ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಮಸೂದೆ

ಭಾರತ ಒಕ್ಕೂಟ ಸರ್ಕಾರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಕ್ರಿಪೆ್ಟೀಕರೆನ್ಸಿ ಮಸೂದೆ ಮಂಡಿಸಲು ಮುಂದಾಗಿದೆ. ಇದು ಹೂಡಿಕೆದಾರರು, ಕ್ರಿಪೆ್ಟೀ ವಿನಿಮಯ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಇತರೆ ವಿತ್ತ ಸಂಸ್ಥೆಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.

ಎಂ.ಕೆ.ಆನಂದರಾಜೇ ಅರಸ್

ಇಪ್ಪತೊಂದನೇ ಶತಮಾನದ ಈವರೆಗಿನ ಮಹತ್ತರವೆನ್ನಬಹುದಾದ ಹಾಗೂ ಮಹತ್ವಾಕಾಂಕ್ಷಿ ಆವಿಷ್ಕಾರಗಳಲ್ಲಿ ಒಂದಾಗಿರುವ ಕ್ರಿಪ್ಟೋ ನಾಣ್ಯಗಳು ಜಗತ್ತಿನಾದ್ಯಂತ ಹಲವಾರು ಸರ್ಕಾರಗಳಿಗೆ, ಕೇಂದ್ರೀಯ ಬ್ಯಾಂಕುಗಳಿಗೆ ಬಿಸಿತುಪ್ಪವಾಗಿವೆ.

