ಶವಸಂಸ್ಕಾರದ ಬಹು ಆಯಾಮಗಳು

-ಡಾ.ಟಿ.ಗೋವಿಂದರಾಜು

ಶವಸಂಸ್ಕಾರದ ಬಹು ಆಯಾಮಗಳು
-ಡಾ.ಟಿ.ಗೋವಿಂದರಾಜು

ಸತ್ತವನು ಎಷ್ಟು ಐಭೋಗದಿಂದ ತಿಥಿ ಮಾಡಿಸಿಕೊಂಡ ಎಂಬುದಕ್ಕಿಂತ ಸತ್ತೂಬದುಕಿದ ಎಂಬುದೇ ಆದರ್ಶ ಆಗಬೇಕು. ಕೋಟಿ ಕೊಟ್ಟರೂ ಸಿಗಲಾರದ ಕಣ್ಣು ಮಣ್ಣಾಗುವ ಬದಲು ಇನ್ನೊಬ್ಬರಿಗೆ ಕಣ್ಣಾಗುವುದು ಒಳ್ಳೆಯದು. ‘ಅಪ್ಪು’ ಕಣ್ಣುಗಳಿಂದ ನಾಲ್ವರ ಕತ್ತಲೆಗೆ ಬೆಳಕು ಬಂದಿದೆ. –ಡಾ.ಟಿ.ಗೋವಿಂದರಾಜು ಜನಪ್ರಿಯ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನರಾದಾಗ ಜಾತಿ–ಸಂಬಂಧ ಮೀರಿದ ಜೀವಗಳು ಮನೆಗಳಿಂದಲೇ ಬಹುಬಗೆಯ ‘ಎಡೆ’ಗಳನ್ನು ತಂದು, ಮೃತರಿಗೆ ‘ಉಣ್ಣಿಸಿ’ ತಾವೂ ಪ್ರಸಾದದಂತೆ ಕಣ್ಣಿಗೆ ಒತ್ತಿಕೊಂಡು ಹೋದದ್ದರಲ್ಲಿ ಯಾವ ಪ್ರಚಾರ ಆಕರ್ಷಣೆಯಾಗಲೀ, ರಾಜಕಾರಣವಾಗಲೀ ಇರಲಿಲ್ಲ. ಇದ್ದದ್ದು ಗೌರವ; ಮಹಾ ಚೇತನವನ್ನು […]

ದಾರಾ ಶಿಕೊಹ್ ಪತ್ತೆಯಾದ..!

-ಮೋಹನದಾಸ್

ದಾರಾ ಶಿಕೊಹ್ ಪತ್ತೆಯಾದ..!
-ಮೋಹನದಾಸ್

ದಕ್ಷಿಣ ದಿಲ್ಲಿಯ ಇಂಜಿನಿಯರ್ ಸಂಜೀವ್‍ಕುಮಾರ್ ಸಿಂಗ್ ಕಳೆದ ಹತ್ತು ವರ್ಷಗಳಿಂದ ಸತತ ಶೋಧಿಸಿ ಹುಮಾಯೂನ್ ಗೋರಿ ಸಂಕೀರ್ಣದಲ್ಲಿ ದಾರಾ ಶಿಕೊಹ್ ಶವಪೆಟ್ಟಿಗೆಯನ್ನು ಪತ್ತೆಹಚ್ಚಿದ್ದಾರೆ. ಹಲವು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಇತಿಹಾಸದ ಗರ್ಭದಲ್ಲಿ ಅಡಗಿಹೋಗಿದ್ದ ಮಹನೀಯನನ್ನು ಅಕ್ಷರಶಃ ಹೊರತೆಗೆದಿದ್ದಾರೆ. –ಮೋಹನದಾಸ್ ಔರಂಗಜೇಬನ ಬದಲು ದಾರಾ ಶಿಕೊಹ್ ಮೊಘಲ್ ಸಾಮ್ರಾಟನಾಗಿದ್ದಿದ್ದರೆ ಭಾರತದ ಇತಿಹಾಸವೇನಾಗುತ್ತಿತ್ತು ಎಂಬುದೊಂದು ಯಕ್ಷಪ್ರಶ್ನೆ. 1658 ರ ಮೇ 29ರ ಆ ಸಮುಘರ್ ಯುದ್ಧದಲ್ಲಿ ದಾರಾ ಗೆದ್ದಿದ್ದರೆ ದೇಶದ ಇತಿಹಾಸವೇ ಬದಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಮೊಘಲ್ ಸಾಮ್ರಾಜ್ಯ ಮುಂದುವರೆದು ಮರಾಠರ […]

