‘ಶಿಕ್ಷಕ ವೃತ್ತಿಯಲ್ಲಿ ಅಸ್ಥಿರತೆ ಇಲ್ಲ!’

ಡಾ.ಅನಿಲ್ ಪಿಂಟೋ

‘ಶಿಕ್ಷಕ ವೃತ್ತಿಯಲ್ಲಿ ಅಸ್ಥಿರತೆ ಇಲ್ಲ!’
ಡಾ.ಅನಿಲ್ ಪಿಂಟೋ

ಮಂಗಳೂರಿನ ಬಜ್ಪೆಯಲ್ಲಿ ಜನಿಸಿದ ಡಾ.ಅನಿಲ್ ಜೋಸೆಫ್ ಪಿಂಟೋ ಬೆಂಗಳೂರಿನ ಕ್ರೈಸ್ತ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಹುದ್ದೆಯನ್ನು ಕಳೆದ ಏಳು ವರ್ಷಗಳಿಂದ ನಿಭಾಯಿಸುತ್ತಾ ಬಂದಿದ್ದಾರೆ. ಕಳೆದ 19 ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಇವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಮಾಸ್ಟರ್ ಡಿಗ್ರಿ  ಇಂಗ್ಲಿಷ್ ಲಿಟರೇಚರ್‍ನಲ್ಲಿ ಮುಗಿಸಿ ನಂತರ ಗಿರೀಶ್ ಕಾರ್ನಾಡರ ಬಗ್ಗೆ ಅಧ್ಯಯನ ನಡೆಸಿ ಅದರಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಾರೆ. ಕೇವಲ 41ರ ವಯಸ್ಸಿನಲ್ಲಿ ಅಚ್ಚರಿಯ ಸಾಧನೆ ಮಾಡಿರುವ ಪಿಂಟೋ […]

‘ವಿದ್ಯಾರ್ಥಿಗಳ ನಿರೀಕ್ಷೆಗಳು ಬದಲಾಗಿವೆ’

ಡಾ.ಎಚ್.ಆರ್.ವೆಂಕಟೇಶ

‘ವಿದ್ಯಾರ್ಥಿಗಳ ನಿರೀಕ್ಷೆಗಳು ಬದಲಾಗಿವೆ’
ಡಾ.ಎಚ್.ಆರ್.ವೆಂಕಟೇಶ

ಕರ್ನಾಟಕದ ಶೃಂಗೇರಿ ಮೂಲದ ಡಾ.ಎಚ್.ಆರ್.ವೆಂಕಟೇಶ ಅವರು ಎಂ.ಕಾಂ., ಎಂ.ಬಿ.ಎ., ಪಿ.ಎಚ್.ಡಿ. ಪದವೀಧರರು; ತಮ್ಮ 35 ವರ್ಷಗಳ ಸುದೀರ್ಘ ಅಧ್ಯಾಪಕ ವೃತ್ತಿಯಲ್ಲಿ ದೇಶದ ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ‘ಆಚಾರ್ಯ ಬೆಂಗಳೂರು ಬಿ ಸ್ಕೂಲ್’ ಸಂಸ್ಥೆಯಲ್ಲಿ ನಿರ್ದೇಶಕರು. ಎರಡು ದಶಕಗಳ ಹಿಂದೆಯೇ ಪ್ರತಿಷ್ಠಿತ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ಬೋಧನೆಯಲ್ಲಿನ ಆಸಕ್ತಿ, ಶಿಕ್ಷಣ ಕ್ಷೇತ್ರದ ಮೇಲಿನ ಪ್ರೀತಿ ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯುವಂತೆ ಮಾಡಿದೆ. ಡಾ.ವೆಂಕಟೇಶ ಅವರೊಂದಿಗಿನ ಸಂವಾದ ಇಲ್ಲಿದೆ. ಉತ್ತಮ ಶಿಕ್ಷಕರನ್ನು ಗುರುತಿಸುವುದು ಹೇಗೆ? ಶಿಕ್ಷಕ […]

ಕರ್ನಾಟಕದಲ್ಲಿ ಉದ್ಯಮಶೀಲತೆಗೆ ಒದಗಿಬಂದಿರುವ ತೊಡಕುಗಳೇನು..?

ಅಕ್ಟೋಬರ್ ಸಂಚಿಕೆಯ ಮುಖ್ಯ ಚರ್ಚೆ: ಸಾಫ್ಟ್‍ವೇರ್, ಆರ್ ಅಂಡ್ ಡಿ, ಆನ್‍ಲೈನ್ ಸರ್ವಿಸ್ ವಲಯಗಳಲ್ಲಿ ಹೆಸರು ಗಳಿಸಿದ್ದ ಕರ್ನಾಟಕದಲ್ಲಿ ಕ್ರಮೇಣ ಉದ್ಯಮಶೀಲತೆಗೆ ಕಡಿವಾಣ ಬೀಳುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಕಳೆದ ಹತ್ತುಹನ್ನೆರಡು ವರ್ಷಗಳಲ್ಲಿ ಯಾವುದೇ ಹೊಸ ಕೈಗಾರಿಕೆ, ಸ್ಥಳೀಯ ಉದ್ಯಮ ಹಾಗೂ ಹೂಡಿಕೆ ಆಗಿಬರದಂತಹಾ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾಗಿದೆಯೇ ಎಂಬ ಸವಾಲು ನಮ್ಮ ಮುಂದಿದೆ. ಸರಣಿಯಂತೆ ಕರ್ನಾಟಕದ ಉದ್ಯಮಗಳು ಬೇರೆಬೇರೆ ಕಾರಣಗಳಿಗೆ ಸೋಲು ಕಂಡಿವೆ. ಬಿಪಿಎಲ್, ಯುಬಿ-ಕಿಂಗ್‍ಫಿಶರ್, ಡೆಕ್ಕನ್ ಏವಿಯೇಶನ್ ಮತ್ತು ಈಗ ಕೆಫೆ ಕಾಫಿ ಡೇ […]

ಭವಿಷ್ಯದ ರಸ್ತೆ ಸಾರಿಗೆ

ಮಂಜುನಾಥ ಡಿ.ಎಸ್.

