ಮೂಢನಂಬಿಕೆ ಮತ್ತು ಕನ್ನಡ ವಿಮರ್ಶೆ

ಚರ್ಚೆಯಲ್ಲಿ ಭಾಗವಹಿಸಿರುವವರೆಲ್ಲ ಬಹುತೇಕ ಅನ್ಯಶಿಸ್ತುಗಳ ಪರಿಣತರಾಗಿದ್ದು ಸಾಮಾಜಿಕ ಕಳಕಳಿಯ ವಿಚಾರವಂತರಾಗಿರುವುದರಿAದ ನಮ್ಮ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಈ ದಮನಕಾರಿ ಮೌಢ್ಯದ ವಿರುದ್ಧ ನಡೆಯುತ್ತ ಬಂದಿರುವ ಹೋರಾಟವನ್ನು ಸಹಜವಾಗಿಯೇ ಗಮನಿಸುವುದಕ್ಕಾಗಿಲ್ಲ!

ಎನ್. ಬೋರಲಿಂಗಯ್ಯ

2021 ಜನವರಿ ಸಮಾಜಮುಖಿ ಸಂಚಿಕೆಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ ತ್ರಾಸುಕಟ್ಟಳೆ ರೂಪಕದ ಮೂಲಕ ಕನ್ನಡ ವಿಮರ್ಶೆಯ ಅಂಕಣದ ಶುರುವಾತಿಗೊಂದು “ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?” ಎಂಬ ಪ್ರಶ್ನೆಯ ಮೂಲಕ ಮುನ್ನುಡಿ ಬರೆದಿದ್ದರು. ದುರದೃಷ್ಟವಶಾತ್ ಅದು ಯಾಕೋ ಏನೋ ತನ್ನ ನಿರಂತರತೆಯನ್ನು ಕಾದುಕೊಂಡಿಲ್ಲ. ಕಾರಣ ಏನೇ ಇರಲಿ ಅದು ಹಾಗೆ ಮುಂದುವರಿದಿದ್ದರೆ ವರ್ಷದ ಕೊನೆಯ ಈ ಸಂಚಿಕೆಯ ಮೂಢನಂಬಿಕೆಗಳನ್ನು ಕುರಿತ ಮುಖ್ಯಚರ್ಚೆ ಬಹುಶಃ ಅರ್ಥಪೂರ್ಣವಾಗಿಯೇ ಎರಡು ಮೂರು ಸಂಚಿಕೆಗಳನ್ನು ಮೀರಿ ಬೆಳೆಯಬಹುದಾಗಿತ್ತು.

ಈಗ ಈ ವಿಷಯ ಕುರಿತು ಭಾಗವಹಿಸಿರುವವರೆಲ್ಲ ಬಹುತೇಕ ಅನ್ಯಶಿಸ್ತುಗಳ ಪರಿಣತರಾಗಿದ್ದು ಸಾಮಾಜಿಕ ಕಳಕಳಿಯ ವಿಚಾರವಂತರಾಗಿರುವುದರಿAದ ನಮ್ಮ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಈ ದಮನಕಾರಿ ಮೌಢ್ಯದ ವಿರುದ್ಧ ನಡೆಯುತ್ತ ಬಂದಿರುವ ಹೋರಾಟವನ್ನು ಸಹಜವಾಗಿಯೇ ಗಮನಿಸುವುದಕ್ಕಾಗಿಲ್ಲ. ಕನಿಷ್ಟಪಕ್ಷ ಆಧುನಿಕ ಜೀವನ ಸಂದರ್ಭದಲ್ಲಿಯ ಕಾರಂತ, ಕುವೆಂಪು, ದೇವನೂರ ಮಹದೇವರಂಥ ಕೆಲವು ಧೀಮಂತ ಬರಹಗಾರರನ್ನಾದರೂ ಈ ನಿಟ್ಟಿನಿಂದ ಗಮನಿಸಿದ್ದಲ್ಲಿ ಈಗ ಈ ಸಂಚಿಕೆಯಲ್ಲಿ ಆಗಿರುವ ಚರ್ಚೆಗೆ ಮತ್ತಷ್ಟು ಒತ್ತಾಸೆ ಒದಗುತ್ತಿದ್ದುದರಲ್ಲಿ ಅನುಮಾನವಿಲ್ಲ.

