ವೆಬ್3: ಅಂತರ್ಜಾಲದಲ್ಲೀಗ ವಿಕೇಂದ್ರೀಕರಣ

ವೆಬ್3 ಈಗಷ್ಟೇ ವಿಕಾಸವಾಗುತ್ತಿದೆ. ಅದರ ಸಾಮರ್ಥ್ಯದ ಬಗ್ಗೆ ಸ್ಪಷ್ಟ ನಿಲುವುಗಳನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲದಿರಬಹುದು. ಆದರೆ ಮುಂದೊಂದು ದಿನ ಇದು ಇಡೀ ಅಂತರ್ಜಾಲವನ್ನು ನಾವು ಬಳಸುವ ರೀತಿಯನ್ನು ಪುನರ್‍ವ್ಯಾಖ್ಯಾನಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಎಂ.ಕೆ.ಆನಂದರಾಜೇ ಅರಸ್

ರಾಜಕೀಯ ಬದಿಗಿಡಿ. ವಿಕೇಂದ್ರೀಕರಣದ ಗಾಳಿ ಈಗ ತಂತ್ರಜ್ಞಾನದಲ್ಲಿ ಹೆಚ್ಚಾಗಿ ಬೀಸುತ್ತಿದೆ. ಒಂದೆಡೆ ಕ್ರಿಪೆ್ಟೀಕರೆನ್ಸಿಯು ಕರೆನ್ಸಿಯ ವಿಕೇಂದ್ರೀಕರಣದ ಬಗ್ಗೆ ಚರ್ಚೆ ಹುಟ್ಟುಹಾಕಿದ್ದರೆ, ವೆಬ್3 ಈಗ ಅಂತಹುದೇ ಕ್ರಾಂತಿಯನ್ನು ಅಂತರ್ಜಾಲದಲ್ಲಿ ಮಾಡಲಿದೆಯೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಏನಿದು ವೆಬ್3…? ೀಸ್‍ಬುಕ್, ಗೂಗಲ್, ಅಮೆನ್, ಟ್ವಿಟ್ಟರ್ ಇವೆಲ್ಲಾ ಇಂಟರ್‍ನೆಟ್ ವಲಯದಲ್ಲಿ ಏಕಸ್ವಾಮ್ಯತೆ ಸಾಧಿಸಿವೆ. ಇವು ಮಧ್ಯವರ್ತಿಗಳು ಕೂಡ. ನಾವು ಇಂದು ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಹುಡುಕಾಡಲು ಗೂಗಲ್ ಮೊರೆ ಹೋಗುತ್ತೇವೆ. ಅದೇ ರೀತಿ ಸಾಮಾಜಿಕ ಜಾಲತಾಣವೆಂದರೆ ೀಸ್‍ಬುಕ್ ಬಿಟ್ಟು ಇನ್ನೊಂದು ಹೆಸರು ಮನಸ್ಸಿಗೆ ತಟ್ಟನೆ ಬರುವುದಿಲ್ಲ. ಇದು ಈ ಸಂಸ್ಥೆಗಳ ಏಕಸ್ವಾಮ್ಯತೆಗೆ ಸಾಕ್ಷಿ. ವೆಬ್3 ಎಂಬುದು ವಿಕೇಂದ್ರೀಕರಣದ ಮೂಲಕ ಈ ಮಧ್ಯವರ್ತಿಗಳ ಏಕಸ್ವಾಮ್ಯತೆಯನ್ನು ಮುರಿಯುವ ಆಲೋಚನೆಯಾಗಿದೆ.