ಭವಿಷ್ಯದ ರಸ್ತೆ ಸಾರಿಗೆ
ಮಂಜುನಾಥ ಡಿ.ಎಸ್.

ಮುಂದಿನ ದಶಕದಲ್ಲಿ ಸಂಪೂರ್ಣ ಬದಲಾಗಲಿದೆ ಚಿತ್ರಣ! ಕೆಲವು ದಶಕಗಳ ಹಿಂದೆ ಮನರಂಜನೆಯ ಸಾಧನವಾಗಿ ವಾಹನಗಳನ್ನು ಪ್ರವೇಶಿಸಿದ ವಿದ್ಯುನ್ಮಾನ ತಂತ್ರಜ್ಞಾನ ಕಾಲಾನುಕ್ರಮದಲ್ಲಿ ತನ್ನ ಹರಹನ್ನು ಹೆಚ್ಚಿಸಿಕೊಂಡಿದೆ; ಇದೀಗ ಕ್ರಾಂತಿಕಾರಿ ಬದಲಾವಣೆಗೆ ಸಜ್ಜುಗೊಂಡು ನಿಂತಿದೆ. ನಮಗೆ ಲಭ್ಯವಿರುವ ಸಂಪರ್ಕ ಸಾಧನಗಳಲ್ಲಿ ರಸ್ತೆ ಸಾರಿಗೆಗೆ ಹೆಚ್ಚಿನ ಮಹತ್ವವಿದೆ. ಇದು ಬೆಳೆದು ಬಂದ ಹಾದಿ ಸಹ ಕುತೂಹಲಕಾರಿಯಾಗಿದೆ. ಜರ್ಮನಿಯ ಕಾರ್ಲ್ಸ್  ಬೆಂಜ್ 1879ರಲ್ಲಿ ಪೆಟ್ರೋಲ್ ಚಾಲಿತ ತ್ರಿಚಕ್ರ ವಾಹನವನ್ನು ಅನಾವರಣಗೊಳಿಸಿ ಅಚ್ಚರಿ ಮೂಡಿಸಿದರು. ಅವರು 1885ರಲ್ಲಿ 0.75 ಹಾರ್ಸ್ ಪವರ್ ಸಾಮರ್ಥ್ಯದ ಮೋಟರುವಾಹನವನ್ನು ತಯಾರಿಸಿದರು. […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಇ-ಜ್ಞಾನ
ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ಭಾರತದಲ್ಲಿ ಅಂತರಜಾಲದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದೆಯಾದರೂ ಅವುಗಳ ಬಳಕೆಯ ಬಹುಪಾಲು ಮೊಬೈಲ್ ಹಾಗೂ ಕಂಪ್ಯೂಟರುಗಳ ಮೂಲಕವೇ ಆಗುತ್ತಿದೆ. ವಸ್ತುಗಳ ಅಂತರಜಾಲ (ಇಂಟರ್‍ನೆಟ್ ಆಫ್ ಥಿಂಗ್ಸ್) ಪರಿಕಲ್ಪನೆ ಬೆಳೆದಂತೆ ಈ ಪರಿಸ್ಥಿತಿ ಬದಲಾಗಿ ವಿದ್ಯುತ್ ಮೀಟರುಗಳು, ವಾಹನಗಳು ಹಾಗೂ ಗೃಹೋಪಯೋಗಿ ಉಪಕರಣಗಳಂತಹ ಇನ್ನಿತರ ಸಾಧನಗಳೂ ದೊಡ್ಡ ಸಂಖ್ಯೆಯಲ್ಲಿ ಅಂತರಜಾಲ ಸಂಪರ್ಕ ಪಡೆದುಕೊಳ್ಳುವ ನಿರೀಕ್ಷೆಯಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಹೀಗೆ ಅಂತರಜಾಲದ ಸಂಪರ್ಕಕ್ಕೆ ಬರುವ ಸಾಧನಗಳ ಸಂಖ್ಯೆ ಇನ್ನೂರು ಕೋಟಿಗಿಂತ ಹೆಚ್ಚಾಗಲಿದೆ ಎನ್ನುವುದು ಸದ್ಯದ ಅಂದಾಜು.   […]

