ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…

ಸಂಪಾದಕೀಯ

ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…
ಸಂಪಾದಕೀಯ

ಇದೀಗ ಐದನೇ ವರ್ಷದ ಮೊದಲ ಸಂಚಿಕೆಯನ್ನು ನಿಮ್ಮ ಕೈಯಲ್ಲಿ ಇರಿಸಿದ ಪುಳಕ ನನ್ನೊಳಗೆ ತೊನೆದಾಡುತ್ತಿದೆ. ಜೊತೆಗೆ ತೇಲಿಬರುವ ನೆನಪಿನ ದೋಣಿಯಲ್ಲಿ ದೂರತೀರ ತಲುಪುವ ತವಕ. ಜಗತ್ತನ್ನು ಸಾಕಷ್ಟು ಸಮೀಪದಿಂದ ದಿಟ್ಟಿಸುವ ನಮ್ಮ ಬಳಗದ ಗೆಳೆಯರೊಬ್ಬರಿಗೆ ನಾಲ್ಕು ವರ್ಷಗಳ ಹಿಂದೆ ಬಿತ್ತೊಂದು ಕನಸು; ಆ ಕನಸಿನಲ್ಲಿ ಕಂಡದ್ದು ಬೀಗಬಿದ್ದ ಕನ್ನಡಿಗರ ಮನಸು. ಬೆಚ್ಚಿಬಿದ್ದ ಅವರು ಕಳೆದುಹೋದ ಬೀಗದಕೈ ಹುಡುಕುವ ಹುಚ್ಚು ಹಿಡಿಸಿಕೊಂಡರು. ಹೇಗಾದರೂ ಮಾಡಿ ಕನ್ನಡಿಗರ ಮನಕ್ಕೆ ಬಿದ್ದ ಬೀಗ ಬಿಚ್ಚುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾಂಭಿಸುವ ಹಠ ಅವರದು. […]

ಮೂಢನಂಬಿಕೆ ಮತ್ತು ಕನ್ನಡ ವಿಮರ್ಶೆ

-ಎನ್. ಬೋರಲಿಂಗಯ್ಯ

ಮೂಢನಂಬಿಕೆ ಮತ್ತು ಕನ್ನಡ ವಿಮರ್ಶೆ
-ಎನ್. ಬೋರಲಿಂಗಯ್ಯ

ಚರ್ಚೆಯಲ್ಲಿ ಭಾಗವಹಿಸಿರುವವರೆಲ್ಲ ಬಹುತೇಕ ಅನ್ಯಶಿಸ್ತುಗಳ ಪರಿಣತರಾಗಿದ್ದು ಸಾಮಾಜಿಕ ಕಳಕಳಿಯ ವಿಚಾರವಂತರಾಗಿರುವುದರಿAದ ನಮ್ಮ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಈ ದಮನಕಾರಿ ಮೌಢ್ಯದ ವಿರುದ್ಧ ನಡೆಯುತ್ತ ಬಂದಿರುವ ಹೋರಾಟವನ್ನು ಸಹಜವಾಗಿಯೇ ಗಮನಿಸುವುದಕ್ಕಾಗಿಲ್ಲ! –ಎನ್. ಬೋರಲಿಂಗಯ್ಯ 2021 ಜನವರಿ ಸಮಾಜಮುಖಿ ಸಂಚಿಕೆಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ ತ್ರಾಸು–ಕಟ್ಟಳೆ ರೂಪಕದ ಮೂಲಕ ಕನ್ನಡ ವಿಮರ್ಶೆಯ ಅಂಕಣದ ಶುರುವಾತಿಗೊಂದು “ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?” ಎಂಬ ಪ್ರಶ್ನೆಯ ಮೂಲಕ ಮುನ್ನುಡಿ ಬರೆದಿದ್ದರು. ದುರದೃಷ್ಟವಶಾತ್ ಅದು ಯಾಕೋ ಏನೋ ತನ್ನ ನಿರಂತರತೆಯನ್ನು ಕಾದುಕೊಂಡಿಲ್ಲ. ಕಾರಣ ಏನೇ ಇರಲಿ […]

ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ

-ನಾ ದಿವಾಕರ

ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ
-ನಾ ದಿವಾಕರ

ವರ್ಷಕ್ಕೊಮ್ಮೆ ದೇವರಿಗೆ ಹರಕೆ ಹೊತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಜನಸಮುದಾಯಗಳು ಈಗ ಹೊಸ ಪೂಜಾ ವಿಧಾನಗಳು, ವ್ರತಾಚರಣೆಗಳು ಮತ್ತು ಹೋಮಗಳಲ್ಲಿ ಸಾಂತ್ವನ ಕಾಣುತ್ತಿವೆ. ಹಾಗಾಗಿಯೇ ವಾಸ್ತುಹೋಮ, ಗಣಹೋಮ, ಸತ್ಯನಾರಾಯಣ ಪೂಜೆಯಂತಹ ಮೌಢ್ಯಾಚರಣೆಯ ಸಾಧನಗಳು ಗ್ರಾಮ ಗ್ರಾಮಕ್ಕೂ ವ್ಯಾಪಿಸುತ್ತಿವೆ. –ನಾ ದಿವಾಕರ ಇತಿಹಾಸ ಕಾಲದಿಂದಲೂ ಮಾನವ ಸಮಾಜದಲ್ಲಿ ಮೌಢ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಂಡೇ ಬಂದಿದೆ. ಮೂಲತಃ ಮನುಷ್ಯ ತನ್ನ ಬದುಕಿನಲ್ಲಿ ತಾನು ಸ್ವಾನುಭವದಿಂದ ಅಥವಾ ಅನುಭಾವದಿಂದ ಕಂಡುಕೊಳ್ಳಲಾಗದ ವಿದ್ಯಮಾನಗಳನ್ನು ಅತೀತ ಶಕ್ತಿಗಳಲ್ಲಿ ಕಾಣಲು ಪ್ರಯತ್ನಿಸುತ್ತಾನೆ. ಹಾಗೆಯೇ ತನ್ನ […]