ಭಾರತದಲ್ಲಿ ಕೋವಿಡ್: ಸಾಂಕ್ರಾಮಿಕದಿಂದ ಸ್ಥಳಿಕವಾಗಿ ಪರಿವರ್ತನೆ

-ನಾ ದಿವಾಕರ

ಭಾರತದಲ್ಲಿ ಕೋವಿಡ್: ಸಾಂಕ್ರಾಮಿಕದಿಂದ ಸ್ಥಳಿಕವಾಗಿ ಪರಿವರ್ತನೆ
-ನಾ ದಿವಾಕರ

ವಿಶ್ವದಲ್ಲಿ ಸಾಂಕ್ರಾಮಿಕ (ಚಿಟಿಜಛಿ) ಹಂತವನ್ನು ದಾಟಿ ಸ್ಥಳಿಕ (ಇಟಿಜಛಿ) ಹಂತಕ್ಕೆ ಮನ್ವಂತರ ಹೊಂದಿದ ನಂತರ, ಈ ಹಂತವನ್ನು ಹೆಚ್ಚು ಕಾಲ ಸ್ಥಿರವಾಗಿ ಕಾಪಾಡಿಕೊಂಡು ಬಂದಿರುವ ಏಕೈಕ ರಾಷ್ಟ್ರ ಭಾರತ ಎನ್ನುವುದು ಹೆಮ್ಮೆಯ ವಿಚಾರ. ಕೋವಿಡ್-19 ಎದುರಿಸುವುದು ಹೇಗೆ ಎಂದು ಇಡೀ ವಿಶ್ವಕ್ಕೆ ತೋರಿಸಲು ಇದು ಸಕಾಲ. –ನಾ ದಿವಾಕರ ಕೋವಿಡ್ ಇನ್ನೂ ನಿವಾರಣೆಯಾಗಿಲ್ಲ. ಸದ್ಯದಲ್ಲಿ ಪೂರ್ಣ ನಿವಾರಣೆಯಾಗುವ ಸಂಭವವೂ ಕಾಣುತ್ತಿಲ್ಲ. ಅನೇಕ ದೇಶಗಳಲ್ಲಿ ಕೋವಿಡ್ ಸೋಂಕು ಇನ್ನೂ ವ್ಯಾಪಕವಾಗಿ ಹರಡುತ್ತಲೇ ಇದ್ದು, ಐರೋಪ್ಯ ರಾಷ್ಟ್ರಗಳಲ್ಲಿ, ಚೀನಾ, ಬ್ರಿಟನ್, […]

ಇಂಧನ ಬೆಲೆ ಏರಿಕೆಯ ಹಿಂದೆ ಮುಂದೆ…

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ತೈಲಚಾಲಿತ ವಾಹನಗಳನ್ನು ತ್ಯಜಿಸಿ, ಇವಿ ಗಳನ್ನು ಖರೀದಿಸಲಿ ಅನ್ನುವ ಉದ್ದೇಶದಿಂದ ಅಥವಾ ಇವಿ ಉತ್ಪಾದಕರ ಒತ್ತಡದಿಂದ ನಿರಂತರವಾಗಿ ತೈಲ ಬೆಲೆ ಏರಿಸಲಾಗುತ್ತಿದೆಯೇ? –ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ಶೇ.80ರಷ್ಟು ಕಚ್ಚಾತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಇದು ಸರ್ಕಾರಕ್ಕೆ ಆರ್ಥಿಕ ಮತ್ತು ಅನ್ಯರ ಹಂಗಿನ ಹೊರೆಯೂ ಹೌದು. ಏರುತ್ತಿರುವ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು, ಒಂದಲ್ಲ ಒಂದು ದಿನ ಧರೆಯ ಒಡಲ ತೈಲ ಬರಿದಾಗುವ ಸಾಧ್ಯತೆಯ ಗಮನದಲ್ಲಿಟ್ಟುಕೊಂಡೇ, ಇಡೀ […]

ಕಾನೂನಿನ ಬಲದಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವೇ..?

-ಪ್ರಭು ಖಾನಾಪುರೆ

ಕಾನೂನಿನ ಬಲದಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವೇ..?
-ಪ್ರಭು ಖಾನಾಪುರೆ

ವಿಜ್ಞಾನಕ್ಕಿಂತ ಮೌಢ್ಯವೆ ಪವಿತ್ರವೆಂದು ನಂಬುವ ಮಾನಸಿಕ ಸ್ಥಿತಿ ಹೊಂದಿದ ಸಮಾಜದಲ್ಲಿ ಕಾನೂನುಗಳು ಬೇಕೇಬೇಕು. ಜನರಲ್ಲಿ ಮೂಢನಂಬಿಕೆ ಮೇಲೆ ಗೌರವ ಇರುವಂತೆ ಕಾನೂನಿನ ಬಗ್ಗೆ ಭಯವೂ ಇದೆ. ಈ ಭಯವನ್ನು ಬಳಸಿಕೊಂಡು ಮೂಢನಂಬಿಕೆ ನಿವಾರಣೆಗೆ ಪ್ರಯತ್ನಿಸಬೇಕು. –ಪ್ರಭು ಖಾನಾಪುರೆ ಕಾನೂನುಗಳಿವೆ ನಕ್ಷತ್ರಗಳಷ್ಟು, ಅವುಗಳ ಉಪಯೋಗ ಮಾತ್ರ ಬೆರಳೆಣಿಕೆಯಷ್ಟು. ಕಾನೂನಿನ ಬಲದಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವೇ..? ಎಂಬ ಪ್ರಶ್ನೆಗೆ ಇಲ್ಲವೆಂದೆ ಉತ್ತರಿಸಬೇಕಾಗುತ್ತದೆ. ಆದರೆ ಕಾನೂನುಗಳಿದ್ದರೆ ಮೂಢನಂಬಿಕೆ ಹೋಗಲಾಡಿಸುವ ಪ್ರಕ್ರೀಯೆಗೆ ಬಲ ಬರುತ್ತದೆ. ಕಾನೂನುಗಳಿಂದ ಮೂಢನಂಬಿಕೆಗಳನ್ನು ಆಚರಿಸುವವರಿಗೆ ಭಯ ಮತ್ತು ಅವುಗಳ […]

