ಕಟಕಟೆಯಲ್ಲಿ ಶಿಕ್ಷಣ

ಕಟಕಟೆಯಲ್ಲಿ ಶಿಕ್ಷಣ

ಇತ್ತೀಚೆಗೆ ವಾಹಿನಿಯೊಂದರಲ್ಲಿ ‘ಕನ್ನಡದಲ್ಲಿ ಕೋಟ್ಯಧಿಪತಿ’ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಸ್ಪರ್ಧೆಯ ಹಲವು ಸುತ್ತುಗಳನ್ನು ದಾಟಿ ಅಂದು ಅಂತಿಮವಾಗಿ ಹಾಟ್‍ಸೀಟ್ ತಲುಪಿದ್ದವರು ಒಬ್ಬ ಮಹಿಳೆ. ಕಾರ್ಯಕ್ರಮವನ್ನು ಅತ್ಯಂತ ಆಪ್ತ ಧಾಟಿಯಲ್ಲಿ ನಡೆಸಿಕೊಡುವ ಪುನೀತ್ ರಾಜಕುಮಾರ್ ಆರಂಭಿಕ ಹಂತದ ಸಾಮಾನ್ಯ ಸರಳ ಪ್ರಶ್ನೆಗಳನ್ನು ಮಹಿಳೆಯ ಮುಂದಿಡುತ್ತಿದ್ದರು. ಆಗ ಕಂಪ್ಯೂಟರ್ ಪರದೆಯ ಮೇಲೆ ತೇಲಿಬಂದ ಪ್ರಶ್ನೆ: ‘ರಸಾಯನ ಶಾಸ್ತ್ರದಲ್ಲಿ ಬಳಸುವ ಆಮ್ಲಜನಕದ (ಆಕ್ಸಿಜನ್) ಸಂಕೇತಾಕ್ಷರ ಯಾವುದು?’ ಓಎಕ್ಸ್, ಓವೈ, ಓ ಇತ್ಯಾದಿ ಆಯ್ಕೆಗಳಿದ್ದವು. ಹಾಟ್ ಸೀಟಿನಲ್ಲಿ ಕುಳಿತಿದ್ದರೂ ಉತ್ತರ ಗೊತ್ತಿಲ್ಲದ ಮಹಿಳೆಯ ಉಮೇದು […]

ಮಾದೇಶ್ವರ ಬೆಟ್ಟವೂ ಮಂಟೇಸ್ವಾಮಿಯೆಂಬ ಮಾಯೆಯೂ!

ವಿ.ಹರಿನಾಥ ಬಾಬು

 ಮಾದೇಶ್ವರ ಬೆಟ್ಟವೂ  ಮಂಟೇಸ್ವಾಮಿಯೆಂಬ ಮಾಯೆಯೂ! <p><sub> ವಿ.ಹರಿನಾಥ ಬಾಬು </sub></p>

ಸಮಾಜಮುಖಿ ಬಳಗ ಹಮ್ಮಿಕೊಂಡಿದ್ದ ಮಲೆ ಮಹದೇಶ್ವರ ಬೆಟ್ಟದ ನಡಿಗೆ ವಿಪರೀತ ಕುತೂಹಲ ಹುಟ್ಟುಹಾಕಿತ್ತು. ಹಾಗಾಗಿ ನಡಿಗೆ ತಂಡದ ಸದಸ್ಯರು ಕರ್ನಾಟಕದ ವಿವಿಧ ಭಾಗಗಳಿಂದ ಮುಂಚಿತವಾಗಿಯೇ ಬಂದು ಮೈಸೂರು, ಬೆಂಗಳೂರು ಸೇರಿಕೊಂಡಿದ್ದರು! ಬೆಂಬಿಡದೆ ಕಾಡುತ್ತಿದ್ದ ಮಳೆ ಮೈಸೂರಿನಲ್ಲಿ ಬಿಟ್ಟೂ ಬಿಡದೆ ಸುರಿಯಲಾರಂಭಿಸಿತ್ತು. ಬಸ್ಸು ನಮಗಾಗಿ ಕಾಯುತ್ತಾ ನಿಂತಿತ್ತು. ಆದರೆ ಮಳೆಯಲ್ಲಿ ಸಿಲುಕಿದ ನಡಿಗೆಯ ಗೆಳೆಯರು ‘ಈಗ ಬಂದೆ, ಇನ್ನೆರಡೇ ನಿಮಿಷ, ಇಲ್ಲೇ ಸರ್ಕಲ್ ನಲ್ಲಿದ್ದೇವೆ’ ಎಂದು ಸುಮಾರು ಒಂದು ಗಂಟೆ ಕಾಯಿಸಿದರು. ಕೊನೆಯವರಾಗಿ ಪ್ರಮೋದ್ ಹತ್ತಿದಾಗ ಮೈಸೂರಿನಿಂದ ಬಸ್ಸು […]

‘ಕನ್ನಡಿಗಳು ಬೇಕಾಗಿವೆ’