ಒಂದೆಡೆ ಈ ಕರೆನ್ಸಿಗಳಿಂದ ಬೃಹತ್ ಮಟ್ಟದಲ್ಲಿ ಆರ್ಥಿಕತೆ ಅಸ್ಥಿರಗೊಳ್ಳಬಹುದಾದ ಸಾಧ್ಯತೆಗಳು, ಅವುಗಳನ್ನು ಭಯೋತ್ಪಾದಕತೆಯಂತಹ, ಮಾದಕವ್ಯಸನದಂತಹ ದುಷ್ಕೃತ್ಯಗಳಿಗೆ ಬಳಸಿಕೊಳ್ಳಬಹುದಾದ ಸಂಭಾವ್ಯತೆ, ಇತ್ಯಾದಿ ಅಂಶಗಳು ಕ್ರಿಪ್ಟೋ ಕುರಿತಂತೆ ಎಚ್ಚರಿಕೆಯಿಂದ ಹೆಜ್ಜೆಯಿಡುವಂತೆ ಸೂಚಿಸುತ್ತಿವೆ. ಮತ್ತೊಂದೆಡೆ ಕ್ರಿಪ್ಟೋ ಕರೆನ್ಸಿ ಅಳವಡಿಸಿಕೊಳ್ಳದಿದ್ದರೆ ಕ್ರಾಂತಿಕಾರಕ ಬ್ಲಾಕ್‍ಚೈನ್‍ನಂತಹ ತಂತ್ರಜ್ಞಾನದಲ್ಲಿ ಹಿಂದುಳಿದು ಸ್ಪರ್ಧಾತ್ಮಕವಾಗಿ ಇತರೆ ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತ ಹಿಂದೆ ಸರಿಯಬಹುದಾದ ಸಾಧ್ಯತೆ. ಕೈತಪ್ಪಿಹೋಗಬಹುದಾದ ಉದ್ದಿಮೆ ಅವಕಾಶಗಳು, ತೆರಿಗೆ ಸಂಗ್ರಹದಿಂದ ಬರಬಹುದಾಗಿದ್ದ ಆದಾಯದ ನಷ್ಟ ಇತ್ಯಾದಿ ಕಾರಣಗಳು ಹಲವು ದೇಶಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ಅಮೆರಿಕಾ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಇತ್ಯಾದಿ ಮುಂದುವರೆದಿರುವ ದೇಶಗಳಲ್ಲಿ ಕ್ರಿಪೆ್ಟೀ ಕುರಿತು ಸಾಕಷ್ಟು ಒಲವಿದೆ. ಅಲ್ಲಿನ ಹಲವಾರು ನಗರಗಳಲ್ಲಿ ಕ್ರಿಪ್ಟೋ ಎಟಿಎಂಗಳಿವೆ, ಮಾಲ್‍ಗಳಲ್ಲಿ ಬಿಟ್‍ಕಾಯಿನ್‍ನಂತಹ ಕ್ರಿಪ್ಟೋ ನಾಣ್ಯಗಳನ್ನು ಸ್ವೀಕರಿಸಲಾಗುತ್ತಿದೆ. ತೀರಾ ಇತ್ತೀಚೆಗೆ 2021ರ ನವೆಂಬರ್ ತಿಂಗಳಲ್ಲಿ ನೀಡಿದ ಹೇಳಿಕೆಯಲ್ಲಿ ಅಮೆರಿಕಾದ ಅತೀ ದೊಡ್ಡ ಸಿನೆಮಾ ಥಿಯೇಟರ್ ಸರಪಳಿಯಾಗಿರುವ ಎಎಂಸಿ ಥಿಯೇಟರ್ಸ್ ಮುಂದಿನ ಮೂರು ತಿಂಗಳಿನಲ್ಲಿ ಶಿಬಾಇನು ಸೇರಿದಂತೆ ಹಲವಾರು ಮೀಮ್ ಟೋಕನ್‍ಗಳನ್ನು ಟಿಕೆಟ್ ಖರೀದಿಗೆ ಒಪ್ಪಿಕೊಳ್ಳಲಾಗುವುದು ಎಂದು ತಿಳಿಸಿದೆ. ಬಿಟ್‍ಕಾಯಿನ್ ಅನ್ನು ಕಾನೂನು ಮಾನ್ಯ ಚಲಾವಣೆ ನಾಣ್ಯವನ್ನಾಗಿ ಪರಿಗಣಿಸಿದ ಮೊದಲ ದೇಶವಾಗಿರುವ ದಕ್ಷಿಣ ಅಮೆರಿಕಾದ ಎಲ್ ಸಲ್ವಾಡಾರ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬಿಟ್‍ಕಾಯಿನ್ ನಗರವನ್ನು ನಿರ್ಮಿಸಲು ಸಜ್ಜಾಗಿದೆ. ಈ ಬೆಳವಣಿಗೆಯನ್ನು ಆತಂಕದಲ್ಲಿಯೇ ಗಮನಿಸುತ್ತಿರುವ ಐಎಂಎಫ್ ಎಲ್ ಸಲ್ವಡಾರ್‍ಗೆ ಈ ಕುರಿತಂತೆ ಎಚ್ಚರಿಕೆ ನೀಡಿದೆ.

