ಅಪ್ಪನ ಹಾದಿಯಲ್ಲಿ ಮುಕ್ತಾ ದಾಭೋಳ್ಕರ್

ಅಪ್ಪನ ಹಾದಿಯಲ್ಲಿ ಮುಕ್ತಾ ದಾಭೋಳ್ಕರ್

ಖ್ಯಾತ ವಿಚಾರವಾದಿ ಡಾ.ನರೇಂದ್ರ ದಾಭೋಳ್ಕರ್ ಅವರ ಪುತ್ರಿ ಮುಕ್ತಾ ದಾಭೋಳ್ಕರ್ ಕೂಡಾ ತಂದೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಮೌಢ್ಯ ವಿರೋಧಿ ಆಂದೋಲನ ನಡೆಸುತ್ತಿದ್ದಾರೆ. ಮೂಢನಂಬಿಕೆಗಳನ್ನು ತೊಲಗಿಸಲು ಕಾನೂನಿನ ಬೆಂಬಲ ಅತ್ಯಗತ್ಯ ಎಂಬುದು ಅವರ ಖಚಿತ ಅಭಿಮತ. ಮುಕ್ತಾ ಅವರು ಈ ಹಿಂದೆ ಬೆಂಗಳೂರಿಗೆ ಬಂದಾಗ ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಹೀಗಿವೆ: ನಮ್ಮ ಮನೆಯಲ್ಲಿದ್ದ ವಾತಾವರಣವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಪ್ರೇರೇಪಣೆ ನೀಡಿತು. ಕಾಲೇಜು ಶಿಕ್ಷಣ ಮುಗಿಸಿದ ನಂತರ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿವಿಧ ತರಬೇತಿ […]

ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ

-ಬರಗೂರು ರಾಮಚಂದ್ರಪ್ಪ

ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ
-ಬರಗೂರು ರಾಮಚಂದ್ರಪ್ಪ

2013ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ತಂಡ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸಲು ಕರಡು ಮಾದರಿ ಸಲ್ಲಿಸಿತ್ತು. ಆಗ ಸಾರ್ವಜನಿಕ ಚರ್ಚೆ ಏರ್ಪಟ್ಟು ಪರ–ವಿರೋಧ ಬಹಳ ಜೋರಾಗಿಯೇ ಮಂಡನೆಯಾಗಿ ಕಾಯ್ದೆ ನೆನೆಗುದಿಗೆ ಬೀಳುವಂತಾಯಿತು. ಆ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ದಾಖಲಿಸಿದ ವಿಶ್ಲೇಷಣೆ ಇಲ್ಲಿವೆ. –ಬರಗೂರು ರಾಮಚಂದ್ರಪ್ಪ ರಾಷ್ಟ್ರೀಯ ಕಾನೂನು ಶಾಲೆಯ ವತಿಯಿಂದ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ಅಧ್ಯಯನ ಕೇಂದ್ರದವರು ಆಯ್ದ ತಜ್ಞರ ತಂಡದ ಜೊತೆ ಚರ್ಚಿಸಿ ರೂಪಿಸಿದ ‘ಮೂಢನಂಬಿಕೆ […]

ಕರ್ನಾಟಕದಲ್ಲಿ ಜಾರಿಯಲ್ಲಿರುವ ಮೌಢ್ಯ ನಿಷೇಧ ಕಾಯ್ದೆಯಲ್ಲಿ ಏನಿದೆ?

2013ರಲ್ಲಿ ಸಿದ್ದರಾಮಯ್ಯ ಸರ್ಕಾರ ತರಲು ಉದ್ದೇಶಿಸಿದ್ದ ಮೌಢ್ಯ ನಿಷೇಧ ಕಾಯ್ದೆ ನಿರಂತರ ವಾದವಿವಾದ, ಅಡಚಣೆಗಳಿಂದ ನೆನೆಗುದಿಗೆ ಬಿದ್ದಿತ್ತು. ಕೊನೆಗೆ 2020ರಲ್ಲಿ ಯಡಿಯೂರಪ್ಪ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾನೂನಿನ ಮುಖ್ಯಾಂಶಗಳನ್ನು ಓದುಗರ ಅವಗಾಹನೆಗಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳನ್ನು ನಿಷೇಧಿಸಲಾಗಿದೆ: ಭಾನಾಮತಿ, ಮಾಟ–ಮಂತ್ರ ಮಾಡುವುದು. ಗುಪ್ತ ನಿಧಿ, ನಿಕ್ಷೇಪಗಳ ಅನ್ವೇಷಣೆ, ಅದಕ್ಕಾಗಿ ವಾಮಾಚಾರ ಮಾಡುವುದು. ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆಹ್ವಾನಿಸಲಾಗಿದೆ ಅಥವಾ ಆ ವ್ಯಕ್ತಿ ಅಂಥ ಶಕ್ತಿ ಹೊಂದಿದ್ದಾನೆ ಎಂದು ನಂಬಿಸುವುದು. […]

ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ

-ನಿವೇದಿತಾ ಬಿ.ತುಮಕೂರು

ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ
-ನಿವೇದಿತಾ ಬಿ.ತುಮಕೂರು

ನೊಬೆಲ್ ಪುರಸ್ಕಾರದ 120 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಸಾಹಿತ್ಯ ಕ್ಷೇತ್ರದ ಗರಿಯನ್ನು ಮುಡಿಗೇರಿಸಿಕೊಂಡ ಕೇವಲ ನಾಲ್ಕನೇ ಕಪ್ಪುವರ್ಣೀಯರಾಗಿ ಅಬ್ದುಲ್ ರಜಾಕ್ ಗುರ್ನಾ ಹೊರಹೊಮ್ಮಿದ್ದಾರೆ. –ನಿವೇದಿತಾ ಬಿ.ತುಮಕೂರು ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ಕ್ಷೇತ್ರದ ನೊಬೆಲ್ ಪುರಸ್ಕಾರವು ತೀವ್ರವಾಗಿ ರಾಜಕೀಯ ಪ್ರೇರಿತವಾದುದು ಮತ್ತು ಐರೋಪ್ಯ–ಕೇಂದ್ರಿತವಾದುದು ಎಂಬ ವಿವಾದಗಳ ಹೊರತಾಗಿಯೂ ತಮ್ಮ ಹೆಜ್ಜೆಗುರುತನ್ನು ಸ್ಥಾಪಿಸಲು ಯಶಸ್ವಿಯಾಗಿದ್ದಾರೆ ಅಬ್ದುಲ್ ರಜಾಕ್ ಗುರ್ನಾ. ಅವರು ‘ವಸಾಹತುಶಾಹಿಯ ಪರಿಣಾಮಗಳು ಹಾಗೂ ವಿವಿಧ ಸಂಸ್ಕøತಿ ಮತ್ತು ಖಂಡಗಳ ನಡುವೆ ಸಿಲುಕಿರುವ ನಿರಾಶ್ರಿತರ ಬವಣೆಗಳನ್ನು ಯಥಾವತ್ತಾಗಿ ಮತ್ತು […]

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?

ರಮಾನಂದ ಶರ್ಮಾ

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ  ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?
ರಮಾನಂದ ಶರ್ಮಾ

ಚುನಾವಣೆಯಲ್ಲಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯವರನ್ನು ತಡೆಯುವಲ್ಲಿ ಮತದಾರರ ಪಾತ್ರವು ನ್ಯಾಯಾಲಯ ಮತ್ತು ಸರ್ಕಾರದಷ್ಟೇ ಮಹತ್ವದ್ದು ಮತ್ತು ನಿರ್ಣಾಯಕವೂ ಕೂಡಾ. –ರಮಾನಂದ ಶರ್ಮಾ ರಾಜಕಾರಣದಲ್ಲಿನ ಅಪರಾಧೀಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶದ ಸುಪ್ರೀಂ ಕೋರ್ಟು ಇನ್ನೊಮ್ಮೆ ಬಲವಾಗಿ ಚಾಟಿಯನ್ನು ಬೀಸಿದೆ, ಛೀಮಾರಿ ಹಾಕಿದೆ ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ವಿಭಾಗೀಯ ಪೀಠವು ಎರಡು ಮಹತ್ವದ ಅದೇಶ ನೀಡಿದ್ದು, ದೇಶಾದ್ಯಂತ ಮುಖ್ಯವಾಗಿ ರಾಜಕೀಯ ವಲಯದಲ್ಲಿ ಶಾಕ್ ಮತ್ತು ಸಂಚಲನ ಮೂಡಿಸಿದೆ. ಬಿಹಾರ […]

ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ

-ಡಾ.ಉದಯ ಶಂಕರ ಪುರಾಣಿಕ

ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ
-ಡಾ.ಉದಯ ಶಂಕರ ಪುರಾಣಿಕ

ಇಸ್ರೇಲ್ ದೇಶದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನವೋದ್ಯಮಿಗಳು ಅಧುನಿಕ ತಂತ್ರಜ್ಞಾನಗಳನ್ನು ಶ್ರವಣ ಸಮಸ್ಯೆ ಇರುವವರ ನೆರವಿಗಾಗಿ ಹೇಗೆ ಬಳಸುತ್ತಿದ್ದಾರೆ? –ಡಾ.ಉದಯ ಶಂಕರ ಪುರಾಣಿಕ ವಿಶ್ವಾದಂತ್ಯ 40 ಕೋಟಿಗೂ ಹೆಚ್ಚು ಜನ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಮನೆಗೆ ಬಂದವರು ಬಳಸುವ ಡೋರ್‍ಬೆಲ್ ಇರಬಹುದು, ಅಡುಗೆಮನೆಯಲ್ಲಿ ಕುಕ್ಕರಿನ ಸೀಟಿಯಿರಬಹುದು, ಮಗು ಅಳುತ್ತಿರುವುದಾಗಿರಬಹುದು, ರಸ್ತೆಯಲ್ಲಿ ವಾಹನಗಳ ಹಾರ್ನ್ ಇರಬಹುದು, ಕಾರ್ಖಾನೆಯ ಸೈರೆನ್ ಇರಬಹುದು, ಹೀಗೆ ಹಲವು ಕಡೆ ತಮಗಿರುವ ಶ್ರವಣ ಸಮಸ್ಯೆಯಿಂದಾಗಿ ಈ ಜನರಿಗೆ ತೊಂದರೆಯಾಗುತ್ತಿದೆ. ಇವರಿಗೆ […]

ಜರ್ಮನಿಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಸರ್ಕಾರ ಖಚಿತ

ಜರ್ಮನಿಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಸರ್ಕಾರ ಖಚಿತ

ಚುನಾವಣೆಗಳು ನಡೆದ ಎರಡು ತಿಂಗಳ ನಂತರವಾದರೂ ಜರ್ಮನಿಯಲ್ಲಿ ಹೊಸ ಒಕ್ಕೂಟ ಸರ್ಕಾರ ಅಧಿಕಾರಕ್ಕೆ ಬರುವಂತೆ ಕಾಣುತ್ತಿದೆ. ಓಲೋಫ್ ಶುಲ್ಜ್‍ರವರ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ(ಎಸ್‍ಡಿಪಿ) ತನ್ನ ಮಿತ್ರ ಪಕ್ಷಗಳಾದ ಫ್ರೀ ಡೆಮಾಕ್ರೆಟಿಕ್ ಪಕ್ಷ (ಎಫ್‍ಡಿಪಿ) ಮತ್ತು ಗ್ರೀನ್ ಪಕ್ಷಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಎಸ್‍ಡಿಪಿಯ ಓಲೋಫ್ ಶುಲ್ಜ್ ಛಾನ್ಸೆಲರ್ ಆಗಲಿದ್ದರೆ, ಎಫ್‍ಡಿಪಿಯ ಕ್ರಿಶ್ಚಿಯನ್ ಲಿಂಡರ್ ವಿತ್ತ ಮಂತ್ರಿಯಾಗಿ ಹಾಗೂ ಗ್ರೀನ್ ಪಕ್ಷದ ರಾಬರ್ಟ್ ಹೆಬೆಕ್ ಪರಿಸರ ಆರ್ಥಿಕತೆಯ ಮಂತ್ರಿಯಾಗಲಿದ್ದಾರೆ. ಈ ಮೂರೂ ಪಕ್ಷಗಳ ನಡುವಿನ ಒಡಂಬಡಿಕೆ […]

ಒಟಿಟಿ ಎಂಬ ಮನರಂಜನೆಯ ಮಾಯಾಲೋಕ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಒಟಿಟಿ ಎಂಬ ಮನರಂಜನೆಯ ಮಾಯಾಲೋಕ
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪ್ರಸ್ತುತ ಚಾಲ್ತಿಯಲ್ಲಿರುವ 40ಕ್ಕೂ ಅಧಿಕ ಒಟಿಟಿ ವಾಹಿನಿಗಳು ಮುಂದಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಟ್ಟಣ ಪ್ರದೇಶಗಳನ್ನು ಪ್ರವೇಶಿಸಲಿವೆ. 2023ರ ವೇಳೆಗೆ ದೇಶದ ಒಟಿಟಿ ಮಾರುಕಟ್ಟೆ 37,500 ಕೋಟಿ ರೂ ತಲುಪುವ ಸಾಧ್ಯತೆ ಇದೆ. –ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಕಳೆದ ಎರಡು ವರ್ಷಗಳಲ್ಲಿ ಮಿಂಚಿನ ವೇಗದಲ್ಲಿ ಬೆಳೆದ ಮನರಂಜನಾ ಮಾಧ್ಯಮವೆಂದರೆ ಒಟಿಟಿ ಎಂಬ ಅಂತರ್ಜಾಲ ಆಧಾರಿತ ಆಧುನಿಕ ತಂತ್ರಜ್ಞಾನ. ಒಟಿಟಿ (ಓವರ್ ದಿ ಟಾಪ್) ಎಂದರೆ ಕೇಬಲ್ ಇಲ್ಲವೇ ಡಿಶ್ ಗಳ ಮೇಲೆ ಅವಲಂಬನೆ ಇಲ್ಲದೆ ನೇರವಾಗಿ ಅಂತರ್ಜಾಲ ಇರುವವರ ಮನೆಗೆ […]