ಡಾ.ಎಚ್.ಎಸ್.ರಾಘವೇಂದ್ರ ರಾವ್

ಸಂಸ್ಕೃತಿನಿಷ್ಠ ವಿಮರ್ಶೆ ಮತ್ತು ಕೃತಿನಿಷ್ಠ ವಿಮರ್ಶೆಗಳ ನಡುವೆ ಯಾವುದೇ ಬಿರುಕು ಅಥವಾ ವಿಚ್ಛೇದ ಇರುವ ಅಗತ್ಯವಿಲ್ಲ. ಸಾಮಾಜಿಕನಾಗಿ,  ಸಂಸ್ಕೃತಿನಾಯಕನಾಗಿ ಒಬ್ಬ ಲೇಖಕನಬೆಲೆಕಟ್ಟುವಾಗ ಅವನ ಸಮಗ್ರ ಚಿಂತನೆ ಮತ್ತು ಜೀವನಗಳ ಹಿನ್ನೆಲೆಯನ್ನು ಗಮನಿಸಬೇಕು. ಅವನ ಸಾಹಿತ್ಯಕೃತಿಗಳನ್ನು ನೋಡುವಾಗ ಅವುಗಳಿಂದಲೇ ಮೂಡಿಬರುವ ಜೀವನಮೀಮಾಂಸೆ, ಸಮಾಜಮೀಮಾಂಸೆ ಮತ್ತು ಕಲಾಮೀಮಾಂಸೆಯನ್ನು ನೋಡುವುದು ಸರಿ. ಹೌದು. ನಮ್ಮ ಈ ಕಾಲದಲ್ಲಿ ಕನ್ನಡಿಗಳು ಕಣ್ಮರೆಯಾಗಿವೆ. ಅನ್ಯವನ್ನು ನೋಡುವ, ಬೆಲೆಕಟ್ಟುವ ಮತ್ತು ನಿರಾಕರಿಸುವ ರಭಸದಲ್ಲಿ ಸ್ವತಃ ನಮ್ಮನ್ನು ಪರೀಕ್ಷೆಗೆ ಒಳಪಡಿಸಿಕೊಳ್ಳುವ ಕೆಲಸವನ್ನು ಮರೆತಿದ್ದೇವೆ. ಈ ಮಾತು ಲೇಖಕರು, […]

ಸಾಹಿತಿಯ ಧೋರಣೆಗಳ ಮುಖಾಮುಖಿ

ಎನ್.ಬೋರಲಿಂಗಯ್ಯ

ಆಗಸ್ಟ್ ಸಂಚಿಕೆಯ ಮುಖ್ಯಚರ್ಚೆ ಚೆನ್ನಾಗಿದೆಯಾದರೂ ಪರಿಣಾಮಕಾರಿಯಾಗಿಲ್ಲ. ಆಯಾ ವಿಮರ್ಶಕರ ಲೇಖನಗಳಲ್ಲಿಯ ಮಾತುಗಳನ್ನು ಹಿಂದೆ ಎಲ್ಲೆಲ್ಲಿಯೋ ಕೇಳಿದ್ದ, ಓದಿದ್ದ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ. ‘ಸಮಾಜಮುಖಿ’ ತಿಂಗಳ ಪತ್ರಿಕೆ ತನ್ನ ಆಗಸ್ಟ್ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದಂತೆ; ಎರಡು ಮುಖ್ಯ ಪ್ರಶ್ನೆಗಳನ್ನು ಮುಂದಿಟ್ಟು ಕೆಲವು ಪರಿಣತ ವಿಮರ್ಶಕರಿಂದ ಉತ್ತರ ಪಡೆದು ಪ್ರಕಟಿಸಿದೆ. ಆದರೆ, ಆ ಉತ್ತರಗಳು ಸಂಬಂಧಪಟ್ಟ ಪ್ರಶ್ನೆಗಳಿಗೆ ನೇರಾನೇರ ಮುಖಾಮುಖಿಯಾಗಿ ಪ್ರಯೋಗಾತ್ಮಕವಾಗಿ ಸ್ಪಂದಿಸಿವೆ ಎಂದು ನನಗನಿಸುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರಶ್ನೆಗಳಿಗೆ ಎದುರಾಗುವ ತರಾತುರಿಯಲ್ಲಿ; ಆ ಪ್ರಶ್ನೆಗಳಿಗೆ […]

ಸಾಹಿತಿಯ ಧೋರಣೆ ಪರಿಗಣಿಸಬೇಕಿಲ್ಲ!

ಎಂ.ಎ.ಶ್ರೀರಂಗ

ಚರ್ಚೆಯ ವಿಷಯಕ್ಕೆ ಸಂಬಂಧಿಸಿದಂತೆ ಸಂಪಾದಕೀಯ ವಿಭಾಗದವರು ವಿವರವಾಗಿ ಕೊಟ್ಟಿರುವ ಅಂಶಗಳನ್ನು ಆಧರಿಸಿ ಅದೇ ಕ್ರಮದಲ್ಲಿ ಅವುಗಳಿಗೆ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ: ವಿಮರ್ಶೆಯ ಪ್ರಕಾರ ಸೊರಗಿದ್ದು ಏಕೆ? ಇದಕ್ಕೆ ಕಾರಣ ಕನ್ನಡ ಸಾಹಿತ್ಯ ವಿಮರ್ಶೆಯ ಸೋಗಲಾಡಿತನ ಅಲ್ಲ. ಮೊದಲಿನಿಂದಲೂ ವಿಮರ್ಶೆ ಯಾರಿಗೂ ಬೇಡವಾದ ಕೂಸು. ನವೋದಯ ಕಾಲದಿಂದ ಇಲ್ಲಿಯವರೆಗೆ ವಿಮರ್ಶೆಗೆ ಓದುಗರು ಕಡಿಮೆಯೇ. ಈಗ ಇದು ಇನ್ನಷ್ಟು ಹೆಚ್ಚಾಗಿರಬಹುದಷ್ಟೆ. ವಿಮರ್ಶೆಯ ಕೃತಿಗಳಿಗೆ ಪುಸ್ತಕದ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾಗುತ್ತಿದೆ. ಎಷ್ಟೇ ಉತ್ತಮ ವಿಮರ್ಶೆಯಾದರೂ ಅದು ಆಯಾ ವಿಮರ್ಶಕನ ವೈಯಕ್ತಿಕ ಅಭಿಪ್ರಾಯವಷ್ಟೇ […]

