Home»Homepage Blog (Page 200)

ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…

-ಕಾವ್ಯಶ್ರೀ ಎಚ್.

 ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್… <p><sub> -ಕಾವ್ಯಶ್ರೀ ಎಚ್. </sub></p>

ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ ಶಿವಭಕ್ತಿನಿಷ್ಠೆಯನ್ನು ಪಾಲಿಸಿದ್ದಕ್ಕಾಗಿ. ಹರಿಹರನ ರಗಳೆಯನ್ನು ಓದುತ್ತಿದ್ದರೆ ನಿಮ್ಮ ಎದೆಯೊಳಗೊಂದು ಡಮರು ನಿನಾದ ಚಿಮ್ಮಿ ಹೊಮ್ಮುತ್ತಲಿರುತ್ತದೆ ಎಂದರೆ ಉತ್ಪ್ರೇಕ್ಷೆಯಾಗದು. ಅವನ ಭಾಷೆ, ಲಯ, ಭಕ್ತಿಯ ತೀವ್ರತೆ ಅಂತಹದು. ಅವನ ಹೆಸರಿನಲ್ಲೇ ಶಿವನನ್ನು ಹೊತ್ತವನು. ಪೆರೆಯಾಳದೇವ- ಹೆರೆಯಾಳದೇವ-ಹರಿಹರದೇವ ಎಂಬುದು ಹರಿಹರನ ಹೆಸರಿನ ಮೂಲವಾಗಿರಬಹುದೆಂದು ಡಾ.ಕಲಬುರ್ಗಿಯವರು ಹೇಳುತ್ತಾರೆ. ಇದರರ್ಥ ಅರ್ಧಚಂದ್ರನನ್ನು ಧರಿಸಿದವ ಎಂದು. […]

ಹೊಸ ಪುಸ್ತಕ

ಕಾಮನ ಹುಣ್ಣಿಮೆ ನಟರಾಜ್ ಹುಳಿಯಾರ್ ಪುಟ: 218, ಬೆಲೆ: ರೂ.180 ಟೆಲಿಪೋನ್ ಸುಲಭವಾಗಿ ದಕ್ಕದ ಕಾಲದ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಈಗಿನ ಕಾಲದ ಓದುಗರನ್ನೂ ಆವರಿಸುವಂತೆ ರಚಿಸಿದ ಕಾದಂಬರಿ ಇದಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಲೇಖಕ ಡಾ. ನಟರಾಜ್ ಹುಳಿಯಾರ್, ಸಾಮಾನ್ಯ ಜನ ಬಡತನ, ಬಿಕ್ಕಟ್ಟುಗಳ ನಡುವೆಯೂ ಘನತೆಯಿಂದ ಬದುಕಲೆತ್ನಿಸುವ ಜೀವನ ಹೋರಾಟವನ್ನು ಮತ್ತು ಅದರಲ್ಲಿ ಅವರು ಪಡೆಯುವ ಗೆಲುವುಗಳನ್ನು ಈ ಕಾದಂಬರಿಯಲ್ಲಿ ದಾಖಲಿಸಿದ್ದಾರೆ.   ಕನ್ನಡಿ ನಟರಾಜ್ ಹುಳಿಯಾರ್ ಪುಟ: 362, ಬೆಲೆ: […]

ಓದುಗರ ಸಂವೇದನೆ ಕಲಕುವ ಕೃತಿ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ

-ಡಾ.ಸುಭಾಷ್ ರಾಜಮಾನೆ.

ಕನ್ನಡದ ಹೆಸರಾಂತ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಂಕಣ ಬರಹಗಳ ಸಂಕಲನ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಕೃತಿಯು ಆರು ತಿಂಗಳಲ್ಲಿ ಮರು ಮುದ್ರಣಗೊಂಡಿದೆ. ಸಂಸ್ಕೃತಿಕವಾಗಿ ಕನ್ನಡ ಸಾಹಿತ್ಯದ ಅಸ್ಮಿತೆಯನ್ನು ವಿಸ್ತರಿಸುತ್ತಿರುವ ಕೃತಿಯಾಗಿದೆ. ಕನ್ನಡದ ಜನಪ್ರಿಯ ‘ಸುಧಾ’ ಸಾಪ್ತಾಹಿಕದ ‘ವಿಚಾರ ಲಹರಿ’ಯಲ್ಲಿ ನಿಯತವಾಗಿ ನಾಲ್ಕು ವರ್ಷಗಳ ಕಾಲ ಈ ಅಂಕಣ ಬರಹಗಳು ಪ್ರಕಟವಾಗಿದ್ದವು. ಸಾಮಾನ್ಯವಾಗಿ ಬಹುಸಂಖ್ಯಾತ ಜನರು ಓದುವ, ಮೆಚ್ಚುವ ಬರಹಗಳನ್ನು ಜನಪ್ರಿಯ ಎಂಬ ಹಣೆಪಟ್ಟಿಯನ್ನು ಅಂಟಿಸಿ ನೇತ್ಯಾತ್ಮಕವಾಗಿ ನೋಡಲಾಗುತ್ತದೆ. ಜನಪ್ರಿಯ ಬರಹಗಳು ಬಹುಜನರು ಒಪ್ಪುವ […]

ತೇಜಸ್ವಿ ಕಥನದಲ್ಲಿ ಅಲಕ್ಷಿತ ಪ್ರತಿಭೆಗಳ ಹುಡುಕಾಟದ ಆಯಾಮಗಳು

ಡಾ.ಕಲೀಮ್ ಉಲ್ಲಾ.

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷ ನೂರಾರು ಪಿ.ಹೆಚ್.ಡಿ. ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ನುರಿತ ಪ್ರಾಧ್ಯಾಪಕರಿಂದ ಪರಿಶೀಲನೆ ನಡೆಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಯ್ದ ಪಿ.ಹೆಚ್.ಡಿ. ಮಹಾಪ್ರಬಂಧದ ಸಾರಾಂಶವನ್ನು ಸಮಾಜಮುಖಿ ಓದುಗರಿಗೆ ಒದಗಿಸಲಾಗುವುದು. ಈ ಬಾರಿಯ ಪಿ.ಹೆಚ್.ಡಿ. ವಿಷಯ: ‘ತೇಜಸ್ವಿ ಕಥನದಲ್ಲಿ ಅಲಕ್ಷಿತ ಪ್ರತಿಭೆಗಳ ಹುಡುಕಾಟದ ಆಯಾಮಗಳು’ ಸಂಶೋಧಕರು: ಡಾ.ಕಲೀಮ್ ಉಲ್ಲಾ ಮಾರ್ಗದರ್ಶಕರು: ಪ್ರೊ.ಸಣ್ಣರಾಮ, ವಿಶ್ರಾಂತ ಪ್ರಾಧ್ಯಾಪಕರು, […]