samajamukhi-logo-2026

ಸಮಾಜಮುಖಿ ಪತ್ರಿಕೆಯ ವತಿಯಿಂದ ಇದೇ 2026ರ ನವೆಂಬರ್ 28 ಮತ್ತು 29 ಶನಿವಾರ-ಭಾನುವಾರಗಳಂದು ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಹೆಸರಿನಲ್ಲಿ ಸಾಹಿತ್ಯ ಸಂಭ್ರಮವೊಂದನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿ ನಡೆಸಲಾಗುತ್ತಿರುವ ಈ ಸಮಾವೇಶದಲ್ಲಿ ನಾಡಿನ ಎಲ್ಲ ಹಿರಿಯ-ಕಿರಿಯ ಸಾಹಿತಿ ಬರಹಗಾರರನ್ನು ಒಳಗೊಳ್ಳಲಾಗುತ್ತಿದೆ. ಅಂತೆಯೇ ಎಲ್ಲ ಸಾಹಿತ್ಯಾಸಕ್ತರು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಯಾವುದೇ ಮಂತ್ರಿ-ಶಾಸಕ-ಅಧಿಕಾರಿಗಳನ್ನು ಅವರ ಹುದ್ದೆಯ ಕಾರಣಕ್ಕೆ ಕರೆಯುವುದಿಲ್ಲ. ವೈಯಕ್ತಿಕ ನೆಲೆಯಲ್ಲಿ ಹಾಗೂ ಸಾಹಿತ್ಯಾಸಕ್ತಿಯಿಂದ ಬರುವ ಯಾರಿಗೂ ತಡೆಯಿಲ್ಲ.

ಚಿಂತನೆಯ ವೇದಿಕೆ -ವಿವೇಕದ ಉತ್ಸವ

ಕರ್ನಾಟಕದಲ್ಲಿ ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ ಗಂಭೀರ ಚಿಂತನೆ ಮತ್ತು ಬೌದ್ಧಿಕ ಸಂಶೋಧನೆಯ ಸಂಸ್ಕೃತಿಯನ್ನು ತನ್ನ ಅನೇಕ ಉಪಕ್ರಮಗಳ ಮೂಲಕ ನಿರಂತರ ಪೋಷಿಸಿಕೊಂಡು ಬಂದ ಸಂಸ್ಥೆ ಸಮಾಜಮುಖಿ ಪ್ರಕಾಶನ ಮತ್ತು ಅದರ ಅಂಗಸಂಸ್ಥೆ ಸಮಾಜಮುಖಿ ಕನ್ನಡ ಮಾಸಿಕ. ಇದಕ್ಕೆ, ‘ನಡೆದು ನೋಡು ಕರ್ನಾಟಕ’ ಅಭಿಯಾನ, ಸಮಾಜಮುಖಿ ರಂಗಬಳಗ, ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್, ವಿಚಾರ ಕ್ರಾಂತಿ ಕಾರ್ಯಾಗಾರಗಳು, ಸತ್ಯಮೇವ ಜಯತೆ ಶಿಬಿರಗಳು, ಸಾಹಿತ್ಯಿಕ ಸ್ಪರ್ಧೆಗಳು, ಪುಸ್ತಕ ಪ್ರಕಟಣೆ ಮತ್ತು ಸಂವಾದಗಳಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿವೆ.

ಆ ಅಷ್ಟೂ ವರ್ಷಗಳಲ್ಲಿ ಸಮಾಜಮುಖಿ ಮಾಡಿದ ಬದಲಾವಣೆ ದೊಡ್ಡದು. ಅದರದ್ದು ಸ್ಪಷ್ಟ ಸಾಮಾಜಿಕ ಪ್ರಜ್ಞೆ ಮತ್ತು ವೈಚಾರಿಕ ಬದ್ಧತೆ. ಆ ಮೂಲಕವೇ ಅರ್ಥಪೂರ್ಣ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ತೊಡಗಿಸಿಕೊಳ್ಳುವಿಕೆಗೆ ಒಂದು ವಿಶ್ವಾಸಾರ್ಹ ಹಾಗೂ ಗೌರವಾನ್ವಿತ ವೇದಿಕೆಯನ್ನು ಅದು ಕಲ್ಪಿಸಿದೆ ಎಂಬುದು ನಿಸ್ಸಂದೇಹ.
ಸಮಾಜಮುಖಿ ಸಾಹಿತ್ಯ ಸಮ್ಮೇಳನ -ಇದು ಕೇವಲ ಒಂದು ಪ್ರದರ್ಶನವಲ್ಲ. ಮುಖಾಮುಖಿ, ವಿಚಾರಣೆ, ವಿಮರ್ಶೆ ಹಾಗೂ ಪ್ರೇರಣೆಗಳ ಸಂಗಮ ತಾಣವಾಗಿ ರೂಪುಗೊಂಡ ವಾರ್ಷಿಕ ಸಾಹಿತ್ಯಿಕ ಕೂಟ.