ವಿಶ್ವ ವಿದ್ಯಮಾನ

ಪುರುಷೋತ್ತಮ ಆಲದಹಳ್ಳಿ

ವಿರಾಟ ರೂಪ ತಾಳಿದ ಹಾಂಗ್‍ಕಾಂಗ್ ಪ್ರತಿಭಟನೆ ಮೂರು-ನಾಲ್ಕು ದಿನಗಳವರೆಗೆ ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಮುಚ್ಚುವ ಮಟ್ಟಿಗೆ ಹಾಂಗ್‍ಕಾಂಗ್‍ನ ಪ್ರತಿಭಟನೆ ವಿರಾಟ ರೂಪ ತಾಳಿದೆ. ಪ್ರತಿದಿನವೂ ಎರಡು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ತಾಣವಾಗಿದ್ದ ಈ ವಿಮಾನನಿಲ್ದಾಣದ ಮುಚ್ಚುವಿಕೆಯಲ್ಲಿ ಹಾಂಗ್‍ಕಾಂಗ್ ಪ್ರತಿಭಟನೆ ನಿರ್ಣಾಯಕ ಘಟ್ಟ ತಲುಪಿದಂತೆ ಕಾಣುತ್ತಿದೆ. ಮೊದಲು ಗಡಿಪಾರು ಶಿಕ್ಷೆಯ ವಿರುದ್ಧ ಹೋರಾಡುತ್ತಿದ್ದ ಹಾಂಗ್‍ಕಾಂಗ್ ಯುವಜನತೆ ಇದೀಗ ಪ್ರಜಾಪ್ರಭುತ್ವ ಹಾಗೂ 2047ರ ನಂತರದ ತಮ್ಮ ಭವಿಷ್ಯದ ಬಗ್ಗೆ ಹೋರಾಡುತ್ತಿದ್ದಾರೆ. ಪ್ರತಿದಿನವೂ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವುದಲ್ಲದೆ […]

ಅಂಧ ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ

ಹನುಮಂತರಾವ್ ಕೌಜಲಗಿ

ಕಡುಬಡತನದಲ್ಲಿ ಬೆಳೆದ ಕೆಂಪಹೊನ್ನಯ್ಯ ಅವರು ದೃಷ್ಟಿವಿಕಲಚೇತನರು; ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲೇ ಬರೆದು, 340ನೇ ರಾಂಕ್ಗಳಿಸಿ, ಪ್ರಸ್ತುತ ಪಶ್ಚಿಮ ಬಂಗಾಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಶನದಲ್ಲಿ ಅವರ ಸಾಧನೆಯ ಹಾದಿ ಬಿಚ್ಚಿಕೊಳ್ಳುತ್ತದೆ. ಊರು, ತಂದೆ-ತಾಯಿ, ಬೆಳೆದು ಬಂದ ಪರಿಸರ? ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕು, ಚೌಡನಕುಪ್ಪೆ ಗ್ರಾಮ. ತಂದೆ ಹೊನ್ನಯ್ಯ, ತಾಯಿ ಮುನಿಯಮ್ಮ. ಕಡುಬಡತನದಲ್ಲಿದ್ದ ರೈತಾಪಿ ಕುಟುಂಬ. ನಾನು 7ನೇ ತರಗತಿಯಲ್ಲಿದ್ದಾಗ ತಂದೆ ತೀರಿಕೊಂಡರು. ತಾಯಿಯೇ ನಮ್ಮನ್ನ ಬೆಳೆಸಿದ್ದು, ಓದಿಸಿದ್ದು. ನಾನು 4ನೇ ತರಗತಿಯಲ್ಲಿದ್ದಾಗ ಕಣ್ಣು ಕಳೆದುಕೊಂಡ ಕಾರಣ ತಂದೆ-ತಾಯಿ […]

ಸ್ಕಿಲ್ ಇಂಡಿಯಾ ಮಿಷನ್ ವೈಟ್‍ಕಾಲರ್ ಗುಲಾಮಗಿರಿಯ ನವನಾಗರಿಕತೆ

ಸಂದೀಪ್ ಈಶಾನ್ಯ

ಸ್ಕಿಲ್ ಇಂಡಿಯಾ ಮಿಷನ್ ವೈಟ್‍ಕಾಲರ್ ಗುಲಾಮಗಿರಿಯ ನವನಾಗರಿಕತೆ
ಸಂದೀಪ್ ಈಶಾನ್ಯ

ಭಾರತದಲ್ಲಿ ಉದ್ಯೋಗಗಳನ್ನು ವಿಸ್ತರಿಸಬೇಕು. ಉದ್ಯೋಗ ನೀಡುವುದಕ್ಕಾಗಿ ಕೌಶಲ್ಯಪೂರ್ಣರನ್ನಾಗಿಸಬೇಕು ಎನ್ನುವ ಕಾರಣಕ್ಕೆ ಆರಂಭಿಸಿದ ಭಾರತ ಸರ್ಕಾರದ ‘ಸ್ಕಿಲ್ ಇಂಡಿಯಾ ಯೋಜನೆ’ ನಿಜಕ್ಕೂ ಪ್ರಯೋಜನಕಾರಿಯೇ? ಮನುಷ್ಯನ ಜೀವನಕ್ರಮ ಬದಲಾದಂತೆ ಊಹಿಸುವುದಕ್ಕೂ ಅಸಾಧ್ಯ ಎನಿಸುವಷ್ಟು ಪ್ರಮಾಣದಲ್ಲಿ ಕುಶಲಕಲೆಗಳು ಬದಲಾವಣೆ ಹಾಗೂ ರೂಪಾಂತರವನ್ನು ಕಾಣುವುದು ಸಾಧ್ಯವಾಗಿದೆ ನಿಜ. ಆದರೆ ಕುಶಲಕಲೆಗಳ ಕರ್ತೃಗಳಾದ ಕುಶಲಕರ್ಮಿಗಳು ಮಾತ್ರ ಜೀವನ ಬದಲಾವಣೆಯನ್ನಾಗಲಿ ಅಥವಾ ಸುಧಾರಣೆಯನ್ನಾಗಲಿ ಕಾಣುವುದು ಇಂದಿಗೂ ಅಸಾಧ್ಯವೇ ಆಗಿದೆ. ಹಾಗೆಂದ ಮಾತ್ರಕ್ಕೆ ಕುಶಲಕರ್ಮಿಗಳ ಎಲ್ಲಾ ಕುಶಲಕಲೆಗಳು ಕಾಲದ ಓಘದಲ್ಲಿ ಗೌಣವಾಗಿವೆ ಎಂದರ್ಥವಲ್ಲ. ದೇಶದ ಆರ್ಥಿಕತೆಯನ್ನು ಮತ್ತೊಂದು […]

