ಡಿಜಿಟಲ್ ಸೈಟು ಕೊಳ್ಳಲು ಬಿಟ್ ಕಾಯಿನ್

`ನೀನಿನ್ನೂ ನಿಜಲಿಂಗಪ್ಪನವರ ಕಾಲದಲ್ಲಿದ್ದೀಯ. ಬೊಮ್ಮಾಯಿ ಅವರಿಗೆ ಅರ್ಥ ಆಗೋದು ನಿನಗೆ ತಿಳೀತಿಲ್ಲಎಂದು ವಿಶ್ವ ನನ್ನ ಅಜ್ಞಾನಕ್ಕೆ ಮರುಗಿದ!

ಎಂ.ಎಸ್.ನರಸಿಂಹಮೂರ್ತಿ

ವಿಶ್ವನ ಮನೆಗೆ ನಾನು ಬಂದಾಗ ಅವನು ಖುಷಿಯಿಂದ ತಾನು ಮಾಡಿರುವ ಸೈಟುಗಳ ಬಗ್ಗೆ ಹೇಳಿದ.

`60ಘಿ40 ಸೈಟು, 50ಘಿ80 ಸೈಟು. ಸುಮಾರು 100 ಸೈಟುಗಳನ್ನ ರೆಡಿ ಮಾಡಿದ್ದೀನಿ

ನನಗೆ ಆಶ್ಚರ್ಯವಾಯಿತು. ಒಂದೊಂದು ಸೈಟು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾಲದಲ್ಲಿ ಇಷ್ಟು ಜಮೀನು ಎಲ್ಲಿ ಸಿಕ್ಕಿತು ಎಂದು ಯೋಚನೆ ಮಾಡಿದೆ. ಒಳ್ಳೆ ಗಾಳಿ, ಒಳ್ಳೆ ಬೆಳಕು, ಟ್ರಾಫಿಕ್ ಡಿಸ್ಟರ್ಬೆನ್ಸ್ ಇಲ್ಲ, ಅದ್ಭುತವಾಗಿದೆ ಎಂದು ಅವನು ವರ್ಣಿಸಿದಾಗ ನನಗೆ ಕುತೂಹಲವಾಯಿತು.

`ಎಲ್ಲಿ ಸೈಟು ಮಾಡಿದ್ದೀಯಾ?’

`ಇವು ಡಿಜಿಟಲ್ ಸೈಟ್ಸ್! ಅಂತರಿಕ್ಷದಲ್ಲಿ ಇರುತ್ತೆ

`ಅಂದರೆ ವಚ್ರ್ಯುಯಲ್ ಸೈಟ್ಸಾ?’

`ಹೌದು. ಈಗ ಎಲ್ಲಾನೂ ವಚ್ರ್ಯುಯಲ್ಲೇ, ಮದುವೆ ಕೂಡ ವಚ್ರ್ಯುಯಲ್ಲು. ಮಕ್ಕಳು ಮಾತ್ರ ರಿಯಲ್ಲು! ಒಂದು ಕೋಟಿ ಕೊಟ್ಟು ಸೈಟ್ ಖರೀದಿ ಮಾಡಿದರೆ ಒಂದು ವರ್ಷದಲ್ಲಿ ಎರಡು ಕೋಟಿಗೆ ಮಾರಬಹುದುಎಂದಾಗ ನನಗೆ ಆಶ್ಚರ್ಯವಾಯಿತು.

`ಏನಿದು ವ್ಯವಹಾರ? ಅಂತರಿಕ್ಷದಲ್ಲಿ ಸೈಟ್ ಮಾಡಿದ್ರೆ ನೋಡೋಕೆ ಹೋಗೋದಾದ್ರೂ ಹ್ಯಾಗೆ, ಅದರ ಮೇಲೆ ಇಳಿಯುವುದಾದ್ರೂ ಹೇಗೆ?’

`ಬಿಟ್ ಕಾಯಿನ್ ಕಣ್ಣಾರ ನೋಡಿದ್ದೀಯಾ? ಅದು ವಚ್ರ್ಯುಯಲ್ ಕರೆನ್ಸಿ ತಾನೇ? ಇದೂ ಅದೇ ಥರ ಡಿಜಿಟಲ್ ಸೈಟು. ದುಡ್ಡು ಮಾಡೋ ದಂಧೆ!’