ಸಾಹಿತ್ಯಿಕ ವೇದಿಕೆಗಳು ಆಂತರ್ಯದಲ್ಲಿ ರಾಜಕೀಯ ಹಿತಾಸಕ್ತಿ ಅಥವಾ ವಾಣಿಜ್ಯ ಪ್ರದರ್ಶನಗಳತ್ತ ಮುಖಮಾಡಿರುವ ಈ ಕಾಲಘಟ್ಟದಲ್ಲಿ ಈ ಸಮ್ಮೇಳನದ ಹಂಬಲ-ಅಸಲಿ ಉದ್ದೇಶವಿಷ್ಟೇ; ಸಮಾಜದೊಂದಿಗೆ ಬೆರೆಯುವುದು, ಪ್ರಶ್ನಿಸುವುದು, ಕಲ್ಪಿಸುವುದು ಮತ್ತು ಜ್ಞಾನದ ಬೆಳಕನ್ನು ಸಮಾಜದ ಮೂಲೆ ಮೂಲೆಗೂ ಪಸರಿಸುವುದು.

ದೂರದೃಷ್ಟಿ ಮತ್ತು ಉದ್ದೇಶ

ಸಮಾಜದ ವಾಸ್ತವ ಸಂಗತಿಗಳು ಮತ್ತು ಕಲ್ಪನಾಶಕ್ತಿ ಎರಡರ ಕುರಿತೂ ಮಾತನಾಡಬೇಕಾದದ್ದು ಕನ್ನಡ ಸಾಹಿತ್ಯದ ಇಂದಿನ ಜವಾಬ್ದಾರಿ. ಇದನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ಸಮ್ಮೇಳನದ ಮೂಲಕ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶಗಳೆಂದರೆ;

ಸ್ವತಂತ್ರ ವೇದಿಕೆ

ಬರಹಗಾರರು, ವಿಮರ್ಶಕರು, ವಿದ್ಯಾರ್ಥಿಗಳು ಹಾಗೂ ಓದುಗರಿಗಾಗಿ ಒಂದು ಗಂಭೀರ ಹಾಗೂ ಸ್ವತಂತ್ರ ವೇದಿಕೆಯನ್ನು ಕಲ್ಪಿಸುವುದು.

ತಲೆಮಾರುಗಳ ನಡುವೆ ಸಂವಾದ

ಸಮಾಜದ ವಿಭಿನ್ನ ತಲೆಮಾರುಗಳು ಹಾಗೂ ಪರಂಪರೆಗಳ ನಡುವೆ ಸೃಜನಶೀಲ ಸಂವಾದವನ್ನು ಏರ್ಪಡಿಸುವುದು.

ಸಾಹಿತ್ಯದ ಪಾತ್ರ

ಕರ್ನಾಟಕದ ಬೌದ್ಧಿಕ ಮತ್ತು ಸಾಂಸ್ಕೃತಿಕ ಬದುಕನ್ನು ರೂಪಿಸುವಲ್ಲಿ ಸಾಹಿತ್ಯಕ್ಕಿರುವ ಪಾತ್ರವನ್ನು ಮರುಸ್ಥಾಪಿಸುವ ಕೆಲಸ.

ವೈಚಾರಿಕ ಬದ್ಧತೆ

ರಾಜಕೀಯ ಪ್ರೇರಿತವಾದ ಸಮ್ಮೇಳನಗಳು ಹಾಗೂ ವಾಣಿಜ್ಯಿಕ ಸ್ವರೂಪವನ್ನು ಪಡೆದ ಸಾಹಿತ್ಯಿಕ ಕಾರ್ಯಕ್ರಮಗಳಿಂದ ದೂರ ಸರಿದು ಪ್ರಜ್ಞಾಪೂರ್ವಕವಾದ ಸಾಂಸ್ಕೃತಿಕ ಹಾದಿಯನ್ನು ಕ್ರಮಿಸುವುದು.