ಭಾರತದಲ್ಲಿ ಕ್ರಿಪ್ಟೋ ವಿರುದ್ಧ ಹೆಚ್ಚುಕಡಿಮೆ ಯುದ್ಧ ಸಾರಿರುವ ರಿಸರ್ವ್ ಬ್ಯಾಂಕ್‍ನ ಮುಖ್ಯಸ್ಥ ಶಕ್ತಿಕಾಂತ ದಾಸ್ ಕ್ರಿಪೆ್ಟೀಕರೆನ್ಸಿ ಕುರಿತಂತೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ. ಕ್ರಿಪೆ್ಟೀ ಇದೇ ಗತಿಯಲ್ಲಿ ಬೆಳೆದರೆ ಮುಂದೊಂದು ದಿನ ಇದು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಸ್ಥಿರಗೊಳಿಸುತ್ತದೆ ಎಂದು ಕಡ್ಡಿ ಮುರಿದಂತೆ ಹೇಳಿರುವ ದಾಸ್ ಕ್ರಿಪೆ್ಟೀಕರೆನ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆನ್ನುತ್ತಾರೆ. ಆದರೆ ಈಗಾಗಲೇ ಕ್ರಿಪ್ಟೋ ಪರಿಣತರು, ವಿನಿಮಯ ಸಂಸ್ಥೆಗಳ ಜೊತೆ ಚರ್ಚೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರ ಮಧ್ಯಮಾರ್ಗವನ್ನು ಅನುಸರಿಸಬಹುದು ಎಂಬ ಸೂಚನೆಗಳು ಬರುತ್ತಿದ್ದಂತೆ ವಿಚಲಿತರಾದ ದಾಸ್ ಈ ಕುರಿತಂತೆ ಇನ್ನೂ ಹೆಚ್ಚಿನ ಹಾಗೂ ಆಳವಾದ ಚರ್ಚೆಯಾಗಬೇಕು ಎಂದು ಹೇಳುತ್ತಾರೆ. ಈಗ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕ್ರಿಪೆ್ಟೀಕರೆನ್ಸಿ ಮಸೂದೆ ಮಂಡಿಸಲು ಮುಂದಾಗಿರುವುದು ಹೂಡಿಕೆದಾರರು, ಕ್ರಿಪ್ಟೋ ವಿನಿಮಯ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಇತರೆ ವಿತ್ತ ಸಂಸ್ಥೆಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.

ಕ್ರಿಪ್ಟೋ ಕರೆನ್ಸಿ ಪರವಾಗಿ ವಾದಿಸುವವರು ಕ್ರಿಪ್ಟೋ ಕರೆನ್ಸಿಯಿಂದ ಇರುವ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಾರೆ. ಇದು ಹಣದುಬ್ಬರಕ್ಕೆ ಮರುಮದ್ದಾಗಿರುತ್ತದೆಂದು, ವಿಕೇಂದ್ರೀಕರಣಕ್ಕೆ ಅವಕಾಶ ಕಲ್ಪಿಸುತ್ತದೆಂದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ವಿನಿಮಯ ವೆಚ್ಚವನ್ನು ತಗ್ಗಿಸುತ್ತದೆಂದು, ಬ್ಲಾಕ್‍ಚೈನ್ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಸರ್ಕಾರಿ ಸೇವೆಗಳಲ್ಲಿ ಭ್ರಷ್ಟಾಚಾರ ಕಡಿಮೆಗೊಳ್ಳುವುದೆಂದು ಹೇಳುತ್ತಾರೆ. ಕ್ರಿಪ್ಟೋ ಕರೆನ್ಸಿ ವಿರುದ್ಧವಾಗಿ ವಾದಿಸುವವರು, ಈ ಕರೆನ್ಸಿಗೆ ಯಾವುದೇ ನೈಜ ಹಾಗೂ ಅಂತರ್ಗತ ಮೌಲ್ಯವಿಲ್ಲವೆಂದು, ಇದು ದೊಡ್ಡ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುತ್ತದೆಂದು, ಭಯೋತ್ಪಾದಕ ಹಾಗೂ ಇತರ ವಿಧ್ವಂಸಕ ಕೃತ್ಯಗಳಿಗೆ ನೆರವಾಗುವುದೆಂದು, ಯುವಕರನ್ನು ದಾರಿ ತಪ್ಪಿಸುತ್ತದೆಂದು, ಅಪಾರವಾದ ವಿದ್ಯುತ್ ಅವಶ್ಯಕತೆಯಿದ್ದು ಇದರಿಂದ ಪರಿಸರದ ಮೇಲೆ ತೀವ್ರ ದುಷ್ಪರಿಣಾಮವಾಗುತ್ತದೆಂದು ಹಾಗೂ ಈ ಕರೆನ್ಸಿಗಳ ಮೌಲ್ಯ ಅಥವಾ ಬೆಲೆಯಲ್ಲಿರುವ ಚಂಚಲತೆ ಹೂಡಿಕೆದಾರರಿಗೆ ಅಪಾರ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆಂದು ಅಪಾದಿಸುತ್ತಾರೆ.