ಸರ್ಕಾರಿ ಶಾಲೆಗಳಿಗೆ ರೆಕ್ಕೆ ಕಟ್ಟಿದ ಕೇಜ್ರೀವಾಲ್ ಸರ್ಕಾರ!

ಡಿ.ಉಮಾಪತಿ

ಸರ್ಕಾರಿ ಶಾಲೆಗಳಿಗೆ ರೆಕ್ಕೆ ಕಟ್ಟಿದ ಕೇಜ್ರೀವಾಲ್ ಸರ್ಕಾರ!
ಡಿ.ಉಮಾಪತಿ

ಆಮ್ ಆದ್ಮೀ ಪಾರ್ಟಿ 2015ರ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 70 ಸೀಟುಗಳ ಪೈಕಿ 67ನ್ನು ಗೆದ್ದು ದಾಖಲೆ ಸ್ಥಾಪಿಸಿತ್ತು. ಕಳೆದ ನಾಲ್ಕೂವರೆ ವರ್ಷಗಳಿಂದ ದೆಹಲಿಯ ಅರವಿಂದ್ ಕೇಜ್ರೀವಾಲ್ ನೇತೃತ್ವದ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಸುಧಾರಣೆಗೆ ಕೈ ಹಾಕಿ, ಸೈ ಎನಿಸಿಕೊಂಡಿದೆ. ಇಲ್ಲಿಯ ಶಾಲಾ ಶಿಕ್ಷಣದ ಮೂಲಸೌಕರ್ಯಗಳು ಅಸಾಧಾರಣ ಎನ್ನುವ ಮಟ್ಟಿಗೆ ಸುಧಾರಿಸಿವೆ. ಕಲಿಯುವ ಕ್ರಮಗಳನ್ನು ಸುಧಾರಿಸಿ ಬದಲಿಸಲಾಗಿದೆ ಈ ಪ್ರಕ್ರಿಯೆಯನ್ನು ‘ಕಿರು ಕ್ರಾಂತಿ’ ಎಂದು ಕರೆಯುವವರೂ ಇದ್ದಾರೆ. ಯಾವುದೇ ರಾಜ್ಯಕ್ಕೆ ಅನುಕರಣೀಯ ಮಾದರಿಯಾಗಬಲ್ಲ […]

2019ರ ರಾಷ್ಟ್ರೀಯ ಶಿಕ್ಷಣ ನೀತಿ: ಸಂವಿಧಾನ ವಿರೋಧಿ ಉಪಕ್ರಮ

ಡಾ.ಮಹಾಬಲೇಶ್ವರ ರಾವ್

ಈ ಶಿಕ್ಷಣ ನೀತಿ ಸಂವಿಧಾನ ವಿರೋಧಿ ಹಾಗೂ ಒಕ್ಕೂಟ ವಿರೋಧಿ ಎಂಬ ಕಾರಣಕ್ಕೆ ನಾನಿದನ್ನು ಖಂಡಿಸುತ್ತೇನೆ; ಹಾಗೆಯೇ ಶಿಕ್ಷಕರು ಹಾಗೂ ಶಿಕ್ಷಕರ ಶಿಕ್ಷಣಕ್ಕೆ ಮಾಡಿರುವ ದ್ರೋಹಕ್ಕಾಗಿ ತಿರಸ್ಕರಿಸುತ್ತೇನೆ. ಕೇಂದ್ರ ಸರಕಾರ 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಸಾರ್ವಜನಿಕ ಓದು, ವ್ಯಾಖ್ಯಾನ ಹಾಗೂ ಸಲಹೆ ನೀಡಿಕೆಗಾಗಿ ಬಿಡುಗಡೆಗೊಳಿಸಿದೆ. ಒಟ್ಟು 4 ಭಾಗಗಳಲ್ಲಿ 23 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ದಸ್ತಾವೇಜು 470 ಪುಟಗಳಿಗೂ ಮಿಕ್ಕಿ ಮೀರಿದೆ. ಈಗಾಗಲೆ ಕೇಂದ್ರ ಸರಕಾರಕ್ಕೆ ಒಂದೂವರೆ ಲಕ್ಷಕ್ಕೂ ಮಿಗಿಲು ಹಿಮ್ಮಾಹಿತಿ, ಸಲಹೆ ಸೂಚನೆಗಳು […]

