Home»Homepage Blog (Page 2)

ಅನಿಸಿಕೆಗಳು

-ಎನ್.ಬೋರಲಿಂಗಯ್ಯ, ಮೈಸೂರು.

-ಎನ್.ಬೋರಲಿಂಗಯ್ಯ, ಮೈಸೂರು. ಸಹನೆ – ಇಂದಿನ ಅಗತ್ಯ 1) ಸೆಪ್ಟೆಂಬರ್ ತಿಂಗಳ ಸಮಕಾಲೀನದ ಆರೂ ಲೇಖನಗಳು ಪತ್ರಿಕೆಯ ಮುಖ್ಯ ಚರ್ಚೆಯಷ್ಟೇ ಆಕರ್ಷಕವಾಗಿರುವುದು ವಿಶೇಷ ಎನಿಸುತ್ತದೆ. ಮಂದಿರ ನಿರ್ಮಾಣದ ರಾಜಕೀಯ ಔಚಿತ್ಯವನ್ನು ಕುರಿತ ಮೂರೂ ಲೇಖನಗಳು ತಮ್ಮಷ್ಟಕ್ಕೆ ತಾವು ಅರ್ಥವತ್ತಾಗಿ ಕಂಡರೂ ಚಾರಿತ್ರಿಕ ಸನ್ನಿವೇಶದ ದೃಷ್ಟಿಯಿಂದ ಆರೋಗ್ಯಕರ ಚರ್ಚೆಯನ್ನು ಆಹ್ವಾನಿಸುವಂತಿರುವುದೂ ಗಮನಾರ್ಹ. ಸರಳವಾಗಿ ಹೇಳಬೇಕೆಂದರೆ, ಆಧುನಿಕಪೂರ್ವ ರಾಜಕೀಯ ಮತ್ತು ದೇವಮಂದಿರಗಳ ನಿರ್ಮಾಣದ ಒಡನಾಟ ಒಂದು ಬಗೆಯ ಮುಗ್ಧತೆಯ ಲೋಕಕ್ಕೆ ಸೇರಿದಂತಿದ್ದರೆ ಈಗ ಪ್ರಜಾಪ್ರಭುತ್ವ ಮತ್ತು ವೈಜ್ಞಾನಿಕ ಜಾಗೃತಿಯ ಸಂದರ್ಭದಲ್ಲಿ […]

ನಾನು ಮತ್ತು ವೈರಾಣು

- ಡಾ.ಕೆ.ಕೆ.ಜಯಚಂದ್ರ ಗುಪ್ತ

 ನಾನು ಮತ್ತು ವೈರಾಣು <p><sub> - ಡಾ.ಕೆ.ಕೆ.ಜಯಚಂದ್ರ ಗುಪ್ತ </sub></p>

– ಡಾ.ಕೆ.ಕೆ.ಜಯಚಂದ್ರ ಗುಪ್ತ ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಹುಟ್ಟೂರಿನಲ್ಲಿ ಸಿಡುಬು, ಸೀತಾಳೆ, ಡಡಾರ ಇತ್ಯಾದಿ ಜಡ್ಡುಗಳು ಆಗಾಗ ಬರುತ್ತಿದ್ದವು. ಊರಿನಲ್ಲಿ ಅದೆಷ್ಟೋ ಜನರಿಗೆ ತಗುಲಿ ಕೊನೆಗೊಮ್ಮೆ ಕಡಿಮೆಯಾಗುತ್ತಿದ್ದವು. ಬಳಿಕ ಮನೆಯವರೆಲ್ಲ ಹತ್ತಿರದ ಮಾರಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಪ್ರಸಾದ ಸೇವಿಸಿ ಮನೆಗೆ ಬರುತ್ತಿದ್ದರು. 1956ರಲ್ಲಿ ಏಷ್ಯನ್ ಫ್ಲೂ ಎಂಬ ವೈರಾಣು ಸಮಸ್ಯೆ ಕಾಣಿಸಿಕೊಂಡಿತ್ತು. ಜ್ವರ, ಚಳಿ, ವಿಪರೀತ ತಲೆನೋವು ಹಾಗೂ ಅದಕ್ಕಿಂತ ಮುಖ್ಯವಾಗಿ ಕೆಂಪಡರಿದ ಕಣ್ಣುಗಳು ಈ ರೋಗದ ಲಕ್ಷಣಗಳಾಗಿದ್ದವು. ಇದು ಕ್ರಮೇಣ ಸಿಂಗಪೂರ […]