ಮೌಢ್ಯಮಾಪನ: ನಿಲುವು ಸ್ಪಷ್ಟವಾಗಿರಲಿ

-ಸುಧೀಂದ್ರ ಬುಧ್ಯ

ಮೌಢ್ಯಮಾಪನ: ನಿಲುವು ಸ್ಪಷ್ಟವಾಗಿರಲಿ
-ಸುಧೀಂದ್ರ ಬುಧ್ಯ

ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿ ಹತ್ತಾರು ಮತ ಪಂಥಗಳು, ಸಂಪ್ರದಾಯಗಳು, ರೀತಿ ರಿವಾಜುಗಳು ಇವೆ. ಮೂಢನಂಬಿಕೆ ನಿಷೇಧ ಕಾನೂನು ಈ ಎಲ್ಲ ಮತ ಸಂಪ್ರದಾಯಗಳಲ್ಲಿನ ಮೌಢ್ಯವನ್ನು ಚರ್ಚಿಸಬೇಕಾಗುತ್ತದೆ. ಏಕರೂಪದ ಕಾನೂನಿಗೆ ಮನ್ನಣೆ ಹೆಚ್ಚು. ಕೇವಲ ಒಂದು ಮತ ಅಥವಾ ಪಂಥದ ಆಚರಣೆಗಳನ್ನಷ್ಟೇ ನಿಕಷಕ್ಕೆ ಒಡ್ಡಿದರೆ, ಆ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗೆ, ಮತಬ್ಯಾಂಕಿನ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತವೆ. –ಸುಧೀಂದ್ರ ಬುಧ್ಯ ಇದು ಕೇವಲ ಭಾರತಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ, ಎಲ್ಲ ಬಗೆಯ ಜನರಲ್ಲೂ ಅವರವರ ನಂಬಿಕೆಗಳ […]

ಮೌಢ್ಯಾಚಾರಣೆ: ಶೋಷಣೆಯ ಪ್ರಬಲ ಅಸ್ತ್ರ

-ಡಾ.ವೆಂಕಟಯ್ಯ ಅಪ್ಪಗೆರೆ

ಮೌಢ್ಯಾಚಾರಣೆ: ಶೋಷಣೆಯ ಪ್ರಬಲ ಅಸ್ತ್ರ
-ಡಾ.ವೆಂಕಟಯ್ಯ ಅಪ್ಪಗೆರೆ

ವೈಚಾರಿಕತೆ ಆಮೆಯ ವೇಗದಲ್ಲಿ ಸಾಗಿದರೆ ಮೌಢ್ಯ ಮಿಥ್ಯಾಚಾರಗಳು ಆನ್‍ಲೈನ್ ವೇಗದಲ್ಲಿ ಅಷ್ಟೇ ಅಮಿತ ಪ್ರಮಾಣದಲ್ಲಿ ಧಾವಿಸುತ್ತಿವೆ. –ಡಾ.ವೆಂಕಟಯ್ಯ ಅಪ್ಪಗೆರೆ ‘ದೇವರು–ಧರ್ಮ–ದೆವ್ವ’ ಈ ಮೂರರ ಹೆಸರಿನಲ್ಲಿ ಎಸಗುವ ಶೋಷಣೆ ಅತ್ಯಂತ ಪ್ರಬಲವಾಗಿದೆ. ಅದರಲ್ಲೂ ದೇವರು, ದೆವ್ವದ ಭಯಹುಟ್ಟಿಸಿ ಮಾಡುವ ಶೋಷಣೆ ಭೀಕರವಾದುದು. ಇದಕ್ಕೆ ಪಾಪ–ಕರ್ಮ, ನರಕ–ಸ್ವರ್ಗ ಪರಿಕಲ್ಪನೆಗಳು ಪೂರಕ ಅಸ್ತ್ರಗಳು. ಇವುಗಳ ಪೋಷಣೆಗೆ ಧಾರ್ಮಿಕಮಿಥ್ಯೆ ಮೌಢ್ಯಗಳು ಅಂಗರಕ್ಷಕರು. ಇವುಗಳ ಆಚರಣೆ ಅನಾದಿಕಾಲದಿಂದಲೂ ಅಮಾಯಕರನ್ನು ಸದಾ ಕಾಡುತ್ತಿವೆ. ಸಾಮಾಜಿಕ, ಆರ್ಥಿಕ ಮತ್ತು ಯುದ್ಧ ಭೀತಿಗಳಿಗಿಂತಲೂ ದೈವೀಭೀತಿ ಮಾನವನನ್ನು ಅವ್ಯಾಹತವಾಗಿ ಶೋಷಿಸುತ್ತಿದೆ. […]

ಮೌಢ್ಯ ಹರಡಲು ಮಹಿಳೆಯರೇ ಟಾರ್ಗೆಟ್!