`ತಿಳೀತು ಬಿಡು. ಕುರುಡು ಕಾಂಚಾಣ ತುಳಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತೋ ಅಂತ ಬೇಂದ್ರೆಯವರು ಆವತ್ತೇ ಹೇಳಿದ್ದಾರೆಎಂದು ಗೇಲಿ ಮಾಡಿದೆ.

`ಆದರೂ ಹೇಳ್ತೀನಿ ವಿಶ್ವ, ಕುಣಿಯೋಕೆ, ತುಳಿಯೋಕೆ ಒಂದು ವಸ್ತು ಬೇಕು. ನಿನ್ನ ಸೈಟು ಸಂಪೂರ್ಣ ಡಿಜಿಟಲ್ಲು. ಸೈಟಿಗೆ ಸಿಗೊಲ್ಲ. ಒಂದು ರೀತಿ ಕರೋನ ವೈರಸ್ ಥರ. ಕರೋನ ವೈರಸ್ ಆದ್ರೂ ಮೈಕ್ರೋಸ್ಕೋಪುಗಳಲ್ಲಿ ನೋಡಬಹುದು. ಅದರ ಚಿತ್ರವನ್ನು ಟೀವಿಯವರು ಹಾಕ್ತಿದ್ದರು. ಅಷ್ಟೇ ಅಲ್ಲ, ಕರೋನ ವೈರಸ್ ಚಿತ್ರ ಎಷ್ಟು ಪಾಪ್ಯುಲರ್ ಆಗಿತ್ತು ಎಂದರೆ, ಅದೇ ರೀತಿಯ ರಂಗೋಲಿಗಳನ್ನು ಹೆಣ್ಣು ಮಕ್ಕಳು ಬಿಡಿಸ್ತಿದ್ದಾರೆ. ಆದರೆ ನಿನ್ನ ಡಿಜಿಟಲ್ ಸೈಟ್ ಅರ್ಥ ಆಗ್ತಿಲ್ಲಎಂದೆ.

`ನೀನಿನ್ನೂ ನಿಜಲಿಂಗಪ್ಪನವರ ಕಾಲದಲ್ಲಿದ್ದೀಯ. ಬೊಮ್ಮಾಯಿ ಅವರಿಗೆ ಅರ್ಥ ಆಗೋದು ನಿನಗೆ ತಿಳೀತಿಲ್ಲಎಂದು ವಿಶ್ವ ನನ್ನ ಅಜ್ಞಾನಕ್ಕೆ ಮರುಗಿದ.

` ಬಿಟ್ ಕಾಯಿನ್ ಅಂಬೋದು ಇವತ್ತು ಮುಖ್ಯಮಂತ್ರಿಗಳನ್ನೇ ಪೇಚಿಗೆ ಸಿಕ್ಕಿಸಿದೆ. ಕಂಡೂ ಕಾಣದೇ ಇರೋ ಬಿಟ್ ಕಾಯಿನ್ನು ಇಡೀ ರಾಜ್ಯವನ್ನೇ ಅಲ್ಲಾಡಿಸ್ತಾ ಇದೆ. ಮುಖ್ಯ ಮಂತ್ರಿಗಳ ಕುರ್ಚಿಯ ನೆಟ್ಟು, ಬೋಲ್ಟುಗಳನ್ನ ಸಡಿಲಿಸ್ತಾ ಇದೆ

`ಕ್ರಿಪ್ಟೋ ಕರೆನ್ಸಿ ಥರ ನಿಂದು ಕ್ರಿಪ್ಟೋ ಸೈಟಾ?’ಎಂದೆ.

