ಇಂಧನ ಬೆಲೆ ಏರಿಕೆಯ ಹಿಂದೆ ಮುಂದೆ…

ತೈಲಚಾಲಿತ ವಾಹನಗಳನ್ನು ತ್ಯಜಿಸಿ, ಇವಿ ಗಳನ್ನು ಖರೀದಿಸಲಿ ಅನ್ನುವ ಉದ್ದೇಶದಿಂದ ಅಥವಾ ಇವಿ ಉತ್ಪಾದಕರ ಒತ್ತಡದಿಂದ ನಿರಂತರವಾಗಿ ತೈಲ ಬೆಲೆ ಏರಿಸಲಾಗುತ್ತಿದೆಯೇ?

ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ಶೇ.80ರಷ್ಟು ಕಚ್ಚಾತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಇದು ಸರ್ಕಾರಕ್ಕೆ ಆರ್ಥಿಕ ಮತ್ತು ಅನ್ಯರ ಹಂಗಿನ ಹೊರೆಯೂ ಹೌದು. ಏರುತ್ತಿರುವ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು, ಒಂದಲ್ಲ ಒಂದು ದಿನ ಧರೆಯ ಒಡಲ ತೈಲ ಬರಿದಾಗುವ ಸಾಧ್ಯತೆಯ ಗಮನದಲ್ಲಿಟ್ಟುಕೊಂಡೇ, ಇಡೀ ವಿಶ್ವ ಸಮುದಾಯ ವಿದ್ಯುತ್ ಚಾಲಿತ (ಇಟeಛಿಣಡಿiಛಿ ಗಿಛಿಟe) ವಾಹನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಅದರಂತೆ ಭಾರತ ಒಕ್ಕೂಟ ಸರ್ಕಾರ ಸಹ ಇವಿ ವಾಹನಗಳನ್ನು ಬಳಸಲು ಹಲವಾರು ಪ್ರೋತ್ಸಾಹಕ ಉಪಕ್ರಮಗಳನ್ನು ಕೈಗೊಂಡಿದೆ. ‘ಗುಜರಿ ನೀತಿ’ ಅಮೆರಿಕದಂತಹ ರಾಷ್ಟ್ರಗಳಿಗೆ ಪಥ್ಯವಾಗಬಹುದು. ಆದರೆ, ಇಂತಹ ನೀತಿಗಳು ಭಾರತಕ್ಕೆ ಬಲು ಭಾರ. ಸರ್ಕಾರದ ದೂರದೃಷ್ಟಿ ಪ್ರೇರಿತ ನಿರ್ಧಾರವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬಹುದಾದರೂ, ಕೊರೋನೋತ್ತರ ಕಾಲಘಟ್ಟದಲ್ಲಿ ಸೂಕ್ತವಿರಲಿಲ್ಲ.

ಹಿಂದಿನ ಯುಪಿಎ ಸರ್ಕಾರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ದರದ ಏರಿಳಿತ ಆಂತರಿಕ ತೈಲದ ಬೆಲೆ ಏರಿಕೆಗೆ ಕಾರಣ ಎಂದು ಸರ್ಕಾರ ಹೇಳುತ್ತಿದೆಯಾದರೂ, ಅದರ ‘ವ್ಯಾವಹಾರಿಕ ಹಕೀಕತ್’ ಬೇರೆಯೇ ಇದೆ; ದೇಶವಾಸಿಗಳು ತೈಲಚಾಲಿತ ವಾಹನಗಳನ್ನು ತ್ಯಜಿಸಿ, ಇವಿ ಗಳನ್ನು ಖರೀದಿಸಲಿ ಅನ್ನುವ ಉದ್ದೇಶದಿಂದ ಅಥವಾ ಇವಿ ಉತ್ಪಾದಕರ ಒತ್ತಡದಿಂದ ನಿರಂತರವಾಗಿ ತೈಲ ಬೆಲೆ ಏರಿಸಲಾಗುತ್ತಿದೆ.