ದಲಿತ ಚಿಂತನೆ: ಬಸವಣ್ಣನ ದೃಷ್ಟಿ

ಡಾ.ರಾಜಶೇಖರ ಜಮದಂಡಿ

ಸ್ವಾತಂತ್ರ್ಯಾನಂತರ ದಲಿತ ಮುಖಂಡರು, ಸಾಹಿತಿಗಳು, ರಾಜಕೀಯ ನಾಯಕರು ಸಮಸಮಾಜ ನಿರ್ಮಾಣದ ನಿಟ್ಟಿನಲ್ಲಿ ಹಲವಾರು ಚಳವಳಿಗಳಲ್ಲಿ ನಿರತರಾಗಿದ್ದಾರೆ; ಅವಕಾಶ ವಂಚಿತರ ಪರವಾದ ಕೂಗು ದೊಡ್ಡದಾಗಿ ಕೇಳಿಬರುತ್ತಿದೆ. ಆದರೆ 12ನೇ ಶತಮಾನದಲ್ಲಿ ದಲಿತರ ಸ್ಥಿತಿಗತಿ ಹೇಗಿದ್ದವು? ಅವುಗಳನ್ನು ಬಸವಣ್ಣ ಸಮಾನ ಮನಸ್ಸಿನ ಸಂಘಟಕರೊಂದಿಗೆ ಹೋಗಲಾಡಿಸಲು ಹೇಗೆ ಪ್ರಯತ್ನಿಸಿದರು? ಸಮಾಜಮುಖಿ ಜುಲೈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕ ವಿಚಾರಗಳು ಇಲ್ಲಿವೆ. ಕಲ್ಯಾಣವೆಂಬದು ಪ್ರಪಂಚದಲ್ಲಿಯೇ ಪ್ರಸಿದ್ಧಿ ಪಡೆದ, ಸಕಲ ಜೀವಿಗಳಿಗೆ ಜಾತ್ಯಾತೀತತೆಯನ್ನು ಬೋಧಿಸಿದ ಮಹತ್ವದ ಸ್ಥಳ. ಅನುಭಾವದ ನುಡಿಮುತ್ತುಗಳಿಂದ ಎಲ್ಲರ ಬದುಕು ಹಸನಾಗಬೇಕೆಂದು ಬಸವಾದಿ […]

ಟೆಲಿಫೋನ್ ಕದ್ದಾಲಿಕೆ ಹಳೆಯ ಆಟ, ಹೊಸ ಪಾತ್ರ!

ಪದ್ಮರಾಜ ದಂಡಾವತಿ

ಎಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯ ‘ಕಳ್ಳಗಿವಿ’ ಪ್ರಕರಣ ಇದೀಗ ರಿಂಗಣಿಸುತ್ತಿದೆ. ಈ ಸಂದರ್ಭದಲ್ಲಿ ಹಿಂದಿನ ಜನತಾ ಪಕ್ಷದ ಸರ್ಕಾರದಲ್ಲಿ ಟೆಲಿಫೋನ್ ಕದ್ದಾಲಿಕೆಗೆ ರಾಮಕೃಷ್ಣ ಹೆಗಡೆ ಹೇಗೆ ಆದೇಶ ಮಾಡಿದ್ದರು, ಅದನ್ನು ವೀರೇಂದ್ರ ಪಾಟೀಲರು ಹೇಗೆ ಸದನದಲ್ಲಿ ಮಂಡಿಸಿದರು ಎಂಬ 1989ರ ಘಟನೆಗೆ ಸಾಕ್ಷಿಯಾಗಿದ್ದ ಹಿರಿಯ ಪತ್ರಕರ್ತರ ನೆನಪು ಇಲ್ಲಿದೆ. ವೀರೇಂದ್ರ ಪಾಟೀಲರು 1989ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿಗ್ವಿಜಯದಂಥ ಗೆಲುವನ್ನು ತಂದು ಕೊಟ್ಟರು. ಅದಕ್ಕಿಂತ ಮುಂಚಿನ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ನೇತೃತ್ವದ, ಹಗರಣಗಳಿಂದ ಕೂಡಿದ್ದ ಹಾಗೂ […]

ಯಡಿಯೂರಪ್ಪ ಸಂಕಟದ ಹಿಂದೆ ಸಂಘದ ‘ಸಂತೋಷ!’

