ಭ್ರಷ್ಟಾಚಾರದಲ್ಲಿ ಮುಳುಗುವ-ತೇಲುವ ಸರ್ಕಾರಿ ಗುತ್ತಿಗೆದಾರರು

ಪ್ರತಿಯೊಂದು ಹಂತದಲ್ಲೂ `ಮೇಲಿನವರಿಗೆ ಕೊಡಬೇಕುಎಂದು ಹಣ ಹರಿಯುತ್ತದೆ. ಸುಪಾರಿ ಕಿಲ್ಲಿಂಗ್ ನಲ್ಲಿ ಸೂತ್ರಧಾರ ಎಂದೂ ಯಾರಿಗೂ ತಿಳಿಯುವುದಿಲ್ಲ. ಹಾಗೆಯೇ ಈ `ಗುತ್ತಿಗೆಗಳಲ್ಲಿ ನಿರಂತರವಾಗಿ ಉಲ್ಲೇಖ ವಾಗುವ `ಮೇಲಿನವರುಯಾರೆಂದು ಯಾರಿಗೂ ಗೊತ್ತಾಗುವುದಿಲ್ಲ; ತಿಳಿದರೂ ಸತ್ಯ ಬಾಯಿ ಬಿಡುವುದಿಲ್ಲ.

ರಮಾನಂದ ಶರ್ಮಾ

ಒಬ್ಬ ಗುತ್ತಿಗೆದಾರ ಒಂದು ಸರ್ಕಾರಿ ಗುತ್ತಿಗೆಯನ್ನು ಪಡೆದು ಅದನ್ನು ನಿರ್ವಹಿಸಬೇಕಾದರೆ ಅತನಿಂದ ಕೈಬಿಡುವ ಮೊತ್ತದ ಬಗೆಗೆ ಇತ್ತೀಚೆಗೆ ಒಬ್ಬರು ಗುತ್ತಿಗೆದಾರರರು ವಿಸ್ತøತವಾಗಿ ವಿವರಿಸಿದ್ದರು.

ಅವರ ಪ್ರಕಾರ 1 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಗುತ್ತಿಗೆ ಪಡೆದರೆ, 12% ಅಂದರೆ (ರೂ.12 ಲಕ್ಷ) ಸರಕು ಮತ್ತು ಸೇವಾ ತೆರಿಗೆ ನೀಡಬೇಕು, 2% (ರೂ.2 ಲಕ್ಷ) ರಾಜಧನ ಅಥವಾ ರಾಯಲ್ಟಿ ಗೆ ಹೋಗುತ್ತದೆ. ಕಾರ್ಮಿಕ ಸೆಸ್ ಎಂದು 1% (ರೂ.1 ಲಕ್ಷ) ಕೈಬಿಡುತ್ತದೆ. ಗುದ್ದಲಿ ಪೂಜೆ/ಲಕ್ಷ್ಮಿ ಹುಂಡಿಗೆ 5% (ರೂ.5 ಲಕ್ಷ), ಎಲ್..ಸಿ. ತರಲು ರಾಜ್ಯ ಕೇಂದ್ರ ಸ್ಥಾನದಲ್ಲಿರುವ ಕುಬೇರ ಸ್ಥಾನದವರಿಗೆ 10% (ರೂ.10 ಲಕ್ಷ), ಬಿಲ್ ಪಾವತಿಸುವ ಸಲುವಾಗಿ ಅಧಿಕಾರಿಗಳ ಮನತಣಿಸಲು 15% (ರೂ.15 ಲಕ್ಷ), ಸಿಬಿಎಫ್ 0.10% (ರೂ. ಹತ್ತು ಸಾವಿರ), ಮತ್ತು ಐಟಿ 1% (ರೂ.1 ಲಕ್ಷ) ಕೈ ಬಿಟ್ಟು ಹೋಗುತ್ತದೆ. 1 ಕೋಟಿ ಮೌಲ್ಯದ ಗುತ್ತಿಗೆಯಲ್ಲಿ ರೂ.48.10 ಲಕ್ಷ ಕೈ ಬಿಟ್ಟು ಹೋದರೆ, ಆ ಗುತ್ತಿಗೆದಾರ ತನ್ನ ಲಾಭಾಂಶವನ್ನು ಉಳಿಸಿಕೊಂಡು ಗುಣಮಟ್ಟದ ಕೆಲಸವನ್ನು ಮಾಡಬಹುದೇ ಎಂದು ವಾಸ್ತವನ್ನು ತೆರೆದಿಟ್ಟಿದ್ದರು.