ಎಲ್ಲ ಕಾಲದ ಎಲ್ಲ ಸಮಾಜಗಳಲ್ಲಿಯೂ ಹಾಸುಹೊಕ್ಕಾಗಿರುವ ಮೂಢನಂಬಿಕೆಗಳನ್ನು ಕಾನೂನುಗಳ ಮೂಲಕ ಮಾತ್ರವಲ್ಲದೆ ಜನಜಾಗೃತಿಯ ಕಲೆಸಾಹಿತ್ಯ ಮಾಧ್ಯಮಗಳ ಮೂಲಕ ಕೂಡಾ ಪರಿಣಾಮಕಾರಿ ಕೆಲಸ ನಡೆಯುತ್ತ ಬಂದಿರುವುದನ್ನು ಗಮನಿಸಬೇಕು. ಈ ದೃಷ್ಟಿಯಿಂದ ನೋಡಿದರೆ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗೆರೆಯೆಳೆದಂತೆ ಎರಡು ಮಾದರಿಗಳು ಕಂಡುಬರುತ್ತವೆ. ಅವುಗಳಲ್ಲಿ ಒಂದು ‘ಮಾರ್ಗ ಮಾದರಿ’ ಯಾದರೆ ಮತ್ತೊಂದು ‘ಮಾದರಿ ಮಾರ್ಗ’ವಾಗಿದೆ.

ಮೊದಲನೆಯದಕ್ಕೆ ಮಾಸ್ತಿ, ಬೇಂದ್ರೆ, ಅಡಿಗ ಮುಂತಾದವರನ್ನು ಹೆಸರಿಸಬಹುದಾದರೆ, ಎರಡನೆಯದಕ್ಕೆ ಕಾರಂತ, ಕುವೆಂಪು, ಮಹದೇವ ಮೊದಲಾದವರನ್ನು ಪಟ್ಟಿಮಾಡಬಹುದು. ಈ ಎಲ್ಲರೂ ಕಲಾವಿದರಾಗಿ ಸಮತೂಕದ ಬರಹಗಾರರಾಗಿ ದೊಡ್ಡವರೇ ಎನಿಸಿದರೂ ಆಧುನಿಕ ಸಮಗ್ರ ಸಮಾಜದ ಸಮಸ್ಯೆಗಳ ಪರಿಹಾರೋಪಾದಿಯ ಚಿಂತನೆಯ ಮೂಲಕ ಪರಿಶೀಲಿಸಿದಾಗ ಈ ಮೇಲಿನ ಮಾದರಿ ಮಾರ್ಗದವರು ಕಣ್ಣಿಗೆ ರಾಚಿ ನಿಲ್ಲುತ್ತಾರೆ. ಕಾರಂತ, ಕುವೆಂಪುಗಳAತೂ ತಮ್ಮ ತಮ್ಮ ಬದುಕು ಬರಹಗಳೆರಡರ ಮೂಲಕವೂ ಈ ಮೂಢನಂಬಿಕೆಗಳ ವಿರುದ್ಧದ ಹೋರಾಟವಾಗಿಯೇ ಬದುಕನ್ನು ರೂಪಿಸಿಕೊಂಡವರು.