ಸಮೀವುಲ್ಲಾ ಬೆಲಗೂರು

ಸಿಡಿಯುವ ಗುಣದ, ಕೆಲವೊಮ್ಮೆ ಸೆಟೆದು ನಿಂತು ವರಿಷ್ಠರಿಗೂ ಸೊಪ್ಪು ಹಾಕದ ಬಿ.ಎಸ್.ಯಡಿಯೂರಪ್ಪ ಎಲ್ಲಿಯವರೆಗೆ ತಮ್ಮ ಜುಟ್ಟನ್ನು ವರಿಷ್ಠರ ಕೈಗೆ ಕೊಟ್ಟಾರು? ಜುಟ್ಟು ಬಿಡಿಸಿಕೊಳ್ಳಲು ಹೊರಟ ಕ್ಷಣ ಅವರ ಕುರ್ಚಿ ಏನಾದೀತು? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲಿನ ಆರೋಪಗಳನ್ನು ಒಂದು ಕ್ಷಣ ಪಕ್ಕಕ್ಕಿಟ್ಟು ನೋಡುವುದಾದರೆ ಅವರೊಬ್ಬ ಸಾಮಾನ್ಯ ನಾಯಕನೇನಲ್ಲ. ಕೋಮು ದಳ್ಳುರಿಯ ಕ್ಷುಲ್ಲಕ ರಾಜಕೀಯವನ್ನು ಅವರು ಯಾವತ್ತೂ ತಮ್ಮ ಯಶಸ್ಸಿಗೆ ಮೆಟ್ಟಿಲಾಗಿ ಬಳಸಿಕೊಳ್ಳಲಿಲ್ಲ. ತಮ್ಮ ರಾಜಕೀಯ ಬದುಕಿನ ಉದ್ದಕ್ಕೂ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ, ಮೋದಿ ಅಸ್ತಿತ್ವದಲ್ಲೇ ಇಲ್ಲದ […]

ಆರ್ಥಿಕ ಮಹಾಕುಸಿತ: ರಾಚನಿಕವೋ ಅಥವಾ ಆವರ್ತನೀಯವೋ?

ಓಂಕಾರ ಗೋಸ್ವಾಮಿ

ದಿ ಎಕನಾಮಿಕ್ ಟೈಮ್ಸ್‍ನಲ್ಲಿ ಖ್ಯಾತ ಕಾರ್ಪೋರೇಟ್ ತಜ್ಞ ಓಂಕಾರ ಗೋಸ್ವಾಮಿ ಬರೆದ ‘ಇಟ್ ಈಸ್ ಸ್ಟಾರ್ಟ್ ಆಫ್ ಎ ಸ್ಟ್ರಕ್ಚಚರಲ್ ಪ್ರಾಬ್ಲಮ್, ನಾಟ್ ಎ ಟೆಂಪರರಿ ಸೈಕ್ಲಿಕಲ್ ಒನ್’ ಲೇಖನದ ಸಂಕ್ಷಿಪ್ತ ರೂಪ ಇಲ್ಲಿದೆ. ಕಳೆದ ಮೂರು ತ್ರೈಮಾಸಿಕಗಳಲ್ಲಿ ಭಾರತೀಯ ಆರ್ಥಿಕತೆಯ ಮಂದಗತಿ ಬೆಳವಣಿಗೆ ಮತ್ತು ಇದು ಇನ್ನೂ ಕೆಲವು ಕಾಲ ಮುಂದುವರಿಯುವ ಎಲ್ಲ ಲಕ್ಷಣಗಳು ಕಂಡುಬರುತ್ತಿರುವ ಸನ್ನಿವೇಶದಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ಅರ್ಥಶಾಸ್ತ್ರಜ್ಞ ಕೇಳುತ್ತಿರುವ ಪ್ರಶ್ನೆ: ಈ ಆರ್ಥಿಕ ಮಹಾಕುಸಿತವು ರಾಚನಿಕವೋ ಅಥವಾ ಆವರ್ತನೀಯವೋ? ಈ ಮೂರು […]

ಇತಿಹಾಸಕ್ಕೆ ಕನ್ನಡಿ ಹಿಡಿಯಲು ಬೇಕು ಟಿಪ್ಪು ಮ್ಯೂಸಿಯಂ

ಜಾನಕಿ ನಾಯರ್

ಇಂಗ್ಲೆಂಡಿನ ಮೂರನೇ ರಿಚರ್ಡ್ ದೊರೆ ಬಗ್ಗೆ ಅನೇಕಾನೇಕ ತಪ್ಪು ಕಲ್ಪನೆಗಳು ಅಲ್ಲಿನ ಜನರಲ್ಲಿದ್ದವು. ಆದರೆ ಲೇಸೆಸ್ಟರ್ ವಿಶ್ವವಿದ್ಯಾಲಯವು ಸಮಾಧಿಯೊಂದನ್ನು ಸ್ಥಾಪಿಸಿ ಆತನ ಬಗ್ಗೆ ಗೊತ್ತಿರದ ಅನೇಕ ಸಂಗತಿಗಳನ್ನು ಅರಿಯಲು ಅನುವು ಮಾಡಿಕೊಟ್ಟಿದೆ. ನಮ್ಮ ಟಿಪ್ಪು ಸುಲ್ತಾನ್ ಕುರಿತಾಗಿಯೂ ಅನೇಕ ವಿವಾದ ಹಾಗು ವೈರುಧ್ಯಗಳಿವೆ. ಆತನದೊಂದು ಮ್ಯೂಸಿಯಂ ಸ್ಥಾಪಿಸಿದರೆ ಇತಿಹಾಸವನ್ನು ಸರಿಯಾದ ದೃಷ್ಟಿಕೋನದಲ್ಲಿ ಅರಿಯಲು ಸಾಧ್ಯವಾದೀತು. ನಾನು ಇತ್ತೀಚೆಗೆ ಲೀಸೆಸ್ಟರ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿ ಆಗಷ್ಟೇ ಸ್ಥಾಪಿಸಲಾಗಿದ್ದ ಮೂರನೇ ಕಿಂಗ್ ರಿಚರ್ಡ್‍ನ ಸ್ಮಾರಕವನ್ನು ನೋಡುವ ಅವಕಾಶ […]

ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಅನ್ನುವುದು ತಪ್ಪೇ?