`ಹೌದು ಃಟಚಿಛಿಞ moಟಿeಥಿ ಯಲ್ಲಿ ನನ್ನ ಸೈಟು ಕೊಂಡ್ರೆ ದುಡ್ಡು ಬಿಳಚಿಕೊಂಡು ವೈಟಾಗುತ್ತೆ. ಬಿಟ್ ಕಾಯಿನ್ಗೆ ಶ್ರೀಕಿ ಅಂತ ಒಬ್ಬ ವ್ಯಕ್ತಿ ಇದ್ದಾನೆ. ಮಹಾಭಾರತ ಯುದ್ಧದಲ್ಲಿ ಶ್ರೀಕೃಷ್ಣ ಪರಮಾತ್ಮ ಸೈಲೆಂಟಾಗಿ ದುಷ್ಟ ಸಂಹಾರ ಮಾಡಿದ ಹಾಗೆ ಬಿಟ್ ಕಾಯಿನ್ಗೆ ಇವನೇ ಶ್ರೀಕೃಷ್ಣ ಆಗಿದ್ದಾನೆ. ಅವನಿಗೆ ಗೊತ್ತಿರೋಷ್ಟು ತಂತ್ರಜ್ಞಾನ ಕಂಪ್ಯೂಟರ್ಗೂ ಗೊತ್ತಿಲ್ಲ

ವಿಶ್ವನ ಮಡದಿ ವಿಶಾಲು ಕಾಫಿಯನ್ನು ತಂದಿಟ್ಟಳು.

`ನೀವು ಎಲ್ಲಿ ಸೈಟುಗಳು ಮಾಡಿದ್ದೀರ?’ ಎಂದು ವಿಶಾಲೂ ಕೆದಕಿದಳು.

`ಬೆಂಗಳೂರಿನ ಮೇಲಿರೋ ಅಂತರಿಕ್ಷದಲ್ಲಿ. ಐಚಿಣiue 12.97o , oಟಿgiue 77.59o ಎಂದ ವಿಶ್ವ.

`ಅಂತರಿಕ್ಷದಲ್ಲಿ ಸೈಟ್ ಮಾಡ್ತೀಯ. ಡಿಜಿಟಲ್ ಸೈಟು ಅಂತೀಯ. ಅದನ್ನ ಹೆಂಗೆ ಮಾರ್ತೀಯ?’

`ಮೋದಿ ಬಂದ್ಮೇಲೆ ನೋಟುಗಳ ಡಿನಾಮಿನೇಷನ್ ಕಮ್ಮಿ ಮಾಡಿದ್ರು. ಒಂದು ಕಾಲಕ್ಕೆ ಹತ್ತು ಸಾವಿರ ರೂಪಾಯಿ ನೋಟುಗಳೂ ಇದ್ದವು. ಚಡ್ಡಿ ಜೇಬಲ್ಲಿ ಒಂದು ಕೋಟಿ ಇಡಬಹುದಿತ್ತು. ನೋಟು ಹೋಯ್ತು. ಆಮೇಲೆ ದೊಡ್ಡ ನೋಟು ಅಂದರೆ ಎರಡು ಸಾವಿರ ರೂಪಾಯಿ ಲೆವೆಲ್ಗೆ ಇಳೀತು. ಈಗ ಬರೀ ಐನೂರು ಮಾಡಿದ್ದಾರೆ. ಹತ್ತು ಲಕ್ಷ ಸಾಗಿಸೋಕೆ ಒಂದು ಗೋಣೀಚೀಲ ತಗೊಂಡು ಹೋಗಬೇಕು. ಇನ್ನೂರು, ಮುನ್ನೂರು ಕೋಟಿ ಹಣ ಮನೇಲಿ ಬಚ್ಚಿಡೋದಾದ್ರೂ ಹೇಗೆ? ಎಲೆಕ್ಷನ್ ಟೈಮಲ್ಲಿ ಒಂದು ಸಾವಿರ ಕೋಟಿ ಕ್ಯಾಷ್ ಬೇಕಾಗುತ್ತೆ. ಅದನ್ನ ಗುಟ್ಟಾಗಿ ಇಡೋದು ಹ್ಯಾಗೆ? ಅದಕ್ಕೆ ಬಿಟ್ ಕಾಯಿನ್ನು ಫೇಮಸ್ಸಾಗ್ತಿದೆ. ಅಗತ್ಯ ಬಿದ್ದಾಗ ಮಾರಿದರೆ ಹಣ ಸಿಗುತ್ತೆ. ನಮ್ಮ ಸೈಟೂ

ಹಾಗೇಎಂದ.