ಹಾಗಾದರೇ ವೆಬ್1 ಹಾಗೂ ವೆಬ್2 ಯಾವುವು ಎಂಬ ಪ್ರಶ್ನೆ ಕೆಲವರಿಗೆ ಹುಟ್ಟಬಹುದು. ಅಂತರ್ಜಾಲದ ಆರಂಭದ ದಿನಗಳಲ್ಲಿ ನಾವು ವೆಬ್1 ಹಂತದಲ್ಲಿದ್ದೆವು. 1991 ಹಾಗೂ 2004 ನಡುವಿನ ಅವಧಿ ವೆಬ್1 ರ ಯುಗವಾಗಿತ್ತು. ಆಗ ವೆಬ್ ಮಾಹಿತಿಯ ಲಭ್ಯತೆಯನ್ನು ಪ್ರಜಾಪ್ರಭುತ್ವೀಕರಿಸುವ ಸಾಧನವಾಯಿತು. ಆದರೆ ಆಗ ಮಾಹಿತಿಯ ಹುಡುಕಾಟ ವ್ಯವಸ್ಥಿತವಾಗಿರಲಿಲ್ಲ. ಯಾವುದಾದರೂ ಮಾಹಿತಿಯ ಅವಶ್ಯಕತೆಯಿದ್ದರೆ ನಾವು ಅದಕ್ಕೆ ಸಂಬಂಧಿತ ಜಾಲತಾಣಕ್ಕೆ ಹೋಗಿ ಪಡೆಯಬೇಕಾಗಿತ್ತು. ಅಂತರ್ಜಾಲದ ಅವಿಷ್ಕಾರದ ಜೊತೆಜೊತೆಯಲ್ಲೇ ಹಲವಾರು ಹುಡುಕಾಟದ ಇಂಜಿನ್‍ಗಳು ಪ್ರಚಲಿತದಲ್ಲಿದ್ದರೂ ಸಹ ಅವುಗಳು ಅಷ್ಟು ಜನಪ್ರಿಯವಾಗಿರಲಿಲ್ಲ. ಯಾಹೂ ಸರ್ಚ್ ಮೊದಲ ಜನಪ್ರಿಯ ಸರ್ಚ್ ಇಂಜಿನ್ ಆಗಿತ್ತು. 1995ರಲ್ಲಿ ಅಲ್ತ ವಿಸ್ತಶುರುವಾಯಿತು. ಆದರೆ ಯಾವಾಗ ಗೂಗಲ್ ಆರಂಭವಾಯಿತೋ, ಆಗ ಇವೆರಡು ಸರ್ಚ್ ಇಂಜಿನ್‍ಗಳು ತೆರೆಯ ಮರೆಗೆ ಸರಿದವು. 2003ರಲ್ಲಿ ಅಲ್ತ ವಿಸ್ತವನ್ನು ಯಾಹೂ ಖರೀದಿಸಿತು. ಈಗಲೂ ಯಾಹೂ ಅಸ್ತಿತ್ವದಲ್ಲಿದೆ. ಆದರೇ ಶೇ.92ರಷ್ಟು ವಿಷಯ ಹುಡುಕಾಟದ ವಿಚಾರಣೆಗಳು ಗೂಗಲ್‍ಗೇ ಬರುತ್ತವೆ. ಇಪ್ಪತ್ತೊಂದನೇ ಶತಮಾನದ ಮೊದಲ ದಶಕದಲ್ಲಿ ಆರಂಭವಾದ ಗೂಗಲ್, ಅಮೆeನ್, ಫೇಸ್‍ಬುಕ್ ಹಾಗೂ ಟ್ವಿಟ್ಟರ್ ವೇದಿಕೆಗಳು ಅಂತರ್ಜಾಲದಲ್ಲಿ ಸಂಪರ್ಕ ಹಾಗೂ ಆನ್‍ಲೈನ್ ವಹಿವಾಟನ್ನು ಸುಲಭಗೊಳಿಸಿ ಅಂತರ್ಜಾಲದಲ್ಲಿ ಒಂದು ವ್ಯವಸ್ಥೆಯನ್ನು ಹುಟ್ಟುಹಾಕಿದವು.