ಸಮಾಜದಲ್ಲಿ ಬೇರುಬಿಟ್ಟ ಮೌಢ್ಯಗಳು

-ಎಲ್.ಚಿನ್ನಪ್ಪ, ಬೆಂಗಳೂರು

ಸಮಾಜದಲ್ಲಿ ಬೇರುಬಿಟ್ಟ ಮೌಢ್ಯಗಳು
-ಎಲ್.ಚಿನ್ನಪ್ಪ, ಬೆಂಗಳೂರು

ಮನುಷ್ಯನ ಬದುಕು ಅವನ ಹಸ್ತರೇಖೆಗಳಂತೆ ನಡೆಯುವುದಿಲ್ಲ, ಅಥವಾ ಜ್ಯೋತಿಷಿಗಳು ಉರುಳಿಸುವ ದಾಳಗಳಂತೆ ನಡೆಯುವುದಿಲ್ಲ. ಜೀವನವನ್ನು ಆತ್ಮವಿಶ್ವಾಸದಿಂದ, ಸ್ವಸಾಮಥ್ರ್ಯದಿಂದ ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಬೇಕೇ ಹೊರತು ನಂಬಿಕೆ ಹಾಗು ಅದೃಷ್ಟ ಬಲದಿಂದಲ್ಲ. –ಎಲ್.ಚಿನ್ನಪ್ಪ, ಬೆಂಗಳೂರು ಇಂದಿನ ಮುಂದುವರೆದ ಆಧುನಿಕ ಯುಗದಲ್ಲೂ ಕೆಲವೊಂದು ಅವೈಜ್ಞಾನಿಕ ಆಚರಣೆಗಳು ಅಸ್ತಿತ್ವದಲ್ಲಿದ್ದು, ಮೌಢ್ಯದ ರಾಢಿಯಲ್ಲಿ ಇಂದು ವೈಚಾರಿಕತೆ ಮುದುಡಿದೆ. ಸಂಕೀರ್ಣವಾದ ಸಮಾಜದಲ್ಲಿ ಮೌಢ್ಯದ ಬೇರುಗಳು ಆಳವಾಗಿವೆ. ಜನರಲ್ಲಿ ಮೌಢ್ಯದ ಬಗ್ಗೆ ಸಾಕಷ್ಟು ಅರಿವು ಇದ್ದರೂ ಕೆಲವೊಂದು ಅವೈಜ್ಞಾನಿಕ ನಂಬಿಕೆಗಳಿಗೆ ವಧಾ ಪ್ರಾಣಿಗಳಂತೆ ಜೋತು ಬೀಳುವವರೇ ಹೆಚ್ಚು. […]

ಶಿಕ್ಷಣ ವ್ಯವಸ್ಥೆ ಬದಲಾಗಬೇಕು

-ನಟೇಶ್ ಬಿ. ದೊಡ್ಡಹಟ್ಟಿ

ಶಿಕ್ಷಣ ವ್ಯವಸ್ಥೆ ಬದಲಾಗಬೇಕು
-ನಟೇಶ್ ಬಿ. ದೊಡ್ಡಹಟ್ಟಿ

ಮೂಢ ನಂಬಿಕೆಗಳನ್ನು ಬೇರು ಸಹಿತ ಕಿತ್ತೆಸೆಯಲು ಕಾನೂನು ಬಲ ಬಹುಮುಖ್ಯ. ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಅರಿವು ಮೂಡಿಸುವಂತಹ ಪಠ್ಯ ಸದೃಢವಾಗಿರಬೇಕು. –ನಟೇಶ್ ಬಿ. ದೊಡ್ಡಹಟ್ಟಿ ನಮ್ಮ ಸಮಾಜದಲ್ಲಿರುವ ಮೂಢನಂಬಿಕೆಗಳು ಅವೈಜ್ಞಾನಿಕ ಆಚರಣೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಅನಾಹುತಗಳು, ಅವಘಡಗಳು, ಅನ್ಯಾಯ, ಮೋಸ, ವಂಚನೆ, ಶೋಷಣೆ ಇತ್ಯಾದಿಗಳ ಬಗ್ಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸಬೇಕು. ಅಂತಹ ಪಠ್ಯ ನಮ್ಮ ಮಕ್ಕಳಿಗೆ ಇರಬೇಕು. ಇಂತಹ ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ಪಠ್ಯಗಳಲ್ಲಿ ಅಳವಡಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ […]

ಮೂಢನಂಬಿಕೆಗಳ ವ್ಯಾಖ್ಯಾನ ಮಾಡುವವರು ಯಾರು?