ಶ್ರದ್ಧೆ ಮತ್ತು ಅಂಧಶ್ರದ್ಧೆ

ಮೂಲ: ನರೇಂದ್ರ ದಾಭೋಳ್ಕರ್

ಹಿಂದುಗಳು ಆತ್ಮದ ಅಸ್ತಿತ್ವದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಆತ್ಮವು ಪರಮಾತ್ಮನೊಂದಿಗೆ ಒಂದಾಗುವ ಮೂಲಕ ಜನನ ಮರಣಗಳ ಚಕ್ರದಿಂದ ಮುಕ್ತಗೊಳ್ಳತ್ತದೆ ಎಂದು ನಂಬಲಾಗಿದೆ. ಬೌದ್ಧರು ಆತ್ಮದ ಪರಿಕಲ್ಪನೆಯನ್ನೇ ಅಲ್ಲಗಳೆಯುತ್ತಾರೆ. ಜೈನರು ಸೂರ್ಯಾಸ್ತಕ್ಕೂ ಮುಂಚೆಯೆ ರಾತ್ರಿ ಊಟ ಮಾಡಬೇಕೆಂದು ಒತ್ತಿ ಹೇಳುತ್ತಾರೆ. ರಂಜಾನ ತಿಂಗಳಿನಲ್ಲಿ ಚಂದ್ರೋದಯಕ್ಕಿಂತಲೂ ಮುಂಚೆ ಮುಸ್ಲಿಂರು ಒಂದು ಹನಿ ನೀರನ್ನೂ ಕುಡಿಯುವುದಿಲ್ಲ. ಈ ಎಲ್ಲ ಧಾರ್ಮಿಕ ಗುಂಪಿನವರು ತಮ್ಮ ಆಚರಣೆಯ ನಿಲುವನ್ನು ಸಮರ್ಥಿಸಿಕೊಳ್ಳುತ್ತಾರೆ ಮತ್ತು ಅನ್ಯರ ಆಚರಣೆಯ ನಿಲುವುಗಳನ್ನು ಅಂಧಶ್ರದ್ಧೆಗಳೆಂದು ದೂಷಿಸುತ್ತಾರೆ. ಕೆಲವರಂತೂ ತಮ್ಮ ಶ್ರದ್ಧೆಯನ್ನು ಸಮರ್ಥಿಸಿಕೊಳ್ಳುವಲ್ಲಿ ತಮ್ಮ ಜೀವವನ್ನೇ […]

ತಿಳಿವಳಿಕೆ ಖಚಿತಪಡಿಸುವ-ವಿಸ್ತರಿಸುವ ಕೃತಿ ‘ಚಹರೆಗಳೆಂದರೆ ಗಾಯಗಳೂ ಹೌದು’

-ಮಾರ್ಟಿನ್ ಲೂಥರ್ ಕಿಂಗ್

ತಿಳಿವಳಿಕೆ ಖಚಿತಪಡಿಸುವ-ವಿಸ್ತರಿಸುವ ಕೃತಿ ‘ಚಹರೆಗಳೆಂದರೆ ಗಾಯಗಳೂ ಹೌದು’
-ಮಾರ್ಟಿನ್ ಲೂಥರ್ ಕಿಂಗ್

ಅಮೆರಿಕಾದ ಮೂಲನಿವಾಸಿಗಳಾದ ಇಂಡಿಯನ್ನರು ಬಿಳಿಯರಿಗಿಂತ ಕೀಳಾದ ಜನಾಂಗವೆಂಬ ಸಿದ್ಧಾಂತವನ್ನು ಒಪ್ಪಿಕೊಂಡಾಗಲೇ ಜನಾಂಗಹತ್ಯೆಯ ಬೀಜಗಳನ್ನು ಹುಟ್ಟಿಹಾಕಿದಂತಾಯಿತು. ಈ ದೇಶ ಮೂಡಿಬಂದಿದ್ದೇ ಅಂಥ ತಳಹದಿಯ ಮೇಲೆ. ಈ ವಸಾಹತಿನ ಒಡಲ ಮೇಲೆ ಜನಾಂಗದ್ವೇಷದ ಗಾಯಗಳು, ಕಲೆಗಳು ಇದ್ದವು. ಜನಾಂಗಿಕ ಶ್ರೇಷ್ಠತೆಯನ್ನು ಮೆರೆಯಲೆಂದು ನಡೆದ ಯುದ್ಧಗಳಲ್ಲಿ ರಕ್ತದ ಹೊಳೆ ಹರಿದಿತ್ತು. ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಾಶ ಮಾಡುವುದನ್ನು ರಾಷ್ಟ್ರೀಯ ನೀತಿಯಾಗಿ ರೂಪಿಸಿಕೊಂಡ ಒಂದೇ ಒಂದು ದೇಶ ಇಡೀ ಜಗತ್ತಿನಲ್ಲಿ ನಮ್ಮದು ಮಾತ್ರ ಇರಬೇಕು. –ಮಾರ್ಟಿನ್ ಲೂಥರ್ ಕಿಂಗ್ ಚಹರೆಗಳೆಂದರೆ ಗಾಯಗಳೂ ಹೌದು ಸಮುದಾಯ […]