ಈ ಎರಡೂ ಬದುಕನ್ನೂ ಬೆಸೆದು ನೋಡುವುದರ ಮೂಲಕ ಆಧುನಿಕ ಮಾನವ ಜಗತ್ತಿಗೊಂದು ಅಪೂರ್ವ ಶಾಂತಿ ನೆಮ್ಮದಿಯಿಂದ ಕೂಡಿದ ಜೀವನ ಕೈಪಿಡಿಯನ್ನು ರೂಪಿಸಬಹುದಾಗಿದೆ. ಇಬ್ಬರ ಸಮಗ್ರ ಬರಹಗಳ ಜತೆಗೆ ಕಾರಂತರ ‘ಬಾಳ್ವೆಯೇ ಬೆಳಕು’ ಕೃತಿಯನ್ನು ಕುವೆಂಪು ಅವರ ಕ್ರಾಂತಿಗೀತೆಗಳು, ಜಲಗಾರ, ಶೂದ್ರ ತಪಸ್ವಿಗಳ ಜತೆಗೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಮುಂತಾದ ಕ್ರಾಂತಿಕಾರಕ ಭಾಷಣಗಳನ್ನು ಈ ದೃಷ್ಟಿಯಿಂದ ನೋಡಬಹುದು. ಇಲ್ಲಿಯೇ ಗಮನಿಸಬಹುದಾದ ಒಂದು ಮುಖ್ಯ ಸಂಗತಿಯೆAದರೆ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಣ ಗೆರೆ ತುಂಬ ತೆಳುವಾದದ್ದು. ಹೇಗೆಂದರೆ ಇಡಿಯಾಗಿ ವೈದಿಕ ಪ್ರತಿಭೆ ಆತ್ಮವಾದಿಯಾಗಿದ್ದರೆ, ಇಡಿಯಾಗಿ ಬೌದ್ಧ ಪ್ರತಿಭೆ ‘ಅನತ್ತ’ ವಾದಿಯಾಗಿದೆ. ಇವುಗಳಲ್ಲಿ ಯಾವುದನ್ನು ಮೂಢನಂಬಿಕೆಯ ಚೌಕಟ್ಟಿಗೆ ತಂದು ಚರ್ಚಿಸುವುದು? ಆದರೆ ಎರಡೂ ಕಡೆ ಅಗಾಧ ಪ್ರಮಾಣದಲ್ಲಿ ಮೌಢ್ಯ ಮಡುಗಟ್ಟಿರುವುದೂ ನಿಜ. ಹಾಗೆಯೇ ಕಾರಂತರು ಬಹುಮಟ್ಟಿಗೆ ಅನತ್ತ (ಅನಾತ್ಮ) ವಾದಿಯಾಗಿದ್ದರೆ, ಕುವೆಂಪು ಪೂರ್ಣವಾಗಿ ಆತ್ಮವಾದಿಯಾಗಿದ್ದಾರೆ. ವಿಸ್ಮಯ ಅಂದರೆ ಆಲೋಚನಾ ಕ್ರಮದಲ್ಲಿ ಭಿನ್ನವಾಗಿದ್ದರೂ ಕಾರಂತ, ಕುವೆಂಪು, ಮಹದೇವ ಮೂವರಲ್ಲಿಯೂ ಅಭಿಪ್ರಾಯ ಸಾಮ್ಯ ಅಪಾರವಾಗಿದೆ ಮತ್ತು ಆಧುನಿಕಕ್ಕೆ ಪ್ರಸ್ತುತವಾಗಿದೆ.

ಇದು ಈ ಸಂಚಿಕೆಯ ಮೌಢ್ಯ ಕುರಿತ ಚರ್ಚೆಯ ಮಾತಾಯಿತು. ಇನ್ನು ನಮ್ಮ ಸಾಹಿತ್ಯ ವಿಮರ್ಶೆಯನ್ನು ಕುರಿತು ಒಂದೆರಡು ಮಾತು.

ನಮ್ಮ ಸಾಹಿತ್ಯ ವಿಮರ್ಶೆಗೆ ಬಡಿದಿರುವ ‘ಗರ’ಕ್ಕೆ ಸಂಬAಧಿಸಿದAತೆ ಎಷ್ಟು ಹೇಳಿದರೂ ಪೂರೈಸಲಾಗದಂಥ ಒಂದು ವಾತಾವರಣ ಈಗ ಉಂಟಾಗಿಬಿಟ್ಟಿದೆ. ಕಳೆದ ಶತಕದ ಐದು ಆರನೆಯ ದಶಕದಿಂದಲೇ ಕನ್ನಡ ವಿಮರ್ಶೆಯನ್ನು ಕಾಡಲು ಶುರುವಾದ ಗ್ರಹಚಾರ ಇನ್ನೂ ಮುಂದುವರಿಯುತ್ತಲೇ ಇದೆ. ಅಲ್ಲಿಯವರೆಗೆ ಕನ್ನಡ ಸಾಹಿತ್ಯವನ್ನು ಶಾಸ್ತಿçÃಯವಾಗಿ ಶ್ರದ್ಧಾ ಗೌರವಗಳೊಡನೆ ಅಧ್ಯಯನ ಮಾಡಿದ ಬೇಂದ್ರೆ, ಕುವೆಂಪು, ತೀ.ನಂ.ಶ್ರೀ., ಡಿ.ಎಲ್.ನರಸಿಂಹಾಚರ್, ಸುಜನಾ, ಜಿ.ಎಸ್.ಶಿವರುದ್ರಪ್ಪ ಮೊದಲಾದವರಿಂದ ಧ್ವನಿ, ರಸಭರಿತ ವಿಮರ್ಶೆಯಾಗಿ ಹುಟ್ಟಿ ಸಾಮಾನ್ಯ ಜನರ ಮನೆಯ ಬಾಗಿಲನ್ನು ಬಡಿಯಲು ತೊಡಗುತ್ತಿದ್ದ ಅಪ್ಯಾಯಮಾನ ವಿಮರ್ಶೆ ಇದ್ದಕ್ಕಿದ್ದಂತೆ ಪಶ್ಚಿಮದ ಪರಿಭಾಷೆಯ ಹೊದರಿನಲ್ಲಿ ಸಿಕ್ಕಿಕೊಂಡು ಉದ್ದೇಶ ಪೂರ್ವಕವಾಗಿಯೇ ಜನವಿದೂರವಾದುದರ ಪರಿಣಾಮಗಳಿಂದ ನಾವಿನ್ನೂ ಹೊರಬರಲೇ ಸಾಧ್ಯವಾಗುತ್ತಿಲ್ಲ.

