆ ಹಗರಣ ನ್ಯಾಯಾಂಗದ ಅಂಗಳದಲ್ಲಿ ಸದ್ದು ಮಾಡತೊಡಗಿದೆ. ಜನತಂತ್ರದ ಅಣಕ ಜರುಗಿರುವ […]

ಹಲವು ಅವಕಾಶ-ಸವಾಲುಗಳ ಜೊತೆಗೆ ಬೊಮ್ಮಾಯಿ ಅವರ ತಂತಿ ಮೇಲಿನ ನಡಿಗೆ

-ಪದ್ಮರಾಜ ದಂಡಾವತಿ

ಹಲವು ಅವಕಾಶ-ಸವಾಲುಗಳ ಜೊತೆಗೆ ಬೊಮ್ಮಾಯಿ ಅವರ ತಂತಿ ಮೇಲಿನ ನಡಿಗೆ
-ಪದ್ಮರಾಜ ದಂಡಾವತಿ

–ಪದ್ಮರಾಜ ದಂಡಾವತಿ ಬಸವರಾಜ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿ ಇದ್ದರೂ ಕಟ್ಟಾ ಹಿಂದುತ್ವವಾದಿ ಎಂದು ಹೆಸರಾದವರಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗೆ ಇಳಿಸಿದ್ದರಿಂದ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಸೆಟಗೊಳ್ಳಬಾರದು ಎಂದು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದಂತೆ ಕಾಣುತ್ತದೆ. ಅಂದರೆ, ಅವರು `ಸಹಜ ಆಯ್ಕೆ’ಯಾಗಿ ಹೊರಹೊಮ್ಮಿದವರು ಅಲ್ಲ. ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಇನ್ನೇನು 65 ವರ್ಷಗಳು ತುಂಬಲಿವೆ. ಈ ಆರೂವರೆ ದಶಕಗಳ ಅವಧಿಯಲ್ಲಿ ರಾಜ್ಯವು 30 ಮುಖ್ಯಮಂತ್ರಿಗಳನ್ನು ಕಂಡಿದೆ. ಈ ಅವಧಿಯಲ್ಲಿ ಐದು ವರ್ಷಗಳ ಕಾಲ […]

ಭಾರತಕ್ಕೆ ಸಂಸತ್ತು ಯಾಕಾದರೂ ಬೇಕು?

ಮನೀಷ್ ತಿವಾರಿ

ಭಾರತಕ್ಕೆ ಸಂಸತ್ತು  ಯಾಕಾದರೂ ಬೇಕು?
ಮನೀಷ್ ತಿವಾರಿ

ಮನೀಷ್ ತಿವಾರಿ ಆಡಳಿತ ಪಕ್ಷದವರಲ್ಲದ, ಹಿರಿಯ ಸಂಸದರೊಬ್ಬರು ಅತಿ ಪ್ರಸ್ತುತ ಮತ್ತು ಪ್ರಚೋದಕ ಪ್ರಶ್ನೆಯೊಂದನ್ನು ಕೇಳಿದರು: ಭಾರತಕ್ಕೆ ಒಂದು ಸಂಸತ್ತು ಅಗತ್ಯವಿದೆಯೇ? ಅನುವಾದ: ನಾ ದಿವಾಕರ ಕಳೆದ ಹಲವು ದಶಕಗಳಲ್ಲಿ ಭಾರತದ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನದ ಹತ್ತನೆಯ ಪರಿಚ್ಛೇದದಲ್ಲಿ ಸೂಚಿತವಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅನುಸರಿಸುವ ನಿಟ್ಟಿನಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದ್ದು, ಸದನಗಳಲ್ಲಿನ ತಮ್ಮ ವರ್ತನೆಯಿಂದ ಮತ್ತು ಅಸಾಂವಿಧಾನಿಕ ನಡತೆಯಿಂದ ಈ ಕಾಯ್ದೆಯ ಮೂಲ ಆಶಯಗಳನ್ನೇ ಮಣ್ಣುಪಾಲು ಮಾಡಿದ್ದಾರೆ. 1980ರವರೆಗೂ ಭಾರತದ ಸಂಸತ್ತು ತನ್ನದೇ […]