ಸಮ್ಮೇಳನ-2026

ಈಗ ನಮ್ಮ ಮುಂದೆ ಇರುವುದು 2026ರ ಆವೃತ್ತಿ. ಈ ಬಾರಿಯ ಪಯಣವನ್ನು ಇನ್ನಷ್ಟು ಗಹನ ಚಿಂತನೆ ಮತ್ತು ವ್ಯಾಪಕ ಮಟ್ಟದ ಪಾಲ್ಗೊಳ್ಳುವಿಕೆಯ ಜೊತೆಗೆ ಮುಂದುವರಿಸುವುದು ನಮ್ಮ ಉದ್ದೇಶ. ಹಿರಿಯ ಚಿಂತಕರಿಂದ ಆರಂಭಿಸಿ ಉದಯೋನ್ಮುಖ ಬರಹಗಾರರ ತನಕ ಎಲ್ಲರನ್ನೂ ಒಳಗೊಳ್ಳುವ ಮೂಲಕ ಸಂವಾದದ ಗುಣಮಟ್ಟವನ್ನು ಹೆಚ್ಚಿಸುವುದು ಮತ್ತು ಅದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವುದು ಈ ಸಮ್ಮೇಳನದ ಆಶಯ.

ಭಾಗವಹಿಸುವುದು ಹೇಗೆ?

ಮುಕ್ತ ಅವಕಾಶ: ಲೇಖಕರು, ಓದುಗರು, ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಭಾಗವಹಿಸಲು ಮುಕ್ತ ಅವಕಾಶ.

ಗೌರವಾನ್ವಿತ ಅತಿಥಿಗಳು: ಆಹ್ವಾನಿತ ಗಣ್ಯರಿಗೆ ಪ್ರಯಾಣ ಮತ್ತು ವಸತಿ ಸೌಕರ್ಯದ ವ್ಯವಸ್ಥೆ.

ವಿಶೇಷ ಪ್ರೋತ್ಸಾಹ: ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಶೇಷ ಪ್ರೋತ್ಸಾಹ.

ಸಮ್ಮೇಳನದ ಸ್ವರೂಪ

ಪ್ರಧಾನ ಗೋಷ್ಠಿಗಳು: ಖ್ಯಾತ ಬರಹಗಾರರು ಮತ್ತು ಚಿಂತಕರ ನೇತೃತ್ವದಲ್ಲಿ ಪ್ರಮುಖ ಗೋಷ್ಠಿಗಳು

ನಾಲ್ಕು ಸಮಾನಾಂತರ ವೇದಿಕೆಗಳು: ಅತ್ಯಂತ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾದ ನಲವತ್ತು ಗೋಷ್ಠಿಗಳು. ಇವುಗಳಲ್ಲಿ ಒಳಗೊಂಡಿರುವ ಅಂಶಗಳು: 

  • ಸಂವಾದ ಮತ್ತು ಚರ್ಚಾಗೋಷ್ಠಿಗಳು
  • ಕಾರ್ಯಾಗಾರಗಳು
  • ವಿಷಯಾಧಾರಿತ ಮಂಡನೆಗಳು

ವಿಷಯ ವ್ಯಾಪ್ತಿ: 

  • ಸೃಜನಶೀಲ ಬರವಣಿಗೆ
  • ಸಾಹಿತ್ಯ ವಿಮರ್ಶೆ
  • ಶಾಸ್ತ್ರೀಯ ಮತ್ತು ದೇಶೀ ಪರಂಪರೆಗಳು
  • ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿಂತನೆಗಳು

ಕಾರ್ಯಾಗಾರಗಳು: ಹೊಸ ತಲೆಮಾರಿನ ಬರಹಗಾರರಿಗಾಗಿಯೇ ಬರವಣಿಗೆ ಕೌಶಲ ಮತ್ತು ವಿಮರ್ಶಾತ್ಮಕ ಪ್ರಜ್ಞೆಯನ್ನು ಬೆಳೆಸುವ ವಿಶೇಷ ಕಾರ್ಯಾಗಾರಗಳು 

ವೈಚಾರಿಕತೆ: ವ್ಯಕ್ತಿಗಳಿಗಿಂತ ಮುಖ್ಯವಾಗಿ ಕೃತಿಗಳು ಮತ್ತು ವಿಚಾರಗಳೊಂದಿಗೆ ತೊಡಗಿಸಿಕೊಳ್ಳಲು ನಿರಂತರ ಆದ್ಯತೆ.

