Home»Homepage Blog (Page 201)

ಕರ್ನಾಟಕ ಆಯವ್ಯಯ ಜನಪರ-ಜನಪ್ರಿಯ ಮಿಶ್ರಣ

-ಡಾ.ಎಸ್.ಆರ್.ಕೇಶವ

ಒಟ್ಟಾರೆಯಾಗಿ ಕೆಲವು ಪ್ರಸ್ತಾವನೆಗಳನ್ನು ಹೊರುತುಪಡಿಸಿದರೆ, good economics is good politics too ಎಂಬಂತೆ ಜನಪರ ಹಾಗೂ ಜನಪ್ರಿಯ ಅಂಶಗಳಿಂದ ಹದವಾಗಿ ಮಿಶ್ರಿತವಾದ ಆಯವ್ಯಯ ಇದಾಗಿದೆ. ಕುಮಾರಸ್ವಾಮಿ ಅವರು ಮಂಡಿಸಿದ ಸಮ್ಮಿಶ್ರ ಸರ್ಕಾರದ ಎರಡನೇ ಆಯವ್ಯಯವು ಜನಪರ ಹಾಗೂ ಜನಪ್ರಿಯ ಅಂಶಗಳ ಹದವಾದ ಮಿಶ್ರಣವಾಗಿದೆ. ರಾಜಕೀಯ ಲೇಕ್ಕಚಾರದ ಜೊತೆಗೆ ಅಭಿವೃದ್ಧಿಯ ಗುರಿ ಹೊಂದಿರುವ 2,34,153 ಕೋಟಿ ರೂಪಾಯಿಯ ಆಯವ್ಯಯವು, ಕೃಷಿ, ಶಿಕ್ಷಣ, ಆರೋಗ್ಯ, ಇಂಧನ, ಗ್ರಾಮೀಣಾಭಿವೃದ್ಧಿ, ನಗರ ಅಭಿವೃದ್ಧಿ, ಜಲಸಂಪನ್ಮೂಲ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಗೆ ಒತ್ತು […]

‘ಕನ್ನಡ ಮಹಾಭಾರತ’ದಲ್ಲಿ ರಣರಂಗದ ವರ್ಣನೆ

-ರವಿ ಎಂ.ಸಿದ್ಲಿಪುರ.

ಸೈನಿಕರು ಕೇವಲ ಸರಕುಗಳಾಗಿ ಪೇಟೆಯಲ್ಲಿ ಮಾರಲ್ಪಡುವ ಸನ್ನಿವೇಶವೊಂದು ಮನುಷ್ಯ ಸಂಬಂಧಗಳ ಅವನತಿಯನ್ನು ಸೂಚಿಸುತ್ತದೆ. ಯುದ್ಧದಲ್ಲಿ ‘ಮನುಷ್ಯ’ ಮುಖ್ಯವಾಗುವುದಿಲ್ಲ. ಆತ ‘ಸರಕು’ ಮಾತ್ರವಾಗುತ್ತಾನೆಂಬ ಧ್ವನಿ ಹೊರಡಿಸುವ ಕುಮಾರವ್ಯಾಸನ ರೂಪಕ ಅನನ್ಯವಾದುದು. ಇದೇ ರೀತಿಯಾಗಿ ವರ್ತಮಾನದಲ್ಲಿ ಯುದ್ಧ ಬಹುದೊಡ್ಡ ವ್ಯಾಪಾರಕ್ಕೆ ಕಾರಣವಾಗಿದೆ. ಕುರುಕ್ಷೇತ್ರದ ಹೆಸರು ಕೇಳುತ್ತಿದ್ದಂತೆಯೇ ಮಹಾಭಾರತ ಯುದ್ಧದ ಕತೆ ನೆನಪಾಗುತ್ತದೆ. ಇಲ್ಲಿನ ಸಮಾನ ಹಿತಾಸಕ್ತಿಗಳನ್ನು ಹೊಂದಿದ ಕೌರವ-ಪಾಂಡವರೆಂಬ ಎರಡು ಪ್ರಬಲ ಗುಂಪುಗಳು ಮಾಡಿದ ಧರ್ಮಯುದ್ಧಕ್ಕೆ ರಣಕ್ಷೇತ್ರವಾಗಿದೆ. ಅಂದರೆ ಯುದ್ಧ ಸ್ವರೂಪಗಳನ್ನು ಆಧರಿಸಿ ‘ವಿಶಸನರಂಗ’ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ರೀತಿಯಾಗಿ […]