ನೆಹರೂ ಮತ್ತು ವಾಜಪೇಯಿ ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರು

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ “ಆಡಳಿತ ಪಕ್ಷದ ಕೆಲಸದ ಮೇಲೆ ಪ್ರಬಲ ವಿರೋಧ ಪಕ್ಷ ಕಣ್ಣಿಡಬೇಕು, ಈ ಕೆಲಸ ಆಗಬೇಕೆಂದರೆ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು, ಹಾಗೂ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಇಷ್ಟನ್ನು ಮಾತ್ರ ಅವರಿಂದ ನಾನು ನಿರೀಕ್ಷಿಸಬಲ್ಲೆ” ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು “ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರು” ಎಂದು ಕರೆದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಾತು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ. ಆಡಳಿತ ಪಕ್ಷದವರು […]

ತಮಿಳುನಾಡಿನ ಕಳವಳಕಾರಿ ಹಣಕಾಸು ಸ್ಥಿತಿ

-ಟಿ.ಆರ್.ಚಂದ್ರಶೇಖರ

ತಮಿಳುನಾಡಿನ ಕಳವಳಕಾರಿ  ಹಣಕಾಸು ಸ್ಥಿತಿ
-ಟಿ.ಆರ್.ಚಂದ್ರಶೇಖರ

–ಟಿ.ಆರ್.ಚಂದ್ರಶೇಖರ ತಮಿಳುನಾಡಿನ ಸರ್ಕಾರ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತ ಪತ್ರ ತರುವ ಮುಕ್ತ ಮನಸ್ಸು ತೋರಿದೆ. ಇದೇ ರೀತಿಯ ಪಾರದರ್ಶಕತೆಯನ್ನು ಕರ್ನಾಟಕ ಸರ್ಕಾರ ತೋರುವುದೆಂದು..? ತಮಿಳುನಾಡಿನ ಹಣಕಾಸು ಮಂತ್ರಿ ಪಳನಿವೇಲು ತ್ಯಾಗರಾಜನ್ ಅವರು ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತಪತ್ರವನ್ನು ಬಿಡುಗಡೆ ಮಾಡುತ್ತಾ ಇಂದು ರಾಜ್ಯದಲ್ಲಿ ಭಯಹುಟ್ಟಿಸುವ ರೀತಿಯಲ್ಲಿರುವ ಹಣಕಾಸು ಪರಿಸ್ಥಿತಿಗೆ ಹಿಂದಿನ ಎಐಎಡಿಎಂಕೆ ಸರ್ಕಾರ ಕಾರಣ ಎಂದು ಘೋಷಿಸಿದ್ದಾರೆ. ‘ರೆವಿನ್ಯೂ ಸಂಗ್ರಹವು ನೆಲಕಚ್ಚಿದೆ. ರೆವಿನ್ಯೂ ಇಲ್ಲದೆ ಸರ್ಕಾರವೊಂದು ತನ್ನ ಸಮಸ್ಯೆಗಳನ್ನು ನಿರ್ವಹಿಸುವುದು ಕಷ್ಟ’ ಎಂಬುದು […]

ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!