ಸಮರ್ಥ ಜೀವನ ಚರಿತ್ರೆ

ಚಾಣಕ್ಯ

ಗೋಪಾಲಗೌಡರನ್ನು ನೆನಪಿಸಿಕೊಳ್ಳಬೇಕಾಗಿರುವ ದಿನಗಳಲ್ಲಿ ಅದಕ್ಕೊಂದು ನೆಪ ಮತ್ತು ಚೌಕಟ್ಟು ಒದಗಿಸುವ ಕೃತಿ. ಇತ್ತೀಚಿನ ಕರ್ನಾಟಕದ ರಾಜಕೀಯ ಪ್ರಹಸನದ ನಡುವೆ ಶಾಂತವೇರಿ ಗೋಪಾಲಗೌಡರ ನೆನಪು ಮತ್ತೆ ಮತ್ತೆ ಮರುಕಳಿಸುತ್ತಲೆ ಇತ್ತು. ಆ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿದ್ದ ಕೆ.ಆರ್.ರಮೇಶ್ ಕುಮಾರ್ ಈಗಿನ ರಾಜಕಾರಣಿಗಳ ನೈತಿಕ ಅಧಃಪತನವನ್ನು ಟೀಕಿಸುತ್ತ, ಪರ್ಯಾಯ ಆದರ್ಶವಾಗಿ ಗೋಪಾಲಗೌಡರನ್ನು ಆಗಾಗ್ಗೆ ಸ್ಮರಿಸಿಕೊಂಡರು. ಜಾತಿ ನೋಡಿ ಮತ ನೀಡುವುದಾದರೆ ನಿಮ್ಮ ಮತವೆ ಬೇಡ ಎಂದು ಮತದಾರನಿಗೆ ನೇರವಾಗಿ ಹೇಳಿದವರು ಗೋಪಾಲಗೌಡರು. ಚುನಾವಣಾ ಮತಯಾಚನಾ ಭಾಷಣದಲ್ಲಿ ಕುಮಾರವ್ಯಾಸ, ಕುವೆಂಪುರ […]

ಸಂವಿಧಾನದ ಅವಲಂಬನೆ ಅತಿಯಾಯಿತೇ?

ಸುರಜ್ ಎಂಗ್ಡೆ

ಸಂವಿಧಾನದ ಅವಲಂಬನೆ ಅತಿಯಾಯಿತೇ?
ಸುರಜ್ ಎಂಗ್ಡೆ

ಸುರಜ್ ಎಂಗ್ಡೆ ದಲಿತ ಸಮುದಾಯದ ಮೊದಲ ಪೀಳಿಗೆಯ ವಿದ್ವಾಂಸ; ಆಫ್ರಿಕಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪಡೆದ ಮೊದಲ ದಲಿತ ಭಾರತೀಯ. ಅವರು ತಮ್ಮ ‘ಕ್ಯಾಸ್ಟ್ ಮ್ಯಾಟರ್ಸ್’ ಪುಸ್ತಕದಲ್ಲಿ ಬದುಕಿನ ವಿವಿಧ ಸ್ತರಗಳಲ್ಲಿ ಜಾತಿ ವಹಿಸುವ ಪಾತ್ರ ಕುರಿತು ವಿಶದವಾಗಿ ಚರ್ಚಿಸಿದ್ದಾರೆ. ದಲಿತರು ಪ್ರತಿನಿತ್ಯ ಅನುಭವಿಸುವ ಯಾತನೆಗಳನ್ನು ವಿವರಿಸುತ್ತಲೇ ಬ್ರಾಹ್ಮಣ್ಯದ ಆಧಿಪತ್ಯ, ದಲಿತರೊಳಗಿನ ಒಡಕುಗಳು ಮತ್ತು ಅಂಬೇಡ್ಕರ್ ಪರಂಪರೆಯನ್ನು ವಿಮರ್ಶಿಸುತ್ತಾರೆ. ದಲಿತರ ಸಮಸ್ಯೆ, ಹೋರಾಟ, ಚಿಂತನಾಕ್ರಮವನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಸುರಜ್ ಅವರ ಕೃತಿಯ ಒಂದಷ್ಟು ಅಂಶಗಳು ಹೀಗಿವೆ. ಭಾರತದಲ್ಲಿ […]

ಹೊಸ ಪುಸ್ತಕ

ಕೆಳದಿ ಅರಸರ ಯಶೋಗಾಥೆ ಜಯದೇವಪ್ಪ ಜೈನಕೇರಿ ಪುಟ: 224+16 ಬಹುವರ್ಣ ಚಿತ್ರಗಳು ಬೆಲೆ: ರೂ.200 ರೂ.250 (ಉತ್ತಮ ಪ್ರತಿ) ಪ್ರಕಾಶನ: ಶಾಂತಲ ಪ್ರಕಾಶನ, ನಂ. 87, ‘ಶಾಂತಲ’, ಕುವೆಂಪು ರೋಡ್, ಶಿವಮೊಗ್ಗ-577201. ಮೊ: 9886376795 ಜನಸಾಮಾನ್ಯರ ಅವಲೋಕನೆಗಾಗಿ ರಚಿಸಲಾಗಿರುವ ಈ ಕೃತಿಯುಲ್ಲಿ; ಲೇಖಕರು ಚಾರಿತ್ರಿಕ ಅಂಶಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮನಮುಟ್ಟುವಂತೆ ರಚಿಸಿದ್ದಾರೆ. ಹದಿನೆಂಟನೆಯ ಶತಮಾನದಲ್ಲಿಯೇ ಸಂಶೋಧಾನಾತ್ಮಕವಾಗಿ ಕವಿ ಲಿಂಗಣ್ಣನು ಉಲ್ಲೇಖಿಸಿರುವುದನ್ನು ಒಗ್ಗೂಡಿಸಿ, ತುಲನಾತ್ಮಕವಾಗಿ ಆಸಕ್ತಿ ಹುಟ್ಟಿಸುವಂತೆ ವಿವರಿಸಿರುವುದು ಈ ಕೃತಿಯ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಕೆಳದಿ […]