`ಸೈಟು ಕೊಂಡ್ರೆ ಭದ್ರತೆ ಹೇಗೆ?’ ಎಂದು ಕೇಳಿದೆ.

`ಇದು ವಚ್ರ್ಯುಯಲ್ ಸೈಟು. ಆಕಾಶದಲ್ಲಿರೋ ಕಾಮನಬಿಲ್ಲಿಗೆ ಅಡ್ವಾನ್ಸ್ ಮಾಡಿದ ಹಾಗೆ! ಪಾಸ್ವರ್ಡ್ ಜೊತೆ ಚೀಲ ಕೊಡ್ತಾರೆಎಂದಾಗ ವಿಶಾಲುಗೆ ಆಶ್ಚರ್ಯವಾಯಿತು.

`ಯಾವ ಚೀಲಾರೀ? ವೆಲ್ವೆಟ್ದಾ, ಸಿಲ್ಕ್ದಾ?’ ಎಂದು ವಿಶಾಲು ಹೊಟ್ಟೆ ಸವರಿಕೊಂಡಳು.

`ಅಯ್ಯೋ, ಪೆದ್ದಿ ಚೀಲ ಅಂದ್ರೆ ಚೀಲ ಅಲ್ಲ. ಚೀಲ ಅಂದ್ರೆ ವಿದ್ಯುನ್ಮಾನ ಚೀಲ ಅಂತ. ಅಲ್ಲೇನೋ ಇದ್ದಂತೆ ಅನ್ಸುತ್ತೆ. ಕೈ ಹಾಕೋಕಾಗೊಲ್ಲ, ಮುಟ್ಟೋಕಾಗೊಲ್ಲಎಂದಾಗ ವಿಶಾಲುಗೆ ಸಿಟ್ಟಾಯಿತು.

`ನಂಗೆ ಇಷ್ಟ ಆಗಲಿಲ್ಲ. ಬಿಟ್ ಕಾಯಿನ್ನು ಅಂತ ಕೋಟಿ ಕೋಟಿಗಳಲ್ಲಿ ಮಾತಾಡ್ತಾ ಇದ್ದಾರಲ್ಲ, ಹಣ ಅಂದ್ಮೇಲೆ ಮುಟ್ಬೇಕು, ಸವರ್ಬೇಕು, ಕಣ್ಣಲ್ಲಿ ನೋಡ್ಬೇಕು. ನಮ್ಮ ಇಂದ್ರಿಯಗಳು ಗ್ರಹಿಸಬೇಕು. ಇಲ್ಲಾಂದ್ರೆ ಅದ್ರಲ್ಲಿ ಏನು ಸುಖ ಸಿಗುತ್ತೆ? ತಲೆ ದಿಂಬಿಗೆ ನೋಟುಗಳು ತುಂಬಿ ಮಲಗೋವರು ಇದ್ದಾರೆ ಗೊತ್ತಾ?’

ನಾನು ವಿಶಾಲು ವಾದವನ್ನು ಒಪ್ಪಿದೆ.

`ಹೌದು ವಿಶ್ವ, ವಿಶಾಲೂ ಹೇಳ್ತಾ ಇರೋದು ನಿಜ. ಯಾವುದೇ ಒಂದು ಆನಂದವನ್ನು ಅನುಭವಿಸಬೇಕಾದರೆ ಅದು ಇಂದ್ರಿಯಗಳಿಗೆ ಗೋಚರ ಆಗಬೇಕು. ಹೊಸ ನೋಟುಗಳನ್ನ ಎಣಿಸುವಾಗ ಆನಂದ ಆಗುತ್ತೆ. ನೋಟು ಎಣಿಸೋ ಶಬ್ದಕ್ಕೇ ಥ್ರಿಲ್ ಆಗ್ತೀವಿ. ಒಂದು ಅಲ್ಮೇರಾ ತುಂಬಾ ನೋಟುಗಳನ್ನ ಜೋಡಿಸಿಟ್ಟಾಗ ಹೇಗೆ ಕಾಣುತ್ತೆ ಕಲ್ಪಿಸಿಕೋ!’