ಸಮಾಜಮುಖಿ ಸಾಹಿತ್ಯ ಸಮ್ಮೇಳನ-2025ರ ಹಿನ್ನೋಟ

2025ರ ನವೆಂಬರ್ 8 ಮತ್ತು 9ರಂದು ನಡೆದ ಉದ್ಘಾಟನಾ ಕಾರ್ಯಕ್ರಮವು ಸಮಕಾಲೀನ ಕನ್ನಡ ಸಾಹಿತ್ಯಲೋಕದ ಅಪರೂಪದ ಮತ್ತು ಮಹತ್ವದ ಕ್ಷಣಗಳಿಗೆ ಸಾಕ್ಷಿಯಾಯಿತು. 

ಸಾಂಪ್ರದಾಯಿಕ ಚೌಕಟ್ಟಿನೊಳಗೆ ನಡೆಯುವ ಸಮ್ಮೇಳನಗಳು ಮತ್ತು ವಾಣಿಜ್ಯ ಉತ್ಸವಗಳಿಗೆ ಒಂದು ವೈಚಾರಿಕ ಪರ್ಯಾಯವನ್ನು ಕಲ್ಪಿಸುವ ರೀತಿಯಲ್ಲಿ ರೂಪಿಸಲಾದ ಈ ಸಮ್ಮೇಳನವು ನಾನಾ ತಲೆಮಾರುಗಳು ಹಾಗೂ ವಿವಿಧ ಕ್ಷೇತ್ರಗಳ ಧ್ವನಿಗಳಿಗೆ ಸಮಷ್ಟಿ ರೂಪವನ್ನು ನೀಡುವಲ್ಲಿ ಯಶಸ್ವಿಯಾಯಿತು. ಆ ಮೂಲಕ ನೈಜ ಮತ್ತು ಗಹನವಾದ ಸಾಂಸ್ಕೃತಿಕ ತೊಡಗಿಸಿಕೊಳ್ಳುವಿಕೆಗೆ ವೇದಿಕೆ ಒದಗಿಸಿತು.

ವಿಶೇಷತೆಗಳು

  • 45+ ಗೋಷ್ಠಿಗಳು ಮತ್ತು ಸಂವಾದಗಳು

  • ಖ್ಯಾತ ಬರಹಗಾರರು, ಚಿಂತಕರು ಹಾಗೂ ಉದಯೋನ್ಮುಖ ಪ್ರತಿಭೆಗಳು ಸೇರಿದಂತೆ 250+ ಗೋಷ್ಠಿಯ ಸಂಚಾಲಕರು ಮತ್ತು ಪ್ಯಾನಲಿಸ್ಟ್ ಗಳ ಸಹಭಾಗಿತ್ವ.

  • ವೈವಿಧ್ಯಮಯ ವಿಚಾರಗಳನ್ನು ಪರಿಶೋಧಿಸುವ 4 ಸಮಾನಾಂತರ ವೇದಿಕೆಗಳು

  • ವಿದ್ಯಾರ್ಥಿಗಳು, ಓದುಗರು ಮತ್ತು ವಿದ್ವಾಂಸರಿಂದ ಅಭೂತಪೂರ್ವ ಸ್ಪಂದನೆ

  • ಸೃಜನಶೀಲ ಅಭಿವ್ಯಕ್ತಿ ಮತ್ತು ವಿಮರ್ಶಾತ್ಮಕ ಚಿಂತನೆಗಳ ನಡುವಿನ ಅಪರೂಪದ ಸಮತೋಲನ.