ಅರುಣ್ ಜಾವಗಲ್

 ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಅನ್ನುವುದು ತಪ್ಪೇ? <p><sub>  ಅರುಣ್ ಜಾವಗಲ್ </sub></p>

#KarnatakaJobsForKannadigas ಅನ್ನುವ ಹ್ಯಾಶ್ ಟ್ಯಾಗ್ ಅಡಿ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕದಲ್ಲಿನ ಉದ್ಯೋಗವಕಾಶಗಳು ಈ ನೆಲದ ಮಕ್ಕಳಿಗೆ ಸಿಗಬೇಕು ಅನ್ನುವ ನೋವಿನ ದನಿ ಒಂದು ಅಭಿಯಾನದ ರೂಪ ಪಡೆದು ಆಳುವವರ ಮೇಲೆ ಒತ್ತಡ ತರುವ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಕಳೆದ ಒಂದು ವರ್ಷದಿಂದ ಬಲ ಪಡೆದುಕೊಳ್ಳುತ್ತ ಬಂದಿದೆ. ಇದರ ಹಿಂದೆ ಕನ್ನಡಕ್ಕಾಗಿ ಮಿಡಿಯುವ ಸಾವಿರಾರು ಯುವಕರ ಪ್ರಯತ್ನವಿದೆ. ಈ ಅಭಿಯಾನ ಈ ವರ್ಷದ ಸ್ವಾತಂತ್ರ್ಯದ ದಿನ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಪ್ಪತ್ನಾಲ್ಕು ಗಂಟೆಗಳ ಉಪವಾಸ ಸತ್ಯಾಗ್ರಹದೊಂದಿಗೆ […]

ಸಿದ್ಧಾಂತಿಗಳ ರಾದ್ಧಾಂತ: ಒಂದು ಸ್ವ-ವಿಮರ್ಶೆ

ರಾಜಾರಾಮ ತೋಳ್ಪಾಡಿ ನಿತ್ಯಾನಂದ ಬಿ ಶೆಟ್ಟಿ

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಬಿ.ವಿ.ಕಕ್ಕಿಲ್ಲಾಯ ಶತಾಬ್ದಿ ಸಮಾರಂಭದಲ್ಲಿ ಭಾಗವಹಿಸಿದ್ದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಪ್ರೊ.ರಾಜಾರಾಮ ತೋಳ್ಪಾಡಿ ಮತ್ತು ಪ್ರೊ.ನಿತ್ಯಾನಂದ ಶೆಟ್ಟಿ ಅವರನ್ನು ‘ನಡುಪಂಥೀಯರು’ ಎಂದು ದೂಷಿಸಿದ್ದರು. ಫೇಸ್ಬುಕ್ಕಿನಲ್ಲಿ ಇದೇ ವಿಚಾರ ಪ್ರಸ್ತಾಪವಾಗಿ ದಿನೇಶ್, ‘ಈ ತಥಾಕಥಿತ ಮಧ್ಯಪಂಥೀಯ ಅವಳಿಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ, ಚಡ್ಡಿ ಜಾರಿಸಲು’ ಎಂದು ಆಹ್ವಾನಿಸಿದ್ದರು. ರಾಜಾರಾಮ ಮತ್ತು ನಿತ್ಯಾನಂದ ಅವರು ತಮ್ಮ ಮೇಲಿನ ಟೀಕೆಗೆ ಈ ಲೇಖನದಲ್ಲಿ ತಾತ್ವಿಕ ನೆಲೆಗಟ್ಟಿನಲ್ಲಿ ಪ್ರತಿಕ್ರಿಯಿಸುತ್ತಾ ತಮ್ಮನ್ನು ‘ವಿಮರ್ಶಾತ್ಮಕ ಎಡಪಂಥೀಯರು’ ಎಂದು ಗುರುತಿಸಿಕೊಂಡಿದ್ದಾರೆ. ವ್ಯಕ್ತಿಗತ ನಿಂದನೆಗೆ […]