ಮಾದರಿ ಮಾರ್ಗಕ್ಕಿಂತ ಮಾರ್ಗಮಾದರಿ ವಿಜೃಂಭಿಸತೊಡಗಿದ್ದು ಇಲ್ಲಿಂದಲೇ. ಗೋಕಾಕ, ಕುರ್ತಕೋಟಿ, ಅನಂತಮೂರ್ತಿ, ಅಮೂರ ಮುಂತಾದವರ ವಿಮರ್ಶೆಯನ್ನು ಈ ನಿಟ್ಟಿನಿಂದ ನೋಡಬಹುದು. ಮಾದರಿ ಮಾರ್ಗದ ಸೃಜನಶೀಲ ವಿಮರ್ಶೆಯ ಪ್ರಾಂತಭಾಷಾ ಪಂಡಿತರು ಒಂದು ಬಗೆಯ ಕಕ್ಕಾಬಿಕ್ಕಿಗೆ ಒಳಗಾಗಿ ಕೀಳರಿಮೆಯಿಂದಲೋ ಏನೋ ಹೊರಬರಲಾರದೆ ಮಾರ್ಗ ಮಾದರಿಯ ವಿಮರ್ಶೆಯನ್ನು ಸ್ಪರ್ಧೆಗೆ ಬಿದ್ದವರಂತೆ ಅನುಕರಿಸ ತೊಡಗಿದರು. ಹೆಚ್ಚೆಂದರೆ ಅನುಸರಿಸತೊಡಗಿದರು.

ಉದಾಹರಣೆಗಾಗಿ ಡಿ.ಆರ್.ನಾಗರಾಜರನ್ನೇ ನೋಡಬಹುದು. 1932ರಷ್ಟು ಹಿಂದೆಯೇ ಕಾರಂತರ ಚೋಮನ ಮಗನ ಸಾವಿಗೆ ಕಾರಣವಾದ ಮೂಢನಂಬಿಕೆಯನ್ನು ಹೇಗೆ ತಾನೆ ಸಹಿಸಿಕೊಳ್ಳಲಾಯಿತು? ಇದಕ್ಕೆ ಕ್ರೆಸಿಸ್ ಸಿದ್ಧಾಂತದ ಲಕ್ಷಿö್ಮಶ್ ತೋಳ್ಪಾಡಿಯವರು ಉತ್ತರಿಸಬೇಕು. ಕುಸುಮಬಾಲೆಯ ವಸ್ತುವಿನ್ಯಾಸಕ್ಕಿಂತ ಭಾಷಾವಿನ್ಯಾಸವೇ ಸೊಗಸಾಗಲು ಕಾರಣವೇನು? ಬರೆಯುತ್ತಿದ್ದಾಗ ಸುರಿಯುತ್ತಿದ್ದ ಕಣ್ಣೀರಿನಿಂದಾಗಿ ಕುಸುಮಬಾಲೆಯಲ್ಲಿ ಅಳಿಸಿ ಹೋಗಿರುವ ಅನೇಕ ಅದೃಶ್ಯ ಪುಟಗಳು ‘ಕಾವ್ಯವಾಗಲಿ ಖಡ್ಗ’ ಎಂದ ಡಿ.ಆರ್. ಕಣ್ಣಿಗೆ ಯಾಕೆ ಬೀಳಲಿಲ್ಲ? ಕುಸುಮಬಾಲೆಗಿಂತ ಅನಂತಮೂರ್ತಿಯವರ ‘ದಿವ್ಯ’ ‘ಭವ್ಯ’ ಗಳೇ ಹೆಚ್ಚಾಗಿಬಿಟ್ಟವೇ?

