ಹೊಸ ಪುಸ್ತಕ

ನಮ್ದೇಕತೆ

2017-2021 ವರೆಗಿನ ಬರಹಗಳ ಸಂಗ್ರಹ

ರಾಜಾರಾಂ ತಲ್ಲೂರು

ಪುಟ: 164 ಬೆಲೆ: ರೂ.150

ಪ್ರಥಮ ಮುದ್ರಣ: 2021

ಪೆ್ರಡಿಜಿ ಮುದ್ರಣ, ಉಡುಪಿ,

ಸಂಪರ್ಕ: 9845548478

ಸಮಕಾಲೀನ ತಲ್ಲಣಗಳ ಕುರಿತು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಬರೆದಿರುವ ಲೇಖನಗಳ ಪುಸ್ತಕ ರೂಪವೇ ನಮ್ದೇಕತೆ. ಸಂಗತಿ ಯಾವುದೇ ಇರಬಹುದು ಅದರ ಬಗೆಗೆ ಅತ್ಯಂತ ಆಳವಾಗಿ, ವಿಸ್ತೃತವಾಗಿ ಲೇಖಕರು ಪರಿಚಯಿಸುತ್ತಾ ಹೋಗುತ್ತಾರೆ. ಇವರು ಹೇಳುವ ಹೊಸ, ಹೊಸ ಸಂಗತಿಗಳು ದುತ್ತೆಂದು ಎದುರಾಗಿ ಓದುಗನನ್ನು ಬೆಚ್ಚಿಬೀಳಿಸುವುದರಲ್ಲಿ ಸಂದೇಹವಿಲ್ಲ. ಬೆಚ್ಚಿ ಬೀಳಿಸುವುದರ ಜೊತೆಗೆ ಚಿಂತನೆಗೆ ಹಚ್ಚುತ್ತವೆ, ಪರಿಹಾರ ಸೂಚಿಸುತ್ತವೆ.

1232 ಕಿ.ಮೀ.

ಏಳು ಮಂದಿ ವಲಸೆ ಕಾರ್ಮಿಕರು

ಮನೆ ಸೇರಲು ಸಾಗಿದ ದೂರ

ವಿನೋದ್ ಕಾಪ್ರಿ

ಕನ್ನಡಕ್ಕೆ: ಸತೀಶ್ ಜಿ.ಟಿ.

ಪುಟ: 180 ಬೆಲೆ: ರೂ.200

ಪ್ರಥಮಮುದ್ರಣ: 2021

ಪ್ರಜೋದಯ ಪ್ರಕಾಶನ, ಹಾಸನ,

ಸಂಪರ್ಕ: 8792276742

ಕೊರೋನಾ ನಿಯಂತ್ರಣಕ್ಕಾಗಿ ಒಕ್ಕೂಟ ಸರ್ಕಾರ ರಾತ್ರೋ ರಾತ್ರಿ ಹೇರಿದ `ಲಾಕ್ಡೌನ್ಕಾರ್ಮಿಕರ ಅದರಲ್ಲೂ ವಲಸೆ ಕಾರ್ಮಿಕರ ಜೀವಜೀವನದ ಮೇಲೆ ಮಾಡಿದ ದೊಡ್ಡ ಪರಿಣಾಮದ ಕುರಿತು ಪುಸ್ತಕ

ಮಾತನಾಡುತ್ತಾ ಹೋಗುತ್ತದೆ. `ಲಾಕ್ಡೌನ್ಪರಿಣಾಮವನ್ನು ಲಕ್ಷಾಂತರ ಮಂದಿ ಅನುಭವಿಸಿದ್ದಾರೆ, ಇದರಲ್ಲಿ ಏಳು ಮಂದಿಯ ಕಥಾನಕ ಇಲ್ಲಿದೆ. ಡಾಕ್ಯುಮೆಂಟರಿ ನಿರ್ಮಾಪಕ ವಿನೋದ್ ಕಾಪ್ರಿ ಬಿಹಾರದ ಏಳು ಕಾರ್ಮಿಕರನ್ನು ಏಳು ದಿನಗಳ ಕಾಲ ಹಿಂಬಾಲಿಸಿದರು. ಇದನ್ನೇ ಮೊದಲು ಡಾಕ್ಯುಮೆಂಟರಿ ರೂಪದಲ್ಲಿ ಬಿಡುಗಡೆ ಮಾಡಿದರು.

