Home»Homepage Blog (Page 5)

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಾದರಿ

-ಕೆ.ವಿ.ನಾರಾಯಣ

 ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ  ಶೈಕ್ಷಣಿಕ ಮಾದರಿ <p><sub> -ಕೆ.ವಿ.ನಾರಾಯಣ </sub></p>

-ಕೆ.ವಿ.ನಾರಾಯಣ ಈಗ ಎಲ್ಲವೂ ಇಳಿಜಾರಿನಲ್ಲಿದೆ ಎಂದು ಹೇಳುವಾಗ ಎಲ್ಲವೂ ಏರುಗತಿಯಲ್ಲಿದ್ದ ಹೊತ್ತು ಒಂದಿತ್ತು ಎಂಬ ನಂಬಿಕೆ ಹಲವರಲ್ಲಿ ಇದ್ದಂತಿದೆ. ಒಂದು ಸುವರ್ಣ ಯುಗವಿತ್ತು, ನಾವದನ್ನು ಕಳೆದುಕೊಂಡಿದ್ದೇವೆ; ಮರಳಿ ಅದನ್ನು ಪಡೆಯಬೇಕೆಂಬ ಹಂಬಲ ಎಲ್ಲೆಡೆಯೂ ಇದ್ದಂತಿದೆ. ಹಾಗೆ ಎಲ್ಲ ಸರಿಯಾಗಿದ್ದುದು ಯಾವಾಗ? ನೀವು ಪಟ್ಟಿ ಮಾಡಿರುವ ಕೇಳ್ವಿಗಳೆಲ್ಲ ಒಂದಕ್ಕೊಂದು ನಂಟನ್ನು ಪಡೆದಿವೆಯಾಗಿ ಅವೆಲ್ಲಕ್ಕೂ ಬಿಡಿಬಿಡಿಯಾಗಿ ಹೇಳುವುದರ ಬದಲು ಒಟ್ಟಾರೆಯಾಗಿ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ. ನಿಮ್ಮ ಕೇಳ್ವಿಗಳಲ್ಲಿ ಆತಂಕ, ಹತಾಶೆ, ಹಳಹಳಿಕೆ, ವಿಷಾದ ಇವೆಲ್ಲದರ ನೆರಳು ಕವಿದಿದೆ. ನಮ್ಮ ಸಂದರ್ಭದಲ್ಲಿ […]

ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ

-ಹರೀಶ್ ರಾಮಸ್ವಾಮಿ

 ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ <p><sub> -ಹರೀಶ್ ರಾಮಸ್ವಾಮಿ </sub></p>

-ಹರೀಶ್ ರಾಮಸ್ವಾಮಿ ಇಂದಿನ ವಿಶ್ವವಿದ್ಯಾಲಯಗಳು ಸಮಾಜದ ಬೆಳವಣಿಗೆಯ ಅವಶ್ಯಕತೆಗೆ ಹಾಗೂ ರಚನೆಗೆ ಬೇಕಾದ ಜ್ಞಾನದಿಂದ ‘ಡಿ-ಅಂಕ್’ ಆಗಿವೆ ಮತ್ತು ‘ಉದ್ಯಮ ಕೇಂದ್ರಿತ’ ಚಿಂತನೆಯ ಕ್ರಮದಿಂದ ಪ್ರೇರೇಪಿತವಾಗಿವೆ. ಪ್ರಸ್ತುತ ಸಮಾಜದಲ್ಲಿ ವಿಶ್ವವಿದ್ಯಾಲಯಗಳು ಸಾಮಾಜಿಕ ಜೀವನದ ವಾಸ್ತವಿಕತೆಯಿಂದ ಹೊರಗಿದ್ದು ‘ಪರಕೀಯ’ ಪ್ರಪಂಚದಲ್ಲಿ ಇದ್ದಂತೆ ಇವೆ. ಇದಕ್ಕೆ ಕಾರಣ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹಾಗೂ ಬಂಡವಾಳಶಾಹಿ ನಿರ್ದೇಶಿತ, ಮಾರುಕಟ್ಟೆ ಆಧಾರಿತ ವ್ಯವಸ್ಥೆಗಳು. ಕೆಲವೊಬ್ಬರು ಈ ಚರ್ಚೆಯನ್ನು ಅಲ್ಲಗಳೆದು ನವ ಉದಾರವಾದದ ನಂತರ ವಿಶ್ವವಿದ್ಯಾಲಯಗಳು ವಾಸ್ತವಿಕತೆಯೆಡೆಗೆ ನಡೆಯುತ್ತಿವೆ. ಹಾಗಾಗಿ ಈ ಬಂಡವಾಳಶಾಹಿ ಹಾಗೂ […]

ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ

-ಕಮಲಾಕರ ಕಡವೆ

 ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ <p><sub> -ಕಮಲಾಕರ ಕಡವೆ </sub></p>