ಕಾನೂನು ಹಾಗೂ ಮೂಢನಂಬಿಕೆಗಳು ಅವಳಿ–ಜವಳಿಗಳಂತೆ. ಮೂಢನಂಬಿಕೆ ಎಂಬ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ. ಸಾವಿರಾರು ವರ್ಷಗಳಿಂದಲೂ ಎಲ್ಲಾ ಜಾತಿ ಹಾಗೂ ಧರ್ಮೀಯರಲ್ಲಿ ಪರಂಪರಾಗತವಾಗಿ ನಡೆದು ಬರುತ್ತಿರುವಂತಹ ಅನೇಕ ಆಚಾರ–ವಿಚಾರಣೆಗಳನ್ನು ಪರಾಮರ್ಶೆಗೆ ಒಳಪಡಿಸಬೇಕು. ಅದಕ್ಕೂ ಮೊದಲು ಮೂಢನಂಬಿಕೆಗಳು ಯಾವುವು ಎಂಬ ವಿಮರ್ಶೆಗಳಾಗಬೇಕು. ಕೇವಲ ದೈವೀಕ ಆಚರಣೆಗಳು–ಪ್ರಾಣಿ ಬಲಿ ಮುಂತಾದ ಕಾರ್ಯಕ್ರಮಗಳು ಮಾತ್ರ ಮೂಢನಂಬಿಕೆ ವ್ಯಾಪ್ತಿಯೊಳಗೆ ಬರುತ್ತವೆಯೋ…? ಹಾಗಿದ್ದರೆ ವಂಶಪಾರಂಪರ್ಯ ನಡೆದುಕೊಂಡು ಬರುತ್ತಿರುವ ಆಚರಣೆಗಳನ್ನು ಕಾನೂನು ಮೂಲಕ ಬಲಾತ್ಕಾರವಾಗಿ ನಿಲ್ಲಿಸುವುದು ಅಸಾಧ್ಯದ ಮಾತು. ಭಾರತ ದೇಶ ವಿಭಿನ್ನ ಸಂಸ್ಕøತಿಯ, ವಿಭಿನ್ನ […]

ಅಭಿವೃದ್ಧಿಯಲ್ಲಿ ಕೇರಳ ಏಕೆ ಮುಂದಿರುತ್ತದೆ?

-ಡಾ.ಟಿ.ಆರ್.ಚಂದ್ರಶೇಖರ

ಅಭಿವೃದ್ಧಿಯಲ್ಲಿ ಕೇರಳ ಏಕೆ ಮುಂದಿರುತ್ತದೆ?
-ಡಾ.ಟಿ.ಆರ್.ಚಂದ್ರಶೇಖರ

ಈಗ ನಮ್ಮ ಮುಂದೆ ಸ್ಪಷ್ಟವಾದ ಆಯ್ಕೆಯಿದೆ. ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಗತ್ಯವಾಗಿರುವುದು ಕೇರಳ ಅಭಿವೃದ್ಧಿ ಮಾದರಿಯೇ ವಿನಾ ಗುಜರಾತ್ ಅಥವಾ ಉತ್ತರ ಪ್ರದೇಶ ಮಾದರಿಯಲ್ಲ! –ಡಾ.ಟಿ.ಆರ್.ಚಂದ್ರಶೇಖರ ಒಕ್ಕೂಟ ಸರ್ಕಾರವಾಗಲಿ ಅಥವಾ ಅದರ ಅಧೀನದ ಯಾವುದೇ ಸಂಸ್ಥೆಯಾಗಲಿ ಪ್ರಕಟಿಸುವ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿ ಸೂಚಿ/ಸೂಚ್ಯಂಕದಲ್ಲಿ ಕೇರಳ ಏಕೆ ಮೊದಲ ಸ್ಥಾನದಲ್ಲಿರುತ್ತದೆ? ಅಭಿವೃದ್ಧಿ ಸೂಚಿಗಳಲ್ಲಿ ಮೊದಲ ಸ್ಥಾನ; ದುಸ್ಥಿತಿ ಸೂಚಿಗಳಲ್ಲಿ ಕಡೆಯ ಸ್ಥಾನ. ಏನಿದರ ರಹಸ್ಯ? ಇಂದು ಗುಜರಾತ್ ಅಭಿವೃದ್ಧಿ ಮಾದರಿಯನ್ನು ರಾಷ್ಟ್ರಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಒತ್ತಾಯ ಮಾಡಲಾಗುತ್ತದೆ. ಆದರೆ […]

ಅಗಲಿದ ಗೆಳತಿಯ ಅಳಿಯದ ನೆನಪುಗಳು

-ಪದ್ಮಾ ಶ್ರೀರಾಮ

ಅಗಲಿದ ಗೆಳತಿಯ ಅಳಿಯದ ನೆನಪುಗಳು
-ಪದ್ಮಾ ಶ್ರೀರಾಮ

ಇತ್ತೀಚೆಗೆ ನಮ್ಮನ್ನು ಅಗಲಿದ ಪ್ರಿಯ ಗೆಳತಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರೊಂದಿಗಿನ ನನ್ನ ನೆನಪುಗಳು ಅರ್ಧ ಶತಮಾನಕ್ಕೂ ಹಿಂದಕ್ಕೆ ಸರಿಯುತ್ತವೆ. ನೆನಪಿನಾಳದಿಂದ ಮೂಡಿ ಬರುವ ಸ್ಮøತಿ ಚಿತ್ರಗಳಲ್ಲಿ ಅಗತ್ಯವಾಗಿ ತೇಜಸ್ವಿಯವರೂ ಕಾಣಿಸಿಕೊಳ್ಳುತ್ತಾರೆ. –ಪದ್ಮಾ ಶ್ರೀರಾಮ ನನ್ನ ಪತಿ ಪ್ರೊ.ಬಿ.ಎನ್.ಶ್ರೀರಾಮ ಮತ್ತು ತೇಜಸ್ವಿಯವರ ಸ್ನೇಹ ಸಂಬಂಧಕ್ಕೆ, ನಮ್ಮ ಮದುವೆಯ ನಂತರ ನಾನೂ ಸೇರ್ಪಡೆಯಾದೆ. ನಮ್ಮ ಮೊದಲ ಭೇಟಿ ಎಂದರೆ ಐವತ್ತು ವರ್ಷಗಳ ಹಿಂದಿನ ಕಾಲಮಾನದ ಜನಜೀವನದ ಒಂದು ಜಲಕ್ ಎನ್ನಬಹುದು. ಒಂದು ದಿನ ನಾವಿಬ್ಬರೂ ಮೈಸೂರಿಂದ ಹೊರಟು ಜನ್ನಾಪುರ […]

ಸೌಂದರ್ಯ ಸ್ಪರ್ಧೆಗಳ ಗುರಿ ಮಹಿಳಾ ಸಬಲೀಕರಣವೇ?