ವೆಬ್2ನಲ್ಲಿನ ವ್ಯವಹಾರಿಕ ಸೂತ್ರ ಸಾಮಾನ್ಯವಾಗಿ ಹೀಗಿದೆ ಒಂದು ಆ್ಯಪ್ ಅಥವಾ ವೆಬ್ ಪೆೀರ್ಟಲ್ ಅನ್ನು ಅಭಿವೃದ್ಧಿಪಡಿಸುವುದು. ಅದಕ್ಕೆ ಸಾಕಷ್ಟು ಬಳಕೆದಾರರನ್ನು ಗಳಿಸುವುದು. ನಂತರ ಬಳಕೆದಾರರ ಆಧಾರದ ಮೇಲೆ ಲಾಭಗಳಿಸುವುದು. ಒಂದು ಆ್ಯಪ್ ಹೆಚ್ಚು ಹೆಚ್ಚು ಬಳಕೆದಾರರನ್ನು ಗಳಿಸಿದಂತೆಲ್ಲಾ ಹೆಚ್ಚು ಹೆಚ್ಚು ಪ್ರಬಲವಾಗಿ ಬೆಳೆಯುತ್ತಾ ಹೋಗುತ್ತದೆ. ಈಗ ವೆಬ್3 ಈ ವೆಬ್2ನ ಪ್ರಮುಖ ವೇದಿಕೆಗಳ ಪ್ರಾಬಲ್ಯಕ್ಕೆ ಲಗ್ಗೆ ಇಡಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ನಾವು ಅವಲೋಕಿಸಬಹುದಾದ ಬೆಳವಣಿಗೆಯಾಗಿದೆ.

ಈಗ ಅಂತರ್ಜಾಲವನ್ನು ಗೂಗಲ್, ೀಸ್‍ಬುಕ್, ಟ್ವಿಟ್ಟರ್‍ನಂತಹ ಬೆರಳೆಣಿಕೆಯ ಸಂಸ್ಥೆಗಳು ಆಳುತ್ತಿವೆ. ಈ ಸಂಸ್ಥೆಗಳ ಯಶಸ್ಸಿಗೆ ಕಾರಣರಾಗಿರುವವರು, ಅವುಗಳ ಏಕಸ್ವಾಮ್ಯತೆಗೆ ಕಾರಣರಾಗಿರುವವರು ಅವುಗಳ ಬಳಕೆದಾರರು. ಆದರೆ ಬಳಕೆದಾರರಿಗೆ ಇದರಲ್ಲಿ ಯಾವುದೇ ಒಡೆತನವಿಲ್ಲ. ಲಾಭದಲ್ಲಿ ಯಾವುದೇ ಪಾಲಿರುವುದಿಲ್ಲ. ಇದರಲ್ಲಿ ಎಲ್ಲವೂ ಸರಿಯಂತೆ ಕಾಣಬಹುದು. ಏಕೆಂದರೆ ಇಲ್ಲಿ ಬಳಕೆದಾರರು ಮೌಲ್ಯವನ್ನು ಸೃಷ್ಟಿಸುತ್ತಾರೆ ಹಾಗೂ ಕಂಪನಿಗಳು ಮೌಲ್ಯ ಒದಗಿಸುತ್ತವೆ. ಬಳಕೆದಾರರಿಗೆ ಹಲವಾರು ಪ್ರಯೋಜನಗಳು ದೊರಕುತ್ತವೆ. ಆದರೆ ಅಂತರ್ಜಾಲವು ಬಳಕೆದಾರರಿಗಿಂತ ಮಧ್ಯವರ್ತಿ ಸಂಸ್ಥೆಗಳಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ.

ವೆಬ್3ರ ಅಭಿಮಾನಿಗಳ ಪ್ರಕಾರ ಈಗಿರುವ ಅಂತರ್ಜಾಲದ ಪುನರಾವರ್ತಿಯೊಂದು ಶುರುವಾಗುತ್ತದೆ. ಅಲ್ಲಿ ಹೊಸ ಸಾಮಾಜಿಕ ಜಾಲಬಂಧಗಳು, ಹುಡುಕಾಟ ಯಂತ್ರಗಳು ಹಾಗೂ ಮಾರುಕಟ್ಟೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಇವುಗಳ ಒಡೆತನ ಯಾರೊಬ್ಬರ ಬಳಿಯೂ ಇರುವುದಿಲ್ಲ.