ಈಗಾಗಲೇ ಸಾಲಸೋಲ ಮಾಡಿ ಖರೀದಿಸಿದ ತೈಲಚಾಲಿತ ದ್ವಿಚಕ್ರ ವಾಹನವನ್ನು ಶ್ರಮಿಕರು ಮರುಮಾರಾಟ ಮಾಡಲು ಹೋದರೆ ಕೊರೋನೋತ್ತರ ಕಾಲದಲ್ಲಿ ಅದಕ್ಕೆ ಸಿಗುವ ಬೆಲೆಯಿಂದ ಹೊಸ ಇವಿಯನ್ನು ಕೊಳ್ಳುವುದು ಅಸಾಧ್ಯವೇ. ಇವಿ ದ್ವಿಚಕ್ರ ವಾಹನಗಳ ಸಬ್ಸಿಡಿಯನ್ನು 10 ಸಾವಿರದಿಂದ 15 ಸಾವಿರಕ್ಕೆ ಏರಿಸಿದರೂ ಈ ವಾಹನಗಳ ದರ ಒಂದು ಲಕ್ಷದ ಮೇಲೆಯೇ ಇದೆ. ಹೀಗಿರುವಾಗ ದುರ್ಬಲ ವರ್ಗದವರಿಗೆ ದಿಢೀರ್ ಇವಿ ಗಳನ್ನು ಕೊಳ್ಳಲು ಸಾಧ್ಯವೇ? ದೆಹಲಿ ಸರ್ಕಾರ ಇವಿ ಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಿದ ಹಾಗೆ ಎಲ್ಲ ರಾಜ್ಯಗಳು ವಿನಾಯಿತಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಇವಿ ಗಳನ್ನು ಕೊಳ್ಳಲು ಸಾಲ ನೀಡಿದರೂ ಅದು ಹೆಚ್ಚು ಪ್ರಯೋಜನವಾಗುವುದು ಉದ್ಯೋಗಸ್ಥರಿಗೇ. ಹಾಗಾದರೆ ದುರ್ಬಲ ವರ್ಗಕ್ಕೆ ಸರ್ಕಾರ ಯಾವುದೇ ಆರ್ಥಿಕ ಅನುಕೂಲತೆಗಳನ್ನು ಮಾಡಿಕೊಡದೇ, ತರಾತುರಿಯಾಗಿ ಇವಿ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೈಲ ಬೆಲೆ ಏರಿಕೆಯನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿರುವುದರಿಂದ ಬಹುತ್ವ ಭಾರತದ ಜನಜೀವನ ಅಧೋಗತಿಗಿಳಿಯುವುದರಲ್ಲ್ಲಿ ಸಂಶಯವಿಲ್ಲ.

ಜನವರಿ 1ರಿಂದ ಆಗಸ್ಟ್ 31, 2021ರವರೆಗಿನ ಪ್ರತಿ ತಿಂಗಳಿಗೆ ಸರಾಸರಿ ಏರಿಕೆ ದರ 2.34 ರೂ.ಗಳಂತೆ ಏರುತ್ತಲೇ ಹೋದರೆÉ, 2024ರ ಮೇ ವೇಳೆಗೆ ಲೀ.ಗೆ ಅಂದಾಜು 179.12 ರೂ.ಗಳು ಆಗಲಿದೆ! ಪ್ರಾಯಶಃ 2024ರ ಲೋಕಸಭಾ ಚುನಾವಣೆ ಘೋಷಿಸುವ ಪೂರ್ವದಲ್ಲಿ ಸರ್ಕಾರ ತೈಲ ಸುಂಕದಲ್ಲಿ ಶೇ. 50 ರಷ್ಟು ಕಡಿತ ಮಾಡಿದರೂ ಅಚ್ಚರಿಯೇನಲ್ಲ!