  • ಸಂಖ್ಯೆಗಳಿಗಿಂತ ಮಿಗಿಲಾಗಿ ಈ ಸಮ್ಮೇಳನವು ಸಾಹಿತ್ಯವನ್ನು ಅತ್ಯಂತ ಗಂಭೀರ, ಗಹನ ಮತ್ತು ಮುಕ್ತ ಮನಸ್ಸಿನಿಂದ ಚರ್ಚಿಸುವಂತಹ ಒಂದು ವಿಶಿಷ್ಟ ವೇದಿಕೆಯನ್ನು ರೂಪಿಸಿತು. ತನ್ನ ಸಮಗ್ರತೆ ಮತ್ತು ಸ್ವತಂತ್ರ ನಿಲುವಿಗಾಗಿ ವ್ಯಾಪಕ ರೀತಿಯಲ್ಲಿ ಶ್ಲಾಘನೆಗೆ ಪಾತ್ರವಾದ ಈ ಕಾರ್ಯಕ್ರಮವು ಅದ್ದೂರಿ ಪ್ರದರ್ಶಗಳಿಗಿಂತ ಮಿಗಿಲಾಗಿ ‘ವಿಚಾರ ಪ್ರಚೋದಕ’ ವಾದ ಸಾಹಿತ್ಯಿಕ ಕೂಟವೊಂದು ಹೀಗೆ ಅನಾವರಣಗೊಳ್ಳಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿತು.

ಸಮಾಜಮುಖಿ ವಿಶೇಷ ಸಂಚಿಕೆ

  • ಈ ಸಮಾರಂಭದ ಸವಿನೆನಪನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಸಮ್ಮೇಳನದ ಅಂಗವಾಗಿ ‘ಸಮಾಜಮುಖಿ’ ಮಾಸಿಕದ ವಿಶೇಷ 250 ಪುಟಗಳ ಸಂಚಿಕೆಯೊಂದನ್ನು ಹೊರತರಲಾಗುತ್ತದೆ.

ಈ ಸಂಚಿಕೆಯ ವಿಶೇಷತೆಗಳು: 

  • ಪ್ರಮುಖ ಚಿಂತಕರ ಪ್ರಬಂಧಗಳು ಮತ್ತು ವೈಚಾರಿಕ ಲೇಖನಗಳು

  • ಸಮ್ಮೇಳನದ ಪ್ರಮುಖ ಘಟ್ಟಗಳನ್ನು ದಾಖಲಿಸುವುದು

  • ಹಿತೈಷಿಗಳಿಗೆ ಶುಭ ಸಂದೇಶಗಳು

ಭಾಗವಹಿಸುವಿಕೆ ಮತ್ತು ಅಭಿನಂದನೆ

  • ರೂ.5000 ಮತ್ತು ಅದಕ್ಕಿಂತ ಹೆಚ್ಚಿನ ದೇಣಿಗೆಯನ್ನು ನೀಡುವ ಸಹೃದಯಿಗಳಿಗೆ
  • ಸಮಾಜಮುಖಿ ವಿಶೇಷ ಸಂಚಿಕೆಯಲ್ಲಿ ಅವರ ಭಾವಚಿತ್ರ ಮತ್ತು ಹೆಸರಿನೊಂದಿಗೆ ಕೃತಜ್ಞತೆ ಸಮರ್ಪಣೆ.
  • ಸಂಸ್ಥೆಗಳು ಹಾಗೂ ವ್ಯಕ್ತಿಗಳು ಜಾಹೀರಾತು ನೀಡುವ ಮೂಲಕವೂ ಈ ಸಾಂಸ್ಕೃತಿಕ ಕೈಂಕರ್ಯಕ್ಕೆ ಸಾಥ್ ನೀಡಬಹುದು.

ಜಾಹೀರಾತುಗಳ ಮೂಲಕ ಬೆಂಬಲಿಸಲು ಅವಕಾಶ 

  • ಪೂರ್ಣ ಪುಟ ಕಲರ್ – ₹50,000
  • ಅರ್ಧ ಪುಟ ಕಲರ್– ₹30,000
  • ಪೂರ್ಣ ಪುಟ ಏಕವರ್ಣ- ₹30,000
  • ಅರ್ಧ ಪುಟ ಏಕವರ್ಣ- ₹18,000
  • ಕಾಲು ಪುಟ ಏಕವರ್ಣ- ₹10,000
  • ಹಾರೈಕೆ ನಾಲ್ಕು ಸಾಲು – ₹5,000

​ಈ ಪ್ರಕಟಣೆಯನ್ನು ಕೇವಲ ಒಂದು ಸ್ಮರಣ ಸಂಚಿಕೆಯಾಗಿ ಮಾತ್ರವಲ್ಲದೆ, ಒಂದು ಅರ್ಥಪೂರ್ಣ ಸಾಹಿತ್ಯಿಕ ದಾಖಲೆಯಾಗಿ ರೂಪಿಸಲಾಗುತ್ತದೆ.