ಇವರಿಗೇ ಹೀಗನಿಸಿದ ಮೇಲೆ ಪಡುವಲ ಪರಿಭಾಷೆಯ ದೃಷ್ಟಿಕೋನಕ್ಕೆ ಇನ್ನು ಹೇಗೆ ಕಂಡೀತು? ಅಸಂಗತ ಚಟುವಟಿಕೆ (ಕುರ್ತಕೋಟಿ) ಮತ್ತು ಧೂರ್ತ ಪಾತ್ರಗಳಿಂದ (ಸಿ.ಎನ್.ರಾಮಚಂದ್ರ) ತುಂಬಿಕೊAಡಿರುವAತೆ ತಾನೆ ಕಾಣಿಸಬೇಕು? ಅಸ್ಪೃಶ್ಯ ಯಾಡನ ಸಂತಾನ ದೊಡ್ಡ ಹಟ್ಟಿಗೇರುವ ಸಾಮರ್ಥ್ಯದ ವಿಧಾನವನ್ನಾಗಲೀ, ಕುರಿಯಯ್ಯನ ನನ್ನಿಯಲ್ಲಿ.. ರಸಲ್ ಹೇಳುವ ಹಾಗೆ ನಾಯಿಗಳಂತೆ (mಚಿಟಿgಡಿe) ಬೆರೆತು ಹೋಗಿರುವ ಜಾತಿ ವ್ಯವಸ್ಥೆಯಲ್ಲಿ ಮಡಿವಂತಿಕೆಯನ್ನು ಗುರುತಿಸುವ ರೀತಿಯನ್ನಾಗಲಿ ಸಕಾರಾತ್ಮವಾಗಿ ಯಾಕೆ ಎತ್ತಿ ಹಿಡಿಯಲಾಗಲಿಲ್ಲ? ಇದು ಜಾಣತನವೋ? ಅಲಕ್ಷö್ಯವೋ ಗೊತ್ತಾಗುತ್ತಿಲ್ಲ, ಎನ್ನುವಂತಿಲ್ಲ. ಉತ್ತರ ಬೇಕಾಗಿದೆ. ಯಾಕಂದರೆ ಅಂದಿನ ಆ ಅಲಕ್ಷö್ಯವೇ ಇಂದಿನ ಈ ತಿಳಿಗೇಡಿ ರಾಜಕೀಯಕ್ಕೆ ಕಾರಣವಾಗಿರುವುದು.

ಕುವೆಂಪು ಅವರಿಗೂ ಒಕ್ಕಲಿಗರಿಗೂ ಇರುವ ಸಂಬಧಕ್ಕೆ ಸಂಬಧಿಸಿದತೆ ಒಂದು ಮಾತು. ಕುವೆಂಪು ಅವರ ‘ಪಟ’ವನ್ನು ತಮ್ಮ ಆಹ್ವಾನಪತ್ರ ಮತ್ತು ಭಿತ್ತಿಪತ್ರಗಳೆಂಬ ಗಾಳಿಪಟಗಳಲ್ಲಿ ಅಂಟಿಸಿಕೊAಡು ಅಡ್ಡಾಡುವುದನ್ನು ಹೊರತು ಪಡಿಸಿದರೆ ಜೀವನ ವಿಧಾನ ಮತ್ತು ವೈಜ್ಞಾನಿಕ ವೈಚಾರಿಕತೆಯ ದೃಷ್ಟಿಯಿಂದ ಕುವೆಂಪು ಅವರಿಗೂ ಒಕ್ಕಲಿಗರಿಗೂ ಬರ‍್ಯಾವ ಸಂಬAಧವೂ ಇಲ್ಲ. ಇನ್ನು ವಿಮರ್ಶೆಯ ಮಾತು. ಆಯ್ಕೆಯ ಮಾತೆತ್ತಿದಾಗ ಕುವೆಂಪುಗಿAತ ಅಷ್ಟೇನೂ ಸಾಂಸ್ಕೃತಿಕ ನಾಯಕತ್ವದ ಬಲವಿಲ್ಲದ ಮಠವನ್ನು ಎತ್ತಿ ಹಿಡಿಯುವ ಕೆಲವು ಒಕ್ಕಲಿಗ ವಿಮರ್ಶಕರಿರಬಹುದು. ಅಂಥವರಿAದ ಕುವೆಂಪು ಅವರಿಗಾಗಲಿ, ಅವರ ವೈಚಾರಿಕ ಸಾಹಿತ್ಯಕ್ಕಾಗಲೀ ಹೇಳಿಕೊಳ್ಳುವಂಥ ಸಾಮಾಜಿಕ ಪರಿಣಾಮಗಳೇನೂ ಆಗಿಲ್ಲ. ಅವರೆಲ್ಲಾ ಒಂದು ಬಗೆಯ ನಿರುಪದ್ರವಿ ವಿಮರ್ಶಕರು.