-ಸಿ.ಯು.ಬೆಳ್ಳಕ್ಕಿ

ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!
-ಸಿ.ಯು.ಬೆಳ್ಳಕ್ಕಿ

–ಸಿ.ಯು.ಬೆಳ್ಳಕ್ಕಿ ಆಕಾಶವಾಣಿ ಜನಪದ ಸಂಗೀತ ವಿಭಾಗಕ್ಕೆ ಈಗ ಗ್ರಹಣ ಹಿಡಿದಂತಿದೆ. ದೆಹಲಿಯಲ್ಲಿ ಕೇಂದ್ರೀಕ್ರತ ಆನ್–ಲೈನ್ ಅರ್ಜಿ ಸಲ್ಲಿಕೆ, ಮೇಲಿಂದ ಮೇಲೆ ಅಡಿಷನ್ ನಿಯಮಗಳ ಬದಲಾವಣೆ, ಈ ಪ್ರಕ್ರಿಯೆಗಳಲ್ಲಿ ಉಂಟಾದ ವಿಳಂಬ ಇವು ಗೊಂದಲ ಸೃಷ್ಟಿಸಿವೆ. ಹಲವು ವರ್ಷಗಳ ಹಿಂದೆ ಆಕಾಶವಾಣಿ ಧಾರವಾಡದಲ್ಲಿ ಜನಪದ ಕಲಾವಿದರ ಧ್ವನಿಪರೀಕ್ಷೆ (ಆಡಿಷನ್) 22 ದಿನ ನಡೆಯಿತು. ಅದರಲ್ಲಿ 8 ಜಿಲ್ಲೆಗಳ ನೂರಾರು ಗ್ರಾಮಗಳ ಜನಪದ ಕಲಾವಿದರು ಭಾಗವಹಿಸಿದ್ದು ಒಂದು ದಾಖಲೆಯಾಗಿದೆ. ಟೆಂಪೊ, ಟ್ರ್ಯಾಕ್ಟರ್, ಮಿನಿ ಟ್ರಕ್ಕುಗಳಲ್ಲಿ ಗುಂಪುಗುಂಪಾಗಿ ಉತ್ಸಾಹದಿಂದ ಬಂದು ಭಾಗವಹಿಸಿದ್ದರು. […]

ಮುಸ್ಲಿಮ್ ಸಾಮಾಜಿಕ ಸುಧಾರಣೆ: ಹಿಂದೇನು..? ಮುಂದೇನು..?

ಪ್ರವೇಶ

ಬಿಜೆಪಿ ಸರ್ಕಾರಗಳ ಅಬ್ಬರದಲ್ಲಿ ಭಾರತೀಯ ಮುಸಲ್ಮಾನ ಸಮುದಾಯ ಇನ್ನಿಲ್ಲದಷ್ಟು ಅವಗಣನೆಗೆ ಮತ್ತು ಮೂಲೆಗೆ ತಳ್ಳಲ್ಪಟ್ಟಂತೆ ಕಾಣಿಸುತ್ತಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಘೆಟ್ಟೋಕರಣಕ್ಕೆ ಒಳಗಾದಂತೆ ಕಾಣಿಸುತ್ತಿದೆ. ಚುನಾವಣೆಗಳ ಸಮಯದಲ್ಲಷ್ಟೇ ‘ಮುಸ್ಲಿಮ್ ಮತಬ್ಯಾಂಕ್’ ಮತ್ತಿತರ ವಿಷಯಗಳು ಚರ್ಚೆಗೆ ಒಳಪಟ್ಟು ಉಳಿದ ಸಮಯದಲ್ಲಿ ಇತರ ಭಾರತೀಯ ಸಮಾಜ ಮುಸ್ಲಿಮ್ ಸಮುದಾಯ ನಮ್ಮ ಮಧ್ಯೆ ಇಲ್ಲವೇನೋ ಎಂಬಂತೆ ವರ್ತಿಸುತ್ತಿದೆ. ಈ ವಾತಾವರಣದಲ್ಲಿ ಸಮುದಾಯದ ಹಳೆಯ ವಿವಾದಗಳಾದ ಸಾಮಾಜಿಕ ಸುಧಾರಣೆ ಮತ್ತು ಉದಾರವಾದಿ ಮುಸಲ್ಮಾನರು ನೆಲೆ ಕಂಡುಕೊಳ್ಳುವಿಕೆಯ ವಿಷಯಗಳು ತೆರೆಮರೆಗೆ ಸರಿದಂತೆ ಕಾಣುತ್ತಿದೆ. ರಾಜಕೀಯದ […]