ಕ್ರಿಪ್ಟೋ ಕರೆನ್ಸಿ ಬೆಂಬಲಿಗರು ಹೇಳುವುದೆಂದರೆ ಬಿಟ್‍ಕಾಯಿನ್ ಮೂಲವಾಗಿ ಕರೆನ್ಸಿಯಲ್ಲ. ಇದನ್ನು ರೂಪಾಯಿಯಂತಹ ಫಿಯಟ್ (ಮಂಜೂರಾದ) ಕರೆನ್ಸಿಯೊಡನೆ ಹೋಲಿಸಬಾರದು. ಮೂಲವಾಗಿ ಬಿಟ್‍ಕಾಯಿನ್ ಚಿನ್ನದ ರೀತಿ ಸ್ಟೋರ್ ಆಫ್ ವ್ಯಾಲ್ಯೂ (ಮೌಲ್ಯದ ದಾಸ್ತಾನು). ಈ ಕಾರಣದಿಂದಲೇ ಕ್ರಿಪ್ಟೋ ಕರೆನ್ಸಿಗಳನ್ನು ಅಸೆಟ್ ಕ್ಲಾಸ್ (ಆಸ್ತಿ ವರ್ಗ) ಅಡಿ ಸೇರಿಸಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಅವಕಾಶಮಾಡಿಕೊಡಬೇಕೆಂದು ಕ್ರಿಪೆ್ಟೀಕರೆನ್ಸಿ ವಿನಿಮಯ ಸಂಸ್ಥೆಗಳು ಭಾರತ ಸರ್ಕಾರಕ್ಕೆ ಮನವಿ ಮಾಡಿಕೊಂಡಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಇತ್ತೀಚಿನ ಟಿವಿ ಸಂದರ್ಶನವೊಂದರಲ್ಲಿ ಕ್ರಿಪೆ್ಟೀ ಒಂದು ಮೌಲ್ಯದ ದಾಸ್ತಾನು ಎಂಬ ವಾದವನ್ನು ಒಪ್ಪಿಕೊಳ್ಳುತ್ತಾ, ಕೆಲವು ಕ್ರಿಪ್ಟೋ ನಾಣ್ಯಗಳಾದರೆ ಸರಿ, ಆದರೆ ಈಗ ಸಾವಿರಾರು ನಾಣ್ಯಗಳಿವೆ. ಅವುಗಳೆಲ್ಲವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ. ಒಂದೆರಡು ನಾಣ್ಯಗಳನ್ನು ಬಿಟ್ಟರೆ ಬಹುತೇಕ ಕ್ರಿಪೆÇ್ಟೀನಾಣ್ಯಗಳು ಮುಂದಿನ ದಿನಗಳಲ್ಲಿ ಅವನತಿ ಹೊಂದುತ್ತವೆ ಎಂದು ಹೇಳುತ್ತಾರೆ.

ಈ ಎಲ್ಲ ಪರವಿರೋಧ ಜಗ್ಗಾಟಗಳ ನಡುವೆ ಈ ವರ್ಷ ಭಾರತವು ಸೇರಿದಂತೆ ಪ್ರಪಂಚದೆಲ್ಲಡೆ ಕ್ರಿಪೆ್ಟೀಕರೆನ್ಸಿ ವಲಯ ನಾಗಾಲೋಟದಲ್ಲಿ ಬೆಳೆದಿರುವುದು, ಸಾಂಪ್ರದಾಯಿಕ ಹೂಡಿಕೆದಾರರು, ಆರ್ಥಿಕ ಸಂಸ್ಥೆಗಳು, ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸರ್ಕಾರದ ನಿದ್ದೆಗೆಡಿಸಿದೆ. ಚೀನಾ ದೇಶದಲ್ಲಿ ಹೇರಿದ ನಿಷೇಧದ ತಕ್ಷಣದ ದಿನಗಳಲಿ ಜಾಗತಿಕ ಮಟ್ಟದಲ್ಲಿ ಕುಸಿದುಬಿದ್ದ ಕ್ರಿಪೆÇ್ಟೀಕರೆನ್ಸಿ ಮಾರುಕಟ್ಟೆ ನಂತರದ ದಿನಗಳಲ್ಲಿ ಬೃಹದಾಕಾರದಲ್ಲಿ ಪುಟಿದೆದ್ದಿತು.