ಹಾಗೆ ನೋಡಿದರೆ ನನ್ನ ದೃಷ್ಟಿಯಲ್ಲಿ ಕುವೆಂಪು ಮುಂದುವರಿಕೆ ದೇವನೂರ ಮಹದೇವನೇ ಹೊರತು ತೇಜಸ್ವಿಯಲ್ಲ. ಯಾಕೆಂದರೆ ತೇಜಸ್ವಿ ಕಾರಂತರ ರೀತಿಯ ಸಾಹಿತಿ ಕಲಾವಿದರೇ ಹೊರತು ಕುವೆಂಪು ಮಾದರಿಯವರಲ್ಲ. ಮಾದರಿ ಮಾರ್ಗೀಯ ದೇವನೂರು ಮಹದೇವ ಪ್ರಾತಿನಿಧಿಕವಾಗಿ ಕೇಳುತ್ತಿರುವುದಾದರೂ ಏನನ್ನು? ನ್ಯಾಯಸಮ್ಮತವಾದ ತಮ್ಮ ಪಾಲಿನ ಸಮಾನತೆಯನ್ನು ಮತ್ತು ತಮ್ಮ ಸ್ವಾತಂತ್ರö್ಯದ ಹಕ್ಕನ್ನು. ‘ನೆಲ ಸಪಾಟಿಲ್ಲ’ ಎಂದು ಹೇಳುತ್ತ ಮುಂದಿನ ಜನ್ಮಕ್ಕೆ ಬೇಂದ್ರೆ ಅಡಿಗರಿಬ್ಬರೂ ಕೈ ತೋರಿಸಿದರೆ ಮನುಷ್ಯ ಲೋಕದಲ್ಲಿ ಶಾಂತಿ ನೆಮ್ಮದಿ ನೆಲಸುವುದಾದರೂ ಹೇಗೆ? ಹೌದು, ಇಲ್ಲಿ ಏನೋ ಒಂದು ಆಗಬಾರದ್ದು ಆಗಿಹೋಗಿದೆ. ಈಗಲಾದರೂ ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಾಗಿ ಕೂತು ಪರಿಹಾರಕ್ಕಾಗಿ ಚಿಂತಿಸದೆ ಹೋದರೆ ಸೋದರ ಭಾವಕ್ಕೆ ಅರ್ಥವಾದರೂ ಏನು?