ಅಂಚಿಗೆ ತಳ್ಳಲ್ಪಡುತ್ತಿರುವ ಸಮುದಾಯವಾಗಿ ಭಾರತೀಯ ಮುಸ್ಲಿಮರು

-ಲಿಂಡ್ಸೆ ಮೇಜ್ಲ್ಯಾಂಡ್

ಅಂಚಿಗೆ ತಳ್ಳಲ್ಪಡುತ್ತಿರುವ ಸಮುದಾಯವಾಗಿ  ಭಾರತೀಯ ಮುಸ್ಲಿಮರು
-ಲಿಂಡ್ಸೆ ಮೇಜ್ಲ್ಯಾಂಡ್

–ಲಿಂಡ್ಸೆ ಮೇಜ್ಲ್ಯಾಂಡ್ ಅನುವಾದ: ಡಾ.ಜ್ಯೋತಿ ಲೇಖಕಿ ಲಿಂಡ್ಸೆ ಮೈಜ್ಲ್ಯಾಂಡ್, ಅಮೆರಿಕನ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧ ಹಾಗು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ; ಚೀನಿ ಭಾಷೆಯನ್ನು ಕೂಡ ಅಧ್ಯಯನ ಮಾಡಿದ್ದಾರೆ, ಅಮೆರಿಕಾದ `ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (ಅಈಖ)’ ಹೆಸರಿನ ಸ್ವತಂತ್ರ ಮಾಹಿತಿ ಸಂಸ್ಥೆಗಾಗಿ, ಏಷ್ಯಾದ ಬೆಳೆವಣಿಗೆಗಳ ಕುರಿತಂತೆ ಬರೆಯುತ್ತಾರೆ. ಏಷ್ಯಾದ ಕುರಿತು ವಿಶೇಷ ತಿಳಿವಳಿಕೆ ಹೊಂದಿರುವ ಲಿಂಡ್ಸೆ, ಈ ಸಂಸ್ಥೆ ಸೇರುವ ಮೊದಲು ಅಮೆರಿಕಾದ ಪ್ರಸಿದ್ಧ ಸುದ್ದಿಸಂಸ್ಥೆಯಾದ `ಟೆಗ್ನ‘ಕ್ಕಾಗಿ ಬ್ರೇಕಿಂಗ್ ನ್ಯೂಸ್ ಹಾಗೂ `ವೋಕ್ಸ್‘ಗಾಗಿ ವಿಶ್ವಸುದ್ದಿಯನ್ನು ವರದಿ ಮಾಡುತ್ತಿದ್ದರು. […]

ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?

-ಮುಸ್ತಫಾ ಅಕ್ಯೋಲ್

ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?
-ಮುಸ್ತಫಾ ಅಕ್ಯೋಲ್

–ಮುಸ್ತಫಾ ಅಕ್ಯೋಲ್ –ಸ್ವಾಮಿನಾಥನ್ ಅಯ್ಯರ್ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳನ್ನು ಧಾರ್ಮಿಕ ಅಲ್ಪಸಂಖ್ಯಾತರಿಗಿಂತ ‘ಹೆಚ್ಚು ಸಮಾನರನ್ನಾಗಿ’ ಮಾಡಲು ಹೊರಟಾಗ, ಮುಸ್ಲಿಮರು ಧರ್ಮನಿರಪೇಕ್ಷ ಸಂವಿಧಾನದಿಂದ ಸಮಾನತೆಯನ್ನು ಕೇಳುತ್ತಾರೆಯೇ ಹೊರತು ಶರಿಯಾದಿಂದಲ್ಲ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಹಿಂದೂ ಪಾರಮ್ಯವಾದಿ ಪಕ್ಷವಾದ ಭಾರತೀಯ ಜನತಾ ಪಕ್ಷವು (ಬಿಜೆಪಿ), ಭಾರತೀಯ ಸಂವಿಧಾನದ ಉದಾರವಾದಿ ತತ್ವಗಳನ್ನು ದುರ್ಬಲಗೊಳಿಸಿದ್ದಾರೆ ಮತ್ತು ದೇಶವನ್ನು ಹೆಚ್ಚು ಹೆಚ್ಚಾಗಿ ಒಂದು ಉದಾರವಾದಿಯಲ್ಲದ ಜನತಂತ್ರವಾಗಿ ಪರಿವರ್ತಿಸಿದ್ದಾರೆ ಎಂಬುದು ಇಷ್ಟು ಹೊತ್ತಿಗೆ ಇಡೀ ಜಗತ್ತಿಗೇ ಗೊತ್ತಾಗಿ ಹೋಗಿದೆ. ಭಯದಲ್ಲೇ […]