ನಂತರ ಅಕ್ಷರ ರೂಪದಲ್ಲಿ ಕೃತಿಯಾಗಿಸಿದರು. ಪುಸ್ತಕ ಮತ್ತು ಡಾಕ್ಯುಮೆಂಟರಿ ಮೂಲಕ ಬರುವ ಸಂಭಾವನೆಯನ್ನು ಏಳು ಜನ ಕಾರ್ಮಿಕರಿಗೆ ವಿನೋದ್ ಕಾಪ್ರಿ ಹಂಚುತ್ತಿದ್ದಾರೆ.

ಬುದ್ಧಾನುಸಾಸನಂ

ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಪುಟ: 118 ಬೆಲೆ: ರೂ.110

ಪ್ರಥಮಮುದ್ರಣ: 2021

ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ, ಸಂಪರ್ಕ: 9449886390

ಪುಸ್ತಕದಲ್ಲಿ ಒಟ್ಟು 31 ಅಧ್ಯಾಯಗಳಿದ್ದು ಬುದ್ಧ ಚಳವಳಿಯಿಂದ ಹಿಡಿದು ಬೌದ್ಧ ಸಂಘ, ಅನುಭವ ಮಂಟಪ, ಹಾಗೂ ಸಂಸತ್ತುಗಳ ಪರಿಕಲ್ಪನೆ ಮತ್ತು ಕೊಡುಗೆಗಳ ಬಗ್ಗೆ ಲೇಖಕರು ಬರೆಯುತ್ತಾ ಹೋಗಿದ್ದಾರೆ. ಕುಮಾರನ ಪ್ರಶ್ನೆ ಲೇಖನವೂ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಬೌದ್ಧ ಧರ್ಮ ಎನ್ನುವುದು ವಿಸ್ಮಯ ಲೋಕ. ಲೋಕದ ಒಳಹೊಕ್ಕಿರುವ ಮೂಡ್ನಾಕೂಡು ಅವರು ತಥಾಗತನ ಪ್ರಪಂಚವನ್ನೇ ಇಲ್ಲಿ ತೆರೆದಿಟ್ಟಿದ್ದಾರೆ. ಬೌದ್ಧ ಧರ್ಮದ ಬಗ್ಗೆ ತಿಳಿಯಬೇಕೆನ್ನುವವರಿಗೆ ಪ್ರಾಥಮಿಕ ಜ್ಞಾನವನ್ನು ಪುಸ್ತಕ ನೀಡುತ್ತದೆ.

ಕದನ ಕಣ

ದೆಹಲಿ ಗಡಿಗಳಲ್ಲಿ ರೈತರೊಂದಿಗೆ

ಎಚ್.ಆರ್.ನವೀನ್ ಕುಮಾರ್

ಪುಟ: 148 ಬೆಲೆ: ರೂ.150

ಪ್ರಥಮ ಮುದ್ರಣ: 2021

ಕ್ರಿಯಾ ಮಾಧ್ಯಮ ಪ್ರೈ.ಲಿ, ಬೆಂಗಳೂರು, ಸಂಪರ್ಕ: 9036082005

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ರೈತರ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲಾಗುತ್ತಿದೆ ಎಂದು ದೇಶದ ಮೂರು ಮುಖ್ಯ ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿತು. ತಿದ್ದುಪಡಿ ದೇಶದ ಮೂಲೆ, ಮೂಲೆಯಲ್ಲಿರುವ ರೈತರನ್ನು ಬಡಿದೆಬ್ಬಿಸಿ ರಾಷ್ಟ್ರ ರಾಜಧಾನಿ ದೆಹಲಿಯಿಂದ 40 ಕಿಮೀ ದೂರದಲ್ಲಿ ಇರುವ ಸಿಂಘು ಗಡಿಯಲ್ಲಿ ಜಮಾವಣೆಯಾದ ರೈತರು ಸರ್ಕಾರದ ಯಾವ ಬೆದರಿಕೆಗೂ ಜಗ್ಗದೆ ಹೋರಾಟ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿ ಉಳಿದಿದೆ. ಸ್ವಾತಂತ್ರ್ಯ ನಂತರದಲ್ಲಿ ನಡೆದ ರೈತರ ಬೃಹತ್ ಹೋರಾಟವನ್ನು ಪ್ರತ್ಯಕ್ಷವಾಗಿ ಲೇಖಕ ನವೀನ್ ಕುಮಾರ್ ಕಟ್ಟಿಕೊಟ್ಟಿದ್ದಾರೆ. ಉತ್ತಮ ಛಾಯಾಗ್ರಾಹಕರಾಗಿರುವ ಲೇಖಕರು ಹೋರಾಟದ ಫೆÇೀಟೋಗಳನ್ನು ದಾಖಲಿಸುವ ಮೂಲಕ ಚಿತ್ರಕಾವ್ಯ ಸೃಷ್ಟಿಸಿದ್ದಾರೆ.