ನಮ್ಮೊಂದಿಗೆ ಏಕೆ ಕೈಜೋಡಿಸಬೇಕು?

ಸಮಾಜಮುಖಿ ಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ನೀಡುವುದು ಎಂದರೆ ಅದೊಂದು ಕೇವಲ ಪ್ರಾಯೋಜಕತ್ವವಲ್ಲ; ಅದು ಒಂದು ವಿಶ್ವಾಸಾರ್ಹ ಸಾಂಸ್ಕೃತಿಕ ಮತ್ತು ಬೌದ್ಧಿಕ ಉಪಕ್ರಮದ ಜೊತೆ ಗುರುತಿಸಿಕೊಳ್ಳುವ ಅವಕಾಶ.

ಇದು ಈ ಕೆಳಗಿನ ಅವಕಾಶಗಳನ್ನು ಒದಗಿಸುತ್ತದೆ:

  • ಗಂಭೀರ ಮತ್ತು ಉನ್ನತ ಮೌಲ್ಯದ ಸಾರ್ವಜನಿಕ ಚರ್ಚೆಗಳ ಭಾಗವಾಗುವುದು.
  • ಪ್ರಬುದ್ಧ ಮತ್ತು ವಿವೇಚನಾಶೀಲ ಓದುಗ ವರ್ಗವನ್ನು ತಲುಪುವುದು.
  • ಪ್ರಾಮಾಣಿಕತೆ, ವೈಚಾರಿಕತೆ ಮತ್ತು ಸಾಂಸ್ಕೃತಿಕ ಜವಾಬ್ದಾರಿ ಜೊತೆ ಗುರುತಿಸಿಕೊಳ್ಳುವುದು.

ಇದು ಕೇವಲ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಮೌಲ್ಯಗಳಿಗಾಗಿ ಕೈಜೋಡಿಸುವ ಪ್ರಕ್ರಿಯೆ.

ನಮ್ಮೊಂದಿಗೆ ಏಕೆ ಕೈಜೋಡಿಸಬೇಕು?

ಸಾಹಿತ್ಯ ಮತ್ತು ಸಾರ್ವಜನಿಕ ಚಿಂತನೆಯ ಮಹತ್ವವನ್ನು ನಂಬುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸದಾಶಯದಿಂದ ಈ ಸಮ್ಮೇಳನ ಸಾಧ್ಯವಾಗಿದೆ. ಹಾಗಾಗಿ ಈ ಕೆಳಗಿನ ಹಂತಗಳಲ್ಲಿ ನೀವು ಬೆಂಬಲ ನೀಡಬಹುದು:

ಶೀರ್ಷಿಕೆ ಪಾಲುದಾರರು – ₹15 ಲಕ್ಷ (1):

  • ನಿಮ್ಮ ಸಂಸ್ಥೆಯ ಸಹಯೋಗದೊಂದಿಗೆ ಸಮ್ಮೇಳನದ ಪ್ರಸ್ತುತಿ.
  • ಪ್ರಚಾರ ಸಾಮಗ್ರಿ ಮತ್ತು ಸಮ್ಮೇಳನದ ಆವರಣದಲ್ಲಿ ಪ್ರಮುಖವಾಗಿ ಗುರುತಿಸುವುದು
  • ಉದ್ಘಾಟನಾ ಮತ್ತು ಪ್ರಮುಖ ಗೋಷ್ಠಿಗಳಲ್ಲಿ ಕೃತಜ್ಞತೆ ಸಲ್ಲಿಕೆ.

ಸಹ-ಪಾಲುದಾರರು – ₹5 ಲಕ್ಷ (2):

  • ಎಲ್ಲಾ ಪ್ರಮುಖ ವೇದಿಕೆಗಳಲ್ಲಿ ಸಕ್ರಿಯ ಪ್ರಚಾರ.
  • ಸಮ್ಮೇಳನದ ಪ್ರಚಾರ ಕಾರ್ಯಗಳಲ್ಲಿ ಪ್ರದರ್ಶನ.

