Home»Homepage Blog

ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…

ಸಂಪಾದಕೀಯ

 ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ… <p><sub> ಸಂಪಾದಕೀಯ </sub></p>

ಇದೀಗ ಐದನೇ ವರ್ಷದ ಮೊದಲ ಸಂಚಿಕೆಯನ್ನು ನಿಮ್ಮ ಕೈಯಲ್ಲಿ ಇರಿಸಿದ ಪುಳಕ ನನ್ನೊಳಗೆ ತೊನೆದಾಡುತ್ತಿದೆ. ಜೊತೆಗೆ ತೇಲಿಬರುವ ನೆನಪಿನ ದೋಣಿಯಲ್ಲಿ ದೂರತೀರ ತಲುಪುವ ತವಕ. ಜಗತ್ತನ್ನು ಸಾಕಷ್ಟು ಸಮೀಪದಿಂದ ದಿಟ್ಟಿಸುವ ನಮ್ಮ ಬಳಗದ ಗೆಳೆಯರೊಬ್ಬರಿಗೆ ನಾಲ್ಕು ವರ್ಷಗಳ ಹಿಂದೆ ಬಿತ್ತೊಂದು ಕನಸು; ಆ ಕನಸಿನಲ್ಲಿ ಕಂಡದ್ದು ಬೀಗಬಿದ್ದ ಕನ್ನಡಿಗರ ಮನಸು. ಬೆಚ್ಚಿಬಿದ್ದ ಅವರು ಕಳೆದುಹೋದ ಬೀಗದಕೈ ಹುಡುಕುವ ಹುಚ್ಚು ಹಿಡಿಸಿಕೊಂಡರು. ಹೇಗಾದರೂ ಮಾಡಿ ಕನ್ನಡಿಗರ ಮನಕ್ಕೆ ಬಿದ್ದ ಬೀಗ ಬಿಚ್ಚುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾಂಭಿಸುವ ಹಠ ಅವರದು. […]

ಮೂಢನಂಬಿಕೆ ಮತ್ತು ಕನ್ನಡ ವಿಮರ್ಶೆ

-ಎನ್. ಬೋರಲಿಂಗಯ್ಯ

 ಮೂಢನಂಬಿಕೆ ಮತ್ತು ಕನ್ನಡ ವಿಮರ್ಶೆ <p><sub> -ಎನ್. ಬೋರಲಿಂಗಯ್ಯ </sub></p>

ಚರ್ಚೆಯಲ್ಲಿ ಭಾಗವಹಿಸಿರುವವರೆಲ್ಲ ಬಹುತೇಕ ಅನ್ಯಶಿಸ್ತುಗಳ ಪರಿಣತರಾಗಿದ್ದು ಸಾಮಾಜಿಕ ಕಳಕಳಿಯ ವಿಚಾರವಂತರಾಗಿರುವುದರಿAದ ನಮ್ಮ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ಈ ದಮನಕಾರಿ ಮೌಢ್ಯದ ವಿರುದ್ಧ ನಡೆಯುತ್ತ ಬಂದಿರುವ ಹೋರಾಟವನ್ನು ಸಹಜವಾಗಿಯೇ ಗಮನಿಸುವುದಕ್ಕಾಗಿಲ್ಲ! –ಎನ್. ಬೋರಲಿಂಗಯ್ಯ 2021 ಜನವರಿ ಸಮಾಜಮುಖಿ ಸಂಚಿಕೆಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ ತ್ರಾಸು–ಕಟ್ಟಳೆ ರೂಪಕದ ಮೂಲಕ ಕನ್ನಡ ವಿಮರ್ಶೆಯ ಅಂಕಣದ ಶುರುವಾತಿಗೊಂದು “ವಿಮರ್ಶೆಗೆ ತಕ್ಕ ವಾತಾವರಣ ಏಕಿಲ್ಲ?” ಎಂಬ ಪ್ರಶ್ನೆಯ ಮೂಲಕ ಮುನ್ನುಡಿ ಬರೆದಿದ್ದರು. ದುರದೃಷ್ಟವಶಾತ್ ಅದು ಯಾಕೋ ಏನೋ ತನ್ನ ನಿರಂತರತೆಯನ್ನು ಕಾದುಕೊಂಡಿಲ್ಲ. ಕಾರಣ ಏನೇ ಇರಲಿ […]

ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ

-ನಾ ದಿವಾಕರ

 ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ <p><sub> -ನಾ ದಿವಾಕರ </sub></p>