ಗುತ್ತಿಗೆದಾರರ ಸಮಸ್ಯೆ ಮತ್ತು ಕಳಪೆ ಕಾಮಗಾರಿಗಳ ಹಿಂದಿನ ಚಿದಂಬರ ರಹಸ್ಯವನ್ನು ಆ ಗುತ್ತಿಗೆದಾರರು ಬಿಚ್ಚಿಟ್ಟು, ಕಳಪೆ ಕಾಮಗಾರಿಗಳ ವಿರುದ್ಧ ಅಕ್ರೋಶ ವ್ಯಕ್ತ ಮಾಡುವವರ ಮುಂದೆ, ಜನಸಾಮಾನ್ಯರ ಮುಂದೆ ವಾಸ್ತವವನ್ನು ಅನಾವರಣ ಮಾಡುತ್ತಾ ಗುತ್ತಿಗೆದಾರರ ಅಸಹಾಯಕತೆಯನ್ನು ಅನಾವರಣಗೊಳಿಸಿದ್ದರು. ಈ ವ್ಯವಸ್ಥೆಗೆ ಮೌನವಾಗಿ ಶರಣಾದವರಿಗೆ ಗುತ್ತಿಗೆ ದೊರಕುತ್ತದೆ ಎಂದು ಸೂಚ್ಯವಾಗಿ ಹೇಳಿದ್ದರು. ಸ್ವಲ್ಪ ಅತ್ಮಪ್ರಜ್ಞೆ ಉಳ್ಳವರು, ತಾವು ತೆಗೆದುಕೊಂಡ ತೆರಿಗೆದಾರನ ಹಣಕ್ಕೆ ನ್ಯಾಯ ಒದಗಿಸಬೇಕು ಎನ್ನುವ ಗುತ್ತಿಗೆದಾರರು, ರಾಷ್ಟ್ರದ ಮತ್ತು ಸಮಾಜದ ಹಿತವನ್ನು ಚಿಂತಿಸುತ್ತಾ ಈ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳದೇ ಹಿಂದೆ ಸರಿಯುತ್ತಾರೆ. ಅದರೆ, ಹಣವೇ ಮುಖ್ಯ ಎನ್ನುವ ಗುತ್ತಿಗೆದಾರರು (ಅವರೇ ಹೆಚ್ಚು) ಈ ಒಡ್ಡೋಲಗದಲ್ಲಿ ಮುಂದುವರಿಯುತ್ತಾರೆ.

ಈ ರೀತಿಯ ಭ್ರಷ್ಟಾಚಾರ ಹೊಸ ಬೆಳವಣಿಗೆ ಏನಲ್ಲ. ಹಿಂದೆ ಇತ್ತು, ಈಗ ಇದೆ ಮತ್ತು ಇನ್ನೂ ಮುಂದುವರಿಯುತ್ತದೆ ಕೂಡಾ. ಇದು ರಾಜಕಾರಿಣಿ, ಗುತ್ತಿಗೆದಾರ ಮತ್ತು ಅಧಿಕಾರಶಾಹಿಗಳ ಅಪವಿತ್ರ ಕೂಟದ ಶಿಶು. ಅರವತ್ತರ ದಶಕದಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರು ಇಂಥ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತ ಮಾಡುತ್ತಾ ತಮ್ಮ ಕೈಯಲ್ಲಿ ಒಂದು ಗನ್ ಇದ್ದರೆ ಇವರನ್ನೆಲ್ಲಾಎಂದು ಘರ್ಜಿಸಿದ್ದರು. ಈ ವ್ಯವಸ್ಥೆಯ ಉದ್ದ, ಅಳ ಮತ್ತು ಅಗಲವನ್ನು ತಿಳಿಯದ ಜನಸಾಮಾನ್ಯರು, ಹಾದಿಹೋಕರು, ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರು ಕಳಪೆ ಕಾಮಗಾರಿಗಳಿಗೆ ಗುತ್ತಿಗೆದಾರರನ್ನು ಬೊಟ್ಟು ಮಾಡಿ ಹಿಡಿಶಾಪ ಹಾಕುತ್ತಾರೆ.

ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಸಿದ್ದರಾಮಯ್ಯನವರ ಸರ್ಕಾರವನ್ನು 10% ಸರ್ಕಾರ ಎಂದು ಲೇವಡಿ ಮಾಡಿದ್ದರು. ವಿಪರ್ಯಾಸವೆಂದರೆ, ರಾಜ್ಯದ ಗುತ್ತಿಗೆದಾರರ ಸಂಘಟನೆಯೊಂದು, ಈ ಸರ್ಕಾರದ ಗುತ್ತಿಗೆ ಕಾಮಗಾರಿಯಲ್ಲಿ 40% ಕಮೀಷನ್ ಅಟ್ಟಹಾಸವನ್ನು ನೇರವಾಗಿ ದೇಶದ ಪ್ರಧಾನಿಯವರ ಗಮನವನ್ನು ಲಿಖಿತ ದೂರಿನ ಮೂಲಕ ಸೆಳೆದಿದ್ದು, ರಾಜಕೀಯ ಸಂಚಲನವನ್ನು ಸೃಷ್ಟಿಸಿದೆ. ಸರ್ಕಾರ ಜನತೆ ಅಂದುಕೊಂಡಂತೆ ಈ ದೂರನ್ನು ತಳ್ಳಿ ಹಾಕಿದೆ ಮತ್ತು ಇಂಥ ಸಂದರ್ಭಗಳಲ್ಲಿ ನೀಡುವ ರಾಜಕೀಯ ಪ್ರೇರಿತ ದೂರುಎಂದು ಬಣ್ಣಿಸಿದೆ. ಈ ವಿಚಾರಣೆ ಹೇಗೆ ನಡೆಯುತ್ತದೆ ಮತ್ತು ತಪ್ಪಿತಸ್ಥರನ್ನು ಹೇಗೆ ಗುರುತಿಸಿ ಶಿಕ್ಷಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ.

ಜನಹಿತಕ್ಕಿಂತ ಹೆಚ್ಚಾಗಿ ಕೆಲವು ಪ್ರಾಜೆಕ್ಟುಗಳು ಗುತ್ತಿಗೆದಾರರಿಗಾಗಿಯೇ ಮಂಜೂರು ಅಗುತ್ತವೆಯಂತೆ. ಕೆಲವು ರಸ್ತೆಗಳ ನಿರ್ಮಾಣ, ಅಗಲೀಕರಣ, ಮರು ಡಾಂಬರೀಕರಣ, ಗಟಾರ ನಿರ್ಮಾಣ, ಫುಟ್ ಪಾತ್ ನಿರ್ಮಾಣ, ಫುಟ್ ಪಾತ್‍ಗೆ ಟೆಲ್ಸ್ ಅಳವಡಿಕೆಯನ್ನು ನೋಡಿದಾಗ, ಈ ಆರೋಪ ಕಣ್ಮುಂದೆ ಕಾಣುತ್ತದೆ. ಕೆಲವು ರಸ್ತೆಗಳು ಪ್ರತಿ ವರ್ಷ ರಿಪೇರಿ, ಮರುಡಾಂಬರೀಕರಣವನ್ನು ಕಂಡರೆ, ಕೆಲವು ರಸ್ತೆಗಳು ದಶಕಗಳಿಂದ ದುರಸ್ತಿಯನ್ನು ಕಾಣುವುದಿಲ್ಲ ಮತ್ತು ಟಾರ್ ನೋಡಿರುವುದಿಲ್ಲ, ಹೂಳು ತುಂಬಿದ ಗಟಾರಗಳು ಕ್ಲೀನ್ ಆಗುವುದಿಲ್ಲ. ಫುಟ್ ಪಾತ್ ಟೈಲ್ಸ್ ಅಥವಾ ಕಲ್ಲುಗಳನ್ನು ತೆಗೆದು ಹೊಸ ಟೈಲ್ಸ್ ಮತ್ತು ಕಲ್ಲುಗಳನ್ನು ಅಳವಡಿಸುವಾಗ, ಹಳೆಯ ಕಲ್ಲುಗಳ ಮತ್ತು ಟೈಲ್ಸ್‍ಗಳ ಲೆಕ್ಕ ಕಾಣುವುದಿಲ್ಲ. ಇದನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ಸಿಗುತ್ತದೆ.