ಕಳ್ಳಿಗಾಡಿನ ಇತಿಹಾಸ

ಕಾದಂಬರಿ

ವೈರಮುತ್ತು

ಕನ್ನಡಕ್ಕೆ: ಮಲರ್ವಿಳಿ ಕೆ.

ಪುಟ: 267 ಬೆಲೆ: ರೂ.275

ಪ್ರಥಮಮುದ್ರಣ: 2021

ಸಾಹಿತ್ಯ ಅಕಾಡೆಮಿ,

ಸಂಪರ್ಕ: 080-22245152

ಕಾದಂಬರಿ ಕಳ್ಳಿಪಟ್ಟಿ ಎಂಬ ಹಳ್ಳಿಯಲ್ಲಿನ ಬಡ ಹಾಗೂ ಶೋಷಿತ ಜನರ ಬದುಕಿನ ಬವಣೆಯನ್ನು ಯಥಾವತ್ತಾಗಿ ಚಿತ್ರಿಸುವ ಪಾಮರರ ಕಥಾನಕ. 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಸುಮಾರು 12 ರಿಂದ 14 ಗ್ರಾಮಗಳು ಮುಳುಗಡೆಯಾಗುವ ಸಂದರ್ಭವೇ ಇಲ್ಲಿನ ಕಥಾವಸ್ತು. ತಾವು ಹುಟ್ಟಿ ಬೆಳೆದ ಊರನ್ನು ತೊರೆದು, ಗೊತ್ತು ಗುರಿ ಇಲ್ಲದೆ ಹೊರಡುವ ಜನರ ದಾರುಣ ಸ್ಥಿತಿಯನ್ನು ಕಾದಂಬರಿ ಚಿತ್ರಿಸುತ್ತದೆ. ಕಳ್ಳಿಪಟ್ಟಿ ಮುಳುಗಡೆಯಾಗುವ ಹೊತ್ತಿನಲ್ಲಿ ತನ್ನ ಮನೆಯ ಗೋಡೆಯ ಮಣ್ಣನ್ನು ಒಂದು ಹಿಡಿ ಬಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಗೋಡೆ ಕುಸಿದು ಮರಣವನ್ನಪ್ಪುವ ದೃಶ್ಯ ಓದುಗರ ಹೃದಯ ವನ್ನು ಹಿಂಡುತ್ತದೆ. ಕಾದಂಬರಿ ವ್ಯವಸ್ಥೆಯ ಅಮಾನುಷ ಕೌರ್ಯವನ್ನು ತಣ್ಣಗೆ ದಾಟಿಸುತ್ತದೆ.