ವರ್ಷಕ್ಕೊಮ್ಮೆ ದೇವರಿಗೆ ಹರಕೆ ಹೊತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಜನಸಮುದಾಯಗಳು ಈಗ ಹೊಸ ಪೂಜಾ ವಿಧಾನಗಳು, ವ್ರತಾಚರಣೆಗಳು ಮತ್ತು ಹೋಮಗಳಲ್ಲಿ ಸಾಂತ್ವನ ಕಾಣುತ್ತಿವೆ. ಹಾಗಾಗಿಯೇ ವಾಸ್ತುಹೋಮ, ಗಣಹೋಮ, ಸತ್ಯನಾರಾಯಣ ಪೂಜೆಯಂತಹ ಮೌಢ್ಯಾಚರಣೆಯ ಸಾಧನಗಳು ಗ್ರಾಮ ಗ್ರಾಮಕ್ಕೂ ವ್ಯಾಪಿಸುತ್ತಿವೆ. –ನಾ ದಿವಾಕರ ಇತಿಹಾಸ ಕಾಲದಿಂದಲೂ ಮಾನವ ಸಮಾಜದಲ್ಲಿ ಮೌಢ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಂಡೇ ಬಂದಿದೆ. ಮೂಲತಃ ಮನುಷ್ಯ ತನ್ನ ಬದುಕಿನಲ್ಲಿ ತಾನು ಸ್ವಾನುಭವದಿಂದ ಅಥವಾ ಅನುಭಾವದಿಂದ ಕಂಡುಕೊಳ್ಳಲಾಗದ ವಿದ್ಯಮಾನಗಳನ್ನು ಅತೀತ ಶಕ್ತಿಗಳಲ್ಲಿ ಕಾಣಲು ಪ್ರಯತ್ನಿಸುತ್ತಾನೆ. ಹಾಗೆಯೇ ತನ್ನ […]

ಸಮಾಜದಲ್ಲಿ ಬೇರುಬಿಟ್ಟ ಮೌಢ್ಯಗಳು

-ಎಲ್.ಚಿನ್ನಪ್ಪ, ಬೆಂಗಳೂರು

 ಸಮಾಜದಲ್ಲಿ ಬೇರುಬಿಟ್ಟ ಮೌಢ್ಯಗಳು <p><sub> -ಎಲ್.ಚಿನ್ನಪ್ಪ, ಬೆಂಗಳೂರು </sub></p>

ಮನುಷ್ಯನ ಬದುಕು ಅವನ ಹಸ್ತರೇಖೆಗಳಂತೆ ನಡೆಯುವುದಿಲ್ಲ, ಅಥವಾ ಜ್ಯೋತಿಷಿಗಳು ಉರುಳಿಸುವ ದಾಳಗಳಂತೆ ನಡೆಯುವುದಿಲ್ಲ. ಜೀವನವನ್ನು ಆತ್ಮವಿಶ್ವಾಸದಿಂದ, ಸ್ವಸಾಮಥ್ರ್ಯದಿಂದ ವೈಚಾರಿಕ ನೆಲೆಗಟ್ಟಿನಲ್ಲಿ ರೂಪಿಸಿಕೊಳ್ಳಬೇಕೇ ಹೊರತು ನಂಬಿಕೆ ಹಾಗು ಅದೃಷ್ಟ ಬಲದಿಂದಲ್ಲ. –ಎಲ್.ಚಿನ್ನಪ್ಪ, ಬೆಂಗಳೂರು ಇಂದಿನ ಮುಂದುವರೆದ ಆಧುನಿಕ ಯುಗದಲ್ಲೂ ಕೆಲವೊಂದು ಅವೈಜ್ಞಾನಿಕ ಆಚರಣೆಗಳು ಅಸ್ತಿತ್ವದಲ್ಲಿದ್ದು, ಮೌಢ್ಯದ ರಾಢಿಯಲ್ಲಿ ಇಂದು ವೈಚಾರಿಕತೆ ಮುದುಡಿದೆ. ಸಂಕೀರ್ಣವಾದ ಸಮಾಜದಲ್ಲಿ ಮೌಢ್ಯದ ಬೇರುಗಳು ಆಳವಾಗಿವೆ. ಜನರಲ್ಲಿ ಮೌಢ್ಯದ ಬಗ್ಗೆ ಸಾಕಷ್ಟು ಅರಿವು ಇದ್ದರೂ ಕೆಲವೊಂದು ಅವೈಜ್ಞಾನಿಕ ನಂಬಿಕೆಗಳಿಗೆ ವಧಾ ಪ್ರಾಣಿಗಳಂತೆ ಜೋತು ಬೀಳುವವರೇ ಹೆಚ್ಚು. […]

1 2 3 394