-ಡಾ.ಕಾವ್ಯಶ್ರೀ ಎಚ್.

ಸೌಂದರ್ಯ ಸ್ಪರ್ಧೆಗಳ ಗುರಿ ಮಹಿಳಾ ಸಬಲೀಕರಣವೇ?
-ಡಾ.ಕಾವ್ಯಶ್ರೀ ಎಚ್.

ಈ ಸೌಂದರ್ಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಹಿಂದಿನ ಹುನ್ನಾರವೇನು? ನಿಜಕ್ಕೂ ನಮಗೆ ಈ ಸ್ಪರ್ಧೆಗಳ ಅಗತ್ಯವಿದೆಯೇ? ಇವುಗಳಿಂದ ಸಮಾಜಕ್ಕಾಗುವ ಮಹದುಪಕಾರವೇನು? ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುವ ಈ ಸ್ಪರ್ಧೆಗಳು ಮಾಡುತ್ತಿರುವುದಾದರೂ ಏನನ್ನು? –ಡಾ.ಕಾವ್ಯಶ್ರೀ ಎಚ್. ಭಾರತ ಇಪ್ಪತ್ತೊಂದು ವರ್ಷಗಳ ನಂತರ ಮತ್ತೆ ಭುವನ ಸುಂದರಿ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದೆ. ಡಿಸೆಂಬರ್ 12ರಂದು ಇಸ್ರೇಲ್‍ನ ದಕ್ಷಿಣ ಈಲಿಯಟ್‍ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ 70ನೇ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪಂಜಾಬ್ ಮೂಲದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ […]

ಮತಾಂತರದ ಆದರದಪ್ಪುಗೆ ಔದಾರ್ಯದ ಉರುಲಾಗದಿರಲಿ!

-ಬಿದರಹಳ್ಳಿ ವಾಸುದೇವ ಮೂರ್ತಿ

ಮತಾಂತರದ ಆದರದಪ್ಪುಗೆ ಔದಾರ್ಯದ ಉರುಲಾಗದಿರಲಿ!
-ಬಿದರಹಳ್ಳಿ ವಾಸುದೇವ ಮೂರ್ತಿ

ಮತಾಂತರವು ಅಮುಖ್ಯ ಪರಿಹಾರೋಪಾಯ ಆಗಬೇಕೇ ವಿನಾ ಉತ್ತಮ ಪರಿಹಾರವಾಗಬಾರದು. ಯಾವೊಬ್ಬ ಭಾರತೀಯ ವ್ಯಕ್ತಿಗೂ ಮೂಲ ಸೌಲಭ್ಯ, ಸವಲತ್ತು, ಸೌಕರ್ಯಗಳು ಸಿಕ್ಕದೆ ಬದುಕುವುದಕ್ಕೆ ಇರುವುದು ಮತಾಂತರ ಒಂದೇ ಮಾರ್ಗ ಎನಿಸಕೂಡದು. ಬದುಕಲು ಮುಕ್ತ ಅವಕಾಶ ಇರುವುದಾದರೆ ಮತಾಂತರವು ಅವಿಷಯವಾಗುತ್ತದೆ; ನಿಷೇಧದ ಪರ ವಿರೋಧಗಳೆಲ್ಲ ಅದೃಶ್ಯವಾಗುತ್ತವೆ. –ಬಿದರಹಳ್ಳಿ ವಾಸುದೇವ ಮೂರ್ತಿ ಯಾವುದೇ ವಿಚಾರ ಅಲೆಅಲೆಯಾಗಿ, ದೊಡ್ಡ ದೊಡ್ಡ ಅಲೆಗಳಾಗಿ ಆಕಾಶದ ಎತ್ತರಕ್ಕೆ ನೆಗೆದು ಸುತ್ತೆಲ್ಲ ಅಪ್ಪಳಿಸಿ ಅಪ್ಪಳಿಸಿ ಹಿಮ್ಮೆಟ್ಟಿ ಎಂದಿನಂತೆ ಪ್ರಶಾಂತವಾಗಿಬಿಡುತ್ತದೆ. ಮುದ್ರಣ ಶ್ರವಣ ದೃಶ್ಯ ಮಾಧ್ಯಮಗಳ ಸಾಂಪ್ರದಾಯಿಕ ವೈಯಕ್ತಿಕ […]

ಘನ ಕರ್ನಾಟಕ ಸರ್ಕಾರ ಗುತ್ತಿಗೆಗೆ ಲಭ್ಯವಿದೆಯೇ..?