ವಚನ ಪ್ರಶ್ನೋತ್ತರ

ಓದುಗರ ವಚನ ಸಂಬಂಧಿ ಪ್ರಶ್ನೆಗಳಿಗೆ ಉತ್ತರಗಳು

ಪೆ್ರ..ಎಲ್.ನಾಗಭೂಷಣಸ್ವಾಮಿ

ಪುಟ: 112 ಬೆಲೆ: ರೂ.110

ಪ್ರಥಮ ಮುದ್ರಣ: 2021

ಚಿಂತನ ಚಿತ್ತಾರ ಪ್ರಕಾಶನ, ಮೈಸೂರು, ಸಂಪರ್ಕ: 9945668082

ಶರಣ ಸಾಹಿತ್ಯ ಪರಿಷತ್ತು ಹೊರತರುವ ಮಹಾಮನೆ ಮಾಸಪತ್ರಿಕೆಯಲ್ಲಿ ಎರಡು ವರ್ಷಗಳ ಕಾಲ ಪ್ರತಿ ತಿಂಗಳು ವಚನ ಪ್ರಶ್ನೋತ್ತರ ಎನ್ನುವ ಅಂಕಣಕ್ಕೆ ಬರೆದ ಉತ್ತರಗಳ ಗುಚ್ಛವೇ ಪುಸ್ತಕ. 12ನೇ ಶತಮಾನದಲ್ಲಿ ಬಸವಾದಿ ಶರಣರು ಬರೆದ ಸಾವಿರಾರು ವಚನಗಳು, ಅದರ ಅರ್ಥದ ಬಗ್ಗೆ ಈಗಲೂ ಓದುಗರಿಗೆ ಕುತೂಹಲ ಇದ್ದೇ ಇದೆ. ಪುಸ್ತಕದಲ್ಲಿ ಓದುಗರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಿರುವ ಲೇಖಕರು ಹೊಸ ಸಂಶೋಧನಾ ಮಾರ್ಗವನ್ನೇ ಹುಟ್ಟು ಹಾಕಿದ್ದಾರೆ. ಇಲ್ಲಿನ ಉತ್ತರಗಳನ್ನು ಓದುತ್ತಾ ಹೋದರೆ ವಚನ ಜಗತ್ತಿನ ವಿಸ್ತಾರ, ದಿಗ್ಭ್ರಮೆ ಮೂಡಿಸುತ್ತದೆ.

ಒಲವೆಂಬ ಮಾಯೆ

ಪ್ರಬಂಧಗಳು

ವೆಂಕಟೇಶ ಮಾಚಕನೂರ

ಪುಟ: 163 ಬೆಲೆ: ರೂ.130

ಪ್ರಥಮ ಮುದ್ರಣ: 2021

ಸಪ್ನ ಬುಕ್ ಹೌಸ್, ಬೆಂಗಳೂರು,

ಸಂಪರ್ಕ: 080- 40114455

ಪುಸ್ತಕ ಲೇಖಕರ ಮೂರನೇ ಪ್ರಬಂಧ ಸಂಕಲನ. ಇಲ್ಲಿ ಲಲಿತ ಪ್ರಬಂಧಗಳು ಸೇರಿದಂತೆ ಗಂಭೀರ ವಿಷಯಗಳ ಕುರಿತೂ ಲೇಖಕರು ಚರ್ಚೆ ನಡೆಸಿದ್ದಾರೆ. ಅಲ್ಲದೇ ಕೀನ್ಯಾ ದೇಶದ ಪ್ರಸಿದ್ದ ಚಿಂತಕ ಗೂಗಿ ವಾ ಥಿಯಾಂಗ್ ಅವರ ಒಂದು ಪ್ರಬಂಧವನ್ನು ಕನ್ನಡಕ್ಕೆ ಇಳಿಸಿದ್ದಾರೆ. ಗಂಭೀರ ವಿಷಯಗಳನ್ನು ಅತ್ಯಂತ ಸುಲಲಿತವಾಗಿ ಬರೆದುಕೊಂಡು ಹೋಗಿರುವ ಲೇಖಕರು ಒಂದಷ್ಟು ಪ್ರಬಂಧಗಳಲ್ಲಿ ಹೊಸಾ ಹೊಳಹುಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಭಾಷೆ, ಸಂಸ್ಕೃತಿ ಹಾಗೂ ಕಲಿಕಾ ಮಾಧ್ಯಮದ ಬಗ್ಗೆ ಹೆಚ್ಚು ಉಲ್ಲೇ ಖಿಸಿರುವುದು ಪುಸ್ತಕದ ಗಮನಾರ್ಹ ಸಂಗತಿ.