ಒಂದು ಟೆಂಡರ್ ಹಿಡಿಯವುದು, ವರ್ಕ್ ಅರ್ಡರ್ ಪಡೆಯುವುದು, ಕೆಲಸದ ಗುಣಮಟ್ಟ ಪರೀಕ್ಷೆ ಮತ್ತು ಅಂತಿಮ ಬಿಲ್ ಪಾಸ್ ಆಗುವವರೆಗೆ ಎಲ್ಲಾ ಹಂತದಲ್ಲೂ ಭ್ರಷ್ಟಾಚಾರ ತಾಂಡವ ಮಾಡುತ್ತಿದ್ದು, ಕೆಲಸ ಬೇಕಿದ್ದರೆ ಗುತ್ತಿಗೆದಾರ ಇದಕ್ಕೆ ತಾಳ ಸೇರಿಸಲೇ ಬೇಕು. ಅಂತಿಮವಾಗಿ ಸೋಲುವುದು ಕಾಮಗಾರಿಯ ಗುಣಮಟ್ಟ ಮತ್ತು ಬಡ ಬೋರೆಗೌಡನ ತೆರಿಗೆ ಹಣ.

ಗುತ್ತಿಗೆದಾರ ಕಾಸಿಗೆ ತಕ್ಕ ಕಜ್ಜಾಯ ಎನ್ನುವಂತೆ ಕಾಮಗಾರಿಯನ್ನು ಪೂರೈಸುತ್ತಾನೆ ಮತ್ತು ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ಬಿಲ್ ಪಾಸ್ ಮಾಡಿಸಿಕೊಳ್ಳುತ್ತಾನೆ. ಈ ಅಂತರಿಕ ಅಗೋಚರ ವ್ಯವಸ್ಥೆಯ ಒಳಹರಿವನ್ನು ಚೆನ್ನಾಗಿ ತಿಳಿದ ಕೆಲವು ಗುತ್ತಿಗೆದಾರರು ಸರ್ಕಾರಿ ಗುತ್ತಿಗೆ ಟೆಂಡರ್ ತಮ್ಮ ಹೆಸರಿನಲ್ಲಿ ಅಥವಾ ತಮ್ಮವರ ಹೆಸರಿನಲ್ಲಿ ಬಾಚಿಕೊಳ್ಳುತ್ತಾರೆ. ಈ ಒಳಮರ್ಮವನ್ನು ಮತ್ತು ಒಳಮಾರ್ಗವನ್ನು ತಿಳಿಯದವರು ಪಕ್ಕಕ್ಕೆ ಸರಿದುಕೊಂಡು ಹತಾಶರಾಗಿ ನಿಟ್ಟುಸಿರು ಬಿಡುತ್ತಾರೆ. ಇತ್ತೀಚೆಗೆ ಗುತ್ತಿಗೆಗಳನ್ನು ಇಟೆಂಡರ್ ಮೂಲಕ ನೀಡುತ್ತಿದ್ದು, ಇದನ್ನು ಹ್ಯಾಕ್ ಮಾಡಿ ‘ತಮ್ಮವರಿಗೆ’ ಸಿಗುವಂತೆ ಮಾಡುತ್ತಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.