ಮುಖ್ಯಚರ್ಚೆಗೆ ಪ್ರವೇಶ

ಶಿಕ್ಷಕರನ್ನು ಗುರುತಿಸದ ದೇಶಕ್ಕೆ ಪ್ರವೇಶ ತಿಳಿವಳಿಕೆ ನೀಡುವುದು ಹೇಗೆ..? ದೇಶದ ಯಾವುದೇ ಶಾಲೆಯ ಯಾವುದೇ ತರಗತಿಯೊಂದರ ವಿದ್ಯಾರ್ಥಿಗಳನ್ನು ‘ನೀವು ಮುಂದೇನಾಗಬೇಕೆಂದು ಎಣಿಸಿದ್ದೀರಾ?’ ಎಂದು ಕೇಳಿ. ಡಾಕ್ಟರ್, ಎಂಜಿನಿಯರ್, ಚಾರ್ಟ್‍ರ್ಡ್ ಅಕೌಂಟೆಂಟ್, ಐಎಎಸ್, ವಕೀಲ ಮುಂತಾದ ಹಲವಾರು ಉದ್ಯೋಗ-ವೃತ್ತಿಗಳ ಆಯ್ಕೆಗಳನ್ನು ನೀವು ಕೇಳಿಸಿಕೊಳ್ಳುತ್ತೀರಿ. ಆದರೆ ಯಾವುದೇ ಶಾಲೆಯ ಯಾವುದೇ ವಿದ್ಯಾರ್ಥಿಯೂ ತಾನು ಶಿಕ್ಷಕನಾಗುತ್ತೇನೆಂದು ಹೇಳುವುದಿಲ್ಲ. ಈಗಿರಬಹುದಾದ 25 ಕ್ಕೆ 1 ರ ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ ಸುಧಾರಣೆಯಾಗಿ ಮುಂದಿನ ವರ್ಷಗಳಲ್ಲಿ 10 ಕ್ಕೆ 1 ರ ಅನುಪಾತದ ಅಗತ್ಯವಿದೆಯೆಂದು ನಾವು […]

ಸ್ವಾಯತ್ತ ಮತ್ತು ಸ್ವತಂತ್ರ ಶಿಕ್ಷಕರು ಬೇಕು

ಪೃಥ್ವಿದತ್ತ ಚಂದ್ರಶೋಭಿ

 ಶಿಕ್ಷಕರನ್ನು ಗುರುತಿಸದ ದೇಶಕ್ಕೆ ತಿಳಿವಳಿಕೆ ನೀಡುವುದು ಹೇಗೆ..? ನಾವು ಇಲ್ಲಿ ಕೇಳಿಕೊಳ್ಳುತ್ತಿರುವ ಪ್ರಶ್ನೆಯು ನನಗೆ ಯಕ್ಷಪ್ರಶ್ನೆಯೆಂದೇನು ಅನಿಸುತ್ತಿಲ್ಲ. ಬದಲಾಗಿ, ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರವನ್ನು ಹತ್ತಿರದಿಂದ ಅಭ್ಯಸಿಸುತ್ತಿರುವ ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಪ್ರಶ್ನೆಗೆ ನೇರವಾದ ಮತ್ತು ಸರಳವಾದ ಉತ್ತರವೊಂದನ್ನು ನೀಡಬಯಸುತ್ತೇನೆ. ಭಾರತದಲ್ಲಿ ಶಿಕ್ಷಕ ವೃತ್ತಿಯು ಪ್ರತಿಭಾವಂತರಿಗೆ ಯಾಕೆ ಮೊದಲನೆಯ ಆಯ್ಕೆಯಾಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಗಣ್ಯರಿಂದ ಸಾಮಾನ್ಯರವರೆಗೆ ಎಲ್ಲರೂ ಕೇಳುವುದನ್ನು ನಾವೆಲ್ಲರೂ ಗಮನಿಸಿದ್ದೇವೆ. ಎರಡು ವರ್ಷಗಳ ಹಿಂದೆ ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾದ ಪ್ರಕಾಶ್ ಜಾವಡೇಕರ್ […]

ಸಮಾಜ ಸಮ್ಮುಖದಲ್ಲಿ ಶಿಕ್ಷಕರು

ಚಂದ್ರಶೇಖರ ದಾಮ್ಲೆ

 ಸಮಾಜ ಸಮ್ಮುಖದಲ್ಲಿ ಶಿಕ್ಷಕರು <p><sub>  ಚಂದ್ರಶೇಖರ ದಾಮ್ಲೆ </sub></p>

ಶಿಕ್ಷಣ ಅಂದರೆ ಹರಿಯುವ ನೀರು. ಶಿಕ್ಷಕನೆಂದರೆ ನೀರು ಹರಿದು ಬರುವ ಕೊಳವೆ. ಪಠ್ಯವೆಂದರೆ ಟ್ಯಾಂಕಿಯಲ್ಲಿ ತುಂಬಿರುವ ನಿಂತ ನೀರು. ಅದು ಕೊಳಕಾಗಿದ್ದರೆ ನಲ್ಲಿಯಲ್ಲಿ ಕೊಳಕು ನೀರೇ ಬರುತ್ತದೆ.ನಮ್ಮ ಟ್ಯಾಂಕಿಯಲ್ಲೇ ಕೊಳೆನೀರು ತುಂಬಿರುವಾಗ ಶಿಕ್ಷಕ ಅದನ್ನು ಹೇಗೆ ಸುಧಾರಿಸಿಯಾನು? ಶಿಕ್ಷಣ ಹೇಗೆ ಒಳ್ಳೆಯದಾದೀತು? ಶಿಕ್ಷಕರಿಗೆ ಹೇಗೆ ಗೌರವ ಸಿಕ್ಕೀತು? ಶಿಕ್ಷಕರ ದಿನಾಚರಣೆಯೇ ಪ್ರಧಾನ ಹಬ್ಬವಾಗಿರುವ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಚಿಂತನೆಗೆ ತೊಡಗುವುದು ಅರ್ಥಪೂರ್ಣ ಸಂಗತಿಯಾಗಿದೆ. ಆದರೆ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಕ್ರಮಮಾತ್ರ ಅದರ ಧ್ಯೇಯಕ್ಕೆ […]