-ನೂತನ ದೋಶೆಟ್ಟಿ

ಮೌಢ್ಯ ಹರಡಲು ಮಹಿಳೆಯರೇ ಟಾರ್ಗೆಟ್!
-ನೂತನ ದೋಶೆಟ್ಟಿ

ಒಮ್ಮೆ ಗಂಡಂದಿರಿಗೆ ಆಪತ್ತಿದೆ, ಐದು ಪ್ರಕಾರದ ಎಣ್ಣೆ ಸೇರಿಸಿ ದೇವಿಯ ಗುಡಿಯಲ್ಲಿ ದೀಪದ ಆರತಿ ಮಾಡಿ ಎಂಬ ಸುದ್ದಿ ಮಿಂಚಿನಂತೆ ಹಬ್ಬಿತ್ತು. ಮಹಿಳೆಯರೆಲ್ಲ ದೇವಾಲಯಗಳಿಗೆ ದೌಡಾಯಿಸಿದರು. ಸೋಜಿಗವೆಂದರೆ ಆಪತ್ತು ಗಂಡನಿಗೆ, ಮಗನಿಗೆ ಬರುತ್ತದೆ. ಮಗಳಿಗೋ, ಹೆಂಡತಿಗೋ ಏಕೆ ಬರುವುದೇ ಇಲ್ಲ! –ನೂತನ ದೋಶೆಟ್ಟಿ ಅವಳು ಸ್ನಾತಕೋತ್ತರ ಪದವೀಧರೆ. ಒಮ್ಮೆ ಅವರ ಮನೆಗೆ ಹೋದಾಗ ಕುತೂಹಲ ಎನ್ನಿಸಿದ್ದು ಕುಡಿಯುವ ನೀರಿನ ಫಿಲ್ಟರ್ ಮೇಲೆ ಅದರ ಮುಚ್ಚಳಕ್ಕೆ ಸರಿ ಹೊಂದುವ ಗಾತ್ರದ ಪಿರಾಮಿಡ್ ಆಕೃತಿಯನ್ನು ಇಟ್ಟಿದ್ದು. ಅದೇಕೆ ಎಂದು ಕೇಳಿದಾಗ […]

ಶಿಕ್ಷಣ ಮತ್ತು ಮೂಢನಂಬಿಕೆ

-ವೆಂಕಟೇಶ ಮಾಚಕನೂರ

ಶಿಕ್ಷಣ ಮತ್ತು ಮೂಢನಂಬಿಕೆ
-ವೆಂಕಟೇಶ ಮಾಚಕನೂರ

ಇಂದು ಬೋಧಕ ವರ್ಗದಲ್ಲಿ ಶೇ. 50 ಕ್ಕಿಂತ ಹೆಚ್ಚು ಶಿಕ್ಷಕಿಯರೇ ಇದ್ದಾರೆ. ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಿಲೆಬಸ್‍ಗೂ ಮಿಗಿಲಾದ ಹೊಣೆಗಾರಿಕೆ ಇದೆ. ಯುವ ಮನಸ್ಸುಗಳನ್ನು ಅವರು ಪರಿವರ್ತಿಸಬಲ್ಲರು. ಕೇವಲ ಮೂಢನಂಬಿಕೆಗಳ ಕುರಿತು ಅಲ್ಲ, ಒಟ್ಟಾರೆ ಒಂದು ನೈತಿಕ ಶಕ್ತಿಯಾಗಿ, ಮಾತೃ ಹೃದಯದಿಂದ ಅವರು ಶಿಷ್ಯ ವೃಂದವನ್ನು ತಟ್ಟಬಲ್ಲರು. –ವೆಂಕಟೇಶ ಮಾಚಕನೂರ ಯಾವುದೇ ಮೂಢನಂಬಿಕೆಗಳ ವಿರುದ್ಧ ಶಿಕ್ಷಣದ ಮೂಲಕ ಬದಲಾವಣೆ ತರಬಹುದಾಗಿದೆ. ಶಿಕ್ಷಣವೆಂದರೆ ಕೇವಲ ಔಪಚಾರಿಕ ಶಿಕ್ಷಣವಲ್ಲ, ಜನಸಾಮಾನ್ಯರಿಗೆ ತಿಳಿವಳಿಕೆ ನೀಡುವ ಯಾವುದೇ ಬಗೆಯ ಅನೌಪಚಾರಿಕ […]

ಮಹಿಳೆಯರ ಸ್ವ ಅರಿವಿಗೆ ಮೂಢನಂಬಿಕೆಗಳ ತಡೆಗೋಡೆ!