ಭಾರತದಲ್ಲಿ ನೋಡನೋಡುತ್ತಿದ್ದಂತೆ ಲಕ್ಷಾಂತರ ಜನರು ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದರು. ಈಗ ಭಾರತದ ಸುಮಾರು 10 ಕೋಟಿ ಜನಸಂಖ್ಯೆ ಕ್ರಿಪೆ್ಟೀಕರೆನ್ಸಿ ವಿನಿಮಯ ಸಂಸ್ಥೆಗಳಲ್ಲಿ ಖಾತೆಗಳನ್ನು ಹೊಂದಿದ್ದು ಹೂಡಿಕೆ ಸುಮಾರು 40,000 ಕೋಟಿ ರೂಪಾಯಿಯ ಆಸುಪಾಸಿನಲ್ಲಿದೆ. ಈ ಬೆಳವಣಿಗೆ ನೋಡಿಯೇ ಎನೋ ದಿಗ್ಭ್ರಮೆಗೊಂಡಂತೆ ಕಂಡ ಶಕ್ತಿಕಾಂತ ದಾಸ್ ಕ್ರಿಪೆ್ಟೀ ವಿರುದ್ಧ ಸಮರ ಸಾರಿದರು. ಅವರ ಹೇಳಿಕೆಯ ಹಿಂದೆಯೇ ಭಾಷಣವೊಂದರಲ್ಲಿ ದೇಶದ ಪ್ರಧಾನಿ ಮೋದಿಯವರು ಕ್ರಿಪೆ್ಟೀಕರೆನ್ಸಿ ಕುರಿತಂತೆ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗಳು ಒಗ್ಗೂಡಿ ಕೆಲಸಮಾಡಬೇಕೆಂದು, ಕ್ರಿಪೆ್ಟೀ ತಪ್ಪು ಕೈಸೇರಿದರೆ ಅದು ಯುವಕರನ್ನು ಹಾಳು ಮಾಡುತ್ತದೆಂದು, ಹಾಗಾಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ಬ್ಲಾಕ್‍ಚೈನ್ ಕ್ರಿಪೆ್ಟೀಕರೆನ್ಸಿಯ ಶಕ್ತಿಯಾಗಿದೆ. ಇದರಿಂದ ಪ್ರಪಂಚವನ್ನೇ ಬದಲಿಸಲು ಸಾಧ್ಯ, ಮೊದಲು ಹೇಗೆ ಇಂಟರ್‍ನೆಟ್ ಇತ್ತೋ, ಬ್ಲಾಕ್‍ಚೈನ್ ಕೂಡ ಹಾಗೆಯೇ ಎಂದು ಕ್ರಿಪೆ್ಟೀ ಹಾಗೂ ಬ್ಲಾಕ್‍ಚೈನ್‍ನ ಕಟ್ಟಾ ಬೆಂಬಲಿಗರು ವಾದಕ್ಕಿಳಿಯುತ್ತಾರೆ. ಶಶಿಕಾಂತ ದಾಸ್ ಅದನ್ನೂ ಪರಿಗಣಿಸುತ್ತಾ, ಪ್ರಶ್ನಿಸುತ್ತಾ, ಬ್ಲಾಕ್‍ಚೈನ್ ತಂತ್ರಜ್ಞಾನ ಬೆಳೆಯಲು ಕ್ರಿಪೆ್ಟೀಕರೆನ್ಸಿ ಬೇಕಿಲ್ಲ ಎಂದು ಹೇಳುತ್ತಾರೆ.