ದಮನಿತ ಸಮುದಾಯದ ಸುಧಾರಣೆ: ಔದಾರ್ಯವಲ್ಲ, ರಾಷ್ಟ್ರೀಯ ಜವಾಬ್ದಾರಿ

-ಬಿ.ಪೀರ್‍ಬಾಷ

ದಮನಿತ ಸಮುದಾಯದ ಸುಧಾರಣೆ: ಔದಾರ್ಯವಲ್ಲ, ರಾಷ್ಟ್ರೀಯ ಜವಾಬ್ದಾರಿ
-ಬಿ.ಪೀರ್‍ಬಾಷ

–ಬಿ.ಪೀರ್‍ಬಾಷ ಮುಸ್ಲಿಂ ಸಮುದಾಯದಲ್ಲಿ ಮತಮೌಢ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಸಾಮುದಾಯಿಕ ಅಭದ್ರತೆಯ ಭಾವನೆಯನ್ನು ಗಟ್ಟಿಗೊಳಿಸುವ ಮೂಲಕ ಮತಶ್ರದ್ಧೆಯನ್ನು ಭದ್ರಗೊಳಿಸುವ ಕಾರ್ಯವನ್ನು ಮುಸ್ಲಿಂ ಮೂಲಭೂತವಾದ ಮಾಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮೇತರರಿಗಿಂತ ಮುಸ್ಲಿಂ ಉದಾರವಾದಿ ಹಾಗೂ ವಿಚಾರವಾದಿಗಳ ಪಾತ್ರ ಬಹು ಮಹತ್ವದ್ದು. ರಾಷ್ಟ್ರೀಯ ಪರಂಪರೆ ಮುಸ್ಲಿಂ ಸಮುದಾಯದ ಸುಧಾರಣೆಯ ಮಾತು ಬಂದಾಗ ಮೊದಲಿಗೆ ನೆನಪಾಗುವವರು ಸರ್ ಸೈಯದ್ ಅಹಮ್ಮದ್ ಖಾನ್. ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಶರು ಹತ್ತಿಕ್ಕಿದ ಬಳಿಕ, ರಾಜಕೀಯ ಹೋರಾಟದ ಮೂಲಕ ಸಮುದಾಯದ ಹಿತ […]

ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ

-ಸನತ್ ಕುಮಾರ ಬೆಳಗಲಿ

ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ
-ಸನತ್ ಕುಮಾರ ಬೆಳಗಲಿ

–ಸನತ್ ಕುಮಾರ ಬೆಳಗಲಿ ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಆ ಸಮುದಾಯದ ಸುಧಾರಣಾವಾದಿಗಳು ಮಾಡಬೇಕೆಂಬುದು ನಿಜ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಈ ದೇಶದ ಬಹುಸಂಖ್ಯಾತ ಸಮುದಾಯದ ಮೇಲಿದೆ. ಮುಸಲ್ಮಾನರ ತಬ್ಬಲಿತನ ಮಾಯವಾಗಬೇಕಾದರೆ ಅವರಿಗೆ ತಾಯ್ತನದ ಸ್ಪರ್ಶ ನೀಡುವ ಮನಸ್ಸು ಬಹುಸಂಖ್ಯಾತ ಸಮುದಾಯದ ಮೇಲ್ವರ್ಗಗಳಲ್ಲಿ ಮೂಡಬೇಕಾಗಿದೆ. ನಾನು ಅವಿಭಜಿತ ಬಿಜಾಪುರ ಜಿಲ್ಲೆಯ ಹಳ್ಳಿಯೊಂದರಿಂದ ಬಂದವನು. ಲಿಂಗಾಯತರು, ಕುರುಬರು, ಜೈನರು, ಬ್ರಾಹ್ಮಣರು ಮತ್ತು ಮುಸಲ್ಮಾನರು ಜೊತೆಯಾಗಿ ಬದುಕಿದ ದಿನಗಳನ್ನು ಕಣ್ಣಾರೆ ಕಂಡವನು. ಬಿಜಾಪುರದಿಂದ ‘ಸಂಯುಕ್ತ ಕರ್ನಾಟಕ’ದ ನೌಕರಿ ಸೇರಿ […]