-ಡಾ.ಜ್ಯೋತಿ

ಮಹಿಳೆಯರ ಸ್ವ ಅರಿವಿಗೆ  ಮೂಢನಂಬಿಕೆಗಳ ತಡೆಗೋಡೆ!
-ಡಾ.ಜ್ಯೋತಿ

ಮಹಿಳೆಯರು ಪುರುಷರಿಗಿಂತ ಹೆಚ್ಚು ಮೂಢನಂಬಿಕೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಇದು ತಮ್ಮ ಅಸ್ಮಿತೆಯನ್ನು ಕೀಳಾಗಿಸುತ್ತಿದೆ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತದೆ ಎನ್ನುವ ಸ್ವಅರಿವಿನ ಕೊರತೆಯಿಂದ ಮಹಿಳೆಯರು, ಈ ಮೂಢ ಆಚರಣೆಗಳನ್ನು ಪ್ರಶ್ನಿಸದೇ, ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. –ಡಾ.ಜ್ಯೋತಿ ಮೂಢನಂಬಿಕೆಗಳ ಕುರುಡು ಆಚರಣೆಯನ್ನು ನಮ್ಮ ಸಮಾಜದಿಂದ ಕಿತ್ತೊಗೆಯುವ ನಿಟ್ಟಿನಲ್ಲಿ ಸರಕಾರವು ಕಾನೂನನ್ನು ಜಾರಿಗೆ ತರಬೇಕೆ? ಅದರಿಂದ ಮೂಢನಂಬಿಕೆಗಳ ಸಂಪೂರ್ಣ ನಿರ್ಮೂಲನ ಸಾಧ್ಯವೇ? ಅಥವಾ ಅದಕ್ಕೆ ಬೇರೆ ಸೂಕ್ತ ಮಾರ್ಗಗಳೇನಾದರೂ ಇವೆಯೇ? ಎನ್ನುವುದನ್ನು ಚರ್ಚಿಸುವ ಮೊದಲು ಪ್ರಾಸ್ತಾವಿಕವಾಗಿ, `ಮೂಢನಂಬಿಕೆ‘ ಎಂದರೇನು, […]

ಮೂಢನಂಬಿಕೆ ಮತ್ತು ಕಾನೂನು: ಸಾಂದರ್ಭಿಕ ಸಂಘರ್ಷ

-ಡಾ.ಶಿವಮೂರ್ತಿ ಮುರುಘಾ ಶರಣರು

ಮೂಢನಂಬಿಕೆ ಮತ್ತು ಕಾನೂನು: ಸಾಂದರ್ಭಿಕ ಸಂಘರ್ಷ
-ಡಾ.ಶಿವಮೂರ್ತಿ ಮುರುಘಾ ಶರಣರು

ಅರಿವಿನ ಜಾಗೃತಿಯು ಮೂಢನಂಬಿಕೆ ನಿವಾರಣೆಗೆ ಸಹಕಾರಿ. ಅರಿವಿನ ಆಂದೋಲನದ ಅಗತ್ಯ. –ಡಾ.ಶಿವಮೂರ್ತಿ ಮುರುಘಾ ಶರಣರು ಸಮಾಜವು ಸಂಪ್ರದಾಯಬದ್ಧವಾಗಿದೆ. ಸಂಪ್ರದಾಯಬದ್ಧ ಸಮಾಜವು ನಿಂತ ನೀರಿನಂತೆ. ಅದರಲ್ಲಿ ಎಲ್ಲ ರೀತಿಯ ಮಾಲಿನ್ಯ, ಕಶ್ಮಲ. ನಿಂತ ನೀರಿನ ಕಶ್ಮಲ ನಿವಾರಣೆ ಆಗಬೇಕೆಂದರೆ, ಅದಕ್ಕೆ ಹರಿಯುವ ನೀರು ಸೇರಬೇಕು; ಇಲ್ಲವೆ ಹಳೆಯ ನೀರು ಹೊರ ಹೋಗುವಂತೆ ಮಾಡಬೇಕು. ಏನೆಲ್ಲ ಕೊಳೆ, ಕಸ, ದುರ್ವಾಸನೆ. ನಿಂತ ನೀರಲ್ಲಿ ಸೊಳ್ಳೆಗಳು ವಾಸಿಸುತ್ತವೆ, ಅಲ್ಲೆ ಸಂಸಾರ ಹೂಡುತ್ತವೆ. ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳಿಂದಾಗಿ ಮಲೇರಿಯ, ಡೆಂಗ್ಯು, ಟೈಫಾಯಿಡ್, ಮೆದುಳು […]

ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಬೇಕು

-ಡಾ.ಕೆ.ಎಸ್.ಪವಿತ್ರ

ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಬೇಕು
-ಡಾ.ಕೆ.ಎಸ್.ಪವಿತ್ರ

ವ್ಯಕ್ತಿಗತ ನೆಲೆಯಲ್ಲಿ ನಡೆಯುವ `ಮೌಢ್ಯ‘ದ ಪ್ರಕ್ರಿಯೆಗೆ ಬೇಕಾದದ್ದು ಕಾನೂನಲ್ಲ. ಕಾನೂನು ಇಲ್ಲಿ ಕೆಲಸ ಮಾಡುವುದಿಲ್ಲ. ಇಲ್ಲಿ ಬೇಕಾದದ್ದು ಪ್ರಯತ್ನದ ಬಲದ ಜೊತೆಗೆ ಒಂದು ಧನಾತ್ಮಕ ನಂಬಿಕೆಯ ಸಾಂಗತ್ಯ. ಆ ಧನಾತ್ಮಕ ನಂಬಿಕೆ ಮೌಢ್ಯದತ್ತ ತಿರುಗದಂತೆ ನೋಡಿಕೊಳ್ಳುವುದು, ನರಳುವಿಕೆಗೆ ಒಳಗಾಗುವುದನ್ನು ತಡೆಯುತ್ತದೆ. –ಡಾ.ಕೆ.ಎಸ್.ಪವಿತ್ರ ಮೂಢನಂಬಿಕೆಗಳ ಬಗೆಗೆ ಯಾವುದೇ ಚರ್ಚೆ ನಡೆಯುವಾಗಲೂ ಅದು ಬಹುಬಾರಿ ತಿರುಗುವುದು ಧರ್ಮಗಳ ಬಗೆಗೆ. ಬಲಪಂಥ–ಎಡಪಂಥಗಳನ್ನು ಕುರಿತು, ಅಂಥ ಪಂಥಗಳ ಗೋಜಿಗೆ ಹೋದಾಗ `ವಸ್ತು ನಿಷ್ಠತೆ‘ ಎನ್ನುವುದು ತನ್ನಿಂತಾನೆ ಬದಿಗೆ ಸರಿದುಬಿಡುತ್ತದೆ. ಹಾಗಾಗಿಯೇ ಕೆಲ ವರ್ಷಗಳ […]