ಅದೂ ಹೋಗಲಿ ನಮ್ಮ ವಿಮರ್ಶೆ ಅಗ್ರಮಾನ್ಯ ಎನಿಸಿದ ಈ ಕವಿಗಳಿಗಾದರೂ ನ್ಯಾಯ ದೊರಕಿಸಿದೆಯೋ? ಅವರ ಕಾವ್ಯ ಸೌಂದರ್ಯವನ್ನಾಗಲೀ ಪ್ರಚುರಪಡಿಸುತ್ತಿರುವ ತಾತ್ತಿ÷್ವಕತೆಯನ್ನಾಗಲೀ ಯಥಾರೀತಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆಯೋ? ಹಾಗೇನೂ ಆಗಿರುವಂತೆ ನನಗೆ ತೋರುತ್ತಿಲ್ಲ. ಶೃಂಗಾರಲೀಲೆಯಲ್ಲಿ ಮೀಯುತ್ತ ಆರಂಭಗೊಳ್ಳುವ ಬೇಂದ್ರೆಯವರ ಕವಿತೆ ‘ಬೆಳಗು’ ಡಾರ್ವಿನ್ನನ ವಿಕಾಸವಾದವನ್ನು ಮೈಗೂಡಿಸಿಕೊಂಡು ಬೆಳೆದು ಶಾಂತರಸದಲ್ಲಿ ಹೇಗೆ ಅನನ್ಯ ಬಗೆಯ ಮುಕ್ತಿಯಲ್ಲಿ ವಿಲೀನಗೊಳ್ಳುತ್ತದೆ ಎಂಬುದನ್ನು ತೋರಿಸುವಲ್ಲಿ ಕಳೆದ ನೂರು ವರ್ಷದ ಕನ್ನಡ ವಿಮರ್ಶೆ ವಿಫಲವಾಗಿ ದಯನೀಯವಾಗಿ ಸೋಲುಂಡಿದೆ. ಅದು ಖಂಡಿತವಾಗಿಯೂ ಅರುಣೋದಯ ಕುರಿತ ಕವಿತೆ ಮಾತ್ರವಲ್ಲ ಎಂದು ಬೇಂದ್ರೆಯವರೇ ಒಂದು ಕಡೆ ಸ್ಪಷ್ಟಪಡಿಸಿದ್ದಾರೆ (ಜ್ಞಾನಪೀಠ ಪ್ರಶಸ್ತಿ ಸ್ವೀಕಾರ ಸಂದರ್ಭ). ಪರಾಗ, ನಾದಲೀಲೆಗಳಂಥ ಮುಖ್ಯ ಕವಿತೆಗಳ ಕಾವ್ಯ ಸೌಂದರ್ಯ ತಥಾಕಥಿತವಾಗಿದ್ದರೆ ಅವುಗಳ ತಾತ್ತಿ÷್ವಕತೆ ಅದೃಶ್ಯವಾಗಿಯೇ ಉಳಿದಿದೆ. ಅಡಿಗರಂತೂ ಬೇಂದ್ರೆಯವರಿಗಿAತ ಹೆಚ್ಚು ಅಸ್ಪಷ್ಟವಾಗಿಯೇ ಉಳಿದಿರುವ ದುರದೃಷ್ಟವಂತರು. ಇವರ ನವ್ಯ ಕವಿತೆಗಳ ಮಾತು ಹಾಗಿರಲಿ ನಡೆದು ಬಂದ ದಾರಿಯಲ್ಲಿಯ ಕವಿತೆಗಳೂ ತಕ್ಕ ರೀತಿಯಲ್ಲಿ ಚರ್ಚೆಯಾಗಿಲ್ಲ. ಉದಾಹರಣೆಗೆ ಕೆಂದಾವರೆ, ಭೂಮಿತಾಯಿ ಮುಂತಾದವು.

ಇನ್ನು ನಮ್ಮ ಆಕಾಶವಾಣಿ, ಶಾಸ್ತಿçಯ ಕನ್ನಡ ಉನ್ನತ ಅಧ್ಯಯನ ಕೇಂದ್ರಗಳ ಸಾಹಿತ್ಯ ಕುರಿತ ಕಾರ್ಯಕ್ರಮಗಳು ಯಾರಿಗಾಗಿ ಮತ್ತು ಯಾಕಾಗಿ ಎಂಬುದೇ ತಿಳಿಯುತ್ತಿಲ್ಲ. ಕಾರಂತರ ಚಿಂತನಶೀಲ ಕೃತಿ ‘ಬಾಳ್ವೆಯೇ ಬೆಳಕು’ ಬೆಳಕಿನಲ್ಲಿ ನೋಡಿದರೆ ಮೈಸೂರು ಆಕಾಶವಾಣಿಯ ಪದಸಂಸ್ಕೃತಿ, ಅರಿವಿನ ಶಿಖರ ಮುಂತಾದವು ಬರಿಯ ದುಡ್ಡು ಹಂಚಿಕೊಳ್ಳುವ ಬಿತ್ತರಗಳಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ.