ಲೀ.ಗೆ ಕೇವಲ 37.00 ರೂ.ಗಳ ಆಸುಪಾಸಿನ ಮೂಲದರದಲ್ಲಿ ದೊರೆಯುವ ಪೆಟ್ರೋಲಿನ ಉತ್ಪಾದನೆ, ಸಾರಿಗೆ ವೆಚ್ಚ, ಅಬಕಾರಿ ಸುಂಕ (1.40), ಕೃಷಿ ಸೆಸ್ (2.50), ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಸೆಸ್ (18), ವಿಶೇಷ ಅಬಕಾರಿ ಸುಂಕ (11) ಇವು ಒಕ್ಕೂಟದ ಪಾಲಾದರೆ, ರಾಜ್ಯಗಳ ಪಾಲಿನ ತೆರಿಗೆ ಹಾಗೂ ವಿತರಕರ (ರೂ.3.69) ಲಾಭಾಂಶ ಸೇರಿ ಇಂದು 104/105 ರೂ.ಗಳ ಆಸುಪಾಸಿನಲ್ಲಿ ಪೆಟ್ರೋಲ್ ಖರೀದಿಸುವ ಗ್ರಾಹಕರ ಸ್ಥಿತಿ ಅಯೋಮಯ. ಇಂತಹ ಕಾರಣಗಳಿಂದಾಗಿಯೇ ಭಾರತದಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆಯ ‘ದರ’ ಶೇ.66ರಿಂದ ಶೇ.24ಕ್ಕೆ ಕುಸಿದಿದೆ! ಆದರೆ ಜಾಗತಿಕ ಮಟ್ಟದಲ್ಲಿ ಮೋದಿ

ನಂ.1 ಸ್ಥಾನಕ್ಕೇರಿದ್ದಾರೆ!

45ನೇ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಪೆಟ್ರೋಲ್, ಡೀಸೆಲ್‍ಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವುದು ಅಸಾಧ್ಯ ಎಂದು ವಿತ್ತ ಮಂತ್ರಿಗಳು ಯಾವ ಮುಲಾಜಿಲ್ಲದೇ ಹೇಳಿದ್ದಾರೆ. ಈ ಹಿಂದೆ ದೇಶವಾಸಿಗಳಿಗೆ “ಒಳ್ಳೆಯ ದಿನಗಳ”ನ್ನು ನಿರೀಕ್ಷಿಸಿ ಎಂದಿದ್ದ ಮೋದಿಯವರು, ಒಂದೆಡೆ ಬೆಲೆ ಏರಿಕೆಯಿಂದ ದುರ್ಬಲ ವರ್ಗದವರು ನಿತ್ಯ ಗೋಳಾಡುವ ಹಾಗೆ, ಇನ್ನೊಂದೆಡೆ ದೇಶವಿದೇಶದ ಸಿರಿವಂತ ಉದ್ಯಮಿಗಳಿಗೆ ದೇಶದ ಸಮಸ್ತ ಭೌತಿಕ (ಆಸ್ತಿ ನಗದೀಕರಣ ಯೋಜನೆ) ಆಸ್ತಿಯನ್ನಷ್ಟೇ ಅಲ್ಲ; ಬೌದ್ಧಿಕತೆಯನ್ನೂ ಅವರ ಕೈಗೊಪ್ಪಿಸುವ ‘ಡಿಪೆಂಡೆಂಟ್ ಇಂಡಿಯಾ’ವನ್ನೇ ಸೃಷ್ಟಿಸಲು ಹೊರಟಿದ್ದಾರೆ!

2021-22ನೇ ಸಾಲಿನಲ್ಲಿ ಬಡತನದ ಅನುಪಾತ ಶೇ.50.9 ರಿಂದ 55.87ಕ್ಕೆ (380ರಿಂದ 418 ಮಿಲಿಯನ್) ಏರಿಕೆ ಕಾಣುತ್ತಿರುವÀ ಹಿಂದೂಸ್ತಾನದ ‘ವಾಸ್ತವ ಸತ್ಯ’ವನ್ನು ಕಡೆಗಣಿಸಿ, ‘ವ್ಯಾವಹಾರಿಕ ಸತ್ಯ’ವನ್ನೊಳಗೊಂಡ ದೇಶ ಕಟ್ಟುವುದು ಜಾಣ ನಡೆಯೆನಿಸದು.

Leave a Reply

Your email address will not be published.