ಕೃಷಿ ಮಾರುಕಟ್ಟೆ ಮಸೂದೆಗಳು: ಶಾಸನಗಳ ಪಠ್ಯ v/s ಜನರ ಅಭಿಮತ

- ಹರೀಶ್ ದಾಮೊಧರನ್

 ಕೃಷಿ ಮಾರುಕಟ್ಟೆ ಮಸೂದೆಗಳು:  ಶಾಸನಗಳ ಪಠ್ಯ v/s ಜನರ ಅಭಿಮತ <p><sub> - ಹರೀಶ್ ದಾಮೊಧರನ್ </sub></p>

ಈ ಶಾಸನಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡುವ ‘ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಒಂದು ಆರ್ಥಿಕ ವ್ಯವಸ್ಥೆಯಾಗಿದೆ ಎಂದು ಸರ್ಕಾರವು ಪ್ರತಿಪಾದಿಸಲು ಪ್ರಯತ್ನಿಸುತ್ತಿದೆ. – ಹರೀಶ್ ದಾಮೊಧರನ್ ಅನೇಕ ಪ್ರಸಂಗಗಳಲ್ಲಿ ಶಾಸನಗಳಿಗಿಂತ ಅವು ಏನನ್ನು ಪ್ರತಿಪಾದಿಸುತ್ತವೆ ಮತ್ತು ಸದರಿ ಶಾಸನಗಳನ್ನು ರೂಪಿಸಿದ ಸಂದರ್ಭ ಯಾವುದು ಎನ್ನುವ ಸಂಗತಿಗಳು ಹೆಚ್ಚು ಪ್ರಸ್ತುತವಾಗಿರುತ್ತದೆ. ಈ ಮಾತು ಸಂಸತ್ತಿನಲ್ಲಿ ಅನುಮೋದನೆ ಪಡೆದು ಶಾಸನವಾಗುತ್ತಿರುವ ‘ಫಾರ್ಮರ್ಸ ಪ್ರೋಡ್ಯೂಸ್ ಟ್ರೇಡ್ ಆಂಡ್ ಕಾರ್ಮಸ್ (ಪ್ರೋಮೋಶನ್ ಆಂಡ್ ಫೆಸಿಲಿಟೇಶನ್) ಶಾಸನ […]

ಸುದ್ದಿ ವಾಹಿನಿಗಳಿಗೆ ಬುದ್ಧಿ ಹೇಳುವುದು ಹೇಗೆ?

- ಎನ್.ರವಿಕುಮಾರ್ ಟೆಲೆಕ್ಸ್

 ಸುದ್ದಿ ವಾಹಿನಿಗಳಿಗೆ ಬುದ್ಧಿ ಹೇಳುವುದು ಹೇಗೆ? <p><sub> - ಎನ್.ರವಿಕುಮಾರ್ ಟೆಲೆಕ್ಸ್ </sub></p>

ರಾಗಿಣಿ, ಸಂಜನಾ ಮತ್ತಿತರರು ಮಾಡಿರಬಹುದಾದ ಅಪರಾಧಗಳನ್ನು ಎತ್ತಿ ತೋರಿಸುವ ಅತ್ಯುತ್ಸಾಹದಲ್ಲಿ ಸುದ್ದಿ ವಾಹಿನಿಗಳು ವಿವೇಕ ಕಳೆದುಕೊಂಡು ತಮಗೆ ತಾವೆ ಬೆತ್ತಲಾಗುತ್ತಿವೆ! – ಎನ್.ರವಿಕುಮಾರ್ ಟೆಲೆಕ್ಸ್ ಡ್ರಗ್ಸ್ ದಂಧೆಯಲ್ಲಿ ಆರೋಪಿತರಾಗಿ ಕಟಕಟೆಯಲ್ಲಿರುವ ಚಿತ್ರತಾರೆಯರಾದ ರಾಗಿಣಿ, ಸಂಜನಾ ಮುಂತಾದವರು ಕನ್ನಡ ಚಿತ್ರರಂಗದ HOT STARಗಳೇ ನಿಜ. ಕಲೆಯ ವ್ಯಾಪ್ತಿಯಲ್ಲಿ ಅವರಿಗಿರಬಹುದಾದ ಪ್ರತಿಭಾ ಸಾಮರ್ಥ್ಯವೂ ಕೂಡ. ಈ ನಟಿಯರು ಸದ್ಯಕ್ಕೆ ಕನ್ನಡದ ಸುದ್ದಿ ವಾಹಿನಿಗಳ ಪಾಲಿಗೆ ‘Salable HOT Material’ಗಳಂತೆ ಬಳಕೆಯಾಗಲ್ಪಡುತ್ತಿದ್ದಾರೆ. ನೀವು ಗಮನಿಸಿರಬಹುದು. ಡ್ರಗ್ಸ್ ದಂಧೆ ಪ್ರಕರಣದಲ್ಲಿ ರಾಗಿಣಿ, ಸಂಜನಾ […]