ಕುವೆಂಪು ಅವರ ಕ್ರಾಂತಿಗೀತೆಗಳು ಮತ್ತು ಆಧ್ಯಾತ್ಮಿಕ ಸೌಂದರ್ಯದ ದೃಷ್ಟಿಯಿಂದ ನೋಡಿದರೆ ಶಾಸ್ತಿಯ ಕನ್ನಡ ಅಧ್ಯಯನ ಕೇಂದ್ರದ ಭಕ್ತಿಯನ್ನು ಕುರಿತ ಅಧ್ಯಯನ ಅಷ್ಟೇನೂ ಪ್ರಸ್ತುತವಾಗುವುದಿಲ್ಲ. ನಮಗೀಗ ಬೇಕಾಗಿರುವುದು ಭಕ್ತಿಯಲ್ಲ ಶ್ರದ್ಧೆ. ಭಕ್ತಿ ಶರಣಾಗತಿಯನ್ನು ಬೇಡಿದರೆ, ಶ್ರದ್ಧೆ ಸ್ವಾತಂತ್ರö್ಯವನ್ನು ನೀಡುತ್ತದೆ. ಯಾರೋ ನಾಲ್ಕು ಜನ ದ್ವೆöÊತ ನೆಲೆಯ ಸಂತರಿಗೆ ಭಕ್ತಿ ಬೇಕಾಗಬಹುದು. ಆದರೆ ಜೀವನವನ್ನು ಕಟ್ಟುತ್ತಾ, ಅನುಭವಿಸುತ್ತ, ಬೆಳೆಯುತ್ತ ಸಾಗುವ ಅಸಂಖ್ಯಾತ ಜನಸಮುದಾಯ ಕಾಯಕ ನಿಷ್ಠೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಭಕ್ತಿಗಿಂತ ಶ್ರದ್ಧೆ ಮುಖ್ಯ. ಅದು ಹೆಚ್ಚು ಲವಲವಿಕೆಯ ಜೀವಂತ ಶಕ್ತಿಯನ್ನು ನೀಡುತ್ತದೆ. ಫಲಾಪೇಕ್ಷೆಯನ್ನು ನಿರಾಕರಿಸುವ ಭಕ್ತಿ ‘ದಾಸನ ಮಾಡಿಕೊ ಎನ್ನ’ ಬಗೆಯ ಗುಲಾಮಗಿರಿಯನ್ನು ಸ್ಥಾಪಿಸಿದರೆ ಶ್ರದ್ಧಾಪೂರ್ವಕ ಕಾಯಕ ನಿರುಮ್ಮಳ ಬದುಕನ್ನು ನೀಡುತ್ತದೆ. ಇಲ್ಲಿ ‘ದಾಸರನ್ನು ಪೂಜಿಸಿಯೆ ದಾಸ್ಯವಾಯ್ತು’ ಕುವೆಂಪು ನೆನಪಾಗ್ತಾರೆ.

ಕಡೆಯದಾಗಿ ಇದೇ ಡಿಸೆಂಬರ್ ತಿಂಗಳ ಸಮಾಜಮುಖಿಯ ಸಂದರ್ಶನದಲ್ಲಿ ಎಚ್.ಎಸ್.ಶಿವಪ್ರಕಾಶ್ ‘ಕನ್ನಡ ಸಂಸ್ಕೃತಿ’ಯೆನ್ನುವುದು ಕೇವಲ ಗತಸಂಸ್ಕೃತಿಯಲ್ಲ. ಅದನ್ನು ಅಡಿಗರು ಚೆನ್ನಾಗಿ ತಮ್ಮದೊಂದು ಕವಿತೆಯಲ್ಲಿ ಹೇಳುತ್ತಾರೆ.

ಇತ್ತು’ಗಳ ಧ್ವಜವನ್ನು ಹಿಡಿದೆತ್ತಿ ನಿಲ್ಲು ಮಗು

ಇರದುದರ ಉಪದ್ವಾö್ಯಪ ಬೇಡ ನಿನಗೆ’

ಎಂದು ಹೇಳಿದ್ದಾರೆ. ಈ ಉದಾಹರಣೆ ಮತ್ತು ಅದಕ್ಕೆ ನೀಡಿರುವ ವಿವರಣೆ ಮೂಲಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಮೂಲ ಹೀಗಿದೆ.

ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲೋ ಮಗೂ,

ಇದೆ’ಯ ಹೃದಯದ್ರಾವ ಬೇಡ ನಿನಗೆ’

ಆದ್ದರಿಂದ ಇಲ್ಲಿ ಶಿವಪ್ರಕಾಶ್ ಅಡಿಗರನ್ನು ವಿನಾಕಾರಣ ಹೊಗಳಿದ್ದಾರೆ. ಹಾಗೆ ನೋಡಿದರೆ ಪುಣ್ಯಕೋಟಿ ಹುಲಿಯ ಸಂದರ್ಭಕ್ಕೆ ಅನಂತಮೂರ್ತಿಯವರ ವ್ಯಾಖ್ಯಾನವೇ ಸರಿಯಾಗಿದೆ. ಗಾಂಧೀಜಿ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಬ್ರಿಟಿಷ್‌ರನ್ನು ಮಣಿಸಿದ್ದೇ ಇದಕ್ಕೆ ಸಾಕ್ಷಿ.

Leave a Reply

Your email address will not be published.