ನಾನು ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗಿನ ವಿಷಯ ಹೇಳಿದೆ.

`ಕರೆನ್ಸಿ ಚೆಸ್ಟಿದ್ದ ಮೈಸೂರು ಬ್ಯಾಂಕಿಗೆ ಮ್ಯಾನೇಜರ್ ಆಗಿದ್ದೆ. ಒಂದು ಸಾವಿರ ಕೋಟಿ ರೂಪಾಯಿಗಳ ಹೊಸ ನೋಟುಗಳನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ತಂದು ಅಲ್ಮೇರಾಗಳಲ್ಲಿ ತುಂಬಿಸಿಟ್ಟಾಗ ಎಂಥ ಮನಮೋಹಕ ದೃಶ್ಯ! ನೋಟುಗಳ್ನ ಸವರ್ತಾ ಎಷ್ಟು ಆನಂದ ಪಟ್ಟಿದ್ದೆ ಗೊತ್ತಾ?’

`ಗಾಜಿನ ಜಾಡೀಲಿ ಇರೋ ಸೋನ್ಪಪ್ಪಡಿ ಹೊರಗಿಂದ ಸವರಿ ಜೊಲ್ಲು ಸುರಿಸಿದರೆ ಷರಟು ನೆನೆಯುತ್ತೆಎಂದ ವಿಶ್ವ.

`ನಮ್ಮೆಜಮಾನ್ರು ಡಿಜಿಟಲ್ ಸೈಟುಗಳನ್ನ ಮಾಡ್ತಾ ಇದ್ದಾರೆ. ಅದರಿಂದ ಏನು ಅನುಕೂಲ ಇದೆ ಮಣ್ಣು? ಮಣ್ಣೇ ಅಲ್ಲಿರೊಲ್ಲ

`ವಿಶಾಲು, ನಿನಗೆ ಅರ್ಥ ಆಗ್ತಾ ಇಲ್ಲ. ಇವತ್ತು ಡಿಜಿಟಲ್ ಕರೆನ್ಸಿ ವಿಷಯದಲ್ಲಿ ಎಷ್ಟು ಗಲಾಟೆ ಆಗ್ತಾ ಇದೆ ಗೊತ್ತಾ? ಅದೇ ಥರ ಡಿಜಿಟಲ್ ಸೈಟು! ಇಂಥ ರಾಜಕಾರಣೀದು ಇಷ್ಟು ಸೈಟಿದೆ, ಅಷ್ಟು ಸೈಟಿದೆ ಅಂತ ಪೇಪರಲ್ಲಿ ಬರುತ್ತೆ. ಸೈಟಿರೋವರು ಅಲ್ಲಿಗೆ ಹೋಗೋಕಾಗೊಲ್ಲ, ನೋಡ್ಕೊಂಡು ಬರೋಕಾಗೊಲ್ಲ. ಯಾವ ರಿಜಿಸ್ಟ್ರೇಷನ್ ಆಫೀಸ್ಗೂ ನಿಲುಕೋದಿಲ್ಲ. ಜಾಸ್ತಿ ಸೈಟುಗಳನ್ನ ಮಾಡ್ಕೊಂಡವರ ಮೇಲೆ ಪೊಲೀಸ್ ಕೇಸ್ ಆಗುತ್ತೆ. ಎಲೆಕ್ಷನ್ ಟೈಮಲ್ಲಿ ಎರಡೂ ಪಕ್ಷಗಳವರು ಮಾತಾಡೋಕೆ ಒಳ್ಳೇ Subರಿeಛಿಣ ಆಗುತ್ತೆಎಂದ.

`ಪಾಸ್ವರ್ಡು ಸಿಕ್ಕರೆ ಕಷ್ಟ ವಿಶ್ವಎಂದೆ.