ಕಾಂಗ್ರೆಸ್ ಮಾಡಿದ ಬಹುದೊಡ್ಡ ಅನ್ಯಾಯ

-ಡಾ.ರಝಾಕ ಉಸ್ತಾದ

–ಡಾ.ರಝಾಕ ಉಸ್ತಾದ ಕಾಂಗ್ರೆಸ್ ಪಕ್ಷ ಮುಸ್ಲಿಂರ ತುಷ್ಟೀಕರಣ ಮಾಡುತ್ತಿದೆ ಎಂದು ಇತರೆ ಪಕ್ಷಗಳು ಆರೋಪಿಸುತ್ತಿವೆ. ಆದರೆ ಕಾಂಗ್ರೆಸ್ ಪಕ್ಷದ 70 ವರ್ಷಗಳ ಆಡಳಿತದಲ್ಲಿಯೇ ಮುಸ್ಲಿಂರು ಈ ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್ ಮಾಡಿದ ಬಹುದೊಡ್ಡ ಅನ್ಯಾಯವೆಂದರೆ ಮುಸ್ಲಿಂ ಸಮುದಾಯಕ್ಕೆ ಶೈಕ್ಷಣಿಕ ಹಾಗೂ ನೇಮಕಾತಿಯಲ್ಲಿ ಮೀಸಲಾತಿ ನೀಡದೇ ಇರುವುದು. ಸ್ವತಂತ್ರ ಭಾರತದಲ್ಲಿ ಮುಸ್ಲಿಂ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ತಳಸ್ತರದಲ್ಲಿ ಉಳಿದಿರುವುದನ್ನು ಸರಕಾರ ನೇಮಿಸಿರುವ ಹಲವಾರು ಸಮಿತಿಗಳ ವರದಿಗಳು ಸ್ಪಷ್ಟವಾಗಿ ಹೇಳುತ್ತಿವೆ. ಒಂದು ಸಮುದಾಯ ಈ ರೀತಿ […]

ಈ ಸಮುದಾಯ ಬರೀ ಓಟ್ ಬ್ಯಾಂಕ್ ಅಲ್ಲ!