ಮಾಧ್ಯಮಗಳು ಮತ್ತು ಮೂಢನಂಬಿಕೆ

-ಎನ್.ರವಿಕುಮಾರ್ ಟೆಲೆಕ್ಸ್

ಮಾಧ್ಯಮಗಳು ಮತ್ತು ಮೂಢನಂಬಿಕೆ
-ಎನ್.ರವಿಕುಮಾರ್ ಟೆಲೆಕ್ಸ್

ಜನರನ್ನು ಮೂಢನಂಬಿಕೆಗಳಿಂದ ಬಿಡುಗಡೆಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿರುತ್ತವೆ ಎಂದು ಭಾವಿಸುವ ಹೊತ್ತಿನಲ್ಲೇ ಸುದ್ದಿ ಮಾಧ್ಯಮಗಳು ಮೂಢನಂಬಿಕೆಯನ್ನು ಇನ್ನಷ್ಟು ಬಿತ್ತುವ, ಜನರನ್ನು ಆ ಕಡೆಗೆ ಸೆಳೆಯುವಲ್ಲಿ ನಿರತವಾಗಿರುವುದು ವಿಜ್ಞಾನ ಮತ್ತು ವೈಚಾರಿಕತೆಯ ದಮನವೇ ಸರಿ. –ಎನ್.ರವಿಕುಮಾರ್ ಟೆಲೆಕ್ಸ್ ಮನುಷ್ಯ ತನ್ನ ಸಾಮಾಜಿಕ, ವೈಯಕ್ತಿಕ ಸಮಸ್ಯೆಗಳಿಂದ ಬಿಡುಗಡೆಗೊಳ್ಳಲು ತನ್ನ ಶ್ರಮ ಮತ್ತು ಬೌದ್ಧಿಕ ಶಕ್ತಿಯ ಹೊರತಾಗಿಯೂ ಒಂದು ಅಗೋಚರ ಶಕ್ತಿಯ ಬಗೆಗಿನ ನಂಬಿಕೆಯನ್ನು ಹೊಂದಿರುತ್ತಾನೆ. ದೇವರು, ಧರ್ಮ, ಮಾಟ. ಮಂತ್ರ, ದಿನಭವಿಷ್ಯ, ಜೋತಿಷ್ಯ, ಯಜ್ಞ–ಯಾಗಗಳಂತಹ ಸಂಗತಿಗಳ ಹಿಂದೆ ಬಿದ್ದು […]

ವಾಸ್ತುಪಂಡಿತರಿಗೆ ಭಯ ಮತ್ತು ಆಸೆಗಳೇ ಬಂಡವಾಳ!

-ಯೋಗೇಶ್ ಮಾಸ್ಟರ್

ವಾಸ್ತುಪಂಡಿತರಿಗೆ ಭಯ ಮತ್ತು ಆಸೆಗಳೇ ಬಂಡವಾಳ!
-ಯೋಗೇಶ್ ಮಾಸ್ಟರ್

ಒಂದು ದಿನ ಆ ಸಾಹಿತಿಯ ಮನೆಯೊಳಗಿನ ತಗ್ಗನ್ನು ಸಂಪೂರ್ಣ ಮುಚ್ಚಿಸಿ, ಎತ್ತರಿಸಿ ಸಮತಟ್ಟು ಮಾಡಿಸಿದ ಜಾಗದಲ್ಲಿಯೇ ಅವರ ಶವಕ್ಕೆ ಗೌರವ ಸಲ್ಲಿಸಿದೆ. ಕ್ಯಾನ್ಸರ್ ಗೆದ್ದಿತ್ತು, ವಾಸ್ತುದೋಷವನ್ನು ಸರಿಪಡಿಸಿದ್ದು ಅಲ್ಲಿ ಏನೂ ಫಲಿಸಲಿಲ್ಲ! –ಯೋಗೇಶ್ ಮಾಸ್ಟರ್ ಮನುಷ್ಯನ ಮನಸ್ಸು ಕನಲುವುದು ಭಯ ಮತ್ತು ಆಸೆಗಳಿಂದಾಗಿ. ಉಳಿಯುವ, ಗಳಿಸುವ, ಉಳಿಸುವ, ಬೆಳೆಯುವುದೇ ಮೊದಲಾದ ಲಾಭದಾಯಕ ಮತ್ತು ಹಿತಕಾರಕ ವಿಷಯಗಳ ಆಸೆಗಳು ಹಾಗೂ ಅಳಿಯುವ, ಕಳೆಯುವ, ಬೆಳೆಯದ, ನಷ್ಟವೇ ಮೊದಲಾದ ಭಯಗಳು ಶರಣು ಹೋಗುವ ಅನೇಕ ವಿಷಯಗಳಲ್ಲಿ ಈ ವಾಸ್ತುವು ಕೂಡಾ […]

ದುರ್ಬಲ ಕಾನೂನಿಗೆ ಸೀಮಿತ ವ್ಯಾಪ್ತಿ!