ಬಿಜೆಪಿ ವಿರೋಧಿ ಮಹಾಮೈತ್ರಿ

ಮೂಲ: ಅಕ್ಷಯ ಮುಕುಲ್ ಸಂಗ್ರಹಾನುವಾದ: ವಸಂತ ನಾಡಿಗೇರ ಸೌಜನ್ಯ: ದಿ ಕ್ಯಾರವಾನ್

ರಾಮ ಮನೋಹರ ಲೋಹಿಯಾ ಅವರಿಂದ ಕಲಿಯಬೇಕಾದ ಪಾಠವೇನು? ಭಾರತದ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ಮೈತ್ರಿಯುಗ ಆರಂಭವಾದದ್ದು 1967ರಲ್ಲಿ; ನಂತರ 1977ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಮ ಮನೋಹರ ಲೋಹಿಯಾ ಅವರ ಚಿಂತನೆಯ ಹಾದಿಯಲ್ಲಿ ನಡೆಸಿದ ಪ್ರಯತ್ನ, ಪ್ರಯೋಗದ ಫಲವಾಗಿ ಜನತಾ ಪಕ್ಷ ಉದಯಿಸಿತು. ಆಗ ಏರ್ಪಟ್ಟ ಮೈತ್ರಿಯಲ್ಲಿ ಬಂಡಾಯ ಕಾಂಗ್ರೆಸ್ಸಿಗರು, ಸಮಾಜವಾದಿಗಳು, ಜಾತ್ಯಾತೀತ ಬಲಪಂಥೀಯರು ಮತ್ತು ಜನಸಂಘ ಸೇರಿದ್ದವು. ಅವರೆಲ್ಲರೂ ಒಗ್ಗೂಡಿದ್ದು ಕಾಂಗ್ರೆಸ್ಸಿನ ಅರ್ಥಾತ್ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆ ವಿರೋಧಿಸಲು. ಇದೀಗ 2019ರ […]

ಎಲ್ಲರನ್ನೂ ಸಂಪ್ರೀತಿಗೊಳಿಸಿದ ಕೇಂದ್ರದ ಅರೆ-ಬಜೆಟ್

-ಮೋಹನದಾಸ್.

 ಎಲ್ಲರನ್ನೂ ಸಂಪ್ರೀತಿಗೊಳಿಸಿದ  ಕೇಂದ್ರದ ಅರೆ-ಬಜೆಟ್ <p><sub> -ಮೋಹನದಾಸ್. </sub></p>

ಪೂರ್ಣ ಪ್ರಮಾನದ ಕೇಂದ್ರ ಬಜೆಟ್ ಮಂಡನೆಯನ್ನು ವಿರೋಧ ಪಕ್ಷಗಳು ಅಡ್ಡಿಪಡಿಸಿದ ಕಾರಣದಿಂದ ಕೇಂದ್ರದ ಮೋದಿ ಸರ್ಕಾರ “ರೋಗಿ ಬಯಸಿದ್ದೂ ಹಾಲುಅನ್ನ, ವೈದ್ಯ ಹೇಳಿದ್ದೂ ಹಾಲುಅನ್ನ” ಎನ್ನುವಂತೆ ಲಾಭ ಪಡೆದುಕೊಂಡಿದೆ. ಪೂರ್ಣ ಬಜೆಟ್‍ನಲ್ಲಿ ನೀಡಬೇಕಿರುವ ಕಹಿಗುಳಿಗೆಯನ್ನು ಸದ್ಯಕ್ಕೆ ಮುಂದೂಡಿ, ಚುನಾವಣೆಗೆ ತಕ್ಕಷ್ಟು ಸಿಹಿಗುಳಿಗೆ ನೀಡುವ ಪ್ರಯತ್ನದಲ್ಲಿ ಸಫಲವಾಗಿದೆ. ಅನಾರೋಗ್ಯ ಕಾರಣ ವಿತ್ತಮಂತ್ರಿ ಅರುಣ್ ಜೈಟ್ಲಿಯವರ ಅನುಪಸ್ಥಿತಿಯಲ್ಲಿ ಪೀಯುಷ್ ಗೋಯಲ್ ಕೇಂದ್ರಸರ್ಕಾರದ ಇಂಟೆರಿಮ್ ಬಜೆಟ್ ಮಂಡಿಸಿ ಎಲ್ಲರ ಮನ ಗೆದ್ದಿದ್ದಾರೆ. ಮುಖ್ಯವಾಗಿ ರೂ.5,00,000 ಗಳವರೆಗೆ ಆದಾಯ ತೆರಿಗೆಯಿಲ್ಲ. ಸಂಬಳದಾರರಿಗೆ ಸ್ಟಾಂಡರ್ಡ್ […]