ಈ ಎಲ್ಲಾ ಅಂಶಗಳನ್ನು ಕ್ರಿಪೆ್ಟೀಪರ ಪರಿಣತರು ತುಂಡರಿಸುತ್ತಾರೆ. ಕ್ರಿಪೆ್ಟೀಗೂ ಮುನ್ನವೇ ಆಲ್ ಕೈದಾ, ಐಸಿಸ್, ಇತರೆ ಭಯೋತ್ಪಾದಕ ಸಂಘಟನೆಗಳಿರಲಿಲ್ಲವೇ? ಕ್ರಿಪೆ್ಟೀಕರೆನ್ಸಿ ಇಲ್ಲದೇ ಬ್ಲಾಕ್‍ಚೈನ್ ತಂತ್ರಜ್ಞಾನ ಬೆಳೆಯಲು ಸಾಧ್ಯವಿಲ್ಲ, ಏಕೆಂದರೆ ಕ್ರಿಪೆ್ಟೀಕರೆನ್ಸಿಯ ಪ್ರಯೋಜನಗಳು, ಲಾಭಗಳು ಬ್ಲಾಕ್‍ಚೈನ್ ಬೆಳೆಸಲು ಪೆ್ರೀತ್ಸಾಹವಾಗಿರುತ್ತದೆ ಎಂದು ಹೇಳುತ್ತಾರೆ. ಬ್ಲಾಕ್‍ಚೈನ್ ಸರ್ಕಾರಿ ನಿಯಂತ್ರಣದಲ್ಲಿರಲು ಸಾಧ್ಯವಿಲ್ಲ. ಅದು ಸಾರ್ವಜನಿಕ ಜಾಲಬಂಧದಲ್ಲಿರಬೇಕು. ಆಗ ಮಾತ್ರ ಅದು ಬೆಳೆಯಲು ಸಾಧ್ಯ ಎಂಬುದು ಕ್ರಿಪೆ್ಟೀ ಬೆಂಬಲಿಗರ ವಾದವಾಗಿದೆ. ಬಿಟ್‍ಕಾಯಿನ್ ಹಾಗೂ ಇಥೆರಿಯಮ್‍ಗಳೆಲ್ಲಾ ಸಾರ್ವಜನಿಕ ಜಾಲಬಂಧಗಳು. ಇಂತಹದೊಂದು ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಯಾವುದೇ ವಹಿವಾಟನ್ನು ಎಲ್ಲಿ ಬೇಕಾದರೂ ಪರಿಶೀಲಿಸಬಹುದು. ಇದು ಸರ್ಕಾರಿ ವ್ಯವಸ್ಥೆಯಲ್ಲಾಗಲಿ ಅಥವಾ ಖಾಸಗಿ ನಿಯಂತ್ರಿತ ವ್ಯವಸ್ಥೆಯಾಗಲಿ ಸಾಧ್ಯವಿಲ್ಲ.