-ನರೇಂದ್ರ ನಾಯಕ್

ದುರ್ಬಲ ಕಾನೂನಿಗೆ ಸೀಮಿತ ವ್ಯಾಪ್ತಿ!
-ನರೇಂದ್ರ ನಾಯಕ್

ವಿಪರ್ಯಾಸವೆಂದರೆ ಮೌಢ್ಯಾಚರಣೆ ಕಾನೂನನ್ನು ವಿರೋಧಿಸಿದ ಭಾರತೀಯ ಜನತಾ ಪಕ್ಷವೇ 2020ರಲ್ಲಿ ಇದನ್ನು ಜಾರಿಗೆ ತಂದಿರುವುದು! –ನರೇಂದ್ರ ನಾಯಕ್ ಕಾನೂನುಗಳಿಂದ ಮೂಢನಂಬಿಕೆಗಳನ್ನು ಹೋಗಲಾಡಿಸುವುದು ಬಹಳ ಕಷ್ಟ. ಮೂಢನಂಬಿಕೆಗಳನ್ನು ದೂರ ಮಾಡಲು ಜಾಗೃತಿ, ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವಗಳನ್ನು ಬೆಳೆಸುವುದರಿಂದ ಮಾತ್ರ ಸಾಧ್ಯ. ಉದಾಹರಣೆಗೆ ಸಂವಿಧಾನ 51 ಎಎಚ್ 1976ರಲ್ಲಿ ಆಗಿರುವ ತಿದ್ದುಪಡಿ. ಇದರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಪ್ರಶ್ನಿಸುವ ಪ್ರವೃತ್ತಿಯನ್ನು ಹಾಗೂ ಮಾನವವಾದವನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಈ ತಿದ್ದುಪಡಿಯು ಬಂದು ನಾಲ್ಕು ದಶಕಗಳು ಕಳೆದರೂ, ನಮ್ಮ […]

ಅಪ್ಪನ ಹಾದಿಯಲ್ಲಿ ಮುಕ್ತಾ ದಾಭೋಳ್ಕರ್

ಅಪ್ಪನ ಹಾದಿಯಲ್ಲಿ ಮುಕ್ತಾ ದಾಭೋಳ್ಕರ್

ಖ್ಯಾತ ವಿಚಾರವಾದಿ ಡಾ.ನರೇಂದ್ರ ದಾಭೋಳ್ಕರ್ ಅವರ ಪುತ್ರಿ ಮುಕ್ತಾ ದಾಭೋಳ್ಕರ್ ಕೂಡಾ ತಂದೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಮೌಢ್ಯ ವಿರೋಧಿ ಆಂದೋಲನ ನಡೆಸುತ್ತಿದ್ದಾರೆ. ಮೂಢನಂಬಿಕೆಗಳನ್ನು ತೊಲಗಿಸಲು ಕಾನೂನಿನ ಬೆಂಬಲ ಅತ್ಯಗತ್ಯ ಎಂಬುದು ಅವರ ಖಚಿತ ಅಭಿಮತ. ಮುಕ್ತಾ ಅವರು ಈ ಹಿಂದೆ ಬೆಂಗಳೂರಿಗೆ ಬಂದಾಗ ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಹೀಗಿವೆ: ನಮ್ಮ ಮನೆಯಲ್ಲಿದ್ದ ವಾತಾವರಣವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಪ್ರೇರೇಪಣೆ ನೀಡಿತು. ಕಾಲೇಜು ಶಿಕ್ಷಣ ಮುಗಿಸಿದ ನಂತರ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿವಿಧ ತರಬೇತಿ […]

ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ

-ಬರಗೂರು ರಾಮಚಂದ್ರಪ್ಪ

ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ
-ಬರಗೂರು ರಾಮಚಂದ್ರಪ್ಪ

2013ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ತಂಡ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸಲು ಕರಡು ಮಾದರಿ ಸಲ್ಲಿಸಿತ್ತು. ಆಗ ಸಾರ್ವಜನಿಕ ಚರ್ಚೆ ಏರ್ಪಟ್ಟು ಪರ–ವಿರೋಧ ಬಹಳ ಜೋರಾಗಿಯೇ ಮಂಡನೆಯಾಗಿ ಕಾಯ್ದೆ ನೆನೆಗುದಿಗೆ ಬೀಳುವಂತಾಯಿತು. ಆ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ದಾಖಲಿಸಿದ ವಿಶ್ಲೇಷಣೆ ಇಲ್ಲಿವೆ. –ಬರಗೂರು ರಾಮಚಂದ್ರಪ್ಪ ರಾಷ್ಟ್ರೀಯ ಕಾನೂನು ಶಾಲೆಯ ವತಿಯಿಂದ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ಅಧ್ಯಯನ ಕೇಂದ್ರದವರು ಆಯ್ದ ತಜ್ಞರ ತಂಡದ ಜೊತೆ ಚರ್ಚಿಸಿ ರೂಪಿಸಿದ ‘ಮೂಢನಂಬಿಕೆ […]

ಕರ್ನಾಟಕದಲ್ಲಿ ಜಾರಿಯಲ್ಲಿರುವ ಮೌಢ್ಯ ನಿಷೇಧ ಕಾಯ್ದೆಯಲ್ಲಿ ಏನಿದೆ?

