Home»Homepage Blog (Page 3)

ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ?

- ಡಿ.ಉಮಾಪತಿ

 ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ? <p><sub> - ಡಿ.ಉಮಾಪತಿ </sub></p>

ಸಾಂವಿಧಾನಕ ಸಂಸ್ಥೆಗಳು ಒಂದೊಂದಾಗಿ ಮೋದಿ ಯುಗದೊಂದಿಗೆ ಕೈ ಕುಲುಕಿರುವ ದುರಂತದ ನಡುವೆ ಬೆಳಕಿನ ಭರವಸೆಯಾಗಿ ಉಳಿದದ್ದು ಸುಪ್ರೀಮ್ ಕೋರ್ಟ್ ಮಾತ್ರವೇ. ಜನತಂತ್ರದ ಈ ಕಟ್ಟಕಡೆಯ ಕಂಬದಲ್ಲೂ ಬಿರುಕುಗಳು ಬಾಯಿ ತೆರೆದಿವೆ; ನ್ಯಾಯಮೂರ್ತಿಗಳ ನಡೆ ನುಡಿಗಳು, ತೀರ್ಪುಗಳ ಕುರಿತು ಪ್ರಶ್ನೆಗಳೆದ್ದಿವೆ. – ಡಿ.ಉಮಾಪತಿ 1990ರ ನಂತರ ದಶಕಗಳ ಕಾಲ ಸರ್ಕಾರಗಳನ್ನು ಮುತ್ತಿದ್ದ ನಿಷ್ಕ್ರಿಯತೆ ಮತ್ತು ಭ್ರಷ್ಟಾಚಾರದ ಕಾರಣ ದೇಶದ ನ್ಯಾಯಾಂಗ ‘ಧರ್ಮಯುದ್ಧ’ ನಡೆಸಿ, ಕಾರ್ಯಾಂಗದ ಕಾರ್ಯಭಾರವನ್ನು ತಾನೇ ಜರುಗಿಸಿತು. ಐತಿಹಾಸಿಕ ತೀರ್ಪುಗಳಿಂದಾಗಿ ಜನಮನ ಗೆದ್ದಿತು. ಏನೇ ಹಾಳು ಬಿದ್ದು […]

ಕೊರೊನಾ ವೈರಾಣು ಯಾವ ಅಂಗ? ಏನು ಪರಿಣಾಮ?

- ಡಾ.ವಸುಂಧರಾ ಭೂಪತಿ

 ಕೊರೊನಾ ವೈರಾಣು  ಯಾವ ಅಂಗ? ಏನು ಪರಿಣಾಮ? <p><sub> - ಡಾ.ವಸುಂಧರಾ ಭೂಪತಿ </sub></p>

ಈಗಾಗಲೇ ಕೊರೊನಾ ವೈರಸ್ ಲಕ್ಷಾಂತರ ಜನರನ್ನು ಸ್ಪರ್ಶಿಸಿ, ತಬ್ಬಿ ಬೈಬೈ ಹೇಳಿದೆ. ಒಮ್ಮೆ ಬೈಬೈ ಹೇಳಿದ್ದು ಮತ್ತೆ ವಾಪಾಸು ಬರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಕೊರೊನಾ ಶ್ವಾಸಕೋಶಕ್ಕೆ ನೇರವಾಗಿ ಲಗ್ಗೆ ಹಾಕಿದರೂ ಅನೇಕರಲ್ಲಿ ಹೃದಯದ ಬಾಗಿಲು ತಟ್ಟಿ ಜೀವವನ್ನೇ ಹೊತ್ತೊಯ್ದಿದೆ. ಇನ್ನು ಕೆಲವರಲ್ಲಿ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಿದೆ. ಹಾಗಾಗಿ ಕೊರೊನಾ ವೈರಾಣು ಮಾನವ ದೇಹದ ವಿವಿಧ ಅಂಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ವೈದ್ಯರು ಮತ್ತು ಜನಸಾಮಾನ್ಯರಲ್ಲಿ ಸಮಾನ ಕುತೂಹಲ, ಆತಂಕ ಹುಟ್ಟಿಸಿದೆ. ಈ […]