-ಡಾ.ಕೆ.ಷರೀಫಾ

ಈ ಸಮುದಾಯ ಬರೀ ಓಟ್ ಬ್ಯಾಂಕ್ ಅಲ್ಲ!
-ಡಾ.ಕೆ.ಷರೀಫಾ

–ಡಾ.ಕೆ.ಷರೀಫಾ ಮುಸ್ಲಿಮರ ನೋವು ತಲ್ಲಣಗಳು ಭಿನ್ನವಾಗಿವೆ. ಮುಸ್ಲಿಮರನ್ನು ಸಾವಿರಾರು ವರ್ಷಗಳ ನಂತರ ಇಂದಿಗೂ ಹೊರಗಿಟ್ಟು ಮಾತನಾಡಲಾಗುತ್ತದೆ. ಮುಸ್ಲಿಮರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಮುಕ್ತ ವೇದಿಕೆಗಳಲ್ಲಿ ಚರ್ಚೆಯಾಗಬೇಕಿವೆ. ರಾಜಕೀಯದ ಅಂಚಿಗೆ ದೂಡಲ್ಪಟ್ಟಿರುವ ಮುಸ್ಲಿಂ ಸಮುದಾಯದಲ್ಲಿ ಇಂದಿಗೂ ಸಾಮಾಜಿಕ ಸುಧಾರಣೆಯ ಚರ್ಚೆ ಪ್ರಸ್ತುತ ಮತ್ತು ಅವಶ್ಯವಾಗಿದೆಯೇ? ರಾಜಕೀಯದ ಅಂಚಿಗೆ ಮಾತ್ರವಲ್ಲ. ಅವರು ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಮತ್ತು ಶೈಕ್ಷಣಿಕವಾಗಿಯೂ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಯಾವುದೇ ಒಂದು ಸಮಾಜ ಎಲ್ಲರೊಂದಿಗೆ ಸಮನಾಗಿ ನಿಲ್ಲಲು ಶಕ್ತವಾಗುವುದಿಲ್ಲವೋ ಅಲ್ಲಿಯವರೆಗೂ ಅವರ ಸುಧಾರಣೆಯ ಕುರಿತು […]

ರಾಜಕೀಯ ಪ್ರಾತಿನಿಧ್ಯದ ಕೊರತೆ!

-ಸಿ.ಎಸ್.ದ್ವಾರಕಾನಾಥ್

ರಾಜಕೀಯ ಪ್ರಾತಿನಿಧ್ಯದ ಕೊರತೆ!
-ಸಿ.ಎಸ್.ದ್ವಾರಕಾನಾಥ್

–ಸಿ.ಎಸ್.ದ್ವಾರಕಾನಾಥ್ ಕಾಂಗ್ರೆಸ್, ಜೆಡಿಎಸ್ ನಂತಹ ಸೆಕ್ಯುಲರ್ ಪಕ್ಷಗಳು “ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಸೋಲುತ್ತಾರೆ” ಎಂಬ ಕಾರಣ ನೀಡಿ ಟಿಕೆಟ್ ನೀಡುವುದನ್ನೇ ಕಡಿಮೆ ಮಾಡತೊಡಗಿದವು! ಇದರ ಪರಿಣಾಮ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಸ್ಲಿಂ ಪ್ರಾತಿನಿಧ್ಯ ತೀರಾ ಕಡಿಮೆಯಾಗತೊಡಗಿತು. ಸಾದಾರಣವಾಗಿ ಮುಸ್ಲಿಂ ಸಮುದಾಯದ ಯಾವುದೇ ಚರ್ಚೆ ಬಂದಾಗಲೆಲ್ಲಾ ಮುಸ್ಲಿಂ ಸಮುದಾಯದ ಬಗ್ಗೆ ಪೂರ್ವಗ್ರಹ ಪೀಡಿತರಾಗಿರುವ ಬಹುತೇಕರು ಚರ್ಚೆಯನ್ನು ಕೊಂಡೊಯ್ಯುವುದೇ ಧಾರ್ಮಿಕ ಮೂಲಭೂತವಾದದ ನೆಲೆಗಳಲ್ಲಿ. ಬಹಳಷ್ಟು ಸಂದರ್ಭಗಳಲ್ಲಿ ಸಾಮಾಜಿಕ ಸುಧಾರಣೆಯ ಹೆಸರಲ್ಲಿ ಚರ್ಚೆ ಆರಂಭಿಸಿದರೂ ಪರ್ಯಾವಸಾನವಾಗುವುದು ಮಾತ್ರ ಮುಸ್ಲಿಂ […]

ಧರ್ಮಕ್ಕಿಂತ ದೇಶ ದೊಡ್ಡದು!