ಗಂಡಾಳ್ವಿಕೆ ಮೌಲ್ಯಗಳನ್ನು ಸಮರ್ಥಿಸುವ ಗುರುಪ್ರಸಾದರ ‘ಕಾಯಾ’

-ಸುಭಾಷ್ ರಾಜಮಾನೆ

ಗಂಡಾಳ್ವಿಕೆ ಮೌಲ್ಯಗಳನ್ನು ಸಮರ್ಥಿಸುವ ಗುರುಪ್ರಸಾದರ ‘ಕಾಯಾ’
-ಸುಭಾಷ್ ರಾಜಮಾನೆ

ಕಾದಂಬರಿಕಾರರು ಸ್ವತಃ ವೈದ್ಯರು. ಅವರಿಗೆ ವ್ಯದ್ಯಕೀಯ ಲೋಕದ ಅಪಾರವಾದ ಜ್ಞಾನ ಹಾಗೂ ಪಾಂಡಿತ್ಯ ಇದ್ದಿರಬಹುದು. ಆದರೆ ಅದನ್ನು ಕಾದಂಬರಿ ಎಂಬ ಸೃಜನಶೀಲ ಪ್ರಕಾರದೊಳಗೆ ಭಾಷಿಕವಾಗಿ ಹೆಣೆಯುವ, ಸಂಯೋಜಿಸುವ, ಕಲಾತ್ಮಕಗೊಳಿಸುವ ಹಾಗೂ ಪಾತ್ರಗಳ ಗುಣಸ್ವಭಾವಗಳು ಒಡೆದು ಕಾಣುವಂತೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಕನ್ನಡ ಕಾದಂಬರಿ ಪರಂಪರೆಯಲ್ಲಿ ಈ ‘ಕಾಯಾ’ ಅತ್ಯಂತ ಸಾಧಾರಣ ಮಟ್ಟದ ಕೃತಿಯಾಗಿ ನಿಲ್ಲುತ್ತದೆ. –ಸುಭಾಷ್ ರಾಜಮಾನೆ ಕಾಯಾ (ಕಾದಂಬರಿ) ಗುರುಪ್ರಸಾದ ಕಾಗಿನೆಲೆ ವರ್ಷ: 2021, ಪುಟ: 344 ದರ: 350 ಪ್ರ: ಅಂಕಿತ ಪುಸ್ತಕ ಈಚೆಗೆ ಪ್ರಕಟವಾಗಿರುವ […]

ಹೊಸ ಪುಸ್ತಕ

ನಮ್ದೇಕತೆ 2017-2021ರ ವರೆಗಿನ ಬರಹಗಳ ಸಂಗ್ರಹ ರಾಜಾರಾಂ ತಲ್ಲೂರು ಪುಟ: 164 ಬೆಲೆ: ರೂ.150 ಪ್ರಥಮ ಮುದ್ರಣ: 2021 ಪೆ್ರ–ಡಿಜಿ ಮುದ್ರಣ, ಉಡುಪಿ, ಸಂಪರ್ಕ: 9845548478 ಸಮಕಾಲೀನ ತಲ್ಲಣಗಳ ಕುರಿತು ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಬರೆದಿರುವ ಲೇಖನಗಳ ಪುಸ್ತಕ ರೂಪವೇ ನಮ್ದೇಕತೆ. ಸಂಗತಿ ಯಾವುದೇ ಇರಬಹುದು ಅದರ ಬಗೆಗೆ ಅತ್ಯಂತ ಆಳವಾಗಿ, ವಿಸ್ತೃತವಾಗಿ ಲೇಖಕರು ಪರಿಚಯಿಸುತ್ತಾ ಹೋಗುತ್ತಾರೆ. ಇವರು ಹೇಳುವ ಹೊಸ, ಹೊಸ ಸಂಗತಿಗಳು ದುತ್ತೆಂದು ಎದುರಾಗಿ ಓದುಗನನ್ನು ಬೆಚ್ಚಿಬೀಳಿಸುವುದರಲ್ಲಿ ಸಂದೇಹವಿಲ್ಲ. ಬೆಚ್ಚಿ ಬೀಳಿಸುವುದರ ಜೊತೆಗೆ […]

ಜ್ಞಾನಶಾಖೆಯಾಗಿ ‘ಮದನ ತಿಲಕಂ’