ಇವುಗಳು ವಿಕೇಂದ್ರೀಕೃತವಾಗಿರುತ್ತವೆ. ಇವುಗಳನ್ನು ಈಗಾಗಲೇ ಕ್ರಿಪೆ್ಟೀ ಹಾಗೂ ಇನ್ನಿತರ ತಂತ್ರಜ್ಞಾನಗಳಿಗೆ ಬಳಸಿಕೊಳ್ಳುತ್ತಿರುವ ಬ್ಲಾಕ್‍ಚೈನ್ ವ್ಯವಸ್ಥೆಯ ಮೇಲೆ ಅಭಿವೃದ್ಧಿಪಡಿಸಲಾಗುತ್ತದೆ. ಇದೊಂದು ಬುಕ್‍ಕೀಪಿಂಗ್ ಅಥವಾ ಲೆಕ್ಕ ಬರಹದಂತಹ ವ್ಯವಸ್ಥೆಯೆಂದಿಟ್ಟುಕೊಳ್ಳಿ. ಇಲ್ಲಿ ಎಲ್ಲರೂ ಹುಡುಕಾಟ ಮಾಡಿ ಪಡೆಯಬಹುದಾದಂತಹ ದತ್ತಾಂಶಗಳನ್ನು ವಿವಿಧೆಡೆಗಳಿಂದ ಗಣಕಯಂತ್ರಗಳು ಅಪ್‍ಲೋಡ್ ಮಾಡುತ್ತವೆ. ಇದನ್ನು ಎಲ್ಲಾ ಬಳಕೆದಾರರು ಸಾಮೂಹಿಕವಾಗಿ ನಡೆಸುತ್ತಾರೆ. ಭಾಗವಹಿಸಲು ಜನರಿಗೆ ಟೋಕನ್‍ಗಳನ್ನು ನೀಡಲಾಗುತ್ತದೆ. ಈ ಟೋಕನ್‍ಗಳನ್ನು ನಿರ್ಧಾರಗಳ ಮೇಲೆ ಮತ ಚಲಾಯಿಸಲು ಹಾಗೂ ಇತರೆ ಕಾರ್ಯಗಳಿಗೆ ಬಳಸಬಹುದು. ಇಲ್ಲಿ ಜನರೇ ತಮ್ಮ ತಮ್ಮ ದತ್ತಾಂಶದ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಇದರ ಬಳಕೆದಾರರ ಎಲ್ಲಾ ಚಟುವಟಿಕೆಗಳು ಬ್ಲಾಕ್‍ಚೈನ್ ಮೇಲೆ ಸಾರ್ವಜನಿಕ ದಾಖಲೆಯಾಗಿ ಕೂರುತ್ತವೆ.