-ಡಾ.ಎಚ್.ಎಚ್.ನದಾಫ

ಧರ್ಮಕ್ಕಿಂತ ದೇಶ ದೊಡ್ಡದು!
-ಡಾ.ಎಚ್.ಎಚ್.ನದಾಫ

–ಡಾ.ಎಚ್.ಎಚ್.ನದಾಫ ಇತಿಹಾಸದಿಂದ ಪಾಠ ಕಲಿಯುವ ಬದಲು ಅಲ್ಲಿ ನಡೆದ ತಪ್ಪುಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಬಹುಭಾಷೆ–ಬಹುಸಂಸ್ಕøತಿಯ ಜೀವಕಳೆಯನ್ನು ಹೊಂದಿದ ಈ ನೆಲಮೂಲ ಸಂಸ್ಕøತಿಯಲ್ಲಿ ಹೊರಗಿನಿಂದ ಬಂದವರು ಯಾರು? ಎನ್ನುವ ಪ್ರಶ್ನೆಗೆ ಉತ್ತರಕಂಡುಕೊಳ್ಳುವಲ್ಲಿ ಸೋಲುತ್ತೇವೆ. ಪ್ರಸಕ್ತ ಸಂದರ್ಭದಲ್ಲಿ ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ಅವಮಾನಿಸುವ, ಅಪಮಾನಿಸುವ ಮತ್ತು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರುಗಳು ನಡೆದಿವೆ. ಎಲ್ಲಾ ಸಮುದಾಯಗಳಲ್ಲಿಯೂ ಕೆಟ್ಟ ವ್ಯಕ್ತಿಗಳು ಇದ್ದಾರೆ, ಇದನ್ನು ಅಲ್ಲಗಳೆಯಲಿಕ್ಕೆ ಸಾಧ್ಯವೇ ಇಲ್ಲ. ಕೆಲವು ಸಮುದಾಯದ ಕೆಟ್ಟವ್ಯಕ್ತಿಗಳ ವ್ಯಕ್ತಿತ್ವ ಅದು ಬಯಲಿಗೆ ಬರುತ್ತಿದ್ದಂತೆಯೇ […]

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ

-ಮೆರಿಲಿನ್ ಬೆಚಿಲ್

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ
-ಮೆರಿಲಿನ್ ಬೆಚಿಲ್

–ಮೆರಿಲಿನ್ ಬೆಚಿಲ್ ಅಮೆರಿಕದ ‘ಪೀಪಲ್ಸ್ ವಲ್ರ್ಡ್’ ಆನ್‍ಲೈನ್ ಪತ್ರಿಕೆ 2001ರಲ್ಲಿ ಪ್ರಕಟಿಸಿದ ಒಂದು ಲೇಖನವನ್ನು ಈಗ ಮತ್ತೊಮ್ಮೆ ಪ್ರಕಟಿಸಿದೆ. ಅಮೆರಿಕದ ಸಿಟ್ಟು ಕೇವಲ 9/11ರ ಭಯೋತ್ಪಾದಕ ದಾಳಿಯಿಂದ ಹುಟ್ಟಿಕೊಂಡಿದ್ದಲ್ಲ. ಬದಲಾಗಿ ಅದರ ಯುದ್ಧದ ಬೇರು ಕಮ್ಯುನಿಸಮ್ ವಿರುದ್ಧದ ಶೀತಲ ಸಮರದ ತನಕವೂ ಚಾಚಿಕೊಂಡಿದೆ. ಸುಮಾರು 83 ವರ್ಷಗಳ ಇತಿಹಾಸವನ್ನು ಹೊಂದಿರುವ ಅಮೆರಿಕದ ಪತ್ರಿಕೆ ಪೀಪಲ್ಸ್ ವಲ್ರ್ಡ್. ಸಮಾಜವಾದಿಗಳು, ಕಮ್ಯುನಿಸ್ಟ್‍ರು, ಕಾರ್ಮಿಕ ಚಳವಳಿಯಲ್ಲಿ ಸಕ್ರಿಯರಾಗಿದ್ದವರು ಈ ಪತ್ರಿಕೆಯ ಹಿನ್ನೆಲೆಯಲ್ಲಿದ್ದರು ಮತ್ತು ಈಗಲೂ ಇದ್ದಾರೆ. ಇದರ ಮೂಲ ಬೇರು ‘ಡೈಲಿ […]