-ಕಮಲಾಕರ ಕಡವೆ ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅದಕ್ಕೆ ಪರಿಹಾರಗಳು ವ್ಯಾಪಕವಾಗಿ ಚರ್ಚಿತ ವಿಷಯಗಳು. ಪ್ರಶ್ನೆಗಳಿವೆ, ಉತ್ತರಗಳೂ ಇವೆ, ಆದರೆ ಸಮಸ್ಯೆ ಇದ್ದ ಹಾಗೇ ಇದೆ. ಇದರ ಅರ್ಥವೇನೆಂದರೆ, ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿಗಿಂತ, ಪರಿಹರಿಸದೇ ಜೀವಂತ ಇರಿಸುವ ಇಚ್ಛಾಶಕ್ತಿ ಪ್ರಬಲವಾಗಿದೆ. ನಮ್ಮ ಸಮಾಜದಲ್ಲಿ -ಅಂದರೆ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿ ಕೂಡ- ಜ್ಞಾನಸೃಷ್ಟಿಯ ಪ್ರಶ್ನೆಯನ್ನು ಪದೇಪದೆ ಎತ್ತಲಾಗಿದೆ. ಈ ಪ್ರಶ್ನೆ ಉದ್ಭವಿಸಿರುವ ಸಂದರ್ಭ, ಸಾಂಸ್ಥಿಕ ಚೌಕಟ್ಟು, ಮತ್ತು ಪ್ರಶ್ನೆಯ ವಿಸ್ತಾರ ಪ್ರತಿ ಬಾರಿ ವಿಭಿನ್ನವಾಗಿದ್ದರೂ ಮೂಲಭೂತವಾಗಿ ನಮ್ಮ ಸಮಾಜದಲ್ಲಿ ಯಾರು, […]

ವಿಶ್ವವಿದ್ಯಾಲಯ ಪರಿಕಲ್ಪನೆಯ ಮರುಸ್ಥಾಪನೆಯೇ ಪರಿಹಾರ

-ಡಾ.ಎನ್.ಎಸ್.ಗುಂಡೂರ

 ವಿಶ್ವವಿದ್ಯಾಲಯ ಪರಿಕಲ್ಪನೆಯ ಮರುಸ್ಥಾಪನೆಯೇ ಪರಿಹಾರ <p><sub> -ಡಾ.ಎನ್.ಎಸ್.ಗುಂಡೂರ </sub></p>

-ಡಾ.ಎನ್.ಎಸ್.ಗುಂಡೂರ ವಿಸ್ಮøತಿಗೆ ಒಳಗಾದ ವಿವಿಯ ಪರಿಕಲ್ಪನೆಯನ್ನು ಹುಡುಕಿಕೊಳ್ಳುವ ಕಾರ್ಯಕ್ರಮ ಒಂದೆಡೆಗಿದ್ದರೆ, ವಿವೇಕ ಕಳೆದುಕೊಂಡಿರುವ ಸಂಶೋಧನಾ ಚಟುವಟಿಕೆಯನ್ನು ಅರ್ಥಪೂರ್ಣಗೊಳಿಸುವ ಜರೂರು ಮತ್ತೊಂದೆಡೆ ಇದೆ. ನಮ್ಮ ಸಂಶೋಧನೆಗಳು ಮತ್ತು ವಿವಿಗಳ ಬೌದ್ಧಿಕ ಬಿಕ್ಕಟ್ಟಿನ ಚರ್ಚೆಯನ್ನು ಭ್ರಷ್ಟ ವ್ಯವಸ್ಥೆ, ಜಾತೀಯತೆ, ಸ್ವಜನಪಕ್ಷಪಾತ, ಬೌದ್ಧಿಕ ಅಸಾಮಥ್ರ್ಯ, ಮೂಲ ಸೌಕರ್ಯಗಳ ಕೊರತೆ, ಯುಜಿಸಿಯ ಅತಾರ್ಕಿಕ ನಿರ್ಧಾರಗಳು, ಸರಕಾರದ ನೀತಿನಿಯಮ, ಸಂಶೋಧನಾರ್ಥಿಗಳ ಆಲಸ್ಯ -ಇತ್ಯಾದಿಗಳನ್ನು ದೂರುವುದರ ಮುಖಾಂತರ ಚರ್ಚಿಸಬಹುದು. ಆದರೆ ಈ ಎಲ್ಲ ಸಮಸೆÀ್ಯಗಳನ್ನು ಬಗೆಹರಿಸಿದರೂ ನಾವು ಉತ್ಕøಷ್ಟವಾದ ಸಂಶೋಧನೆಗಳನ್ನು ಉತ್ಪಾದಿಸುತ್ತೇವೆ ಎನ್ನುವುದು ಅನುಮಾನ. ಆದ್ದರಿಂದ […]

1 3 4 5 6 7 221