ದೇವರ ಗೂಳಿ

ಕವನ ಸಂಕಲನ

ಪಿ.ಆರ್.ವೆಂಕಟೇಶ್

ಪುಟ: 68 ಬೆಲೆ: ರೂ.80

ಪ್ರಥಮಮುದ್ರಣ: 2020

ದುಡಿಮೆ ಪ್ರಕಾಶನ, ಬಳ್ಳಾರಿ,

ಸಂಪರ್ಕ: 9449434416

ಕವಿ ಪಿ.ಆರ್.ವೆಂಕಟೇಶ್ ಅವರ ಸಂಕಲನದಲ್ಲಿ ಇರುವ ಕವಿತೆಗಳು ಕಳೆದ ಮೂರು ದಶಕಗಳಲ್ಲಿ ಭಾರತ ದೇಶ ಅನುಭವಿಸಿದ ಸಂಕಷ್ಟದ ದಿನಚರಿಗಳನ್ನು ದಾಖಲಿಸುತ್ತವೆ. ಗ್ಯಾಟ್ ಒಪ್ಪಂದದಿಂದ ಹಿಡಿದು ಇತ್ತೀಚಿನ ಕೊರೋನಾ ಕಾಲದ ತನಕ ಜನಸಾಮಾನ್ಯನ ಬವಣೆ ಹಾಗೂ ನಮ್ಮದೆ ನೆಲದ ಜನರ ಬಗೆಗೆ ಪ್ರಭುತ್ವ ಹೊಂದಿರುವ ಕ್ರೌರ್ಯ, ಅಮಾನವೀಯ ದೌರ್ಜನ್ಯ, ಜನಮಾನಸದ ದುಗುಡ ದುಮ್ಮಾನ, ಆಕ್ರಂದನ, ನಿಟ್ಟುಸಿರನ್ನು ಇಲ್ಲಿನ ಕವಿತೆಗಳು ಸಮರ್ಥವಾಗಿ ದಾಖಲಿಸುತ್ತವೆ. ಅರ್ಥಪೂರ್ಣ ಉಪಮೆ, ರೂಪಕ, ಪ್ರತಿಮೆಗಳಿಂದ ಹಾಗೂ ಸಹಜ ಲಯಗಾರಿಕೆಯಿಂದ ಇಲ್ಲಿನ ಕವಿತೆಗಳು ಓದುಗರಿಗೆ ಆಪ್ತವೆನಿಸುತ್ತವೆ ಎಂದು ಬೆನ್ನುಡಿಯಲ್ಲಿ ಎಂ.ಡಿ.ಒಕ್ಕುಂದ ಹೇಳಿದ್ದಾರೆ.

ಹಸಿರು ಟಾವೆಲ್

ರೈತನೊಬ್ಬನ ಜೀವನ ಕಥನ

ಟಿ.ಎಸ್.ಗೊರವರ

ಪುಟ: 108 ಬೆಲೆ: ರೂ.120

ಪ್ರಥಮಮುದ್ರಣ: 2021

ಸಂಗಾತ ಪುಸ್ತಕ, ಗದಗ,

ಸಂಪರ್ಕ: 9341757653

ಕೊಡ್ಲೆಪ್ಪ ಗುಡಿಮನಿ ಎನ್ನುವ ರೈತರೊಬ್ಬರ ಜೀವನಗಾಥೆಯೇ ಪುಸ್ತಕ. ಶ್ರೀಸಾಮಾನ್ಯನ ಜೀವನ ಚರಿತ್ರೆ ದಾಖಲು ಮಾಡಲಾಗಿದೆ ಎನ್ನು ವುದು ಹೆಗ್ಗಳಿಕೆ. ಲೇಖಕರಾದ ಗೊರವರ ಅವರು ತಮ್ಮ ಬಾಲ್ಯದಿಂದ ನೋಡಿದ ಕೊಡ್ಲೆಪ್ಪ ಅವರನ್ನು ಮಾತನಾಡಿಸುತ್ತಾ ದಾಖಲು ಮಾಡಿ ಕೊಂಡ ಅವರ ಜೀವನದ ಯಥಾವತ್ ಬರಹಗಳು ಇವು. ಕೂಡ್ಲೆಪ್ಪನವರ ಬದುಕಿನ ಘಟನೆಗಳ ಮೂಲಕ ಉತ್ತರ ಕರ್ನಾಟಕ ಭಾಗದ ರೈತರ ಕಥಾನಕ ವೊಂದು ಓದುಗರ ಮಡಿಲಿಗೆ ಬಿದ್ದಂತೆ ಆಗಿದೆ.