ಪ್ರವೇಶ

ಕರ್ನಾಟಕ ಸರ್ಕಾರ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯವೈಖರಿಯ ಮೇಲೆ ಹಿಡಿತ ಕಳೆದುಕೊಂಡು ಶಿಥಿಲಗೊಳ್ಳುತ್ತಿರುವ ಹಾಗೆ ಕಾಣಿಸುತ್ತಿದೆ. ಯಾರು ಮಂತ್ರಿ–ಮುಖ್ಯಮಂತ್ರಿಯಾದರೂ ಯಾರು ಅಧಿಕಾರಿಯಾದರೂ ಆಡಳಿತಯಂತ್ರ ದಿವಾಳಿಯಾಗುತ್ತಿರುವ ಸ್ಪಷ್ಟ ಲಕ್ಷಣಗಳೇ ಕಾಣಿಸುತ್ತಿದೆ. ಮೊದಲು ಸರ್ಕಾರಿ ಗುತ್ತಿಗೆಗಳು ಹಾಗೂ ಸರ್ಕಾರಿ ಹುದ್ದೆಗಳು ಮಾರಾಟಕ್ಕೆ ಇಟ್ಟಂತೆ ಕಂಡುಬಂದರೆ ಇದೀಗ ಸರ್ಕಾರವೇ ಗುತ್ತಿಗೆಗೆ ಲಭ್ಯವಿದೆಯೇನೋ ಎಂಬ ಭಾವನೆ ಮೂಡಿಸುತ್ತಿದೆ. ಈಗ ಖಾಸಗಿಯಾಗಿ ನಡೆಯುತ್ತಿರುವ ಈ ಹರಾಜು ಪ್ರಕ್ರಿಯೆ ಮುಂದೆ ಸಾರ್ವಜನಿಕವಾಗಿ ನಡೆಯಲೆಂದು ನಾವು ಬಯಸುವಂತಿದೆ. ಕರ್ನಾಟಕ ಸರ್ಕಾರ ಗುತ್ತಿಗೆದಾರರ ಹಿಡಿತದಲ್ಲಿಯೇ..? ಹತ್ತಿಪ್ಪತ್ತು ಗುತ್ತಿಗೆದಾರರು ಬಯಸಿದ […]

ದಿವಾಳಿ ಸರ್ಕಾರಕ್ಕೆ ‘ಸರ್ಕಾರಿ’ಗುತ್ತಿಗೆದಾರರ ಅಭಯ..!

-ಮೋಹನದಾಸ್

ನಲವತ್ತು ಪರ್‍ಸೆಂಟ್ ಕಮಿಷನ್ ಹಾವಳಿಯಲ್ಲಿ ಗುಣಮಟ್ಟದ ಗುತ್ತಿಗೆದಾರರೆಲ್ಲಾ ಕರ್ನಾಟಕ ಸರ್ಕಾರದ ಗುತ್ತಿಗೆಗಳಿಂದ ಹಿಂದೆ ಸರಿದಿದ್ದಾರೆ. ಮೂಲದ ‘ಆಂಧ್ರ’ ಗುತ್ತಿಗೆದಾರರ ಜೊತೆಗೆ ‘ಆಂಧ್ರ ಟೈಪ್’ ಗುತ್ತಿಗೆದಾರರು ಇವರ ಜಾಗ ತುಂಬುತ್ತಿದ್ದಾರೆ. –ಮೋಹನದಾಸ್ ಯಾವುದೇ ಅಭಿವೃದ್ಧಿಶೀಲ ದೇಶದಲ್ಲಿ ಸರ್ಕಾರವೇ ಅತ್ಯಂತ ದೊಡ್ಡ ಖರೀದಿದಾರ ಹಾಗೂ ಬಳಕೆದಾರನಾಗಿರುತ್ತದೆ. ಅಭಿವೃದ್ಧಿಗೆ ಪೂರಕ ಮೂಲಸೌಲಭ್ಯ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಶಿಕ್ಷಣ ಆರೋಗ್ಯ ಮತ್ತಿತರ ಎಲ್ಲಾ ಸೌಲಭ್ಯಗಳನ್ನು ಕೊಡಮಾಡಬೇಕಾದ ಕಾರಣದಿಂದ ದೇಶಗಳ ಫೆಡೆರಲ್ ಮತ್ತು ಸ್ಥಾನೀಯ ಸರ್ಕಾರಗಳು ಖರ್ಚು ಮಾಡಲೇ ಬೇಕಾಗುತ್ತದೆ. ಸೇವೆ ಮತ್ತು ಸರಬರಾಜಿನ […]

ಗುತ್ತಿಗೆದಾರರ ಸರ್ಕಾರದಲ್ಲಿ ಜನತಂತ್ರ ವ್ಯವಸ್ಥೆ ನಿರ್ಜೀವ!

-ರಮೇಶ್ ಬಾಬು

ಗುತ್ತಿಗೆದಾರರ ಸರ್ಕಾರದಲ್ಲಿ ಜನತಂತ್ರ ವ್ಯವಸ್ಥೆ ನಿರ್ಜೀವ!
-ರಮೇಶ್ ಬಾಬು

ಕರ್ನಾಟಕ ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ಬೃಹತ್ ಮೊತ್ತದ ಗುತ್ತಿಗೆಗಳಲ್ಲಿ ಬೇನಾಮಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ನಿಯಂತ್ರಣ ಮಾಡಬೇಕಾದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ತಾವೇ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಮತ್ತು ಪಾಲು ಪಡೆಯುತ್ತಿರುವುದರಿಂದ ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳುವ ಅಘೋಷಿತ ಒಪ್ಪಂದ ರಾಜ್ಯದಲ್ಲಿ ಜಾರಿಯಲ್ಲಿದೆ! –ರಮೇಶ್ ಬಾಬು ಕಾಮಗಾರಿಗಳು ಸಮಾಜಮುಖಿಯ ಒಂದು ಭಾಗ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೆ ಕಾಮಗಾರಿಗಳ ಮೂಲಕ ಅಭಿವೃದ್ಧಿ ಮತ್ತು ನಾಗರಿಕತೆಯ ಬೆಳವಣಿಗೆ ಸಾಧ್ಯ ಹಾಗೂ ಇದು ಎಂದಿಗೂ ಚಲನಶೀಲವಾಗಿರಬೇಕು. ಸರ್ಕಾರವೇ ನೇರವಾಗಿ ಎಲ್ಲಾ ಕಾಮಗಾರಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲದ ಕಾರಣ […]

ಆಡಳಿತ ನಡೆಸೋದಕ್ಕೆ ಇವ್ರು ಅಯೋಗ್ಯರು!