-ಡಾ.ಗುರುಪಾದ ಮರಿಗುದ್ದಿ

ಜ್ಞಾನಶಾಖೆಯಾಗಿ ‘ಮದನ ತಿಲಕಂ’
-ಡಾ.ಗುರುಪಾದ ಮರಿಗುದ್ದಿ

ಕನ್ನಡದ ಚಂದ್ರರಾಜನ ‘ಮದನ ತಿಲಕ’ ಕೃತಿ ಸಂಸ್ಕøತ ಏಕಮೂಲ ಆಧರಿಸಿ ಹೊರಬಂದುದಲ್ಲ; ಶಾಸ್ತ್ರಕೃತಿಯಾದರೂ ನೀರಸವಾಗಿಲ್ಲ, ಕಠಿಣವಾಗಿಲ್ಲ, ಸರಸ ಪ್ರಸನ್ನವಾಗಿದೆ. –ಡಾ.ಗುರುಪಾದ ಮರಿಗುದ್ದಿ ಪಂಪ ಮಹಾಕವಿಯ ‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ತರುಣರಾದ ಕೌರವ–ಪಾಂಡವರು ಗುರುಗಳ ನಿರ್ದೇಶನದಲ್ಲಿ ಹಲವಾರು ವಿದ್ಯೆಗಳನ್ನು ಕಲಿಯುವ ಚಿತ್ರಣ ಬಂದಿದೆ. ಅವುಗಳಲ್ಲಿ ಪಂಚಾಂಗ ವ್ಯಾಕರಣಾದಿಗಳು, ನಾಲ್ಕು ವೇದಗಳು ಇತ್ಯಾದಿ ಹೇಳುತ್ತ ರತಿಶಾಸ್ತ್ರ ಕಲಿತುದನ್ನೂ ಹೇಳಲಾಗಿದೆ. ನೇಮಿಚಂದ್ರನ ‘ಲೀಲಾವತಿ ಪ್ರಬಂಧ’ದಲ್ಲಿ ಯುವರಾಜನಾದ ರೂಪಕಂದರ್ಪನು ಹಲವು ವಿದ್ಯೆಗಳನ್ನು ಕಲಿತುದಾಗಿ ವಿವರಿಸುವಾಗ ಮದನಶಾಸ್ತ್ರ ಸೂಚಕ ಕೆಲವು ವಿದ್ಯೆಗಳನ್ನು ಸೂಚಿಸಲಾಗಿದೆ. ಕವಿತಾ […]

ಕೈಕೋಳ

ವೈಕಂ ಮುಹಮ್ಮದ್ ಬಷೀರ್

ಕೈಕೋಳ
ವೈಕಂ ಮುಹಮ್ಮದ್ ಬಷೀರ್

ಕೈಕೋಳಗಳ ಮೆರವಣಿಗೆ ನ್ಯಾಯಾಲಯಕ್ಕೆ ಸಾರ್ವಜನಿಕ ದಾರಿಯಲ್ಲಿ ಮುಂದುವರಿದಿತ್ತು. ಹದಿನೆಂಟು ಕೋಳಗಳು, ಮೂವತ್ತಾರು ಕೋಳ ತೊಟ್ಟವರು. ಹೆಚ್ಚಿನವರ ತಲೆಯ ಮೇಲೆ ಹೊರೆಗಳಿವೆ. ಮೂಲ ಮಲಯಾಳಂ: ವೈಕಂ ಮುಹಮ್ಮದ್ ಬಷೀರ್ ಕನ್ನಡ ಅನುವಾದ: ಮೋಹನ ಕುಂಟಾರ್ `ಕೈಕೋಳ ನೋಡಿದ್ರಾ‘ ಎಂದು ನನ್ನ ಜೊತೆಯ ಖೈದಿಯು, ಕೈಗಳನ್ನು ಬಂಧಿಸಿರುವ ಕೋಳವನ್ನು ತೋರಿಸಿಕೊಂಡು ಹೃದಯದ ನೋವಿನಿಂದ ದಯನೀಯವಾಗಿರುವ ತನ್ನ ಕತೆ ಹೇಳಿ ಮುಗಿಸಿದಾಗ, ನನ್ನ ಮನಸ್ಸಿನಲ್ಲಿ ಎಂತಹ ಭಾವನೆಗಳುದಿಸಿದುವು? ವ್ಯಕ್ತಿಯಾಗಿ ನನಗೆ ಗೊತ್ತಿಲ್ಲ. ನನ್ನ ಬಲಕೈಯೊಡನೆ ಆತನನ್ನು ಬಂಧಿಸಲಾಗಿದೆ. ನಾನು ಬರೆದ, ಬರೆಯುವ, […]

ಕಾಯೋಕಿಟ್ಟ ನೀರು ಕಣ್ಣಾಡಿಸ್ತಿದ್ರೆ ಕುದಿಯೋದಿಲ್ಲ!