ವೆಬ್3 ವಾಸ್ತವವಾಗಿ ಬರಲಿದೆಯೇ ಅಥವಾ ಇದು ಕೇವಲ ಸಿದ್ಧಾಂತದಲ್ಲಿಯೇ ಕೊನೆಯಾಗಲಿದೆಯೇ ಎಂಬುದು ಈಗ ಚರ್ಚಿಸಲಾಗುತ್ತಿರುವ ವಿಷಯವಾಗಿದೆ. ಉದ್ಯಮಿ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲನ್ ಮಸ್ಕ್ ಇತ್ತೀಚೆಗೆ ಇದೊಂದು ಮಾರ್ಕೆಟಿಂಗ್ ಝೇಂಕಾರ ಎಂದು ಅಲ್ಲಗೆಳೆದರು. ಎಲ್ಲಿದೇ ಇದು, ನಾನು ಹುಡುಕಿದೆ ಸಿಗಲಿಲ್ಲ ಎಂದರು. ಟ್ವಿಟ್ಟರ್‍ನ ಮಾಜಿ ಸಿಇಒ ಜಾಕ್ ಡೊರ್ಸಿ ವೆಬ್3 ಆಲೋಚನೆಯನ್ನು ಮಸ್ಕ್ ಅವರಂತೆ ಅಲ್ಲಗಳೆಯಲಿಲ್ಲ. ಬದಲಿಗೆ ಇದು ಕೊನೆಗೆ ಕೆಲವು ಉದ್ದಿಮೆ ಬಂಡವಾಳದಾರರ ಕೈಸೇರುತ್ತದೆ ಎಂಬ ಹೇಳಿಕೆ ನೀಡಿದರು. ಈ ಇಬ್ಬರು ವೆಬ್3ಯನ್ನು ಅಣಕ ಮಾಡುತ್ತಿದ್ದಂತೆ ಪ್ರತಿಕ್ರಿಯೆ ಖಾರವಾಗಿತ್ತು. ವೆಬ್3ಗೆ ಬೆಂಬಲ ನೀಡುವವರು ಹಾಗೂ ಆ ಆಲೋಚನೆ ಕುರಿತಂತೆ ಉತ್ಸಾಹಿಗಳಾಗಿರುವವರು ಅಂತಿಮವಾಗಿ ಅಂತರ್ಜಾಲದ ಅಧಿಕಾರವನ್ನು ಜನರ ಕೈಯಲ್ಲಿ ಇಡುವುದನ್ನು ಬಯಸುತ್ತಾರೆ. ಉದ್ದಿಮೆ ಬಂಡವಾಳದಾರರ ಕೈಯಲಲ್ಲ. ಅವರ ಪ್ರಕಾರ ವೆಬ್3 ಕೆಲವೇ ಕೆಲವು ಸಂಸ್ಥೆಗಳು ಅಥವಾ ಹೂಡಿಕೆದಾರರು ನಿರ್ವಹಿಸುವುದಕ್ಕಿಂತ ಹೆಚ್ಚು ಪ್ರಮುಖವಾದುದ್ದಾಗಿದೆ. ಈ ಕಾರಣದಿಂದಲೇ ಡೊರ್ಸಿಯವರ ಟ್ವೀಟ್‍ಗೆ ಹಲವರ ಸಮ್ಮತಿಯಿರಲಿಲ್ಲ. ಡೊರ್ಸಿಯವರ ಹೇಳಿಕೆ ಈ ವಿಷಯದಲ್ಲಿ ಪೂರ್ಣವಾಗಿ ತಪ್ಪೆಂದು ಹೇಳಿದರು.