ಚಿಂತನಾಂಕಣ

ಅಂಕಣ ಬರಹಗಳು

ಸಂಕಮ್ಮ ಜಿ. ಸಂಕಣ್ಣನವರ

ಪುಟ: 176 ಬೆಲೆ: ರೂ.150

ಪ್ರಥಮಮುದ್ರಣ: 2021

ಸಮೃದ್ಧಿ ಪ್ರಕಾಶನ, ಬ್ಯಾಡಗಿ,

ಸಂಪರ್ಕ: 9986410317

ಲೇಖಕಿ ಸಂಕಮ್ಮ ಅವರು ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳನ್ನು ಅಚ್ಚುಕಟ್ಟಾಗಿ ಓದುಗರಿಗೆ ತಲುಪಿಸಿದ್ದಾರೆ. ಇದು ನನ್ನ ಚಿಂತನೆ ಎಂದು ಎಲ್ಲಿಯೂ ಹೇರಿಕೆ ಮಾಡದೆ ಅತ್ಯಂತ ಸಹಜವಾಗಿ, ಎಂಥಹವರಿಗೂ ಅರ್ಥವಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ. ಅಲ್ಲಲ್ಲಿ ತಮ್ಮ ಕುಟುಕು ಮಾತಿನಿಂದ ಲೇಖಕಿಯರ ಬಗೆಗೆ ಸಾಹಿತ್ಯ ವಲಯದಲ್ಲಿ ಇರುವ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಬಾಳೆಕಾಯಿ ಸೋತಾಗ

ಊರುಗೋಲಾದ `ಬಾಕಾಹು

ಮನೆಮಟ್ಟದಲ್ಲಿ ಬಾಳೆಕಾಯಿ ಪುಡಿ

ತಯಾರಿ ಅಭಿಯಾನ

ಶ್ರೀ ಪಡ್ರೆ

ಪುಟ: 140 ಬೆಲೆ: ರೂ.150

ಪ್ರಥಮ ಮುದ್ರಣ: 2021

ಕೃಷಿ ಮಾಧ್ಯಮ ಕೇಂದ್ರ, ಫಾರ್ಮರ್ ಫಸ್ಟ್ ಟ್ರಸ್ಟ್, ಬೆಂಗಳೂರು, ಸಂಪರ್ಕ: 9886856364

ಪತ್ರಕರ್ತ, ಕೃಷಿಕರಾಗಿ ಗುರುತಿಸಿಕೊಂಡಿ ರುವ ಶ್ರೀಪಡ್ರೆ ಅವರು ಸದಾ ಒಂದಿಲ್ಲೊಂದು ಪ್ರಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ಪ್ರಯೋಗಶೀಲರು. ಕೃಷಿಯ ಬಗ್ಗೆ ಆಸಕ್ತರಿರುವ ಒಂದು ವಾಟ್ಸಪ್ ಗುಂಪಿನಲ್ಲಿ ಬಾಳೆಕಾಯಿಯ ಬಗ್ಗೆ ಆರಂಭವಾದ ಚರ್ಚೆ ಯಾವ ಮಟ್ಟದಲ್ಲಿ ಬೆಳೆಯಿತು ಹಾಗೂ ಯಾವ ರೀತಿಯ ಹೊಸಾ ಸಾಧ್ಯತೆಗಳನ್ನು ಹುಟ್ಟು ಹಾಕಿತು ಎನ್ನುವುದೇ ಇಲ್ಲಿನ ಕಥಾನಕ. ಬಾಕಾಹು ಎಂದರೆ ಬಾಳೆಕಾಯಿ ಹುಡಿ ಎಂದರ್ಥ. ಮನೆಯ ಸದಸ್ಯರೇ ಸೇರಿಕೊಂಡು ತಯಾರಿಸಬಹುದಾದ, ಉತ್ತಮ ಆದಾಯದ ಮೂಲವಾದ ಪೌಷ್ಟಿಕಾಂಶಯುಕ್ತ ಉತ್ಪನ್ನ, ಅದರಿಂದ ತಯಾರಿಸಲ್ಪಡುವ ಖಾದ್ಯ, ಮಾರುಕಟ್ಟೆ ಸೌಲಭ್ಯ ಎಲ್ಲವನ್ನು ವಿವರಿಸಲಾಗಿದೆ.