`ನಾವು ಕೊಡೋ ಪಾಸ್ವರ್ಡು ಯಾವ ಹ್ಯಾಕರ್ಗೂ ಸಿಗೊಲ್ಲ, ಯಾವ ಬ್ಯಾಂಕರ್ಗೂ ಸಿಗೊಲ್ಲ. ಉದಾ: `ಗುಲಾಬಿ ಗೊಂಡರಪಾಳ್ಯ, `ಮುಟ್ಟದೆ ಮಡಿಕ್ಕೋ, `ರೇಟ್ ಬಂದಾಗ ಮಾರ್ಕೋ!’

`ಚೆನ್ನಾಗಿದೆ ವಿಶ್ವಎಂದು ತಲೆದೂಗಿದೆ.

`ಡಿಜಿಟಲ್ ಸೈಟು ಟ್ರಾನ್ಸ್ಫರಬಲ್. ಮಾರಿದರೆ ಕೋಟಿ ಕೋಟಿ ಹಣ ಸಿಗುತ್ತೆ. ಯಾವ ಕಾನೂನೂ ಭೌತಿಕವಾಗಿ ಸೀಜ್ ಮಾಡೋಕೆ ಆಗೊಲ್ಲ.

`ಆಕಾಶದಲ್ಲಿ ಸೈಟುಗಳನ್ನ ಮಾಡಿದ್ರೆ ಎಲೆಕ್ಷನ್ ಟೈಮಲ್ಲಿ ಎಲ್ಲ ಪಕ್ಷಗಳಿಗೆ ಕಚ್ಚಾಡೋಕೆ ವಿಷಯ ಸಿಕ್ಕಿ ಬಾಯಿ ಚಪಲ ತೀರುತ್ತೆ ಅಂತಾನಾ?’

`ಹೌದು, ಈಗ ಬಿಟ್ ಕಾಯಿನ್ನು ಚರ್ಚೆ ನಡೀತಿದೆ. ಎರಡು ತಿಂಗಳಲ್ಲಿ ಇದು ಕ್ಲೋಸ್! ಆಮೇಲೆ ಮಾತಾಡೋಕೆ ಹೊಸ ವಿಷಯ ಬೇಕು. ನೂರಾರು ಡಿಜಿಟಲ್ ಸೈಟುಗಳನ್ನ ನಮ್ಮ ವಿರೋಧ ಪಕ್ಷದವರು ಮಾಡಿದ್ದಾರೆ ಅಂತ ರಾಜಕಾರಣಿಗಳು ಭಾಷಣಗಳು ಶುರು ಮಾಡಿದ್ರೆ ಜನ ಚಪ್ಪರಿಸಿಕೊಂಡು ಕೇಳ್ತಾರೆ. ಇನ್ನು ಕೆಲವರು ಅದರ ಬಗ್ಗೆ ಸ್ಟ್ಯಾಟಿಸ್ಟಿಕ್ಸ್ ಕೊಡ್ತಾರೆ. ಅಂಕಿಅಂಶಗಳು ಇಷ್ಟ ಬಂದಂತೆ ಕೊಟ್ಟು ಇಷ್ಟು ಕೋಟಿ, ಅಷ್ಟು ಕೋಟಿ ಅಂತೆಲ್ಲಾ ಹೇಳ್ತಾರೆ. ಮೇಲೆ ಹೋದವರಿಲ್ಲ, ಕಣ್ಣಲ್ಲಿ ನೋಡಿದವರಿಲ್ಲ. ಪುರಾಣದಲ್ಲಿ ಅಕ್ಷೋಹಿಣಿ ಸೈನ್ಯ ಇದ್ದ ಹಾಗೆ! ಡಿಜಿಟಲ್ ಸೈಟ್ಗಳಲ್ಲಿ ಜನ ಬಿಟ್ ಕಾಯಿನ್ ಹೂಡ್ತಾರೆ. ನನ್ನ ಹೊಸ ಯೋಜನೆಗೆ ನಿಮ್ಮೆಲ್ಲರ ಸಹಕಾರ ನನಗೆ ಬೇಕುಅಂತ ವಿಶ್ವ ಕೈ ಮುಗಿದ!

Leave a Reply

Your email address will not be published.