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

ಪ್ರವೇಶ

ಬೆಂಗಳೂರಿನ ವೃತ್ತಪತ್ರಿಕೆಗಳಲ್ಲಿ ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನೀವು ಓದಿರುತ್ತೀರಿ. ಆದರೆ ಮಲೆನಾಡು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸ್ಥಳೀಯ ವೃತ್ತಪತ್ರಿಕೆಗಳಲ್ಲಿ ಸರಿಸುಮಾರು ಪ್ರತಿದಿನವೂ ಈ ಕಾಡು-ನಾಡು ವೈಮನಸ್ಸಿನ ವರದಿಗಳನ್ನು ಓದಬೇಕಾಗುತ್ತದೆ. ಅಲ್ಲಲ್ಲಿ ಹುಲಿ-ಚಿರತೆಗಳ ಹಾವಳಿಯನ್ನು ನೀವು ಗಮನಿಸಿದ್ದರೆ ಇಲ್ಲಿ ದೈನಂದಿನ ಉಪಟಳವಾಗಿ ಕಾಡಾನೆಗಳ ದಾಂಧಲೆ ಕಾಣಿಸುತ್ತದೆ. ಪ್ರಾಣಭೀತಿ, ಬೆಳೆನಷ್ಟ ಹಾಗೂ ಕೆಲಸಗಾರರ ಪಲಾಯನದೊಂದಿಗೆ ಈ ಜಿಲ್ಲೆಗಳ ವನ್ಯಗಡಿ ತಾಲ್ಲೂಕುಗಳ ಕೃಷಿ ಆಧಾರಿತ ಬದುಕು ಡೋಲಾಯಮಾನವಾಗಿದೆ. ಇದೇಕೆ ಹೀಗೆ..? ಈ ತಾಲ್ಲೂಕುಗಳ […]

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

-ಮೋಹನದಾಸ್.

 ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ? <p><sub> -ಮೋಹನದಾಸ್. </sub></p>

ನಾವು ಚಾಪೆಯ ಕೆಳಗೆ ತಳ್ಳಿ ಗಡದ್ದಾಗಿ ನಿದ್ರೆ ಮಾಡುತ್ತಾ ನಿರ್ಲಕ್ಷಿಸಿರುವ ಹಲವು ವಿಷಯಗಳಲ್ಲಿ ಈ ಮುಖ್ಯವಿಷಯವೂ ಒಂದಾಗಿದೆ. ತಂದೆ-ತಾಯಿ-ಪೋಷಕರಾಗಲಿ ಅಥವಾ ವಾರಸುದಾರರಾಗಲಿ ಇರದ ಈ ಸಮಸ್ಯೆಯನ್ನು ನಾವು ಎತ್ತಿ ಹೇಳಲೇಬೇಕಾಗಿತ್ತು. ಏಕೆಂದರೆ ಈ ವಿಷಯ ಕಾಡಂಚಿನಲ್ಲಿ ವಾಸಮಾಡುತ್ತಿರುವ ನಿವಾಸಿಗಳ ಹಾಗೂ ಸಾಮಾನ್ಯ ರೈತರ ಬದುಕನ್ನು ಮೂರಾಪಾಲಾಗಿ ಮಾಡಹೊರಟಿದೆ. -ಮೋಹನದಾಸ್. ನಮ್ಮ ದೇಶದ ಹಲವು ಹೋಲಿ ಕೌ (ಪವಿತ್ರ ಅಸ್ಪೃಶ್ಯತೆ) ವಿಷಯಗಳಲ್ಲಿ ಅರಣ್ಯಗಳು ಹಾಗೂ ಅಲ್ಲಿನ ವನ್ಯಜೀವಿಗಳು ಕೂಡಾ ಸೇರಿವೆ. ಈ ತೆರನಾದ ವಿಷಯಗಳಲ್ಲಿನ ನಮ್ಮ ದ್ವಂದ್ವ ನಡವಳಿಕೆ […]