ಶಿಕ್ಷಣವೆಂಬ ನಿಗೂಢ ತತ್ವ

ಡಾ.ಗುರುರಾಜ ಕರಜಗಿ

ಇನ್ನೊಂದು ಎರಡು ದಶಕಗಳಲ್ಲಿ ಹಣ ಪ್ರಧಾನವಾದ ಸಮಾಜ ಬದಲಾಗಿ ಮತ್ತೊಂದು ಮೌಲ್ಯದ ಸಮಾಜ ಬಂದೀತು. ಆಗ ಹಣಕ್ಕಿಂತ ಮೌಲ್ಯ ಮುಖ್ಯ ಎನ್ನಿಸಿದಾಗ, ಅದಕ್ಕೆ ಸಮಾಜದ ಸಹಕಾರ ದೊರೆತಾಗ ಮತ್ತೆ ಶಿಕ್ಷಣ ಮೌಲ್ಯಪ್ರಧಾನವಾದೀತು. ನಾನು ಶಿಕ್ಷಕವೃತ್ತಿಯನ್ನು ಕೈಗೊಂಡು ನಲವತ್ತೇಳು ವರ್ಷಗಳಾದವು ಎಂಬುದನ್ನು ಮೊನ್ನೆ ನೆನೆಸಿಕೊಂಡಾಗ ಆಶ್ಚರ್ಯವೆನ್ನಿಸಿತು. ಇದಕ್ಕೆ ಕಾರಣ ನಾನು ಇಷ್ಟು ದಿನ ಬದುಕಿ ಉಳಿದೆನಲ್ಲ ಎಂದಲ್ಲ, ಇಷ್ಟು ವರ್ಷಗಳಾದರೂ ಇನ್ನೂ ಹೊಸಬನಾಗಿಯೇ ಉಳಿದಿದ್ದೇನಲ್ಲ ಎಂಬುದಕ್ಕೆ. ನಾನು ಅಂದು ಕಲಿಸಲು ಪ್ರಾರಂಭಿಸಿದ್ದಾಗ ಶಿಕ್ಷಣ ಎಷ್ಟು ನಿಗೂಢವೆಂದು ತೋರುತ್ತಿತ್ತೋ, ಇಂದಿಗೂ […]

ಅವನತಿಗೆ ಕಾರಣವಾದ ವ್ಯವಸ್ಥೆಯ ಲೋಪ

ಶಿವಶಂಕರ ಹಿರೇಮಠ

ಸ್ವಾತಂತ್ರ್ಯೋತ್ತರ ಭಾರತದ ಕೇಂದ್ರ-ರಾಜ್ಯ ಸರ್ಕಾರಗಳು, ಯುಜಿಸಿ ಮತ್ತು ರಾಷ್ಟ್ರದ ವಿಶ್ವವಿದ್ಯಾಲಯಗಳು ಶಿಕ್ಷಕರ ವೃತ್ತಿಶಿಕ್ಷಣ ವ್ಯವಸ್ಥೆಯ ಬಗೆಗೆ ತಾಳಿದ ನಿರ್ಲಕ್ಷ್ಯ ಮನೋಭಾವನೆ ಇಂದಿನ ಹತಾಶೆಯ ಪರಿಸ್ಥಿತಿಗೆ ಕಾರಣವಾಗಿದೆ. ಶಿಕ್ಷಕ ವೃತ್ತಿ ಮೊದಲ ದರ್ಜೆ ಶಿಕ್ಷಣ ಪಡೆದವರನ್ನು ಆಕರ್ಷಿಸುತ್ತಿಲ್ಲ: ಐ.ಎ.ಎಸ್. ಐ.ಎಫ್.ಎಸ್. ಐ.ಆರ್.ಎಸ್. ಮುಂತಾದ ಉನ್ನತ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಯುವಕರನ್ನು ಆಕರ್ಷಿಸುವಂತೆ `ಇಂಡಿಯನ್ ಎಜುಕೇಶನ್ ಸರ್ವೀಸ್’ ಪ್ರಾರಂಭಿಸಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ಮತ್ತು ಶಿಕ್ಷಣದ ವಿಕಾಸದ ಕುರಿತು ಸರ್ಕಾರ ನಿಯಮಿಸಿದ ಉಚ್ಚ ಆಯೋಗಗಳಲ್ಲಿ ಶಿಫಾರಸುಗಳು ಆಗಿದ್ದರೂ […]