2013ರಲ್ಲಿ ಸಿದ್ದರಾಮಯ್ಯ ಸರ್ಕಾರ ತರಲು ಉದ್ದೇಶಿಸಿದ್ದ ಮೌಢ್ಯ ನಿಷೇಧ ಕಾಯ್ದೆ ನಿರಂತರ ವಾದವಿವಾದ, ಅಡಚಣೆಗಳಿಂದ ನೆನೆಗುದಿಗೆ ಬಿದ್ದಿತ್ತು. ಕೊನೆಗೆ 2020ರಲ್ಲಿ ಯಡಿಯೂರಪ್ಪ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾನೂನಿನ ಮುಖ್ಯಾಂಶಗಳನ್ನು ಓದುಗರ ಅವಗಾಹನೆಗಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳನ್ನು ನಿಷೇಧಿಸಲಾಗಿದೆ: ಭಾನಾಮತಿ, ಮಾಟ–ಮಂತ್ರ ಮಾಡುವುದು. ಗುಪ್ತ ನಿಧಿ, ನಿಕ್ಷೇಪಗಳ ಅನ್ವೇಷಣೆ, ಅದಕ್ಕಾಗಿ ವಾಮಾಚಾರ ಮಾಡುವುದು. ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆಹ್ವಾನಿಸಲಾಗಿದೆ ಅಥವಾ ಆ ವ್ಯಕ್ತಿ ಅಂಥ ಶಕ್ತಿ ಹೊಂದಿದ್ದಾನೆ ಎಂದು ನಂಬಿಸುವುದು. […]

ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ

-ನಿವೇದಿತಾ ಬಿ.ತುಮಕೂರು

ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ
-ನಿವೇದಿತಾ ಬಿ.ತುಮಕೂರು

ನೊಬೆಲ್ ಪುರಸ್ಕಾರದ 120 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಸಾಹಿತ್ಯ ಕ್ಷೇತ್ರದ ಗರಿಯನ್ನು ಮುಡಿಗೇರಿಸಿಕೊಂಡ ಕೇವಲ ನಾಲ್ಕನೇ ಕಪ್ಪುವರ್ಣೀಯರಾಗಿ ಅಬ್ದುಲ್ ರಜಾಕ್ ಗುರ್ನಾ ಹೊರಹೊಮ್ಮಿದ್ದಾರೆ. –ನಿವೇದಿತಾ ಬಿ.ತುಮಕೂರು ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ಕ್ಷೇತ್ರದ ನೊಬೆಲ್ ಪುರಸ್ಕಾರವು ತೀವ್ರವಾಗಿ ರಾಜಕೀಯ ಪ್ರೇರಿತವಾದುದು ಮತ್ತು ಐರೋಪ್ಯ–ಕೇಂದ್ರಿತವಾದುದು ಎಂಬ ವಿವಾದಗಳ ಹೊರತಾಗಿಯೂ ತಮ್ಮ ಹೆಜ್ಜೆಗುರುತನ್ನು ಸ್ಥಾಪಿಸಲು ಯಶಸ್ವಿಯಾಗಿದ್ದಾರೆ ಅಬ್ದುಲ್ ರಜಾಕ್ ಗುರ್ನಾ. ಅವರು ‘ವಸಾಹತುಶಾಹಿಯ ಪರಿಣಾಮಗಳು ಹಾಗೂ ವಿವಿಧ ಸಂಸ್ಕøತಿ ಮತ್ತು ಖಂಡಗಳ ನಡುವೆ ಸಿಲುಕಿರುವ ನಿರಾಶ್ರಿತರ ಬವಣೆಗಳನ್ನು ಯಥಾವತ್ತಾಗಿ ಮತ್ತು […]

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?

ರಮಾನಂದ ಶರ್ಮಾ

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ  ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?
ರಮಾನಂದ ಶರ್ಮಾ

ಚುನಾವಣೆಯಲ್ಲಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯವರನ್ನು ತಡೆಯುವಲ್ಲಿ ಮತದಾರರ ಪಾತ್ರವು ನ್ಯಾಯಾಲಯ ಮತ್ತು ಸರ್ಕಾರದಷ್ಟೇ ಮಹತ್ವದ್ದು ಮತ್ತು ನಿರ್ಣಾಯಕವೂ ಕೂಡಾ. –ರಮಾನಂದ ಶರ್ಮಾ ರಾಜಕಾರಣದಲ್ಲಿನ ಅಪರಾಧೀಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶದ ಸುಪ್ರೀಂ ಕೋರ್ಟು ಇನ್ನೊಮ್ಮೆ ಬಲವಾಗಿ ಚಾಟಿಯನ್ನು ಬೀಸಿದೆ, ಛೀಮಾರಿ ಹಾಕಿದೆ ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ವಿಭಾಗೀಯ ಪೀಠವು ಎರಡು ಮಹತ್ವದ ಅದೇಶ ನೀಡಿದ್ದು, ದೇಶಾದ್ಯಂತ ಮುಖ್ಯವಾಗಿ ರಾಜಕೀಯ ವಲಯದಲ್ಲಿ ಶಾಕ್ ಮತ್ತು ಸಂಚಲನ ಮೂಡಿಸಿದೆ. ಬಿಹಾರ […]