ಚೆನ್ನಬಸವ ವಿರಚಿತ ನಿಜಲಿಂಗ ಚಿಕ್ಕಯ್ಯನ ಸಾಂಗತ್ಯ

ಡಾ.ಜಾಜಿ ದೇವೇಂದ್ರಪ್ಪ

ಚೆನ್ನಬಸವ ವಿರಚಿತ ನಿಜಲಿಂಗ ಚಿಕ್ಕಯ್ಯನ ಸಾಂಗತ್ಯ
ಡಾ.ಜಾಜಿ ದೇವೇಂದ್ರಪ್ಪ

ವಚನೋತ್ತರ ಯುಗದಲ್ಲಿ ಸೋಮನಾಥ, ಹರಿಹರ, ಭೀಮಕವಿ, ಗುಬ್ಬಿಮಲ್ಲಣ್ಣಾರ್ಯ ಮುಂತಾದ ಹಲವು ವೀರಶೈವ ಕವಿಗಳು ಚಾರಿತ್ರಿಕ ಶರಣರ ಘಟನೆಗಳನ್ನು ಪೌರಾಣೀಕೃತಗೊಳಿಸಿ ಹೇಳುವ ಪರಂಪರೆಗೆ ಈ ಕವಿಯೂ ಸೇರಿದ್ದಾನೆ. ಕನ್ನಡ ನಾಡಿನಲ್ಲಿ ನಡೆದ ವಚನ ಚಳವಳಿ ಎಲ್ಲಾ ಕಾಲದ ಸ್ವೀಕೃತ ಮೌಲ್ಯವನ್ನು ಹೊಂದಿದ ಚಲನಶೀಲ ವ್ಯವಸ್ಥೆ. ಶರಣರ ಅಭಿವ್ಯಕ್ತಿಯ ಮಾರ್ಗ ಅನೇಕ ಸೃಜನಶೀಲ ಬರಹಗಾರರಿಗೆ ಆದರ್ಶವಾಗಿದೆ. 12ನೇ ಶತಮಾನದ ಜಾತಿ, ವರ್ಗ, ವರ್ಣರಾಹಿತ್ಯ ಸಮಸಮಾಜವನ್ನು ನಿರ್ಮಿಸಹೊರಟ ಪ್ರಬುದ್ಧ ರಾಜಕೀಯ ನೇತಾರ ಬಸವಣ್ಣ. ಬಸವಣ್ಣನವರಿಗೆ ಹೆಗಲೆಣೆಯಾಗಿ ನಿಂತು ಹೋರಾಟದಲ್ಲಿ ಸಕ್ರಿಯರಾಗಿದ್ದ ಹಲವು […]

ಝೀರೋ ಕನ್ನಡದ ಹೀರೋಗಳು!

ಪ್ರೊ.ಜಿ.ಎಚ್.ಹನ್ನೆರಡುಮಠ

ಝೀರೋ ಕನ್ನಡದ ಹೀರೋಗಳು!
ಪ್ರೊ.ಜಿ.ಎಚ್.ಹನ್ನೆರಡುಮಠ

ಈ ಕನ್ನಡ ಕುಲಪುತ್ರರು ಒಂದು ಕಾಲಕ್ಕೆ ಕಳ್ಳೀಸಾಲಿನ ಹಳ್ಳೀ ಮನೆಯಲ್ಲಿ ಹುಟ್ಟಿ ರೊಟ್ಟಿ-ಖಾರಬ್ಯಾಳಿ ಉಂಡು ಬಂದವರೇ. ಆದರೆ ನನ್ನ ಎದೆ ಭುಗುಲ್ ಅನ್ನುವ ಸುದ್ದಿ ಗೊತ್ತಾಯಿತು. ಇವರಿಗೆ ಈಗ ಕನ್ನಡವೇ ಕುತ್ತು!  ಇಂಗ್ಲಿಷೆ ಸಂಪತ್ತು! ಇವರ ಮನೆಗೆ ಬರುವ ಇಂಗ್ಲಿಷ್ ಪತ್ರಿಕೆಗಳ ಗುಂಪಿನಲ್ಲಿ ನೆಂಚಿಕೊಳ್ಳಲು ಕೂಡ ಒಂದೂ ಕನ್ನಡ ಪತ್ರಿಕೆ ಇಲ್ಲ! ಅದೊಂದು ಸುಂದರ ನಂದನವನ. ಇಂದ್ರ ಬಯಸುವ ಚದುರಂಗ ಚಂದನವನ. ಬಣ್ಣ ಬೆಡಗು ಬಂಗಾರ ಸಿಂಗಾರ ತುಂಬಿದ ಭಾಗ್ಯವಂತರ ಬೃಂದಾವನ! ಹೌದು! ಜೀವನದಲ್ಲಿ ಇಂಥ ಪ್ರೊಟೆಕ್ಟೆಡ್ ಮೆಟ್ರೋಟೆಕ್ ಕಾಲನಿಯಲ್ಲಿ […]