-ಟಿ.ಎಸ್.ಗೊರವರ

ಆಡಳಿತ ನಡೆಸೋದಕ್ಕೆ ಇವ್ರು ಅಯೋಗ್ಯರು!
-ಟಿ.ಎಸ್.ಗೊರವರ

–ಎಸ್.ಆರ್.ಹಿರೇಮಠ ಕೆಲವೇ ವರ್ಷಗಳ ಹಿಂದೆ ‘ಬಳ್ಳಾರಿ ರಿಪಬ್ಲಿಕ್’ ಸ್ಥಾಪಿಸಿದ್ದ ಗಣಿ ಲೂಟಿಕೋರರನ್ನು ಜೈಲಿಗಟ್ಟಲು ಕಾರಣರಾದ ಏಕಾಂಗಿ ಹೋರಾಟಗಾರ ಇವರೇನಾ ಎಂದು ಬೆರಗಾಗುವಷ್ಟು ಸರಳ ವ್ಯಕ್ತಿತ್ವ ಎಸ್.ಆರ್.ಹಿರೇಮಠ ಅವರದು. ಅವರು ನೋಡಲಷ್ಟೇ ಹಾಗೆ. ಭ್ರಷ್ಟಾಚಾರ, ಅನ್ಯಾಯ, ಅಕ್ರಮಗಳ ವಿಷಯ ಬಂದರೆ ಯಾರ–ಯಾವ ಮುಲಾಜೂ ಇಲ್ಲದಂತೆ ಸೆಟೆದು ನಿಲ್ಲುವಷ್ಟು ಬಲಿಷ್ಠ, ಕಠಿಣ ಮತ್ತು ನಿಷ್ಟುರಿ. ಅವರು ಕಾಂಗ್ರೆಸ್ಸಿನ ಕೆ.ಆರ್.ರಮೇಶ್ ಕುಮಾರ್, ಜನತಾದಳದ ಎಚ್.ಡಿ.ಕುಮಾರಸ್ವಾಮಿ ಅಕ್ರಮಗಳ ವಿರುದ್ಧವೂ ದನಿ ಎತ್ತಿದ ನಿಷ್ಪಕ್ಷಪಾತಿ. ಭಾರತದ ಸಾಮಾಜಿಕ ಹೋರಾಟದ ಪರಂಪರೆಯಲ್ಲಿ ಅವರದೇ ಒಂದು ಅನನ್ಯ […]

ಅನಿಷ್ಟಗಳ ಮೂಲಬೇರು ಚುನಾವಣಾ ಭ್ರಷ್ಟಾಚಾರದಲ್ಲಿ!

-ಡಾ.ಬಿ.ಎಲ್.ಶಂಕರ್

ಅನಿಷ್ಟಗಳ ಮೂಲಬೇರು  ಚುನಾವಣಾ ಭ್ರಷ್ಟಾಚಾರದಲ್ಲಿ!
-ಡಾ.ಬಿ.ಎಲ್.ಶಂಕರ್

ಆಯಾ ಕಾಲಕ್ಕೆ ಆಯಾ ದಿನಗಳ ಮರ್ಜಿಗೆ ಅನುಗುಣವಾಗಿ ಸರ್ಕಾರಗಳು ಒಂದಲ್ಲ ಒಂದು ಲಾಬಿಯ ಕಪಿಮುಷ್ಟಿಯಲ್ಲಿ ನರಳಿದ, ತಲೆದಂಡವಾದ ಪ್ರಕರಣಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಎಲ್ಲಾ ತರದ ಲಾಬಿಗಳಲ್ಲಿ ಕೈಯಾಡಿಸಿದ್ದು ರಾಜಕಾರಣಿ–ಅಧಿಕಾರಿ–ಗುತ್ತಿಗೆದಾರರ ವಿಷವರ್ತುಲವೇ ಎಂಬುದು ಸಾರ್ವಕಾಲಿಕ ಸತ್ಯ! –ಡಾ.ಬಿ.ಎಲ್.ಶಂಕರ್ ಕರ್ನಾಟಕ ಸರ್ಕಾರ ಗುತ್ತಿಗೆದಾರರ ಹಿಡಿತದಲ್ಲಿದೆಯೇ…? ಹತ್ತಿಪ್ಪತ್ತು ಗುತ್ತಿಗೆದಾರರು ಬಯಸಿದ ಕೆಲಸಗಳನ್ನಷ್ಟೇ ಟೆಂಡರ್ ಮಾಡುವ ಸ್ಥಿತಿಗೆ ತಲುಪಿದೆಯೇ…? ರಾಜಕಾರಣಿಗಳು ಭಾರತದಲ್ಲಿರಲಿ, ಅಮೆರಿಕಾದಲ್ಲಿರಲಿ, ಯಾವುದೇ ಪಕ್ಷದಲ್ಲಿರಲಿ, ಅವರೆಲ್ಲರ ಮೂಲಸ್ವಭಾವ ಒಂದೇ ರೀತಿಯಲ್ಲಿರುತ್ತದೆ. ತಮ್ಮ ನಾಗರಿಕರಿಗೆ ಅಥವಾ ಮಾನವಕುಲಕ್ಕೆ ಸಂಬಂಧಿಸಿದ ವ್ಯಾಪಕ ಸಂಗತಿಗಳಿಗಿಂತ […]

ಆರೋಗ್ಯ ಮಂತ್ರಿಯ ಅಗಾಧ ಭ್ರಷ್ಟಾಚಾರ!