ವೇದಿಕೆ ಪಾಲುದಾರರು – ₹4 ಲಕ್ಷ (4 ವೇದಿಕೆಗಳು)
ಒಂದು ನಿರ್ದಿಷ್ಟ ವಿಷಯಾಧಾರಿತ ವೇದಿಕೆಯೊಂದಿಗೆ ಒಡನಾಟ.
ಆ ವೇದಿಕೆಯ ಎಲ್ಲಾ ಗೋಷ್ಠಿಗಳಲ್ಲಿ ಪ್ರಚಾರ.

ಗೋಷ್ಠಿಗಳಿಗೆ ಬೆಂಬಲ – ತಲಾ ₹ 25,000
ಆಯಾ ಗೋಷ್ಠಿಯ ಅವಧಿಯಲ್ಲಿ ಕೃತಜ್ಞತೆ ಮತ್ತು ಗೌರವ ಸಲ್ಲಿಕೆ.
ಸಾಧಾರಣವಾದರೂ ಅರ್ಥಪೂರ್ಣ ಪ್ರಚಾರ.

ಈಗ ಏಕೆ?

ಏಕೆಂದರೆ ಸಾಹಿತ್ಯವು ಇಂದಿಗೂ ಇವುಗಳ ತಾಣವಾಗಿ ಉಳಿಯಬೇಕಿದೆ:

  • ಪ್ರಶ್ನಿಸುವ ಜಾಗ
  • ಸ್ಪಷ್ಟತೆಯ ಸೆಲೆ
  • ಕಲ್ಪನೆಯ ಪ್ರೇರಕ ಶಕ್ತಿ

ಈ ಸಮ್ಮೇಳನವು ವರ್ತಮಾನದ ಕನ್ನಡಿ ಮತ್ತು ಭವಿಷ್ಯದ ದೀಪ ಎರಡೂ ಆಗಲು ಬಯಸುತ್ತದೆ.

ಒಂದು ಸಾಮೂಹಿಕ ಪ್ರಯತ್ನ

ಸಮಾಜಮುಖಿ ಸಾಹಿತ್ಯ ಸಮ್ಮೇಳನವು ಅದ್ದೂರಿ ಪ್ರದರ್ಶನಕ್ಕಿಂತ ಮಿಗಿಲಾಗಿ, ಹಂಚಿಕೆಯ ಬದ್ಧತೆಯಿಂದ ಮುನ್ನಡೆಯುತ್ತಿದೆ ಎಂಬುದು ವಿಶೇಷ. ಸಾಹಿತ್ಯವು ಈ ಕೆಳಗಿನ ಸಂಗತಿಗಳ ಮೂಲಕ ಸಮೃದ್ಧಗೊಳ್ಳುತ್ತದೆ ಎಂದು ನಂಬಿದವರು ನಾವು:

  • ಸಂವಾದ
  • ಸಮುದಾಯದ ಬೆಂಬಲ
  • ಬೌದ್ಧಿಕ ಪ್ರಾಮಾಣಿಕತೆ

ನಮ್ಮೊಂದಿಗೆ ಕೈಜೋಡಿಸಿ

ಸಮಾಜಮುಖಿ ಸಾಹಿತ್ಯ ಸಮ್ಮೇಳನಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯ. samajamukhi.com ನಲ್ಲಿ ನೋಂದಾಯಿಸಿಕೊಳ್ಳಿ. ಪ್ರತಿನಿಧಿಗಳಿಗೆ ನೋಂದಣಿ ಶುಲ್ಕ ರೂ.400 ನಿಗದಿಯಾಗಿದೆ. ದೇಣಿಗೆಯ ಸಹಾಯದಿಂದ ನಡೆಯುವ ಈ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳ ಸಹಕಾರ ಕೋರಲಾಗಿದೆ. ಸಾಹಿತ್ಯದ ಭವಿಷ್ಯ ರೂಪಿಸುವ ಈ ಪಯಣದಲ್ಲಿ ನಿಮಗೆ ಆತ್ಮೀಯ ಆಹ್ವಾನ.

ಸಾಹಿತ್ಯ ಸಮ್ಮೇಳನದ ವಿವರಗಳು

  • 2 ದಿನಗಳು

  • ನವೆಂಬರ್ 28 – 29, 2026
    ಶನಿವಾರ ಮತ್ತು ಭಾನುವಾರ

  • ಸ್ಥಳ: ಸ್ಕೌಟ್ಸ್ & ಗೈಡ್ಸ್ ಆವರಣ, ಅರಮನೆ ರಸ್ತೆ, ಬೆಂಗಳೂರು