ಈ ಭ್ರಷ್ಟಾಚಾರದ ಹರಿವು ಇಲ್ಲಿಗೆ ನಿಲ್ಲುವುದಿಲ್ಲ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ವಿಳಂಬಮಾಡಿ, ಕಾಸ್ಟ್ಟ್ ಎಸ್ಕಲೇಷನ್ ಹೆಸರಿನಲ್ಲಿ ಟೆಂಡರ್ ಮೌಲ್ಯಕ್ಕಿಂತ ಹೆಚ್ಚಿಗೆ ಪಡೆಯುವುದು ಇನ್ನೊಂದು ಬಗೆಯ ಲೂಟಿ. ಪ್ರತಿಯೊಂದು ಹಂತದಲ್ಲೂ ಮೇಲಿನವರಿಗೆ ಕೊಡಬೇಕುಎಂದು ಹಣ ಹರಿಯುತ್ತದೆ. ಸುಪಾರಿ ಕಿಲ್ಲಿಂಗ್ ನಲ್ಲಿ ಸೂತ್ರಧಾರ ಎಂದೂ ಯಾರಿಗೂ ತಿಳಿಯುವದಿಲ್ಲ. ಹಾಗೆಯೇ ಈ `ಗುತ್ತಿಗೆಗಳಲ್ಲಿ ನಿರಂತರವಾಗಿ ಉಲ್ಲೇಖವಾಗುವ `ಮೇಲಿನವರುಯಾರೆಂದು ಯಾರಿಗೂ ತಿಳಿಯುವದಿಲ್ಲ; ತಿಳಿದರೂ ಸತ್ಯ ಎಂದೂ ಹೊರಗೆ ಬರುವದಿಲ್ಲ. ಇದು ಒಂದು ರೀತಿಯಲ್ಲಿ ಕ್ಲೋಸ್ಲಿ ನಿಟ್ ವ್ಯವಸ್ಥೆಯಂತೆ. ಇದು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂದರೆ, ಬ್ಲ್ಯಾಕ್ ಲಿಸ್ಟ್ ಆದ ಗುತ್ತಿಗೆದಾರರು ವ್ಯವಸ್ಥೆಗೆ ಸೆಡ್ಡು ಹೊಡೆಯುವಂತೆ ಪುನಃ ಗುತ್ತಿಗೆ ಪಡೆಯುತ್ತಾರೆ.

ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ವೋಟಿನ ಬೆಲೆ ರೂ.2 ಲಕ್ಷವನ್ನೂ ದಾಟಿದ್ದನ್ನು ಕಂಡಿದ್ದೇವೆ. ಅದಕ್ಕೆ ಹೊರತಾಗಿ ರೆಸಾರ್ಟ್ ವಾಸ್ತವ್ಯ, ದೊಡ್ಡ ಹೋಟೆಲ್ಲುಗಳಲ್ಲಿ ಊಟ, ಮತ್ತು ಚಿನ್ನಾಭರಣಗಳಿಗೂ ವಿಸ್ತರಿಸಿದೆಯಂತೆ. ಈ ಎಲ್ಲಾ ಖರ್ಚುಗಳ ಮೂಲವನ್ನು ಪ್ರಾಮಾಣಿಕವಾಗಿ ಹುಡುಕಿದರೆ ಗುತ್ತಿಗೆದಾರ ಮತ್ತು ರಾಜಕಾರಣಿಗಳ ಜೋಡಿಯಾಟದ ಮಸಲತ್ತು ಕಾಣುತ್ತದೆ.

ರಾಜಕಾರಣಿಗಳು ತಮ್ಮನ್ನು ಗೆಲ್ಲಿಸಿದ ಶಕ್ತಿಗಳ (ವ್ಯಕ್ತಿಗಳ) ಋಣ ತೀರಿಸಬೇಕಾದ ಅನಿವಾರ್ಯತೆಯಲ್ಲಿದ್ದು ಅವರ ಟೆಂಡರ್ ಮತ್ತು ಗುತ್ತಿಗೆಗಳನ್ನು ನಿಭಾಯಿಸುತ್ತಾರೆ ಎನ್ನುವ ರಾಜಕೀಯ ವಿಶ್ಲೇಷಕರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ರಾಜಕಾರಣಿಗಳು ತಮ್ಮ ಸ್ವಂತ ಬೆವರ ಹಣದಿಂದ ರಾಜಕೀಯ ಮಾಡಿದರೆ ಗುತ್ತಿಗೆದಾರರ ಕೈ ಎಂದೂ ಮೇಲಾಗುವುದಿಲ್ಲ. ಗುತ್ತಿಗೆದಾರರರು ಸೃಷ್ಟಿಸಿದ ಚಕ್ರವ್ಯೂಹದಲ್ಲಿ ರಾಜಕಾರಣಿಗಳು, ಮುಖ್ಯವಾಗಿ ಜನಪ್ರತಿನಿಧಿಗಳು ತಮಗೆ ತಿಳಿಯದಂತೆ ಸಿಲುಕಿಕೊಳ್ಳುತ್ತಾರೆ. ರಾಜಾಜಿಯವರು ಹೇಳುತ್ತಿದ್ದ ಲೈಸೆನ್ಸ್ಪರ್ಮಿಟ್ಗುತ್ತಿಗೆದಾರರ ನೆಕ್ಸಸ್‍ನ್ನು ಇಲ್ಲಿ ಕಾಣಬಹುದು.

Leave a Reply

Your email address will not be published.