ಮೂಲ ಕೊಡಗು ಉಳಿಯಲಿ

ಡಾ.ಕೆ.ಎಂ.ಬೋಜಪ್ಪ

ಮೂಲ ಕೊಡಗು ಉಳಿಯಲಿ
ಡಾ.ಕೆ.ಎಂ.ಬೋಜಪ್ಪ

ಕಾಡುಮೇಡುಗಳನ್ನು ನಿರ್ನಾಮ ಮಾಡಿ ಹೋಂ ಸ್ಟೇ, ರೆಸಾರ್ಟ್‍ಗಳನ್ನು ಮಾಡುವುದನ್ನು ವಿರೋಧಿಸಿ ಇಲ್ಲಿನ ಜನರು ಆಂದೋಲನ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಪ್ರಾಕೃತಿಕ ಕೊಡಗನ್ನು ನಾವು ಉಳಿಸಿಕೊಳ್ಳಬಹುದು. ಕೊಡಗಿನ ಮೂಲ ಹೆಸರು ‘ಕೊಡಿಮನೆ’. ಬ್ರಿಟಿಷರು ‘ಕೂರ್ಗ್’ ಎಂದು ಬದಲಿಸಿದರು. ಬಳಿಕ 1956ರಲ್ಲಿ ‘ಕೊಡಗು’ ಎಂದು ಮರುನಾಮಕರಣ ಮಾಡಿದರು. ಪ್ರಸ್ತುತ ಕೊಡಗು ಜಿಲ್ಲೆಯನ್ನು ‘ಮಡಿಕೇರಿ’, ‘ವಿರಾಜಪೇಟೆ’, ‘ಸೋಮವಾರಪೇಟೆ’ ಮೂರು ತಾಲ್ಲೂಕುಗಳಾಗಿ ವಿಂಗಡಿಸಲಾಗಿದೆ. ಹಾಗೆಯೇ, ‘ಕಾವೇರಿ’ ಮತ್ತು ‘ಪೊನ್ನಂಪೇಟೆ’ ಎಂಬ ಮತ್ತೆರೆಡು ತಾಲ್ಲೂಕು ಕೇಂದ್ರಗಳನ್ನು ಸೃಷ್ಟಿಸುವಂತೆ ಜನ ಹೋರಾಡುತ್ತಿದ್ದಾರೆ. ‘ತಡಿಯಂಡಮೋಳ್’(1744.68 ಮೀ.) […]

ಗುರುವಿನ ಗುಲಾಮ

ಎಂ.ಎಸ್.ನರಸಿಂಹಮೂರ್ತಿ

ಗುರುವಿನ ಗುಲಾಮ
ಎಂ.ಎಸ್.ನರಸಿಂಹಮೂರ್ತಿ

ನಗರದ ಕಾನ್ವೆಂಟ್ ಶಾಲೆಯ ಕನ್ನಡ ಮೇಡಂ ಒಬ್ಬರ ನವರಸಗಳ ಬಗ್ಗೆ ಮಾತಾಡುತ್ತಾ ಎಂಟು ರಸಗಳನ್ನು ತಿಳಿಸಿದ್ದರು. ಶೃಂಗಾರ, ಹಾಸ್ಯ, ಕರುಣ ಎಲ್ಲಾ ಸುಲಭವಾಗಿ ಬಂತು. ಒಟ್ಟಾರೆ ಲೆಕ್ಕ ಮಾಡಿದಾಗ ಒಂದು ರಸ ಕಡಿಮೆ ಇತ್ತು. ‘ಒಂಬತ್ತನೆಯ ರಸ ನಿಂಬೆರಸ’ ಎಂದಿದ್ದರಂತೆ. ಇದು ಜೋಕೋ, ಶಾಲೆಯಲ್ಲಿನ ಟಾಕೋ ತಿಳಿಯದು. ಗುರು ಎಲ್ಲರ ಬದುಕಲ್ಲೂ ಬಂದು ಹೋಗಿರುತ್ತಾನೆ. ಗುರುಗಳಲ್ಲಿ ಮುಖ್ಯವಾಗಿ ಮೂರು ಪ್ರಭೇದಗಳಿವೆ. 1. ಉಪಾಧ್ಯಾಯ 2. ಆಚಾರ್ಯ 3. ಗುರು. ಉಪಾಧ್ಯಾಯರು ಲೌಕಿಕ ವಿಷಯಗಳನ್ನ ಶಿಷ್ಯರ ತಲೆಗೆ ತುಂಬುತ್ತಾರೆ. […]