-ಆರ್.ಪಿ.ವೆಂಕಟೇಶಮೂರ್ತಿ

ಆರೋಗ್ಯ ಮಂತ್ರಿಯ ಅಗಾಧ ಭ್ರಷ್ಟಾಚಾರ!
-ಆರ್.ಪಿ.ವೆಂಕಟೇಶಮೂರ್ತಿ

ಕೋತಿ ತಾನು ಕೆಟ್ಟಿದ್ದಲ್ಲದೆ, ವನ್ನವನ್ನೆಲ್ಲಾ ಕೆಡಿಸಿತು ಎಂಬ ಗಾದೆ ಮಾತಿದೆ. ಈ ಸುಧಾಕರ್ ತನ್ನ ಜೊತೆಗೆ ಎರಡೂ ಇಲಾಖೆಗಳ ಅನೇಕ ಅಧಿಕಾರಿಗಳನ್ನು ನಿರ್ದೇಶಕರನ್ನು, ಪ್ರಾಧ್ಯಾಪಕರನ್ನು, ಸಹಪ್ರಾಧ್ಯಾಪಕರನ್ನು ಸಿಬ್ಬಂದಿಯನ್ನು ಭ್ರಷ್ಟಗೊಳಿಸುತ್ತಿದ್ದಾರೆ. –ಆರ್.ಪಿ.ವೆಂಕಟೇಶಮೂರ್ತಿ ನನ್ನ ಪರಿಚಿತ ಕುಟುಂಬದವರ ಮಗ ಹಾಸನದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ, ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಈ ಪೋಷಕರು ನನ್ನ ಬಳಿ ಬಂದು ಹಾಸನ ಜಿಲ್ಲೆಯ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸಲು ಸಾಧ್ಯವೇ ಎಂದು ಕೇಳಿದ್ದರು. ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳನ್ನು […]

ಮೂರೂ ಪಕ್ಷಗಳ ಝಂಡಾ ಬೇರೆ ಅಜೆಂಡಾ ಒಂದೇ!

-ದರ್ಶನ್ ಜೈನ್

ಮೂರೂ ಪಕ್ಷಗಳ ಝಂಡಾ ಬೇರೆ ಅಜೆಂಡಾ ಒಂದೇ!
-ದರ್ಶನ್ ಜೈನ್

ಹುಬ್ಬಳ್ಳಿಯ ಬಿಆರ್‍ಟಿಎಸ್, ಮಂಗಳೂರು, ದಾವಣಗೆರೆ, ತುಮಕೂರು, ಮೈಸೂರುಗಳ ಸ್ಮಾರ್ಟ್‍ಸಿಟಿ ಯೋಜನೆಗಳು ಅಯಾಯ ಊರಿನ ಚಂದವನ್ನು ಹಾಳು ಮಾಡಿದ್ದಲ್ಲದೇ, ಜನರಿಗಿಂತ ಹೆಚ್ಚಾಗಿ ಗುತ್ತಿಗೆದಾರರಿಗೆ/ರಾಜಕಾರಣಿಗಳಿಗೆ ಉಪಯೋಗಕಾರಿಯಾದ ಯೋಜನೆಗಳಾಗಿವೆ. ಬೆಂಗಳೂರಿನಲ್ಲಿ ಕಾಮಗಾರಿಗಳ ಗುತ್ತಿಗೆ ಎಂದರೆ ಹಳೇ ಕಲ್ಲು– ಹೊಸ ಬಿಲ್ಲು ಎನ್ನುವ ಪರಿಸ್ಥಿತಿ ಇದೆ. –ದರ್ಶನ್ ಜೈನ್ ಕರ್ನಾಟಕವು ಕರ್ನಾಟಕ ರಾಜ್ಯವಾಗುವ ಮೊದಲೇ, 1951 ರಲ್ಲೇ ಪ್ರಭಾವಿ ಗುತ್ತಿಗೆದಾರರ ಮರ್ಜಿಗೆ ಸಿಲುಕಿ ದುಂದುವೆಚ್ಚ ಮಾಡಿರುವ ಆರೋಪಕ್ಕೆ ಗುರಿಯಾಗಿತ್ತು. ರೂ. 33 ಲಕ್ಷಗಳಿಗೆ ಅನುಮೋದನೆ ಪಡೆದುಕೊಂಡ ಯೋಜನೆಯೊಂದು ಕುಂಟುತ್ತಾ ಸಾಗಿ 180 ಲಕ್ಷಗಳಿಗೆ […]

ಗುತ್ತಿಗೆ ಲಾಬಿಯೂ ಸರ್ಕಾರದ ಕಮಿಷನ್ ದಂಧೆಯೂ!