ಈ ಮಧ್ಯೆ ಸರ್ಕಾರ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುತ್ತದೆ ಎಂಬ ಸುದ್ದಿ ಹರಿದಾಡಿದಾಗ, ಸರ್ಕಾರದ ದೃಷ್ಟಿಯಲ್ಲಿ ಖಾಸಗಿ ಯಾವುದು ಹಾಗೂ ಸಾರ್ವಜನಿಕ ಜಾಲಬಂಧ ಯಾವುದು ಎಂಬ ಪ್ರಶ್ನೆಗಳು ಉದ್ಭವಿಸಿದವು. ಕೆಲವರು ಸರ್ಕಾರದ ದೃಷ್ಟಿಯಲ್ಲಿ ಸರ್ಕಾರ ಹೊರಡಿಸುವ ಡಿಜಿಟಲ್ ಕರೆನ್ಸಿ ಬಿಟ್ಟರೆ ಉಳಿದೆಲ್ಲವೂ ಖಾಸಗಿ ಎಂದು ಹೇಳಿದರೆ, ಕ್ರಿಪೆ್ಟೀ ಬಗ್ಗೆ ತಜ್ಞರ ಅಭಿಪ್ರಾಯ ಬಿಟ್‍ಕಾಯಿನ್, ಇಥೆರಿಯಮ್, ಸೊಲಾನ, ಕಾರ್ಡಾನೋದಂತಹ ನಾಣ್ಯಗಳು ಖಾಸಗಿ ನಾಣ್ಯಗಳಲ್ಲ. ಅವೆಲ್ಲವೂ ಸಾರ್ವಜನಿಕ ಜಾಲಬಂಧಗಳು, ಅವುಗಳು ಈ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿರುವುದು ಅವು ಸಾರ್ವಜನಿಕ ಜಾಲಬಂಧಗಳಾಗಿರುವುದರಿಂದ ಎಂಬುದಾಗಿದೆ. ಹಾಗಿದ್ದರೆ ಖಾಸಗಿ ಯಾವುದು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಮೊನೆರೋ, ಡ್ಯಾಷ್ ಹಾಗೂ ಡ್‍ಕ್ಯಾಶ್‍ಗಳು ಖಾಸಗಿ ಕ್ರಿಪೆ್ಟೀನಾಣ್ಯಗಳು. ಅವುಗಳನ್ನು ಸಾರ್ವಜನಿಕ ಬ್ಲಾಕ್‍ಚೈನ್ ಮೇಲೆ ನಿರ್ಮಿಸಲಾಗಿದ್ದರೂ ಸಹ, ಆ ನಾಣ್ಯಗಳ ವಹಿವಾಟುಗಳನ್ನು ಎಲ್ಲರೂ ಪರಿಶೀಲಿಸಲು ಸಾಧ್ಯವಿಲ್ಲ.

ಕ್ರಿಪೆ್ಟೀಕರೆನ್ಸಿ ಗಣಿಗಾರಿಕೆಗೆ ಹೆಚ್ಚು ವಿದ್ಯುತ್ ಬೇಕೆಂದು ಇರುವ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸುವ ಕ್ರಿಪೆ್ಟೀ ಪರಿಣತರು ಬಿಟ್‍ಕಾಯಿನ್‍ಗೆ ಹೆಚ್ಚು ವಿದ್ಯುತ್ ಬೇಕಾಗಿರುವುದು ನಿಜ. ಆದರೆ ಬಹುತೇಕ ಉಳಿದ ಕ್ರಿಪೆ್ಟೀಕರೆನ್ಸಿಗಳು ಈಗ ಪ್ರೂಫ್ ಆಫ್ ವರ್ಕ್ ವ್ಯವಸ್ಥೆಯಿಂದ ಪ್ರೂಫ್ ಆಫ್ ಸ್ಟೇಕ್ ವ್ಯವಸ್ಥೆಗೆ ವರ್ಗಾಯಿಸಲ್ಪಡುತ್ತಿವೆ. ಈ ತಂತ್ರಜ್ಞಾನಕ್ಕೆ ಅಲ್ಪ ಪ್ರಮಾಣದ ವಿದ್ಯುತ್‍ನ ಅಗತ್ಯವಿದೆ ಎಂದು ಉತ್ತರಿಸುತ್ತಾರೆ. ಕ್ರಿಪೆ್ಟೀಕರೆನ್ಸಿ ನಿಯಂತ್ರಣದಲ್ಲಿ ಮುಖ್ಯವಾಗಿ ವಹಿವಾಟುಗಳ ಪತ್ತೆಹಚ್ಚುವಿಕೆ ಮುಖ್ಯ ಸವಾಲಾಗುತ್ತದೆ. ಇಂಡಿಯಾ ವ್ಯಾಲೆಟ್‍ನಂತಹ ವ್ಯಾಲೆಟ್ ಆಧಾರಿತ ಪರಿಹಾರವು ಕ್ರಿಪೆ್ಟೀಕರೆನ್ಸಿ ಖಾತೆಗಳನ್ನು, ವಹಿವಾಟುಗಳನ್ನು ನಿಯಂತ್ರಿಸಲು ಸೂಕ್ತವಾಗಿರುತ್ತದೆ ಎಂದು ‘ತಂತ್ರಜ್ಞಾನ ವಿಚಾರ ವೇದಿಕೆ ನಿಯಮ 4.0’ ಅಭಿಪ್ರಾಯ ಪಟ್ಟಿದೆ.