ವೆಬ್3 ಆಂದೋಲನಕ್ಕೆ ಎನ್‍ಎಫ್‍ಟಿಗಳ ಬೆಳವಣಿಗೆ ಸಹ ನೆರವಾಗುತ್ತಿದೆ. ಎನ್‍ಎಫ್‍ಟಿ ಅಥವಾ ನಾನ್ ಫಂಜಿಬಲ್ ಟೋಕನ್‍ಗಳು ಕ್ರಿಪೆÇ್ಟೀಕರೆನ್ಸಿಯ ಮೂಲಕ ಖರೀದಿಸಬಹುದಾದ ಆನ್‍ಲೈನ್ ಫೈಲ್‍ಗಳು ಹಾಗೂ ಡಿಜಿಟಲ್ ಸಂಗ್ರಹಣೆಗಳು. ಹಲವಾರು ವರ್ಷಗಳಿಂದ ವೆಬ್3 ಕೇವಲ ಒಂದು ಕನಸಾಗಿಯೇ ಉಳಿದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬ್ಲಾಕ್‍ಚೈನ್ ವ್ಯವಸ್ಥೆಯ ಬಳಕೆ ವಿವಿಧ ವಲಯಗಳಲ್ಲಿ ಹೆಚ್ಚಾಗುತ್ತಿರುವುದು, ಹಲವಾರು ಸಂಸ್ಥೆಗಳು ವೆಬ್3ಗಾಗಿಯೇ ಪ್ರತ್ಯೇಕ ತಂಡಗಳನ್ನು ನಿರ್ಮಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ವೆಬ್3 ಉತ್ಸಾಹಿಗಳಿಗೆ ಇಂತಹ ಬೆಳವಣಿಗೆ ವೆಬ್3ಯ ಮೂಲ ಉದ್ದೇಶವನ್ನೇ ಅಣಕ ಮಾಡಿದಂತೆ ಕಾಣುತ್ತವೆ. ಅವರು ಬಯಸುವುದು ವೆಬ್3 ಅಂದರೆ ಫೆೀಟೋಗಳನ್ನು ಹಂಚಿಕೊಳ್ಳುವುದಾಗಲೀ, ಸ್ನೇಹಿತರೊಂದಿಗೆ ಸಂವಹನ ಮಾಡುವುದಾಗಲೀ ಅಥವಾ ಆನ್‍ಲೈನ್ ಖರೀದಿ, ಯಾವುದೂ ಸಹ ಯಾವುದೇ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುವ ದೊಡ್ಡ ಸಂಸ್ಥೆಯ ಮೂಲಕ ನಡೆಯುವುದಿಲ್ಲ. ಬದಲಿಗೆ ಇದು ಬಹುಸಂಖ್ಯೆಯಲ್ಲಿರುವ ಸ್ಪರ್ಧಾತ್ಮಕ ಸೇವೆಗಳ ಮೂಲಕ ಬ್ಲಾಕ್‍ಚೈನ್ ಮೇಲೆ ನಡೆಯುತ್ತದೆ. ಉದಾಹರಣೆಗೆ ಪ್ರತಿ ಬಾರಿ ನೀವು ಏನಾನ್ನಾದರೂ ಅಪ್‍ಲೋಡ್ ಮಾಡಿದರೆ ನೀವು ಒಂದು ಟೋಕನ್ ಪಡೆಯುತ್ತೀರಿ. ಇದರಿಂದ ನಿಮಗೆ ಮಾಲೀಕತ್ವ ದೊರೆಯುತ್ತದೆ. ಹಾಗೂ ಈ ಟೋಕನ್‍ಗಳನ್ನು ಭವಿಷ್ಯದಲ್ಲಿ ನಗದು ಹಣವನ್ನಾಗಿ ಪರಿವರ್ತನೆ ಮಾಡಿಕೊಳ್ಳಬಹುದು. ಇದರರ್ಥ ಸೃಷ್ಟಿಯಾಗುವ ಮೌಲ್ಯವನ್ನು ಮಾಲೀಕರು, ಹೂಡಿಕೆದಾರರು ಹಾಗೂ ಉದ್ಯೋಗಿಗಳ ಬದಲಾಗಿ ಜನಗಳ ನಡುವೆ ಹಂಚಿಕೊಳ್ಳಬಹುದು. ವೆಬ್3 ಅಭಿಮಾನಿಗಳಿಗೆ ಅದರ ಅಲೋಚನೆ ಬಹಳ ವರ್ಷಗಳಿಂದ ಕೇವಲ ಸಿದ್ಧಾಂತವಾಗಿತ್ತು. ಈಗ ಅದನ್ನು ನಿರ್ಮಿಸುವ ಕಾಲ ಬಂದಿದೆಯೆಂದು ಅವರ ನಂಬಿಕೆಯಾಗಿದೆ.