-ಸದಾನಂದ ಗಂಗನಬೀಡು

ಗುತ್ತಿಗೆ ಲಾಬಿಯೂ ಸರ್ಕಾರದ ಕಮಿಷನ್ ದಂಧೆಯೂ!
-ಸದಾನಂದ ಗಂಗನಬೀಡು

ಲಂಚ ಎಂದು ಪಡೆಯಲಾಗುತ್ತಿರುವ ಕಮಿಷನ್ ಅನ್ನು ಅಧಿಕೃತಗೊಳಿಸಿದರೆ, ಈ ಎಲ್ಲಕ್ಕೂ ಕೊನೆ ಹಾಡಬಹುದೇನೊ? ಇದು ಮೇಲ್ನೋಟಕ್ಕೆ ಅವಾಸ್ತವಿಕ ಸಲಹೆ ಎನ್ನಿಸಿದರೂ, ಸುಲಭವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ. ಅಮೆರಿಕಾದಲ್ಲಿ ರಕ್ಷಣಾ ಒಪ್ಪಂದದಲ್ಲಿ ಭಾಗಿಯಾಗುವ ಮಧ್ಯವರ್ತಿಗಳಿಗೆ `ಐಚಿಟಿ ಈ‘ ಎಂದು ನೀಡಲಾಗುತ್ತದೆ! –ಸದಾನಂದ ಗಂಗನಬೀಡು ನನಗೆ ರಾಜಕೀಯ ಪ್ರಜ್ಞೆ ಆರಂಭವಾಗಿದ್ದು ಸುಮಾರು ಆರು ಅಥವಾ ಏಳನೆ ತರಗತಿಯಲ್ಲಿದ್ದಾಗ ಎನ್ನಬಹುದು. ಆಗ ದಲಿತ ಸಂಘರ್ಷ ಸಮಿತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹೀಗಾಗಿ ನಮ್ಮ ತಂದೆ ಹಾಗೂ ಅಣ್ಣ ದಲಿತ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ್ದರು. […]

ಭ್ರಷ್ಟಾಚಾರದಲ್ಲಿ ಮುಳುಗುವ-ತೇಲುವ ಸರ್ಕಾರಿ ಗುತ್ತಿಗೆದಾರರು

-ರಮಾನಂದ ಶರ್ಮಾ

ಭ್ರಷ್ಟಾಚಾರದಲ್ಲಿ ಮುಳುಗುವ-ತೇಲುವ ಸರ್ಕಾರಿ ಗುತ್ತಿಗೆದಾರರು
-ರಮಾನಂದ ಶರ್ಮಾ

ಪ್ರತಿಯೊಂದು ಹಂತದಲ್ಲೂ `ಮೇಲಿನವರಿಗೆ ಕೊಡಬೇಕು‘ ಎಂದು ಹಣ ಹರಿಯುತ್ತದೆ. ಸುಪಾರಿ ಕಿಲ್ಲಿಂಗ್ ನಲ್ಲಿ ಸೂತ್ರಧಾರ ಎಂದೂ ಯಾರಿಗೂ ತಿಳಿಯುವುದಿಲ್ಲ. ಹಾಗೆಯೇ ಈ `ಗುತ್ತಿಗೆ‘ ಗಳಲ್ಲಿ ನಿರಂತರವಾಗಿ ಉಲ್ಲೇಖ ವಾಗುವ `ಮೇಲಿನವರು‘ ಯಾರೆಂದು ಯಾರಿಗೂ ಗೊತ್ತಾಗುವುದಿಲ್ಲ; ತಿಳಿದರೂ ಸತ್ಯ ಬಾಯಿ ಬಿಡುವುದಿಲ್ಲ. –ರಮಾನಂದ ಶರ್ಮಾ ಒಬ್ಬ ಗುತ್ತಿಗೆದಾರ ಒಂದು ಸರ್ಕಾರಿ ಗುತ್ತಿಗೆಯನ್ನು ಪಡೆದು ಅದನ್ನು ನಿರ್ವಹಿಸಬೇಕಾದರೆ ಅತನಿಂದ ಕೈಬಿಡುವ ಮೊತ್ತದ ಬಗೆಗೆ ಇತ್ತೀಚೆಗೆ ಒಬ್ಬರು ಗುತ್ತಿಗೆದಾರರರು ವಿಸ್ತøತವಾಗಿ ವಿವರಿಸಿದ್ದರು. ಅವರ ಪ್ರಕಾರ 1 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ […]

ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಸ್ಥಳೀಯ ಸುದ್ದಿ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಂಬಲಿಸಲು ಗೂಗಲ್ ಸಂಸ್ಥೆ ಸಹ ಧನಸಹಾಯ ನೀಡುತ್ತಿದೆ. ಅಮೆರಿಕ ಮತ್ತು ಕೆನಡಾ ದೇಶಗಳ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ತನಿಖಾ ಪತ್ರಕರ್ತರಿಗೆ ನಿಗದಿತ ಅವಧಿಗೆ ವೇತನವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೀಗಿಸವಲ್ಲಿ ಇಂತಹ ಪ್ರಯತ್ನಗಳು ಬಹಳ ಮುಖ್ಯವಾಗುತ್ತಿವೆ. –ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ತಂತ್ರಜ್ಞಾನ ಬದಲಾಗುತ್ತಿದ್ದಂತೆ ಮಾಧ್ಯಮ ಸಂಸ್ಥೆಗಳ ಸ್ವರೂಪವೂ ಬದಲಾಗುತ್ತಿದೆ. ಅದು ಸಹಜ ಪ್ರಕ್ರಿಯೆ ಕೂಡ. ಇದು ಎಲ್ಲ ಬಗೆಯ ಉದ್ದಿಮೆಗಳಿಗೆ ಅನ್ವಯಿಸುತ್ತದೆ. ನೂರಕ್ಕೂ ಅಧಿಕ ವರ್ಷಗಳ ಕಾಲ ಪತ್ರಿಕೆಗಳು […]

1 2 3 60