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ವಿಶೇಷ ಸಂದರ್ಶನ

ಕೆ.ವಿ.ಪರಮೇಶ್

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ವಿಶೇಷ ಸಂದರ್ಶನ
ಕೆ.ವಿ.ಪರಮೇಶ್

‘ಕ್ರೀಡಾಪಟುಗಳಿಗೆ ಅಗತ್ಯವಾದ ತರಬೇತಿ ಮತ್ತು ಮೂಲಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆ. ಆಯ್ಕೆ ವೇಳೆ ಶಿಫಾರಸು ಮತ್ತು ಲಾಬಿ ಗಳಿಂದ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ನಮ್ಮ ಸರ್ಕಾರದ ಧ್ಯೇಯ. ಐದು ವರ್ಷ ಗಳಲ್ಲಿ ಭಾರತದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿ ಪದಕಕ್ಕೆ ಮುತ್ತಿಡಬೇಕೆಂಬುದು ನನ್ನ ಗುರಿ. ಈ ನಿಟ್ಟಿನಲ್ಲಿ ದೇಶದ ಕ್ರೀಡಾನೀತಿಯಲ್ಲೇ ಆಮೂಲಾಗ್ರ ಸುಧಾರಣೆ ತರಲಾಗುವುದು’ ಕ್ರೀಡೆ ಹಿನ್ನೆಲೆ ಇರೋರಿಗೆ ಸಚಿವ ಸ್ಥಾನ ಸಿಗಬೇಕು ಅನ್ನೋ ಮಾತಿದೆ. ಇದಕ್ಕೆ ನೀವು ವ್ಯತಿರಿಕ್ತ ಅಲ್ವಾ? ನನ್ನ ಪ್ರಕಾರ ಹಾಗೆ ವಿಶ್ಲೇಷಣೆ […]

ಹಾಸ್ಯಾಸ್ಪದ ರಿಯಾಲಿಟಿ ಷೋ ಮ(ಸ)ಜಾ ಟಾಕೀಸ್!

ನಾ.ದಿವಾಕರ

ಹಾಸ್ಯಾಸ್ಪದ ರಿಯಾಲಿಟಿ ಷೋ ಮ(ಸ)ಜಾ ಟಾಕೀಸ್!
ನಾ.ದಿವಾಕರ

ದ್ವಂದ್ವಾರ್ಥದ ಸಂಭಾಷಣೆಗಳನ್ನು ಹಾಸ್ಯದ ರೂಪದಲ್ಲಿ ಉಣಬಡಿಸುವ ಸೃಜನ್ ಲೋಕೇಶ್ ಮತ್ತು ತಂಡದವರು ಕನ್ನಡಿಗರಿಗೆ ನೀಡುತ್ತಿರುವುದಾದರೂ ಏನನ್ನು? ಮನರಂಜನೆಯನ್ನೋ ಅಥವಾ ವೀಕ್ಷಕರಿಗೆ ಮುಜುಗರ ಉಂಟು ಮಾಡುವ ನಕಲು ಮಾಡಿದ ಹಳಸಲು ಪ್ರಸಂಗಗಳನ್ನೋ? ಹಾಸ್ಯ ಮಾನವನ ಬದುಕಿನ ಅವಿಭಾಜ್ಯ ಅಂಗ. ಬಹುಶಃ ಹಾಸ್ಯ ಪ್ರಜ್ಞೆ ಇಲ್ಲದೆ ಹೋಗಿದ್ದರೆ ಮನುಕುಲ ವೇದನೆಗಳಲ್ಲೇ ಸೊರಗಿಹೋಗುತ್ತಿತ್ತೇನೋ ಎನಿಸುತ್ತದೆ. ಆದರೆ ಹಾಸ್ಯ ಎನ್ನುವುದು ಅಷ್ಟೇ ಸಾಪೇಕ್ಷ ವಿದ್ಯಮಾನ. ಸಾರ್ವತ್ರಿಕ ಎನ್ನಬಹುದಾದ ಹಾಸ್ಯ ಇಲ್ಲವೇನೋ ಎನ್ನುವಂತೆ ಕೆಲವರು ಹಾಸ್ಯ ಸನ್ನಿವೇಶಗಳಲ್ಲಿ ಗುಮ್ಮನೆ ಕುಳಿತಿರುವುದನ್ನು, ಅಪರೂಪವಾಗಿಯಾದರೂ, ಕಂಡಿರಲು ಸಾಧ್ಯ. […]

2019ರ ಚಂಡಮಾರುತ: ಒಂದು ದೃಷ್ಟಾಂತ

ಕಮಲಾಕರ ಕಡವೆ

2019ರ ಚಂಡಮಾರುತ: ಒಂದು ದೃಷ್ಟಾಂತ
ಕಮಲಾಕರ ಕಡವೆ

1 ಇದೋ ನೋಡಿ ಹೀಗಿದೆ ದಿಗಿಲು ಹುಟ್ಟಿಸುವ ನಮ್ಮ ಕಾಲದ ದೃಷ್ಟಾಂತ. ಎಲ್ಲದರ ನಂತರ ಬಂತು ಆ ವಿಧ್ವಂಸಕ ಚಂಡಮಾರುತ ರಾಜ್ಯ-ದೇಶಗಳ ಚುನಾವಣೆಗಳ ಬಳಿಕ ಒಬ್ಬರಿನ್ನೊಬ್ಬರ ತಿವಿಯುವ ಎಲ್ಲ ಬೈಗುಳಗಳ ಕ್ಷಿಪಣಿಗಳು ಬಡಿದ ಬಳಿಕ ಬಹುಮತ ತಮ್ಮದೇ ಎಂದು ಪಕ್ಷಗಳು ಬೀಗಿ ಮುಗಿದ ಬಳಿಕ ದೀನದಲಿತರ ಧೃತಿಗೆಡಿಸಿದ ಸರ್ವೋತ್ತಮ ಪ್ರಜಾತಂತ್ರವೆಂಬ ವಿಲಕ್ಷಣ ಕೇಳಿಯ ಬಳಿಕ ಕೂಗಾಟ ಮೊಸಳೆ ಕಣ್ಣೀರುಗಳ ನಡುವೆ ಆಯುವ ಹುಚ್ಚು ಹಬ್ಬದ ಬಳಿಕ ತಂತಮ್ಮ ಪ್ರದೇಶಗಳಲ್ಲಿ […]