ಪರದೇಸಿ ಊರಿನ ದಡಕ್ಲಾಸಿ ಬಸ್ಸು ಮತ್ತು ಇತರ ಕತೆಗಳು

ಸಿಂದುವಳ್ಳಿ ಸುಧೀರ

ಪುಟ: 128 ಬೆಲೆ: 105

ಪ್ರಥಮಮುದ್ರಣ: 2019

ಉಷಾ ಪ್ರಕಾಶನ, ಮೈಸೂರು,

ಸಂಪರ್ಕ: 7353863819

ಕಥಾ ಸಂಕಲನದಲ್ಲಿ ಒಟ್ಟು ಆರು ಕತೆಗಳಿವೆ. ಲವವಲಿಕೆಯ ನಿರೂಪಣೆಯಿಂದ ಎಲ್ಲಾ ಕತೆಗಳು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತವೆ. ಹೊಸತಲೆಮಾರಿನ ಸುಧೀರ ಅವರು ಬುದ್ಧ, ಬಸವ, ಅಂಬೇಡ್ಕರ್, ಹಾಗೂ ಗಾಂಧಿಯ ತತ್ವಗಳಿಂದ ಪ್ರಭಾವಿತರಾಗಿರುವುದು ತಮ್ಮ ಕತೆಗಳಲ್ಲಿ ಕಾಣಿಸುತ್ತಾರೆ. ಇದು ಇವರ ಚೊಚ್ಚಲ ಕಥಾ ಸಂಕಲನ, ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಲವಲವಿಕೆಯ ನಿರೂಪಣೆ, ಅದಕ್ಕೆ ಹೊಂದಿಕೊಂಡಂತೆ ಇರುವ ಸಂಭಾಷಣೆ ಇವರ ಕತೆಗಳಲ್ಲಿ ಕಾಣಸಿಗುತ್ತದೆ.

ಮೌನಯಾನ

ಕಾದಂಬರಿ

ರಾಹು ಅಲಂದಾರ

ಪುಟ: 176 ಬೆಲೆ: ರೂ.160

ಪ್ರಥಮ ಮುದ್ರಣ: 2020

ನಿರಂತರ ಪ್ರಕಾಶನ, ಗದಗ,

ಸಂಪರ್ಕ: 9880687537

ಸಮಾಜಕ್ಕೆ ಕಂಟಕವಾಗಿರುವ ಆತ್ಮಹತ್ಯೆ, ಬಹುಪತ್ನಿತ್ವ ಪಿಡುಗು ಹೀಗೆ ಒಂದಷ್ಟು ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವ ಹಿನ್ನೆಲೆಯಲ್ಲಿ ಕಾದಂಬರಿಯ ಪಾತ್ರಗಳು ಹೋರಾಡುತ್ತವೆ. ಗೌರವಾನ್ವಿತ ಮನೆಯಲ್ಲಿ ಜನಿಸಿದ ಕಥಾನಾಯಕನ ಜೀವನ ಶೈಲಿ ಮತ್ತು ಅವನು ಮಾಡುವ ಅಪರಾಧ ಹೇಗೆ ಇಡೀ ಮನೆತನವನ್ನೇ ನಾಶಗೊಳಿಸುತ್ತದೆ. ಒಬ್ಬ ವ್ಯಕ್ತಿಯ ತಪ್ಪಿನಿಂದ ಐತಿಹ್ಯವುಳ್ಳ ಮನೆತನದ ಗೌರವ ಬೀದಿಪಾಲಾಗುವ ರೀತಿಯನ್ನು, ವಿಷವರ್ತುಲದಲ್ಲಿ ಸಿಲಿಕಿದ ಕಥಾನಾಯಕನ ಸ್ಥಿತಿಗತಿ ಕುರಿತಾಗಿ ಕಾದಂಬರಿಯನ್ನು ಕಟ್ಟಿಕೊಡಲಾಗಿದೆ.

Leave a Reply

Your email address will not be published.