ವೃತ್ತಿಧರ್ಮ ಪಾಲನೆಯಲ್ಲಿ ಗೌರವ ಪ್ರಾಪ್ತಿ

ಇಂದು ಯಾವುದೇ ಸ್ತರದ ಶಿಕ್ಷಕವೃಂದದ ವೇತನ ಭತ್ಯೆ ಕಡಿಮೆ ಅನ್ನುವಂತಿಲ್ಲ. ಶಿಕ್ಷಕರಾಗುವವರು ಮತ್ತು ಶಿಕ್ಷಕರಾಗಿರುವವರಲ್ಲಿ ವೃತ್ತಿಧರ್ಮ ಆಳವಾಗಿ ಬೇರೂರಿ ಬೆಳಗಬೇಕು. ಇಡೀ ಶಿಕ್ಷಣ ವ್ಯವಸ್ಥೆ ಮಕ್ಕಳು/ವಿದ್ಯಾರ್ಥಿ ಕೇಂದ್ರಿತವಾಗಿ ರೂಪುಗೊಳ್ಳಬೇಕು. ಶಿಕ್ಷಕ ಕೇಂದ್ರಿತ ಪ್ರಶ್ನೆಗಳು ಶಿಕ್ಷಣ ಕೇಂದ್ರಿತ ಪ್ರಶ್ನೆಗಳಾದರೆ ಬಹುಶಃ ಈ ಕುರಿತು ಚರ್ಚೆ ಹೆಚ್ಚು ಅರ್ಥಪೂರ್ಣವಾಗಬಹುದಿತ್ತೇನೊ. ಈ ಹಿಂದೆ ಉನ್ನತ ಶಿಕ್ಷಣದ ಒಳಹೊರಗನ್ನು ಅನಾವರಣಗೊಳಿಸಿದ ‘ಸಮಾಜಮುಖಿ’ ಮತ್ತೆ ಶಿಕ್ಷಣದತ್ತ ದೃಷ್ಟಿ ಹರಿಸಿರುವುದು ಸೂಕ್ತವಾಗಿದೆ. ಇದು ಪ್ರಾಥಮಿಕ, ಮಾಧ್ಯಮಿಕ ಹಂತಕ್ಕೆ ಹೆಚ್ಚು ಅನ್ವಯವಾಗುವ ಚರ್ಚೆ ಎಂದು ನಾನು ಭಾವಿಸುತ್ತೇನೆ. […]

ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಡಾ.ಕಸ್ತೂರಿರಂಗನ್ ಸೂತ್ರಗಳು

ನೀರಕಲ್ಲು ಶಿವಕುಮಾರ್

ಶಿಕ್ಷಕರು ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರಬೇಕು ಎಂದು ನಾವು ಭಾವಿಸುತ್ತೇವೆ, ತಳಬುಡವಿಲ್ಲದ ಕೋರ್ಸ್‍ಗಳ ಮೂಲಕ ಅಲ್ಲ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಅಧ್ಯಕ್ಷರಾಗಿ ಭಾರತದ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ 484 ಪುಟಗಳ ಬೃಹತ್ತಾದ ಕರಡು ನೀತಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಡಾ.ಕೆ.ಕಸ್ತೂರಿರಂಗನ್ ಶಿಕ್ಷಣದ ಮಹತ್ವ ಮತ್ತು ಶಿಕ್ಷಕರ ಜವಾಬ್ದಾರಿಗಳ ಬಗ್ಗೆ ತಮ್ಮದೇ ಅವಗಾಹನೆ ಹೊಂದಿದ್ದಾರೆ. ಅವರ ವರದಿಯಲ್ಲಿಯೂ ಇದು ಪ್ರತಿಫಲಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿ ಮೂರು ದಶಕಗಳ ನಂತರ ಹೊಸ ಶಿಕ್ಷಣ ನೀತಿಯೊಂದನ್ನು ರೂಪಿಸಲು […]

ಶಿಕ್ಷಕರಲ್ಲಿ ಪ್ರಭಾವಿ ವ್ಯಕ್ತಿತ್ವದ ಕೊರತೆ

ಎಂ.ಕುಸುಮ

 ಶಿಕ್ಷಕರಲ್ಲಿ ಪ್ರಭಾವಿ ವ್ಯಕ್ತಿತ್ವದ ಕೊರತೆ <p><sub>  ಎಂ.ಕುಸುಮ  </sub></p>

ಕುಟುಂಬದ ಮೂರನೇ ತಲೆಮಾರಿನಲ್ಲಿ ಶಿಕ್ಷಕವೃತ್ತಿಯನ್ನು ಮುಂದುವರೆಸುತ್ತಿರುವ ನನಗೂ, ಈ ವೃತ್ತಿಯು ನನ್ನ ವಿದ್ಯಾರ್ಥಿ ಜೀವನದ ಕನಸಾಗಿರಲಿಲ್ಲ. ನಾನಿಂದು ಯಶಸ್ವೀ ಶಿಕ್ಷಕಿಯಾಗಿದ್ದರೆ ಅದಕ್ಕೆ ಶಿಕ್ಷಕರ ಪಾತ್ರವೇ ಪ್ರಧಾನವಾಗಿದೆ. ನಾನೂ ಸಹ ನನ್ನ ವಿದ್ಯಾರ್ಥಿಗಳನ್ನು ಶಿಕ್ಷಕರಾಗಲು ಪ್ರಭಾವಿಸಬಲ್ಲೆನಾದರೆ, ಅದು ನನ್ನ ವೃತ್ತಿ ಬದುಕಿನ ಸಾರ್ಥಕತೆ! ನಾನು, ನನ್ನದೆಂಬ ಸ್ವ-ಕೇಂದ್ರಿತ, ಸೀಮಿತ ಜೀವನ ಶೈಲಿಯು ಶಿಕ್ಷಕ ವೃತ್ತಿಯನ್ನು ಕಡೆಗಣಿಸುವುದರ ಮೊದಲ ಕಾರಣವಾಗಿರಬಹುದು. ಜ್ಞಾನ ಮತ್ತು ಮಾಹಿತಿಗಿರುವ ಅಂತರವನ್ನು ಅರಿಯದ ಕುರುಡು ಸಮಾಜದ ಪಾತ್ರವೂ ಇಲ್ಲಿದೆ. ಜ್ಞಾನಭಂಡಾರವಾದ ಶಿಕ್ಷಕರನ್ನು ಅವರ ಆರ್ಥಿಕ ಸಶಕ್ತತೆಯ […]