ಈ ಎಲ್ಲಾ ಪರವಿರೋಧದ ಚರ್ಚೆಯ ನಡುವೆಯೇ ಈ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಕ್ರಿಪೆ್ಟೀಕರೆನ್ಸಿ ಮಸೂದೆ ಮಂಡಿಸುತ್ತಿದೆ. ಇದನ್ನು ಸ್ವಾಗತಿಸಿರುವ ಕ್ರಿಪೆ್ಟೀಕರೆನ್ಸಿ ವಿನಿಮಯ ಸಂಸ್ಥೆಗಳು, ನಿಯಂತ್ರಣ ಈಗ ಅತ್ಯಂತ ಅಗತ್ಯವಾಗಿ ಆಗಬೇಕಾಗಿರುವ ಕಾರ್ಯವಾಗಿದೆ. ಕ್ರಿಪೆ್ಟೀಕರೆನ್ಸಿಯನ್ನು ಆಸ್ತಿ ವರ್ಗದಡಿ ತನ್ನಿರಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ 2021ರ ನವೆಂಬರ್ 23ರಂದು ಎಲ್ಲಾ ಖಾಸಗಿ ಕ್ರಿಪೆ್ಟೀಕರೆನ್ಸಿಗಳನ್ನು ನಿಷೇಧಿಸಲಾಗುವುದು ಎಂಬ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ, ಕ್ರಿಪೆ್ಟೀಕರೆನ್ಸಿಯ ಬೆಲೆಗಳು ಭಾರತ ಮೂಲದ ವಿನಿಮಯ ಕೇಂದ್ರಗಳಲ್ಲಿ, ಭಾರತೀಯ ರೂಪಾಯಿ ಮೌಲ್ಯದಲ್ಲಿ, ತೀವ್ರವಾಗಿ ಕುಸಿಯಿತು.

ಈ ಎಲ್ಲಾ ಗೊಂದಲಗಳಿಗೆ, ಆತಂಕಗಳಿಗೆ ಅತ್ಯಂತ ತುರ್ತಾಗಿ ತೆರೆಯೆಳೆದು, ಕ್ರಿಪೆ್ಟೀಕರೆನ್ಸಿಯ ಭವಿಷ್ಯದ ಬಗ್ಗೆ ಸ್ಪಷ್ಟ ನೀತಿನಿಯಮಗಳನ್ನು ಸದ್ಯದಲ್ಲೇ ರೂಪಿಸುವ ಆಶಯವನ್ನು 2021ರ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲ್ಪಡುವ ಕ್ರಿಪೆ್ಟೀಕರೆನ್ಸಿ ಬಿಲ್ ಮೂಡಿಸಿದೆ. ಇದು ಯಾವ ರೂಪದಲ್ಲಿ ಬರಲಿದೆ ಎಂಬುದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವ ಸದ್ಯದ ವಿಷಯವಾಗಿದೆ.

Leave a Reply

Your email address will not be published.