ವೆಬ್3 ಪೂರ್ಣವಾಗಿ ವೆಬ್2 ಅನ್ನು ಹೊರಹಾಕಲು ಸಾಧ್ಯವಿಲ್ಲ. ಆದರೆ ಬ್ಲಾಕ್‍ಚೈನ್ಆಧಾರಿತ ಸಾಮಾಜಿಕ ಜಾಲತಾಣಗಳು, ವಹಿವಾಟುಗಳು ಹಾಗೂ ವ್ಯಾಪಾರಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಬೆಳೆಯಲಿದೆ. ಫೇಸ್‍ಬುಕ್, ಟ್ವಿಟ್ಟರ್ ಹಾಗೂ ಗೂಗಲ್‍ನಂತಹ ಸಂಸ್ಥೆಗಳು ತಮ್ಮ ಸೇವೆಗಳಲ್ಲಿ ವೆಬ್3ಯನ್ನು ಸೇರಿಸಿಕೊಳ್ಳಲಿದ್ದಾರೆ. ಅಂತಹ ಕ್ರಮಗಳಿಂದ ವೆಬ್3ಯ ಮೂಲ ಉದ್ದೇಶವನ್ನು ಬುಡಮೇಲು ಮಾಡಿದಂತೆಯೂ ಆಗಬಹುದು. ೀಸ್‍ಬುಕ್ ಈಗಾಗಲೇ ಈ ನಿಟ್ಟಿನಲ್ಲಿ ಹಲವಾರು ಅಂಶಗಳನ್ನು ೀಸ್‍ಬುಕ್ ಮರುಬ್ರಾಂಡಿಂಗ್ ಆಗಿರುವ ಮೆಟಾದಲ್ಲಿ ಅಳವಡಿಸಿಕೊಂಡಿದೆ. ಆದರೆ ವೆಬ್3 ಆಲೋಚನೆಯ ನಿಜವಾದ ಬೆಂಬಲಿಗರು ೀಸ್‍ಬುಕ್‍ನಂತಹ ಸಂಸ್ಥೆಗೆ ವೆಬ್3ಯಲ್ಲಿ ಯಾವುದೇ ಜಾಗವಿಲ್ಲವೆಂದು ನಂಬಿದ್ದಾರೆ.

ವೆಬ್3 ಪೂರ್ಣವಾಗಿ ವಿಕೇಂದ್ರೀಕೃತವಾಗಿದ್ದರೆ ಸರ್ಕಾರಗಳಿಗೆ ಅದನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಹಾಗೂ ಎಷ್ಟರಮಟ್ಟಿಗೆ ಎಲ್ಲವೂ ವಿಕೇಂದ್ರೀಕೃತವಾಗಬೇಕು ಎಂಬುದನ್ನು ಸಹ ಕಂಡುಕೊಳ್ಳಬೇಕಾಗುತ್ತದೆ. ಜಗತ್ತು ಈ ದಿಕ್ಕಿನಲ್ಲಿ ಕೌತುಕದಿಂದ ನೋಡುತ್ತಿರುವಂತೆಯೇ ಈಗಾಗಲೇ ಈ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆಯಾಗುತ್ತಿದೆ. ಉದಾಹರಣೆಗೆ ಇಥೇರಿಯಂ ಹಾಗೂ ಅದರಂತೆಯೇ ಇರುವ ವಿಕೇಂದ್ರೀಕೃತ ಬ್ಲಾಕ್‍ಚೈನ್ ವೇದಿಕೆಗಳನ್ನು ಬಳಸಿಕೊಂಡು ಸದ್ಯದ ಬಿಸಿನೆಸ್ ಮಾದರಿಗಳನ್ನು ಅಡ್ಡಿಪಡಿಸುವ ವಿಕೇಂದ್ರೀಕೃತ ಆ್ಯಪ್ ಅಥವಾ ಡಿಆ್ಯಪ್‍ಗಳು ಈಗ ವೆಬ್3ಯಲ್ಲಿ ಬೆಳೆಯುತ್ತಿರುವ ಆ್ಯಪ್‍ಗಳ ಗುಂಪಾಗಿದೆ. ವೆಬ್3 ಇಂತಹ ಆ್ಯಪ್‍ಗಳಿಗೆ ವೇದಿಕೆಯಾಗುತ್ತದೆ.

ವೆಬ್3 ಈಗಷ್ಟೇ ವಿಕಾಸವಾಗುತ್ತಿದೆ. ಅದರ ಸಾಮರ್ಥ್ಯದ ಬಗ್ಗೆ ಸ್ಪಷ್ಟ ನಿಲುವುಗಳನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲದಿರಬಹುದು. ಆದರೆ ಮುಂದೊಂದು ದಿನ ಇದು ಇಡೀ ಅಂತರ್ಜಾಲವನ್ನು ನಾವು ಬಳಸುವ ರೀತಿಯನ್ನು ಪುನರ್‍ವ್ಯಾಖ್ಯಾನಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Leave a Reply

Your email address will not be published.