-ಡಾ.ಕೆ.ಎಸ್.ಮಲ್ಲೇಶ್

ಕಾಯೋಕಿಟ್ಟ ನೀರು ಕಣ್ಣಾಡಿಸ್ತಿದ್ರೆ ಕುದಿಯೋದಿಲ್ಲ!
-ಡಾ.ಕೆ.ಎಸ್.ಮಲ್ಲೇಶ್

ಊರು ಬಿಟ್ಟು ಪಟ್ಟಣಗಳನ್ನು ಸೇರಿದ ನಮ್ಮನ್ನು ಸಾಧಕರೆಂದು ಗುರುತಿಸಿ ನಾಗರಿಕ ಪ್ರಪಂಚ ಆಗಾಗ್ಗೆ ಹೊಗಳಿದರೂ, ನನ್ನ ಮಟ್ಟಿಗೆ ನಿಜ ಅರ್ಥದಲ್ಲಿ ಊರಿನಲ್ಲೇ ನೆಲೆನಿಂತ ನನ್ನೂರಿನ ಮಂದಿಯೇ ಇಂದಿಗೂ ಊರಿನ ಅಸ್ತಿತ್ವಕ್ಕೆ ಅದರ ಅಸ್ಮಿತೆಗೆ ಕಾರಣವೂ ಆಧಾರವೂ ಆಗಿರುವುದು ಸತ್ಯ. –ಡಾ.ಕೆ.ಎಸ್.ಮಲ್ಲೇಶ್ ನಾನು ಒಂದರಿಂದ ಆರನೇ ತರಗತಿಯವರೆಗೆ ಓದಿದ್ದು ನಮ್ಮೂರಿನಲ್ಲಿದ್ದ ಶಾಲೆಯಲ್ಲಿಯೇ. ಶಾಲೆಯ ಸಮಯ ಮುಂಜಾನೆ ಏಳೂವರೆಯಿಂದ ಹನ್ನೊಂದರವರೆಗೆ, ಮತ್ತೆ ಮಧ್ಯಾಹ್ನ ಮೂರರಿಂದ ಐದರವರೆಗೆ. ಶನಿವಾರ ಅರ್ಧ ದಿನ, ಭಾನುವಾರ ರಜೆ. ಶಾಲೆಗೆ ಎಷ್ಟು ಹೊತ್ತಿಗೆ ಹೊರಡಬೇಕೆನ್ನುವುದನ್ನು ನಿರ್ಧರಿಸುತ್ತಿದ್ದ […]

ಡಿಜಿಟಲ್ ಸೈಟು ಕೊಳ್ಳಲು ಬಿಟ್ ಕಾಯಿನ್

-ಎಂ.ಎಸ್.ನರಸಿಂಹಮೂರ್ತಿ

ಡಿಜಿಟಲ್ ಸೈಟು ಕೊಳ್ಳಲು ಬಿಟ್ ಕಾಯಿನ್
-ಎಂ.ಎಸ್.ನರಸಿಂಹಮೂರ್ತಿ

`ನೀನಿನ್ನೂ ನಿಜಲಿಂಗಪ್ಪನವರ ಕಾಲದಲ್ಲಿದ್ದೀಯ. ಬೊಮ್ಮಾಯಿ ಅವರಿಗೆ ಅರ್ಥ ಆಗೋದು ನಿನಗೆ ತಿಳೀತಿಲ್ಲ’ ಎಂದು ವಿಶ್ವ ನನ್ನ ಅಜ್ಞಾನಕ್ಕೆ ಮರುಗಿದ! –ಎಂ.ಎಸ್.ನರಸಿಂಹಮೂರ್ತಿ ವಿಶ್ವನ ಮನೆಗೆ ನಾನು ಬಂದಾಗ ಅವನು ಖುಷಿಯಿಂದ ತಾನು ಮಾಡಿರುವ ಸೈಟುಗಳ ಬಗ್ಗೆ ಹೇಳಿದ. `60ಘಿ40 ಸೈಟು, 50ಘಿ80 ಸೈಟು. ಸುಮಾರು 100 ಸೈಟುಗಳನ್ನ ರೆಡಿ ಮಾಡಿದ್ದೀನಿ’ ನನಗೆ ಆಶ್ಚರ್ಯವಾಯಿತು. ಒಂದೊಂದು ಸೈಟು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಕಾಲದಲ್ಲಿ ಇಷ್ಟು ಜಮೀನು ಎಲ್ಲಿ ಸಿಕ್ಕಿತು ಎಂದು ಯೋಚನೆ ಮಾಡಿದೆ. ಒಳ್ಳೆ ಗಾಳಿ, ಒಳ್ಳೆ […]

ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ

-ಮುರಳೀಧರ ಖಜಾನೆ

ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ
-ಮುರಳೀಧರ ಖಜಾನೆ

ಭಜರಂಗಿ-2 ಬಿಡುಗಡೆಯಾಗಿ ಕನ್ನಡ ಚಿತ್ರರಂಗದ ಸ್ಥಿತಿ ಸುಧಾರಿಸಿ ಎಲ್ಲವೂ ಮೊದಲಿನಂತಾಗುತ್ತದೆ ಎನ್ನುವಷ್ಟರಲ್ಲಿ, ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲೊಂದಾದ ಪುನೀತ್ ರಾಜ್‍ಕುಮಾರ್ ಅವರನ್ನು ಜವರಾಯ ಕರೆದೊಯ್ದ! –ಮುರಳೀಧರ ಖಜಾನೆ ಕಳೆದ ಇಪ್ಪತ್ತೊಂದು ತಿಂಗಳಿಂದ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಮಹಾಮಾರಿಯ ಭೀತಿ ಚಿತ್ರರಂಗಕ್ಕೇನೂ ವಿನಾಯತಿ ನೀಡಲಿಲ್ಲ. ಎಲ್ಲ ಭಾಷೆಯ ಚಿತ್ರರಂಗಗಳಂತೆ, ಕನ್ನಡ ಚಿತ್ರರಂಗ ಕೂಡ ಸ್ತಬ್ಧವಾಗಿತ್ತು. ಸಿನಿಮಾ ಚಿತ್ರೀಕರಣವಿಲ್ಲದೆ, ಪ್ರದರ್ಶನವಿಲ್ಲದೆ ಚಿತ್ರರಂಗ ಕಂಗಾಲಾದ ಸ್ಥಿತಿಯಲ್ಲಿತ್ತು. ಖಾಲಿ ಕುಳಿತ ಕಲಾವಿದರೂ ಸೇರಿದಂತೆ ಪ್ರತ್ಯಕ್ಷವಾಗಿ–ಪರೋಕ್ಷವಾಗಿ ಚಿತ್ರರಂಗದೊಂದಿಗೆ ಬದುಕು ಬೆಸೆದುಕೊಂಡಿದ್ದ ಸಾವಿರಾರು ಮಂದಿಯನ್ನು ಈ ಕೋವಿಡ್-19 […]

ಅಮ್ಮನ ಹೆಬ್ಬೆರಳು

-ನಂಜನಗೂಡು ಅನ್ನಪೂರ್ಣ

ಅಮ್ಮನ ಹೆಬ್ಬೆರಳು
-ನಂಜನಗೂಡು ಅನ್ನಪೂರ್ಣ

ಅಮ್ಮನ ಹೆಬ್ಬೆರಳು ವಿಷ್ಣುಚಕ್ರವ ಮೀರಿಸಿದೆ ಕೈಹಿಡಿದು ಒಮ್ಮೆ ಕಣ್ಣಿಟ್ಟು ನೋಡಬೇಕಿದೆ ಅದು ಮುಟ್ಟಿ ಮುರಿದ ಒತ್ತಿ ಉರಿದ ಎಷ್ಟೋ ಕಥೆಗಳು ಈಗಲೂ ತೆರೆದುಕೊಂಡಿಲ್ಲ. ಒಮ್ಮೆ ಬಿಡಿಸಿ ನೋಡಿದರೆ ಬ್ರಹ್ಮಾಂಡವೇ ಸಿಗಬಹುದು ದಶಾವತಾರಗಳ ಕಥೆಯನ್ನೂ ಹಿಂದಿಕ್ಕಿಬಿಡಬಹುದು. ಅಲ್ಲಲ್ಲಿ ಕತ್ತರಿಸಿದ ರೇಖೆಗಳಿಗೆ ಮೆತ್ತಿದ ಕಪ್ಪುಮಸಿ ತೊಳೆದಷ್ಟು ತೆಳುವಾಗುತ್ತ ಹೊಳೆವ ಸತ್ತ ಚರ್ಮ ಹಣೆಯಹಸಿ ಕೂದಲನೆತ್ತಿ ಮುದ್ದಿಸಿ ಕಣ್ತಾಕೀತೆಂದು ಕಪ್ಪಲದ್ದಿ ತಿಲಕವಿಟ್ಟು ಗಲ್ಲಹಿಂಡಿದ ಆ ಒರಟು ಚೇಷ್ಟೆ ಹೆಚ್ಚಾದಾಗ ಚಿವುಟಿ ಒಳಶುಂಟಿ ಕೊಟ್ಟು ರಸ್ತೆದಾಟುವಾಗ ಆಸರೆಯ ಗಟ್ಟಿ ಮುಷ್ಟಿಗೆ ಒಳಹೊಕ್ಕು ಅಪ್ಪನ […]